| 27/02/25 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ - ಸತ್ಯಸಂಗವು ಜ್ಞಾನಮಾರ್ಗದಲ್ಲೇ ಸಿಗುತ್ತದೆ, ಈಗ ನೀವು ಸತ್ಯತಂದೆಯ ಸಂಗದಲ್ಲಿ ಕುಳಿತಿದ್ದೀರಿ, ತಂದೆಯ ನೆನಪಿನಲ್ಲಿ ಇರುವುದೆಂದರೆ ಸತ್ಸಂಗ ಮಾಡುವುದಾಗಿದೆ” | |
| ಪ್ರಶ್ನೆ: | ಈಗಲೇ ನೀವು ಮಕ್ಕಳಿಗೆ ಸತ್ಸಂಗದ ಅವಶ್ಯಕತೆಯಿದೆ - ಏಕೆ? |
| ಉತ್ತರ: | ಏಕೆಂದರೆ ತಮೋಪ್ರಧಾನ ಆತ್ಮವು ಸತ್ಯತಂದೆ, ಸತ್ಯಶಿಕ್ಷಕ ಮತ್ತು ಸದ್ಗುರುವಿನ ಸಂಗದಿಂದಲೇ ಸತೋಪ್ರಧಾನ ಅರ್ಥಾತ್ ಪತಿತರಿಂದ ಪಾವನರಾಗಲು ಸಾಧ್ಯ. ಸತ್ಸಂಗವಿಲ್ಲದೆ ನಿರ್ಬಲ ಆತ್ಮಗಳು ಬಲಶಾಲಿಯಾಗಲು ಸಾಧ್ಯವಿಲ್ಲ. ತಂದೆಯ ಸಂಗದಿಂದ ಆತ್ಮದಲ್ಲಿ ಪವಿತ್ರತೆಯ ಬಲವು ಬಂದುಬಿಡುತ್ತದೆ. 21 ಜನ್ಮಗಳಿಗಾಗಿ ಜೀವನದ ದೋಣಿಯು ಪಾರಾಗಿಬಿಡುತ್ತದೆ. |
ಓಂ ಶಾಂತಿ. ಮಕ್ಕಳು ಸತ್ಸಂಗದಲ್ಲಿ ಕುಳಿತಿದ್ದೀರಿ. ಈ ಸತ್ಸಂಗದಲ್ಲಿ ಕಲ್ಪ-ಕಲ್ಪವೂ ಕೇವಲ ಸಂಗಮಯುಗದಲ್ಲಿಯೇ ಮಕ್ಕಳು ಕುಳಿತುಕೊಳ್ಳುತ್ತೀರಿ. ಸತ್ಸಂಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಸತ್ಸಂಗವೆಂಬ ಹೆಸರು ಅವಿನಾಶಿಯಾಗಿ ನಡೆದುಬರುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ನಾವು ಇಂತಹ ಸತ್ಸಂಗಕ್ಕೆ ಹೋಗುತ್ತೇವೆಂದು ಹೇಳುತ್ತಾರೆ. ವಾಸ್ತವದಲ್ಲಿ ಭಕ್ತಿಮಾರ್ಗದಲ್ಲಿ ಯಾರೂ ಸತ್ಸಂಗದಲ್ಲಿ ಹೋಗುವುದಿಲ್ಲ. ಜ್ಞಾನಮಾರ್ಗದಲ್ಲಿಯೇ ಸತ್ಸಂಗವಿರುತ್ತದೆ. ಈಗ ನೀವು ಸತ್ಸಂಗದಲ್ಲಿ ಕುಳಿತಿದ್ದೀರಿ. ಆತ್ಮಗಳು ಸತ್ಯತಂದೆಯ ಸಂಗದಲ್ಲಿ ಕುಳಿತಿದ್ದಾರೆ ಮತ್ತೆಲ್ಲಿಯೂ ಆತ್ಮಗಳು ಪರಮಪಿತ ಪರಮಾತ್ಮನ ಸಂಗದಲ್ಲಿ ಕುಳಿತುಕೊಳ್ಳುವುದಿಲ್ಲ. ತಂದೆಯನ್ನು ಅರಿತುಕೊಂಡೇ ಇಲ್ಲ. ನಾವು ಸತ್ಸಂಗದಲ್ಲಿ ಹೋಗುತ್ತೇವೆಂದು ಭಲೆ ಹೇಳುತ್ತಾರೆ ಆದರೆ ಅವರು ದೇಹಾಭಿಮಾನದಲ್ಲಿ ಬಂದುಬಿಡುತ್ತಾರೆ, ನೀವು ದೇಹದ ಅಭಿಮಾನದಲ್ಲಿ ಬರುವುದಿಲ್ಲ ಏಕೆಂದರೆ ನಾವು ಆತ್ಮಗಳಾಗಿದ್ದೇವೆ, ಸತ್ಯತಂದೆಯ ಸಂಗದಲ್ಲಿದ್ದೇವೆಂದು ನಿಮಗೆ ತಿಳಿದಿದೆ. ಮತ್ತ್ಯಾವ ಮನುಷ್ಯರೂ ಸತ್ಸಂಗದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸತ್ಸಂಗವೆಂಬ ಹೆಸರೂ ಸಹ ಈಗಲೇ ಇದೆ. ‘ಸತ್ಸಂಗದ’ ಯಥಾರ್ಥ ಅರ್ಥವನ್ನು ತಂದೆಯು ಈ ಸಮಯದಲ್ಲಿ ತಿಳಿಸಿಕೊಡುತ್ತಾರೆ. ನೀವಾತ್ಮಗಳು ಈಗ ಪರಮಾತ್ಮ ತಂದೆ ಅಂದರೆ ಯಾರು ಸತ್ಯನಾಗಿದ್ದಾರೆಯೋ ಅವರ ಜೊತೆಯಲ್ಲಿ ಕುಳಿತಿದ್ದೀರಿ. ಅವರು ಸತ್ಯತಂದೆ, ಸತ್ಯಶಿಕ್ಷಕ, ಸದ್ಗುರುವಾಗಿದ್ದಾರೆ ಅಂದರೆ ಅರ್ಥ - ನೀವು ಸತ್ಸಂಗದಲ್ಲಿ ಕುಳಿತಿದ್ದೀರಿ. ಭಲೆ ನೀವು ಇಲ್ಲಿ ಅಥವಾ ಮನೆಯಲ್ಲಿ ಕುಳಿತಿದ್ದೀರಿ ಆದರೆ ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರಿ. ನಾವಾತ್ಮಗಳು ಈಗ ಸತ್ಯತಂದೆಯನ್ನು ನೆನಪು ಮಾಡುತ್ತೇವೆ ಅರ್ಥಾತ್ ಸತ್ಯಸಂಗದಲ್ಲಿದ್ದೇವೆ. ತಂದೆಯು ಮಧುಬನದಲ್ಲಿ ಕುಳಿತಿದ್ದಾರೆ, ತಂದೆಯನ್ನು ನೆನಪು ಮಾಡುವ ಅನೇಕ ಪ್ರಕಾರದ ಯುಕ್ತಿಗಳು ಸಿಗುತ್ತವೆ, ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಇದೂ ಸಹ ಮಕ್ಕಳಿಗೆ ತಿಳಿದಿದೆ - ನಾವು 16 ಕಲಾಸಂಪೂರ್ಣರಾಗುತ್ತೇವೆ ನಂತರ ಇಳಿಯುತ್ತಾ-ಇಳಿಯುತ್ತಾ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಾಗಿರುತ್ತದೆ ನಂತರ ಕೆಳಗಿಳಿಯುತ್ತಾ ವ್ಯಭಿಚಾರಿ ಭಕ್ತಿಯಾಗುವಕಾರಣ ತಮೋಪ್ರಧಾನರಾಗಿಬಿಡುತ್ತಾರೆ ಮತ್ತೆ ಅವರಿಗೆ ಸತ್ಯಸಂಗವು ಅವಶ್ಯವಾಗಿ ಬೇಕು. ಇಲ್ಲವಾದರೆ ಹೇಗೆ ಪವಿತ್ರರಾಗುವುದು? ಆದ್ದರಿಂದ ಈಗ ನೀವಾತ್ಮಗಳಿಗೆ ಸತ್ಯಸಂಗವು ಸಿಕ್ಕಿದೆ. ಆತ್ಮಕ್ಕೆ ಗೊತ್ತಿದೆ, ನಾವು ತಂದೆಯನ್ನು ನೆನಪು ಮಾಡಬೇಕಾಗಿದೆ, ಅವರದೇ ಸಂಗವಾಗಿದೆ. ನೆನಪನ್ನೂ ಸಂಗವೆಂದು ಹೇಳುತ್ತಾರೆ. ಇದು ಸತ್ಯತಂದೆಯ ಸಂಗವಾಗಿದೆ. ಈ ದೇಹವಿದ್ದರೂ ಸಹ ನೀವಾತ್ಮಗಳು ನನ್ನನ್ನು ನೆನಪು ಮಾಡಿ, ಇದು ಸತ್ಯತಂದೆಯ ಸಂಗವಾಗಿದೆ. ಹೇಗೆ ಇವರಿಗೆ ದೊಡ್ಡವ್ಯಕ್ತಿಯ ಸಂಗವು ಹಿಡಿದಿದೆ ಆದ್ದರಿಂದ ದೇಹಾಭಿಮಾನಿಯಾಗಿಬಿಟ್ಟಿದ್ದಾರೆಂದು ಹೇಳುತ್ತಾರಲ್ಲವೆ. ಈಗ ನಿಮ್ಮ ಸಂಗವು ಸತ್ಯತಂದೆಯ ಜೊತೆಯಿದೆ. ಇದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಒಂದೇಬಾರಿ ಬರುತ್ತೇನೆ. ಈಗ ಪರಮಾತ್ಮನೊಂದಿಗೆ ಆತ್ಮದ ಸಂಗವಿರುವಕಾರಣ ನೀವು 21 ಜನ್ಮಗಳಿಗಾಗಿ ಪಾರಾಗಿಬಿಡುತ್ತೀರಿ ನಂತರ ನಿಮಗೆ ದೇಹದ ಸಂಗವು ಹಿಡಿಯುತ್ತದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ತಂದೆಯು ತಿಳಿಸುತ್ತಾರೆ - ನನ್ನ ಜೊತೆ ನೀವು ಮಕ್ಕಳ ಸಂಗವಿರುವುದರಿಂದ ನೀವು ಸತೋಪ್ರಧಾನರಾಗಿಬಿಡುತ್ತೀರಿ. ಅದಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ.
ಆತ್ಮವು ನಿರ್ಲೇಪವಾಗಿದೆ. ಎಲ್ಲರೂ ಪರಮಾತ್ಮನೇ ಪರಮಾತ್ಮನಾಗಿದ್ದಾರೆಂದು ಸಾಧು-ಸಂತ ಮೊದಲಾದವರು ತಿಳಿಯುತ್ತಾರೆ ಅಂದರೆ ಪರಮಾತ್ಮನಲ್ಲಿ ಈಗ ತುಕ್ಕು ಉಂಟಾಗಿದೆಯೆಂದರ್ಥ. ಆದರೆ ಪರಮಾತ್ಮನಲ್ಲೆಂದೂ ತುಕ್ಕು ಬೀಳಲು ಸಾಧ್ಯವಿಲ್ಲ. ತಂದೆಯು ಕೇಳುತ್ತಾರೆ - ಪರಮಾತ್ಮನಾದ ನನ್ನಲ್ಲಿ ತುಕ್ಕು ಉಂಟಾಗುತ್ತದೆಯೇ? ಇಲ್ಲ. ನಾನಂತೂ ಸದಾ ಪರಮಧಾಮದಲ್ಲಿರುತ್ತೇನೆ, ಏಕೆಂದರೆ ನಾನು ಜನನ-ಮರಣದಲ್ಲಿ ಬರುವುದಿಲ್ಲ, ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ಕೆಲವರದು ತಂದೆ ಜೊತೆ ಹೆಚ್ಚಿನ ಸಂಗವಿದೆ ಕೆಲವರದು ಕಡಿಮೆ ಇನ್ನೂ ಕೆಲವರದು ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡಿ ಯೋಗದಲ್ಲಿರುತ್ತಾರೆ, ಎಷ್ಟು ಸಮಯ ಆತ್ಮವು ತಂದೆಯ ಸಂಗದಲ್ಲಿರುವುದೋ ಅಷ್ಟೂ ಲಾಭವಿದೆ. ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ತಿಳಿಸುತ್ತಾರೆ – ಆತ್ಮಗಳೇ ತಂದೆಯಾದ ನನ್ನನ್ನು ನೆನಪು ಮಾಡಿ, ನನ್ನ ಸಂಗ ಮಾಡಿ, ನನಗೆ ಈ ಶರೀರದ ಆಧಾರ ತೆಗೆದುಕೊಳ್ಳಬೇಕಾಗುತ್ತದೆ ಇಲ್ಲವೆಂದರೆ ಪರಮಾತ್ಮನು ಮಾತನಾಡುವುದಾದರೂ ಹೇಗೆ? ಆತ್ಮಗಳು ಕೇಳುವುದಾದರೂ ಹೇಗೆ? ಈಗ ನೀವು ಮಕ್ಕಳ ಸಂಗವು ಸತ್ಯತಂದೆಯ ಜೊತೆಯಿದೆ. ಸತ್ಯತಂದೆಯನ್ನು ನಿರಂತರ ನೆನಪು ಮಾಡಬೇಕಾಗಿದೆ. ಆತ್ಮವು ಸತ್ಯದ ಸಂಗ ಮಾಡಬೇಕಾಗಿದೆ, ಆತ್ಮವು ವಿಚಿತ್ರವಾಗಿದೆ, ಪರಮಾತ್ಮನೂ ವಿಚಿತ್ರವಾಗಿದ್ದಾರೆ, ಪ್ರಪಂಚವೂ ವಿಚಿತ್ರವಾಗಿದೆ. ಈ ಪ್ರಪಂಚವು ಹೇಗೆ ಸುತ್ತುತ್ತದೆ, ಇದೂ ಸಹ ವಿಚಿತ್ರವಾಗಿದೆ. ನೀವು ಇಡೀ ನಾಟಕದಲ್ಲಿ ಸರ್ವತೋಮುಖ ಪಾತ್ರವನ್ನಭಿನಯಿಸುತ್ತೀರಿ. ನೀವಾತ್ಮಗಳಲ್ಲಿ 84 ಜನ್ಮಗಳ ಪಾತ್ರವು ನಿಗದಿಯಾಗಿದೆ, ಇದೂ ಸಹ ವಿಚಿತ್ರವಾಗಿದೆ. ಸತ್ಯಯುಗೀ ಆತ್ಮಗಳು ಮತ್ತು ಈಗಿನ ಆತ್ಮಗಳು ಅದರಲ್ಲಿಯೂ ನೀವಾತ್ಮಗಳು ಎಲ್ಲರಿಗಿಂತ ಹೆಚ್ಚಿನ ಸರ್ವತೋಮುಖಿಯಾಗಿದ್ದೀರಿ. ನಾಟಕದಲ್ಲಿ ಕೆಲವರದು ಆರಂಭದಿಂದಲೇ ಪಾತ್ರವಿರುತ್ತದೆ, ಕೆಲವರದು ನಡುವೆ, ಇನ್ನೂ ಕೆಲವರ ಪಾತ್ರವು ಕೊನೆಯಲ್ಲಿರುತ್ತದೆ. ಅವೆಲ್ಲವೂ ಕ್ಷಣಿಕ ನಾಟಕಗಳಾಗಿವೆ, ಅವೂ ಸಹ ಈಗಲೇ ರಚಿಸಲ್ಪಟ್ಟಿವೆ. ಈಗ ವಿಜ್ಞಾನದ ಎಷ್ಟೊಂದು ಪ್ರಭಾವವಿದೆ. ಸತ್ಯಯುಗದಲ್ಲಿ ಇನ್ನೆಷ್ಟು ವಿಜ್ಞಾನದ ಬಲವಿರಬಹುದು. ಹೊಸಪ್ರಪಂಚವು ಎಷ್ಟು ಬೇಗನೆ ತಯಾರಾಗಬಹುದು! ಅಲ್ಲಿ ಪವಿತ್ರತೆಯ ಬಲವು ಮುಖ್ಯವಾದುದಾಗಿದೆ. ಈಗ ನಿರ್ಬಲರಿದ್ದಾರೆ, ಸತ್ಯಯುಗದಲ್ಲಿ ಬಲಶಾಲಿಗಳಿರುತ್ತಾರೆ. ಈ ಲಕ್ಷ್ಮಿ-ನಾರಾಯಣರು ಶಕ್ತಿಶಾಲಿಗಳಲ್ಲವೆ. ಈಗ ರಾವಣನು ಶಕ್ತಿಯನ್ನು ಕಸಿದುಕೊಂಡಿದ್ದಾನೆ ಮತ್ತೆ ನೀವು ಆ ರಾವಣನ ಮೇಲೆ ಎಷ್ಟೊಂದು ಶಕ್ತಿಶಾಲಿಗಳಾಗುತ್ತೀರಿ. ಎಷ್ಟು ಸತ್ಯತಂದೆಯ ಸಂಗ ಮಾಡುವಿರೋ ಅರ್ಥಾತ್ ಆತ್ಮವು ಎಷ್ಟು ತಂದೆಯನ್ನು ನೆನಪು ಮಾಡುವುದೋ ಅಷ್ಟು ಬಲಶಾಲಿಯಾಗುತ್ತದೆ. ವಿದ್ಯೆಯಲ್ಲಿಯೂ ಸಹ ಬಲ ಸಿಗುತ್ತದೆಯಲ್ಲವೆ. ನಿಮಗೂ ಬಲ ಸಿಗುತ್ತದೆ, ಇಡೀ ವಿಶ್ವದ ಮೇಲೆ ನೀವು ಆಳ್ವಿಕೆ ನಡೆಸುತ್ತೀರಿ. ಸಂಗಮಯುಗದಲ್ಲಿಯೇ ಸತ್ಯತಂದೆಯ ಜೊತೆ ಆತ್ಮದ ಯೋಗವಾಗುತ್ತದೆ. ತಂದೆಯು ತಿಳಿಸುತ್ತಾರೆ - ಆತ್ಮಕ್ಕೆ ನನ್ನ ಸಂಗವು ಸಿಗುವುದರಿಂದ ಆತ್ಮವು ಬಹಳ ಶಕ್ತಿಶಾಲಿಯಾಗಿಬಿಡುತ್ತದೆ. ತಂದೆಯು ವಿಶ್ವದ ಸರ್ವಶಕ್ತಿವಂತನಾಗಿದ್ದಾರಲ್ಲವೆ, ಅವರ ಮೂಲಕ ಶಕ್ತಿ ಸಿಗುತ್ತದೆ. ಅವರಲ್ಲಿ ಎಲ್ಲಾ ವೇದಶಾಸ್ತ್ರಗಳ ಆದಿ-ಮಧ್ಯ-ಅಂತ್ಯದ ಜ್ಞಾನವು ಬಂದುಬಿಡುತ್ತದೆ.
ಹೇಗೆ ತಂದೆಯು ಸರ್ವಶಕ್ತಿವಂತನಾಗಿದ್ದಾರೆ ಹಾಗೆಯೇ ನೀವೂ ಸಹ ಸರ್ವಶಕ್ತಿವಂತರಾಗುತ್ತೀರಿ, ವಿಶ್ವದ ಮೇಲೆ ನೀವು ರಾಜ್ಯಭಾರ ಮಾಡುತ್ತೀರಿ. ನಿಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಿಮಗೆ ನನ್ನ ಮೂಲಕ ಎಷ್ಟೊಂದು ಬಲವು ಸಿಗುತ್ತದೆ, ಇವರಿಗೂ ಬಲವು ಸಿಗುತ್ತದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಬಲವು ಸಿಗುವುದು. ತಂದೆಯು ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ, ಕೇವಲ ನೆನಪು ಮಾಡಬೇಕಷ್ಟೇ. 84 ಜನ್ಮಗಳ ಚಕ್ರವು ಈಗ ಪೂರ್ಣವಾಗಿದೆ, ಹಿಂತಿರುಗಿ ಹೋಗಬೇಕಾಗಿದೆ, ಇದನ್ನು ತಿಳಿದುಕೊಳ್ಳುವುದೇನೂ ದೊಡ್ಡಮಾತಲ್ಲ. ಹೆಚ್ಚಿನ ವಿಸ್ತಾರದಲ್ಲಿ ಹೋಗುವ ಅವಶ್ಯಕತೆಯಿಲ್ಲ. ಬೀಜವನ್ನು ಅರಿತುಕೊಳ್ಳುವುದರಿಂದ ಇಡೀ ವೃಕ್ಷವು ಹೇಗೆ ಬರಬಹುದೆಂಬುದನ್ನು ಅರಿತುಕೊಳ್ಳಬಹುದು. ಬುದ್ಧಿಯಲ್ಲಿ ಸಾರರೂಪದಲ್ಲಿ ಬಂದುಬಿಡುತ್ತದೆ. ಇವು ಬಹಳ ವಿಚಿತ್ರವಾದ ಮಾತುಗಳಾಗಿವೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಪೆಟ್ಟುತಿನ್ನುತ್ತಾರೆ, ಪರಿಶ್ರಮಪಡುತ್ತಾರೆ. ಸಿಗುವುದೇನೂ ಇಲ್ಲ ಆದರೂ ಸಹ ತಂದೆಯು ಮತ್ತೆ ಬಂದು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ, ಇದೇ ಪುರುಷಾರ್ಥ ಮಾಡಬೇಕಾಗಿದೆ. ಭಾರತದ ಯೋಗವು ಹೆಸರುವಾಸಿಯಾಗಿದೆ, ಯೋಗದಿಂದ ನಿಮ್ಮದು ಧೀರ್ಘಾಯಸ್ಸಾಗುವುದು. ಸತ್ಯಸಂಗದಿಂದ ಎಷ್ಟೊಂದು ಲಾಭವಾಗುತ್ತದೆ! ಆಯಸ್ಸೂ ಜಾಸ್ತಿ ಮತ್ತು ಕಾಯವೂ ನಿರೋಗಿಯಾಗಿಬಿಡುತ್ತದೆ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳ ಬುದ್ಧಿಯಲ್ಲಿಯೇ ಕುಳ್ಳರಿಸಲಾಗುತ್ತದೆ. ನೀವು ಬ್ರಾಹ್ಮಣರ ವಿನಃ ಮತ್ತ್ಯಾರದೂ ಸತ್ಸಂಗವಲ್ಲ. ನೀವು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೀರಿ, ಶಿವನ ಮಕ್ಕಳಾಗಿದ್ದೀರಿ ಅಂದಮೇಲೆ ನಾವು ಶಿವನಿಗೆ ಮೊಮ್ಮಕ್ಕಳಾಗಿದ್ದೇವೆಂದು ಎಷ್ಟೊಂದು ಖುಷಿಯಿರಬೇಕು! ಆಸ್ತಿಯೂ ಸಹ ತಾತನಿಂದಲೇ ಸಿಗುತ್ತದೆ. ಇದೇ ನೆನಪಿನ ಯಾತ್ರೆಯಾಗಿದೆ. ಬುದ್ಧಿಯಲ್ಲಿ ಇದೇ ಸ್ಮರಣೆಯಿರಬೇಕು. ಆ ಸತ್ಸಂಗಗಳಲ್ಲಂತೂ ಒಂದು ಜಾಗದಲ್ಲಿ ಹೋಗಿ ಕುಳಿತುಕೊಂಡುಬಿಡುತ್ತಾರೆ. ಇಲ್ಲಿ ಆ ಮಾತಿಲ್ಲ. ಒಂದು ಜಾಗದಲ್ಲಿ ಕುಳಿತುಕೊಳ್ಳುವುದರಿಂದಲೇ ಸತ್ಸಂಗವಾಗುವುದೆಂದಲ್ಲ. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ನಾವು ಸತ್ಸಂಗದಲ್ಲಿದ್ದೇವೆ, ಅವರನ್ನು ನೆನಪು ಮಾಡಿದಾಗ ಮಾತ್ರ. ನೆನಪು ಮಾಡಲಿಲ್ಲವೆಂದರೆ ದೇಹಾಭಿಮಾನದಲ್ಲಿದ್ದಾರೆಂದರ್ಥ. ದೇಹವು ಅಸತ್ಯ ವಸ್ತುವಲ್ಲವೆ. ದೇಹಕ್ಕೆ ಸತ್ಯವೆಂದು ಹೇಳುವುದಿಲ್ಲ, ಶರೀರವು ಜಡವಾಗಿದೆ, ಪಂಚತತ್ವಗಳಿಂದಾಗಿದೆ. ಅದರಲ್ಲಿ ಆತ್ಮವಿಲ್ಲವೆಂದರೆ ಶರೀರವು ಕದಲುವುದಿಲ್ಲ. ಮನುಷ್ಯನ ಶರೀರಕ್ಕಂತೂ ಏನೂ ಬೆಲೆಯಿಲ್ಲ ಉಳಿದೆಲ್ಲಾ ದೇಹಗಳಿಗೆ ಬೆಲೆಯಿದೆ. ಸೌಭಾಗ್ಯವು ಆತ್ಮಕ್ಕೆ ಸಿಗಬೇಕಾಗಿದೆ, ನಾನು ಇಂತಹವನಾಗಿದ್ದೇನೆಂದು ಆತ್ಮವೇ ಹೇಳುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಆತ್ಮವು ಯಾವ ಸ್ಥಿತಿಗೆ ಇಳಿದುಬಿಟ್ಟಿದೆ, ಮೀನು-ಮೊಟ್ಟೆ, ಮೊಸಳೆ ಎಲ್ಲವನ್ನೂ ತಿಂದುಬಿಡುತ್ತದೆ. ಪ್ರತಿಯೊಬ್ಬರೂ ಭಸ್ಮಾಸುರರಾಗಿದ್ದಾರೆ, ತಮ್ಮನ್ನು ತಾವೇ ಭಸ್ಮ ಮಾಡಿಕೊಳ್ಳುತ್ತಾರೆ - ಹೇಗೆ? ಕಾಮಚಿತೆಯ ಮೇಲೆ ಪ್ರತಿಯೊಬ್ಬರೂ ತಮ್ಮನ್ನು ಭಸ್ಮ ಮಾಡಿಕೊಳ್ಳುತ್ತಿದ್ದಾರೆ ಅಂದಮೇಲೆ ಭಸ್ಮಾಸುರರಾದರಲ್ಲವೆ. ಈಗ ನೀವು ಜ್ಞಾನಚಿತೆಯ ಮೇಲೆ ಕುಳಿತು ದೇವತೆಗಳಾಗುತ್ತೀರಿ. ಇಡೀ ಪ್ರಪಂಚವು ಕಾಮಚಿತೆಯ ಮೇಲೆ ಕುಳಿತು ಭಸ್ಮವಾಗಿಬಿಟ್ಟಿದೆ, ತಮೋಪ್ರಧಾನ ಕಪ್ಪಾಗಿಬಿಟ್ಟಿದೆ. ತಂದೆಯು ಮಕ್ಕಳನ್ನು ಶ್ಯಾಮನಿಂದ ಸುಂದರರನ್ನಾಗಿ ಮಾಡಲು ಬರುತ್ತಾರೆ. ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ದೇಹದ ಅಭಿಮಾನವನ್ನು ಬಿಟ್ಟು ತನ್ನನ್ನು ಆತ್ಮವೆಂದು ತಿಳಿಯಿರಿ. ಮಕ್ಕಳು ಶಾಲೆಯಲ್ಲಿ ಓದುತ್ತಾರೆ ಮತ್ತೆ ಆ ವಿದ್ಯೆಯು ಮನೆಯಲ್ಲಿದ್ದರೂ ಸಹ ಬುದ್ಧಿಯಲ್ಲಿರುತ್ತದೆಯಲ್ಲವೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿರಬೇಕು - ಇದು ನಿಮ್ಮ ವಿದ್ಯಾರ್ಥಿ ಜೀವನವಾಗಿದೆ. ಲಕ್ಷ್ಯವು ನಿಮ್ಮ ಸನ್ಮುಖದಲ್ಲಿದೆ. ಏಳುತ್ತಾ-ಕುಳಿತುಕೊಳ್ಳುತ್ತಾ-ನಡೆದಾಡುತ್ತಾ ಬುದ್ಧಿಯಲ್ಲಿ ಈ ಜ್ಞಾನವಿರಬೇಕು.
ಇಲ್ಲಿ ಮಕ್ಕಳು ಬರುತ್ತೀರಿ, ರಿಫ್ರೆಷ್ ಆಗುತ್ತೀರಿ. ಈ ರೀತಿ ತಿಳಿಸಿಕೊಡಿ ಎಂದು ಯುಕ್ತಿಗಳನ್ನು ತಿಳಿಸಿಕೊಡಲಾಗುತ್ತದೆ. ಪ್ರಪಂಚದಲ್ಲಿ ಅನೇಕ ಸತ್ಸಂಗಗಳಿರುತ್ತವೆ, ಎಷ್ಟೊಂದು ಮಂದಿ ಬಂದು ಒಟ್ಟಿಗೆ ಸೇರುತ್ತಾರೆ. ವಾಸ್ತವದಲ್ಲಿ ಅವು ಸತ್ಸಂಗಗಳಲ್ಲ. ಸತ್ಯತಂದೆಯ ಸಂಗವು ಈಗ ನೀವು ಮಕ್ಕಳಿಗೇ ಸಿಗುತ್ತದೆ. ತಂದೆಯು ಬಂದು ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ನೀವು ಮಾಲೀಕರಾಗಿಬಿಡುತ್ತೀರಿ. ದೇಹಾಭಿಮಾನ ಅಥವಾ ಸುಳ್ಳು ಅಭಿಮಾನಗಳಿಂದ ನೀವು ಕೆಳಗೆ ಬೀಳುತ್ತೀರಿ ಮತ್ತು ನೀವು ಸತ್ಯತಂದೆಯ ಸಂಗದಿಂದ ನೀವು ಮೇಲೇರುತ್ತೀರಿ, ಅರ್ಧಕಲ್ಪ ನೀವು ಪ್ರಾಲಬ್ಧವನ್ನು ಭೋಗಿಸುತ್ತೀರಿ. ಸತ್ಯಯುಗದಲ್ಲಿಯೂ ನಿಮಗೆ ಸತ್ಸಂಗವಿರುವುದೆಂದಲ್ಲ, ಯಾವಾಗ ಎರಡೂ ಸಂಗಗಳು ಹಾಜರಿರುವುದೋ ಆಗ ಸತ್ಸಂಗ ಮತ್ತು ಅಸತ್ಯ ಸಂಗವೆಂದು ಹೇಳುತ್ತಾರೆ. ಸತ್ಯತಂದೆಯು ಬಂದಾಗಲೇ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಎಲ್ಲಿಯವರೆಗೆ ಅವರು ಬರುವುದಿಲ್ಲವೋ ಅಲ್ಲಿಯತನಕ ಯಾರೂ ತಿಳಿದುಕೊಂಡಿರುವುದೂ ಇಲ್ಲ. ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಹೇ ಆತ್ಮಗಳೇ, ನನ್ನ ಜೊತೆ ಸಂಗವನ್ನಿಡಿ, ದೇಹದ ಯಾವ ಸಂಗವು ಸಿಕ್ಕಿದೆಯೋ ಅದರಿಂದ ಉಪರಾಂ ಆಗಿಬಿಡಿ. ಸತ್ಯಯುಗದಲ್ಲಿಯೂ ಭಲೆ ದೇಹದ ಸಂಗವಿರುವುದು ಆದರೆ ಅಲ್ಲಿ ನೀವು ಪಾವನರಾಗಿರುತ್ತೀರಿ. ಈಗ ನೀವು ಸತ್ಸಂಗದಿಂದ ಪತಿತರಿಂದ ಪಾವನರಾಗುತ್ತೀರಿ ಮತ್ತೆ ಶರೀರವೂ ಪಾವನವಾಗಿರುವುದೇ ಸಿಗುವುದು. ಆತ್ಮವೂ ಸತೋಪ್ರಧಾನವಾಗಿರುವುದು. ಈಗಂತೂ ಪ್ರಪಂಚವೂ ತಮೋಪ್ರಧಾನವಾಗಿರುವುದು, ಪ್ರಪಂಚವು ಹಳೆಯದು ಮತ್ತು ಹೊಸದಾಗುತ್ತದೆ. ಹೊಸಪ್ರಪಂಚದಲ್ಲಿ ಅವಶ್ಯವಾಗಿ ಆದಿಸನಾತನ ದೇವಿ-ದೇವತಾಧರ್ಮವಿತ್ತು, ಇಂದು ಆ ಧರ್ಮವನ್ನು ಮುಚ್ಚಿಹಾಕಿ ಆದಿಸನಾತನ ಹಿಂದೂ ಧರ್ಮವೆಂದು ಹೇಳಿಕೊಳ್ಳುತ್ತಾರೆ, ಗೊಂದಲಕ್ಕೊಳಗಾಗಿದ್ದಾರೆ. ಈಗ ನೀವು ಭಾರತವಾಸಿಗಳು ತಿಳಿದುಕೊಂಡಿದ್ದೀರಿ - ನಾವು ಪ್ರಾಚೀನ ದೇವಿ-ದೇವತಾಧರ್ಮದವರಾಗಿದ್ದೆವು, ಸತ್ಯಯುಗದ ಮಾಲೀಕರಾಗಿದ್ದೆವು ಆದರೆ ಆ ನಶೆಯೆಲ್ಲಿದೆ! ಕಲ್ಪದ ಆಯಸ್ಸನ್ನೇ ಬಹಳ ದೀರ್ಘ ಮಾಡಿಬಿಟ್ಟಿದ್ದಾರೆ, ಎಲ್ಲಾ ಮಾತುಗಳನ್ನು ಮರೆತುಬಿಟ್ಟಿದ್ದಾರೆ - ಇದರ ಹೆಸರೇ ಆಗಿದೆ - ಮರೆತು-ಮರೆಯಿಸುವ ಆಟ. ಈಗ ಸತ್ಯತಂದೆಯ ಮೂಲಕ ನೀವು ಎಲ್ಲಾ ಜ್ಞಾನವನ್ನು ಅರಿತುಕೊಂಡಿರುವುದರಿಂದ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ ಮತ್ತೆ ಅರ್ಧಕಲ್ಪದ ನಂತರ ಕೆಳಗಿಳಿಯುತ್ತೀರಿ ಏಕೆಂದರೆ ರಾವಣರಾಜ್ಯವು ಆರಂಭವಾಗುತ್ತದೆ. ಪ್ರಪಂಚವಂತೂ ಹಳೆಯದಾಗುತ್ತದೆಯಲ್ಲವೆ. ನಾವು ಹೊಸಪ್ರಪಂಚದ ಮಾಲೀಕರಾಗಿದ್ದೆವು, ಈಗ ಹಳೆಯ ಪ್ರಪಂಚದವರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ, ಕೆಲವರಿಗಂತೂ ಇದೂ ಸಹ ನೆನಪಿಗೆ ಬರುವುದಿಲ್ಲ. ತಂದೆಯು ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಅರ್ಧಕಲ್ಪ ನಾವು ಸ್ವರ್ಗವಾಸಿಗಳಾಗಿರುತ್ತೇವೆ ಮತ್ತೆ ಇನ್ನರ್ಧಕಲ್ಪದ ನಂತರ ಕೆಳಗಿಳಿಯುತ್ತೇವೆ ಏಕೆಂದರೆ ರಾವಣನ ರಾಜ್ಯವು ಆರಂಭವಾಗುತ್ತದೆ. ಪ್ರಪಂಚವು ಹಳೆಯದಾಗುತ್ತದೆಯಲ್ಲವೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ, ಅರ್ಧಕಲ್ಪ ನಾವು ಸ್ವರ್ಗವಾಸಿಗಳಾಗಿರುತ್ತೇವೆ ನಂತರ ನರಕವಾಸಿಗಳಾಗುತ್ತೇವೆ. ನಂಬರ್ವಾರ್ ಪುರುಷಾರ್ಥದನುಸಾರ ನೀವೂ ಸಹ ಮಾ|| ಸರ್ವಶಕ್ತಿವಂತರಾಗಿದ್ದೀರಿ. ಇದು ಜ್ಞಾನಾಮೃತದ ಪಾನವಾಗಿದೆ. ಶಿವತಂದೆಗೆ ಹಳೆಯ ಕರ್ಮೇಂದ್ರಿಯಗಳು ಸಿಕ್ಕಿವೆ. ಹೊಸಕರ್ಮೇಂದ್ರಿಯಗಳಂತೂ ಸಿಗುವುದಿಲ್ಲ. ಹಳೆಯ ವಸ್ತ್ರವು ಸಿಗುತ್ತದೆ ತಂದೆಯು ವಾನಪ್ರಸ್ಥದಲ್ಲಿಯೇ ಬರುತ್ತಾರೆ. ಮಕ್ಕಳಿಗೆ ಖುಷಿಯಾಗುತ್ತದೆ, ಆಗ ತಂದೆಯೂ ಖುಷಿಯಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಮಕ್ಕಳಿಗೆ ಜ್ಞಾನವನ್ನು ನೀಡಿ ರಾವಣನಿಂದ ಬಿಡಿಸಲು ಬಂದಿದ್ದೇನೆ. ಪಾತ್ರವನ್ನಂತೂ ಬಹಳ ಖುಷಿಯಿಂದ ಅಭಿನಯಿಸಲಾಗುತ್ತದೆಯಲ್ಲವೆ ಅಂದಾಗ ತಂದೆಯು ಬಹಳ ಖುಷಿಯಿಂದ ಪಾತ್ರವನ್ನಭಿನಯಿಸುತ್ತಾರೆ. ತಂದೆಯು ಕಲ್ಪ-ಕಲ್ಪವೂ ಬರಬೇಕಾಗುತ್ತದೆ, ಈ ಪಾತ್ರವಂತೂ ಎಂದೂ ನಿಂತುಹೋಗುವುದಿಲ್ಲ. ಮಕ್ಕಳಿಗೆ ಬಹಳ ಖುಷಿಯಿರಬೇಕು - ಎಷ್ಟು ಸತ್ಸಂಗ ಮಾಡುವಿರೋ ಅಷ್ಟು ಖುಷಿಯಿರುವುದು. ಕಡಿಮೆ ನೆನಪು ಮಾಡುವ ಕಾರಣವೇ ಅಷ್ಟು ಖುಷಿಯಿರುವುದಿಲ್ಲ. ತಂದೆಯು ಮಕ್ಕಳಿಗೆ ಸಂಪತ್ತನ್ನು ಕೊಡುತ್ತಾರೆ. ಸತ್ಯಹೃದಯದ ಮಕ್ಕಳ ಮೇಲೆ ತಂದೆಗೆ ಬಹಳ ಪ್ರೀತಿಯಿರುತ್ತದೆ. ಸತ್ಯಹೃದಯದವರ ಮೇಲೆ ಪ್ರಭು ಪ್ರಸನ್ನರಾಗಿರುತ್ತಾರೆ. ಯಾವ ಮಕ್ಕಳು ಒಳಗೂ-ಹೊರಗೂ ಸತ್ಯವಾಗಿರುತ್ತಾರೆ, ತಂದೆಗೆ ಸಹಯೋಗಿಗಳಾಗುತ್ತಾರೆ, ಸೇವೆಯಲ್ಲಿ ತತ್ಫರರಾಗಿರುತ್ತಾರೆಯೋ ಅವರೇ ತಂದೆಗೆ ಪ್ರಿಯರಾಗುತ್ತಾರೆ. ಅಂದಮೇಲೆ ತಮ್ಮ ಹೃದಯವನ್ನು ಕೇಳಿಕೊಳ್ಳಬೇಕು - ನಾವು ಸತ್ಯ-ಸತ್ಯವಾದ ಸೇವೆ ಮಾಡುತ್ತೇವೆಯೇ? ಸತ್ಯತಂದೆಯ ಜೊತೆ ಸಂಗವನ್ನು ಇಡುತ್ತೇವೆಯೇ? ಒಂದುವೇಳೆ ಸತ್ಯತಂದೆಯ ಜೊತೆ ಸಂಗವನ್ನು ಇಡಲಿಲ್ಲವೆಂದರೆ ಯಾವ ಗತಿಯಾಗಬಹುದು? ಅನೇಕರಿಗೆ ಮಾರ್ಗವನ್ನು ತಿಳಿಸುತ್ತಿದ್ದರೆ ಶ್ರೇಷ್ಠಪದವಿಯನ್ನೂ ಪಡೆಯುತ್ತೀರಿ. ಸತ್ಯತಂದೆಯಿಂದ ನಾವು ಯಾವ ಆಸ್ತಿಯನ್ನು ಪಡೆದಿದ್ದೇವೆಂದು ತಮ್ಮೊಳಗೆ ಕೇಳಿಕೊಳ್ಳಬೇಕಾಗಿದೆ. ಇದಂತೂ ತಿಳಿದಿದೆ, ಎಲ್ಲರೂ ನಂಬರ್ವಾರ್ ಇದ್ದಾರೆ. ಕೆಲಕೆಲವರು ಕೆಲವಷ್ಟು ಆಸ್ತಿಯನ್ನು ಪಡೆಯುತ್ತಾರೆ, ರಾತ್ರಿ-ಹಗಲಿನ ಅಂತರವಿರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ನಿಮಗೆ ಈ ದೇಹದ ಯಾವ ಸಂಗವು ಸಿಕ್ಕಿದೆ, ಈ ಸಂಗದಿಂದ ಉಪರಾಂ ಆಗಿರಬೇಕು. ಸತ್ಯತಂದೆಯ ಸಂಗದಿಂದ ಪಾವನರಾಗಬೇಕಾಗಿದೆ.
2. ಈ ವಿದ್ಯಾರ್ಥಿಜೀವನದಲ್ಲಿ ನಡೆದಾಡುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಜ್ಞಾನವು ತಿರುಗುತ್ತಿರಲಿ, ಗುರಿ-ಧ್ಯೇಯವನ್ನು ಸನ್ಮುಖದಲ್ಲಿಟ್ಟುಕೊಂಡು ಪುರುಷಾರ್ಥ ಮಾಡಬೇಕು, ಸತ್ಯಹೃದಯದಿಂದ ತಂದೆಗೆ ಸಹಯೋಗಿಗಳಾಗಬೇಕಾಗಿದೆ.
| ವರದಾನ: |
ಅವ್ಯಭಿಚಾರಿ ಮತ್ತು ನಿರ್ವಿಘ್ನ ಸ್ಥಿತಿಯ ಮೂಲಕ ಮೊದಲನೇ ಜನ್ಮದ ಪ್ರಾಲ ಪ್ರಾಪ್ತಿ ಮಾಡಿಕೊಳ್ಳುವಂತಹ ಸಮೀಪ ಮತ್ತು ಸಮಾನ ಭವ. 1. ಯಾವ ಮಕ್ಕಳು ಇಲ್ಲಿ ತಂದೆಯ ಗುಣ ಮತ್ತು ಸಂಸ್ಕಾರಗಳ ಸಮೀಪವಿರುತ್ತಾರೆ, ಸರ್ವ ಸಂಬಂಧಗಳಿಂದ ತಂದೆಯ ಜೊತೆಯ ಅಥವಾ ಸಮಾನತೆಯ ಅನುಭವ ಮಾಡುತ್ತಾರೆ ಅವರೇ ಅಲ್ಲಿ ರಾಯಲ್ ಕುಲದಲ್ಲಿ ಮೊದಲನೇ ಜನ್ಮದ ಸಂಬಂಧದಲ್ಲಿ ಸಮೀಪ ಬರುತ್ತಾರೆ. 2. ಯಾರು ಆದಿಯಿಂದ ಇಲ್ಲಿಯವರೆಗೆ ಅವ್ಯಭಿಚಾರಿ ಮತ್ತು ನಿರ್ವಿಘ್ನರಾಗಿದ್ದಾರೆ ಅವರೇ ಮೊದಲು ಬರುತ್ತಾರೆ. ನಿರ್ವಿಘ್ನತೆಯ ಅರ್ಥ ಇದಲ್ಲ ವಿಘ್ನ ಬರಲೇ ಇಲ್ಲ ಅಂದರೆ ವಿಘ್ನ ವಿನಾಶಕ ಅಥವಾ ವಿಘ್ನಗಳ ಮೇಲೆ ಸದಾ ವಿಜಯಿಯಾಗಿದ್ದೆ ಎಂದಲ್ಲ. ಈ ಎರಡೂ ಮಾತು ಒಂದುವೇಳೆ ಆದಿಯಿಂದ ಅಂತ್ಯದವರೆಗೆ ಸರಿಯಾಗಿದ್ದರೆ ಮೊದಲನೇ ಜನ್ಮದಲ್ಲಿ ಜೊತೆಯಲ್ಲಿರುವಿರಿ. |
| ಸ್ಲೋಗನ್: | ಶಾಂತಿಯ ಶಕ್ತಿಯಿಂದ ನಕಾರಾತ್ಮಕವನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡಿ. |
ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಏಕಾಂತವಾಸಿ ಅರ್ಥಾತ್ ಸದಾ ಸ್ಥೂಲ ಏಕಾಂತದ ಜೊತೆ ಜೊತೆ ಒಬ್ಬರ ಅಂತ್ಯದಲ್ಲಿ ಇರುವುದು. ಏಕಾಗ್ರತೆಯ ಶಕ್ತಿಯಿಂದ ಯಾವುದೇ ಆತ್ಮನ ಸಂದೇಶ ಆ ಆತ್ಮನಿಗೆ ತಲುಪಿಸಬಹುದು. ಯಾವುದೇ ಆತ್ಮವನ್ನು ಆಹ್ವಾನ ಮಾಡಬಹುದು. ಯಾವುದೇ ಆತ್ಮನ ಶಬ್ದವನ್ನು ಸ್ಪಷ್ಟವಾಗಿ ಕೇಳಬಹುದು. ಯಾವುದೇ ಆತ್ಮರಿಗೆ ದೂರ ಕುಳಿತಲ್ಲಿಯೇ ಸಹಯೋಗ ಕೊಡಬಹುದು.