| 29/11/26 |
ಪ್ರಾತಃಮುರುಳಿ
ಓಂಶಾಂತಿ
"ಅವ್ಯಕ್ತ-ಬಾಪ್ದಾದಾ"
|
ರಿವೈಜ್: 30/11/20 |
“ಸಂತುಷ್ಟ ಮಣಿಗಳ ಭಾಗ್ಯ, ಹೃದಯದ ಗೀತೆ - ಪಡೆಯಬೇಕಿತ್ತು ಅದನ್ನು ಪಡೆದೆವು”
ಇಂದು ಮಕ್ಕಳ ನೆನಪು ಮತ್ತು ಪ್ರೀತಿಯು ಬಾಪ್ದಾದಾರವರನ್ನು ಈ ಸಾಕಾರಿ ಪ್ರಪಂಚದಲ್ಲಿ ತಮ್ಮ ಆಕರ್ಷಣೆಯಿಂದ ಕರೆಸಿಕೊಂಡಿತು. ಬಾಪ್ದಾದಾರವರೂ ಸಹ ಮಕ್ಕಳನ್ನು ಸಾಕಾರಿ ಪ್ರಪಂಚದಲ್ಲಿ ಸಾಕಾರ ರೂಪದಲ್ಲಿ ನೋಡುತ್ತಿದ್ದಾರೆ. ನಾಲ್ಕೂ ಕಡೆಯ ಮಕ್ಕಳೂ ಸಹ ತಂದೆಯನ್ನು ನೋಡುತ್ತಿದ್ದಾರೆ ಮತ್ತು ತಂದೆಯೂ ಸಹ ಸಾಕಾರ ಸ್ವರೂಪದಲ್ಲಿ ನೋಡುತ್ತಿದ್ದಾರೆ. ಮತ್ತು ಹೃದಯದಲ್ಲಿ ನಾಲ್ಕೂ ಕಡೆಯ ಮಕ್ಕಳ ಪ್ರತಿ ವಾಹ್! ಮಕ್ಕಳೇ, ಕಲ್ಪ-ಕಲ್ಪದ ಪಾತ್ರ ಮಕ್ಕಳನ್ನು ನೋಡಿ ಖುಷಿಯಾಗುತ್ತಿದ್ದಾರೆ. ಪ್ರತಿಯೊಂದು ಮಗುವಿನ ಭಾಗ್ಯ ಮತ್ತು ಪ್ರಾಪ್ತಿಯನ್ನು ನೋಡಿ ಮಿಲನವನ್ನಾಚರಿಸುತ್ತಿದ್ದಾರೆ. ಹೃದಯದಲ್ಲಿ ಪ್ರತಿಯೊಂದು ಮಕ್ಕಳ ಭಾಗ್ಯವನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಂದು ಮಗುವಿನ ಚಹರೆಯಲ್ಲಿ ಹೊಳೆಯುತ್ತಿರುವ ಭಾಗ್ಯವು ಕಂಡು ಬರುತ್ತಿದೆ. ಮಸ್ತಕದಲ್ಲಿ ಲೈಟ್ನ ಪ್ರಾಪ್ತಿಯು ಹೊಳೆಯುತ್ತಿದೆ. ಕೈಗಳಲ್ಲಿ ಜ್ಞಾನದ ಭಂಡಾರವು ಕಂಡು ಬರುತ್ತಿದೆ. ಹೃದಯದಲ್ಲಿ ಹೃದಯ ರಾಮ ಕಂಡು ಬರುತ್ತಿದ್ದಾರೆ. ಪಾದಗಳಲ್ಲಿ ಪ್ರತೀ ಹೆಜ್ಜೆಯಲ್ಲಿ ಪದಮಗಳು ಕಂಡು ಬರುತ್ತಿದೆ. ಇಂತಹ ಭಾಗ್ಯವನ್ನು ನೋಡಿ ಪ್ರತಿಯೊಬ್ಬರ ಚಹರೆಯು ಹೊಳಪಿನಿಂದ ಹೊಳೆಯುತ್ತಿದೆ. ನಾಲ್ಕೂ ಕಡೆಯ ಎಲ್ಲಾ ಮಕ್ಕಳು ಸಂತುಷ್ಟ ಸ್ವರೂಪವಾಗಿ ಕಂಡು ಬರುತ್ತಿದ್ದಾರೆ. ಇಂತಹ ಹೊಳೆಯುತ್ತಿರುವ ಚಹರೆಯನ್ನು ನೋಡಿ ಅನ್ಯಆತ್ಮರೂ ಸಹ ಇವರಿಗೆ ಏನು ಸಿಕ್ಕಿದೆ! ಎಂದು ಯೋಚಿಸುತ್ತಾರೆ. ಆಗ ತಾವು ಯಾವ ಪ್ರತ್ಯುತ್ತರವನ್ನು ಕೊಡುತ್ತೀರಿ? ಏನನ್ನು ಪಡೆಯಬೇಕಿತ್ತು ಅದನ್ನು ಪಡೆದೆವು.... ಎಲ್ಲರೂ ಸಂತುಷ್ಠ ಮಣಿಯ ರೂಪದಲ್ಲಿ ಹೊಳೆಯುತ್ತಿದ್ದಾರೆ. ಇಂತಹ ತಮ್ಮ ಮೂರ್ತಿಯನ್ನು ತಾವೂ ನೋಡುತ್ತಿದ್ದೀರಲ್ಲವೇ! ಬಾಪ್ದಾದಾರವರೂ ಸಹ ಇಂತಹ ಸಂತುಷ್ಠ ಮಣಿ ಆತ್ಮರನ್ನು ನೋಡಿ ಯಾವ ಗೀತೆಯನ್ನು ಹಾಡುತ್ತಾರೆ! ವಾಹ್ ನನ್ನ ಸಂತುಷ್ಟ ಆತ್ಮರೇ ವಾಹ್!
ಅಂದಮೇಲೆ ಇಂದು ಕೇವಲ ಮಕ್ಕಳ ಹೃದಯದ ದೂರನ್ನು ಪೂರ್ಣಗೊಳಿಸಲು ಬಂದಿದ್ದೇವೆ. ತಮ್ಮೆಲ್ಲರ ದೂರು ಪೂರ್ಣವಾಯಿತಲ್ಲವೆ! ಇನ್ನು ಮುಂದೆ ಹೇಗೆ ಡ್ರಾಮಾ ನಿಮಿತ್ತ ಮಾಡುತ್ತದೆಯೋ ಹಾಗೆಯೇ ಮಿಲನ ಮಾಡುತ್ತಿರುತ್ತೇವೆ. ಇಂದು ಡ್ರಾಮಾದಲ್ಲಿ ಮಿಲನ ಮಾಡುವುದು ಇಷ್ಟೇ ಇದೆ.
ಎಲ್ಲಾ ಮಕ್ಕಳು ರಥದ ಸೇವೆಯನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಬಾಪ್ದಾದಾರವರು ಸೇವೆಗೆ ನಿಮಿತ್ತರಾಗಿರುವ ಎಲ್ಲಾ ಆತ್ಮರಿಗೂ ವಿಶೇಷವಾಗಿ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಈಗ ಕೇವಲ ಮಕ್ಕಳ ಮಿಲನದ ದೂರನ್ನು ಪೂರ್ಣಗೊಳಿಸಲು ಬಂದಿದ್ದೇವೆ. ಅಂದಮೇಲೆ ಎಲ್ಲರೂ ಚೆನ್ನಾಗಿದ್ದೀರಾ! ಎಲ್ಲರೂ ಕೈಯನ್ನೆತ್ತಿರಿ ಚೆನ್ನಾಗಿದ್ದೀರಾ! ರಥದ ಸೇವೆಯನ್ನು ಮಾಡುವವರಿಗೂ ಸಹ ಹೃದಯದ ಶುಭಾಷಯಗಳು. ಭಲೆ ರಥವು ಎಲ್ಲಿಯೇ ಇರಬೇಕಾಗಿತ್ತು ಆದರೆ ಬಾಪ್ದಾದಾರವರು ನೋಡಿದರು - ಗುಜರಾತಿನವರೂ ಕಡಿಮೆಯೇನಿಲ್ಲ. ಗುಜರಾತಿನವರು ಎಲ್ಲಿದ್ದಾರೆ! ಅಂದಮೇಲೆ ಬಾಪ್ದಾದಾ ಮತ್ತು ಜೊತೆಯಲ್ಲಿ ನಮ್ಮ ನಿಮಿತ್ತವಾಗಿರುವ ಪಾಂಡವ ನಿರ್ವೈರ್ ಮಗೂ ಸಹ ಬಹಳ ಜೊತೆ ಕೊಟ್ಟರು. ಬನ್ನಿ.
(ಸರಳ ದೀದಿಯವರನ್ನು) ಬಹಳ ಚೆನ್ನಾಗಿ ಮಾಡಿದಿರಿ. ನಿಮಿತ್ತರಾಗಿ ಎಲ್ಲಾ ದಾದಿಯರನ್ನು ಸಂಭಾಲನೆ ಮಾಡಿರುವುದಕ್ಕಾಗಿ ತಮಗೆ ಹಾಗೂ ತಮ್ಮ ಜೊತೆಗಾರರಿಗೆ ಬಹಳ-ಬಹಳ ಶುಭಾಷಯಗಳು.
ಈಗ ಬಾಪ್ದಾದಾರವರು ಚಮತ್ಕಾರವನ್ನು ನೋಡಲು ಬಯಸುತ್ತಾರೆ, ಯಾವ ಚಮತ್ಕಾರವನ್ನು ನೋಡಲು ಬಯಸುತ್ತಾರೆ? ತಾವು ಮೂವರಲ್ಲಿ ಪರಿವಾರದವರಿಗೆ ಬಹಳ ಭರವಸೆಯಿದೆ. (ನಿರ್ವೈರ್ ಭಾಯಿ, ರಮೇಶ ಭಾಯಿ, ಬೃಜಮೋಹನ ಭಾಯಿ) ಈಗ ಬಾಪ್ದಾದಾರವರು ತಿಳಿಯುತ್ತಾರೆ - ಒಂದು ವಿಚಾರ ಮಾಡಿ, ಭಿನ್ನ-ಭಿನ್ನವಾದ ವಿಚಾರಗಳಂತು ಇದ್ದೇ ಇರುತ್ತವೆ ಆದರೆ ವಿಚಾರವನ್ನು ಒಟ್ಟು ಗೂಡಿಸುವುದು ತಮ್ಮ ಕೈಯಲ್ಲಿರುತ್ತದೆ. ಅಂದಮೇಲೆ ಬಾಪ್ದಾದಾರವರೂ ಸಹ ತಾವು ನಿಮಿತ್ತರಾಗಿರುವ ಪಾಂಡವರಲ್ಲಿ ಈ ಚಮತ್ಕಾರವನ್ನು ನೋಡಲು ಬಯಸುತ್ತಾರೆ, ಭಿನ್ನ-ಭಿನ್ನವಾದ ವಿಚಾರಗಳಿರುತ್ತವೆ ಆದರೆ ಒಟ್ಟು ಗೂಡಿಸಬೇಕಾಗುತ್ತದೆ ಅಂದಮೇಲೆ ಈಗ ಮೂವರೂ ಇದೇ ಚಮತ್ಕಾರವನ್ನು ತೋರಿಸಬೇಕಾಗಿದೆ, ಮೂವರಲ್ಲ ಆದರೆ ಮೂವರು ಒಬ್ಬರೇ ಆಗಿದ್ದೀರಿ, ಉಳಿದಂತೆ ಎಲ್ಲರೂ ಚೆನ್ನಾಗಿದ್ದಾರೆ ನಿಮಿತ್ತರಾಗಿ ನಡೆಸುತ್ತಿದ್ದಾರೆ. ಒಳ್ಳೆಯದು.
ದೇಶ-ವಿದೇಶದ ಸಹೋದರ-ಸಹೋದರಿಯರಿಗೆ ಬಹಳ-ಬಹಳ ಶುಭಾಷಯಗಳು, ಯಾರು ಇಬ್ಬರೂ ನಿಮಿತ್ತವಾಗಿರುವ ದಾದಿಯರನ್ನು ಸಂಭಾಲನೆ ಮಾಡಿದರು ಬಹಳ ಚೆನ್ನಾಗಿ ಮಾಡಿದ್ದಾರೆ. ಅವರಿಗೆ ವಿಶೇಷವಾಗಿ ಶುಭಾಷಯಗಳು. ಮತ್ತು ಎಲ್ಲ ಕಡೆಯ ಸಹೋದರ-ಸಹೋದರಿಯರಿಗೆ ವಿಶೇಷವಾಗಿ ಹೃದಯದ ನೆನಪು -ಪ್ರೀತಿಯನ್ನು ಕೊಡುತ್ತಿದ್ದಾರೆ ಮತ್ತು ಸದಾ ಹೃದಯದಲ್ಲಿ ಸಮಾವೇಶವಾಗಿದ್ದೀರಿ ಆದ್ದರಿಂದ ಸದಾ ನೆನಪಿನಲ್ಲಿರಬೇಕಾಗಿದೆ ಮತ್ತು ಒಬ್ಬರು ಇನ್ನೊಬ್ಬರಿಗೆ ನೆನಪನ್ನು ತರಿಸುತ್ತಿರಬೇಕಾಗಿದೆ. ಒಳ್ಳೆಯದು.
ಇಂದು ಕೇವಲ ಎಲ್ಲರಿಗೂ ಯಾವ ಸಂಕಲ್ಪವಿತ್ತು - ಮಿಲನ ಮಾಡಬೇಕು, ಮಿಲನ ಮಾಡಬೇಕು, ಮಿಲನ ಮಾಡಬೇಕು. ಅದು ಶರೀರದ ಲೆಕ್ಕದಿಂದ ಪೂರ್ಣವಾಯಿತು. ಈಗ ಮುಂದೆ ಡ್ರಾಮಾದಲ್ಲಿ ಏನಿರುತ್ತದೆ ಮಿಲನ ಮಾಡುತ್ತಿರುತ್ತೇವೆ. ಬಾಪ್ದಾದಾರವರು ಎಂದೂ ಸಹ ಮಕ್ಕಳಿಂದ ದೂರವಿರಲು ಸಾಧ್ಯವಿಲ್ಲ. ಹೇಗೆ ಮಕ್ಕಳು ತಂದೆಯಿಂದ ದೂರವಿರಲು ಸಾಧ್ಯವಿಲ್ಲ ಅದೇರೀತಿ ತಂದೆಯೂ ಸಹ ಮಕ್ಕಳಿಂದ ದೂರವಿರಲು ಸಾಧ್ಯವಿಲ್ಲ. ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ನೋಡಿ ಖುಷಿಯಾಗಿದ್ದಾರೆ, ಶುಭಾಷಯಗಳನ್ನೂ ಕೊಡುತ್ತಾರೆ - ಈಗ ಪ್ರತಿಯೊಬ್ಬರೂ ತಿಳಿಯಿರಿ, ನಾನು ಈ ಬೇಹದ್ದಿನ ಕಾರ್ಯಕ್ಕಾಗಿ ಕೇವಲ ಸ್ವಯಂನಪ್ರತಿ ಅಲ್ಲ, ಸ್ವಯಂನ ಜೊತೆ ಸೇವೆಗೂ ನಿಮಿತ್ತನಾಗಿದ್ದೇನೆ. ಈಗ ಇಂತಹ ಚಮತ್ಕಾರವನ್ನು ಮಾಡಿ ತೋರಿಸಿ, ಪ್ರಪಂಚದಲ್ಲಿ ಹಲ್ಚಲ್ (ಏರುಪೇರು) ಇದೆ ಮತ್ತು ಹಲ್ಚಲ್ನ್ನು ಅಚಲವನ್ನಾಗಿ ಮಾಡಲು ತಾವು ನಿಮಿತ್ತವಾಗಿದ್ದೀರಿ. ಅವರು ತನ್ನ ಕಾರ್ಯವನ್ನು ಬಿಡುವುದಿಲ್ಲ ಅಂದಮೇಲೆ ತಾವೂ ಸಹ ತಮ್ಮನ್ನು ನಿಮಿತ್ತ ಎಂದು ತಿಳಿದು ಅವರು ಹಲ್ಚಲ್, ತಾವು ಅಚಲ. ಇಬ್ಬರೂ ಜೊತೆ ಜೊತೆಯಲ್ಲಿ ಪಾತ್ರವನ್ನಭಿನಯಿಸಿರಿ. ಒಳ್ಳೆಯದು - ಇಂದು ಕೇವಲ ಮಿಲನ ಮಾಡಲು ಬಂದಿದ್ದೆವು.
ನಾಲ್ಕೂಕಡೆಯ ಮಕ್ಕಳಿಗೆ ತಮ್ಮ-ತಮ್ಮ ಕಾರ್ಯವನ್ನು ಮಾಡುವ ಶುಭಾಷಯಗಳು ಮತ್ತು ಇನ್ನುಮುಂದೆ ಪ್ರತಿಯೊಂದು ವರ್ಗ ಅಥವಾ ಪ್ರತಿಯೊಂದು ಜೋನ್ ಬಹಳ ಬಹಳ ಮುಂದುವರೆಯುತ್ತಿರುತ್ತಾರೆ, ಇದು ಬಾಪ್ದಾದಾರವರು ಶುಭಾಷಯಗಳಾಗಿದೆ.
ಡಬಲ್ ವಿದೇಶಿಗಳು ಯಾರೆಲ್ಲಾ ಬಂದಿದ್ದಾರೆ, ಅವರು ಎದ್ದುನಿಲ್ಲಿ. ಬಾಪ್ದಾದಾರವರು ಈಗ ಡಬಲ್ ವಿದೇಶಿ ಎಂದು ಹೇಳುವುದಿಲ್ಲ, ಡಬಲ್ ಪುರುಷಾರ್ಥಿ. ಏಕೆಂದರೆ ಡಬಲ್ ಪುರುಷಾರ್ಥಿಗಳು ಈಗಲೂ ಸಹ ನಾಲ್ಕೂ ಕಡೆ ಹೆಚ್ಚಾಗುತ್ತಿದ್ದಾರೆ, ಚಿಕ್ಕ ಪುಟ್ಟ ಸ್ಥಾನಗಳಲ್ಲಿಯೂ ಸಹ ಗಮನಕೊಡುತ್ತಿದ್ದಾರೆ ಆದ್ದರಿಂದ ಸೇವೆಯ ಶುಭಾಷಯಗಳು ಮತ್ತು ಡಬಲ್ ಪುರುಷಾರ್ಥಕ್ಕಾಗಿಯೂ ಶುಭಾಷಯಗಳು. ಈಗ ಡಬಲ್ ವಿದೇಶಿಗಳೆಂದು ಹೇಳಬಾರದು, ಡಬಲ್ ತೀವ್ರ ಪುರುಷಾರ್ಥಿ ಎಂದು ಹೇಳಿರಿ. ಸರಿಯಾಗಿದೆ. ಡಬಲ್ ಪುರುಷಾರ್ಥಿ, ಡಬಲ್ ಅಂದರೆ ತೀವ್ರ ಪುರುಷಾರ್ಥಿ. ಅಂದಮೇಲೆ ಬಾಪ್ದಾದಾರವರಿಗೆ ನೆನಪಿದೆ - ಡಬಲ್ ಪುರುಷಾರ್ಥಿಗಳು ಎಲ್ಲೆಲ್ಲಿಂದ ಬಂದಿದ್ದಾರೆ, ಆದರೆ ಎಲ್ಲರಿಗಿಂದ ದೂರವಿರುವವರು ಯಾರಾಗಿದ್ದಾರೆ? ಎಲ್ಲರಿಗಿಂತ ದೂರವಿರುವವರು ಯಾರು? ಅಮೇರಿಕಾದವರು. ಅದೂ ಸಹ ಇದೇ ಪ್ರಪಂಚದಲ್ಲಿದೆ. ಆದರೆ ಬಾಪ್ದಾದಾರವರು ಎಲ್ಲಿಂದ ಬಂದಿದ್ದಾರೆ? ಮಕ್ಕಳು ಹೇಳಿದರು ಮತ್ತು ತಂದೆಯು ಹಾಜಿûರ್. ಭಲೆ ಶರೀರಕ್ಕೆ ಏನೇ ಆಗಿರಲಿ ಆದರೆ ಮಕ್ಕಳು, ಮಕ್ಕಳಾಗಿದ್ದಾರೆ. ತಂದೆಯು ಸದಾ ಜೀ ಹಾಜಿರ್ ಆಗಿಬಿಡುತ್ತಾರೆ. ಒಳ್ಳೆಯದು, ನಾಲ್ಕೂ ಕಡೆಯಲ್ಲಿ ಬಹಳ-ಬಹಳ ತಮ್ಮ ಒಳ್ಳೆಯ ಪಾತ್ರವನ್ನಭಿನಯಿಸುವವರಿಗೆ ಈ ರೀತಿ ತಂದೆಯು ಹೇಳಿದರು, ಮಕ್ಕಳು ಮಾಡಿದರು - ಇಂತಹ ಮಕ್ಕಳು ಸದಾ ತಂದೆಯ ಹೃದಯದಲ್ಲಿರುತ್ತಾರೆ.
ಬಾಪ್ದಾದಾರವರು ಮಕ್ಕಳ ಕಥೆಗಳನ್ನು ಕೇಳುತ್ತಿರುತ್ತಾರೆ. ಕೆಲ ಮಕ್ಕಳು ಕೇವಲ ಸ್ನೇಹಿಯಲ್ಲ ಆದರೆ ಸ್ನೇಹಿ ಜೊತೆಯಲ್ಲಿ ಸಹಯೋಗಿ, ಪ್ರತಿ ಕಾರ್ಯದಲ್ಲಿ ಆಗುತ್ತಾರೆ ಮತ್ತು ತಮ್ಮ ಭವಿಷ್ಯ ಜಮಾ ಮಾಡುವುದರಲ್ಲಿ ಬುದ್ಧಿವಂತರಾಗಿದ್ದಾರೆ ಅದಕ್ಕೆ ನೋಡಿ ಎಷ್ಟು ದೇಶದವರು ಬಂದಿದ್ದಾರೆ. ಬಾಪ್ದಾದಾರವರು ಈ ಸಂಘಟನೆಯನ್ನು ನೋಡಿ ಸ್ನೇಹಿ ಸಹಯೋಗಿ ಪ್ರತಿ ಕಾರ್ಯದಲ್ಲಿ ಕೈ ಮುಂದೆ ಚಾಚುವಂತಹ ಗ್ರೂಪ್ ನೋಡಿ ಖುಷಿಯಾಗುತ್ತಿದ್ದಾರೆ. ಖುಷಿಯಿದೆ, ನೀವು ಸಹ ಖುಷಿ ತಂದೆಯು ಖುಷಿ ಮತ್ತು ಪರಿವಾರವೂ ಖುಷಿ. ಮಧುಬನದವರು ಹೇಳುತ್ತಾರೆ ಡಬಲ್ ವಿದೇಶಿ ಮಧುಬನದ ಶೃಂಗಾರವಾಗಿದ್ದಾರೆ ಮತ್ತು ತಂದೆಯ ವಿಶ್ವ ಕಲ್ಯಾಣಿ ಹೆಸರು ವಿದೇಶದವರು ಸಿದ್ಧ ಮಾಡಿದ್ದಾರೆ ಅದಕ್ಕೆ ಎಲ್ಲರು ತೀವ್ರ ಪುರುಷಾರ್ಥಿಯವಾರಾಗಿರಿ. ಪುರುಷಾರ್ಥಿಯಲ್ಲ ತೀವ್ರ ಪುರುಷಾರ್ಥಿ ಏಕೆಂದರೆ ಎಲ್ಲರು ತೀವ್ರ ಪುರುಷಾರ್ಥಿಯಾಗುವ ಸಮಯ ಇದಾಗಿದೆ. ಪುರುಷಾರ್ಥದ ಸಮಯ ಈಗ ಹೋಯಿತು, ಈಗ ತೀವ್ರ ಪುರುಷಾರ್ಥದ ಸಮಯವಾಗಿದೆ. ಎಂದೂ ಸಹ ಸಾಧಾರಣ ಪುರುಷಾರ್ಥಿಗಳಾಗಬೇಡಿ. ಸದಾ ಚೆಕ್ ಮಾಡಿ, ತೀವ್ರತೆಯಿದೆ? ಸಾಧಾರಣವಾಗಿ ಹೋಗಿಲ್ಲವೇ! ಈಗ ಸಮಯ ಸೂಚನೆ ಕೊಡುತ್ತಿದೆ – ತೀವ್ರ ಪುರುಷಾರ್ಥಿಯಾಗುವುದಕ್ಕೆ. ಬಾಪ್ದಾದಾರವರು ಖುಷಿಯಾಗಿದ್ದಾರೆ, ಪರಿವಾರವೂ ಖುಷಿ ಮತ್ತು ಎಲ್ಲರಿಗೆ ಶುಭಾಷಯ ಕೊಡುತ್ತಿದ್ದಾರೆ. ತಂದೆಗೆ ಖುಷಿಯಿದೆ. ಎಷ್ಟು ದೇಶಗಳಿಂದ ಒಟ್ಟಿಗೆ ಸೇರಿದ್ದಾರೆ ನೋಡಿ. ಒಳ್ಳೆಯದು.
ಹಿಂದಿನ ಮುರಳಿಯ ಉಳಿದ ಭಾಗ (5-3-12)
ಬಾಪ್ದಾದಾರವರು ಮೊದಲೂ ಹೇಳಿದ್ದಾರೆ - ಈಗ ಸಮಯವು ನಾಜೂಕಾಗಿ ಬಂತೆಂದರೆ ಬಂದಿತು ಆದ್ದರಿಂದ ಈಗ ಕೊನೆ ಪಕ್ಷ ಸಂಪರ್ಕದವರನ್ನು ಯಜ್ಞ ಸ್ನೇಹಿಯನ್ನಾಗಿಯಾದರೂ ಮಾಡಿರಿ. ಡಾಕ್ಟರುಗಳ ಸಮಾಚಾರವನ್ನು ಕೇಳಿದ್ದಾರೆ. ಚೆನ್ನಾಗಿ ಮಾಡುತ್ತಿದ್ದಾರೆ. ಆದರೆ ಈಗ ಡಾಕ್ಟರುಗಳು ಮತ್ತಷ್ಟು ತಮ್ಮ ಡಾಕ್ಟರುಗಳ ಸಂಖ್ಯೆಯನ್ನು ಸ್ನೇಹಿ-ಸಹಯೋಗಿಯನ್ನಾಗಿ ಮಾಡುತ್ತಾ ಸಾಗಬೇಕು. ಚೆನ್ನಾಗಿರುವ ಯೋಜನೆ ತಯಾರು ಮಾಡಿದ್ದೀರಿ, ಬಾಪ್ದಾದಾರವರು ಕೇಳಿದ್ದಾರೆ. ಅದರಂತೆ ವೃದ್ಧಿಯಾಗುವುದು. ಒಳ್ಳೆಯ ರೀತಿ ಹೆಸರು ಹರಡುವುದು ಮತ್ತು ಮತ್ತೊಂದು ವರ್ಗದವರೂ ಸಹ ಒಳ್ಳೆಯ ರೀತಿಯಲ್ಲಿ ನಾಲ್ಕೂ ಕಡೆ ಯಾರೆಲ್ಲಾ ವಿ.ಐ.ಪಿ.,ಗಳು ಬಂದಿದ್ದಾರೆ ಅದರಿಂದ ಸಿದ್ಧವಾಗುತ್ತದೆ - ಒಳ್ಳೆಯ ಸಂಪರ್ಕವನ್ನಿಟ್ಟಿದ್ದೀರಿ ಎಂದು. ಈಗ ಸಂಪರ್ಕದಲ್ಲಿರುವವರನ್ನು ಸಂಬಂಧದಲ್ಲಿ ತರಬೇಕಾಗಿದೆ. ಸಮೀಪ ಸಂಬಂಧದಲ್ಲಿ ತರಬೇಕಾಗಿದೆ. ಬಾಪ್ದಾದಾರವರು ನೋಡಿದರು - ಯಾವಾಗಿನಿಂದ ವರ್ಗಗಳು ರೂಪುಗೊಂಡಿದೆ, ಆಗಿನಿಂದ ನಾಲ್ಕೂ ಕಡೆ ಸೇವೆಯು ಬಹಳ ಚೆನ್ನಾಗಿ ವಿಸ್ತಾರಗೊಂಡಿದೆ. ಬಹಳ ಚೆನ್ನಾಗಿ ಸಾಧನೆ ಮಾಡಿದ್ದೀರಿ ಆದರೆ ಬಾಪ್ದಾದಾರವರು ಎಲ್ಲಾ ಜೋನ್ನವರಿಗೂ ಸಹ ಹೇಳುತ್ತಾರೆ - ಈಗ ವಾರೀಸ್ ಆಗುವಂತಹ ವಿಧಿಯನ್ನು ಈಗ ಮತ್ತಷ್ಟು ತೀವ್ರಗೊಳಿಸಿ. ಇಲ್ಲವೆಂದರೆ ದೂರು ಸಿಗುತ್ತದೆ. ನಾವು ಸಹಯೋಗಿಗಳಾಗಿಯೇ ಉಳಿದುಕೊಂಡೆವು. ತಾವು ಅವಶ್ಯವಾಗಿ ಯೋಜನೆ ಮಾಡಿ ನಂತರ ಯಾರ ಭಾಗ್ಯ ಏನಾಗಿರುತ್ತದೆ! ಮತ್ತೆ ಬರಬಹುದು. ಬಾಪ್ದಾದಾರವರು ಲಿಸ್ಟ್ ನೋಡಿದರು - ಎಲ್ಲರೂ ತಮ್ಮ-ತಮ್ಮ ಸಮಯದಲ್ಲಿ ಲಿಸ್ಟ್ ಕೊಡುತ್ತೀರೆಂದರೆ ಲಿಸ್ಟ್ ಅನುಸಾರ ಅವರು ಸಮೀಪದಲ್ಲಿದ್ದಾರೆ, ಇದರಿಂದಂತು ಬರಬಹುದು. ಈಗ ಈ ಪ್ರಯತ್ನ ಪಡಬೇಕಾಗಿದೆ. ಒಳ್ಳೆಯದು.
ಮೊದಲ ಬಾರಿ ಬಂದಿರುವವರಿಗೆ ಡಬಲ್ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಏಕೆ? ಏಕೆ ಡಬಲ್ ಶುಭಾಷಯಗಳನ್ನು ಕೊಡುತ್ತಿದ್ದಾರೆ? ಏಕೆಂದರೆ ಸಮಯದ ಹಾಹಾಕಾರದ ಮೊದಲೇ ತಮ್ಮ ಭಾಗ್ಯವನ್ನು ರೂಪಿಸಿಕೊಂಡಿದ್ದೀರಿ. ಅಹೋ ಪ್ರಭು, ಅಹೋ ಪ್ರಭು ಎಂದು ಹೇಳುವುದಕ್ಕೆ ಬದಲಾಗಿ ಮೇರಾ ಬಾಬಾ ಎಂದು ಹೇಳಿದಿರಿ ಆದ್ದರಿಂದ ಬಾಪ್ದಾದಾರವರು ಬಂದಿರುವವರನ್ನು ನೋಡಿ ಖುಷಿಯಾಗಿದ್ದಾರೆ. ಮಕ್ಕಳೇ ಬಂದು ಬಿಟ್ಟಿರಿ, ಬಂದು ಬಿಟ್ಟಿರಿ, ಬಂದು ಬಿಟ್ಟಿರಿ. ನೋಡಿ ಅರ್ಧ ಕ್ಲಾಸ ಮೊದಲಬಾರಿಯವರದಾಗಿದೆ. ಈಗ ತೀವ್ರ ಪುರುಷಾರ್ಥ ಮಾಡಬೇಕಾಗುತ್ತದೆ. ಪುರುಷಾರ್ಥಿಯಾಗುವುದಲ್ಲ ತೀವ್ರ ಪುರುಷಾರ್ಥಿ ಆಗಬೇಕಾಗಿದೆ. ಈಗಲೂ ಸಹ ಒಂದುವೇಳೆ ತೀವ್ರ ಪುರುಷಾರ್ಥ ಮಾಡಿದಿರೆಂದರೆ ತೀವ್ರ ಪುರುಷಾರ್ಥದಿಂದ ಮುಂದುವರೆಯಬಲ್ಲಿರಿ. ತೀವ್ರ ಪುರುಷಾರ್ಥದ ಮಾರ್ಜಿನ್ ಇದೆ. ಸಾಧಾರಣ ಪುರುಷಾರ್ಥದ ಸಮಯ ಕಳೆಯಿತು, ಮತ್ತು ಬಾಪ್ದಾದಾರವರು ಬಂದಿರುವಂತಹ ಮಕ್ಕಳನ್ನು ಪರಿಕ್ರಮಣ ಮಾಡಿ ನೋಡುತ್ತಾರೆ - ಮಕ್ಕಳು ಮುಂದುವರೆಯುತ್ತಿದ್ದಾರೆಯೇ ಅಥವಾ ಡೀಲಾ ಇರುವವರು ಮುಂದುವರೆಯುತ್ತಿದ್ದಾರೆಯೆ. ಬಾಪ್ದಾದಾರವರು ನಾಲ್ಕೂ ಕಡೆ ಪರಿಕ್ರಮಣ ಹಾಕುತ್ತಾರೆ. ತಾವಂತು ನಾಲ್ಕೂಕಡೆ ಹೋಗುವುದಕ್ಕೆ ಸಾಧ್ಯವಿಲ್ಲ ಆದರೆ ಬಾಪ್ದಾದಾರವರಂತು ಪ್ರತಿನಿತ್ಯ ಪರಿಕ್ರಮಣ ಮಾಡುತ್ತಾರೆ. ಬಾಬಾರವರ ಜೊತೆ ಯಾರು ತಮ್ಮ ಅಡ್ವಾನ್ಸ್ ಪಾರ್ಟಿಯಲ್ಲಿ ವಿಶೇಷವಾಗಿ ಹೋಗಿದ್ದಾರಲ್ಲವೆ ಅವರೂ ಸಹ ಬಾಪ್ದಾದಾರವರ ಜೊತೆ ಪರಿಕ್ರಮಣ ಹಾಕುವಲ್ಲಿ ಬರುತ್ತಾರೆ. ತಾವುಗಳನ್ನು ನೋಡಿ ಬಹಳ ಖುಷಿಯಾಗುತ್ತಾರೆ - ನಮ್ಮ ಸಹೋದರ, ನಮ್ಮ ಸಹೋದರಿ ಬಂದಿದ್ದಾರೆ, ಬಂದು ಬಿಟ್ಟಿದ್ದಾರೆ. ಆದ್ದರಿಂದ ಮುಂದುವರೆಯುತ್ತಾ ಸಾಗಿರಿ, ಇಡೀ ಪರಿವಾರದ ಶುಭಾಷಯಗಳು ತಮಗಿದೆ. ಒಳ್ಳೆಯದು.
ಇಂದು ಮಧುಬನದವರಿಗೆ ವಿಶೇಷವಾಗಿ ಬಾಪ್ದಾದಾರವರು ಒಂದು ಮಾತಿಗಾಗಿ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಯಾವ ಮಾತು? ಎಲ್ಲರೂ ಈಗಿನವರೆಗೆ ಸೇವೆಯನ್ನು ಬಹಳ ಚೆನ್ನಾಗಿ ಪ್ರೀತಿಯಿಂದ ಮಾಡಿದ್ದೀರಿ. ಎಷ್ಟೇ ದೊಡ್ಡ ಪರಿವಾರ ಬರಲಿ ಆದರೆ ಸೇವೆಯಲ್ಲಿ ನಿಮಿತ್ತರಂತು ಮಧುಬನದವರಾಗುತ್ತಾರೆ. ಆದ್ದರಿಂದ ಮಧುಬನ ನಿವಾಸಿಗಳು ಒಬ್ಬೊಬ್ಬರಿಗೂ, ಕೇವಲ ಕೆಳಗಿರುವವರಿಗಲ್ಲ (ಶಾಂತಿವನ), ಮೇಲಿರುವವರೂ ಸಹ, ಹಾಸ್ಪಿಟಲ್ನವರೂ ಸಹ ಯಾರೆಲ್ಲರೂ ಸಹಯೋಗ ಕೊಟ್ಟಿದ್ದಾರೆ ಮತ್ತು ಅವಿಶಾಂತರಾಗಿ ಸಹಯೋಗ ಕೊಡುತ್ತಿದ್ದಾರೆ ಆದ್ದರಿಂದ ಒಂದೊಂದು ಮಗುವಿಗೆ ತಮ್ಮ ಹೆಸರಿನಿಂದ ಬಾಪ್ದಾದಾರವರ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ. ಒಳ್ಳೆಯದು - ಯಾರು ಮಧುಬನದವರಿದ್ದೀರಿ ಅವರು ಎದ್ದೇಳಿ, ಯಾರೆಲ್ಲಾ ಇಲ್ಲಿ ಕುಳಿತಿದ್ದೀರಿ, ಆದ್ದರಿಂದ ವಿಶೇಷವಾಗಿ ಶುಭಾಷಯಗಳು. ಒಳ್ಳೆಯದು.
ವರ್ಗೀಕರಣದ ಸೇವೆಯ ಬಗ್ಗೆ - ಬಾಪ್ದಾದಾರವರು ನೋಡಿದರು - ಯಾವುದೆಲ್ಲಾ ವರ್ಗಗಳಾಗಿವೆ ಅವರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಕಾರ್ಯವನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಈಗ ಎರಡೂ ವರ್ಗದವರೂ ಸಹ ತಮ್ಮ ಲಿಸ್ಟ್ನ್ನು ಕಳುಹಿಸಿದ್ದೀರಿ. ಬಾಪ್ದಾದಾರವರು ನೋಡಿದರು ಮತ್ತು ಶುಭಾಷಯಗಳನ್ನು ಕೊಡುತ್ತಿದ್ದಾರೆ - ಸಂಬಂಧ-ಸಂಪರ್ಕದಲ್ಲಿ ಒಳ್ಳೊಳ್ಳೆಯವರು ಬಂದಿದ್ದಾರೆ ಆದರೆ ಬಾಪ್ದಾದಾರವರು ಸಮಯ ಪ್ರಮಾಣ ಇಂದು ಇದನ್ನೇ ಹೇಳಿದರು - ಸಹಯೋಗಿಯಾಗಿದ್ದಾರೆ ಆದರೆ ಈಗ ಯಜ್ಞ ಸ್ನೇಹಿಗಳನ್ನಾಗಿ ಮಾಡಿರಿ. ವಾರೀಸ್ ಕ್ವಾಲಿಟಿಯನ್ನಾಗಿ ಮಾಡಿರಿ. ಯಾರೆಲ್ಲಾ ಸಹಯೋಗಿಗಳಿದ್ದಾರೆ, ಬಾಪ್ದಾದಾರವರು ಮೊದಲೂ ಹೇಳಿದ್ದರು, ಲಿಸ್ಟ್ ಬಂದಿದರೆ ಅವರನ್ನು ಅವರನ್ನು ತಮ್ಮ ಜೋನ್ನಲ್ಲಿ, ಪ್ರತಿಯೊಂದು ಜೋನ್ ಒಂದೊಂದು ವರ್ಗದವರನ್ನು ತಮ್ಮ ಭಿನ್ನ-ಭಿನ್ನ ಸ್ಥಾನಗಳ ಸಹಯೋಗಿ ಅಥವಾ ಸ್ನೇಹಿ ಆತ್ಮರನ್ನು ಒಟ್ಟಾಗಿ ಒಂದು ಕಡೆ ಸೇರಿಸಿ. ಮೂರು ದಿನಗಳು ಅವರನ್ನು ಸಂಪರ್ಕದಲ್ಲಿ ತನ್ನಿರಿ, ಅವರು ಅಲ್ಲಿರಲಿ, ಮೀಟಿಂಗ್ ಮಾಡಲಿ ಮತ್ತು ಮುಂದಿನ ಕಾರ್ಯಕ್ರಮಗಳ ಯೋಜನೆ ಮಾಡಲಿ. ಪ್ರತೀ ಜೋನ್ನವರು ಅವರು ಎಲ್ಲಿಯೇ ಇರಲಿ, ಎಲ್ಲಾ ಜೋನ್ಗಳಿಂದ ಯಾವುದಾದರೂ ದೊಡ್ಡ ಸ್ಥಾನದಲ್ಲಿ ಎಲ್ಲಿಯ ಜೋನ್ ಆಗಿರಲಿ, ಸಹಯೋಗಿಗಳನ್ನು ಒಟ್ಟುಗೂಡಿಸಿ ಅವರ ಮೀಟಿಂಗ್ ಮಾಡಿ ಮತ್ತು ಅವರಿಗೆ ವಿಶೇಷವಾಗಿ ಮತ್ತಷ್ಟು ಮುಂದುವರೆಯುವ ಒಂದು ಶಕ್ತಿಯನ್ನು ತುಂಬಿರಿ. ಯಾರು ಈಗಿನವರೆಗೆ ಮಾಡಿದರು ಅವರಿಗೆ ಶುಭಾಷಯಗಳನ್ನು ಕೊಡಿ ಮತ್ತು ಮುಂದುವರೆಯು ಯೋಜನೆ ತಯಾರು ಮಾಡಿ ಕೊಡಿ ಏಕೆಂದರೆ ಅವರಿಗೂ ಸಹ ಮುಂದುವರೆಯುವ ವಿಧಿಯನ್ನು ತಿಳಿಸಬೇಕಾಗುತ್ತದೆ. ಅಂದಮೇಲೆ ಎಲ್ಲಾ ಜೋನ್ನವರು ಸೇರಿ ಒಂದೊಂದು ವರ್ಗದವರನ್ನು ಎಲ್ಲಿ ವಿಶೇಷ ಸ್ಥಾನವಿದೆ ಅಲ್ಲಿ ಒಟ್ಟಾಗಿ ಸೇರಿಸಿ. ನಂತರ ಆ ಸಂಘಟನೆಯಲ್ಲಿ ಎಷ್ಟು ಮಂದಿ ಬಂದರು, ಅವರು ಮುಂದೆ ಏನು ಮಾಡಬೇಕೆಂದು ಬಯಸುತ್ತಾರೆ ನೋಡೋಣ. ಈ ರೀತಿ ಸಂಪರ್ಕದಲ್ಲಿ ತರುತ್ತೀರೆಂದರೆ ವಾರೀಸ್ ಆಗಿ ಬಿಡುತ್ತಾರೆ.
| ವರದಾನ: |
ವರದಾನ: ಸದಾ ಜೊತೆಯ ಅನುಭವದ ಮುಖಾಂತರ ಪರಿಶ್ರಮದಿಂದ ಅವಿದ್ಯೆ ಆಗುವಂತಹ ಅತೀಂದ್ರೀಯ ಸುಖ ಮತ್ತು ಆನಂದ ಸ್ವರೂಪ ಭವ. ಹೇಗೆ ಮಕ್ಕಳು ಒಂದುವೇಳೆ ತಂದೆಯ ಮಡಿಲಿನಲ್ಲಿದ್ದರೆ, ಅವರಿಗೆ ಆಯಾಸ ಆಗುವುದಿಲ್ಲ. ತನ್ನ ಕಾಲಿನ ಮೇಲೆ ನಡೆದಾಗ ಆಯಾಸ ಮತ್ತು ಅಳುವುದು ಇಲ್ಲೂ ಸಹ ನೀವು ಮಕ್ಕಳು ತಂದೆಯ ಮಡಿಲಿನಲ್ಲಿ ಕುಳಿತು ನಡೆಯುತ್ತಿರುವಿರಿ. ಸ್ವಲ್ಪವೂ ಸಹ ಕಷ್ಟದ ಅನುಭವ ಇಲ್ಲ ಸಂಗಮ ಯುಗದಲ್ಲಿ ಯಾರು ಈ ರೀತಿ ಸದಾ ಜೊತೆಯಲ್ಲಿರುವಂತಹ ಆತ್ಮಗಳ ಆತ್ಮಗಳಿದ್ದಾರೆ ಅವರಿಗೆ ಪರಿಶ್ರಮ ಅವಿದ್ಯೆ ಮಾತ್ರಂ ಆಗಿರುತ್ತದೆ. ಪುರುಷಾರ್ಥವೂ ಸಹ ಒಂದು ಸ್ವಾಭಾವಿಕ ಕರ್ಮವಾಗಿ ಬಿಡುವುದು. ಅದ್ದರಿಂದ ಸದಾ ಅತೀಂದ್ರಿಯ ಸುಖ ಹಾಗೂ ಆನಂದ ಸ್ವರೂಪ ಸ್ವತಃ ಆಗಿ ಬಿಡುವರು. |
| ಸ್ಲೋಗನ್: | ಸ್ಲೋಗನ್: ಅತ್ಮೀಯ ಗುಲಾಬಿಯಾಗಿ ತನ್ನ ಆತ್ಮೀಯ ವೃತ್ತಿಯಿಂದ ವಾಯುಮಂಡಲದಲ್ಲಿ ಆತ್ಮೀಯತೆಯ ಸುಗಂಧವನ್ನು ಹರಡಿ. |
ಅವ್ಯಕ್ತ ಸೂಚನೆ:- ಬ್ರಹ್ಮಾ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣತೆ ಸ್ಥಿತಿಯ ಅನುಭವ ಮಾಡಿರಿ.
ಹೇಗೆ ಬ್ರಹ್ಮಾ ತಂದೆ ಸದಾ ಅಶರೀರಿ ಸ್ಥಿತಿಯಲ್ಲಿದ್ದು, ಶರೀರದ ಆಧಾರವನ್ನು ತೆಗೆದುಕೊಂಡು ಕರ್ಮಾ ಮಾಡಿದರು ನಂತರ ಭಿನ್ನರಾದರು. ಇದೇ ಅಭ್ಯಾಸದಿಂದ ಅವರು ಕರ್ಮಾತೀತರಾದರು. ನೀವು ಮಕ್ಕಳು ಸಹ ಕರ್ಮ ಮಾಡುತ್ತಾ ಅನುಭವ ಮಾಡಿ ಹೇಗೆ ಯಾವುದೋ ವಸ್ತ್ರವನ್ನು ಧಾರಣೆ ಮಾಡಿ ಕಾರ್ಯ ಮಾಡುತ್ತಿದ್ದೇನೆ. ಕಾರ್ಯ ಪೂರ್ಣ ಆಯಿತು ಮತ್ತು ವಸ್ತ್ರದಿಂದ ಭಿನ್ನನಾಗುವುದು. ಶರೀರ ಮತ್ತು ಆತ್ಮ ಎರಡರ ಭಿನ್ನತನ ನಡೆಯುತ್ತಾ ತಿರುಗಾಡುತ್ತಾ ಅನುಭವ ಮಾಡಿ.