| 29/12/24 |
ಪ್ರಾತಃಮುರುಳಿ
ಓಂಶಾಂತಿ
"ಅವ್ಯಕ್ತ-ಬಾಪ್ದಾದಾ"
|
ರಿವೈಜ್: 31/12/20 |
ಈ ಹೊಸ ವರ್ಷದಲ್ಲಿ ಸರ್ವ ಖಜಾನೆಗಳನ್ನು ಸಫಲ ಮಾಡಿ ಸಫಲತಾ ಮೂರ್ತಿಗಳಾಗುವ ವಿಶೇಷತೆಯನ್ನು ತೋರಿಸಿ
ಇಂದು ನವಯುಗ ರಚಯಿತ, ನವ ಜೀವನದಾತಾ ಬಾಪ್ದಾದಾ ಹೊಸ ವರ್ಷವನ್ನು ಆಚರಿಸಲು ಬಂದಿದ್ದಾರೆ. ತಾವೆಲ್ಲರೂ ಸಹ ಹೊಸ ವರ್ಷವನ್ನು ಆಚರಿಸಲು ಬಂದಿದೀರೋ, ಅಥವಾ ಹೊಸ ಯುಗವನ್ನು ಆಚರಿಸಲು ಬಂದಿದ್ದೀರೋ? ಹೊಸ ವರ್ಷವನ್ನಂತೂ ಎಲ್ಲರೂ ಆಚರಿಸುತ್ತಾರೆ ಆದರೆ ತಾವೆಲ್ಲರೂ ಹೊಸ ಜೀವನ, ಹೊಸಯುಗ ಹಾಗೂ ಹೊಸ ವರ್ಷ ಮೂರನ್ನೂ ಆಚರಣೆ ಮಾಡುತ್ತಿದ್ದೀರಿ. ಜಾಪ್ ದಾದಾರವರೂ ಸಹ ತ್ರಿಮೂರ್ತಿ ಶುಭಾಶಯಗಳನ್ನು ಕೊಡುತ್ತಿದ್ದೇವೆ. ಹೊಸ ವರ್ಷದಲ್ಲಿ ಒಬ್ಬರು ಇನ್ನೊಬ್ಬರಿಗೆ ಶುಭಾಶಯಗಳನ್ನು ಕೊಡುತ್ತಾರೆ ಹಾಗೂ ಜೊತೆಯಲ್ಲಿ ಒಂದಲ್ಲ ಒಂದು ಕೊಡುಗೆಯನ್ನು ಕೊಡುತ್ತಾರೆ. ಕೊಡುಗೆಯನ್ನು ಕೊಡುತ್ತೀರಲ್ಲವೇ. ಆದರೆ ಬಾಪ್ ದಾದಾರವರು ತಮ್ಮೆಲ್ಲರಿಗೆ ಯಾವ ಕೊಡುಗೆಯನ್ನು ಕೊಟ್ಟಿದ್ದಾರೆ? ಗೋಲೈನ್ ಪ್ರಪಂಚದ ಕೊಡುಗೆಯನ್ನು ಕೊಟ್ಟಿದ್ದಾರೆ. ಎಲ್ಲರಿಗೆ ಗೋಲ್ಡೆನ್ ಪ್ರಪಂಚದ ಕೊಡುಗೆಯು ಸಿಕ್ಕಿಬಿಟ್ಟಿದೆಯಲ್ಲವೇ! ಯಾವ ಗೋಲ್ಡನ್ ಪ್ರಪಂಚದಲ್ಲಿ, ನವಯುಗದಲ್ಲಿ ಸರ್ವ ಪ್ರಾಪ್ತಿಗಳು ಇರುತ್ತವೆ. ತಮ್ಮ ರಾಜ್ಯದ ನೆನಪಿದೆಯೇ? ಅಲ್ಲಿ ಯಾವುದೇ ಆಪ್ರಾಪ್ತಿಯ ಹೆಸರು-ಗುರುತೇ ಇರುವುದಿಲ್ಲ. ಇಂತಹ ಕೊಡುಗೆಯನ್ನು ಬಾಪ್ದಾದಾರವರ ವಿನಃ ಮತ್ತಾರೂ ಕೊಡಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿ ಒಂದುವೇಳೆ ಯಾರಾದರೂ ದೊಡ್ಡದಕ್ಕಿಂತ ದೊಡ್ಡ ಕೊಡುಗೆಯನ್ನು ಕೊಟ್ಟರೂ ಸಹ ಏನುನ್ನು ಕೊಡಬಹುದು? ದೊಡ್ಡದಕ್ಕಿಂತ ದೊಡ್ಡ ಕಿರೀಟ ಹಾಗೂ ಸಿಂಹಾಸನವನ್ನು ಕೊಡುತ್ತಾರೆ. ಯಾವಾಗ ಸ್ಥಾಪನೆ ಆಯಿತು. [ಸ್ಥಾಪನೆಯವರು ಮುಂದೆ-ಮುಂದೆ ಕುಳಿತಿದ್ದಾರೆ] ಆಗ ಆದಿಯಲ್ಲಿಯೇ ಬ್ರಹ್ಮಾತಂದೆಯು ಮಕ್ಕಳನ್ನು ಕೇಳುತ್ತಿದ್ದರು - ಒಂದುವೇಳೆ ನಿಮಗೆ ಈಗಿನ ಕಾಲದ ಯಾವುದೇ ರಾಣಿಯು ಕಿರೀಟ ಹಾಗೂ ಸಿಂಹಾಸನವನ್ನು ಕೊಟ್ಟರೆ ತಾವು ಹೋಗುವಿರಾ? ಇದು ನೆನಪು ಇದೆಯಲ್ಲವೇ! ಇದಕ್ಕೆ ಮಕ್ಕಳು ಹೇಳುತ್ತಿದ್ದರು - ಈ ಕಿರೀಟ ಹಾಗೂ ಸಿಂಹಾಸನವನ್ನು ಏನು ಮಾಡುವುದು, ಯಾವಾಗ ತಂದೆಯು ಸಿಕ್ಕಿಬಿಟ್ಟಿದ್ದಾರೆ ಎಂದ ಮೇಲೆ ಇನ್ನೇನು ಬೇಕು! ಅಂದಾಗ ಈ ಚಿನ್ನದ ಪ್ರಪಂಚದ ಕೊಡುಗೆಯ ಮುಂದೆ ಯಾವುದೇ ಕೊಡುಗೆಯು ದೊಡ್ಡದಿರಲು ಸಾಧ್ಯವಿಲ್ಲ. ಕೆಲವು ಮಕ್ಕಳು ಕೇಳುತ್ತಾರೆ - ಅಲ್ಲಿ ಏನೇನು ಪ್ರಾಪ್ತಿಗಳು ಇರುವುದು? ಇದಕ್ಕೆ ಬಾಪ್ದಾದಾರವರು ತಿಳಿಸುತ್ತಾರೆ - ಪ್ರಾಪ್ತಿಗಳ ಪಟ್ಟಿಯಂತೂ ಉದ್ದವಾಗಿದೆ ಆದರೆ ಅದು ಸಾರ ರೂಪದಲ್ಲಿ ಏನು ಹೇಳುತ್ತೀರಿ! ಅಲ್ಲಿ ಯಾವುದೇ ಅಪ್ರಾಪ್ತವಾದ ವಸ್ತು ಇರುವುದಿಲ್ಲ. ಜೀವನದಲ್ಲಿ ಯಾವುದು ಬೇಕೋ ಅದೆಲ್ಲವೂ ಪ್ರಾಪ್ತಿಯಾಗುತ್ತದೆ ಅಂದಮೇಲೆ ಇಂತಹ ಗೋಲ್ಡೆನ ಕೊಡುಗೆಗೆ ಅಧಿಕಾರಿ ಅತ್ಮಗಳು ಆಗಿದ್ದೀರಿ. ಅಧಿಕಾರಿಗಳು ಆಗಿದ್ದೀರಲ್ಲವೆ? ಡಬಲ್ ವಿದೇಶಿಯರು ಅಧಿಕಾರಿಗಳು ಆಗಿದ್ದೀರಾ? [ಕೈ ಅಲುಗಾಡಿಸುತ್ತಿದ್ದಾರೆ] ಎಲ್ಲರೂ ರಾಜರು ಆಗುವಿರಾ? ರಾಜರು ಆಗುವಿರಿ, ಒಳ್ಳೆಯದು. ಇಷ್ಟೊಂದು ಸಿಂಹಾಸನಗಳನ್ನು ತಯಾರು ಮಾಡಬೇಕಾಗುತ್ತದೆ. ಬಾಪ್ದಾದಾರವರು ತಿಳಿಸುತ್ತಾರೆ - ಆ ಸಿಂಹಾಸನವಂತೂ ಇದೆ, ಸರ್ವ ಪ್ರಾಪ್ತಿಗಳಿರುತ್ತದೆ. ಆದರೆ ಈ ಸಂಗಮಯುಗದ ಸ್ವರಾಜ್ಯವು ಅದಕ್ಕಿಂತ ಕಡಿಮೆ ಏನೂ ಇಲ್ಲ. ಈಗಲೂ ರಾಜರಾಗಿದ್ದೀರಲ್ಲವೇ! ಪ್ರಜೆಗಳಾಗಿದ್ದೀರಾ ಅಥವಾ ರಾಯಲ್ ಪರಿವಾರದವರು ಆಗಿದ್ದೀರಾ? ಏನಾಗಿದ್ದೀರಿ? ಒಬ್ಬರೇ ತಂದೆ ಇದ್ದಾರೆ ಅವರು ನಶೆಯಿಂದ ಹೇಳುತ್ತಾರೆ- ನನ್ನ ಒಂದೊಂದು ಮಗುವೂ ಸಹ ರಾಜಮಗುವಾಗಿದೆ. ರಾಜರಾಗಿದ್ದೀರಲ್ಲವೇ! ರಾಜಯೋಗಿಗಳಾಗಿದ್ದೀರಾ? ಅಥವಾ ಪ್ರಜಾಯೋಗಿಗಳಾಗಿದ್ದೀರಾ? ಈ ಸಮಯದಲ್ಲಿ ಎಲ್ಲರೂ ಹೃದಯ ಸಿಂಹಾಸನಾಧಿಕಾರಿಗಳು, ಸ್ವರಾಜ್ಯಾಧಿಕಾರಿ ರಾಜಾ ಮಕ್ಕಳಾಗಿದ್ದೀರಿ. ಇಷ್ಟೊಂದು ಆತ್ಮಿಕ ನಶೆ ಇರುತ್ತದೆಯಲ್ಲವೇ ಏಕೆಂದರೆ ಈ ಸಮಯದ ಸ್ವರಾಜ್ಯದಿಂದಲೇ ಭವಿಷ್ಯದ ರಾಜ್ಯವು ಪ್ರಾಪ್ತವಾಗುತ್ತದೆ. ಈ ಸಂಗಮಯುಗವೂ ಬಹಳ-ಬಹಳ-ಬಹಳ-ಬಹಳ ಅಮೂಲ್ಯ ಶ್ರೇಷ್ಠವಾಗಿದೆ. ಸಂಗಮಯುಗವನ್ನು ಬಾಪ್ದಾದಾ ಹಾಗೂ ಎಲ್ಲಾ ಮಕ್ಕಳು ಆರಿತುಕೊಂಡಿದ್ದಾರೆ, ಖುಷಿ-ಖುಷಿಯಲ್ಲಿ ಸಂಗಮಯುಗಕ್ಕೆ ಯಾವ ಹೆಸರನ್ನು ಕೊಡುತ್ತೀರಿ? ಮೋಜಿನ [ಖುಷಿ] ಯುಗ. ಏಕೆ? ಇಲ್ಲಿ ಸಂಗಮದಲ್ಲಿ ಇರುವಂತಹ ಖುಷಿ ಇಡೀ ಕಲ್ಪದಲ್ಲಿಯೇ ಇರುವುದಿಲ್ಲ. ಕಾರಣವೇನು? ಪರಮಾತ್ಮನ ಮಿಲನದ ಖುಷಿಯು ಇಡೀ ಕಲ್ಪದಲ್ಲಿ ಈ ಸಮಯದಲ್ಲಿ ಮಾತ್ರ ಸಿಗುತ್ತದೆ. ಸಂಗಮಯುಗದ ಒಂದೊಂದು ದಿನವು ಏನಾಗಿದೆ? ಖುಷಿಯೇಖುಷಿಯಾಗಿದೆ. ಖುಷಿ ಇದೆಯಲ್ಲವೇ? ಖುಷಿ ಇದೆ. ತಬ್ಬಿಬ್ಬು ಆಗುವುದಿಲ್ಲ ತಾನೇ! ಪ್ರತಿದಿನವೂ ಉತ್ಸವವಾಗಿದೆ ಏಕೆಂದರೆ ಉತ್ಸಾಹವಿದೆ. ತಮ್ಮ ಎಲ್ಲಾ ಸಹೋದರ -ಸಹೋದರಿಯರನ್ನು ಪರಮಾತ್ಮ ತಂದೆಯ ಮಕ್ಕಳನ್ನಾಗಿ ಮಾಡಬೇಕು ಎನ್ನುವ ಉಮ್ಮಂಗ ಇದೆ. ಉತ್ಸಾಹ ಇದೆ. ಹೇಗೆ ಸೇವೆಯ ಉಮ್ಮಂಗ-ಉತ್ಸಾಹವಿರುತ್ತದೆಯಲ್ಲವೇ! ಇದನ್ನು ಮಾಡಬೇಕು, ಅದನ್ನು ಮಾಡಬೇಕು..... ಎಂದು ಯೋಜನೆಗಳನ್ನು ಮಾಡಿಕೊಳ್ಳುತ್ತೀರಲ್ಲವೇ, ಏಕೆಂದರೆ ಯಾವುದಾದರು ಶ್ರೇಷ್ಠ ಪ್ರಾಪ್ತಿಗಳು ಇದೆ ಎಂದರೆ ಅದನ್ನು ಅನ್ಯರಿಗೆ ತಿಳಿಸದೇ ಇರಲು ಸಾಧ್ಯವಾಗುವುದಿಲ್ಲ. ಇದೇ ಸಂಗಮಯುಗದ ಪ್ರಾಪ್ತಿಯು ಗೋಲ್ಡೆನ್ ಪ್ರಪಂಚದಲ್ಲಿಯೂ ಇರುವುದು. ಈಗಿನ ಪುರುಷಾರ್ಥದ ಪ್ರಾಲಬ್ದವು ಗೋಲ್ಡೆನ್ ಪ್ರಪಂಚವಾಗಿದೆ ಅಂದಾಗ ಸಂಗಮಯುಗವು ಇಷ್ಟವಾಗುತ್ತದೆಯೋ ಅಥವಾ ಸತ್ಯಯುಗವು ಇಷ್ಟವಾಗುತ್ತದೆಯೋ? ಯಾವುದು ಇಷ್ಟವಾಗುತ್ತದೆ? ಸಂಗಮಯುಗವೇ ಚೆನ್ನಾಗಿದೆಯಲ್ಲವೇ? ಕೇವಲ ಮಧ್ಯ-ಮಧ್ಯದಲ್ಲಿ ಮಾಯೆಯು ಬರುತ್ತದೆ. ಕೆಲವೊಮ್ಮೆ ಸ್ವಲ್ಪ-ಸ್ವಲ್ಪ ಗೊಂದಲಕ್ಕೊಳಗಾಗುತ್ತಾರೆ. ಕೆಲವು ಮಕ್ಕಳು ಸಹಜಯೋಗವನ್ನು ಪರಿಶ್ರಮ ಯೋಗವನ್ನಾಗಿ ಮಾಡಿಬಿಡುತ್ತಾರೆ, ಪರಿಶ್ರಮವಲ್ಲ. ಆದರೆ ಆ ತರಹ ಮಾಡಿಬಿಡುತ್ತಾರೆ. ವಾಸ್ತವದಲ್ಲಿ ಬಹಳ ಸಹಜವಾಗಿದೆ. ಪರಿಶ್ರಮವೆನಿಸುತ್ತದೆಯೇ? ಯಾರಿಗೆ ಪರಿಶ್ರಮವೆನಿಸುತ್ತದೆ ಅವರು ಕೈ ಎತ್ತಿ. ಯಾವಾಗಲೂ ಅಲ್ಲ, ಕೆಲ-ಕೆಲವೊಮ್ಮೆ ಪರಿಶ್ರಮವಾಗುತ್ತದೆಯೇ? ಅಥವಾ ಸಹಜವೋ? ಯಾರು ಪರಿಶ್ರಮಯೋಗಿಗಳಾಗಿದ್ದೀರಿ ಅವರು ಕೈ ಎತ್ತಿರಿ. ಪರಿಶ್ರಮವೆನಿಸುವವರು ಕೈ ಎತ್ತಿ. ಮಾತೆಯರು ಪರಿಶ್ರಮ ಯೋಗಿಗಳಾಗಿದ್ದೀರೋ ಅಥವಾ ಸಹಜವಾಗುವುದೋ? ಯಾರಾದರೂ ಪರಿಶ್ರಮ ಯೋಗಿಗಳಿದ್ದೀರಾ? ಕೈ ಎತ್ತುವುದಿಲ್ಲ. ಇಡೀ ಸಭೆಯಲ್ಲಿ ಹೇಗೆ ಎತ್ತುತ್ತಾರೆ!
ಎಲ್ಲಾ ಮಕ್ಕಳು ನನ್ನ ಬಾಬಾ ಎಂದು ನಶೆಯಿಂದ ಹೇಳುತ್ತಾರೆ. ನನ್ನ ಬಾಬಾ ಎಂದೆ ಹೇಳುತ್ತೀರಾ? ನನ್ನ ಬಾಬಾ ಆಗಿದ್ದಾರೆಯೋ ಅಥವಾ ದಾದಿಯರ ಬಾಬಾ ಆಗಿದ್ದಾರೆಯೋ? ನನ್ನ ಬಾಬಾ ಅಲ್ಲವೇ! ಪ್ರತಿಯೊಬ್ಬರೂ ಹೇಳುತ್ತಾರೆ - ಮೊದಲು ನನ್ನವರು ಎಂದು. ಈ ರೀತಿ ಇದೆಯೇ? ಈ ಸಿಂಧಿಗಳು ಎಲ್ಲರೂ ಕುಳಿತಿದ್ದಾರಲ್ಲವೇ. ತಂದೆಯು ನನ್ನ ಬಾಬಾ ಆಗಿದ್ದಾರೆಯೋ ಅಥವಾ ಜಾನಕಿ ದಾದಿಯವರ ಬಾಬಾ ಆಗಿದ್ದಾರೆಯೇ? ಪ್ರಕಾಶಮಣಿ ದಾದಿಯವರ ತಂದೆಯೇ? ಯಾರ - ತಂದೆಯಾಗಿದ್ದಾರೆ? ನನ್ನ ಬಾಬಾ ಆಗಿದ್ದಾರೆಯೇ? ಇಡೀ ದಿನದಲ್ಲಿ ಏನು ನೆನಪು ಇರುತ್ತದೆ? ತಂದೆಯು ತಿಳಿಸುತ್ತಾರೆ - ಬಹಳ ಸಹಜಯುಕ್ತಿಯಾಗಿದೆ – ಎಷ್ಟು ಬಾರಿ ನನ್ನದು-ನನ್ನದು ಎಂದು ಹೇಳುತ್ತೀರಿ ಇಡೀ ದಿನದಲ್ಲಿ ಎಷ್ಟು ಬಾರಿ ನನ್ನದು ಬಾಪ್ದಾದಾರವರು ಯಾವ ಹೊಸ ಶಬ್ದವನ್ನು ಕೊಡುವುದಿಲ್ಲ, ಯಾವುದನ್ನು ನನ್ನ ಕಾರ್ಯದಲ್ಲಿ ತರುತ್ತೀರಿ ನಾನು ಮತ್ತು ನನ್ನದು ಎಂದು, ಅಂದಾಗ ನಾನು ಯಾರು ಮತ್ತು ನನ್ನವರು ಯಾರು! ಕೆಲವು ಮಕ್ಕಳು ಪರಿಶ್ರಮ ಪುರುಷಾರ್ಥವನ್ನು ಏಕೆ ಮಾಡುತ್ತಾರೆ? ಬಿಂದು ಸಮೀಪಕ್ಕೆ ಬಂದುಬಿಡಲಿ ಎಂದು ಕೇವಲ ಯೋಚಿಸುತ್ತಾರೆ. ಬಿಂದು, ಬಿಂದು, ಬಿಂದು...... ಮತ್ತು ಬಿಂದು ಜಾರಿಹೋಗುತ್ತದೆ. ಬಿಂದುವಂತೂ ಇದೆ ಆದರೆ ಯಾವ ಬಿಂದು? ನಾನು ಯಾರಾಗಿದ್ದೇನೆ. ತಮ್ಮ ಈ ಸ್ವಮಾನವನ್ನು ಸ್ಮೃತಿಯಲ್ಲಿ ತಂದಾಗ ರಮಣೀಕ ಪುರುಷಾರ್ಥವಾಗಿಬಿಡುತ್ತದೆ, ಕೇವಲ ಜ್ಯೋತಿಬಿರ್ಂದು ಎಂದ ಹೇಳುತ್ತೀರೆಂದರೆ ಪರಿಶ್ರಮವಾಗಿಬಿಡುತ್ತದೆ. ಸಹಜ ಪುರುಷಾರ್ಥ, ಮೋಜಿನ ಪುರುಷಾರ್ಥವನ್ನು ಮಾಡಿ.
ಈ ಹೊಸ ವರ್ಷದಲ್ಲಿ ಪುರುಷಾರ್ಥವೂ ಶ್ರೇಷ್ಠವಾಗಿರಲಿ ಆದರೆ ಶ್ರೇಷ್ಠತೆಯ ಜೊತೆಗೆ ಮೊದಲು ಸಹಜವೂ ಆಗಿರಬೇಕು, ಶ್ರೇಷ್ಠವೂ ಆಗಿರಬೇಕು. ಈ ರೀತಿಯಿರಲು ಸಾಧ್ಯವೇ? ಎರಡೂ ಜೊತೆಯಿರುವುದು ಸಾಧ್ಯವಾಗುತ್ತದೆಯೇ? ಡಬಲ್ ವಿದೇಶಿಯರು ಹೇಳಿ, ಆಗುತ್ತದೆಯೇ? ಬಾಪ್ದಾದಾ ನೋಡುತ್ತಾರೆ. ಬಾಪ್ದಾದಾರವರಂತೂ ಪರಿಶೀಲನೆ ಮಾಡುತ್ತಾ ಇರುತ್ತಾರಲ್ಲವೇ! ಅಂದಮೇಲೆ ಪರಿಶ್ರಮ ಯೋಗಿಗಳು ಯಾರು ಯಾರು ಆಗುತ್ತಾರೆ! ಸಹಜಯೋಗಿಯ ಅರ್ಥವು ಆಲಸ್ಯದ ಪುರುಷಾರ್ಥವಲ್ಲ. ಶ್ರೇಷ್ಠವೂ ಆಗಿರಬೇಕು ಮತ್ತು ಸಹಜವೂ ಆಗಿರಬೇಕು ಅಂದಾಗ ಪಾಂಡವರು ಸಹಜಯೋಗಿಗಳಾಗಿದ್ದೀರಾ? ಸಹಜಯೋಗಿಗಳು ಯಾರಿದ್ದೀರಿ ಅವರು ಕೈಯನ್ನು ಎತ್ತಿ. ದೂರದರ್ಶನದಲ್ಲಿ ಬರುತ್ತಾ ಇದೆ ಅದನ್ನು ನೋಡುತ್ತಾರೆ. ಶುಭಾಷಯಗಳು. ಈ ವರ್ಷದಲ್ಲಿ ಯಾರ ಮುಂದೆಯೂ ಯಾವುದೇ ಪರಿಶ್ರಮಕ್ಕೆ ಬರುವುದಿಲ್ಲ ಏಕೆಂದರೆ ಸಹಜಯೋಗಿಗಳಾಗಿದ್ದೀರಿ ಆದ್ದರಿಂದ ಆಲಸ್ಯದಲ್ಲಿ ಬರಬೇಡಿ.
ಸಮಯ ಪ್ರಮಾಣ ಈ ಹೊಸ ವರ್ಷದಲ್ಲಿ ಎಲ್ಲರೂ ವಿಶೇಷವಾಗಿ ಈ ಲಕ್ಷ್ಯವನ್ನು ಇಟ್ಟುಕೊಳ್ಳಬೇಕು, ಯಾವುದೆಲ್ಲಾ ಖಜಾನೆಗಳು ಪ್ರಾಪ್ತಿಯಾಗಿದೆ - ಸಮಯ, ಸಂಕಲ್ಪ, ಗುಣ, ಜ್ಞಾನ, ಶಕ್ತಿಗಳಿವೆ... ಎಲ್ಲದಕ್ಕಿಂತ ದೊಡ್ಡ ವಿಜಾನೆ ಸಂಕಲ್ಪವಾಗಿದೆ - ಶ್ರೇಷ್ಠ ಸಂಕಲ್ಪ, ಶುದ್ಧ ಸಂಕಲ್ಪ. ಈ ಎಲ್ಲಾ ಖಜಾನೆಗಳನ್ನು ಪ್ರತಿದಿನ ಸಫಲ ಮಾಡಬೇಕಾಗಿದೆ. ಜಾಸ್ತಿ ಹಂಚಿ. ದಾತನ ಮಕ್ಕಳು ಮಾಸ್ಟರ್ ದಾತನಾಗಿ ಹೆಚ್ಚಿನದಾಗಿ ಹಂಚಿ. ಏಕೆ? ಸಫಲ ಮಾಡುವುದು ಎಂದರೆ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದು. ಆದ್ದರಿಂದ ಈ ವರ್ಷದಲ್ಲಿ ಇದೇ ವಿಶೇಷತೆಯನ್ನು ಸದಾ ಸ್ಥಿರವಾಗಿಟ್ಟುಕೊಳ್ಳುವುದು. ಸಫಲ ಮಾಡಬೇಕಾಗಿದೆ ಮತ್ತು ಸಫಲತೆಯು ಆಗಿಯೇ ಇದೆ. ಎಲ್ಲರೂ ಹೇಳುತ್ತೀರಲ್ಲವೇ - ಸಫಲತೆಯು ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆಯೆಂದು. ಅಧಿಕಾರವಾಗಿದೆಯೇ? ಸಫಲ ಮಾಡಿ ಮತ್ತು ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಿ. ಯಾವುದೇ ಕಾರ್ಯವನ್ನು ಮಾಡಿ, ಒಂದಲ್ಲ ಒಂದು ಖಜಾನೆಯನ್ನು ಸಫಲ ಮಾಡಿಕೊಳ್ಳುತ್ತಾ ಹೋಗಿ ಹಾಗೂ ಸಫಲತೆಯ ಅನುಭವವನ್ನು ಮಾಡುತ್ತಾ ನಡೆಯಿರಿ. ಯೋಚಿಸಿ - ಸಫಲತೆಯ ಅಧಿಕಾರವು ತಾವು ಬ್ರಾಹ್ಮಣ ಆತ್ಮಗಳ ವಿನಃ ಮತ್ಯಾರ ಅಧಿಕಾರವಾಗಲು ಸಾಧ್ಯ! ಏಕೆ? ಏಕೆಂದರೆ ತಂದೆಯು ತಮಗೆ ಸಫಲತಾ ಭವದ ವರದಾನವನ್ನು ಕೊಟ್ಟಿದ್ದಾರೆ. ಬಾಪ್ದಾದಾ ಸದಾ ಹೇಳುತ್ತಾರೆ - ಒಬ್ಬೊಬ್ಬ ಬ್ರಾಹ್ಮಣ ಆತ್ಮ ಸಫಲತೆಯ ನಕ್ಷತ್ರವಾಗಿದ್ದೀರಿ. ಸಫಲತಾ ಸ್ವರೂಪರಾಗಿದ್ದೀರಿ. ಸಫಲತೆಯ ನಕ್ಷತ್ರಗಳಾಗಿದ್ದೀರಾ ಅಥವಾ ಪರಿಶ್ರಮದ ನಕ್ಷತ್ರಗಳಾಗಿದ್ದೀರಾ? ಬಾಪ್ದಾದಾ ಎಲ್ಲಾ ಮಕ್ಕಳನ್ನು ಸಫಲತೆಯ ನಕ್ಷತ್ರಗಳ ಸ್ವರೂಪದಲ್ಲಿ ನೋಡುತ್ತಾರೆ. ನೆನಪಿದೆಯೇ - ಬ್ರಹ್ಮಾತಂದೆಯು ಆದಿಯಲ್ಲಿ ಎಷ್ಟು ಸಮಯದಲ್ಲಿ ಎಲ್ಲವನ್ನು ಸಫಲ ಮಾಡಿದರು? ಅಂತ್ಯದ ತನಕ ತಮ್ಮ ಸಮಯವನ್ನು ಸಫಲ ಮಾಡಿದರು. ಭಲೇ ಕರ್ಮಾತೀತರೂ ಆಗಿಬಿಟ್ಟರು ಆದರೂ ಸಹ ಎಷ್ಟೊಂದು ಪತ್ರಗಳನ್ನು ಬರೆದರು! ಸಮಯವನ್ನು ಸಫಲ ಮಾಡಿದರಲ್ಲವೇ! ಕೊನೆಯ ದಿನವೂ ಸಹ ಮುಖದಿಂದ ಮಹಾವಾಕ್ಯಗಳನ್ನು ಉಚ್ಛಾರಣೆ ಮಾಡಿದರು. ಕೊನೆಯ ದಿನದ ತನಕ ಎಲ್ಲವನ್ನು ಸಫಲ ಮಾಡಿದರು. ಆದ್ದರಿಂದಲೇ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡರು. ಆದ್ದರಿಂದ ಫಾಲೋ ಫಾದರ್. ವಾಸ್ತವದಲ್ಲಿ ಸಂಗಮಯುಗದ ಒಂದೊಂದು ಸಂಕಲ್ಪ, ಒಂದೊಂದು ಸೆಕೆಂಡ್, ಸಮಯ ಸಫಲ ಮಾಡುವುದೇ ಸಫಲತಾಮೂರ್ತಿಗಳಾಗುವುದಾಗಿದೆ. ಎಲ್ಲರೂ ನಿಶ್ಚಯದಿಂದ ಹೇಳುತ್ತೀರಲ್ಲವೇ! ಬ್ರಹ್ಮಾತಂದೆಯ ಜೊತೆ ನಮಗೆ ಬಹಳ ಪ್ರೀತಿಯಿದೆ. ಅಂದಮೇಲೆ ಪ್ರೀತಿಯ ಗುರುತಾಗಿದೆ - ಯಾವುದು ತಂದೆಗೆ ಪ್ರಿಯವಾಗಿತ್ತೋ ಅದು ಮಕ್ಕಳಿಗೂ ಪ್ರಿಯವಾಗಬೇಕು. ಸಮಯ, ಸಂಕಲ್ಪ ಮತ್ತ್ತು ಸರ್ವಖಜಾನೆಗಳು ಸಫಲವಾಗಲಿ, ವ್ಯರ್ಥವಾಗದಿರಲಿ. ಪ್ರೀತಿಯ ಗುರುತು ಫಾಲೋ ಫಾದರ್ ಆಗಿದೆ ಅಂದರೆ ತಂದೆಯನ್ನು ಅನುಕರಣೆ ಮಾಡುವುದಾಗಿದೆ. ಬ್ರಹ್ಮಾತಂದೆಯು ಯಾವ ವಿಶೇಷತೆಯನ್ನು ತೋರಿಸಿದರು? ಏನನ್ನು ಪ್ರದ ಯೋಚಿಸಿದರೋ ಅದನ್ನು ಸೆಕೆಂಡಿನಲ್ಲಿ ಮಾಡಿದರು. ಕೇವಲ ಯೋಚಿಸಲಿಲ್ಲ, ಕೇವಲ ಯೋಜನೆಯನ್ನು ಮಾಡಲಿಲ್ಲ, ಆದರೆ ಅದನ್ನು ಪ್ರತ್ಯಕ್ಷದಲ್ಲಿ ಮಾಡಿ ತೋರಿಸಿದರು. ಅಂದಾಗ ಈ ರೀತಿ ಇದ್ದೀರಾ? ಫಾಲೋ ಮಾಡುವವರಾಗಿದ್ದೀರಲ್ಲವೇ. ಒಳ್ಳೆಯದು.
ಇಂದು ಹೊಸ ವರ್ಷವನ್ನು ಆಚರಿಸಲು ಅನೇಕರು ಬಂದುಬಿಟ್ಟಿದ್ದೀರಿ ಒಳ್ಳೆಯದು. ಒಂದುವೇಳೆ ಹಾಲ್ ಚಿಕ್ಕದಾದರೂ ಹೃದಯವಂತೂ ದೊಡ್ಡದಾಗಿದೆ. ಕ್ರಮ ನೋಡಿ ಹೃದಯವು ದೊಡ್ಡದಾಗಿರುವುದರಿಂದ ಸಮಾವೇಶ ಆಗಿಬಿಟ್ಟಿದ್ದೀರಲ್ಲವೇ [ಇಂದು ಸಭೆಯಲ್ಲಿ 18-19 ಸಾವಿರ ಸಹೋದರ-ಸಹೋದರಿಯರು ಕುಳಿತಿದ್ದಾರೆ] ಎಲ್ಲರೂ ಹೊರಗಡೆ ಕುಳಿತಿದ್ದರೂ ಕೇಳುತ್ತಿದ್ದೀರಲ್ಲವೇ? ಹೊರಗಡೆ ಕುಳಿತುಕೊಂಡಿರುವವರು ಕೇಳುತ್ತಿದ್ದಾರೆ ಅವರಂತೂ ಕಾಣಿಸುತ್ತಿಲ್ಲ. ಬಾಪ್ದಾದಾರವರು ಕೇಳಿದರು - ವಿದೇಶದಲ್ಲಿ ಎಲ್ಲದಕ್ಕಿಂತ ಹೆಚ್ಚಿನದಾಗಿ ಆಸ್ಟ್ರೇಲಿಯಾದವರು 12 ಗಂಟೆಯವರೆಗೆ ಕುಳಿತುಕೊಳ್ಳುತ್ತಾರೆ. ರಾತ್ರಿ 12 ಗಂಟೆಯವರೆಗೆ ಕುಳಿತುಕೊಳ್ಳುತ್ತಾರೆ ಮತ್ತು ಆಮೃತವೇಳೆ 4 ಗಂಟೆಗೆ ಏಳುತ್ತಾರೆ ಆದ್ದರಿಂದ ಬಾಪ್ದಾದಾರವರೂ ಇಂದು ಆಸ್ಟ್ರೇಲಿಯಾವನ್ನು ನೆನಪು ಮಾಡಿದರು. ಆಸ್ಟ್ರೇಲಿಯಾದವರು ಕೇಳುತ್ತಿದ್ದಾರೆ - ಇಲ್ಲಿ ಯಾರು ಆಸ್ಟ್ರೇಲಿಯಾದವರಿದ್ದೀರಿ ಅವರು ಕೈಯನ್ನು ಎತ್ತಿ. ತ್ರಿಮೂರ್ತಿ ಶುಭಾಷಯಗಳು ಮೊದಲು ಆಸ್ಟ್ರೇಲಿಯಾದವರಿಗೆ ನಂತರ ಎಲ್ಲರಿಗೆ.
ಈ ವರ್ಷದ ಲಕ್ಷ್ಯವಂತೂ ತಿಳಿಸಲಾಯಿತು. ಸಫಲ ಮಾಡಿಕೊಳ್ಳಿ, ಸಫಲತೆಯಂತೂ ಆಗಿಯೇ ಇದೆ. ಇವನ್ನು ಎಲ್ಲರೂ ಪಕ್ಕಾ ಮಾಡಿಕೊಂಡಿರಾ? ಸಫಲ ಮಾಡಬೇಕಾಗಿದೆ. ವ್ಯರ್ಥವಲ್ಲ. ಸಂಗಮಯುಗವು ಸಮರ್ಥಯುಗವಾಗಿದೆ. ಸಫಲತೆಯ ಯುಗವಾಗಿದೆ. ವ್ಯರ್ಥದ್ದಲ್ಲ. 63 ಜನ್ಮಗಳು ವ್ಯರ್ಥವಾಗಿ ಸಮಾಪ್ತಿಯಾಯಿತು. ಈಗ ಈ ಚಿಕ್ಕಯುಗವು ಸಫಲ ಮಾಡಿಕೊಳ್ಳುವ ಯುಗವಾಗಿದೆ. ಒಂದುವೇಳೆ ಸಮಯವನ್ನು ಸಫಲ ಮಾಡಿಕೊಳ್ಳುತ್ತೀರೆಂದರೆ ಭವಿಷ್ಯದಲ್ಲಿಯೂ ಅರ್ಧಕಲ್ಪದ ಪೂರ್ಣ ಸಮಯ ರಾಜ್ಯಾಧಿಕಾರಿಗಳಾಗುತ್ತೀರಿ, ಒಂದುವೇಳೆ ಕೆಲವೊಮ್ಮೆ ಸಫಲ ಮಾಡಿಕೊಳ್ಳುತ್ತೀರೆಂದರೆ ರಾಜ್ಯಾಧಿಕಾರಿಗಳೂ ಸಹ ಕೆಲಕೆಲವೊಮ್ಮೆ ಆಗುವಿರಿ. ಸಮಯದ ಸಫಲತೆಯ ಪ್ರಾಲಬ್ದವು ಇದಾಗಿದೆ ಶ್ವಾಸವನ್ನು ಸಫಲ ಮಾಡಿಕೊಳ್ಳುತ್ತಿದ್ದೀರೆಂದರೆ 21 ಜನ್ಮಗಳೂ ಆರೋಗ್ಯವಂತರಾಗುತ್ತೀರಿ. ನಡೆಯುತ್ತಾ-ನಡೆಯುತ್ತಾ ಹೃದಯಾಘಾತವಾಗುವುದಿಲ್ಲ. ಕೆಲವರ ಹೃದಯಬಡಿತವು ನಿಂತುಹೋಗುತ್ತದೆ, ಕೆಲವರ ನಾಳಗಳು ನಿಂತುಹೋಗುತ್ತವೆ. ಆದರೆ ಶ್ವಾಸವನ್ನು ಸಫಲ ಮಾಡಿಕೊಂಡಾಗ ಇವೆಲ್ಲವೂ ಆಗುವುದಿಲ್ಲ.
ಜ್ಞಾನದ ಖಜಾನೆಯನ್ನೂ ಸಫಲ ಮಾಡಿಕೊಳ್ಳುತ್ತೀರೆಂದರೆ ಜ್ಞಾನದ ಅರ್ಥ ತಿಳುವಳಿಕೆಯಾಗಿದೆ, ಸತ್ಯಯುಗದಲ್ಲಿ ಇಷ್ಟೊಂದು ಬುದ್ದಿವಂತರಾಗಿಬಿಡುತ್ತೀರಿ. ಅಲ್ಲಿ ನಿಮಗೆ ಯಾವುದೇ ಮಂತ್ರಿಗಳ ಅವಶ್ಯಕತೆಯಿರುವುದಿಲ್ಲ. ಇಂದಿನ ಕಾಲದಲ್ಲಂತೂ ನೋಡಿ, ಶ್ರಮಾಣವಚನವನ್ನು ಸ್ವೀಕರಿಸುತ್ತಿದ್ದಂತೆಯೇ ಮೊದಲು ಮಂತ್ರಿಮಂಡಲವನ್ನು ರಚಿಸುತ್ತಾರೆ. ಅಲ್ಲಿ ಜೊತೆಗಾರರಿರುತ್ತಾರೆ ಆದರೆ ಮಂತ್ರಿಗಳಿರುವುದಿಲ್ಲ. ರಾಯಲ್ ಪರಿವಾರದವರು ಪ್ರತಿಯೊಂದು ದರ್ಬಾರಿನಲ್ಲಿ ಕುಳಿತುಕೊಳ್ಳುವ ಕಿರೀಟಧಾರಿಗಳಾಗಿರುತ್ತಾರೆ. ರಾಯಲ್ ಪರಿವಾರದವರೇನೂ ಕಡಿಮೆಯಲ್ಲ, ಭಲೆ ಸಿಂಹಾಸನದ ಮೇಲೆ ಕುಳಿತುಕೊಳ್ಳದೇ ಇರಬಹುದು ಆದರೆ ಪದವಿಯು ಒಂದೇ ರೀತಿಯಿರುತ್ತದೆ. ಆದ್ದರಿಂದ ಸಿಂಹಾಸನ ಅಧಿಕಾರಿಗಳು ಕೆಲವರಷ್ಟೇ ಆಗುತ್ತಾರೆ ಎಂದು ಯೋಚಿಸಬೇಡಿ. ತಾವೆಲ್ಲರೂ ಸಹ ರಾಜ ದರ್ಬಾರಿನಲ್ಲಿ ರಾಜ್ಯಾಧಿಕಾರಿಗಳ ರೂಪದಲ್ಲಿ ಇರುತ್ತೀರಿ. ತಮ್ಮ ತಲೆಯ ಮೇಲೂ ಕಿರೀಟವಿರುತ್ತದೆ ಮತ್ತು ತಮಗೆ ಪೂರ್ಣ ಅಧಿಕಾರವಿರುತ್ತದೆ ಅಂದಮೇಲೆ ಏನಾಗುತ್ತೀರಿ? ನಂಬರ್ವನ್ ಆಗುತ್ತೀರಾ ಅಥವಾ ನಂಬರ್ವಾರ್ ಆಗುತ್ತೀರಾ? ಅಂದಾಗ ಏನು ಮಾಡಬೇಕಾಗುತ್ತದೆ ಎಂದು ಗೊತ್ತಿದೆಯೇ? ಸಾಹಸವನ್ನು ತೋರಿಸಿದಿರಿ, ಇದು ತುಂಬಾ ಚೆನ್ನಾಗಿದೆ. ಆದರೆ ನಂಬರ್ವನ್ ಆಗುವುದಕ್ಕೋಸ್ಕರ ಮೊದಲು ವಿನ್ [ವಿಜಯಿ] ಆಗಬೇಕಾಗಿದೆ. ಮಾಡುತ್ತಿದ್ದೀರಲ್ಲವೇ! ಮಾಡುತ್ತೇವೆ ಎಂದು ಹೇಳಬಾರದು. ಮಾಡುತ್ತಿದ್ದೇವೆ. ಅನ್ಯರು ಕೇಳುತ್ತಿದ್ದಾರೆ. ಇಂದು ಕೇಳಿದಿರಿ - ಬ್ರಹ್ಮಾರವರ ಸಿಂಧ್ನ ಹಳೆಯ ಜೊತೆಗಾರರು ಅನೇಕರು ಬಂದಿದ್ದಾರೆ. ಅವರು ಕೈಯನ್ನು ಎತ್ತಿ, ಹಿಂದಿಯವರಲ್ಲ ಸಿಂಧಿಯವರು, ಮಕ್ಕಳೇ ಏಳಿ - ಪರಿವಾರಕ್ಕೆ ಪರಿವಾರವೇ ಬಂದಿದ್ದೀರಿ. ಒಳ್ಳೆಯದು. ಯಾವುದಾದರೂ ಚಮತ್ಕಾರವನ್ನು ಮಾಡಿ ತೋರಿಸುವಿರಲ್ಲವೇ! ಏನನ್ನು ತೋರಿಸುತ್ತೀರಿ? [ಸಂದೇಶವನ್ನು ಕೊಡುತ್ತೇವೆ] ಅದನ್ನಂತೂ ಮಾಡುತ್ತಲೇ ಇದ್ದೀರಿ. ಒಳ್ಳೆಯದು. 38 ಜನ ಬಂದಿದ್ದೀರಿ. ಆದ್ದರಿಂದ ಏನು ಕಮಾಲ್ ಮಾಡುತ್ತೀರಿ? ಹೋಗಲಿ ಹೆಚ್ಚಿಗೆ ಹೇಳುವುದಿಲ್ಲ, ಚಿಕ್ಕ ಮಾತನ್ನು ಹೇಳುತ್ತಾರೆ. ಮಾಡಲು ತಯಾರಿದ್ದೀರಾ? ಮಕ್ಕಳೂ ಕಮಾಲ್ ಮಾಡುತ್ತೀರಲ್ಲವೇ? [35ಲಕ್ಷ ಆತ್ಮಗಳನ್ನು ತಯಾರು ಮಾಡುತ್ತೇವೆ] ಪದಮ ಗುಣದಷ್ಟು ಶುಭಾಶಯಗಳು. ತಾವಂತೂ ದೊಡ್ಡ ಮಾತನ್ನು ಹೇಳಿಬಿಟ್ಟಿರಿ ಆದರೆ ಬಾಪ್ದಾದಾ ಚಿಕ್ಕ ಮಾತನ್ನು ಹೇಳುತ್ತಾರೆ - ಒಬ್ಬೊಬ್ಬರನ್ನು ಕರೆತನ್ನಿ. ಮಕ್ಕಳಾಗಿದ್ದೀರಿ ಮಕ್ಕಳನ್ನು ಕರೆತನ್ನಿ. ಮಾತೆಯರು ಸಹೋದರರನ್ನು ಅಥವಾ ಸಹೋದರಿಯರನ್ನು ಕರೆದುಕೊಂಡು ಬನ್ನಿ ಆದರೆ ಒಬ್ಬೊಬ್ಬರನ್ನು ಕರೆತರಬೇಕು. ಈ ಗ್ರೂಪನ್ನು ನೋಡಿ, ತಾವು ಇವರಿಗೆ ಮಾರ್ಗದರ್ಶನವನ್ನು ಕೊಡಬೇಕು, ಮುಂದಿನ ವರ್ಷಕ್ಕೆ ಕರೆದುಕೊಂಡೇ ಬರಬೇಕು, ಡಬಲ್ ಗ್ರೂಪನ್ನು ಕರೆದುಕೊಂಡು ಬರಬೇಕು. ಬಾಪ್ದಾದಾರವರು ಇದನ್ನೇ ಇಚ್ಛಿಸುತ್ತಾರೆ - ಎಲ್ಲಿಂದ ಆದಿಯಾಯಿತೋ ಅಲ್ಲಿಂದಲೇ ಪ್ರತ್ಯಕ್ಷವಾಗಬೇಕಾಗಿದೆ. ದಯೆ ಬರುತ್ತದೆಯಲ್ಲವೇ! ಬ್ರಹ್ಮಾತಂದೆಯ ದೇಶದ ನಿವಾಸಿಗಳಾಗಿದ್ದೀರಿ ಅಂದಾಗ ದೇಶವಾಸಿಗಳೊಂದಿಗೆ ಪ್ರೀತಿಯಿರುತ್ತದೆ.
ತಮ್ಮ ಬಳಿ ಬಹಳ ಖಜಾನೆಗಳಿವೆ, ಗುಣಗಳ ಖಜಾನೆಯು ಎಷ್ಟೊಂದು ದೊಡ್ಡದಿದೆ, ಶಕ್ತಿಗಳ ಖಜಾನೆಯು ಎಷ್ಟೊಂದು ದೊಡ್ಡದಿದೆ ಆದ್ದರಿಂದ ಗುಣದಾನ, ಶಕ್ತಿಗಳ ದಾನ ಮಾಡುವುದರಿಂದ ಮಾಸ್ಟರ್ ದಾತರಾಗಿ. ಯಾರೇ ಬರಲಿ ಭಲೆ ಸಂಭಂದದಲ್ಲಿ ಬರಲಿ, ಸಂಪರ್ಕದಲ್ಲಾದರೂ ಬರಲಿ ಆದರೆ ಅವರಿಗೆ ಒಂದಲ್ಲ ಒಂದು ಗುಣ ಅಥವಾ ಶಕ್ತಿಯ ಕೊಡುಗೆಯನ್ನು ಕೊಡಬೇಕು. ಯಾರೂ ಸಹ ಖಾಲಿ ಕೈಯಲ್ಲಿ ಹೋಗಬಾರದು. ಮತ್ತೇನೂ ಇಲ್ಲದಿದ್ದರೂ ಸಹ ತಂದೆಯ ಸಂದೇಶದ ಮಧುರ ಮಾತುಗಳ ಕೊಡುಗೆಯನ್ನು ಕೊಡುವುದು. ಜಗತ್ತಿನವರಂತೂ ಯಾವುದೇ ಉತ್ಸವವಾಗುತ್ತದೆ ಎಂದರೆ ಒಬ್ಬರು ಇನ್ನೊಬ್ಬರಿಗೆ ಬಾಯಿಯನ್ನು ಸಿಹಿ ಮಾಡಿಸುತ್ತಾರೆ ಆದರೆ ಬಾಪ್ ದಾದಾರವರು ತಿಳಿಸುತ್ತಾರೆ - ಬಾಯಿಯನ್ನು ಸಿಹಿ ಮಾಡಿಸಲೇಬೇಕಾಗಿದೆ ಆದರೆ ಅದರ ಜೊತೆಗೆ ತಮ್ಮ ಮಧುರ ಮುಖವನ್ನೂ ತೋರಿಸಬೇಕಾಗಿದೆ. ಕೇವಲ ಬಾಯಿ ಮಧುರವಲ್ಲ ಮುಖವೂ ಸಹ ಮಧುರ. ಇಷ್ಟೊಂದು ಮಧುರತೆಯು ಜಮಾ ಆಗಿದೆಯಲ್ಲವೇ! ಇದನ್ನು ಹಂಚಿದರೂ ಸಹ ಸಂಪನ್ನವಾಗಿರಿ ಮತ್ತು ಈ ಖಜಾನೆಯಂತೂ ಎಷ್ಟು ಹಂಚುತ್ತೀರೋ ಅಷ್ಟು ವೃದ್ಧಿಯಾಗುವುದು, ಕಡಿಮೆಯಾಗುವುದಿಲ್ಲ. ಆದ್ದರಿಂದ ಈ ವರ್ಷದಲ್ಲಿ ನೋಟ್ ಮಾಡಿಕೊಳ್ಳಬೇಕು. ಯಾವುದೇ ಆತ್ಮ ಬರಲಿ ಅವರಿಗೆ ಏನನ್ನಾದರೂ ಕೊಟ್ಟಿದ್ದೇವೆಯೇ? ಒಂದುವೇಳೆ ಕೇಳುವಂತಹವರಲ್ಲವೆಂದರೆ ಮಧುರ ಶಕ್ತಿಶಾಲಿ ದೃಷ್ಟಿಯನ್ನು ಕೊಡುವುದು ಆದರೆ ಅವಶ್ಯವಾಗಿ ಕೊಡಲೇಬೇಕಾಗಿದೆ. ಖಾಲಿಯಾಗಿ ಹೋಗಬಾರದು ಇದಂತೂ ಸಹಜವಾಗಿದೆಯಲ್ಲವೇ! ಅಥವಾ ಪರಿಶ್ರಮವಾಗಿದೆಯೇ?
ಒಳ್ಳೆಯದು. ಒಂದು ಸೆಕೆಂಡಿನಲ್ಲಿ ಮನಸ್ಸಿನ ವ್ಯಾಯಾಮ ನೆನಪು ಇದೆಯೇ? ಪ್ರತಿಯೊಬ್ಬರು ಇಡೀ ದಿನದಲ್ಲಿ ಎಷ್ಟು ಸಾರಿ ಈ ವ್ಯಾಯಾಮವನ್ನು ಮಾಡುತ್ತೀರಿ? ಈ ಮನಸ್ಸಿನ ವ್ಯಾಯಾಮ ಎಷ್ಟು ಬಾರಿ ಮಾಡುತ್ತೀರೋ ಅಷ್ಟು ಬಾರಿ ಸಹಜಯೋಗಿ, ಸರಳಯೋಗಿ ಆಗುತ್ತೀರಿ. ಒಂದುಕಡೆ ಮನಸ್ಸಿನ ಸೇವೆ, ಇನ್ನೊಂದುಕಡೆ ಮನಸ್ಸಿನ ವ್ಯಾಯಾಮ. ಈಗೀಗ ನಿರಾಕಾರಿ, ಈಗೀಗ ಫರಿಸ್ಥಾ. ಬ್ರಹ್ಮಾ ತಂದೆ ತಾವು ಫರಿಸ್ಥೆಗಳನ್ನು ಆಹ್ವಾನ ಮಾಡುತ್ತಿದ್ದಾರೆ. ಫರಿಸ್ಥೆಗಳಾಗಿ ಬ್ರಹ್ಮಾತಂದೆಯ ಜೊತೆಗೆ ತಮ್ಮ ಮನೆಗೆ ನಿರಾಕಾರ ರೂಪದಲ್ಲಿ ಹೋಗಬೇಕು ನಂತರ ದೇವತೆಗಳು ಆಗಬೇಕು. ಒಳ್ಳೆಯದು.
ನಾಲ್ಕಾರು ಕಡೆಯಿಂದ ಬಹಳ-ಬಹಳ ಸವಿ ನೆನಪು, ಕಾರ್ಡಿನ ರೂಪದಲ್ಲಿ ಆಗಲಿ, ಪತ್ರದ ರೂಪದಲ್ಲಿ ಆಗಲಿ ಬಾಪ್ದಾದಾರವರ ಹತ್ತಿರ ತಲುಪಿದೆ. ಬಾಪ್ದಾದಾರವರಿಗೆ ಗೊತ್ತಿದೆ- ಪ್ರತಿಯೊಂದು ಮಗು ಇದನ್ನೇ ಯೋಚಿಸುತ್ತದೆ - ನನ್ನ ನೆನಪು ತಂದೆಗೆ ಕೊಡಬೇಕು ಎಂದು. ಆದರೆ ಸಿಕ್ಕಿದೆ. ಸವಿನೆನಪನ್ನು ಕೊಡುವಂತಹ ಮುದ್ದಿನ ಮಕ್ಕಳು ಬಾಪ್ದಾದಾರವರ ಮುಂದೆ ಇದ್ದಾರೆ. ಆದ್ದರಿಂದ ಬಾಪ್ ದಾದಾರವರು ಹೇಳುತ್ತಾರೆ - ಪ್ರತಿಯೊಂದು ಮಗು ತಮ್ಮ-ತಮ್ಮ ಹೆಸರಿನಲ್ಲಿ ಶುಭಾಶಯಗಳು ಮತ್ತು ಮನಸ್ಸಿನ ಆಶೀರ್ವಾದಗಳನ್ನು ಸ್ವೀಕಾರ ಮಾಡಿ.
ತಮ್ಮೆಲ್ಲರಿಗೂ ಸಹ ಹೊಸ ಜೀವನ, ಹೊಸ ಯುಗ ಮತ್ತು ಹೊಸ ವರ್ಷದ ತುಂಬಾ-ತುಂಬಾ ಪದಮ-ಪದಮ-ಪದಮಾಗುಣದಷ್ಟು ಶುಭಾಶಯಗಳು ಮತ್ತು ಮನಸ್ಸಿನ ಆಶೀರ್ವಾದಗಳು, ಸವಿನೆನಪು ಮತ್ತು ನಮಸ್ತೆ.
ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಹೊಸವರ್ಷದ ಶುಭಾಷಯಗಳನ್ನು ಕೊಟ್ಟರು
ನಾಲ್ಕೂ ಕಡೆಯ ಅತೀ ಮಧುರ ಅತೀ ಪ್ರಿಯ ಮಕ್ಕಳಿಗೆ ಪದಮಾ ಪದಮಾ ಗುಣದಷ್ಟು ಹೊಸವರ್ಷದ ಶುಭಾಷಯಗಳು. ಈ ಯಾವ ಘಳಿಗೆಯಲ್ಲಿ ಕಳೆದುಹೋಯಿತು ಅದು ವಿದಾಯಿಯಾಗಿದೆ ಮತ್ತು ಶುಭಾಷಯದ ಘಳಿಗೆಯಾಗಿದೆ. ಒಂದುಕಡೆ ಬೀಳ್ಕೊಡುಗೆಯನ್ನು ಕೊಡಬೇಕಾಗಿದೆ. ಯಾರು ತಮ್ಮಲ್ಲಿ ಸಂಪನ್ನರಾಗುವುದರಲ್ಲಿ ಕಡಿಮೆಯ ಅನುಭವ ಮಾಡುತ್ತೀರಿ ಅದಕ್ಕೆ ವಿದಾಯಿ, ಸದಾ ಕಾಲಕ್ಕೋಸ್ಕರ ಬೀಳ್ಕೊಡುಗೆಯನ್ನು ಕೊಡುವುದು ಮತ್ತು ಮುಂದೆ ಹಾರುವುದಕ್ಕೋಸ್ಕರ ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು, ಒಳ್ಳೆಯದು. ಓಂ ಶಾಂತಿ.
| ವರದಾನ: |
ವರದಾನ: ಸ್ಮೃತಿಯನ್ನು ಅನುಭವದ ಸ್ಥಿತಿಯಲ್ಲಿ ಸ್ಥಿತಮಾಡುವಂತಹ ನಂಬರ್ ಒನ್ ವಿಶೇಷ ಆತ್ಮ ಭವ ಎಲ್ಲಾ ಬ್ರಾಹ್ಮಣ ಆತ್ಮರ ಒಳಗೆ ಸಂಕಲ್ಪವಿರುತ್ತದೆ ನಾವು ವಿಶೇಷ ಆತ್ಮ ನಂಬರ್ಒನ್ ಆಗಬೇಕು ಅದರೆ ಸಂಕಲ್ಪ ಮತ್ತು ಕರ್ಮದಲ್ಲಿ ಅಂತರವನ್ನು ಸಮಾಪ್ತಿ ಮಾಡವುದಕ್ಕಾಗಿ ಸ್ಮೃತಿಯನ್ನು ಅನುಭವದಲ್ಲಿ ತರಬೇಕಾಗಿದೆ. ಹೇಗೆ ಕೇಳುವುದು, ತಿಳಿಯುವುದು ನೆನಪಿನಲ್ಲಿರುತ್ತದೆ ಅದೇ ರೀತಿ ಸ್ವಯಂಗೆ ಆ ಅನುಭವದ ಸ್ಥಿತಿಯಲ್ಲಿ ತರಬೇಕಾಗಿದೆ ಅದಕ್ಕಾಗಿ ಸ್ವಯಂ ನ ಮತ್ತು ಸಮಯದ ಮಹತ್ವವನ್ನು ತಿಳಿದು ಮನಸ್ಸು ಮತ್ತು ಬುದ್ಧಿಯನ್ನು ಯಾವುದಾದರೂ ಅನುಭವದ ಆಸನದ ಮೇಲೆ ಸೆಟ್ ಮಾಡಿದರೆ ನಂಬರ್ ಒನ್ ವಿಶೇಷ ಆತ್ಮ ಆಗಿಬಿಡುವಿರಿ |
| ಸ್ಲೋಗನ್: | ಸ್ಲೋಗನ್: ಕೆಟ್ಟದರ ರೇಸ್ ಅನ್ನು ಬಿಟ್ಟು ಒಳ್ಳೆಯದರ ರೇಸ್ ಮಾಡಿ. |