| 25/11/26 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ – ಶಿವ ತಂದೆಯ ಮಕ್ಕಳಾಗಿ ಯಾವುದೇ ತಪ್ಪು ಮಾಡಬಾರದು, ತಪ್ಪು ಮಾಡಿದರೆ ತಂದೆಯ ಹೆಸರನ್ನು ಕೆಡಿಸುತ್ತೀರಿ” | |
| ಪ್ರಶ್ನೆ: | ಎಲ್ಲರಿಗಿಂತ ದೊಡ್ಡ ಪ್ರವೃತ್ತಿ ಯಾರದಾಗಿದೆ ಮತ್ತು ಹೇಗೆ? |
| ಉತ್ತರ: | ಶಿವ ತಂದೆಯದು ಎಲ್ಲರಿಗಿಂತ ದೊಡ್ಡ ಪ್ರವೃತ್ತಿಯಾಗಿದೆ. ಭಕ್ತಿಯಲ್ಲಿ ಎಲ್ಲರೂ ತ್ವಮೇವ ಮಾತಾಶ್ಚ ಪಿತಾ.... ಎಂದು ಕರೆಯುತ್ತಾರೆ ಅಂದಮೇಲೆ ಪ್ರವೃತ್ತಿಯವರಾದರಲ್ಲವೆ. ಆದರೆ ಎಲ್ಲಿಯವರೆಗೆ ಅವರು ಸಾಕಾರದಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಯಾವುದೇ ಪ್ರವೃತ್ತಿಯಿರುವುದಿಲ್ಲ ಏಕೆಂದರೆ ಆತ್ಮರು ಮೇಲೆ ತಂದೆಯ ಜೊತೆಯಲ್ಲಿ ನಿರಾಕಾರಿ ರೂಪದಲ್ಲಿರುತ್ತಾರೆ. ಯಾವಾಗ ಸಾಕಾರದಲ್ಲಿ ಬಂದು ಇವರಲ್ಲಿ ಪ್ರವೇಶ ಮಾಡುತ್ತಾರೆಯೋ ಆಗ ಎಲ್ಲರಿಗಿಂತ ದೊಡ್ಡ ಪ್ರವೃತ್ತಿಯಾಗುತ್ತದೆ. |
ಓಂ ಶಾಂತಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದವರು ಇದನ್ನು ತಿಳಿದುಕೊಂಡಿಲ್ಲ - ಬೇಹದ್ದಿನ ತಂದೆಯು ನಿವೃತ್ತಿಯವರೇ ಅಥವಾ ಪ್ರವೃತ್ತಿಯವರೇ? ಎಂದು. ತಂದೆಯು ಬರುತ್ತಾರೆಂದರೆ ಮಕ್ಕಳೇ, ಮಕ್ಕಳೇ ಎಂದು ಕರೆಯುತ್ತಾರೆ ಏಕೆಂದರೆ ಅವರನ್ನು ತ್ವಮೇವ ಮಾತಾಶ್ಚ ಪಿತಾ ಎಂದು ಕರೆಯಲಾಗುತ್ತದೆ ಆದ್ದರಿಂದ ಅವರೂ ಗೃಹಸ್ಥಿಯಾಗುತ್ತಾರೆ. ಅಲ್ಲಂತೂ ಎಲ್ಲರೂ ತಿಳಿದುಕೊಂಡಿರುತ್ತಾರೆ - ಶಿವನು ನಿರಾಕಾರನಾಗಿದ್ದಾರೆ. ಭಲೆ ಶಿವನ ಆಕಾರವಿದೆ ಆದರೆ ಮರಿ ಮಕ್ಕಳು ಇಲ್ಲ. ಒಂದುವೇಳೆ ಇದ್ದರೂ ಸಹ ಎಲ್ಲಾ ಆತ್ಮರೂ ಮಕ್ಕಳಾಗಿದ್ದಾರೆ, ಎಲ್ಲರೂ ಒಂದೇ ರೀತಿಯ ಮಕ್ಕಳಿದ್ದಾರೆ ಆದ್ದರಿಂದ ಕೆಲವರು ತಿಳಿದುಕೊಳ್ಳುತ್ತಾರೆ - ಎಲ್ಲರೂ ಪರಮಾತ್ಮನಾಗಿದ್ದಾರೆ, ಆತ್ಮವೂ ಬಿಂದು ರೂಪವಾಗಿದೆ, ಪರಮಾತ್ಮನೂ ಬಿಂದು ರೂಪವಾಗಿದ್ದಾರೆ. ತ್ವಮೇವ ಮಾತಾಶ್ಚ ಪಿತಾ.. ಎಂದು ಗೃಹಸ್ಥಿಗಳೇ ಹಾಡುತ್ತಾರೆ. ಸನ್ಯಾಸಿಗಳು ನಿವೃತ್ತಿ ಮಾರ್ಗದವರು ಪರಮಾತ್ಮನನ್ನು ಬ್ರಹ್ಮತತ್ವವೆಂದು ಹೇಳಿಬಿಡುತ್ತಾರೆ, ಅವರು ತ್ವಮೇವ ಮಾತಾಶ್ಚ ಪಿತಾ ಎಂದು ಹೇಳುವುದಿಲ್ಲ. ಅವರ ಮಾರ್ಗವೇ ಬೇರೆಯಾಗಿದೆ. ಲಕ್ಷ್ಮೀ-ನಾರಾಯಣರ ಮುಂದೆ ಹೋಗಿ ತ್ವಮೇವ ಮಾತಾಶ್ಚ ಪಿತಾ ಅಥವಾ ಅಚ್ಯುತಂ, ಕೇಶವಂ ಎಂದು ತಪ್ಪಾಗಿ ಹಾಡುತ್ತಾರೆ. ಭಕ್ತಿ ಮಾರ್ಗದಲ್ಲಿ ಬಹಳಷ್ಟು ಮಹಿಮೆಯನ್ನು ಹಾಡುತ್ತಾರೆ. ವಾಸ್ತವದಲ್ಲಿ ಪರಮಾತ್ಮನು ತಂದೆಯಾಗಿದ್ದಾರೆ. ಅವರಿಂದ ಆಸ್ತಿಯು ಹೇಗೆ ಮತ್ತು ಏನು ಸಿಗುವುದು? ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಅವರು ತಂದೆಯೂ ಆಗಿದ್ದಾರೆ ದಾದಾರವರೂ ಆಗಿದ್ದಾರೆ, ದೊಡ್ಡ ತಾಯಿಯೂ ಆಗಿದ್ದಾರೆ, ಪ್ರಜಾಪಿತನೂ ಆಗಿದ್ದಾರೆ, ಇವರ ಮುಖಾಂತರ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮ್ಮ ತಂದೆಯೂ ಆಗಿದ್ದೇನೆ ಮತ್ತೆ ನಾನೂ ಸಹ ಪ್ರವೃತ್ತಿ ಮಾರ್ಗದಲ್ಲಿ ಬರಬೇಕಾಗುತ್ತದೆ. ಇವರು (ಬ್ರಹ್ಮಾ) ನನ್ನ ಪತ್ನಿಯೂ ಆಗಿದ್ದಾರೆ, ಮಗನೂ ಆಗಿದ್ದಾರೆ. ಯಾವಾಗ ಇವರಲ್ಲಿ ಪ್ರವೇಶ ಮಾಡುತ್ತೇನೆಯೋ ಆಗ ಪ್ರವೃತ್ತಿಯವನಾಗಿ ಬಿಡುತ್ತೇನೆ. ನನ್ನನ್ನೇ ಪರಮಪಿತ, ಪರಮ ಶಿಕ್ಷಕ, ಪರಮ ಸದ್ಗುರುವೆಂದು ಹೇಳುತ್ತಾರೆ. ಗುರುಗಳು ಮುಕ್ತಿಗಾಗಿ ಮಾರ್ಗದರ್ಶನ ನೀಡುತ್ತಾರೆ ಆದರೆ ಅದೆಲ್ಲವೂ ಅಸತ್ಯವಾಗಿದೆ. ಇವರು ಸತ್ಯವಾಗಿದ್ದಾರೆ, ಆಂಗ್ಲ ಭಾಷೆಯಲ್ಲಿ ಪರಮಾತ್ಮನಿಗೆ ಟ್ರುಥ್ ಎಂದು ಹೇಳುತ್ತಾರೆ ಅಂದಾಗ ಆ ಸತ್ಯ ತಂದೆಯು ಬಂದು ಯಾವ ಸತ್ಯವನ್ನು ತಿಳಿಸುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ನನಗೂ ಮೊದಲು ತಿಳಿದಿರಲಿಲ್ಲ ಅಂದಮೇಲೆ ಇದು ಹೊಸ ಮಾತಾಯಿತಲ್ಲವೆ. ಅವರು ಜ್ಞಾನ ಸಾಗರ ಸತ್ಯ ಖಂಡವನ್ನು ಸ್ಥಾಪನೆ ಮಾಡುವವರಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಎಂದೋ ಸತ್ಯವನ್ನು ತಿಳಿಸಿ ಹೋಗಿದ್ದಾರೆ ಆದ್ದರಿಂದಲೇ ಗಾಯನವಿದೆ. ಸತ್ಯ ಖಂಡಕ್ಕೆ ಹೆವೆನ್ ಎಂದು ಹೇಳುತ್ತಾರೆ. ಅಲ್ಲಿ ದೈವೀ ಸಾಮ್ರಾಜ್ಯವನ್ನು ತೋರಿಸುತ್ತಾರೆ. ಈಗ ಇದು ಹಳೆಯ ಪ್ರಪಂಚವಾಗಿದೆ, ಮತ್ತೆ ಹೊಸ ಪ್ರಪಂಚವಾಗಲಿದೆ. ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳುವುದು. ಸ್ಥಾಪನೆಯ ಸಮಯದಲ್ಲಿ ವಿನಾಶವೆಂದು ಗಾಯನವಿದೆ, ಮಾಡಿ-ಮಾಡಿಸುವವರು ಪರಮಾತ್ಮನೆಂದು ಗಾಯನವಿದೆ. ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ. ಹೇಗೆ ಮಾಡಿಸುತ್ತಾರೆ? ಅದನ್ನು ಸ್ವಯಂ ಅವರೇ ಬಂದು ತಿಳಿಸುತ್ತಾರೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಪರಮಾತ್ಮನು ಮಾಡಿ-ಮಾಡಿಸುವವರೆಂದು ಹೇಳುತ್ತಾರೆ ನಂತರ ನಾಟಕದ ಬಗ್ಗೆಯೂ ಅರಿವಾಯಿತು. ಕಲಿಯುಗದ ಅಂತ್ಯ, ಸತ್ಯಯುಗದ ಆದಿ.... ಈ ಸಂಗಮವನ್ನೇ ಶ್ರೇಷ್ಠವೆಂದು ಒಪ್ಪಬೇಕಾಗಿದೆ. ಕಲಿಯುಗದ ನಂತರ ಸತ್ಯಯುಗವು ಬರುತ್ತದೆ ಮತ್ತೆ ಅಲ್ಲಿಂದ ಕೆಳಗಿಳಿಯುತ್ತಲೇ ಹೋಗುತ್ತಾರೆ. ಸ್ವರ್ಗ-ನರಕವೆಂದು ಗಾಯನವಿದೆ. ಮನುಷ್ಯರು ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದೇ ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಯಾವಾಗಲೋ ಸ್ವರ್ಗವಾಸಿಯಾಗಿದ್ದರು. ಇದನ್ನು ವಿಶೇಷವಾಗಿ ಭಾರತವಾಸಿಗಳೇ ಹೇಳುತ್ತಾರೆ ಏಕೆಂದರೆ ಭಾರತವು ಎಲ್ಲದಕ್ಕಿಂತ ಪ್ರಾಚೀನವಾಗಿದೆ ಎಂಬುದು ತಿಳಿದಿದೆ, ಅಂದಮೇಲೆ ಅವಶ್ಯವಾಗಿ ಇದೇ ಮತ್ತೆ ಸ್ವರ್ಗವಾಗುವುದು. ಎಷ್ಟು ಸಹಜ ಮಾತುಗಳಾಗಿವೆ ಆದರೆ ಡ್ರಾಮಾನುಸಾರ ಯಾರೂ ತಿಳಿದುಕೊಂಡಿಲ್ಲ ಆದ್ದರಿಂದಲೇ ತಿಳಿಸುವುದಕ್ಕಾಗಿ ತಂದೆಯು ಬರುತ್ತಾರೆ. ತಂದೆಯೇ ಬನ್ನಿ, ತಮ್ಮಲ್ಲಿ ಯಾವ ಜ್ಞಾನವಿದೆಯೋ ಅದನ್ನು ನಮಗೆ ಕೊಡಿ, ಪತಿತರನ್ನು ಪಾವನರನ್ನಾಗಿ ಮಾಡಲು ಬನ್ನಿ ಎಂದು ಕರೆಯುತ್ತಾರೆ ಮತ್ತೆ ಹೇಳುತ್ತಾರೆ - ನಮ್ಮ ದುಃಖವನ್ನು ದೂರ ಮಾಡಿ ಸುಖ ನೀಡಿ ಎಂದು ಆದರೆ ಅವರು ಯಾವ ಜ್ಞಾನವನ್ನು ಕೊಡುತ್ತಾರೆ, ಯಾವ ಸುಖವನ್ನು ಕೊಡುತ್ತಾರೆಂಬುದನ್ನು ತಿಳಿದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಅವರು ತಂದೆಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ತಂದೆಯಿಂದಲೇ ರಚನೆಯಾಗಿರಬೇಕು. ತಂದೆ ಎಂದರೆ ರಚಯಿತ. ಮಕ್ಕಳು ತಂದೆಯೆಂದು ಹೇಳಿದರು ಅಂದಮೇಲೆ ಅವರು ರಚನೆಯಾದರು. ರಚನೆಯೂ ಸಹ ಅವಶ್ಯವಾಗಿ ಯಾರಿಂದಲೋ ರಚನೆಯಾಗಿರಬೇಕಲ್ಲವೆ. ಮತ್ತೆ ಮಕ್ಕಳಿಗೆ ಆಸ್ತಿಯನ್ನೂ ಕೊಟ್ಟಿರಬೇಕು. ಇದು ಸಾಮಾನ್ಯ ಮಾತಾಗಿದೆ ಆದ್ದರಿಂದಲೇ ನನ್ನನ್ನು ತ್ವಮೇವ ಮಾತಾಶ್ಚ ಪಿತಾ... ಎಂದು ಹೇಳುತ್ತಾರೆ ಅಂದಮೇಲೆ ನಾನು ದೊಡ್ಡ ಗೃಹಸ್ಥಿಯಾದೆನು ಅಲ್ಲವೆ. ಹೇ ಮಾತಾಪಿತಾ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ, ಈಗ ತಂದೆಯಂತೂ ಇದ್ದಾರೆ ಆದರೆ ತಾಯಿಯಿಲ್ಲದೆ ರಚನೆಯಾಗಲು ಹೇಗೆ ಸಾಧ್ಯ! ಇಲ್ಲಿ ತಂದೆಯು ಹೇಗೆ ರಚಿಸುತ್ತಾರೆ ಎಂಬುದು ಸಂಪೂರ್ಣ ಹೊಸ ಮಾತಾಗಿದೆ. ಇಲ್ಲಿಯೂ ಸಹ ಅನೇಕರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುವುದಿಲ್ಲ. ಮತ್ತೆಲ್ಲಾ ಜಾಗಗಳಲ್ಲಿ ಕೇವಲ ಪರಮಾತ್ಮನನ್ನು ತಂದೆ ಎಂದು ಕರೆಯುತ್ತಾರೆ. ಇಲ್ಲಿ ತಂದೆ-ತಾಯಿ ಇಬ್ಬರೂ ಇದ್ದಾರೆ ಅಂದಮೇಲೆ ಪ್ರವೃತ್ತಿ ಮಾರ್ಗವಾಯಿತಲ್ಲವೆ. ಅಲ್ಲಿ ಕೇವಲ ತಂದೆ ಎಂದು ಹೇಳುವುದರಿಂದ ಅವರಿಗೆ ಮುಕ್ತಿಯ ಆಸ್ತಿಯು ಸಿಗುತ್ತದೆ, ಅವರು ಬರುವುದೇ ಕೊನೆಯಲ್ಲಿ. ಇದು ಎಲ್ಲರಿಗೂ ಗೊತ್ತಿದೆ, ಕ್ರಿಶ್ಚಿಯನ್ ಧರ್ಮಕ್ಕೆ ಮೊದಲು ಬೌದ್ಧ ಧರ್ಮವಿತ್ತು, ಅದಕ್ಕೆ ಮೊದಲು ಇಸ್ಲಾಂ ಧರ್ಮವಿತ್ತು. ಈ ಏಣಿ ಚಿತ್ರದಲ್ಲಿ ಅನ್ಯ ಧರ್ಮಗಳು ಇಲ್ಲ ಆದ್ದರಿಂದ ಗೋಲದ ಪಕ್ಕದಲ್ಲಿ ಇದನ್ನು ತೋರಿಸಬೇಕು. ಇದು ಪಾಠಶಾಲೆಯಾಗಿದೆ ಆದರೆ ಪಾಠಶಾಲೆಯಲ್ಲಿ ಕೇವಲ ಒಂದು ಪುಸ್ತಕವೇ ಇರುವುದೇ? ಪಾಠಶಾಲೆಯಲ್ಲಿ ನಕ್ಷೆಗಳೂ ಬೇಕಾಗಿದೆ, ಆ ಲೌಕಿಕ ವಿದ್ಯೆಯಂತೂ ಕೆಲಸಕ್ಕೆ ಬರುವುದಿಲ್ಲ, ನಕ್ಷೆಗಳಿಂದ ಮನುಷ್ಯರು ಕೂಡಲೇ ತಿಳಿದುಕೊಳ್ಳುತ್ತಾರೆ. ಇವು ನಿಮ್ಮ ಮುಖ್ಯ ನಕ್ಷೆಗಳಾಗಿವೆ. ಎಷ್ಟು ವಿಸ್ತಾರದಿಂದ ತಿಳಿಸುತ್ತೇನೆ ಆದರೂ ಸಹ ಕಲ್ಲು ಬುದ್ಧಿಯವರು ತಿಳಿದುಕೊಳ್ಳುವುದಿಲ್ಲ. ಪ್ರದರ್ಶನಿಯಲ್ಲಿ ತ್ರಿಮೂರ್ತಿ ಚಿತ್ರದಲ್ಲಿ ಮೊದಲು ತಿಳಿಸಬೇಕಾಗಿದೆ - ಇವರು ನಿಮ್ಮ ತಂದೆಯಾಗಿದ್ದಾರೆ, ಅವರು ದಾದಾ ಆಗಿದ್ದಾರೆ. ಜ್ಞಾನವನ್ನು ಹೇಗೆ ಕೊಡುವರು? ಆಸ್ತಿಯನ್ನು ಹೇಗೆ ಕೊಡುವರು? ಭಾರತವಾಸಿಗಳಿಗೇ ಆಸ್ತಿಯು ಸಿಗಬೇಕಾಗಿದೆ, ಪರಮಪಿತ ಪರಮಾತ್ಮನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಮೂರು ಧರ್ಮಗಳ ಸ್ಥಾಪನೆ ಮಾಡುತ್ತಾರೆ. ಬ್ರಹ್ಮಾರವರ ಮೂಲಕ ಬ್ರಾಹ್ಮಣರನ್ನು ರಚಿಸುತ್ತಾರೆ. ಇದು ಯಜ್ಞವಾಗಿದೆ, ಇದಕ್ಕೆ ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ ಮತ್ತು ಭಕ್ತಿಮಾರ್ಗದ ಯಾವ ಯಜ್ಞಗಳಿವೆಯೋ ಅದು ತಡವಾಗಿ ಆರಂಭವಾಗುತ್ತದೆ ಏಕೆಂದರೆ ಮೊಟ್ಟ ಮೊದಲು ಶಿವನ ಪೂಜೆ ನಂತರ ದೇವತೆಗಳ ಪೂಜೆಯು ನಡೆಯುತ್ತದೆ. ಆ ಸಮಯದಲ್ಲಿ ಯಾವುದೇ ಯಜ್ಞವಿರುವುದಿಲ್ಲ ನಂತರ ಈ ಯಜ್ಞ ಮಾಡುವುದನ್ನು ಆರಂಭಿಸುತ್ತಾರೆ. ಮೊದಲು ದೇವತೆಗಳ ಪೂಜೆ ಮಾಡುತ್ತಾರೆ, ಹೂಗಳನ್ನು ಹಾಕುತ್ತಾರೆ. ನೀವೀಗ ಪೂಜೆಗೆ ಅರ್ಹರಲ್ಲ, ಮನುಷ್ಯರು ಶಿವನ ಮೇಲೆ ಎಕ್ಕದ ಹೂ ಮತ್ತು ದತ್ತೂರಿ ಹೂಗಳನ್ನು ಏಕೆ ಹಾಕುತ್ತಾರೆ? ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಮುಳ್ಳುಗಳಾಗಿದ್ದೀರಿ, ಅದರಲ್ಲಿ ಕೆಲವರು ಸದಾ ಗುಲಾಬಿ, ಕೆಲವರು ಗುಲಾಬಿ, ಕೆಲವರು ಚೆಂಡುಮಲ್ಲಿಗೆ ಆಗುತ್ತಾರೆ, ಇನ್ನೂ ಕೆಲವರು ಎಕ್ಕದ ಹೂಗಳಾಗಿ ಬಿಡುತ್ತಾರೆ. ಪೂರ್ಣ ರೀತಿಯಿಂದ ಓದದಿದ್ದರೆ ಎಕ್ಕದ ಹೂವಾಗುತ್ತಾರೆ. ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಶಿವ ತಂದೆಯ ಮೇಲೆ ಎಲ್ಲರೂ ಮುಳ್ಳುಗಳನ್ನು ಹಾಕುತ್ತಾರೆ ಆದರೆ ತಂದೆಯು ಅವರನ್ನು ಹೂಗಳನ್ನಾಗಿ ಮಾಡುತ್ತಾರೆ ಆದರೆ ಹೂಗಳಲ್ಲಿಯೂ ಅನೇಕ ಪ್ರಕಾರದ ಹೂಗಳಾಗುತ್ತಾರೆ. ಹೇಗೆ ಉದ್ಯಾನವನದಲ್ಲಿ ವಿಭಿನ್ನ ಹೂಗಳಿರುತ್ತವೆಯಲ್ಲವೆ, ನಿಮ್ಮಲ್ಲಿಯೂ ನಂಬರ್ವಾರ್ ಇದೆ. ಕೆಲವರು ಸಿಂಹಾಸನಾಧೀಶರಾಗುತ್ತಾರೆ, ಕೆಲವರು ಆಗುವುದಿಲ್ಲ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಭಕ್ತಿಮಾರ್ಗವು ಎಷ್ಟು ಉದ್ದಗಲವಾಗಿದೆ ಆದರೆ ಅದರಲ್ಲಿ ಸ್ವಲ್ಪವೂ ಜ್ಞಾನವಿಲ್ಲ. ಸತ್ಯಯುಗದಲ್ಲಿ ದೇವಿ-ದೇವತೆಗಳಿದ್ದರು, ಕಲಿಯುಗದಲ್ಲಿ ಒಬ್ಬ ದೇವತೆಯೂ ಇಲ್ಲ ಅಂದಮೇಲೆ ಪರಮಾತ್ಮನು ಮನುಷ್ಯರನ್ನು ದೇವತೆಗಳನ್ನಾಗಿ ಮಾಡಿರಬೇಕು. ಆದ್ದರಿಂದ ತಂದೆಯು ಬಂದು ಇಂತಹ ಕರ್ಮವನ್ನು ಕಲಿಸುತ್ತಾರೆ ಯಾವುದನ್ನು ಮನುಷ್ಯರು ಕಲಿತು ದೈವೀ ಗುಣಗಳನ್ನು ಧಾರಣೆ ಮಾಡಿ ದೇವಿ-ದೇವತೆಗಳಾಗಿ ಬಿಡುವರು. ಅನ್ಯ ಧರ್ಮದವರು ಏನು ಕಲಿಸುತ್ತಾರೆ? ಏಕೆಂದರೆ ಅವರಂತೂ ಮೇಲಿನಿಂದ ಅವರ ಧರ್ಮ ಗುರುಗಳ ಹಿಂದೆ ಬರಬೇಕಾಗಿದೆ, ಅವರು ಕೇವಲ ಪವಿತ್ರತೆಯ ಜ್ಞಾನವನ್ನು ಕೊಡುತ್ತಾರೆ. ಕ್ರಿಸ್ತನು ಬಂದಾಗ ಕ್ರಿಶ್ಚಿಯನ್ನರು ಯಾರೂ ಇರಲಿಲ್ಲ. ಅಂದರೆ ಕ್ರೈಸ್ಟ್ನ ಹಿಂದೆ ಆ ಧರ್ಮದ ಆತ್ಮರು ಕೆಳಗಿಳಿಯುತ್ತಾರೆ. ತಂದೆಯು ತಿಳಿಸಿದ್ದಾರೆ - ನಾಲ್ಕು ಮುಖ್ಯ ಧರ್ಮಗಳಿವೆ, ಯಾರು ಧರ್ಮ ಸ್ಥಾಪನೆ ಮಾಡುತ್ತಾರೆ, ಅವರದು ಯಾವ ಶಾಸ್ತ್ರವಾಗುವುದೋ ಅದಕ್ಕೆ ಧರ್ಮ ಶಾಸ್ತ್ರವೆಂದು ಹೇಳಲಾಗುತ್ತದೆ ಅಂದಾಗ ಮುಖ್ಯವಾಗಿ ನಾಲ್ಕು ಧರ್ಮಗಳಿವೆ, ಉಳಿದೆಲ್ಲವೂ ಚಿಕ್ಕ-ಚಿಕ್ಕ ಧರ್ಮಗಳಾಗಿವೆ, ಇವು ವೃದ್ಧಿಯಾಗುತ್ತಾ ಇರುತ್ತವೆ ಇಸ್ಲಾಮಿಗಳ ಧರ್ಮಶಾಸ್ತ್ರವೇ ಬೇರೆ, ಬೌದ್ಧರ ಧರ್ಮ ಶಾಸ್ತ್ರವೇ ಬೇರೆ, ಅಂದಮೇಲೆ ಧರ್ಮ ಶಾಸ್ತ್ರಗಳು ಕೇವಲ ಇವೇ ಆದವು. ಬ್ರಾಹ್ಮಣ ಧರ್ಮವು ಈಗಿನದಾಗಿದೆ. ಅವರು ಬ್ರಾಹ್ಮಣ ದೇವತಾಯ ನಮಃ ಎಂದು ಹಾಡುತ್ತಾರೆ ಅಂದಮೇಲೆ ಆ ಬ್ರಾಹ್ಮಣರಿಗೆ ತಿಳಿಸಬೇಕಾಗಿದೆ - ಪರಮಾತ್ಮನು ಬ್ರಹ್ಮಾರವರ ಮೂಲಕ ಯಾವ ಬ್ರಹ್ಮಾ ಮುಖ ವಂಶಾವಳಿಯನ್ನು ರಚಿಸುತ್ತಾರೆಯೋ ಅವರೇ ಸತ್ಯ ಬ್ರಾಹ್ಮಣರಾಗಿದ್ದಾರೆ. ನೀವು ಪ್ರಜಾಪಿತ ಬ್ರಹ್ಮಾನ ಸಂತಾನರು ಅಲ್ಲವೇ ಅಲ್ಲ, ನೀವು ಕೇವಲ ತಮ್ಮನ್ನು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತೀರಿ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಬ್ರಹ್ಮಾ ಭೋಜನವನ್ನು ತಿನ್ನುವಾಗ ಸಂಸ್ಕೃತದಲ್ಲಿ ಶ್ಲೋಕವನ್ನು ಓದಿ ಬ್ರಹ್ಮಾ ಭೋಜನದ ಮಹಿಮೆ ಹಾಡುತ್ತಾರೆ ಆದರೆ ಈ ಮಹಿಮೆಯೆಲ್ಲವೂ ವ್ಯರ್ಥವಾಗಿದೆ. ಆದ್ದರಿಂದ ಅವರೊಂದಿಗೆ ಕೇಳಬೇಕು - ನೀವು ಬ್ರಾಹ್ಮಣರು ಹೇಗಾದಿರಿ? ಪರಮಾತ್ಮನು ಸೃಷ್ಟಿಯನ್ನು ರಚಿಸಬೇಕಾದರೆ ಅವರಿಗೆ ಬ್ರಹ್ಮಾನ ಮಾಧ್ಯಮವು ಬೇಕು ಆದ್ದರಿಂದ ಸತ್ಯಬ್ರಾಹ್ಮಣರು ನೀವಾಗಿದ್ದೀರಿ, ಬ್ರಾಹ್ಮಣರಿಗೂ ಶಿಖೆಯನ್ನು ತೋರಿಸುತ್ತಾರಲ್ಲವೆ. ವಿರಾಟ ರೂಪದಲ್ಲಿ ಬ್ರಾಹ್ಮಣರನ್ನು ತೋರಿಸುವುದಿಲ್ಲ, ಅಂದಮೇಲೆ ಬ್ರಾಹ್ಮಣರು ಎಲ್ಲಿಂದ ಬಂದರು? ನೀವು ತಮ್ಮನ್ನು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತೀರಿ ಅಂದಮೇಲೆ ಯಾವಾಗ ಪರಮಾತ್ಮನು ಬಂದು ಬ್ರಹ್ಮಾನ ಮೂಲಕ ಹೊಸ ರಚನೆಯನ್ನು ರಚಿಸುವರೋ ಆಗಲೇ ಬ್ರಾಹ್ಮಣರಾಗುತ್ತೀರಿ, ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತೀರಿ. ಬ್ರಾಹ್ಮಣರು ಇರುವುದೇ ಸಂಗಮದಲ್ಲಿ, ಕಲಿಯುಗದಲ್ಲಿ ಎಲ್ಲರೂ ಶೂದ್ರರಿದ್ದಾರೆ. ಬ್ರಾಹ್ಮಣರಿಗೇ ಬಹಳ ಮಹಿಮೆ ಮಾಡುತ್ತಾರೆ, ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ತಂದೆ ಮತ್ತು ಆಸ್ತಿ, ಉಳಿದೆಲ್ಲವೂ ವಿಸ್ತಾರವಾಗಿದೆ. ಭಕ್ತಿಯ ಬಗ್ಗೆಯೂ ತಿಳಿಸಬೇಕಾಗಿದೆ. ತಂದೆಯು ಕೆಲವೊಮ್ಮೆ ನೀವು ಭಕ್ತರಿದ್ದಂತೆ ಎಂದು ಹೇಳಿ ಬಿಡುತ್ತಾರೆ ಆದರೆ ತಂದೆಯು ಎಂದೂ ಕೋಪಿಸಿಕೊಳ್ಳುವುದಿಲ್ಲ ಆದರೆ ತಿಳುವಳಿಕೆಯಂತೂ ನೀಡುವರಲ್ಲವೆ ಏಕೆಂದರೆ ಮಕ್ಕಳು ಒಂದುವೇಳೆ ತಪ್ಪು ಮಾಡಿದರೆ ಯಾರ ಹೆಸರು ಕೆಡುವುದು? ಶಿವ ತಂದೆಯದು ಆದ್ದರಿಂದ ತಂದೆಯು ಮಕ್ಕಳ ಕಲ್ಯಾಣಾರ್ಥವಾಗಿ ಶಿಕ್ಷಣ ನೀಡುತ್ತಾರೆ. ತಿಳಿದುಕೊಳ್ಳಿ, ಇವರಿಂದ ಯಾವುದೇ ತಪ್ಪಾದರೂ ಸಹ ಅವರನ್ನು ಸುಧಾರಣೆ ಮಾಡುವುದಕ್ಕಾಗಿ ಡ್ರಾಮಾದಲ್ಲಿ ನಿಗಧಿಯಾಗಿದೆ. ಅದರಿಂದಲೂ ಲಾಭವಾಗುವುದು ಏಕೆಂದರೆ ಅವರು ದೊಡ್ಡ ಮಗನಲ್ಲವೆ. ಎಲ್ಲವೂ ಇವರಮೇಲೆ ಆಧಾರಿತವಾಗಿದೆ, ಇವರಿಂದ ಯಾವುದೇ ನಷ್ಟವಾಗುವುದಿಲ್ಲ, ಹೀಗೆ ಮಾಡಿರಿ ಎಂದು ಇವರು ಹೇಳಿದರೆ ಅದನ್ನು ಮಾಡಿ ಬಿಡಬೇಕು. ಅದರಿಂದ ನಷ್ಟದಿಂದಲೂ ಸಹ ಲಾಭವೇ ಆಗುವುದು. ಯಾವುದೇ ನಷ್ಟದ ಮಾತಿಲ್ಲ, ಪ್ರತೀ ಮಾತಿನಲ್ಲಿ ಕಲ್ಯಾಣವೇ ಕಲ್ಯಾಣವಿದೆ. ಅಕಲ್ಯಾಣವೂ ಡ್ರಾಮಾದಲ್ಲಿತ್ತು, ತಪ್ಪುಗಳಂತೂ ಎಲ್ಲರಿಂದಲೂ ಆಗುತ್ತಾ ಇರುತ್ತದೆ ಆದರೆ ಅಂತಿಮದಲ್ಲಿ ಯಾವುದೇ ಮಾತಿನಲ್ಲಿಯೂ ಕಲ್ಯಾಣವೇ ಆಗುವುದು ಏಕೆಂದರೆ ತಂದೆಯು ಕಲ್ಯಾಣಕಾರಿಯಾಗಿದ್ದಾರೆ, ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಎಲ್ಲರಿಗೆ ಸದ್ಗತಿಯನ್ನು ಕೊಡುತ್ತಾರೆ, ಈಗ ಎಲ್ಲರ ಅಂತಿಮ ಸಮಯವಾಗಿದೆ. ಎಲ್ಲರ ತಲೆಯ ಮೇಲೆ ಪಾಪದ ಹೊರೆಯಿದೆ ಅಂದಮೇಲೆ ಎಲ್ಲರ ಲೆಕ್ಕಾಚಾರವು ಮುಗಿಯುವುದು, ಶಿಕ್ಷೆಗಳು ಸಿಗುವುದರಲ್ಲಿ ನಿಧಾನವಾಗುವುದಿಲ್ಲ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ ಅಂದಮೇಲೆ ಸೆಕೆಂಡಿನಲ್ಲಿ ಪಾಪಗಳ ಶಿಕ್ಷೆಯನ್ನು ಅನುಭವಿಸಲು ಸಾಧ್ಯವಿಲ್ಲವೆ. ಹೇಗೆ ಕಾಶಿಯಲ್ಲಿ ಬಲಿಯಾಗುತ್ತಾರೆ ಶರೀರವನ್ನು ಬಿಟ್ಟು ಬಿಡುತ್ತಾರೆ ಆದರೆ ಅವರು ಹೋಗಿ ಶಿವ ತಂದೆಯೊಂದಿಗೆ ಮಿಲನ ಮಾಡಿದರು ಎಂದಲ್ಲ. ಕೇವಲ ಹಿಂದಿನ ಪಾಪಗಳ ಲೆಕ್ಕವು ಮುಗಿದು ಮತ್ತೆ ಹೊಸದಾಗಿ ಆರಂಭವಾಗುತ್ತದೆ. ಮಧ್ಯದಲ್ಲಿಯೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಭಲೆ ಜ್ಞಾನವು ಸೆಕೆಂಡಿನದಾಗಿದೆ ಆದರೆ ವಿದ್ಯೆಯನ್ನು ಓದಬೇಕಾಗಿದೆ, ಪ್ರತಿನಿತ್ಯವೂ ಶಿವ ತಂದೆಯ ಆತ್ಮ ಯಾರು ಜ್ಞಾನ ಸಾಗರನಾಗಿದ್ದಾರೆಯೋ ಅವರೇ ಬಂದು ಓದಿಸುತ್ತಾರೆ. ಕೃಷ್ಣನಂತೂ ದೇಹಧಾರಿಯಾಗಿದ್ದಾನೆ, ಪುನರ್ಜನ್ಮದಲ್ಲಿ ಬರುತ್ತಾನೆ. ತಂದೆಯು ಅಜನ್ಮನಾಗಿದ್ದಾರೆ, ಯಾರು ಇಲ್ಲಿ ಓದುವುದಿಲ್ಲವೊ ಅವರು ಅವಶ್ಯವಾಗಿ ಇಲ್ಲಿ ವಿಘ್ನಗಳನ್ನು ಹಾಕುತ್ತಾರೆ. ಯಜ್ಞದಲ್ಲಿ ವಿಘ್ನಗಳು ಬಂದೇ ಬರುತ್ತವೆ, ಅಬಲೆಯರ ಮೇಲೆ ಅತ್ಯಾಚಾರಗಳಾಗುತ್ತವೆ. ಎಲ್ಲವೂ ಕಲ್ಪದ ಹಿಂದಿನ ತರಹ ಆಗುತ್ತಿದೆ, ಅಸುರರು ಹೇಗೆ ಹೊಡೆದಾಡುತ್ತಾರೆ, ಚಿತ್ರಗಳನ್ನು ಹರಿದು ಹಾಕುತ್ತಾರೆ. ಯಾವುದೇ ಸಮಯದಲ್ಲಿ ಬೆಂಕಿ ಹಚ್ಚುವುದಕ್ಕೂ ನಿಧಾನಿಸುವುದಿಲ್ಲ. ನಾವೇನು ಮಾಡುತ್ತೇವೆ! ಇದೆಲ್ಲವೂ ಡ್ರಾಮಾದ ಪೂರ್ವನಿಶ್ಚಿತವೆಂದು ತಿಳಿಯುತ್ತೇವೆ. ಹೊರಗಡೆ ಪೋಲಿಸ್ ಮೊದಲಾದವರಿಗೆ ದೂರು ಕೊಡಬೇಕಾಗುತ್ತದೆ ಆದರೆ ಆಂತರ್ಯದಲ್ಲಿ ಕಲ್ಪದ ಹಿಂದೆ ಏನಾಗಿತ್ತೋ ಅದೇ ಆಗುವುದು ಎಂದು ತಿಳಿದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ದುಃಖದ ಮಾತಿಲ್ಲ. ನಷ್ಟವಾದರೆ ಇದೇನೂ ದೊಡ್ಡ ಮಾತಲ್ಲ. ಮತ್ತೆ ಇನ್ನೊಂದು ಬರುವುದು.
ತಂದೆಯು ಹೇಳಿದ್ದಾರೆ - ಎಲ್ಲಿಯೇ ಪ್ರದರ್ಶನಿ ಇತ್ಯಾದಿಗಳನ್ನು ಮಾಡುತ್ತೀರೆಂದರೆ 8 ದಿನಗಳಿಗಾಗಿ ಇನ್ಶೂರ್ ಮಾಡಿಸಿರಿ. ಯಾರಾದರೂ ಒಳ್ಳೆಯ ವ್ಯಕ್ತಿಯಿದ್ದರೆ ಇದಕ್ಕೆ ಹಣವನ್ನೂ ತೆಗೆದುಕೊಳ್ಳುವುದಿಲ್ಲ. ಇನ್ಶೂರೆನ್ಸ್ ಮಾಡದಿದ್ದರೂ ಏನಾಗುವುದು, ಮತ್ತೆ ಹೊಸ ಚಿತ್ರಗಳು ತಯಾರಾಗುತ್ತವೆ. ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಸಂಪಾದನೆಯಿದೆ, ನಿಮ್ಮ ಹೆಜ್ಜೆ-ಹೆಜ್ಜೆ, ಕ್ಷಣ-ಕ್ಷಣವು ಬಹಳ ಅತ್ಯಮೂಲ್ಯವಾಗಿದೆ, ನೀವು ಪದಮಾಪತಿಗಳಾಗುತ್ತೀರಿ, 21 ಜನ್ಮಗಳಿಗಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಅಂದಮೇಲೆ ಎಷ್ಟು ಚೆನ್ನಾಗಿ ತಿಳಿಸಬೇಕಾಗಿದೆ! ಸ್ವರ್ಗದಲ್ಲಿ ನಿಮ್ಮ ಬಳಿ ಅಪಾರ ಧನವಿರುವುದು. ಎಣಿಸುವುದಕ್ಕೇ ಸಾಧ್ಯವಿಲ್ಲ ಅಂದಮೇಲೆ ತಂದೆಯು ನಿಮ್ಮನ್ನು ಎಷ್ಟು ಧನವಂತರು ಸುಖಿಯನ್ನಾಗಿ ಮಾಡುತ್ತಾರೆ, ಎಷ್ಟು ದೊಡ್ಡ ಸಂಪಾದನೆಯಿದೆ. ಪ್ರಜೆಗಳೂ ಸಹ ಎಷ್ಟು ಸಾಹುಕಾರರಾಗುತ್ತಾರೆ. 21 ಜನ್ಮಗಳಿಗಾಗಿ ಇದು ಆದಾಯದ ಮೂಲವಾಗಿದೆ, ಇದು ಮನುಷ್ಯರಿಂದ ದೇವತೆಗಳಾಗುವ ಪಾಠಶಾಲೆಯಾಗಿದೆ, ಯಾರು ಓದಿಸುತ್ತಾರೆ? ತಂದೆ. ಅಂದಮೇಲೆ ಇಂತಹ ವಿದ್ಯೆಯಲ್ಲಿ ಹುಡುಗಾಟಿಕೆ ಮಾಡಬಾರದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸದಾ ಸ್ಮೃತಿಯಿರಲಿ - ಈ ಕಲ್ಯಾಣಕಾರಿ ಯುಗದಲ್ಲಿ ಪ್ರತೀ ಮಾತಿನಲ್ಲಿ ಕಲ್ಯಾಣವಿದೆ, ನಮ್ಮದು ಅಕಲ್ಯಾಣವಾಗಲು ಸಾಧ್ಯವಿಲ್ಲ. ಪ್ರತೀ ಮಾತಿನಲ್ಲಿ ಕಲ್ಯಾಣವಿದೆ ಎಂದು ತಿಳಿದು ಸದಾ ನಿಶ್ಚಿಂತರಾಗಿರಬೇಕಾಗಿದೆ.
2. ಸದಾ ಗುಲಾಬಿಗಳಾಗಲು ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ವಿದ್ಯೆಯಲ್ಲಿ ಹುಡುಗಾಟಿಕೆ ಮಾಡಬಾರದು. ಎಕ್ಕದ ಹೂವಾಗಬಾರದು.
| ವರದಾನ: |
ಅಮೃತವೇಳೆಯ ಮಹತ್ವವನ್ನು ತಿಳಿದು ಯಥಾರ್ಥ ರೀತಿ ಉಪಯೋಗಿಸುವಂತಹ ಸದಾ ಶಕ್ತಿಶಾಲಿ ಸಂಪನ್ನ ಭವ. ಸ್ವಯಂನ್ನು ಶಕ್ತಿ ಸಂಪನ್ನರನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಪ್ರತಿದಿನ ಅಮೃತವೇಳೆ ಶರೀರದ ಮತ್ತು ಮನಸ್ಸಿನ ಸಂಚಾರ ಮಾಡಿ. ಹೇಗೆ ಅಮೃತವೇಳೆ ಸಮಯದ ಸಹಯೋಗವೂ ಇದೆ, ಬುದ್ಧಿ ಸತೋಪ್ರಧಾನ ಸ್ಟೇಜ್ನ ಸಹಯೋಗವೂ ಇದೆ, ಅಂದಾಗ ಇಂತಹ ವರದಾನಿ ಸಮಯದಲ್ಲಿ ಮನಸ್ಸಿನ ಸ್ಥಿತಿಯೂ ಸಹ ಎಲ್ಲದಕ್ಕಿಂತ ಶಕ್ತಿಶಾಲಿ ಸ್ಥಿತಿಯದಾಗಿರಬೇಕು. ಶಕ್ತಿಶಾಲಿ ಸ್ಥಿತಿ ಅರ್ಥಾತ್ ತಂದೆಯ ಸಮಾನ ಬೀಜ ರೂಪ ಸ್ಥಿತಿ. ಸಾಧಾರಣ ಸ್ಥಿತಿಯಲ್ಲಂತೂ ಕರ್ಮ ಮಾಡುತ್ತಿದ್ದರೂ ಸಹ ಇರಬಲ್ಲಿರಿ ಆದರೆ ವರದಾನದ ಸಮಯದಲ್ಲಿ ಯಥಾರ್ಥ ರೀತಿ ಉಪಯೋಗಿಸಿದಾಗ ಬಲಹೀನತೆ ಸಮಾಪ್ತಿಯಾಗಿ ಬಿಡುವುದು. |
| ಸ್ಲೋಗನ್: | ತಮ್ಮ ಶಕ್ತಿಗಳ ಖಜಾನೆಯಿಂದ ಶಕ್ತಿಹೀನ, ಪರವಶ ಆತ್ಮಗಳನ್ನು ಶಕ್ತಿಶಾಲಿಯನ್ನಾಗಿ ಮಾಡಿ. |
ಅವ್ಯಕ್ತ ಸೂಚನೆ:- ಬ್ರಹ್ಮಾ ತಂದೆ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯಲ್ಲಿ ಅನುಭವ ಮಾಡಿರಿ.
ಹೇಗೆ ಬ್ರಹ್ಮಾ ತಂದೆ ಸದಾ ಶಬ್ದದಿಂದ ದೂರ ತಮ್ಮ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸ ಮಾಡುತ್ತೀರಿ. ಇದರಿಂದ ಅವರು ಸರ್ವ ವ್ಯಕ್ತ ಆಕರ್ಷಣೆಗಳಿಂದ ದೂರ ಶಕ್ತಿಶಾಲಿ ಭಿನ್ನ ಮತ್ತು ಪ್ರೀತಿಯ ಸ್ಥಿತಿಯಲ್ಲಿರಲಿ. ಹಾಗೆಯೇ ನೀವು ಮಕ್ಕಳು ಸಹ ಆ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸ ಮಾಡುತ್ತೀರಿ, ಕರ್ಮ ಮಾಡುತ್ತಲೂ ವಿಶೇಷ ಶಾಂತಿಯ ಶಕ್ತಿಯ ಅನುಭವ ಮಾಡುತ್ತಿರುವಿರಿ, ಇದೇ ಅಭ್ಯಾಸದಿಂದ ತಂದೆ ಸಮಾನ ಸಂಪನ್ನ ಅಥವಾ ಸಂಪೂರ್ಣರಾಗಿ ಬಿಡುವಿರಿ.