| 06/10/24 |
ಪ್ರಾತಃಮುರುಳಿ
ಓಂಶಾಂತಿ
"ಅವ್ಯಕ್ತ-ಬಾಪ್ದಾದಾ"
|
ರಿವೈಜ್: 09/04/20 |
"ತಂದೆಯನ್ನು ಪ್ರತ್ಯಕ್ಷ ಮಾಡುವುದಕ್ಕೋಸ್ಕರ ತಮ್ಮ ಹಾಗೂ ಅನ್ಯರ ವೃತ್ತಿಯನ್ನು ಸಕಾರಾತ್ಮಕ ಮಾಡಿಕೊಳ್ಳಬೇಕು"
ಇಂದು ವಿಶ್ವಕಲ್ಯಾಣಿ ಬಾಪ್ದಾದಾರವರು ತನ್ನ ನಾಲ್ಕೂ ಕಡೆಯ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಂದು ಮಗುವಿನ ಮನದ ಉಮ್ಮಂಗವನ್ನು ನೋಡುತ್ತಲು ಇದ್ದಾರೆ ಹಾಗೂ ಕೇಳುತ್ತಿದ್ದಾರೆ. ಎಲ್ಲರ ಮನದಲ್ಲಿ ಅತಿ ಶೀಘ್ರದಲ್ಲಿಯೇ ತಂದೆ ಸಮಾನ ಆಗಬೇಕೆಂಬ ಲಕ್ಷ್ಯವೊಂದೇ ಇದೆ. ಲಕ್ಷ್ಯವನ್ನು ನೋಡುತ್ತಾ, ಸಾಹಸವನ್ನು ನೋಡುತ್ತಾ, ಶ್ರೇಷ್ಠ ಸಂಕಲ್ಪವನ್ನು ನೋಡುತ್ತಾ ಬಾಪ್ದಾದಾರವರು ಖುಷಿಯಾಗುತ್ತಿದ್ದಾರೆ. ಜೊತೆ-ಜೊತೆಯಲ್ಲಿ ಇದನ್ನು ಸಹ ನೋಡುತ್ತಿದ್ದಾರೆ-ಎಲ್ಲಾ ಮಕ್ಕಳ ಲಕ್ಷ್ಯ ತುಂಬಾ ಶ್ರೇಷ್ಠಾತಿಶ್ರೇಷ್ಠ ಇದೆ, ಆದರೆ ಪ್ರತ್ಯಕ್ಷ ರೂಪದಲ್ಲಿ ಲಕ್ಷಣ ನಂಬರ್ವಾರ್ ಇದೆ. ಲಕ್ಷ್ಯ ಹಾಗೂ ಲಕ್ಷಣ ಸಮಾನವಾಗಿರುವುದೆಂದರೆ ತಂದೆ ಸಮಾನ ಆಗುವುದಾಗಿದೆ. ಯಾರು ಸೇವೆಯ ಕ್ಷೇತ್ರದಲ್ಲಿ ನಿಮಿತ್ತ ಮಕ್ಕಳಿದ್ದಾರೆ, ಅವರು ಸದಾ ಒಂದೇ ಸಂಕಲ್ಪದಲ್ಲಿರುತ್ತಾರೆ-ತಂದೆಯನ್ನು ಹೇಗೆ ಪ್ರತ್ಯಕ್ಷ ಮಾಡೋಣ, ಯಾವಾಗ ಪ್ರತ್ಯಕ್ಷ ಆಗುತ್ತದೆ. ಈ ರೀತಿ ಸಂಕಲ್ಪಗಳು ನಡೆಯುತ್ತದೆಯಲ್ಲವೇ? ಮತ್ತೆ ತಂದೆ ಮಕ್ಕಳನ್ನು ಕೇಳುತ್ತಾರೆ, ಮಕ್ಕಳೇ ತಾವೆಲ್ಲರು ಸಂಪನ್ನ ಹಾಗೂ ಸಂಪೂರ್ಣ ಸ್ವರೂಪದಲ್ಲಿ ತಮ್ಮನ್ನು ಯಾವಾಗ ಪ್ರತ್ಯಕ್ಷ ಮಾಡುತ್ತೀರಿ? ಮಕ್ಕಳ ಪ್ರತಿಯಾಗಿ ತಂದೆಯ ಪ್ರಶ್ನೆಯಾಗಿದೆ-ಮಕ್ಕಳೇ ಆ ದಿನಾಂಕವನ್ನು ನಿಗಧಿಪಡಿಸಿದ್ದೀರಾ? ಅಥವಾ ಆ ದಿನಾಂಕ ನಿಗಧಿ ಮಾಡಲು ಆಗುವುದಿಲ್ಲವೇ?
ಯಾವುದೇ ಕಾರ್ಯಕ್ರಮದ ದಿನಾಂಕವನ್ನು ಒಂದು ವರ್ಷದ ಮೊದಲೇ ನಿಗಧಿ ಪಡೆಸಲಾಗುವುದೆಂದು ವಿದೇಶದವರು ಹೇಳುತ್ತಾರೆ, ಈ ರೀತಿ ಹೇಳುತ್ತೀರಲ್ಲವೇ! ಸ್ವಯಂನ್ನು ಪ್ರತ್ಯಕ್ಷ ಮಾಡುವ ದಿನಾಂಕವನ್ನು ನಿಗಧಿ ಪಡಿಸಿದ್ದೀರಾ? ಎಂದು ತಂದೆಯು ಕೇಳುತ್ತಾರೆ. ನಿಗಧಿ ಪಡಿಸಿದ್ದೀರಾ? ತುಂಬಾ ಮೀಟಿಂಗ್ಗಳನ್ನು ಮಾಡಿದ್ದೀರಲ್ಲವೇ! ಮಾಡುತ್ತಲು ಇರುವಿರಿ. ಇಂದು ಇಂತಹ ಮೀಟಿಂಗ್ ಇದೆ, ನಾಳೆ ಇಂತಹ ಮೀಟಿಂಗ್ ಇದೆ. ಈಗಲು ಸಹ ಎಷ್ಟೊಂದು ಮೀಟಿಂಗ್ ಮಾಡುವವರು ಆಗಮಿಸಿದ್ದಾರೆ, ಮೂರು ಪ್ರಕಾರದ ಮೀಟಿಂಗ್ ಮಾಡುವಂತಹವರು ಇಂದೂ ಸಹ ಕುಳಿತುಕೊಂಡಿದ್ದಾರೆ. ಇದು ತುಂಬಾ ಒಳ್ಳೆಯದಾಗಿದೆ. ಆದರೆ ಸ್ವಯಂ ಪ್ರತ್ಯಕ್ಷವಾಗುವ ಮೀಟಿಂಗಿನ ದಿನಾಂಕ ಯಾವುದಾಗಿದೆ? ಏನನ್ನು ಯೋಚಿಸುತ್ತೀರಿ, ಅದು ಮಾತು ಹಾಗೂ ಕರ್ಮದಲ್ಲಿರಬೇಕು. ಸಂಕಲ್ಪ, ಮಾತು ಹಾಗೂ ಕರ್ಮ ಈ ಮೂರು ಶ್ರೇಷ್ಠ ಲಕ್ಷ್ಯದನುಗುಣವಾಗಿರಬೇಕು. ಬಾಪ್ದಾದಾರವರು ತನ್ನ ವಿಶ್ವಕಲ್ಯಾಣಕ್ಕೆ ನಿಮಿತ್ತರಾಗಿರುವಂತಹ ಮಕ್ಕಳು, ಸರ್ವ ಆತ್ಮಗಳ ಕಲ್ಯಾಣಿಕಾರಿಗಳು ಪ್ರತ್ಯಕ್ಷ ರೂಪದಲ್ಲಿ ಸ್ಟೇಜ್ ಮೇಲೆ ಯಾವಾಗ ಬರುತ್ತಾರೆಂದು ನೋಡುತ್ತಿದ್ದಾರೆ. ಪ್ರತಿಯೊಬ್ಬರು ಗುಪ್ತ ಪುರುಷಾರ್ಥದಲ್ಲಿ, ತಂದೆಯ ಪ್ರೀತಿಯಲ್ಲಿ ತಲ್ಲೀನರಾಗಿರುವುದನ್ನು ಸಹ ತಂದೆ ನೋಡುತ್ತಾರೆ. ಆದರೆ ಈ ವಿಶೇಷ ಸಂಕಲ್ಪದ ಲಗನ್ಲ್ಲಿ ಯಾವಾಗ ಮಗ್ನರಾಗುತ್ತೀರಿ? ಲಗನ್ ಅಂತು ಇದೆ ಆದರೆ ನಿರಂತರ ಈ ಸಂಕಲ್ಪವನ್ನು ಸಂಪನ್ನ ಮಾಡುವುದರಲ್ಲಿ ಮಗ್ನರಾಗಿರಬೇಕು. ಅರ್ಥಾತ್ ನಿರಂತರ ಈ ಸಂಕಲ್ಪವನ್ನು ಪೂರ್ಣ ಮಾಡುವ ಪ್ರತ್ಯಕ್ಷ ಸ್ವರೂಪದಲ್ಲಿರಬೇಕು. ಈಗ ಸಂಕಲ್ಪ ಹಾಗೂ ಪ್ರತ್ಯಕ್ಷ ಕರ್ಮದಲ್ಲಿ ಅಂತರವಿದೆ. ಆಗುವುದೇನೋ ಆಗಬೇಕಾಗಿದೆ ಹಾಗೂ ಮಾಡಬೇಕಾಗಿರುವವರು ಸಹ ಮಕ್ಕಳೇ ಆಗಿದ್ದಾರೆ. ತಂದೆಯಂತು ಬೆನ್ನೆಲಬು ಆಗಿಯೇ ಇದ್ದಾರೆ.
ಬಾಪ್ದಾದಾರವರು ನೋಡುತ್ತಿದ್ದಾರೆ ಎಲ್ಲಕ್ಕಿಂತಲು ತೀವ್ರಗತಿಯ ಸೇವೆ- ವೃತ್ತಿಯಿಂದ ಪ್ರಕಂಪನಗಳನ್ನು ಹರಡುವುದು. ವೃತ್ತಿ ತುಂಬಾ ತೀವ್ರಗತಿಯ ರಾಕೆಟ್ಗಿಂತಲು ತೀವ್ರಗತಿಯುಳ್ಳದ್ದಾಗಿದೆ. ವೃತ್ತಿಯಿಂದ ವಾಯುಮಂಡಲವನ್ನು ಪರಿವರ್ತನೆ ಮಾಡಬಹುದು. ಎಲ್ಲಿಗಾದರೂ ಹೋಗಿ ಎಷ್ಟು ಆತ್ಮಗಳ ಪ್ರತಿ ಬೇಕಾದರು ವೃತ್ತಿಯ ಮುಖಾಂತರ ಇಲ್ಲಿಯೇ ಕುಳಿತು- ಕುಳಿತ್ತಿದ್ದಂತೆಯೇ ತಲುಪಿಸಬಹುದು. ವೃತ್ತಿಯ ಮುಖಾಂತರ ದೃಷ್ಟಿ ಹಾಗೂ ಸೃಷ್ಟಿಯನ್ನು ಪರಿವರ್ತನೆ ಮಾಡಬಹುದು. ಆದರೆ ಒಂದು ಮಾತು ವೃತ್ತಿಯ ಮೂಲಕ ಸೇವೆ ಮಾಡುವುದರಲ್ಲಿ ಅಡಚಣೆ ಮಾಡುತ್ತಿದೆ, ವೃತ್ತಿಯ ಮೂಲಕ ಪ್ರಕಂಪನಗಳನ್ನು ಹರಡಬಹುದು. ಇದುವರೆಗು ತಮ್ಮ ಜಡಚಿತ್ರವು, ನಿಮ್ಮ ಅಂತಿಮ ಜನ್ಮದವರೆಗು ಪ್ರಕಂಪನಗಳನ್ನು ಹರಡುವ ಮೂಲಕ ಸೇವೆ ಮಾಡುತ್ತಿದೆಯಲ್ಲವೇ! ನೋಡಿದ್ದೀರಲ್ಲವೇ! ಮಂದಿರವನ್ನು ನೋಡಿದ್ದೀರಲ್ಲವೇ! ಡಬಲ್ ವಿದೇಶಿಯರು ನೋಡಿದ್ದೀರ? ಮಂದಿರವನ್ನು ನೋಡಿದ್ದೀರಾ? ನೋಡಿಲ್ಲವೆಂದರೆ ನೋಡಬೇಕು, ಏಕೆಂದರೆ ಅದು ನಿಮ್ಮದೆ ಮಂದಿರವಲ್ಲವೇ! ಕುಮಾರಿಯರೇ ಅದು ನಿಮ್ಮ ಮಂದಿರವಾಗಿದೆ (ಬಾಪ್ದಾದಾರವರ ಮುಂದೆ ವಿದೇಶದ ಕುಮಾರಿಯರಿದ್ದಾರೆ) ಅಥವಾ ಭಾರತೀಯರ ಮಂದಿರವಷ್ಟೆ ಆಗಿದೆಯೆ? ಇದು ಎಲ್ಲರ ಮಂದಿರವಾಗಿದೆ, ಒಳ್ಳೆಯದು. ಅಭಿನಂದನೆಗಳು. ಮಂದಿರದ ಮೂರ್ತಿಗಳು ಪ್ರತ್ಯಕ್ಷ ರೂಪದಲ್ಲಿ ಪ್ರಕಂಪನಗಳನ್ನು ಹರಡುವ ಮೂಲಕ ಸೇವೆ ಮಾಡುತ್ತಿದ್ದಾರೆ ಅರ್ಥಾತ್ ತಾವು ಆತ್ಮಗಳು ಮಂದಿರದ ಮೂರ್ತಿಗಳಾಗಿ ಸೇವೆ ಮಾಡುತ್ತಿದ್ದೀರಿ. ಎಷ್ಟೊಂದು ಭಕ್ತರು ಮೂರ್ತಿಯಿಂದ ಪ್ರಕಂಪನಗಳನ್ನು ಪಡೆಯುವ ಮೂಲಕ ತಮ್ಮ ಸರ್ವ ಇಚ್ಛೆಗಳನ್ನು ಪೂರ್ಣ ಮಾಡಿಕೊಳ್ಳುತ್ತಿದ್ದಾರೆ. ಆದುದರಿಂದ ಹೇ ಚೈತನ್ಯ ಮೂರ್ತಿಗಳೇ. . . ಈಗ ತಮ್ಮ ಶುಭ ಭಾವನೆಯ ವೃತ್ತಿ, ಶುಭಕಾಮನೆಗಳ ವೃತ್ತಿಯಿಂದ ವಾಯುಮಂಡಲದಲ್ಲಿ ಪ್ರಕಂಪನಗಳನ್ನು ಹರಡಬೇಕು. ಆದರೆ, ಆದರೆ ಎಂದು ಹೇಳುವುದು ಇಷ್ಟವಾಗುವುದಿಲ್ಲ ಆದರೂ ಹೇಳಬೇಕಾಗುತ್ತದೆ. ಪಾಂಡವರಿಗೆ ಆದರೆ ಎಂಬ ಶಬ್ದ ಇಷ್ಟವಾಗುತ್ತದೆಯೆ? ಇಷ್ಟವಾಗುವುದಿಲ್ಲ. ಆದರೆ, ಆದರೆ ಎಂಬ ಶಬ್ದ ಇದೆಯೋ ಅಥವಾ ಸಮಾಪ್ತಿಯಾಗಿಬಿಟ್ಟಿದಿಯೋ? ಅದಕ್ಕಾಗಿ ಎಲ್ಲಕ್ಕಿಂತ ಸಹಜ ವಿಧಿಯಾಗಿದೆ, ಪ್ರತಿಯೊಬ್ಬರು ತಮ್ಮ ಆಂತರ್ಯವನ್ನು ಪರಿಶೀಲನೆ ಮಾಡಿಕೊಳ್ಳಿ-ಒಂದು ಸೆಕೆಂಡಿನಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು. ಈಗಲೇ ಮಾಡಿ. ಮಾಡಲು ಒಂದು ಸೆಕೆಂಡನ್ನು ಕೊಡಬೇಕೇನು, ಹೇಳುವಾಗಲೇ ಒಂದು ಸೆಕೆಂಡ್ ಆಗಿಹೋಯಿತಲ್ಲವೆ. ಈಗ ತಮ್ಮ ಆಂತರ್ಯವನ್ನು ಪರಿಶೀಲನೆ ಮಾಡಿಕೊಳ್ಳಿ-ನನ್ನ ವೃತ್ತಿಯಲ್ಲಿ (ಭಾವನೆಯಲ್ಲಿ) ಯಾವ ಆತ್ಮನ ಬಗ್ಗೆಯು ಯಾವುದೇ ನಕಾರಾತ್ಮಕ (ನೆಗೆಟೀವ್) ಪ್ರಕಂಪನ (ವೈಬ್ರೇಷನ್) ಇದೆಯೇ? ಒಂದುವೇಳೆ ವಿಶ್ವದ ವಾಯುಮಂಡಲವನ್ನು ಪರಿವರ್ತನೆ ಮಾಡಬೇಕಾದರೆ ತಮ್ಮ ಮನದಲ್ಲಿ ಯಾವ ಒಂದು ಆತ್ಮನ ಬಗ್ಗೆಯೂ ವ್ಯರ್ಥ ಸಂಕಲ್ಪದ ಪ್ರಕಂಪನ ಅಥವಾ ಸತ್ಯಸಂಕಲ್ಪ ಪ್ರಕಂಪನವೂ ನಕಾರಾತ್ಮಕವಿದ್ದಾಗ ವಿಶ್ವ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಅದು ಅಡಚನೆ ಆಗುತ್ತಿರುತ್ತದೆ. ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿರುತ್ತದೆ. ವಾಯುಮಂಡಲದಲ್ಲಿ ಶಕ್ತಿ ಇರುವುದಿಲ್ಲ. ಕೆಲವು ಮಕ್ಕಳು ಈ ರೀತಿ ಹೇಳುತ್ತಾರೆ-ಅವರು ಇರುವುದೇ ಈ ರೀತಿಯಲ್ಲವೇ! ಹಾಗಯೆ ಇದ್ದಾರಲ್ಲವೇ! ಆಗ ನಿಮ್ಮ ಈ ಸಂಕಲ್ಪದ ಪ್ರಕಂಪನಗಳು ಇದ್ದಂತಾಯಿತಲ್ಲವೇ? ತಂದೆಗೂ ಈ ರೀತಿ ಜ್ಞಾನ ಕೊಡಲು ಪ್ರಾರಂಭಿಸಿಬಿಡುತ್ತಾರೆ. ಬಾಬಾ ನಿಮಗೆ ತಿಳಿಯದು, ಆ ಆತ್ಮ ಇರುವುದೇ ಹಾಗೆ. ಆದರೆ ಬಾಬಾ ಕೇಳುತ್ತಾರೆ-ಅವರೇನೊ ಸರಿಯಿಲ್ಲ, ಕೆಟ್ಟವರಾಗಿದ್ದಾರೆ, ಆಗಬಾರದಾಗಿತ್ತು. ಆದರೆ ಈ ಕೆಟ್ಟದ್ದನ್ನು ತಮ್ಮ ವೃತ್ತಿಯಲ್ಲಿ ಇಟ್ಟುಕೊಳ್ಳಲು ತಂದೆಯ ಅನುಮತಿ ಇದೆಯೇನು? ತಂದೆಯ ಅನುಮತಿ ಇಲ್ಲ ಎಂದು ತಿಳಿದುಕೊಳ್ಳುವವರು ಒಂದು ಕೈಯನ್ನು ಎತ್ತಬೇಕು. ಒಂದು ಕೈಯನ್ನು ಎತ್ತಬೇಕು, ಎರಡು ಕೈ ಚಪ್ಪಾಳೆ ಬೇಡ. ಹಿಂದೆ ಇರುವಂತಹವರು ಕೈ ಎತ್ತುತ್ತಿದ್ದಾರೆಯೇ? ಟಿ.ವಿ ಯಲ್ಲಿ ತೋರಿಸಿ. (ದಾದೀಜಿಯವರಿಗೆ) ತಾವು ನೋಡುತ್ತಿದ್ದೀರಲ್ಲವೇ. ಒಳ್ಳೆಯದು ಕೈ ಎತ್ತಿದ್ದೇವೆಂದು ನೆನಪಿಟ್ಟುಕೊಳ್ಳಬೇಕು. ಡಬಲ್ ವಿದೇಶಿಯರು ಕೈ ಎತ್ತಿದ್ದಿರೇನು? ಬಾಪ್ದಾದಾರವರ ಟಿ.ವಿ ಯಲ್ಲಂತು ಬಂದೇಬಿಟ್ಟಿರುತ್ತದೆ. ಎಲ್ಲಿಯವರೆಗೆ ಪ್ರತಿ ಬ್ರಾಹ್ಮಣ ಆತ್ಮನು ಸ್ವಯಂ ವೃತ್ತಿಯಿಂದ ಯಾವುದೇ ಆತ್ಮನ ಪ್ರತಿಯಾಗಿ ನಕರಾತ್ಮಕ ಪ್ರಕಂಪನವಿದ್ದರೆ ವಿಶ್ವಕಲ್ಯಾಣವನ್ನು ಮಾಡಲು ಆಗುವುದಿಲ್ಲ ಏಕೆಂದರೆ ಆ ನಕಾರಾತ್ಮಕ ವೃತ್ತಿಯಿಂದ ವಾಯುಮಂಡಲದಲ್ಲಿ ಶಕ್ತಿಶಾಲಿ ಪ್ರಕಂಪನಗಳನ್ನು ಹರಡಲು ಸಾಧ್ಯವಿಲ್ಲ. ಇದನ್ನು ಪಕ್ಕಾ ತಿಳಿದುಕೊಂಡುಬಿಡಿ. ಎಷ್ಟೇ ಸೇವೆ ಮಾಡಿ, ಪ್ರತಿನಿತ್ಯ ಎಂಟೆಂಟು ಭಾಷಣ ಬೇಕಾದರೆ ಮಾಡಿ, ಎಷ್ಟಾದರು ಯೋಗಶಿಬಿರ ಮಾಡಿ, ಅನೇಕ ಪ್ರಕಾರದ ಕೋರ್ಸನ್ನು ತಿಳಿಸಿಕೊಡಿ ಆದರೆ ಯಾರದೇ ಪ್ರತಿಯಾಗಿ ತಮ್ಮ ವೃತ್ತಿಯಲ್ಲಿ ಯಾವುದೇ ಹಳೆಯ ನಕಾರಾತ್ಮಕ ಪ್ರಕಂಪನವನ್ನಿಟ್ಟುಕೊಳ್ಳಬೇಡಿ. ಒಳ್ಳೆಯದು. ಅವರು ಸರಿಯಿಲ್ಲ, ತುಂಬಾ ತಪ್ಪುಗಳನ್ನು ಮಾಡುತ್ತಾರೆ, ಅನೇಕರಿಗೆ ದುಃಖಕೊಡುತ್ತಾರೆ, ಅಂದಾಗ ತಾವು ಅಂತಹವರಿಗೆ ದುಃಖಕೊಡುವಲ್ಲಿ ಜವಾಬ್ದಾರರಾಗುವ ಬದಲು, ಅವರನ್ನು ಪರಿವರ್ತನೆ ಮಾಡಲು ಸಹಯೋಗಿ ಆಗಲು ಸಾಧ್ಯವಿಲ್ಲವೇ. ದುಃಖ ಕೊಡುವಂತಹ ಸಹಯೋಗಿ ಆಗಬಾರದು, ಅವರನ್ನು ಪರಿವರ್ತನೆ ಮಾಡಲು ತಾವು ಸಹಯೋಗಿಗಳಾಗಿ. ಒಂದುವೇಳೆ ಅಂತಹ ಪರಿವರ್ತನೆ ಆಗದಿರುವಂತಹ ಆತ್ಮಗಳು ಇರುವರೆಂದು ನಿಮಗೆ ತಿಳಿಯಿತೆಂದು ಇಟ್ಟುಕೊಳ್ಳಿ. ತಮ್ಮ ನಿರ್ಣಯದಲ್ಲಿ ಅವರು ಪರಿವರ್ತನೆ ಆಗುವವರಲ್ಲ, ಆದರೆ ನಂಬರ್ವಾರಂತು ಇದೆಯಲ್ಲವೇ! ಅಂದಾಗ ಇವರು ಪರಿವರ್ತನೆಯಾಗುವವರಲ್ಲವೆಂದು ನೀವು ಏಕೆ ಯೋಚಿಸಬೇಕು? ತಾವು ಏಕೆ ನಿರ್ಣಯವನ್ನು ಕೊಡುತ್ತೀರಿ, ಅದನ್ನು ತಂದೆ ನಿರ್ಣಯ ಮಾಡಲು ಇದ್ದಾರಲ್ಲವೇ. ನೀವು ಪರಸ್ಪರ ಬೇರೊಬ್ಬರನ್ನು ನಿರ್ಣಯ ಮಾಡುವವರಾಗಿಬಿಟ್ಟಿರೇನು? ಯಾರು-ಯಾರು ಹೇಗೆ ಇದ್ದಾರೆಂಬುದನ್ನು ತಂದೆಯು ಸಹ ನೋಡುತ್ತಿದ್ದಾರೆ....... ಬ್ರಹ್ಮಾ ತಂದೆಯನ್ನು ಪ್ರತ್ಯಕ್ಷ ರೂಪದಲ್ಲಿ ನೋಡಿದ್ದೀರಲ್ಲವೇ-ಎಂತಹವರೇ ಆಗಿರಲಿ ಮತ್ತೆ- ಮತ್ತೆ ತಪ್ಪು ಮಾಡುವಂತಹ ಆತ್ಮನಾಗಿರಬಹುದು, ಆದರೆ ಬಾಪ್ದಾದಾ (ವಿಶೇಷ ಸಾಕಾರ ರೂಪದಲ್ಲಿ ಬ್ರಹ್ಮಾ ತಂದೆಯು) ಸರ್ವ ಮಕ್ಕಳ ಪ್ರತಿ ನೆನಪು ಪ್ರೀತಿ, ಸರ್ವ ಮಕ್ಕಳಿಗೆ ಮಧುರ-ಮಧುರ ಎಂದು ಹೇಳುತ್ತಾರಲ್ಲವೇ! ಅಥವಾ ಮೂರು ನಾಲ್ಕು ಮಕ್ಕಳು ಕೆಟ್ಟವರು ಹಾಗೂ ಉಳಿದವರೆಲ್ಲರು ಮಧುರವಾಗಿರುವವರು ಎಂದು ಹೇಳಿದ್ದಾರೇನು? ಆದರೂ ಅಂತಹ ಆತ್ಮಗಳ ಪ್ರತಿಯಾಗಿಯು ಸಹ ತಂದೆಯು ದಯಾ ಹೃದಯಿಯಾದರು. ಕ್ಷಮಾಸಾಗರಾದರು. ಒಳ್ಳೆಯದು ಆದರೆ ತಾವು ತಮ್ಮ ವೃತ್ತಿಯಲ್ಲಿ ಯಾರ ಪ್ರತಿಯಾದರು ನಕರಾತ್ಮಕ ಭಾವವನ್ನು ಇಟ್ಟುಕೊಂಡರೆ ಅದರಿಂದ ತಮಗೆ ಲಾಭವೇನು? ಒಂದುವೇಳೆ ನಿಮಗೆ ಲಾಭವಿದ್ದರೆ ಇಟ್ಟುಕೊಳ್ಳಬಹುದು. ತಂದೆಯ ಅನುಮತಿ ಸಹ ಇದೆ. ಒಂದುವೇಳೆ ಲಾಭವಿಲ್ಲವೆಂದರೆ, ಅದರಿಂದ ವ್ಯಾಕುಲವಾಗುತ್ತೀರೆಂದರೆ....., ಆ ಮಾತು ತಮ್ಮ ಮುಂದೆ ಬರುತ್ತಿರುತ್ತದೆ. ಬಾಪ್ದಾದಾರವರು ನೋಡುತ್ತಾರೆ, ಆ ಸಮಯದಲ್ಲಿ ಅವರಿಗೆ ದರ್ಪಣವನ್ನು ಮುಂದಿಡಬೇಕು. ಅಂದಾಗ ಯಾವ ಮಾತಿನಲ್ಲಿ ತಮಗೇನೂ ಲಾಭವಿಲ್ಲ, ಆ ಮಾತಿನ ಅರಿವಿನಲ್ಲಿ ಜ್ಞಾನಪೂರ್ಣರಾಗುವುದು ಬೇರೆ ಮಾತಾಗಿದೆ, ಇದು ತಪ್ಪು, ಸರಿಯೆಂಬ ಜ್ಞಾನವನ್ನು ತಿಳಿದುಕೊಂಡಂತಾಯಿತು. ಈ ರೀತಿ ಜ್ಞಾನಪೂರ್ಣರಾಗುವುದು ತಪ್ಪೇನಲ್ಲ, ಆದರೆ ತಮ್ಮ ವೃತ್ತಿಯಲ್ಲಿ ಧಾರಣೆ ಮಾಡುವುದು ತಪ್ಪಾಗಿದೆ. ಏಕೆಂದರೆ ತಾವು ತಮ್ಮಲ್ಲೇ ಮನಸ್ಸನ್ನು ಖಿನ್ನ ಮಾಡಿಕೊಳ್ಳುವುದು, ವ್ಯರ್ಥಸಂಕಲ್ಪ ಮಾಡುವುದರಿಂದ ನೆನಪಿನ ಶಕ್ತಿಯು ಬಲಹೀನವಾಗಿ ನಷ್ಟವಾಗುತ್ತದೆ. ಯಾವಾಗ ಪ್ರಕೃತಿಯನ್ನು ಸಹ ತಾವು ಪಾವನ ಮಾಡುವಂತಹವರೆಂದರೆ ಇವರಂತು ಆತ್ಮಗಳಾಗಿದ್ದಾರೆ. ವೃತ್ತಿ, ಪ್ರಕಂಪನ ಹಾಗೂ ವಾಯುಮಂಡಲ ಈ ಮೂರಕ್ಕೂ ಪರಸ್ಪರ ಸಂಬಂಧವಿದೆ. ವೃತ್ತಿಯಿಂದ ಪ್ರಕಂಪನ ಹರಡುತ್ತದೆ, ಪ್ರಕಂಪನದಂತೆ ವಾಯುಮಂಡಲವಾಗುತ್ತದೆ. ಆದರೆ ವೃತ್ತಿಯೇ ಆಧಾರವಾಗಿದೆ. ಒಂದುವೇಳೆ ತಾವು ಅತೀ ಶೀಘ್ರವಾಗಿ ಪ್ರತ್ಯಕ್ಷವಾಗಲೆಂದು ತಿಳಿದು ತೀವ್ರಗತಿಯಿಂದ ಪ್ರಯತ್ನ ಪಡುತ್ತಿರುವಿರೆಂದರೆ ಎಲ್ಲರು ತಮ್ಮ ವೃತ್ತಿಯನ್ನು ತಮಗಾಗಿ, ಅನ್ಯರಿಗಾಗಿ ಸಕಾರಾತ್ಮಕವನ್ನು ಧಾರಣೆ ಮಾಡಿ. ಜ್ಞಾನಪೂರ್ಣರು ಆಗುವುದಾದರೆ ಆಗಿ, ಆದರೆ ತಮ್ಮ ಮನದಲ್ಲಿ ನಕರಾತ್ಮಕವನ್ನು ಧಾರಣೆ ಮಾಡಬೇಡಿ. ನಕಾರಾತ್ಮಕವೆಂದರೆ ಅನಾವಾಶ್ಯಕವಾದ ವಸ್ತು ಎಂದರ್ಥ. ಈಗೀಗ ವೃತ್ತಿಯನ್ನು, ಪ್ರಕಂಪನವನ್ನು, ವಾಯುಮಂಡಲವನ್ನು ಶಕ್ತಿಶಾಲಿ ಮಾಡಿಕೊಳ್ಳಿ. ಏಕೆಂದರೆ ಎಲ್ಲರು ಈ ಮಾತಿನ ಅನುಭವ ಮಾಡಿದ್ದೀರಿ-ವಾಣಿಯಿಂದ ಪರಿವರ್ತನೆ, ಶಿಕ್ಷಣದಿಂದ ಪರಿವರ್ತನೆಯು ಬಹಳ ನಿಧಾನವಾಗಿ ಆಗುತ್ತದೆ. ಪರಿವರ್ತನೆ ಆಗುತ್ತದೆ ಆದರೆ ತುಂಬಾ ನಿಧಾನವಾಗಿ. ನೀವು ತೀವ್ರಗತಿಯ ಪರಿವರ್ತನೆ ಬಯಸುವುದಾದರೆ ಜ್ಞಾನಪೂರ್ಣರಾಗಿರಿ, ಕ್ಷಮಾಸ್ವರೂಪರಾಗಿರಿ, ದಯಾ ಹೃದಯದವರಾಗಿ, ಶುಭ ಭಾವನೆ, ಶುಭಕಾಮನೆ ಮೂಲಕ ವಾಯುಮಂಡಲವನ್ನು ಪರಿವರ್ತನೆ ಮಾಡಿ. ನೀವೆಲ್ಲರು ವ್ಯಾ ಮಧುಬನವನ್ನು ಪ್ರತ್ಯಕ್ಷವಾಗಿ ನೋಡಿದ್ದೀರಲ್ಲವೆ, ಮಧುಬನದಲ್ಲಿ ಯಾವ ಮಾತಿನ ಪ್ರಭಾವ ಎಲ್ಲರ ಮೇಲೆ ಹೆಚ್ಚಾಗಿ ಬೀರುತ್ತದೆ? ವಾಯುಮಂಡಲದ ಪ್ರಭಾವ. ಇಲ್ಲಿಯು ಸಹ ಎಲ್ಲರು ನಂಬರ್ವಾರ್ ಇರಬಹುದು, ಆದರೆ ಮಧುಬನ ಬ್ರಹ್ಮಾತಂದೆಯ ಕರ್ಮಭೂಮಿಯಾಗಿದೆ. ಬಾಪ್ದಾದಾರವರ ವರದಾನ ಭೂಮಿಯಾಗಿರುವ ಕಾರಣ ವಾಯುಮಂಡಲವು ಪರಿವರ್ತನೆ ಮಾಡಿಬಿಡುತ್ತದೆ. ಈ ಮಾತಿನಲ್ಲಿ ತಾವೆಲ್ಲರು ಅನುಭವಿಗಳಲ್ಲವೇ! ಆದುದರಿಂದ ತೀವ್ರಗತಿಯಾಗಿ ಅನ್ಯರ ಮನಸ್ಸನ್ನು ಪರಿವರ್ತನೆ ಮಾಡಬೇಕೆಂದರೆ ಸಕಾರಾತ್ಮಕ ಪ್ರಕಂಪನಗಳಿಂದ ವಾಯುಮಂಡಲವನ್ನು ಪರಿವರ್ತನೆ ಮಾಡಬೇಕು. ಇಂತಹ ವಾಯುಮಂಡಲವು ಮನಸ್ಸಿನ ಅಂತರಾಳದಲ್ಲಿ ಉಳಿದುಬಿಡುತ್ತದೆ. ಮಧುಬನದಲ್ಲಿ ಕೇಳಿದ ಮಾತುಗಳನ್ನು ಮರೆತುಬಿಡುತ್ತಾರೆ. ಆದರೆ ಅಲ್ಲಿಯ ವಾಯುಮಂಡಲವು ಅವರ ಮನಸ್ಸಿನ ಆಳದಲ್ಲಿ ಉಳಿದುಬಿಡುತ್ತದೆ, ಇದನ್ನು ಮರೆಯಲಾಗುವುದಿಲ್ಲ. ಈ ರೀತಿ ಇದೆಯಲ್ಲವೇ? ಬಾಪ್ದಾದಾರವರು ಸಹ ಯಾವಾಗ ಪ್ರತ್ಯಕ್ಷ ಆಗುತ್ತಾರೆ ಎಂದು ಮಕ್ಕಳು ಕೇಳುತ್ತಿರುತ್ತಾರೆ, ಮಕ್ಕಳು ಪರಸ್ಪರ ತುಂಬಾ ಚೆನ್ನಾಗಿ ವಾರ್ತಾಲಾಪ ಮಾಡುತ್ತಿರುತ್ತಾರೆ. ಅದು ಚೆನ್ನಾಗಿಯು ಇರುತ್ತದೆ. ಹೇಳಿ, ಪಾಂಡವರೇ ಈಗ ಏನು ಮಾಡುತ್ತೀರಿ? ವಾಯುಮಂಡಲವನ್ನು ಶಕ್ತಿಶಾಲಿ ಮಾಡಬೇಕು. ಸೇವಾಕೇಂದ್ರವಾಗಿರಬಹುದು, ಯಾವುದೇ ಸ್ಥಾನವಾಗಿರಬಹುದು, ಪ್ರವೃತ್ತಿಯಲ್ಲಿ ಇದ್ದರೂ ಸಹ ವಾಯುಮಂಡಲ ಶಕ್ತಿಶಾಲಿ ಆಗಿರಬೇಕು. ಒಂದುವೇಳೆ ನಾಲ್ಕು ಕಡೆಯ ವಾಯುಮಂಡಲವು ಸಂಪೂರ್ಣ ನಿರ್ವಿಘ್ನ, ದಯಾ ಹೃದಯ, ಶುಭ ಭಾವನೆ, ಶುಭ ಕಾಮನೆವುಳ್ಳ ವಾಯುಮಂಡಲವಾಗಿಬಿಡುತ್ತದೆ. ಆಗ ಪ್ರತ್ಯಕ್ಷತೆಯಾಗಲು ತಡವಾಗುವುದಿಲ್ಲ.
ಈಗ ಬಾಪ್ದಾದಾ ಕೊಟ್ಟಂತಹ ದಿನಾಂಕವು ಬಾಪ್ದಾದಾರವರಿಗೆ ನೆನಪಿದೆ. ಆ ಲೆಕ್ಕವನ್ನು ಕೇಳುತ್ತಾರಲ್ಲವೇ? ಪ್ರತಿಯೊಬ್ಬರು ತಮ್ಮ ಲೆಕ್ಕವನ್ನು ಇಟ್ಟಿದ್ದೀರಲ್ಲವೆ! ಆ ಲೆಕ್ಕದಲ್ಲಿ ಬಾಪ್ದಾದಾರವರು ಇದನ್ನು ಪರಿಶೀಲನೆ ಮಾಡುತ್ತಾರೆ - ವೃತ್ತಿಯಲ್ಲಿ, ದೃಷ್ಟಿಯಲ್ಲಿ, ಮಾತಿನಲ್ಲಿ ದಯೆ, ಶುಭ ಭಾವನೆ ಹಾಗೂ ಶುಭ ಕಾಮನೆಯುಳ್ಳ ಆತ್ಮಗಳು ಶೇಕಡ ಎಷ್ಟಿದ್ದಾರೆ? ಈಗಿನ್ನು ಹದಿನೈದು ದಿನಗಳು ಉಳಿದಿದೆಯಲ್ಲವೆ! ಇನ್ನು ಹೆಚ್ಚು ದಿನಗಳಿವೆಯೇನು. ಒಳ್ಳೆಯದು. ಯಾರು ಇದುವರೆಗು ದಿನಚರಿಯ ಲೆಕ್ಕವನ್ನು ಇಟ್ಟಿರುವುದಿಲ್ಲ ಅವರು ಉಳಿದ ಹದಿನೈದು ದಿನಗಳಷ್ಟೆ ಮಾಡಿದರೂ ಸಹ ಪಾಸ್(ಉತ್ತೀರ್ಣ) ಮಾಡಿಬಿಡುತ್ತಾರೆ. ಕಳೆದು ಹೋದುದ್ದಕ್ಕೆ ಬಿಂದು ಇಡಬೇಕು ಹಾಗೂ ದಯೆ, ಕ್ಷಮೆಯಲ್ಲಿ ಸಿಂಧು ಆಗಿಬಿಡಬೇಕು. (ಬಾಪ್ದಾದಾರವರು ವ್ಯಾಯಾಮ ಮಾಡಿಸಿದರು)
ಎಲ್ಲರೂ ಕೇಳಿದಿರಲ್ಲವೇ! ಒಳ್ಳೆಯದು. ಮೂರು ವಿಧದ ಮೀಟಿಂಗ್ ಮಾಡುವವರು ಬಂದಿದ್ದೀರಲ್ಲವೆ, ಸ್ಪಾರ್ಕ್ ಕಡೆಯವರು ಒಂದು ಕೈ ಎತ್ತಿ. ಒಳ್ಳೆಯದು. ತುಂಬಾ ಒಳ್ಳೆಯದು. ಈಗ ಈ ವಿಷಯದ ಮೇಲೆ ಸಂಶೋದನೆ ಮಾಡಿ, ಪ್ರತ್ಯಕ್ಷವಾಗಿ ವಾಯುಮಂಡಲವನ್ನು ಶ್ರೇಷ್ಠಾತಿಶ್ರೇಷ್ಠ ಮಾಡುವುದು ಹೇಗೆ! ಸಂಶೋದನೆ ಮಾಡುತ್ತಿದ್ದೀರಲ್ಲವೇ! ಶ್ರೇಷ್ಠಾತಿಶ್ರೇಷ್ಠ ವಾಯುಮಂಡಲವನ್ನು ಮಾಡಲು ಬುದ್ದಿಯಲ್ಲಿ ಏನೇನು ಇಟ್ಟುಕೊಳ್ಳಬೇಕು? ಎಂತಹ ಕರ್ಮ ಮಾಡಬೇಕು, ಸಂಬಂಧ ಸಂಪರ್ಕದಲ್ಲಿ ಮಾಡಬೇಕು. ತಮ್ಮನ್ನು ತಾವು ವ್ಯಸ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯ ಮಾತಾಗಿದೆ. ಆದರೆ ಬಾಪ್ದಾದಾ ಇದನ್ನು ಪ್ರತ್ಯಕ್ಷ ಅನುಭವದಲ್ಲಿ ನೋಡಲು ಇಷ್ಟ ಪಡುತ್ತಾರೆ-ಹೇಗೆ ಪ್ರತ್ಯಕ್ಷದಲ್ಲಿ ಮಾಡುತ್ತಾ ಅದರ ಪರಿಣಾಮ ಏನಾಯಿತು? ಒಂದುವೇಳೆ ಮಧ್ಯದಲ್ಲಿ ಅಡಚಣೆ ಆಗುತ್ತದೆ ಎಂದರೆ ಯಾವ ಅಡಚಣೆ ಆಯಿತು? ಈ ಅನುಭವವನ್ನು ಪ್ರತ್ಯಕ್ಷವಾಗಿ ಮಾಡಿ ನೋಡಿ, ಕೇವಲ ಈ ರೀತಿ ಮಾಡಬೇಕು, ಈ ರೀತಿ ಮಾಡಬೇಕು ಎಂದು ಕೇವಲ ಪಾಯಿಂಟ್ಸನ್ನು ತೆಗೆಯಬಾರದು. ಮಾಡಿ. ಅನುಭವ ಮಾಡಿ ಮಾದರಿಯಾಗಿ ತೋರಿಸಿ ಹಾಗೂ ಆ ಮಾದರಿಯು ಅನ್ಯರಿಗೂ ಸಹಯೋಗ ಕೊಡುತ್ತದೆ. ಸರಿಯಲ್ಲವೇ! ಇವರು (ರಮೇಷ ಭಾಯಿ) ನಿಮಿತ್ತ ಆಗಿದ್ದಾರಲ್ಲವೇ! ಚೆನ್ನಾಗಿದೆ. ಬಾಪ್ದಾದಾ ತಿಳಿಸುತ್ತಾರೆ ಈಗಿನ್ನೂ ಹದಿನೈದು ದಿನಗಳಿವೆ, ಇನ್ನು ಕೊನೆ ಆಗಿಲ್ಲ. ತುಂಬಾ ಮುಗಿದು ಸ್ವಲ್ಪವೇ ಉಳಿದಿದೆ, ಆದುದರಿಂದ ಸ್ಪಾರ್ಕಿನವರು ಈ ರೀತಿ ಪ್ರತ್ಯಕ್ಷವಾಗಿ ಮಾಡಿ ನೋಡಿ ಹಾಗೂ ಅನ್ಯರಿಗೂ ತೋರಿಸಿ. ಸರಿಯಲ್ಲವೇ? ಮಾಡಲು ಸಾಧ್ಯವೇ? ಸಾಧ್ಯವಾಗುತ್ತದೆಯೇನು? ಒಳ್ಳೆಯದು ತುಂಬಾ ಚೆನ್ನಾಗಿದೆ. ಒಳ್ಳೆಯದು.
ಮತ್ತೊಂದು ಮೀಟಿಂಗ್ ಸಾರಿಗೆ (ಟ್ರಾನ್ಸ್ ಪೋರ್ಟ್)ಯವರದಾಗಿದೆ ಸಾರಿಗೆಯವರು ಸರ್ವರಿಗೂ ಸುಖ ಕೊಡುತ್ತಾರೆ. ಸಾರಿಗೆಯವರು ಕೈ ಎತ್ತಿ. ಒಳ್ಳೆಯದು. ಸಹೋದರಿಯರು, ಸಹೋದರಿಯರಿಲ್ಲದೇ ಮುಕ್ತಿ ಇಲ್ಲ. ಒಳ್ಳೆಯದು ಸಾರಿಗೆಯವರು ಏನು ಮಾಡುತ್ತೀರಿ? ಕೇವಲ ಯಾತ್ರೆ ಮಾಡುಸುತ್ತೀರಷ್ಟೆ ಏನು? ಸಾರಿಗೆಯವರು ಪರಸ್ಪರ ಇಂತಹ ಕಾರ್ಯಕ್ರಮವನ್ನು ಮಾಡಿ. ಎಂತಹ ಆತ್ಮನಿಗೂ ಸಹ ಕಡಿಮೆಯೆಂದರೆ ಸ್ವಲ್ಪ ಸಮಯಕ್ಕಾಗಿ ದುಃಖದ ಪ್ರಪಂಚದಿಂದ ದೂರ ಮಾಡಿ, ಸ್ವಲ್ಪ ಸಮಯಕ್ಕಾಗಿ ಶಾಂತಿಯ ಯಾತ್ರೆಯನ್ನು ಮಾಡಿಸಬೇಕು. ಪರಂಧಾಮದವರೆಗು ತಲುಪಿಸುವುದು ಕಷ್ಟವಾದ ಮಾತು, ಆದರೆ ದುಃಖದ ಪ್ರಪಂಚದಿಂದ ಶಾಂತಿ ಎಂಬ ಯಾತ್ರೆ ಮಾಡಿಸಬಹುದು. ಅಂತಹ ಯೋಜನೆಯನ್ನು ತುಂಬಾ ಮಾಡಿ. ಅದರಿಂದ ನಾಲ್ಕೂ ಕಡೆಯ ಯಾತ್ರೆಯವರಿಗೆ ಬಾಪ್ದಾದಾರವರ ಸಂದೇಶ ತಲುಪಬೇಕು, ತಲುಪಿಬಿಡುತ್ತದೆ. ಏಕೆಂದರೆ ಯಾವುದೇ ವರ್ಗ ಉಳಿದುಕೊಂಡಿಲ್ಲ ತಾನೆ. ಈ ವರ್ಗೀಕರಣದ ಸೇವೆ ಮಾಡುತ್ತಿರುವುದು ತುಂಬಾ ಒಳ್ಳೆಯ ಸೇವೆಯಾಗಿದೆ. ಯಾರಿಂದಲೂ ದೂರನ್ನು ಕೇಳುವ ಹಾಗಿಲ್ಲ. ಯಾವುದೇ ವರ್ಗ ಹಾಗೆಯೇ ಉಳಿದುಬಿಡುವುದಿಲ್ಲ, ಪ್ರತಿಯೊಬ್ಬರು ತಮ್ಮ ವರ್ಗವನ್ನು ಮುಂದುವರಿಸುವ ಉಮ್ಮಂಗವಂತೂ ಇಟ್ಟುಕೊಳ್ಳಿತ್ತೀರಲ್ಲವೇ! ಇದು ತುಂಬಾ ಚೆನ್ನಾಗಿದೆ. ಆದರೆ ಈಗ ಯಾವ ವರ್ಗಗಳು ಆಗಿವೆ, ಎಷ್ಟು ಸಮಯದಿಂದ ಆ ವರ್ಗ ನಡೆಯುತ್ತಿದೆ, ಒಂದುವರೆ ಎರಡು ವರ್ಷವಾಗಿದೆಯೇ, ಅಥವಾ ಇನ್ನೂ ಜಾಸ್ತಿ ಆಗಿದೆಯೇ. (ಹತ್ತು ಹನ್ನೆರಡು ವರ್ಷ) ವರ್ಗೀಕರಣ ಸೇವೆಯು ಹತ್ತು - ಹನ್ನೆರಡು ವರ್ಷಗಳಾಯಿತೇನು? ಒಳ್ಳೆಯದು. ತುಂಬಾ ಸಮಯವಾಗಿಬಿಟ್ಟಿದೆ. ವರ್ಗಗಳ ಪ್ರತಿಯಾಗಿ ಬಾಪ್ದಾದಾರವರಿಗೆ ಒಂದು ಸಂಕಲ್ಪವಿದೆ. ಬಾಪ್ದಾದಾರವರು ಎರಡು – ಮೂರು ಬಾರಿ ಹೇಳಿದ್ದಾರೆ, ಆದರೆ ಇದುವರೆಗು ಅದನ್ನು ಮಾಡಿಲ್ಲ, ಪ್ರತಿ ವರ್ಗದವರು ಎಷ್ಟು ಸಮಯದಿಂದ ಸೇವೆ ಮಾಡುತ್ತಿದ್ದೀರಿ, ಆ ಒಂದೊಂದು ವರ್ಗದ ವಿಶೇಷ ಸೇವಾಧಾರಿ, ಸಹಯೋಗಿ ಆಗಿರಬಹುದು, ಅರ್ಧ ಯೋಗಿಯಾಗಿರಬಹುದು, ಒಮ್ಮೊಮ್ಮೆ ಬರುವಂತಹವರು ಆಗಿರಬಹುದು, ಪ್ರತಿನಿತ್ಯ ಬಾರದಿರಬಹುದು, ಈ ರೀತಿ ಪ್ರತಿ ವರ್ಗದಲ್ಲಿ ಕಡಿಮೆಯೆಂದರೆ ಕಡಿಮೆ ಐದು ಮಂದಿ ಆತ್ಮಗಳನ್ನಾದರೂ ಎಲ್ಲಾ ವರ್ಗದ ಮುಂದೆ ತರಬೇಕು. ಮಧುಬನದಲ್ಲಿ ಅವರನ್ನು ಎಲ್ಲರು ನೋಡುವಂತಾಗಬೇಕು - ವರ್ಗದವರು ಆದರೆ ಹತ್ತು - ಹನ್ನೆರಡು ವಿಶೇಷ ಆತ್ಮಗಳಾಗಿರಲಿ, ಆದರೆ ಐದು ಪಕ್ಕಾ ಉತ್ತಮ ಸಹಯೋಗಿ ಸೇವೆಗೆ ನಿಮಿತ್ತ ಆಗುವಂತಹ ಆತ್ಮಗಳಾದರೂ ಇರಲಿ. ಐದು - ಐದು ಮಂದಿಯನ್ನಾದರು ಸಭೆಯ ಮುಂದೆ ತರಲು ಸಾಧ್ಯವಿದೆಯೇ ಅಥವಾ ಇಲ್ಲವೇ? ಆಗುತ್ತದೆನ್ನುವುದಾದರೆ ಕರೆತನ್ನಿ. ಕರೆತರುವುದು ಯಾವಾಗ? ಅದು ದಾದಿಯರ ಮೇಲೆ ಆಧಾರವಾಗಿದೆ. ಅವರು ಬಾಪ್ ದಾದಾರವರನ್ನು ಮಿಲನ ಮಾಡಲು ಯೋಗ್ಯರಾಗಿರಲಿ, ಐದು ಮಂದಿಯನ್ನು ತಯಾರು ಮಿಲಸುವುದಲ್ಲವೇ? ಹೆಚ್ಚು ಮಾಡಲು ಹೇಳುತಿಲ್ಲ, ಐದು ಸಾಕು. ನಂತರ ದಾದಿಯರು ಪಾಸ್ ಮಾಡುತ್ತಾರೆ.
ಮೂರನೆಯ ಮೀಟಿಂಗ್ - ಇಂಜಿನಿಯರ್ಗಳದಾಗಿದೆ, ತುಂಬಾ ಚೆನ್ನಾಗಿದೆ. ಇವರ ಕೆಲಸ ಯೋಜನೆಗಳನ್ನು ಮಾಡುವುದಾಗಿದೆ. ಅಂದಾಗ ಯಾವುದಾದರೂ ತೀವ್ರ ಪುರುಷಾರ್ಥದ ಯೋಜನೆಯನ್ನು ಮಾಡಿದ್ದೀರಾ, ಕೇವಲ ಸೇವೆಯ ಯೋಜನೆಯನ್ನು ಮಾಡಿದ್ದೀರಾ? ಇಂಜಿನಿಯರ್ಸ್ ಪ್ರತಿ ತಿಂಗಳು ತೀವ್ರ ಪುರುಷಾರ್ಥಕ್ಕಾಗಿ ಯಾವುದಾದರು ಹೊಸ - ಹೊಸ ಯೋಜನೆಯನ್ನು ಮಾಡಬೇಕು. ತಾವು ಸಲಹೆ ಕೊಟ್ಟರೆ ದಾದಿಯರು ಅದನ್ನು ಅಂತಿಮ ನಿರ್ಣಯ ಮಾಡುತ್ತಾರೆ. ದಾದಿಯರು ನಿಮ್ಮ ಜೊತೆಯಲ್ಲಿರುತ್ತಾರೆ, ಆದರೆ ಇಂಜಿನಿಯರ್ಸ್ ಹಾಗೂ ವಿಜ್ಞಾನದವರು ಇಂತಹ ಯಾವುದಾದರೂ ಯೋಜನೆಯನ್ನು ಮಾಡಬೇಕು ಅದರಿಂದ ಅತಿ ಶೀಘ್ರವಾಗಿ ಹೊಸ ಪ್ರಪಂಚ ಬಂದುಬಿಡಲಿ. ಇದೇ ರೀತಿ ಮೀಟಿಂಗ್ ಮಾಡುತ್ತಾ ಯೋಜನೆಗಳನ್ನು ಮಾಡುತ್ತಿದ್ದರೆ, ಎಲ್ಲಿಯವರೆಗೆ? ಯವುದಾದರೂ ತೀವ್ರಗತಿಯ ಯೋಜನೆಯನ್ನು ಮಾಡಿ. ಏಕೆಂದರೆ ತಮ್ಮೆಲ್ಲಾ ವರ್ಗದವರ ಲಕ್ಷ್ಯ ಒಂದೇ ಆಗಿದೆ - ಇಂತಹ ಯೋಜನೆಯಿಂದ ನಮ್ಮ ರಾಜ್ಯ ಅತಿಶೀಘ್ರವಾಗಿ ಬಂದುಬಿಡಲಿ. ಹಾಗೂ ಸೇವೆಯಲ್ಲಿ ಕಡಿಮೆ ಸಮಯ ಹೆಚ್ಚು ಸಫಲತೆ ಪ್ರತ್ಯಕ್ಷವಾಗಿ ಕಾಣಲಿ, ಇಂತಹ ಯೋಜನೆಯನ್ನು ಮಾಡಬೇಕು. ಮಾಡುತ್ತೀರಾ? ಇಂತಹ ಯೋಜನೆಯನ್ನು ಮಾಡುತ್ತೀರಲ್ಲವೇ! ಕೊನೆಯ ಟರ್ನಲ್ಲಿ ಎಲ್ಲರ ಫಲಿತಾಂಶವನ್ನು ಕೇಳುತ್ತಾರೆ. ಪ್ರತಿ ವರ್ಗದವರು ಸಫಲತೆಯನ್ನು ತೀವ್ರ ಮಾಡಿಕೊಳ್ಳುವುದಕ್ಕಾಗಿ ಪ್ಲಾನ್ ಏನು ಮಾಡಿದ್ದೀರಿ! ಕೇವಲ ಮಾಡುವುದಷ್ಟೆ ಅಲ್ಲ, ಹದಿನೈದು ದಿನ ಅದರ ಅಭ್ಯಾಸ ಮಾಡಿ ಪ್ರತ್ಯಕ್ಷದಲ್ಲಿ ತರಬೇಕು. ಸರಿಯಲ್ಲವೇ. ಪ್ರತ್ಯಕ್ಷದಲ್ಲಿ ಆಗಬೇಕಲ್ಲವೇ. ಪರಸ್ಪರ ತಮ್ಮಲ್ಲಿಯೇ ಎಲ್ಲರೂ ಮಾತನಾಡುತ್ತಿರುವುದನ್ನು ನೋಡುತ್ತಾ, ಬಾಪ್ದಾದಾ ಎಲ್ಲರ ವಾರ್ತಾಲಾಪವನ್ನು ಕೇಳುತ್ತಿರುತ್ತಾರೆ. ಎಲ್ಲರೂ ಹೇಳುತ್ತಿರುತ್ತಾರೆ ಪ್ರತ್ಯಕ್ಷವಾಗಲಿ, ಪ್ರತ್ಯಕ್ಷವಾಗಲಿ. ಆದರೆ ಮೊದಲು ತಾವು ಮೊದಲು ಪ್ರತ್ಯಕ್ಷವಾಗಿಬಿಡಿ. ತಂದೆಯು ತಮ್ಮ ಮುಖಾಂತರ ಪ್ರತ್ಯಕ್ಷವಾಗುವರಲ್ಲವೇ! ಒಳ್ಳೆಯದು. ಈಗೀಗ ತಮ್ಮ ವೃತ್ತಿಯನ್ನು ಏಕಾಗ್ರ ಮಾಡಲು ಸಾಧ್ಯವೇ? ಯಾವ ಕಡೆಗೂ ವೃತ್ತಿ ಏರು-ಪೇರಿನಲ್ಲಿ ಬರಬಾರದು. ಅಚಲ, ಏಕಾಗ್ರ, ಶಕ್ತಿಶಾಲಿಯಾಗಿರಬೇಕು. (ಡ್ರಿಲ್ ಮಾಡಿಸಿದರು) ಒಳ್ಳೆಯದು.
ನಾಲ್ಕೂ ಕಡೆಯ ಸರ್ವ ಸೇವಾಧಾರಿ ಮಕ್ಕಳಿಗೆ, ಸದಾ ತಮ್ಮ ಶ್ರೇಷ್ಠ ಪ್ರಕಂಪನಗಳಿಂದ ಸೇವೆ ಮಾಡುವಂತಹ ತೀವ್ರಗತಿ ಪುರುಷಾರ್ಥ ಪಾಡುವಂತಹ ಮಕ್ಕಳಿಗೆ, ಸದಾ ಕ್ಷಮೆಯ ಮಾಸ್ಟರ್ ಸಾಗರ, ಸದಾ ಶುಭಭಾವನೆ, ಶುಭ ಕಾಮನೆಯ ಮೂಲಕ ತುಂಬಾ ಬಲಹೀನ ಆತ್ಮಗಳನ್ನು ಶಕ್ತಿಶಾಲಿ ಮಾಡುವಂತಹ ಮಾಸ್ಟರ್ ಸರ್ವಶಕ್ತಿವಾನ್ ಮಕ್ಕಳಿಗೆ ಬಾಪ್ ದಾದಾರವರ ತುಂಬಾ-ತುಂಬಾ ನೆನಪು ಪ್ರೀತಿ ಹಾಗೂ ನಮಸ್ತೆ.
| ವರದಾನ: |
ವರದಾನ: ಸಮಯ ಪ್ರಮಾಣ ಪ್ರತಿ ಕಾರ್ಯದಲ್ಲಿ ಸಫಲರಾಗುವಂತಹ ಜ್ಞಾನಿ, ಯೋಗಿತ್ವ ಆತ್ಮ ಭವ ಜ್ಞಾನದ ಅರ್ಥವೇ ಆಗಿದೆ ತಿಳುವಳಿಕೆ. ಬುದ್ಧಿವಂತರು ಎಂದು ಇವರಿಗೆ ಹೇಳಲಾಗುತ್ತೆ ಯಾರು ಸಮಯ ಪ್ರಮಾಣ ತಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಮಾಡುತ್ತಾ ಸಫಲತೆಯನ್ನು ಪ್ರಾಪ್ತಿಮಾಡಿಕೊಳ್ಳುವವರು. ಬುದ್ಧಿವಂತರ ಚಿನ್ಹೆಯಾಗಿದೆ ಅವರು ಎಂದೂ ಮೋಸಹೋಗಲು ಸಾಧ್ಯವಿಲ್ಲ. ಮತ್ತು ಯೋಗಿಯ ಚಿನ್ಹೆಯಾಗಿದೆ ಕ್ಲೀನ್ ಮತ್ತು ಕ್ಲಿಯರ್ ಬುದ್ಧಿ. ಯಾರ ಬುದ್ಧಿ ಕ್ಲೀನ್ ಮತ್ತು ಕ್ಲಿಯರ್ ಇರುತ್ತೆ ಅವರು ಎಂದೂ ಹೀಗೆ ಹೇಳಲ್ಲ ಹೀಗೆ ಏಕೆ ಆಯಿತು ಎಂದು ಗೊತ್ತಿಲ್ಲ! ಈ ಶಬ್ಧ ಜ್ಞಾನಿ ಮತ್ತು ಯೋಗಿ ಆತ್ಮಗಳು ಹೇಳಲು ಸಾಧ್ಯವಿಲ್ಲ, ಅವರು ಜ್ಞಾನ ಮತ್ತು ಯೋಗವನ್ನು ಪ್ರತಿಕರ್ಮದಲ್ಲಿ ತರುತ್ತಾರೆ. |
| ಸ್ಲೋಗನ್: | ಸ್ಲೋಗನ್: ಅಚಲ-ಅಡೋಲರಾಗಿ ಇವರೇ ಇರಲು ಸಾಧ್ಯ ಯಾರು ತಮ್ಮ ಆದಿ ಅನಾದಿ ಸಂಸ್ಕಾರ-ಸ್ವಭಾವವನ್ನು ಸ್ಮೃತಿಯಲ್ಲಿಡುತ್ತಾರೆ. |