| 27/04/25 |
ಪ್ರಾತಃಮುರುಳಿ
ಓಂಶಾಂತಿ
"ಅವ್ಯಕ್ತ-ಬಾಪ್ದಾದಾ"
|
ರಿವೈಜ್: 03/02/20 |
“ಸೇವೆಯನ್ನು ಮಾಡುತ್ತಾ ಉಪರಾಂ ಮತ್ತು ಬೇಹದ್ದಿನ ವೃತ್ತಿಯ ಮೂಲಕ ಸದಾ ಸಿದ್ಧರಾಗಿ ಬ್ರಹ್ಮಾತಂದೆಯ ಸಮಾನ ಸಂಪನ್ನರಾಗಿ”
ಇಂದು ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ತನ್ನ ನಾಲ್ಕಾರೂಕಡೆಯ ಕೋಟಿಯಲ್ಲಿ ಕೆಲವರು ಮತ್ತು ಕೆಲವರಲ್ಲಿಯೂ ಸಹ ಕೆಲವರಾದ ಮಕ್ಕಳ ಭಾಗ್ಯವನ್ನು ನೋಡಿ ಸಂತೋಷಪಡುತ್ತಿದ್ದೇವೆ. ಇಂತಹ ವಿಶೇಷ ಭಾಗ್ಯವು ಮತ್ತ್ಯಾರಿಗೂ ಸಿಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಗುವಿನ ವಿಶೇಷತೆಯನ್ನು ನೋಡಿ ಹರ್ಷಿತರಾಗುತ್ತಿದ್ದೇವೆ. ಯಾವ ಮಕ್ಕಳು ಬಾಪ್ದಾದಾರವರೊಂದಿಗೆ ಹೃದಯದಿಂದ ಸಂಬಂಧವನ್ನು ಜೋಡಿಸಿದ್ದಾರೆ, ಆ ಪ್ರತಿಯೊಬ್ಬ ಮಗುವಿನಲ್ಲಿ ಒಂದಲ್ಲಒಂದು ವಿಶೇಷತೆಯು ಅವಶ್ಯವಾಗಿ ಇದೆ. ಎಲ್ಲದಕ್ಕಿಂತ ಮೊದಲನೆಯ ವಿಶೇಷತೆಯು ಸಾಧಾರಣರೂಪದಲ್ಲಿ ಬಂದಿರುವಂತಹ ತಂದೆಯನ್ನು ತಿಳಿದು “ನನ್ನಬಾಬಾ” ಎಂದು ಒಪ್ಪಿಕೊಂಡರು. ಈ ತಿಳುವಳಿಕೆಯು ಎಲ್ಲದಕ್ಕಿಂತ ದೊಡ್ಡ ವಿಶೇಷತೆಯಾಗಿದೆ. “ನನ್ನ ಬಾಬಾ” ಎಂದು ಹೃದಯದಿಂದ ಒಪ್ಪಿಕೊಂಡರು. ತಂದೆಯೂ ಸಹ ನನ್ನ ಮಗು ಎಂದು ಹೇಳಿದರು. ಯಾರೆಲ್ಲಾ ಹೆಸರಾಂತ ತತ್ವಜ್ಞಾನಿಗಳಿದ್ದಾರೆ, ವಿಜ್ಞಾನದವರು, ಧರ್ಮಾತ್ಮರು ತಿಳಿಯಲು ಸಾಧ್ಯವಾಗಲಿಲ್ಲವೋ ಅದನ್ನು ಸಾಧಾರಣ ಮಕ್ಕಳು ತಿಳಿದುಕೊಂಡರು ಮತ್ತು ತನ್ನ ಅಧಿಕಾರವನ್ನು ಪಡೆದುಕೊಂಡರು. ಯಾರೇ ಬಂದು ಈ ಸಭೆಯ ಮಕ್ಕಳನ್ನು ನೋಡಿದ್ದೇ ಆದರೆ ಇಂತಹ ಮುಗ್ಧಮಾತೆಯರು ಈ ಸಾಧಾರಣ ಮಕ್ಕಳು ಇಷ್ಟು ದೊಡ್ಡತಂದೆಯನ್ನು ತಿಳಿದುಕೊಂಡಿದ್ದಾರೆಯೇ! ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಈ ವಿಶೇಷತೆಯು ಅರ್ಥಮಾಡಿಕೊಳ್ಳುವಂತದ್ದು, ತಂದೆಯನ್ನು ತಿಳಿದುಕೊಂಡು ತನ್ನವರನ್ನಾಗಿ ಮಾಡಿಕೊಳ್ಳುವುದು - ಇದು ತಾವು ಕೋಟಿಯಲ್ಲಿ ಕೆಲವು ಮಕ್ಕಳ ಭಾಗ್ಯವಾಗಿದೆ. ಯಾರೆಲ್ಲಾ ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ ಅಥವಾ ದೂರದಲ್ಲಿ ಕುಳಿತು ಸಮ್ಮುಖದ ಅನುಭವವನ್ನು ಮಾಡುತ್ತಿದ್ದಾರೆ, ಎಲ್ಲಾ ಮಕ್ಕಳು ಮನಸ್ಸಿನಿಂದ ತಂದೆಯನ್ನು ತಿಳಿದುಕೊಂಡಿದ್ದಾರೆ! ತಿಳಿದುಕೊಂಡಿದ್ದೀರೋ ಅಥವಾ ತಿಳಿದುಕೊಳ್ಳುತ್ತಿದ್ದೀರೋ? ಯಾರು ತಿಳಿದುಕೊಂಡಿದ್ದೀರಿ ಅವರು ಕೈಯೆತ್ತಿ. ತಿಳಿದುಕೊಂಡಿದ್ದೀರಾ? ಒಳ್ಳೆಯದು. ಬಾಪ್ದಾದಾರವರು ತಿಳಿದುಕೊಳ್ಳುವ ವಿಶೇಷತೆಯನ್ನು ಹೊಂದಿರುವ ಪ್ರತಿಯೊಬ್ಬ ಮಗುವಿಗೆ ಶುಭಾಷಯಗಳನ್ನು ನೀಡುತ್ತಿದ್ದೇವೆ. ವಾಹ್! ಭಾಗ್ಯವಾನ್ ಮಕ್ಕಳೇ ವಾಹ್! ಅರಿತುಕೊಳ್ಳುವ ಮೂರನೆಯ ನೇತ್ರವನ್ನು ಪ್ರಾಪ್ತಿಮಾಡಿಕೊಂಡಿರಿ. ಮಕ್ಕಳ ಹೃದಯದ ಗೀತೆಯನ್ನು ಬಾಪ್ದಾದಾ ಕೇಳುತ್ತಿದ್ದೇವೆ - ಅದು ಯಾವ ಗೀತೆ? ಯಾರನ್ನು ಪಡೆಯಬೇಕಾಗಿತ್ತೋ ಅವರನ್ನು ಪಡೆದೆವು. ತಂದೆಯೂ ಸಹ ಓ ಮುದ್ದಾದ ಮಕ್ಕಳೇ, ಏನನ್ನು ತಂದೆಯಿಂದ ಪಡೆಯಬೇಕಾಗಿತ್ತೋ ಅದನ್ನು ಪಡೆದುಕೊಂಡಿದ್ದೀರಿ ಎಂದು ಹೇಳುತ್ತಾರೆ. ಪ್ರತಿಯೊಬ್ಬ ಮಗುವೂ ಅನೇಕ ಆತ್ಮೀಯ ಖಜಾನೆಗೆ ಬಾಲಕರೇ ಮಾಲೀಕರಾಗಿಬಿಟ್ಟಿರಿ.
ಈ ದಿನ ಬಾಪ್ದಾದಾ ಖಜಾನೆಗೆ ಮಾಲೀಕರಾದ ಮಕ್ಕಳ ಖಜಾನೆಯ ಲೆಕ್ಕವನ್ನು ನೋಡುತ್ತಿದ್ದೆವು. ತಂದೆಯು ಖಜಾನೆಯನ್ನಂತೂ ಎಲ್ಲರಿಗೂ ಒಂದೇರೂಪದಲ್ಲಿ ಒಂದೇ ರೀತಿಯಾಗಿ ಕೊಟ್ಟಿದ್ದೇವೆ. ಕೆಲವರಿಗೆ ಪದುಮದಷ್ಟು, ಕೆಲವರಿಗೆ ಲಕ್ಷದಷ್ಟು ಕೊಟ್ಟಿಲ್ಲ ಆದರೆ ಖಜಾನೆಯನ್ನು ತಿಳಿದುಕೊಳ್ಳುವುದು ಮತ್ತು ಪ್ರಾಪ್ತಿ ಮಾಡಿಕೊಳ್ಳುವುದು, ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ನಂಬರ್ವಾರ್ ಇದ್ದೀರಿ. ಬಾಪ್ದಾದಾರವರು ಇತ್ತೀಚಿನ ದಿನಗಳಲ್ಲಿ ಮತ್ತೆ-ಮತ್ತೆ ಭಿನ್ನ-ಭಿನ್ನ ಪ್ರಕಾರದಿಂದ ಮಕ್ಕಳಿಗೆ ಗಮನಕ್ಕೆ ತರಿಸುತ್ತಿದ್ದೇವೆ - ಸಮಯದ ಸಮೀಪತೆಯನ್ನು ನೋಡಿ ಸೂಕ್ಷ್ಮವಿಶಾಲ ಬುದ್ಧಿಯಿಂದ ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಿ - ನನಗೆ ಏನು ಸಿಕ್ಕಿದೆ? ನಾನು ಏನನ್ನು ಪಡೆದುಕೊಂಡೆನು ಮತ್ತು ನಿರಂತರವಾಗಿ ಆ ಖಜಾನೆಯಲ್ಲಿ ಪಾಲನೆಯನ್ನು ಪಡೆಯುತ್ತಿದ್ದೇನೆಯೇ? ಈ ಪರಿಶೀಲನೆಯು ಬಹಳ ಅವಶ್ಯಕತೆಯಿದೆ ಏಕೆಂದರೆ ಮಾಯೆಯು ವರ್ತಮಾನ ಸಮಯದಲ್ಲಿ ಭಿನ್ನ-ಭಿನ್ನ ರಾಯಲ್ರೂಪದಲ್ಲಿ ಹುಡುಗಾಟಿಕೆ ಮತ್ತು ರಾಯಲ್ರೂಪದಿಂದ ಆಲಸ್ಯವನ್ನು ಪ್ರಯೋಗ ಮಾಡುತ್ತಾ ಇದೆ ಆದ್ದರಿಂದ ಸದಾ ತಮ್ಮ ಪರಿಶೀಲನೆಯನ್ನು ಮಾಡಿಕೊಳ್ಳುತ್ತಾ ಇರಿ. ಇಷ್ಟೊಂದು ಗಮನದಿಂದ, ಹುಡುಗಾಟಿಕೆಯ ರೂಪದಿಂದ ಮಾಡಿಕೊಳ್ಳಬೇಡಿ - ಕೆಟ್ಟದ್ದನ್ನು ಮಾಡಿಲ್ಲ, ದುಃಖವನ್ನು ನೀಡಿಲ್ಲ, ಕೆಟ್ಟದೃಷ್ಟಿಯಿರಲಿಲ್ಲ, ಈ ಪರಿಶೀಲನೆಯಂತೂ ಆಗಿದೆ ಆದರೆ ತುಂಬಾ ಒಳ್ಳೆಯದನ್ನು ಏನು ಮಾಡಿದಿರಿ? ಸದಾ ಆತ್ಮಿಕದೃಷ್ಟಿ ಸ್ವಾಭಾವಿಕವಾಗಿತ್ತೋ ಅಥವಾ ವಿಸ್ಮೃತಿ-ಸ್ಮೃತಿಯ ಆಟವನ್ನು ಆಡಿದಿರಾ? ಎಷ್ಟು ಜನರಿಗೆ ಶುಭಭಾವನೆ-ಶುಭಕಾಮನೆ, ಆಶೀರ್ವಾದವನ್ನು ನೀಡಿದಿರಿ. ಇಂತಹ ಜಮಾದ ಖಾತೆ ಎಷ್ಟು ಮತ್ತು ಯಾವ ರೀತಿಯದಾಗಿತ್ತು? ಏಕೆಂದರೆ ಜಮಾದ ಖಾತೆಯನ್ನು ಕೇವಲ ಈಗ ಮಾತ್ರವೇ ಮಾಡಿಕೊಳ್ಳಲು ಸಾಧ್ಯ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಈ ಸಮಯದ ಜಮಾದ ಖಾತೆಯು ಈ ಪೂರ್ಣ ಸೀಜನ್ ಜಮಾ ಮಾಡಿಕೊಂಡಿದ್ದೀರಾ? ನಂತರ ಜಮಾದ ಪ್ರಮಾಣ ರಾಜ್ಯಭಾಗ್ಯ ಮತ್ತು ಪೂಜ್ಯ ದೇವಿ-ದೇವತೆಗಳಾಗುವುದಾಗಿದೆ. ಜಮಾ ಕಡಿಮೆಯಾಯಿತೆಂದರೆ ರಾಜ್ಯಭಾಗ್ಯವೂ ಕಡಿಮೆಯಾಗುತ್ತದೆ ಮತ್ತು ಪೂಜ್ಯರಾಗುವುದರಲ್ಲಿಯೂ ಸಹ ನಂಬರ್ವಾರ್ ಆಗುತ್ತೀರಿ. ಜಮಾ ಕಡಿಮೆಯಾಯಿತೆಂದರೆ ಪೂಜ್ಯರಾಗುವುದೂ ಕಡಿಮೆ, ವಿಧಿಪೂರ್ವಕವಾಗಿ ಜಮಾ ಇಲ್ಲವೆಂದರೆ ಪೂಜೆಯೂ ಸಹ ವಿಧಿಪೂರ್ವಕವಾಗಿ ಆಗುವುದಿಲ್ಲ. ಆಗಾಗ ವಿಧಿಪೂರ್ವಕವಾಗಿದ್ದರೆ ಪೂಜೆಯೂ ಸಹ ಹಾಗೂ ಪದವಿಯೂ ಸಹ ಆಗಾಗ ಲಭಿಸುತ್ತದೆ ಆದ್ದರಿಂದ ಬಾಪ್ದಾದಾರವರಿಗೆ ಪ್ರತಿಯೊಬ್ಬ ಮಗುವಿನೊಂದಿಗೆ ಅಪಾರ ಪ್ರೀತಿಯಿದೆ. ಪ್ರತಿಯೊಬ್ಬ ಮಗುವು ಸಂಪನ್ನನಾಗಿ, ಸಮಾನರಾಗಲಿ ಎಂಬುದನ್ನು ಬಾಪ್ದಾದಾ ಬಯಸುತ್ತೇವೆ. ಸೇವೆಯನ್ನು ಮಾಡಿ ಆದರೆ ಸೇವೆಯಲ್ಲಿಯೂ ಸಹ ಉಪರಾಂ (ಅದರ ಪ್ರಭಾವದಿಂದ ದೂರವಿರುವುದು).
ಮೆಜಾರಿಟಿ ಮಕ್ಕಳ ಯೋಗವು ಅರ್ಥಾತ್ ನೆನಪಿನ ವಿಷಯದಲ್ಲಿ ಅಭಿರುಚಿ ಅಥವಾ ಸೇವೆಯಲ್ಲಿ ಗಮನವು ಕಡಿಮೆಯಿದೆ - ಇದನ್ನು ಬಾಪ್ದಾದಾ ನೋಡಿದ್ದೇವೆ. ನೆನಪಿಲ್ಲದೆ ಸೇವೆಯು ಹೆಚ್ಚಾಗಿದೆ ಎಂದರೆ ಅದರಲ್ಲಿ ಹದ್ದಿನದು ಬಂದುಬಿಡುತ್ತದೆ, ಉಪರಾಂ ವೃತ್ತಿಯಿರುವುದಿಲ್ಲ. ಹೆಸರು ಮತ್ತು ಸ್ಥಾನ-ಮಾನವು ಬೆರಕೆಯಾಗಿಬಿಡುತ್ತದೆ, ಬೇಹದ್ದಿನ ವೈರಾಗ್ಯವೃತ್ತಿಯು ಕಡಿಮೆಯಾಗುತ್ತದೆ. ಆದ್ದರಿಂದ ಬಾಪ್ದಾದಾ ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರಾದ ನನ್ನ ಮಕ್ಕಳು ಈಗಲೇ ಸದಾ ಸಿದ್ಧರಾಗಲು ಬಯಸುತ್ತೇವೆ - ಏಕೆ? ಸಮಯ ಬಂದಾಗ ಆಗುತ್ತೇವೆಂದು ಕೆಲವರು ಈ ರೀತಿ ಯೋಚಿಸುತ್ತಾರೆ ಆದರೆ ಸಮಯವು ತಮ್ಮ ರಚನೆಯಾಗಿದೆ. ನಿಮ್ಮ ರಚನೆಯನ್ನು ಶಿಕ್ಷಕನನ್ನಾಗಿ ಮಾಡಿಕೊಳ್ಳುತ್ತೀರೇನು? ಬಹಳಕಾಲದ ಲೆಕ್ಕ, ಬಹಳಕಾಲದ ಸಂಪನ್ನತೆಯ, ಬಹಳಕಾಲದ ಪ್ರಾಪ್ತಿಯನ್ನು ಮಾಡಿಸಿದ್ದೇ ಆದರೆ ಸಮಯದ ಸಮೀಪತೆಯ ಪ್ರಮಾಣ ಬಹಳಕಾಲದ ಜಮಾ ಮಾಡಿಕೊಳ್ಳುವುದು ಅವಶ್ಯಕತೆಯಿದೆ ಅನಂತರ ದೂರು ಕೊಡಬೇಡಿ. ಇನ್ನೂ ಬಹಳ ಸಮಯವಿದೆ ಎಂದು ತಿಳಿದುಕೊಂಡೆವು ಎಂದು ಹೇಳಬೇಡಿ. ಈಗಿನಿಂದಲೇ ಬಹಳಕಾಲದ ಗಮನವನ್ನು ಇಟ್ಟುಕೊಳ್ಳಿ. ತಿಳಿಯಿತೆ! ಅಟೆನ್ಷನ್ ಪ್ಲೀಸ್.
ಒಬ್ಬ ಮಗುವಿನಲ್ಲಿಯೂ ಸಹ ಯಾವುದೇ ಒಂದು ಸಬ್ಜೆಕ್ಟ್ನ ಬಲಹೀನತೆಯು ಇರಬಾರದು ಎಂಬುದನ್ನು ಬಾಪ್ದಾದಾ ಬಯಸುತ್ತೇವೆ. ಬ್ರಹ್ಮಾತಂದೆಯೊಂದಿಗೆ ಪ್ರೀತಿಯಿದೆಯಲ್ಲವೆ? ಬ್ರಹ್ಮಾತಂದೆಯ ಜೊತೆ ಪ್ರೀತಿಯ ಮರುಪಾವತಿಯಾಗಿ ಕೊಡುತ್ತೀರಲ್ಲವೆ! ಪ್ರೀತಿಯ ಮರುಪಾವತಿಯಾಗಿ ತನ್ನ ಬಲಹೀನತೆಯನ್ನು ಪರಿಶೀಲನೆ ಮಾಡಿಕೊಂಡು, ಅದನ್ನು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ತನ್ನನ್ನು ತಾನು ಪರಿವರ್ತನೆ ಮಾಡಿಕೊಳ್ಳುವುದೇ ಮರುಪಾವತಿಯಾಗಿದೆ. ಮರುಪಾವತಿ ಕೊಡುವ ಸಾಹಸವಿದೆಯೇ? ಕೈಯಂತೂ ಎತ್ತುತ್ತೀರಿ, ಬಹಳ ಖುಷಿಪಡಿಸುತ್ತೀರಿ. ಕೈಗಳನ್ನು ನೋಡಿ ಬಾಪ್ದಾದಾ ಸಂತೋಷಪಡುತ್ತೇವೆ. ಈಗ ಹೃದಯದಿಂದ ಪಕ್ಕಾ 1% ಸಹ ಕಡಿಮೆಯಿರಬಾರದು, ಪಕ್ಕಾ ವ್ರತವನ್ನು ತೆಗೆದುಕೊಳ್ಳಿ. ರಿಟರ್ನ್ (ಮರುಪಾವತಿ) ಕೊಡಲೇಬೇಕಾಗಿದೆ, ತಮ್ಮನ್ನು ತಾವು ಟರ್ನ್ (ಪರಿವರ್ತನೆ) ಮಾಡಿಕೊಳ್ಳಬೇಕಾಗಿದೆ.
ಈಗ ಶಿವರಾತ್ರಿಯು ಬರುತ್ತಿದೆಯಲ್ಲವೆ! ಬಹಳ ಪ್ರೀತಿಯಿಂದ ಎಲ್ಲಾ ಮಕ್ಕಳು ಉಮ್ಮಂಗದಿಂದ ತಂದೆಯ ಜಯಂತಿ, ತನ್ನ ಜಯಂತಿಯನ್ನು ಆಚರಿಸುವುದಕ್ಕೂ ಬರುತ್ತಿದೆ. ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಸೇವೆಯ ಯೋಜನೆಯನ್ನಂತೂ ಬಹಳ ಚೆನ್ನಾಗಿ ಮಾಡುತ್ತೀರಿ. ಬಾಪ್ದಾದಾರವರಿಗೆ ಸಂತೋಷವಾಗುತ್ತದೆ ಆದರೆ......... ‘ಆದರೆ’ ಎಂದು ಹೇಳುವುದು ಇಷ್ಟವಾಗುವುದಿಲ್ಲ. ಜಗದಂಬಾ ತಾಯಿ ಆದರೆ ಎಂಬ ಶಬ್ಧವನ್ನು ಸಿಂಧಿಭಾಷೆಯಲ್ಲಿ ಹೇಳುತ್ತಿದ್ದರು (ಲೇ-ಕಿನ್) ಕಿನ್ ಎಂದು ಕೊಳಕಿಗೆ ಹೇಳಲಾಗುತ್ತದೆ. ಲೇ-ಕಿನ್ ಆದರೆ ಎಂದು ಹೇಳುವುದು ಚೆನ್ನಾಗಿರುವುದಿಲ್ಲ ಆದರೂ ಹೇಳಬೇಕಾಗುತ್ತದೆ. ಹೇಗೆ ಸೇವೆಯ ಯೋಜನೆಯನ್ನು ಮಾಡಿದ್ದಿರಿ ಮತ್ತು ಮಾಡುತ್ತೀರಿ ಆದರೂ ಈ ವ್ರತವನ್ನು ಕೈಗೊಳ್ಳುವ ಯೋಜನೆಯನ್ನು ಮಾಡಬೇಕು, ಮರುಪಾವತಿ ಕೊಡಲೇಬೇಕು ಏಕೆಂದರೆ ಬಾಪ್ದಾದಾ ಅಥವಾ ಯಾರಾದರೂ ಹೇಗಿದ್ದೀರಿ? ಎಂದು ಕೇಳಿದರೆ ಮೆಜಾರಿಟಿ ಇದೇ ಉತ್ತರ ಬರುತ್ತದೆ - ಬಹಳ ಚೆನ್ನಾಗಿದ್ದೇವೆ ಆದರೆ ಬಾಪ್ದಾದಾ ಎಷ್ಟು ಹೇಳುತ್ತಾರೋ ಅಷ್ಟಿಲ್ಲ. ಈಗ ಉತ್ತರವನ್ನು ಬಾಪ್ದಾದಾರವರು ಏನನ್ನು ಬಯಸುತ್ತೇವೆಯೋ ಅಷ್ಟಿರಬೇಕು. ಬಾಪ್ದಾದಾರವರು ಏನನ್ನು ಬಯಸುತ್ತೇವೆಯೋ ಆ ಲಿಸ್ಟ್ನ್ನು ತೆಗೆಯಿರಿ. ಬಾಪ್ದಾದಾ ಇದನ್ನು ಇಷ್ಟಪಡುತ್ತಾರೆ, ಅದು ಇದೆಯೇ ಅಥವಾ ಇಲ್ಲವೆ? ಪ್ರಪಂಚದವರು ತಾವು ಪೂರ್ವಜರ ಮೂಲಕ ಮುಕ್ತಿಯನ್ನು ಬಯಸುತ್ತಾರೆ, ಕೂಗುತ್ತಿದ್ದಾರೆ - ಮುಕ್ತಿಯನ್ನು ಕೊಡಿ, ಮುಕ್ತಿಯನ್ನು ಕೊಡಿ ಎಂದು. ಎಲ್ಲಿಯವರೆಗೂ ಮೆಜಾರಿಟಿ ಮಕ್ಕಳು ತನ್ನ ಹಳೆಯ ಸಂಸ್ಕಾರ, ಯಾವುದನ್ನು ತಾವು ಸ್ವಭಾವ ಎಂದು ಹೇಳುತ್ತೀರೋ, ಸ್ವಾಭಾವಿಕ ಅಲ್ಲ ಸ್ವಭಾವದಲ್ಲಿ. ಅದರಲ್ಲಿ ಸ್ವಲ್ಪವಾದರೂ ಹಳೆಯದೇನಾದರೂ ಉಳಿದುಕೊಂಡಿದೆ, ಸಮಾಪ್ತಿಯಾಗಿಲ್ಲವೆಂದರೆ ಸರ್ವಆತ್ಮರಿಗೆ ಮುಕ್ತಿ ಸಿಗಲು ಸಾಧ್ಯವಿಲ್ಲ. ಹೇ ಮುಕ್ತಿದಾತನ ಮಕ್ಕಳೇ, ಮಾ||ಮುಕ್ತಿದಾತರೇ ಈಗ ತನ್ನನ್ನು ಮುಕ್ತನನ್ನಾಗಿ ಮಾಡಿಕೊಂಡಿದ್ದೇ ಆದರೆ ಸರ್ವಆತ್ಮಗಳಿಗೆ ಮುಕ್ತಿಯ ಬಾಗಿಲು ತೆರೆದುಬಿಡುತ್ತದೆ ಎಂದು ಬಾಪ್ದಾದಾ ಹೇಳುತ್ತೇವೆ. ಗೇಟಿನ ಬೀಗದಕೈ ಯಾವುದು? ಎಂದು ಹೇಳಿದ್ದೇವಲ್ಲವೆ! ಬೇಹದ್ದಿನ ವೈರಾಗ್ಯ. ಪ್ರವೃತ್ತಿಯವರಿಗೆ ಕಮಲಪುಷ್ಫ ಸಮಾನರಾಗಿ, ಎಲ್ಲವನ್ನು ಮಾಡುತ್ತಾ ಇದ್ದರೂ ನಾನು ಮಾಡುತ್ತಾ ಇದ್ದೇನೆ ಎಂಬುದರಿಂದ ಮುಕ್ತರಾಗಿ, ಭಿನ್ನರಾಗಿ, ಸಾಧನಗಳಿಗೂ ವಶರಾಗದೆ, ಸ್ಥಾನಮಾನಕ್ಕೂ ವಶರಾಗದೆ ಎಲ್ಲಾ ಕಾರ್ಯಗಳನ್ನು ಮಾಡಿ ಎಂದು ಭಾಷಣದಲ್ಲಿ ಹೇಳುತ್ತೀರಿ. ಸ್ವಲ್ಪವಾದರೂ ಸ್ಥಾನಮಾನ ಸಿಗಲಿ ಎಂಬುದು ಮಾಯೆಯ ವಿರೋಧವಾಗಿದೆ. ಭಿನ್ನ ಮತ್ತು ತಂದೆಗೆ ಪ್ರಿಯರೂ ಆಗಬೇಕು - ಕಷ್ಟವೇನು? ಭಿನ್ನ ಮತ್ತು ಪ್ರಿಯರಾಗುವುದು ಯಾರಿಗೆ ಸಹಜವೋಅವರು ಕೈಯೆತ್ತಿ. ಯಾರಿಗೆ ಕಷ್ಟವೆನಿಸುವುದಿಲ್ಲವೋ ಅವರು ಶಿವರಾತ್ರಿಯೊಳಗೆ ಸಂಪನ್ನರಾಗಿಬಿಡುತ್ತೀರಿ. ಕಷ್ಟವಿಲ್ಲವೆಂದರೆ ಅಷ್ಟರೊಳಗೆ ಸಂಪನ್ನರಾಗಲೇಬೇಕು, ಬ್ರಹ್ಮಾತಂದೆಯ ಸಮಾನರಾಗಲೇಬೇಕು. ಸಂಕಲ್ಪದಲ್ಲಿ, ಮಾತಿನಲ್ಲಿ, ಸೇವೆಯಲ್ಲಿ, ಸಂಬಂಧ-ಸಂಪರ್ಕದಲ್ಲಿ, ಎಲ್ಲದರಲ್ಲಿಯೂ ತಂದೆಯ ಸಮಾನ.
ಬ್ರಹ್ಮಾತಂದೆ ಮತ್ತು ದಾದಾ (ತಾತಾ) ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಇವರೊಂದಿಗೆ ಬಹಳ 100%ಗಿಂತಲೂ ಹೆಚ್ಚು ಪ್ರೀತಿಯಿದೆ ಎನ್ನುವವರು ಕೈಯೆತ್ತಿ. ಖುಷಿಪಡಿಸಬೇಡಿ, ಕೇವಲ ಈಗೀಗ ಖುಷಿಪಡಿಸಬೇಡಿ. ಎಲ್ಲರೂ ಕೈಯೆತ್ತಿದ್ದಾರೆ. ಟಿ.ವಿ.ಯಲ್ಲಿ ರೆಕಾರ್ಡ್ ಮಾಡುತ್ತಿದ್ದೀರಲ್ಲವೆ! ಶಿವರಾತ್ರಿಯಂದು ಟಿ.ವಿ.ಯನ್ನು ನೋಡುತ್ತೇವೆ ಮತ್ತು ಲೆಕ್ಕ ತೆಗೆದುಕೊಳ್ಳುತ್ತೇವೆ. ಸರಿಯೇ? ಸ್ವಲ್ಪವೂ ಸಮಾನತೆಯಲ್ಲಿ ಅಂತರವಿರಬಾರದು. ಪ್ರೀತಿಯ ಹಿಂದೆ ಬಲಿಹಾರಿಯಾಗುವುದು ದೊಡ್ಡಮಾತೇನು? ಪ್ರಪಂಚದವರಾದರೂ ಅಶುದ್ಧ ಪ್ರೀತಿಯ ಹಿಂದೆ ಜೀವನವನ್ನು ಕೊಡಲು ಸಿದ್ಧರಿರುತ್ತಾರೆ, ಬಾಪ್ದಾದಾರವರಾದರೂ ನಿಮ್ಮಲ್ಲಿನ ಕೊಳಕನ್ನು (ಬೇಡವಾದದ್ದನ್ನು) ನನಗೆ ಕೊಟ್ಟುಬಿಡಿ ಅಷ್ಟೆ ಎಂದು ಕೇಳಿಕೊಳ್ಳುತ್ತೇವೆ. ಒಳ್ಳೆಯ ವಸ್ತುವನ್ನು ಕೊಡಬೇಡಿ, ಕೊಳಕನ್ನು ಕೊಡಿ. ಬಲಹೀನತೆ, ಕಡಿಮೆಗಳು ಏನಿದೆ? ಕೊಳಕನ್ನು ಬಲಿಕೊಡುವುದು ಯಾವ ದೊಡ್ಡಮಾತು! ಪರಿಸ್ಥಿತಿಗಳೆಲ್ಲವೂ ಸಮಾಪ್ತಿಯಾಗುತ್ತದೆ, ಸ್ವಸ್ಥಿತಿ ಶ್ರೇಷ್ಠವಾಗುತ್ತದೆ. ಪರಿಸ್ಥಿತಿ ಇದಾಗಿತ್ತು ಎಂದು ಹೇಳುತ್ತೀರಲ್ಲವೆ. ಅಲುಗಾಡಿಸುವ ಪರ-ಸ್ಥಿತಿಯ ಹೆಸರೇ ಇರಬಾರದು. ಸ್ವ-ಸ್ಥಿತಿಯು ಶಕ್ತಿಶಾಲಿಯಾಗಿರಲಿ, ಸಮಾಪ್ತಿಯ ಪರದೆಯನ್ನು ತೆರೆದಿದ್ದೇ ಆದರೆ ಏನು ಕಂಡುಬರಬೇಕು? ಹೊಳೆಯುತ್ತಿರುವಂತಹ ಸೂಕ್ಷ್ಮದೇವತೆ ಕಂಡುಬರಲಿ. ಎಲ್ಲಾ ಮಕ್ಕಳು ಹೊಳೆಯುತ್ತಿರುವುದೇ ಕಂಡುಬರಲಿ ಆದ್ದರಿಂದ ಇದುವರೆಗೂ ಪರದೆಯನ್ನು ತೆರೆದಿಲ್ಲ. ಪ್ರಪಂಚದವರು ಪರದೆಯನ್ನು ತೆರೆಯಿರಿ, ಪರದೆಯನ್ನು ತೆರೆಯಿರಿ ಎಂದು ಚೀರಾಡುತ್ತಿದ್ದಾರೆ ಅಂದಾಗ ನಿಮ್ಮ ಯೋಜನೆಯನ್ನು ನೀವೇ ಮಾಡಿಕೊಳ್ಳಿ. ಪ್ಲಾನ್ ಮಾಡಿರುವುದನ್ನು ಕೊಟ್ಟರೆ ಅನೇಕ ಮಾತುಗಳು ಬರುತ್ತವೆ, ತಮ್ಮ ಪ್ಲಾನನ್ನು ತಮ್ಮ ಸಾಹಸದಿಂದಲೇ ಮಾಡಿಕೊಳ್ಳಿ. ಧೃಡತೆಯ ಬೀಗದ ಕೈಯನ್ನು ಹಾಕಿದ್ದೇ ಆದರೆ ಸಫಲತೆಯು ಸಿಗುತ್ತದೆ. ಧೃಡಸಂಕಲ್ಪವನ್ನು ಮಾಡಿದ್ದೇ ಆದರೆ ಬಾಪ್ದಾದಾ ಖುಷಿಯಾಗುತ್ತೇವೆ - ವಾಹ್! ಮಕ್ಕಳೇ ವಾಹ್! ಎಂದು. ಧೃಡಸಂಕಲ್ಪವನ್ನು ಮಾಡಿದಿರಿ ಆದರೆ ಧೃಡತೆಯಲ್ಲಿ ಸ್ವಲ್ಪ-ಸ್ವಲ್ಪ ಹುಡುಗಾಟಿಕೆಯು ಬೆರಕೆಯಾಗಿಬಿಡುತ್ತದೆ ಆದ್ದರಿಂದ ಸಫಲತೆಯೂ ಸಹ ಕೆಲವೊಮ್ಮೆ ಅರ್ಧ, ಕೆಲವೊಮ್ಮೆ ಮುಕ್ಕಾಲು ಪರ್ಸೆಂಟೇಜ್ ಆಗುತ್ತದೆ. ಹೇಗೆ ಪ್ರೀತಿಯು 100% ಇದೆಯೋ ಹಾಗೆಯೇ ಪುರುಷಾರ್ಥದಲ್ಲಿ ಸಂಪನ್ನತೆಯಲ್ಲಿಯೂ ಸಹ 100% ಇರಲಿ. ಇನ್ನೂ ಹೆಚ್ಚಾಗಿಯೇ ಇರಲಿ ಆದರೆ ಕಡಿಮೆಯಿರಬಾರದು. ಒಪ್ಪಿಗೆಯೇ? ಒಪ್ಪಿಗೆಯೇ? ಶಿವರಾತ್ರಿಯಂದು ಹೆಗ್ಗಳಿಕೆಯನ್ನು ತೋರಿಸುತ್ತೀರಲ್ಲವೆ! ಆಗಲೇಬೇಕು. ನಾವಾಗಲಿಲ್ಲವೆಂದರೆ ಯಾರಾಗುತ್ತಾರೆ! ಈ ನಿಶ್ಚಯವನ್ನಿಟ್ಟುಕೊಳ್ಳಿ - ನಾವೇ ಆಗಿದ್ದೆವು, ನಾವೇ ಆಗಿದ್ದೇವೆ, ಮತ್ತೆ ನಾವೇ ಆಗುತ್ತೇವೆ. ಈ ನಿಶ್ಚಯವು ವಿಜಯಿಯನ್ನಾಗಿ ಮಾಡಿಬಿಡುತ್ತದೆ. ಪರ-ದರ್ಶನ ಮಾಡಬೇಡಿ. ತನ್ನನ್ನೇ ನೋಡಿಕೊಳ್ಳಿ. ಕೆಲವು ಮಕ್ಕಳು ಆತ್ಮೀಯ ವಾರ್ತಾಲಾಪವನ್ನು ಮಾಡುತ್ತಾರೆ, ಇವರನ್ನು ಸ್ವಲ್ಪ ಸರಿಮಾಡಿಬಿಡಿ ನಂತರ ನಾನು ಸರಿಯಾಗಿಬಿಡುತ್ತೇನೆ. ಸ್ವಲ್ಪ ಬದಲಾವಣೆ ಮಾಡಿ ಆಗ ನಾನು ಬದಲಾವಣೆಯಾಗುತ್ತೇನೆ ಆದರೆ ಅವರೂ ಬದಲಾಗುವುದಿಲ್ಲ, ನೀವೂ ಬದಲಾಗುವುದಿಲ್ಲ. ನಿಮ್ಮನ್ನು ನೀವು ಬದಲಾವಣೆ ಮಾಡಿಕೊಂಡಿದ್ದೇ ಆದರೆ ಅವರು ಬದಲಾಗಿಬಿಡುತ್ತಾರೆ. ಈ ರೀತಿಯಿದ್ದರೆ ಹೀಗಾಗುತ್ತದೆ ಎಂದು ಯಾವುದೇ ಆಧಾರವನ್ನಿಟ್ಟುಕೊಳ್ಳಬೇಡಿ. ನಾನು ಮಾಡಬೇಕಾಗಿದೆ, ಒಳ್ಳೆಯದು.
ಒಳ್ಳೆಯದು. ಯಾರು ಮೊದಲನೆಯ ಬಾರಿಗೆ ಬಂದಿದ್ದೀರಿ ಅವರು ಕೈಯೆತ್ತಿ. ಯಾರು ಮೊದಲನೆಯ ಬಾರಿಗೆ ಬಂದಿದ್ದೀರಿ, ಕಡಿಮೆ ಸಮಯದಲ್ಲಿ ಬಂದಿದ್ದೀರಿ ಆದ್ದರಿಂದ ತೀವ್ರಪುರುಷಾರ್ಥ ಮಾಡಿ, ಲಾಸ್ಟ್ ಸೋ ಫಾಸ್ಟ್, ಫಾಸ್ಟ್ ಸೋ ಫಸ್ಟ್ ಎಂದು ವಿಶೇಷವಾಗಿ ಬಾಪ್ದಾದಾ ಹೇಳುತ್ತೇವೆ ಏಕೆಂದರೆ ಈಗ ಮ್ಯುಸಿಕಲ್ ಚೇರ್ (ಸ್ಥಾನಗಳನ್ನು ಹಿಡಿದುಕೊಳ್ಳುವ ಆಟ) ಆಗಿದೆ, ಇದರಲ್ಲಿ ಯಾರದು ಗೆಲುವಿದೆ? ಎಂಬುದರ ಫಲಿತಾಂಶವು ಹೊರಬಂದಿಲ್ಲ. ತಡವಾಗಿ ಬಂದಿದ್ದೀರಿ ಆದರೆ ವೇಗವಾಗಿ ಹೋಗುವುದರಿಂದ ತಲುಪಿಬಿಡುತ್ತೀರಿ. ಕೇವಲ ತಮ್ಮನ್ನು ತಾವು ಅಮೃತವೇಳೆಯಲ್ಲಿ ಅಮರಭವದ ವರದಾನದ ನೆನಪು ತರಿಸಿಕೊಳ್ಳಿ. ಒಳ್ಳೆಯದು- ಕೆಲವರು ದೂರದಿಂದ, ಕೆಲವರು ಸಮೀಪದಿಂದ ಬಂದಿದ್ದೀರಿ. ಭಲೆ ಬನ್ನಿ, ನಿಮ್ಮ ಮನೆಯಾಗಿದೆ, ಸಂಘಟನೆ ಚೆನ್ನಾಗಿರುತ್ತದೆ ಎಂದು ಬಾಪ್ದಾದಾ ಹೇಳುತ್ತೇವೆ. ಟಿ.ವಿ.ಯಲ್ಲಿ ನೋಡುತ್ತೀರಲ್ಲವೆ, ತುಂಬಿರುವಂತಹ ಸಭೆಯನ್ನು ನೋಡುವುದಕ್ಕೆ ಚೆನ್ನಾಗಿರುತ್ತದೆಯಲ್ಲವೆ. ಒಳ್ಳೆಯದು- ಸದಾ ಸಿದ್ಧರೆ? ಎವರೆಡಿ (ಸದಾಸಿದ್ಧ) ಯ ಪಾಠವನ್ನು ಓದುತ್ತೀರಲ್ಲವೆ! ಒಳ್ಳೆಯದು. ಈಗ ಏನು ಮಾಡಬೇಕು?
ಒಳ್ಳೆಯದು. ಮಧುಬನದವರು ಕೈಯೆತ್ತಿರಿ. ಬಹಳಷ್ಟು ಮಂದಿ ಇದ್ದೀರಿ. ಮಧುಬನದವರು ಮನೆಮಕ್ಕಳಾಗಿದ್ದೀರಿ. ಅನ್ಯರು ಅತಿಥಿಗಳಾಗಿ ಬರುತ್ತಾರೆ ಮತ್ತು ಹೊರಟುಹೋಗುತ್ತಾರೆ ಆದರೆ ಮಧುಬನದವರು ಮನೆಮಕ್ಕಳಾಗಿದ್ದೀರಿ, ಸಮೀಪವೂ ಇದ್ದೀರಿ ಪ್ರಿಯರೂ ಆಗಿದ್ದೀರಿ. ಮಧುಬನದವರನ್ನು ನೋಡಿ ಎಲ್ಲರೂ ಖುಷಿಪಡುತ್ತಾರಲ್ಲವೆ. ಯಾವುದೇ ಸ್ಥಾನಕ್ಕೆ ಮಧುಬನದವರು ಹೋಗುತ್ತಾರೆಂದರೆ ಎಲ್ಲರೂ ನಿಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ - ವಾಹ್! ಮಧುಬನದಿಂದ ಬಂದಿದ್ದಾರೆ! ಏಕೆಂದರೆ ಮಧುಬನದ ಹೆಸರನ್ನು ಕೇಳಿದ ತಕ್ಷಣ ಮಧುಬನದ ತಂದೆಯ ನೆನಪು ಬಂದುಬಿಡುತ್ತಾರೆ. ಆದ್ದರಿಂದ ಮಧುಬನದವರ ಮಹತ್ವಿಕೆಯಿದೆ. ಮಹತ್ವವಿದೆಯೇ? ಖುಷಿಯಾಗುತ್ತೀರಲ್ಲವೆ! ಇಂತಹ ಪ್ರೇಮಪೂರ್ವಕ ಪಾಲನೆಯ ಸ್ಥಾನವು ಕೋಟಿಯಲ್ಲಿ ಕೆಲವರಿಗೇ ಸಿಗುತ್ತದೆ. ಮಧುಬನದಲ್ಲಿಯೇ ಇರಬೇಕೆಂದು ಎಲ್ಲರೂ ಬಯಸುತ್ತಾರೆ ಆದರೆ ಇರಲು ಸಾಧ್ಯವೇ! ತಾವಂತೂ ಮಧುಬನದಲ್ಲಿಯೇ ಇದ್ದೀರಿ ಅಂದಾಗ ಎಷ್ಟು ಚೆನ್ನಾಗಿದೆ! ಮಧುಬನದವರನ್ನು ಎಂದಿಗೂ ಮರೆಯುವುದಿಲ್ಲ. ನಮ್ಮನ್ನು ಕೇಳಿಯೇ ಇಲ್ಲ ಎಂದು ತಿಳಿಯುತ್ತಾರೆ ಆದರೆ ಬಾಪ್ದಾದಾ ಸದಾ ಹೃದಯದಲ್ಲಿ ತಮ್ಮನ್ನು ವಿಚಾರಿಸುತ್ತೇವೆ. ಮೊದಲು ಮಧುಬನದವರು. ಮಧುಬನದವರೇ ಇಲ್ಲವೆಂದರೆ ಬರುವುದಾದರೂ ಎಲ್ಲಿ! ಸೇವೆಗೆ ನಿಮಿತ್ತರಾಗಿದ್ದೀರಲ್ಲವೆ! ಎಷ್ಟೇ ಸೇವಾಧಾರಿಗಳು ಸಿಗಲಿ ಆದರೂ ಸಹ ಮಧುಬನದವರು ಅಡಿಪಾಯವಾಗಿದ್ದೀರಿ. ಅಂದಾಗ ಯಾರು ಮೇಲೆ ಜ್ಞಾನಸರೋವರದಲ್ಲಿ, ಪಾಂಡವಭವನದಲ್ಲಿದ್ದಾರೆಯೋ ಅವರಿಗೆ ಬಾಪ್ದಾದಾರವರ ಹೃದಯದ ಆಶೀರ್ವಾದಗಳು ಮತ್ತು ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ಹೃದಯದ ಆಶೀರ್ವಾದಗಳು ಮತ್ತು ನೆನಪು-ಪ್ರೀತಿಯನ್ನು ತಿಳಿಸುತ್ತಿದ್ದೇವೆ. ಮಧುಬನದಲ್ಲಿ ಇಲ್ಲಿ ಟೋಲಿಯನ್ನು ಕೊಡುತ್ತೀರೆಂದರೆ ಮೇಲೆ ಸಿಗುತ್ತದೆಯೇ? ಮಧುಬನದವರಿಗೆ ಟೋಲಿಯೂ ಸಿಗುತ್ತದೆ, ಪ್ರೀತಿಯೂ ಸಿಗುತ್ತದೆ, ಎರಡೂ ಸಿಗುತ್ತದೆ. ಒಳ್ಳೆಯದು.
ಆಸ್ಪತ್ರೆಯವರೆಲ್ಲರೂ ಚೆನ್ನಾಗಿದ್ದೀರಾ ಏಕೆಂದರೆ ಆಸ್ಪತ್ರೆಯದೂ ಸಹ ವಿಶೇಷ ಪಾತ್ರವಿದೆ. ಮಿಲನಕ್ಕಾಗಿ ಕೆಳಗಡೆ ಬರುತ್ತಾರೆ, ಕೆಲವರೇ ಬರುತ್ತಾರೆ. ಆಸ್ಪತ್ರೆಯವರೂ ಸಹ ಬಹಳ ಚೆನ್ನಾಗಿ ಸೇವೆ ಮಾಡುತ್ತಿದ್ದೀರಿ. ನೋಡಿ, ಸಮಯದಲ್ಲಿ ಆಸ್ಪತ್ರೆಯೇ ಕೆಲಸಕ್ಕೆ ಬರುತ್ತದೆಯಲ್ಲವೆ ಮತ್ತು ಯಾವಾಗಿನಿಂದ ಆಸ್ಪತ್ರೆಯು ತೆರೆದಿದೆಯೋ ಆಗಿನಿಂದಲೂ ಎಲ್ಲರ ದೃಷ್ಟಿಯಲ್ಲಿ ಈ ಬ್ರಹ್ಮಾಕುಮಾರಿಯರು ಕೇವಲ ಜ್ಞಾನವನ್ನು ಕೊಡುವುದಿಲ್ಲ ಆದರೆ ಸಮಯದಲ್ಲಿ ಸಹಯೋಗವನ್ನೂ ಕೊಡುತ್ತಾರೆ, ಸಮಾಜಸೇವೆಯನ್ನು ಮಾಡುತ್ತಾರೆ ಎಂಬುದು ಬಂದಿದೆ. ಅಂದಾಗ ಆಸ್ಪತ್ರೆಯ ನಂತರ ಅಬುಪರ್ವತದಲ್ಲಿ ಈ ವಾಯುಮಂಡಲವು ಪರಿವರ್ತನೆಯಾಗಿಬಿಡುತ್ತದೆ. ಮೊದಲು ಯಾವ ದೃಷ್ಟಿಯಿಂದ ನೋಡುತ್ತಿದ್ದರು, ಈಗ ಎಲ್ಲರೂ ಆ ದೃಷ್ಟಿಯಿಂದ ನೋಡುವುದಿಲ್ಲ, ಈಗ ಸಹಯೋಗದ ದೃಷ್ಟಿಯಿಂದ ನೋಡುತ್ತಾರೆ. ಜ್ಞಾನವನ್ನು ಒಪ್ಪಲಿ, ಬಿಡಲಿ ಆದರೆ ಸಹಯೋಗದ ದೃಷ್ಟಿಯಿಂದ ನೋಡುತ್ತಾರೆ ಅಂದಮೇಲೆ ಆಸ್ಪತ್ರೆಯವರು ಸೇವೆ ಮಾಡಿದಿರಲ್ಲವೆ! ಚೆನ್ನಾಗಿದೆ. ಒಳ್ಳೆಯದು- ಇಂದಿನ ಈ ಮಾತು ನೆನಪಿರಲಿ - ಸಂಪನ್ನರಾಗಲೇಬೇಕಾಗಿದೆ. ಏನೇ ಆಗಲಿ ಸಂಪನ್ನರಾಗಲೇಬೇಕಾಗಿದೆ. ಈ ಗುಂಗಿರಲಿ - ಸಂಪನ್ನರಾಗಬೇಕು, ಸಮಾನರಾಗಬೇಕು. ಒಳ್ಳೆಯದು.
ನಾಲ್ಕಾರೂ ಕಡೆಯ ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರು ಭಾಗ್ಯವಂತರು, ಭಗವಂತನ ಮಕ್ಕಳಾದ ಶ್ರೇಷ್ಠಾತ್ಮಗಳು, ಸದಾ ತೀವ್ರಪುರುಷಾರ್ಥದ ಮೂಲಕ ಏನು ಯೋಚಿಸುವಿರೋ ಅದನ್ನು ಮಾಡುವವರು, ಶ್ರೇಷ್ಠವಾಗಿ ಆಲೋಚಿಸುವುದು, ಶ್ರೇಷ್ಠವಾಗಿ ಮಾಡುವುದು, ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನ ಮಾಡಿಕೊಳ್ಳುವಂತಹ ವಿಶೇಷ ಆತ್ಮಗಳಿಗೆ ಸದಾ ಬಹಳಕಾಲದ ಪುರುಷಾರ್ಥದ ಮೂಲಕ ರಾಜ್ಯಭಾಗ್ಯ ಮತ್ತು ಪೂಜ್ಯರಾಗುವಂತಹ ಶ್ರೇಷ್ಠ ಆತ್ಮಗಳಿಗೆ ಸದಾ ತಂದೆಯ ಸ್ನೇಹದ ರಿಟರ್ನ್ ಆಗಿ ತಮ್ಮನ್ನು ಟರ್ನ್ ಮಾಡಿಕೊಳ್ಳುವಂತಹ ನಂಬರ್ವನ್, ವಿನ್ ಆಗುವಂತಹ ಭಾಗ್ಯವಂತ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
| ವರದಾನ: |
ವರದಾನ: ವಿಶ್ವ ಕಲ್ಯಾಣಕಾರಿಯ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿ ವಿನಾಶದ ಲೀಲೆಯನ್ನು ನೋಡುವಂತಹ ಸಾಕ್ಷಿದೃಷ್ಟಾ ಭವ ಅಂತಿಮ ಸಮಯದ ವಿನಾಶದ ಲೀಲೆಯನ್ನು ನೋಡಲು ವಿಶ್ವಕಲ್ಯಾಣಕಾರಿಯ ಶ್ರೇಷ್ಠ ಸ್ಥಿತಿ ಬೇಕಾಗಿದೆ. ಯಾವ ಸ್ಥಿತಿಯಲ್ಲಿ ಸ್ಥಿತರಾಗುವುದರಿಂದ ದೇಹದ ಸರ್ವ ಆಕರ್ಷಣಿ ಅರ್ಧಾತ್ ಸಂಬಂಧ, ಪದಾರ್ಧ, ಸಂಸ್ಕಾರ, ಪ್ರಕೃತಿಯ ಹಲ್ಲ್ನ ಆಕರ್ಷಣೆ ಸಮಾಪ್ತಿಯಾಗಿಬಿಡುತ್ತದೆ. ಯಾವಾಗ ಇಂತಹ ಸ್ಥಿತಿಯಾಗುತ್ತದೆ ಆಗ ಸಾಕ್ಷಿದೃಷ್ಯ ಆಗಿ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾಗಿ ಶಾಂತಿಯ ಕಿರಣಗಳನ್ನು ಸರ್ವ ಆತ್ಮಗಳಿಗಾಗಿ ಕೊಡಬಹುದು. |
| ಸ್ಲೋಗನ್: | ಸ್ಲೋಗನ್: ಶಕ್ತಿಶಾಲಿಯಾದರೆ ಮಾಯೆಯ ಫೋರ್ಸ್(ಪ್ರವಾಹ) ಸಮಾಪ್ತಿಯಾಗುವುದು. |
ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ವರದಾತ ತಂದೆ ಮತ್ತು ನಾವು ವರದಾನಿ ಆತ್ಮರು ಇಬ್ಬರು ಕಂಬೈಂಡ್ ಆಗಿದ್ದೇವೆ. ಈ ಸ್ಮೃತಿ ಸದಾ ಇದ್ದಾಗ ಪವಿತ್ರತೆಯ ಛತ್ರಛಾಯೆ ಸ್ವತಃವಿರುತ್ತದೆ ಏಕೆಂದರೆ ಎಲ್ಲಿ ಸರ್ವ ಶಕ್ತಿವಂತ ತಂದೆಯಿರುತ್ತಾರೆ ಅಲ್ಲಿ ಅಪವಿತ್ರತೆ ಸ್ವಪ್ನದಲ್ಲಿಯೂ ಬರಲು ಸಾಧ್ಯವಿಲ್ಲ. ಸದಾ ತಂದೆ ಮತ್ತು ನೀವು ಯುಗಲ್ ರೂಪದಲ್ಲಿರಿ, ಒಂಟಿಯಲ್ಲ. ಒಂಟಿಯಾಗಿದ್ದರೆ ಪವಿತ್ರತೆಯ ಸುಮಂಗಲತೆ ಹೊರಟು ಹೋಗಿ ಬಿಡುತ್ತದೆ.