ಕನ್ನಡ ಮುರಳಿ · Brahma Kumaris

ಇಂದಿನ ಮುರಳಿ

ಓಂ ಶಾಂತಿ · BapDada · ನವೆಂಬರ್ 22, 2026

ಇಂದಿನ ಮುರಳಿ — ಪ್ರತಿದಿನ ಬೆಳಿಗ್ಗೆ ಹೊಸದು.

18
ಡೌನ್‌ಲೋಡ್ PDF
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

22/11/26
ಪ್ರಾತಃಮುರುಳಿ
ಓಂಶಾಂತಿ
"ಅವ್ಯಕ್ತ-ಬಾಪ್ದಾದಾ"
ರಿವೈಜ್: 03/04/20

“ನನ್ನದನ್ನು ನಿನ್ನದರಲ್ಲಿ ಪರಿವರ್ತನೆ ಮಾಡಿ ನಿಶ್ಚಿಂತ ಚಕ್ರವರ್ತಿ ಆಗಿ, ತಂದೆಯ ಪ್ರೀತಿ ಮತ್ತು ಸೇವೆಯಲ್ಲಿ ಮನಸ್ಸನ್ನು ಅಷ್ಟು ಬಿಜಿಯಾಗಿಟ್ಟುಕೊಳ್ಳಿ ಯಾವುದರಿಂದ ವ್ಯರ್ಥ ಬರಲು ಅವಕಾಶ (ಮಾರ್ಜಿನ್) ಇರಬಾರದು”

ಈ ದಿನ ಬಾಪ್ದಾದಾ ನಾಲ್ಕಾರು ಕಡೆಯ ತನ್ನ ನಿಶ್ಚಿಂತ ಚಕ್ರವರ್ತಿಗಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗು ಬೆಳೆಗ್ಗೆಯಿಂದ ಎದ್ದು ನಿಶ್ಚಿಂತ ಸ್ಥಿತಿಯಲ್ಲಿ ಸ್ಥಿತರಾಗಿ ಪ್ರತಿಯೊಂದು ಕರ್ಮವನ್ನು ಮಾಡುತ್ತಾರೆ. ನಿಶ್ಚಿಂತ ಚಕ್ರವರ್ತಿಯ ಜೀವನದಲ್ಲಿ ರಾಜ್ಯಭಾಗ್ಯವೂ ಸಹ ಇದೆ, ನಿಶ್ಚಿಂತತೆಯೂ ಸಹ ಇದೆ ಎನ್ನುವುದು ಪ್ರತಿಯೊಬ್ಬ ಮಗುವಿಗೆ ಅನುಭವವಿದೆ, ಎಷ್ಟು ಪ್ರಿಯವಾಗುತ್ತದೆ ಏಕೆಂದರೆ ತಾವು ಎಲ್ಲರು ತಂದೆಗೆ ಚಿಂತೆಯನ್ನು ಕೊಟ್ಟು ನಶೆಯನ್ನು ತೆಗೆದುಕೊಂಡಿದ್ದೀರಿ. ನಶೆಯೂ ಅವಿನಾಶಿ ನಶೆಯನ್ನು ತೆಗೆದುಕೊಂಡಿದ್ದೀರಿ. ಪ್ರತಿಯೊಬ್ಬರು ಅನುಭವ ಮಾಡುತ್ತಾರೆ ಈ ನಿಶ್ಚಿಂತ ಜೀವನ ಎಷ್ಟು ಪ್ರಿಯವಾಗಿದೆ. ಹಗಲು-ರಾತ್ರಿ ಯಾವುದೇ ಮಾತಿನ ಚಿಂತೆ ಇಲ್ಲ ಆದರೆ ನಶೆ ಇದೆ. ಗೊತ್ತಿದೆ ನಿಶ್ಚಿಂತವಾಗಿರುವ ಜೀವನ ತಂದೆ ಈ ಒಂದು ಜನ್ಮಕ್ಕೆ ಅಲ್ಲ ಆದರೆ ಅನೇಕ ಜನ್ಮಗಳಿಗಾಗಿ ನಿಶ್ಚಿಂತ ಚಕ್ರವರ್ತಿಯನ್ನಾಗಿ ಮಾಡಿ ಬಿಟ್ಟಿದ್ದಾರೆ. ಒಂದು ನಿಶ್ಚಿಂತ ಜೀವನ ಇದ್ದರೆ ಮಸ್ತಕದಲ್ಲಿ ದಿವ್ಯ ಜ್ಯೋತಿ ಹೊಳೆಯುತ್ತಿರುತ್ತದೆ ಎಂದು ಈಗ ಅನುಭವ ಮಾಡುತ್ತೀರಿ. ಒಂದು ಚಿಂತೆ ಇದ್ದರೆ ತಲೆಯ ಮೇಲೆ ಅನೇಕ ಪ್ರಕಾರದ ದುಃಖಗಳ ಹೊರೆ ತುಂಬಿರುತ್ತದೆ. ಈ ನಿಶ್ಚಿಂತ ಜೀವನದ ವಿಧಿ ಬಹಳ ಸಹಜವಾಗಿದೆ. ಯಾವುದೆಲ್ಲಾ ಹದ್ದಿನ ನನ್ನದು-ನನ್ನದು ಎನ್ನುವುದಿದೆ ಅದನ್ನು ನಿನ್ನದನ್ನಾಗಿ ಮಾಡಿ ಬಿಟ್ಟಿದ್ದೀರಿ. ನನ್ನದು ಮತ್ತು ನಿನ್ನದು ಎನ್ನುವುದರಲ್ಲಿ ಒಂದೇ ಅಕ್ಷರದ ಅಂತರವಿದೆ. ನ ಮತ್ತು ನಿ. ಆದರೆ ನನ್ನದನ್ನು ನಿನ್ನದನ್ನಾಗಿ ಮಾಡುವುದರಿಂದ ಜೀವನ ಎಷ್ಟು ಖುಷಿಯಾಗಿ ಬಿಡುತ್ತದೆ. ಆಗಿ ಬಿಟ್ಟಿದೆಯಲ್ಲವೇ! ಕತ್ತು ಅಲುಗಾಡಿಸಿ, ಆಗಿ ಬಿಟ್ಟಿದೆಯೇ. ನಿಶ್ಚಿಂತ ಜೀವನ ಆಗಿ ಬಿಟ್ಟಿದೆ.

ಈಗ ಬಾಪ್ದಾದಾರವರು ಪ್ರತಿಯೊಂದು ಮಗುವಿನಿಂದ ಇದನ್ನೇ ಬಯಸುತ್ತಿದ್ದಾರೆ ಚಿಂತೆ ಇರುವವರ ಜೀವನದ ಆಧಾರ ವ್ಯರ್ಥ ಸಂಕಲ್ಪ ಆಗಿದೆ, ಅಂದಾಗ ಪ್ರತಿಯೊಬ್ಬ ಮಗುವಿನ ಒಳಗೆ ವ್ಯರ್ಥ ಸಂಕಲ್ಪದ ಚಿನ್ಹೆಯೂ ಸಹ ಇರಬಾರದು ಏಕೆಂದರೆ ಯಾವಾಗ ನನ್ನದನ್ನು ನಿನ್ನದು ಎನ್ನುವುದರಲ್ಲಿ ಪರಿವರ್ತನೆ ಮಾಡಿದಾಗ ತಾವು ಏನಾಗಿದ್ದೀರಿ? ತಾವು ನಿಶ್ಚಿಂತ ಚಕ್ರವರ್ತಿ ಆಗಿದ್ದೀರಿ ಮತ್ತು ಈ ನಿಶ್ಚಿಂತ ಚಕ್ರವರ್ತಿಯ ಜೀವನ ಎಷ್ಟು ಪ್ರಿಯವಾಗಿದೆ. ಪ್ರತಿಯೊಂದು ಕರ್ಮ ಮಾಡುತ್ತಾ ನಿಶ್ಚಿಂತ ಚಕ್ರವರ್ತಿ. ಯಾವುದೇ ಚಿಂತೆ ಇಲ್ಲ ಏಕೆ, ಏನು, ಹೇಗೆ, ಎಲ್ಲಿಯವರೆಗೆ....ಇದೆಲ್ಲಾ ಸಮಾಪ್ತಿ ಆಗಿ ಬಿಟ್ಟಿದೆ. ಈ ದಿನ ಈ ಸೀಜನ್ನ ಕೊನೆಯ ದಿನ ಆಗಿದೆ, ಬಾಪ್ದಾದಾ ಇದನ್ನೇ ಬಯಸುತ್ತಿದ್ದಾರೆ - ಪ್ರತಿಯೊಬ್ಬ ಮಗು ವ್ಯರ್ಥದ ನನ್ನದನ್ನು ನಿನ್ನದು ಎನ್ನುವುದರಲ್ಲಿ ಪರಿವರ್ತನೆ ಮಾಡಲಿ. ತಂದೆ ತಾನಾಗಿಯೇ ಭಸ್ಮ ಮಾಡುತ್ತಾರೆ. ತಾವು ಕೇವಲ ಒಂದೇ ಅಕ್ಷರದ ಅಂತರವನ್ನು ಮಾಡಿ, ಒಪ್ಪಿಗೆ ಇದೆಯೇ! ಈ ರೀತಿ ಮಾಡಲು ಸಾಧ್ಯವೇ? ಒಂದುವೇಳೆ ಮಾಡಲು ಸಾಧ್ಯ ಆದರೆ ಕೈ ಎತ್ತಿ. ಬಹಳ ಒಳ್ಳೆಯದು ಏಕೆಂದರೆ ಈ 5-6 ತಿಂಗಳು ತಾವೆಲ್ಲರು ವಿಶ್ವದ ಮುಂದೆ ದುಃಖಿ ಆತ್ಮರಿಗೆ ಶಕ್ತಿಶಾಲಿ ವೃತ್ತಿಯ ಮೂಲಕ ಸುಖ-ಶಾಂತಿಯ ಕಿರಣಗಳನ್ನು ಕೊಡಬೇಕು. ಇದರಲ್ಲೇ ತಮ್ಮ ಮನಸ್ಸನ್ನು ಬಿಜಿಯಾಗಿಟ್ಟುಕೊಳ್ಳಿ. ವ್ಯರ್ಥ ಸಂಕಲ್ಪವೂ ಯಾವುದರಲ್ಲಿ ಬರುತ್ತದೆ? ಮನಸ್ಸಿನಲ್ಲಿ ಬರುತ್ತದಲ್ಲವೇ! ಅಂದಾಗ ಬಾಪ್ದಾದಾರವರು ಇದನ್ನೇ ಬಯಸುತ್ತಿದ್ದಾರೆ. ಪ್ರತಿಯೊಬ್ಬ ನಿಶ್ಚಿಂತ ಚಕ್ರವರ್ತಿ ಮಗು ತನ್ನ ಮನಸ್ಸನ್ನು ಅರ್ಥಾತ್ ವೃತ್ತಿಯನ್ನು ಅಷ್ಟು ಬಿಜಿಯಾಗಿ ಇಟ್ಟುಕೊಳ್ಳಬೇಕು ಯಾವುದರಿಂದ ವ್ಯರ್ಥ ಬರಲು ಅವಕಾಶ ಇರಬಾರದು. ಪರಿಶ್ರಮ ಮಾಡಬಾರದು ಆದರೆ ತಂದೆಯ ಪ್ರೀತಿನಲ್ಲಿ ಅಷ್ಟು ಬಿಜಿಯಾಗಿರಬೇಕು, ವೃತಿಯ ಸೇವೆಯಲ್ಲಿ ಮನಸ್ಸನ್ನು ಬಹಳ ಬಿಜಿಯಾಗಿಟ್ಟುಕೊಳ್ಳಿ ಯಾವುದರಿಂದ ಯುದ್ಧವೂ ಸಹ ಮಾಡಬಾರದು. ಇಷ್ಟ ಇರಲಿಲ್ಲ ಆದರೆ ಬಂದು ಬಿಟ್ಟಿದೆ ಎಂದು ಕೆಲವು ಮಕ್ಕಳು ಹೇಳುತ್ತಾರೆ. ಇದಕ್ಕೆ ಏನು ಹೇಳುತ್ತಾರೆ? ಮನಸ್ಸನು ತಂದೆಯ ಪ್ರೀತಿ ಹಾಗೂ ಸೇವೆಯಲ್ಲಿ ಬಿಜಿಯಾಗಿಟ್ಟುಕೊಂಡಿಲ್ಲ ಎಂದು ಹೇಳಲಾಗುತ್ತದೆ. ಎಲ್ಲರನ್ನು ಕೇಳಿ ತಮಗೆ ತಂದೆಯ ಜೊತೆ ಎಷ್ಟು ಪ್ರೀತಿ ಇದೆ? ಅಂದಾಗ ಏನು ಹೇಳುತ್ತಾರೆ? ಬೇಹದ್ದಿನ ಪ್ರೀತಿ ಇದೆ ಎಂದು ಹೇಳುತ್ತಾರೆ. ಯಾರ ಮೇಲೆ ಪ್ರೀತಿ ಇರುತ್ತದೆ ಅವರು ಹೇಳುವುದನ್ನು ಒಪ್ಪಿಕೊಳ್ಳುವುದು ಕಷ್ಟ ಆಗುವುದಿಲ್ಲ. ಅಂದಾಗ ತಮ್ಮೆಲ್ಲರಿಗೆ ತಂದೆಯ ಜೊತೆ ಅಟೂಟ್ (ಸದಾ ಅಥವಾ ಖಂಡನೆ ಆಗದೆ ಇರುವ) ಪ್ರೀತಿ ಇದೆಯಲ್ಲವೇ! ಅಥವಾ ಕೆಲವೊಮ್ಮೆ ಇದೆಯೋ? ಸದಾ ಇದೆಯೋ ಅಥವಾ ಕೆಲವೊಮ್ಮೆ ಇದೆಯೋ? ಯಾರು ಸದಾ ಪ್ರೀತಿ ಇದೆ ಎಂದು ಹೇಳುತ್ತಾರೆ ಅವರು ಕೈ ಎತ್ತಿ. ಸದಾ ಪ್ರೀತಿ ಇದೆ, ನೋಡಿ ಯೋಚಿಸಿ, ಸದಾ ಪ್ರೀತಿ ಇದ್ದರೆ ತಂದೆ ಹೇಳುವುದು ಮತ್ತು ಮಕ್ಕಳು ಮಾಡುವುದು ಈ ರೀತಿ ಇರಬೇಕು. ಇದಂತೂ ಗೊತ್ತಿದೆಯಲ್ಲವೇ!

ಅಂದಾಗ ಈಗ ಈ ಸೀಜನ್ನಲ್ಲಿ ಮಕ್ಕಳಿಂದ ಇದೇ ದೃಢ ಸಂಕಲ್ಪವನ್ನು ಮಾಡಿಸಲು ಇಷ್ಟ ಪಡುತ್ತಾರೆ, ತಯಾರಾಗಿದ್ದೀರಾ! ಕತ್ತು ಅಲುಗಾಡಿಸಿ. ತಯಾರಾಗಿದ್ದೀರಾ ದೃಢ ಸಂಕಲ್ಪವನ್ನು ಮಾಡಲು? ಹಿಂದೆ ಇರುವವರು ತಯಾರಾಗಿದ್ದೀರಾ? ಮಾತೆಯರೂ ಸಹ ತಯಾರಾಗಿದ್ದೀರಾ? ಪಾಂಡವರೂ ಸಹ ತಯಾರಾಗಿದ್ದೀರಾ? ಒಳ್ಳೆಯದು ಕೈ ಎತ್ತಿ. ಇದರಲ್ಲಿ ಎರಡು-ಎರಡು ಕೈ ಎತ್ತಿ. ಕೈ ಎತ್ತುತ್ತೀರಾ ಅಂದಾಗ ಬಾಪ್ದಾದಾರವರನ್ನಂತೂ ಖುಷಿ ಮಾಡಿ ಬಿಡುತ್ತಾರೆ. ಈಗ ಹೇಗೆ ಈ ಕೈಯನ್ನು ಎತ್ತಿದ್ದೀರಿ ಅದೇ ರೀತಿ ಮನಸ್ಸು ಎಂಬ ಕೈಯನ್ನು ಎತ್ತಿ. ಎಂದೂ ವ್ಯರ್ಥ ಸಂಕಲ್ಪ ಬರಲು ಬಿಡಬಾರದು. ಅದರ ಕೆಲಸವಾಗಿದೆ ಬರುವುದು, ತಮ್ಮ ಕೆಲಸ ಯಾವುದು? ಸಮಾಪ್ತಿ ಮಾಡಿ ಬಿಡುವುದು. ಅಂದಾಗ ಈ ಸೀಜನ್ನಲ್ಲಿ ಬಾಪ್ದಾದಾ ಮೊದಲೂ ಸಹ ತಿಳಿಸಿದ್ದಾರೆ ಎರಡು ಮಾತುಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಒಂದಂತೂ ಸಂಕಲ್ಪ ಇನ್ನೊಂದು ಸಮಯವಾಗಿದೆ. ತಮಗೆ ತಿಳಿದಿದೆ, ಸಂಗಮ ಯುಗದ ಒಂದೊಂದು ನಿಮಿಷದ ಸಂಬಂಧ 21 ಜನ್ಮಗಳ ಜೊತೆ ಇರುತ್ತದೆ. ಮತ್ತು ಈ ಸಮಯ ಬಾಪ್ದಾದಾರವರಿಗೆ ಮಕ್ಕಳ ಜೊತೆ, ಮಕ್ಕಳಿಗೆ ತಂದೆಯ ಜೊತೆ ಪ್ರೀತಿ ಇದೆ. ಅಂದಾಗ ಸಂಗಮ ಯುಗದ ಸಮಯದ ಒಂದು ಸೆಕೆಂಡ್, ಒಂದು ಸೆಕೆಂಡ್ ಅಲ್ಲ ಏಕೆಂದರೆ 21 ಜನ್ಮಗಳ ಸಂಬಂಧವಿದೆ, ಒಂದುವೇಳೆ ಈಗ ಸಮಯವನ್ನು ಉಳಿತಾಯ ಮಾಡಲಿಲ್ಲವೆಂದರೆ 21 ಜನ್ಮಗಳು ಯಾರಿಗೆ ತಂದೆಯ ಜೊತೆ ಪ್ರೀತಿ ಇದೆ ಮತ್ತು ಪ್ರತಿಯೊಬ್ಬರು ಬಯಸುತ್ತಾರೆ ತಂದೆಯ ಜೊತೆ ಈಗಲೂ ಇರಲಿ, ಜೊತೆಯಲ್ಲಿಯೇ ಹೋಗಬೇಕೆಂದು. ತಮ್ಮ ಮನೆಗೆ ಈಗ ವಾಪಸ್ ಹೋಗಬೇಕಾಗಿದೆಯಲ್ಲವೇ. ಮನೆಗೂ ಜೊತೆಯಲ್ಲಿ ಹೋಗಬೇಕು ಮತ್ತು ರಾಜ್ಯದಲ್ಲೂ ಬಾಪ್ದಾದಾರವರ ಜೊತೆ ವಿಶೇಷವಾಗಿ ಬ್ರಹ್ಮಾಬಾಬಾರವರ ಜೊತೆ ರಾಜಧಾನಿಯಲ್ಲೂ ಸಹ ಸಮೀಪವಾಗಿ ಜೊತೆಯಲ್ಲಿ ಬರಬೇಕು ಆದ್ದರಿಂದ ಬ್ರಹ್ಮಾ ತಂದೆಯಂತೂ ಫರಿಸ್ಥಾ ರೂಪದಲ್ಲಿ ಇದ್ದಾರೆ ಮತ್ತು ತಾವೂ ಸಹ ಜೊತೆಯಲ್ಲಿ ಹೋಗಬೇಕೆಂದರೆ ಏನು ಮಾಡಬೇಕಾಗಿದೆ? ಫರಿಸ್ಥಾ ಆಗಬೇಕಾಗಿದೆ! ಫರಿಸ್ಥಾ ಆಗುತ್ತೀರಲ್ಲವೇ, ಆಗಲೇಬೇಕಲ್ಲವೇ!

ಬ್ರಹ್ಮಾ ತಂದೆಯ ಕೈಯಲ್ಲಿ ಕೈ ಕೊಟ್ಟು ಹೋಗಬೇಕು ಅಂದಾಗ ಯಾವ ಕೈ ಆಗಿದೆ? ಫರಿಸ್ಥಾಗೆ ಸ್ಥೂಲ ಕೈಯಂತೂ ಇರುವುದಿಲ್ಲ. ಬ್ರಹ್ಮಾ ತಂದೆಯ ಕೈ ಯಾವುದು? ಶ್ರೀಮತದ ಕೈಯಾಗಿದೆ. ಅಂದಾಗ ಬಾಪ್ದಾದಾರವರ ಇದೇ ಶ್ರೀಮತವಾಗಿದೆ ಈಗ ನಿಶ್ಚಿಂತ ಚಕ್ರವರ್ತಿ ಆಗಿ ಸದಾ ಹೇಗೆ ತಮ್ಮ ಜಗದಾಂಬರವರು ಪುರುಷಾರ್ಥ ಮಾಡಿದರು, ತಂದೆ ಹೇಳುವುದು ಮತ್ತು ಜಗದಾಂಬಾರವರು ಮಾಡುವುದು. ಈ ರೀತಿ ಜಗದಾಂಬಾರವರನ್ನು ಫಾಲೋ ಮಾಡಿ. ಸಮಯ ಮತ್ತು ಸಂಕಲ್ಪವನ್ನು ಸಫಲ ಮಾಡಿಕೊಳ್ಳಲೇಬೇಕು. ವ್ಯರ್ಥವಾಗಿ ಹೋಗಬಾರದು. ತಿಳಿಸಿದ್ದೇವೆ ಅಲ್ಲವೇ ಒಂದೊಂದು ಸಂಕಲ್ಪದ್ದು 21 ಜನ್ಮಗಳ ಕನೆಕ್ಷನ್ ಇದೆ. ಅಂದಾಗ ಬಾಪ್ದಾದಾ ಸದಾ ಮನಸ್ಸನ್ನು ಬಿಜಿಯಾಗಿ ಇಟ್ಟುಕೊಳ್ಳಿ ಎಂದು ಬಯಸುತ್ತಾರೆ. ಮುರಳಿ ಕೇಳುವುದರಲ್ಲಿ ಆಗಲಿ, ಸೇವೆಯಲ್ಲಿ ಆಗಲಿ ಪ್ರತಿ ಸಮಯ ಬಿಜಿಯಾಗಿರಿ. ತಮ್ಮ ಚಾರ್ಟ್ನ್ನು ಇಟ್ಟುಕೊಳ್ಳೊರಿ. ಪ್ರತಿ ಸಮಯ ಮಧ್ಯ-ಮಧ್ಯದಲ್ಲಿ ಬಾಪ್ದಾದಾರವರು ಯಾವ ಭಿನ್ನ-ಭಿನ್ನ ಡ್ರಿಲ್ಗಳನ್ನು ತಿಳಿಸಿದರು, ಗೊತ್ತಿದೆಯಲ್ಲವೇ ಅಶರೀರಿ ಆಗುವ ಡ್ರಿಲ್. ತಮ್ಮ ಮೂರು ಸ್ವರೂಪದ ಸ್ಮೃತಿಯ ಡ್ರಿಲ್. ಗೊತ್ತಿದೆಯಲ್ಲವೇ! ಹೇಗೆ ತಂದೆಗೆ ಮೂರು ರೂಪವಿದೆ ಅದೇ ರೀತಿ ತಮಗೂ ಸಹ ಮೂರು ರೂಪವಿದೆ. ಬ್ರಾಹ್ಮಣ, ಫರಿಸ್ಥಾ ಮತ್ತು ದೇವತೆ, ಈ ಮೂರು ರೂಪಗಳಲ್ಲಿ ಡ್ರಿಲ್ ಮೂಲಕ ತಮ್ಮ ಮನಸ್ಸನ್ನು ಬಿಜಿಯಾಗಿ ಇಟ್ಟುಕೊಳ್ಳಿ ಅದರಿಂದ ಮಹಾಮಂತ್ರ ಯಾವುದಾಗಿದೆ? ಮನ್ಮನಾಭವ.

ಬಾಕಿ ಬಾಪ್ದಾದಾರವರಿಗೆ ಪ್ರತಿಯೊಬ್ಬ ಮಗುವಿನೊಂದಿಗೆ ಬಹಳ-ಬಹಳ ಪ್ರೀತಿ ಇದೆ, ಆದ್ದರಿಂದ ಬಾಪ್ದಾದಾರವರು ಇದನ್ನೇ ಬಯಸುತ್ತಿದ್ದಾರೆ ಪ್ರತಿಯೊಬ್ಬ ಮಗು ವಿಜಯಿ ಭವದ ವರದಾನಿ ಆಗಲಿ. ತಿಳಿಸಿದ್ದೇವಲ್ಲವೇ ಕೆಲವು ಮಕ್ಕಳು ಯೋಚನೆ ಮಾಡುತ್ತಾರೆ ನಾವು ವಿಜಯಿ ಅಂತೂ ಆಗುತ್ತೇವೆ ಆದರೆ ಮಾಲೆಯಂತೂ 108ರದ್ದು ಇದೆ, ಅಂದಾಗ ವಿಜಯಿ ಆಗಿ ಮಾಲೆಯಲ್ಲಂತೂ ಬರಲು ಸಾಧ್ಯವಿಲ್ಲ ಆದರೆ ಬಾಪ್ದಾದಾರವರಿಗೆ ಅಷ್ಟೂ ಪ್ರೀತಿ ಇದೆ, ತಾವು ವಿಜಯಿ ಆದರೆ ಬಾಪ್ದಾದಾರವರು ಮಾಲೆಯಲ್ಲೂ ಸಹ ಮಧ್ಯದಲ್ಲಿ ಸೇರಿಸಿ ಬಿಡುತ್ತಾರೆ. ತಾವು ಕೇವಲ ವಿಜಯಿ ಆಗಬೇಕು. ಅಂದಾಗ ಯಾವ ಸಂಕಲ್ಪವಿದೆ? ವಿಜಯಿ ಆಗಲೇಬೇಕಲ್ಲವೇ! ಅಥವಾ ಕೇವಲ 108 ಅಷ್ಟೇ ವಿಜಯಿ ಆಗುತ್ತಾರೋ? ಆ ರೀತಿ ಅಲ್ಲ. ತಂದೆಯ ಪ್ರತಿಯೊಬ್ಬ ಮಗು ವಿಜಯಿ ಆಗಿದೆ. ಬಾಪ್ದಾದಾ ಪ್ರತಿಯೊಬ್ಬರ ಮಸ್ತಕದಲ್ಲಿ ಯಾವುದನ್ನು ನೋಡುತ್ತಿದ್ದಾರೆ? ವಿಜಯದ ತಿಲಕವನ್ನು ನೋಡುತ್ತಿದ್ದಾರೆ ಏಕೆಂದರೆ ಸಾಧಾರಣ ರೂಪದಲ್ಲಿ ತಂದೆಯನ್ನು ತಿಳಿದುಕೊಂಡಿದ್ದೀರಲ್ಲವೇ! ಕೊನೆ ಮಗು ಇರಬಹುದು, ಪುರುಷಾರ್ಥದಲ್ಲಿ ಡೀಲಾ ಆಗಿರಬಹುದು ಆದರೆ ಅವರಲ್ಲಿ ಈ ವಿಶೇಷತೆ ಇದೆ ಸಾಧಾರಣ ರೂಪದಲ್ಲಿ ಬಂದಿರುವ ತಂದೆಯನ್ನು ತಿಳಿದುಕೊಂಡು ನನ್ನ ಬಾಬಾ ಎಂದು ಹೇಳುತ್ತಾರಲ್ಲವೇ ಆದ್ದರಿಂದ ಪ್ರತಿಯೊಬ್ಬ ಮಗು ಸಾಹಸವನ್ನು ಇಟ್ಟು ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಲೇ ಬೇಕು. ಕೇವಲ ಏನು ಮಾಡಬೇಕು? ಯಾವುದೇ ಪರಿಶ್ರಮದ ಮಾತಿಲ್ಲ ಆದರೆ ಪ್ರೀತಿಯ ಮಾತಾಗಿದೆ. ಬಾಪ್ದಾದಾರವರ ಜೊತೆ ಪ್ರೀತಿ ಇದೆ, ಪರಿವಾರದ ಜೊತೆ ಪ್ರೀತಿ ಇದೆ ಅಂದಾಗ ಪ್ರೀತಿ ಇರುವವವರನ್ನು ಬಿಟ್ಟು ಇರುವುದಿಲ್ಲ. ಅಂದಾಗ ಬ್ರಹ್ಮಾಬಾಬಾರವರ ಜೊತೆ ಎಷ್ಟು ಪ್ರೀತಿ ಇದೆ? ಬ್ರಹ್ಮಾತಂದೆ ಜೊತೆ, ಶಿವ ತಂದೆಯ ಜೊತೆ ನಮಗೆ ಅಟೂಟ್ (ಸದಾ) ಪ್ರೀತಿ ಇದೆ ಎಂದು ಯಾರು ತಿಳಿದುಕೊಳ್ಳುತ್ತೀರಿ ಅವರು ಕೈ ಎತ್ತಿ. ಸದಾ, ಸದಾ? ಬಹಳ ಒಳ್ಳೆಯದು. ಅಂದಾಗ ಇನ್ನೊಂದು ಸೀಜನ್ನಲ್ಲಿ ಬಾಪ್ದಾದಾ ಯಾವುದನ್ನು ನೋಡಲು ಇಷ್ಟ ಪಡುತ್ತಾರೆ? ಗೊತ್ತಿದೆಯಲ್ಲವೇ. 5 ತಿಂಗಳು 6 ತಿಂಗಳು ಸಿಕ್ಕಿದೆ ತಮಗೆ, ವ್ಯರ್ಥದಿಂದ ಸಮರ್ಥ ಸಂಕಲ್ಪ ಮಾಡುವುದರಲ್ಲಿ.

ಅಂದಾಗ ಹೇಳಿ, ಮಧುಬನದವರು ಎದ್ದು ನಿಲ್ಲಿ, ಕೆಳಗಿನವರು ಆಗಲಿ, ಮೇಲಿನವರು ಆಗಲಿ. ಬಹಳ ಇದ್ದಾರೆ. ಅಂದಾಗ ಮಧುಬನದವರು ಬಾಪ್ದಾದಾರವರಿಗೆ ಪ್ರಿಯರು. ಬೇರೆಯವರು ಪ್ರಿಯರು ಅಲ್ಲ ಎಂದಲ್ಲ. ಅವರು ಪ್ರಿಯರಾಗಿದ್ದಾರೆ ಆದರೆ ಮಧುಬನದವರೊಂದಿಗೆ ಒಂದು ಮಾತಿನ ವಿಶೇಷ ಪ್ರೀತಿ ಇದೆ, ಅದು ಯಾವುದು? ಮನಸ್ಸಿನಲ್ಲಿ ನೆನಪಂತೂ ಎಲ್ಲರೂ ಮಾಡುತ್ತಾರೆ. ಎಲ್ಲರೂ ಯೋಗಿ ಆತ್ಮರಂತೂ ಆಗಿದ್ದಾರೆ, ಜ್ಞಾನಿ ಆತ್ಮರೂ ಸಹ ಎಲ್ಲರೂ ಆಗಿದ್ದಾರೆ ಆದರೆ ಮಧುಬನದವರಿಗೆ ತಮ್ಮ ಭವಿಷ್ಯವನ್ನು ಸಹಜ ಮಾಡಿಕೊಳ್ಳುವ ಒಂದು ಲಿಫ್ಟ್ ಇದೆ. ಆ ಲಿಫ್ಟ್ ಯಾವುದು? ಯಾರೆಲ್ಲಾ ಮಧುಬನದಲ್ಲಿ ಬರುತ್ತಾರೆ ಅವರ ಸೇವೆಗೆ ನಿಮಿತ್ತರಾಗಿದ್ದೀರಿ. ಹೇಗೆ ಅಡಿಗೆ ಮಾಡುವವರು, ಯಾವುದೇ ಡ್ಯೂಟಿ ಮಾಡುವವರು ಆಗಲಿ, ಬಾಪ್ದಾದಾರವರು ಹೇಳುತ್ತಾರೆ ಕಸ ಗುಡುಸುವವರೂ ಸಹ ಭಾಗ್ಯವಂತರಾಗಿದ್ದಾರೆ ಏಕೆ? ಯಾರೆಲ್ಲಾ ಬರುತ್ತಾರೆ ವಾಯುಮಂಡಲವನ್ನು ಇಲ್ಲಿನ ವಾಯುಮಂಡಲವನ್ನು ನೋಡಿ ತಮ್ಮ ಹೃದಯದ ಪ್ರೀತಿಯ ಶಕ್ತಿಯನ್ನು ನೋಡಿ ಖುಷಿ ಆಗುತ್ತಾರೆ. ಅಡಿಗೆ ಮಾಡುವವರಾಗಲಿ, ಯಾವುದೇ ಡ್ಯೂಟಿ ಮಾಡುವವರಾಗಲಿ ಆದರೆ ಬಾಪ್ದಾದಾರವರು ಮಧುಬನದವರಿಗೆ ಬಹಳ-ಬಹಳ ಶುಭಾಶಯಗಳನ್ನು ನೀಡುತ್ತಿದ್ದಾರೆ ಸೀಜನ್ ಸಮಾಪ್ತಿ ಆಗಿದೆ ಮತ್ತು ಮುಂದುಕ್ಕಾಗಿಯೂ ಸಹ ತಮ್ಮ ಮನಸ್ಸಿನಲ್ಲಿ ಆತ್ಮರನ್ನು ಸಂತುಷ್ಟರನ್ನಾಗಿ ಮಾಡುವುದರಲ್ಲಿ ಮತ್ತು ಶಕ್ತಿಶಾಲಿ ಅನುಭವ ಮಾಡಿಸುವುದರಲ್ಲಿ ನಿಮಿತ್ತರಾಗುತ್ತಿರುತ್ತೀರಿ ಆದ್ದರಿಂದ ಎಲ್ಲರೂ ಚಪ್ಪಾಳೆ ಹೊಡೆಯಿರಿ ಮಧುಬನದವರಿಗೆ. ಒಳ್ಳೆಯದು.

ಈ ದಿನ ಬಾಪ್ದಾದಾರವರಿಗೆ ಅಮೃತವೇಳೆ ಮಧುಬನದ ಸೇವಾಧಾರಿಗಳು ಎದುರಿನಲ್ಲಿ ಬಂದಿದ್ದಾರೆ. ಪ್ರತಿಯೊಬ್ಬರ ಜೊತೆ ಬಾಪ್ದಾದಾ ವತನದಲ್ಲೂ ಮಿಲನ ಮಾಡಿದ್ದಾರೆ ಮತ್ತು ಮುಖ್ಯವಾಗಿ ತಮಗೆ ಮೊದಲೂ ಸಹ ತಿಳಿಸಿದ್ದೇವೆ - ನಾಲ್ಕು ಗಂಟೆಯ ಸಮಯದಲ್ಲಿ ಎಡ್ವಾನ್ಸ್ನಲ್ಲಿ ಹೋಗಿರುವ ವಿಶೇಷವಾಗಿ ದಾದಿಯರು ಖಂಡಿತ ಬರುತ್ತಾರೆ. ಅಂದಾಗ ಈ ದಿನ ವಿಶೇಷವಾಗಿ ದಾದಿಯರು ಮತ್ತು ವಿಶೇಷ ಅಣ್ಣಂದಿರು ತಲುಪಿದ್ದರು. ಅವರು ಮುಖ್ಯವಾಗಿ ಮಧುಬನದವರನ್ನು ಇಮರ್ಜ್ ಮಾಡಿಕೊಳ್ಳಲು ಹೇಳಿದ್ದಾರೆ. ವಿಶೇಷವಾಗಿ ದಾದಿ ಮತ್ತು ದೀದಿ ಇಬ್ಬರು ಮತ್ತು ವಿಶೇಷವಾಗಿ ಅಣ್ಣಂದಿರೂ ಸಹ ಮಧುಬನದವರನ್ನು ನೆನಪು ಮಾಡಿದರು ಮತ್ತು ದಾದಿ ವಿಶೇಷವಾಗಿ ನೆನಪು ಮಾಡಿದರು ಮತ್ತು ವತನದ ಮಾವಿನ ಹಣ್ಣು, ಗೊತ್ತಿದೆಯಲ್ಲವೇ ವತನದ ಫಲ ಎಷ್ಟು ಚೆನ್ನಾಗಿರುತ್ತದೆ, ಹೊಡೆಯುವ ಅವಶ್ಯಕತೆ ಇಲ್ಲ, ಯಾವ ಹಣ್ಣು ಬೇಕೋ ಅದನ್ನು ಕೈಯಿಂದ ತೆಗೆದುಕೊಳ್ಳಬಹುದು. ಅಂದಾಗ ದಾದಿ ಹೇಳಿದರು - ಈ ದಿನ ಮಧುಬನದವರೊಂದಿಗೆ ಮಾವಿನ ಹಣ್ಣಿನ ಪಿಕ್ನಿಕ್ ಮಾಡೋಣ ಎಂದು ಬೇರೆ ದಾದಿಯರಂತೂ ಜೊತೆಯಲ್ಲಿ ಇದ್ದರು ಮತ್ತು ವಿಶೇಷ ಅಣ್ಣಂದಿರೂ ಸಹ ಇದ್ದರು. ಅಂದಾಗ ಬಾಪ್ದಾದಾರವರು ಹೇಳಿದರು - ಅವರೊಂದಿಗೆ ಕೇಳಿದಾಗ ಮಧುಬನದವರ ಪ್ರತಿ ತಮ್ಮ ಮನಸ್ಸಿನ ಏನು ಬರುತ್ತದೆ ಅಂದಾಗ ದಾದಿ ಏನು ಹೇಳಿದರು? ಗೊತ್ತಿದೆಯೇ? ಗೊತ್ತಂತೂ ಆಗಿದೆ. ದಾದಿ ಹೇಳುತ್ತಿದ್ದರು - ನನಗೆ ಇದುವರೆಗೂ ಮನಸ್ಸಿದೆ ಪ್ರತಿಯೊಬ್ಬ ಮಧುಬನದವರು ಪುಷಾರ್ಥದಲ್ಲಿ ಯಾವುದೇ ಕೊರತೆ ಉಳಿದಿರಲಿ, ಅವರಂತೂ ಪುರುಷಾರ್ಥ ಮಾಡಬೇಕು ಆದರೆ ನಾನು ಒಂದು ಮಾತನ್ನು ಮಧುಬನದವರಿಂದ ಬಯಸುತ್ತೇನೆ. ಅದನ್ನು ಏನು ಬಯಸುತ್ತೇನೆ? ಒಬ್ಬೊಬ್ಬ ಮಧುಬನವಾಸಿ ತಂದೆಯ ಸಮಾನ ಆಗಲಿ. ಎಲ್ಲರಂತೂ ಆಗಲೇಬೇಕು ಆದರೆ ಮಧುಬನ ವಿಶೇಷವಾಗಿದೆ. ಮಧುಬನದವರಿಗೆ ದಾದಿ ಜೊತೆ ಪ್ರೀತಿ ಇತ್ತು. ದಾದಿ ಹೇಳುತ್ತಿದ್ದರು - ನನಗೆ ಗೊತ್ತಿದೆ. ಅಂದಾಗ ಪ್ರೀತಿಗೆ ರಿಟರ್ನ್ನಲ್ಲಿ ಇದನ್ನೇ ನಾನು ಬಯಸುತ್ತೇನೆ - ಹೇಗೆ ಮಮ್ಮಾ ಲಕ್ಷ್ಯವನ್ನು ಇಟ್ಟುಕೊಂಡರು, ಬಾಬಾ ಹೇಳಿದರು, ಮಮ್ಮಾ ಮಾಡಿದರು. ಇದಂತೂ ಮಧುಬನದವರಿಗೆ ಗೊತ್ತಿದೆ. ಅದೇ ರೀತಿ ಅಮೃತವೇಳೆಯಿಂದ ಹಿಡಿದು ರಾತ್ರಿಯವರೆಗೆ ಪ್ರತಿಯೊಬ್ಬ ಮಧುಬನದವರು ಒಂದುವೇಳೆ ಬಾಬಾರವರ ಜೊತೆ ನನ್ನ ಮೇಲೂ ಪ್ರೀತಿ ಇದ್ದರೆ ದಾದಿಗಳ ಜೊತೆ ಪ್ರೀತಿ ಇದ್ದರೆ, ಹೇಗೆ ಮಮ್ಮಾರವರು ತಂದೆಯ ಪ್ರತಿಯೊಂದು ಸಲಹೆಯನ್ನು ಜೀವನದಲ್ಲಿ ತೆಗೆದುಕೊಂಡು ಬಂದಿದ್ದಾರೆ, ಅದೇ ರೀತಿ ನಾವೂ ಸಹ ತೆಗೆದುಕೊಂಡು ಬರಬೇಕು. ಅಂದಾಗ ಒಂದುವೇಳೆ ದಾದಿಗಳ ಜೊತೆ ಪ್ರೀತಿ ಇದ್ದರೆ ಇದನ್ನೇ ಮಾಡಿ ತೋರಿಸಿ. ಬೆಳೆಗ್ಗೆಯಿಂದ ರಾತ್ರಿಯವರೆಗೆ ಈ ರೀತಿ ಯಾವುದೇ ಸಂಕಲ್ಪ, ಮಾತು ಮತ್ತು ಕರ್ಮ ಯಾವುದು ದಾದಿಯರಿಗೆ, ತಂದೆಗೆ ಅಥವಾ ಯಾರಿಗೆ ಆಗಲಿ ಇಷ್ಟ ಆಗದೆ ಇರುವುದು ಮಾಡಬಾರದು.

ಬಾಕಿ ಟೀಚರ್ಸ್ನ್ನು ನೋಡಿ ಬಾಪ್ದಾದಾರವರೂ ಖುಷಿ ಆಗುತ್ತಾರೆ. ಏಕೆಂದರೆ ತಂದೆಯ ಸಮಾನ ಸೀಟಿನ ಭಾಗ್ಯ ಸಿಕ್ಕಿದೆ. ಬಾಕಿ ತಂದೆಯ ಮುರಳಿ ತಿಳಿಸುವ ಸೀಟ್ ಸಿಕ್ಕಿದೆ. ತಂದೆ ಸದಾ ಟೀಚರ್ಸ್ಗೆ ಜೊತೆಗಾರರು ಎಂದು ಹೇಳುತ್ತಾರೆ. ಈಗ ಟೀಚರ್ಸ್ಗಾಗಿ ಬಾಪ್ದಾದಾ ಒಂದು ಮಾತನ್ನು ಬಯಸುತ್ತಾರೆ - ತಿಳಿಸಲೇ ಏನೆಂದು? ಬಾಪ್ದಾದಾ ಬಯಸುತ್ತಾರೆ - ಪ್ರತಿಯೊಬ್ಬ ಟೀಚರ್ ಚೆಹರೆಯಿಂದ ಬ್ರಹ್ಮಾ ತಂದೆಯ ಸಮಾನ ಈ ರೀತಿ ಖುಷಿಯ ಅದೃಷ್ಟವಂತರಾಗಿ ಕಂಡು ಬರಬೇಕು. ಒಳಗೆ ಪುರುಷಾರ್ಥ ಇದ್ದರೂ ಆದರೆ ತಮ್ಮ ಮೂರ್ತಿಯಿಂದ ತಂದೆ ಪ್ರತ್ಯಕ್ಷ ಆಗುವುದು ಕಂಡು ಬರಬೇಕು. ಯಾರಾದರೂ ನೋಡಿದರೆ ತಮ್ಮಲ್ಲಿ ತಂದೆಯ ಹೊಳಪು ಕಾಣಿಸಬೇಕು. ಈ ರೀತಿ ಚೆಹರೆಯ ಮೂಲಕ ಸೇವೆ ಮಾಡುವವರು ತಂದೆಯನ್ನು ಪ್ರತ್ಯಕ್ಷ ಮಾಡಿಯೇ ಮಾಡುತ್ತಾರೆ. ಈಗ ಸಮಯ ಬಂದು ಬಿಟ್ಟಿದೆ, ತಂದೆಯನ್ನು ತಮ್ಮ ಚೆಹರೆಯಿಂದ ಪ್ರತ್ಯಕ್ಷ ಮಾಡುವ ಸಮಯ ಆಗಿದೆ. ಅಂದಾಗ ಟೀಚರ್ಸ್ಗೆ ಸದಾ ನನ್ನ ಬಾಬಾ ಅಂತೂ ಸ್ವತಃವಾಗಿಯೇ ನೆನಪಿದೆ. ಈಗ ತಂದೆಯನ್ನು ಚೆಹರೆಯಿಂದ ಪ್ರತ್ಯಕ್ಷ ಮಾಡಬೇಕು. ಮಾಡಬಹುದಲ್ಲವೇ. ಮಾಡಲು ಸಾಧ್ಯ ಇದ್ದರೆ ಮಾಡಿ. ನೋಡಿ ಇದುವರೆಗಿನ ರಿಜಲ್ಟ್ನಲ್ಲಿ ಎಲ್ಲರೂ ಏನು ಹೇಳುತ್ತೀರಿ? ಬ್ರಹ್ಮಾಕುಮಾರಿಯರು ಬಹಳ ಒಳ್ಳೆಯ ಕಾರ್ಯವನ್ನು ಮಾಡುತ್ತಾರೆ. ತಂದೆ ಪ್ರತ್ಯಕ್ಷ ಆಗಲಿಲ್ಲ. ಅವರು ಈಗಲೂ ಸಹ ಗುಪ್ತವಾಗಿದ್ದಾರೆ. ಅಂದಾಗ ಈಗ ಸಮಯ ಸಮೀಪ ಬರುವುದಿದೆ ಅಂದಾಗ ತಮ್ಮಿಂದ ನಿಮಿತ್ತ ಟೀಚರ್ಸ್ ಆಗಲಿ ಯಾವುದೇ ಮಗು ಆಗಲಿ, ಈಗ ತಂದೆಯನ್ನು ಪ್ರತ್ಯಕ್ಷ ಮಾಡಿ. ಬ್ರಹ್ಮಾ ಕುಮಾರಿಯರು ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ ಇದಂತೂ ಆಗಿ ಬಿಟ್ಟಿದೆ. ಇಲ್ಲಿಯ ತನಕ ತಲುಪಿ ಬಿಟ್ಟಿದ್ದೀರಿ. ಆದರೆ ಸ್ವಯಂ ಪರಮಾತ್ಮ ಬ್ರಹ್ಮಾ ತನುವಿನಲ್ಲಿ ಪ್ರತ್ಯಕ್ಷ ಆಗಿ ಬ್ರಹ್ಮಾಕುಮಾರಿಯರನ್ನು ಈ ರೀತಿ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ ಎನ್ನುವುದನ್ನು ಈಗ ಪ್ರತ್ಯಕ್ಷ ಮಾಡಿ. ಈಗ ಈ ಪಾಯಿಂಟ್ ಉಳಿದಿದೆ. ನನ್ನ ಬಾಬಾ ಬಂದು ಬಿಟ್ಟಿದ್ದಾರೆ ಎಂದು ಹಾಡಂತೂ ಹೇಳುತ್ತೀರಿ, ಆದರೆ ಈಗ ಅನ್ಯ ಆತ್ಮರ ಒಳಗೆ ಭಗವಂತ ಸ್ವಯಂ ಪ್ರತ್ಯಕ್ಷ ಆಗಿ ಈ ಕಾರ್ಯವನ್ನು ಅಕ್ಕಂದಿರು ಹಾಗೂ ಅಣ್ಣಂದಿರ ಮೂಲಕ ಮಾಡಿಸುತ್ತಿದ್ದಾರೆ ಎನ್ನುವುದು ಪ್ರತ್ಯಕ್ಷ ಮಾಡಿ. ಈ ಪ್ರತ್ಯಕ್ಷತೆ ಮಾಡಬೇಕಲ್ಲವೇ! ಯಾವಾಗ ಮಾಡುತ್ತೀರಿ? ಈಗ. ಏನು ಹೇಳುತ್ತೀರಿ? ಈಗ ಮಾಡುತ್ತೀರಲ್ಲವೇ! (ಈಗ ಶುರು ಮಾಡುತ್ತೇವೆ ಇನ್ನೊಂದು ಸೀಜನ್ ಬರುವ ಒಳಗೆ ಆಗಿ ಬಿಡುತ್ತದೆ) ತಾವೆಲ್ಲರೂ ಜೊತೆಯಲ್ಲಿ ಇದ್ದೀರಿ, ಇನ್ನೊಂದು ಸೀಜನ್ ಬರುವವರೆಗೆ ಆಗಿ ಬಿಡುತ್ತದೆಯೇ? ಯಾರು ಆಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ ಅವರು ಕೈ ಎತ್ತಿ. ಸ್ವಲ್ಪ ಕೈ ಎತ್ತುತ್ತಿದ್ದಾರೆ. ಯಾರು ಕೈ ಎತ್ತುತ್ತಿಲ್ಲ ಅವರು ನೋಡುತ್ತಾರೆ ಮತ್ತು ತಾವು ಮಾಡುತ್ತೀರಿ. ಟೀಚರ್ಸ್ ಅಂತೂ ಸಂಕಲ್ಪ ಮಾಡಿದ್ದೀರಲ್ಲವೇ! ಏಕೆಂದರೆ ನೋಡುತ್ತಿದ್ದಾರೆ ಬಾಪ್ದಾದಾರವರಂತೂ ಅಚಾನಕ್ ಆಗುವುದಿದೆ ಎಂದು ಸದಾ ಹೇಳುತ್ತಾರೆ. ಕೆಲವು ಮಕ್ಕಳು ತಿಳಿದುಕೊಳ್ಳುತ್ತಾರೆ ಅಚಾನಕ್, ಅಚಾನಕ್ ಎಂದರೆ ಬಹಳ ಸಮಯ ಆಗಿ ಬಿಟ್ಟಿದೆ. ಈಗ ಆಗಲೇಬೇಕು. ಆದರೆ ಮಕ್ಕಳೂ ತಂದೆಯ ಸಮಾನರಾದಾಗ ಅಚಾನಕ್ ಆಗುವುದಿದೆ. ತಮ್ಮ ಮುಖ, ಮೂರ್ತಿ ಒಂದೊಂದು ಮಾತು ತಂದೆಯನ್ನು ಪ್ರತ್ಯಕ್ಷ ಮಾಡಲಿ. ಆಗುವುದಂತಂತೂ ಆಗಲೇಬೇಕು. ಆಗಲೇಬೇಕು ಈಗ ಕೇವಲ ನಿಮಿತ್ತ ಆಗಬೇಕು. ಈಗ ಮುಂದಿನ ಸೀಜನ್ನಲ್ಲಿ ಏನು ಮಾಡುತ್ತೀರಿ? ಒಂದಂತೂ ತಮ್ಮನ್ನು ತಂದೆಯ ಸಮಾನ ಮಾಡಿಕೊಳ್ಳುತ್ತೀರಿ. ಯಾವುದೆಲ್ಲಾ ಕೊರತೆಗಳಿದೆ, ಅದನ್ನು ಸಂಪನ್ನ ಮಾಡಿಕೊಳ್ಳುತ್ತೀರಿ. ಮತ್ತು ಬಾಪ್ದಾದಾರವರು ಖುಷಿ ಆಗಿದ್ದಾರೆ? ಯಾವ ಮಾತಿನಲ್ಲಿ ಖುಷಿ ಆಗಿದ್ದಾರೆ? ಮಕ್ಕಳು ಹೇಗೆ ಚಿಕ್ಕ-ಪುಟ್ಟ ಸೇವಾಕೇಂದ್ರಗಳಂತೂ ವಾಣಿಯ ಮೂಲಕ ನಾವು ಯಾವ ಕಾರ್ಯ ಮಾಡುತ್ತಿದ್ದೇವೆ ಎಂದು ಪ್ರಸಿದ್ಧ ಮಾಡಿ ಬಿಟ್ಟಿದ್ದಾರೆ. ವಾಯುಮಂಡಲವನ್ನು ಪರಿವರ್ತನೆ ಮಾಡಿ ಬಿಟ್ಟಿದ್ದಾರೆ. ಇದಕ್ಕಾಗಿ ಬಾಪ್ದಾದಾರವರು ಶುಭಾಶಯಗಳನ್ನು ನೀಡುತ್ತಿದ್ದಾರೆ. ಯಾರುಯಾರು ಎಲ್ಲೆಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದೀರಿ ಚೆನ್ನಾಗಿ ಮಾಡಿದ್ದೀರಿ, ಮತ್ತೆ ಬ್ರಹ್ಮಾಕುಮಾರಿಯರು ಗುಪ್ತ ರೂಪದಲ್ಲಿ ತಮ್ಮ ಕಾರ್ಯದ ಸಮಯ 75 ವರ್ಷಗಳು ಪೂರ್ಣ ಮಾಡಿ ಬಿಟ್ಟಿದ್ದಾರೆ ಎಂದು ಎಲ್ಲರ ಅಟೆನ್ಷನ್ನಲ್ಲೂ ಸಹ ಬಂದಿದೆ. ಈಗ ಬ್ರಹ್ಮಾಕುಮಾರಿಯರ ಭಗವಂತ ಬಂದಿದ್ದಾರೆ ಎಂದು ಬರಬೇಕು. ಲಕ್ಷ್ಯ ಇದೆಯಲ್ಲವೇ! ಅಂದಾಗ ಇನ್ನೊಂದು ಸೀಜನ್ನಲ್ಲಿ ಒಂದಂತೂ ವ್ಯರ್ಥದ ಚಿನ್ಹೆ, ಗುರುತು ಇರಬಾರದು, ಒಪ್ಪಿಗೆಯಲ್ಲವೇ? ಒಪ್ಪಿಗೆ ಇದೆಯೇ! ಹೃದಯದ ಕೈಯನ್ನು ಎತ್ತಿ. ಹೃದಯದ ಕೈ ಎತ್ತಬೇಕು. ವ್ಯರ್ಥ ಏನಾಗಿರುತ್ತದೆ, ಇದರ ತಿಳುವಳಿಕೆಯೇ ಇರಬಾರದು. ಹೇಗೆ ಸ್ವರ್ಗದ ರಾಜರಿಗೆ ದುಃಖ-ಅಶಾಂತಿಯ ಬಗ್ಗೆ ಗೊತ್ತೇ ಇಲ್ಲ, ಏನು ಹೇಳುತ್ತಿದ್ದಾರೆ, ಇದು ಏನು ಆಗುತ್ತದೆ ಎಂದು ಕೇಳುತ್ತಾರೆ. ಅದೇ ರೀತಿ ಬ್ರಾಹ್ಮಣ ಪರಿವಾರದಲ್ಲಿ ವ್ಯರ್ಥದ ಬಗ್ಗೆ ಗೊತ್ತೇ ಆಗಬಾರದು, ವ್ಯರ್ಥ ಯಾವ ರೀತಿ ಇರುತ್ತದೆ. ಸ್ವಚಿಂತನೆ, ಸ್ವಚಿಂತಕರಾಗಿ. ಒಳ್ಳೆಯದು.

ಎಲ್ಲಾ ನಾಲ್ಕಾರು ಕಡೆಯ ಮಕ್ಕಳನ್ನು ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಜೊತೆ-ಜೊತೆ ತಂದೆಯ ಪ್ರತಿಯೊಬ್ಬ ಮಗುವನ್ನು ತಮ್ಮ ಸ್ವಮಾನದ ನಶೆಯಲ್ಲಿ ನಿಶ್ಚಯದಲ್ಲಿ ನೋಡಿ ಹರ್ಷಿತರಾಗುತ್ತಿದ್ದಾರೆ, ಎಂದೂ ಸ್ವಮಾನವನ್ನು ಬಿಡಬೇಡಿ. ಸ್ವಮಾನಧಾರಿ ಅರ್ಥಾತ್ ಸದಾ ಸರ್ವ ಪ್ರಾಪ್ತಿವಂತರು, ಸ್ವಮಾನದ ಲಿಸ್ಟ್ ಬಹಳ ದೊಡ್ಡದಾಗಿದೆ, ಪ್ರತಿನಿತ್ಯ ಒಂದೊಂದು ಸ್ವಮಾನದ ಸ್ಮೃತಿಯಲ್ಲಿ ಇದ್ದು ಸ್ವರೂಪದಲ್ಲಿ ತೆಗೆದುಕೊಂಡು ಬರುತ್ತಾ ತೀವ್ರ ಪುರುಷಾರ್ಥಿ ಆಗಿ ಮುಂದುವರೆಯುತ್ತಾ ಹೋಗಿ. ಬಾಪ್ದಾದಾರವರನ್ನು ಹೃದಯದಲ್ಲಿ ಕೂರಿಸಿಕೊಂಡು ಮತ್ತು ತಮ್ಮನ್ನು ಬಾಪ್ದಾದಾರವರ ಹೃದಯಲ್ಲಿ ಕೂರಿಸಿಕೊಂಡು ನಿರ್ಭಯರಾಗಿ, ಮಾಸ್ಟರ್ ಸರ್ವಶಕ್ತಿವಂತರಾಗಿ ನಡೆಯುತ್ತಾ ಹೋಗಿ, ಹಾರುತ್ತಾ ಇರಿ ಮತ್ತು ಹಾರಿಸುತ್ತಾ ಇರಿ. ಓಂ ಶಾಂತಿ.

ವರದಾನ: ವರದಾನ:- ಸೇವೆಯ ವೇದಿಕೆಯಲ್ಲಿ ಸಮಾವೇಶ ಶಕ್ತಿಯ ಮೂಲಕ ಸಫಲತಾ ಮೂರ್ತಿಯಾಗುವ ಮಾಸ್ಟರ್ ಸಾಗರ ಭವ.
ಯಾವಾಗ ಸೇವೆಯ ವೇದಿಕೆಯಲ್ಲಿ ಬರುತ್ತೀರಿ, ಆಗ ಅನೇಕ ಪ್ರಕಾರದ ಮಾತುಗಳು ಬರುತ್ತವೆ. ಆ ಮಾತುಗಳನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳುತ್ತೀರೆಂದರೆ ಸಫಲತಾ ಮೂರ್ತಿಗಳಾಗುತ್ತೀರಿ. ಸಮಾವೇಶ ಮಾಡಿಕೊಳ್ಳುವುದು ಅಂದರೆ ಸಂಕಲ್ಪ ರೂಪದಲ್ಲಿಯೂ, ಯಾವುದೇ ವ್ಯಕ್ತ ಮಾತುಗಳು ಮತ್ತು ಭಾವದಲ್ಲಿ ಅಂಶದಷ್ಟೂ ಸಮಾವೇಶವಾಗದೇ ಇರುವುದು. ಅಕಲ್ಯಾಣಕಾರಿ ಮಾತುಗಳನ್ನು, ಈ ರೀತಿ ಕಲ್ಯಾಣದ ಭಾವನೆಯಲ್ಲಿ ಬದಲಾಯಿಸಿ, ಹೇಗೆಂದರೆ ಅಕಲ್ಯಾಣದ ಮಾತುಗಳೇ ಇರಲಿಲ್ಲ ಎಂಬಂತೆ. ಅವಗುಣಗಳನ್ನು ಗುಣಗಳಲ್ಲಿ, ನಿಂದನೆಯನ್ನು ಮಹಿಮೆಯಲ್ಲಿ ಬದಲಾಯಿಸಿರಿ - ಈ ರೀತಿಯಿದ್ದಾಗ ಮಾಸ್ಟರ್ ಸಾಗರ ಎಂದು ಹೇಳುತ್ತಾರೆ.
ಸ್ಲೋಗನ್: ಸ್ಲೋಗನ್:- ವಿಸ್ತಾರವನ್ನು ನೋಡದೆ ಸಾರವನ್ನು ನೋಡುವ ಅಥವ ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳುವವರೇ ತೀವ್ರ ಪುರುಷಾರ್ಥಿ ಆಗಿದ್ದಾರೆ.

 

ಅವ್ಯಕ್ತ ಸೂಚನೆ:- ಬ್ರಹ್ಮಾ ತಂದೆ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯಲ್ಲಿ ಅನುಭವ ಮಾಡಿರಿ.

ಹೇಗೆ ನಿಮ್ಮ ರಚನೆ ಆಮೆ ಸೆಕೆಂಡಿನಲ್ಲಿ ಎಲ್ಲಾ ಅಂಗಗಳನ್ನು ಒಳಗಡೆ ತೆಗೆದುಕೊಂಡು ಬಿಡುತ್ತದೆ. ಸಂಕ್ಷಿಪ್ತಗೊಳಿಸುವ ಶಕ್ತಿ ರಚನೆಯಲ್ಲಿದೆ. ನೀವು ಮಾಸ್ಟರ್ ರಚಯಿತ ಸಂಕ್ಷಿಪ್ತಗೊಳಿಸುವ ಶಕ್ತಿಯ ಆಧಾರದಿಂದ ಸೆಕೆಂಡಿನಲ್ಲಿ ಸರ್ವ ಸಂಕಲ್ಪಗಳನ್ನು ಸಮಾವೇಶಿಸಿ ಒಂದು ಸಂಕಲ್ಪದಲ್ಲಿ ಸೆಕೆಂಡಿನಲ್ಲಿ ಸ್ಥಿತರಾಗಿರಿ. ಯಾವಾಗ ಸರ್ವ ಕರ್ಮೇಂದ್ರಿಯಗಳ ಕರ್ಮದ ಸ್ಮೃತಿಯಿಂದ ದೂರ ಒಂದೇ ಅತ್ಮಿಕ ಸ್ವರೂಪದಲ್ಲಿ ಸ್ಥಿರಾಗುವುದೋ ಆಗ ಕರ್ಮಾತೀತ ಅರ್ಥಾತ್ ಸಂಪನ್ನ ಸ್ಥಿತಿಯ ಅನುಭವವಾಗುವುದು.

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.