| 08/10/24 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| ”ಮಧುರ ಮಕ್ಕಳೇ - ಬುದ್ಧಿಯನ್ನು ಪರಿಶುದ್ಧ ಮಾಡಿಕೊಳ್ಳಬೇಕೆಂದರೆ ಒಬ್ಬ ತಂದೆಯನ್ನೇ ನೆನಪು ಮಾಡಿರಿ, ನೆನಪಿನಿಂದಲೇ ಆತ್ಮವು ಸ್ವಚ್ಛವಾಗುತ್ತಾ ಹೋಗುವುದು” | |
| ಪ್ರಶ್ನೆ: | ವರ್ತಮಾನ ಸಮಯದಲ್ಲಿ ಮನುಷ್ಯರು ತಮ್ಮ ಸಮಯ ಹಾಗೂ ಹಣವನ್ನು ಹೇಗೆ ವ್ಯರ್ಥವಾಗಿ ಕಳೆಯುತ್ತಿದ್ದಾರೆ? |
| ಉತ್ತರ: | ಯಾರಾದರೂ ಶರೀರ ಬಿಡುತ್ತಾರೆಂದರೆ ಅವರ ಹಿಂದೆ ಎಷ್ಟೊಂದು ಹಣವನ್ನು ಖರ್ಚು ಮಾಡುತ್ತಿರುತ್ತಾರೆ. ಶರೀರವನ್ನು ಬಿಟ್ಟು ಹೊರಟುಹೋದ ಮೇಲೆ ಅವರಿಗೆ ಯಾವುದೇ ಬೆಲೆಯಂತೂ ಉಳಿಯಲಿಲ್ಲ ಆದ್ದರಿಂದ ಅವರಿಗಾಗಿ ಏನೆಲ್ಲವನ್ನೂ ಮಾಡುತ್ತಾರೆಯೋ ಅದರಲ್ಲಿ ತಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಾರೆ. |
ಓಂ ಶಾಂತಿ. ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಇವರೂ (ಬ್ರಹ್ಮಾ) ಸಹ ಅದೇ ರೀತಿ ಹೇಳುತ್ತಾರೆ. ಒಬ್ಬರು ತಂದೆ, ಇನ್ನೊಬ್ಬರು ದಾದಾ ಆಗಿದ್ದಾರೆ. ದಾದಾರವರೂ ಸಹ ಆತ್ಮಿಕ ತಂದೆಯು ನೀವು ಮಕ್ಕಳಿಗೆ ಭೂತ, ಭವಿಷ್ಯತ್, ವರ್ತಮಾನದ ಜ್ಞಾನವನ್ನು ತಿಳಿಸುತ್ತಾರೆಂದೇ ಹೇಳುತ್ತಾರೆ. ವಾಸ್ತವದಲ್ಲಿ ಸತ್ಯಯುಗದಿಂದ ಹಿಡಿದು ತ್ರೇತಾದ ಅಂತ್ಯದವರೆಗೆ ಏನಾಗಿದೆ ಎಂಬುದು ಮುಖ್ಯವಾದ ಮಾತಾಗಿದೆ. ಬಾಕಿ ದ್ವಾಪರ-ಕಲಿಯುಗದಲ್ಲಿ ಯಾರ್ಯಾರು ಬಂದರು, ಏನೆಲ್ಲವೂ ನಡೆಯಿತೋ ಅದರ ಇತಿಹಾಸ-ಭೂಗೋಳವಂತೂ ಬಹಳಷ್ಟಿದೆ. ಸತ್ಯಯುಗ-ತ್ರೇತಾಯುಗದ ಯಾವುದೇ ಚರಿತ್ರೆ-ಭೂಗೋಳವಿಲ್ಲ. ಮತ್ತೆಲ್ಲರದೂ ಚರಿತ್ರೆ, ಭೂಗೋಳವಿದೆ ಬಾಕಿ ದೇವಿ-ದೇವತೆಗಳನ್ನು ಲಕ್ಷಾಂತರ ವರ್ಷಗಳಿಗೆ ಮುಂಚೆ ತೆಗೆದುಕೊಂಡು ಹೋಗಿದ್ದಾರೆ. ಇದು ಬೇಹದ್ದಿನ ತಪ್ಪು ತಿಳುವಳಿಕೆಯಾಗಿಬಿಟ್ಟಿದೆ. ನೀವೂ ಸಹ ಬುದ್ಧಿ ಮಾಂದ್ಯರಾಗಿದ್ದೀರಿ. ಈಗ ಸ್ವಲ್ಪ-ಸ್ವಲ್ಪ ಅರಿತುಕೊಳ್ಳುತ್ತಿದ್ದೀರಿ. ಕೆಲವರಂತೂ ಈಗಲೂ ಸಹ ತಿಳಿದುಕೊಂಡಿಲ್ಲ, ಇನ್ನೂ ತಿಳಿದುಕೊಳ್ಳುವುದು ಬಹಳಷ್ಟಿದೆ. ತಂದೆಯು ಅಬುಪರ್ವತದ ಮಹಿಮೆಯನ್ನು ತಿಳಿಸಿದ್ದಾರೆ. ಅಂದಮೇಲೆ ಇದನ್ನು ವಿಚಾರ ಮಾಡಬೇಕು. ನೀವಿಲ್ಲಿ ಕುಳಿತಿದ್ದೀರೆಂದರೆ ನಿಮ್ಮ ಬುದ್ಧಿಯಲ್ಲಿ ಬರಬೇಕು, ನಿಮ್ಮ ನೆನಪಾರ್ಥವಾಗಿ ದಿಲ್ವಾಡಾ ಮಂದಿರ ಯಾವಾಗ ಸ್ಥಾಪನೆಯಾಗಿದೆ, ಎಷ್ಟು ವರ್ಷಗಳ ನಂತರ ಆಗಿದೆ. 1250 ವರ್ಷಗಳಾಗಿದೆ ಎಂದು ಹೇಳುತ್ತಾರೆ ಅಂದಮೇಲೆ ಇನ್ನೆಷ್ಟು ವರ್ಷಗಳು ಉಳಿಯಿತು? 3750 ವರ್ಷಗಳು ಉಳಿದಿದೆ. ಅವರೂ ಸಹ ಈಗಿನ ನೆನಪಾರ್ಥ ಮತ್ತು ವೈಕುಂಠದ ನೆನಪಾರ್ಥವನ್ನು ಮಾಡಿದ್ದಾರೆ. ಮಂದಿರಗಳನ್ನು ನಿರ್ಮಿಸುವುದರಲ್ಲಿ ಪೈಪೋಟಿಯು ನಡೆಯುತ್ತದೆ. ಒಬ್ಬರು ಇನ್ನೊಬ್ಬರಿಗಿಂತ ಸುಂದರವಾಗಿ ಕಟ್ಟಿಸುತ್ತಾರೆ. ಈಗಂತೂ ಆ ರೀತಿ ಕಟ್ಟಿಸಲು ಹಣವಾದರೂ ಎಲ್ಲಿದೆ? ಆ ಸಮಯದಲ್ಲಿ ಹಣವು ಬಹಳಷ್ಟಿತ್ತು ಆದ್ದರಿಂದ ಸೋಮನಾಥನ ಮಂದಿರವನ್ನು ಎಷ್ಟು ದೊಡ್ಡದಾಗಿ ಮಾಡಿದ್ದಾರೆ! ಈಗಂತೂ ಮಾಡಲು ಸಾಧ್ಯವಿಲ್ಲ. ಭಲೆ ಆಗ್ರಾ ಮೊದಲಾದ ಕಡೆ ಕಟ್ಟಿಸುತ್ತಿರುತ್ತಾರೆ ಆದರೆ ಅದೆಲ್ಲವೂ ವ್ಯರ್ಥವಾಗಿದೆ. ಮನುಷ್ಯರಂತೂ ಅಂಧಕಾರದಲ್ಲಿದ್ದಾರಲ್ಲವೆ! ಅವರು ಕಟ್ಟಿಸುವ ಸಮಯಕ್ಕೆ ವಿನಾಶವು ಬಂದುಬಿಡುತ್ತದೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಬೀಳಿಸುತ್ತಿರುತ್ತಾರೆ ಮತ್ತು ಕಟ್ಟಿಸುತ್ತಿರುತ್ತಾರೆ. ಸುಲಭವಾಗಿ ಹಣವನ್ನು ಸಂಪಾದಿಸುತ್ತಿರುತ್ತಾರೆ ಆದ್ದರಿಂದ ಎಲ್ಲವೂ ವ್ಯರ್ಥವಾಗಿ ಖರ್ಚಾಗುತ್ತಾ ಇರುತ್ತದೆ. ಸಮಯವೂ ವ್ಯರ್ಥ, ಶಕ್ತಿಯೂ ವ್ಯರ್ಥ, ಹಣವೂ ವ್ಯರ್ಥ. ಯಾರಾದರೂ ಶರೀರ ಬಿಟ್ಟರೆ ಎಷ್ಟೊಂದು ಸಮಯವನ್ನು ಕಳೆಯುತ್ತಾರೆ. ನಾವಂತೂ ಏನೂ ಮಾಡುವುದಿಲ್ಲb. ಆತ್ಮವು ಹೊರಟು ಹೋಯಿತೆಂದರೆ ಇನ್ನು ಉಳಿದ ಪೊರೆ ಏನು ಕೆಲಸಕ್ಕೆ ಬರುತ್ತದೆ! ಸರ್ಪವು ಪೊರೆಯನ್ನು ಬಿಟ್ಟುಬಿಡುತ್ತದೆ, ಆ ಪೊರೆಗೆ ಯಾವುದೇ ಬೆಲೆಯಿದೆಯೇ! ಏನೂ ಇಲ್ಲ. ಭಕ್ತಿಮಾರ್ಗದಲ್ಲಿ ಪೊರೆಗೆ ಬೆಲೆಯಿದೆ, ಜಡಚಿತ್ರಗಳಿಗೆ ಎಷ್ಟೊಂದು ಪೂಜೆ ಮಾಡುತ್ತಾರೆ. ಆದರೆ ಇವರು ಯಾವಾಗ ಬಂದರು, ಹೇಗೆ ಬಂದರು ಏನೂ ತಿಳಿದಿಲ್ಲ. ಇದಕ್ಕೆ ಭೂತ ಪೂಜೆಯೆಂದು ಹೇಳಲಾಗುತ್ತದೆ ಅಂದರೆ ಪಂಚತತ್ವಗಳ ಪೂಜೆ ಮಾಡುತ್ತಾರೆ. ತಿಳಿದುಕೊಳ್ಳಿ, ಈ ಲಕ್ಷ್ಮಿ-ನಾರಾಯಣರು ಸ್ವರ್ಗದಲ್ಲಿ ರಾಜ್ಯ ಮಾಡುತ್ತಿದ್ದರು, ಅವರಿಗೆ 150 ವರ್ಷ ಪೂರ್ಣವಾಯಿತು, ಅವರು ಶರೀರ ಬಿಟ್ಟುಬಿಟ್ಟರು ಅಂದಮೇಲೆ ನಂತರ ಶರೀರವಂತೂ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಅವರಿಗೆ ಅಲ್ಲಿ ಏನು ಬೆಲೆಯಿರುತ್ತದೆ! ಆತ್ಮವು ಹೊರಟು ಹೋಯಿತು, ಶರೀರವು ಚಂಡಾಲನ ಕೈಯಲ್ಲಿ ಕೊಟ್ಟುಬಿಟ್ಟರೆಂದರೆ ನಂತರ ಅವರು ಅದನ್ನು ರೀತಿ-ಪದ್ಧತಿಯನುಸಾರ ಸುಟ್ಟುಹಾಕುತ್ತಾರೆ. ನಂತರ ಇಲ್ಲಿಯ ತರಹ ಅವರ ಭಸ್ಮ (ಬೂದಿ) ವನ್ನು ಅವರ ಹೆಸರಿನಲ್ಲಿ ನೀರಿನಲ್ಲಿ ಹಾಕುವುದಿಲ್ಲ. ಅದೆಲ್ಲವನ್ನೂ ಇಲ್ಲಿಯೇ ಮಾಡುತ್ತಾರೆ. ಬ್ರಾಹ್ಮಣರಿಗೆ ತಿನ್ನಿಸುತ್ತಾರೆ ಆದರೆ ಸತ್ಯಯುಗದಲ್ಲಿ ಇದೇನನ್ನೂ ಮಾಡುವುದಿಲ್ಲ ಏಕೆಂದರೆ ಆತ್ಮವು ಹೊರಟು ಹೋದಮೇಲೆ ಈ ಶರೀರವೆಂಬ ಪೊರೆಯು ಯಾವುದೇ ಕೆಲಸಕ್ಕೆ ಬರುವುದಿಲ್ಲ. ಆ ಪೊರೆಯನ್ನು ಸುಟ್ಟುಹಾಕುತ್ತಾರೆ. ಕೇವಲ ಚಿತ್ರಗಳನ್ನು ಇಟ್ಟುಕೊಳ್ಳುತ್ತಾರೆ, ಅದರಲ್ಲಿಯೂ ನಿಖರವಾದ ಚಿತ್ರವು ಸಿಗಲು ಸಾಧ್ಯವಿಲ್ಲ. ಈ ಆದಿದೇವನ ಕಲ್ಲಿನ ಮೂರ್ತಿಯೂ ಸಹ ಅಷ್ಟು ನಿಖರವಾಗಿಲ್ಲ. ಪೂಜೆಗಾಗಿ ಕಲ್ಲಿನ ಮೂರ್ತಿಯನ್ನು ಮಾಡಿದ್ದಾರೆ, ಮೂಲತಃ ಯಾವ ಶರೀರವಿತ್ತು ಅದು ಸುಟ್ಟು ಸಮಾಪ್ತಿಯಾಯಿತಲ್ಲವೆ! ನಂತರ ಭಕ್ತಿಮಾರ್ಗದಲ್ಲಿ ಪೂಜೆಗಾಗಿ ಈ ಮೂರ್ತಿಯನ್ನು ಮಾಡಿದ್ದಾರೆ. ಈ ಮಾತುಗಳ ಬಗ್ಗೆ ವಿಚಾರವಂತೂ ನಡೆಯುತ್ತದೆಯಲ್ಲವೆ. ಅಬುಪರ್ವತದ ಮಹಿಮೆಯನ್ನು ಬಹಳ ಚೆನ್ನಾಗಿ ಸಿದ್ಧ ಮಾಡಬೇಕು. ನೀವು ಮಕ್ಕಳೂ ಸಹ ಇಲ್ಲಿಯೇ ಕುಳಿತಿದ್ದೀರಿ. ತಂದೆಯು ಇಡೀ ವಿಶ್ವವನ್ನು ನರಕದಿಂದ ಸ್ವರ್ಗವನ್ನಾಗಿ ಮಾಡುತ್ತಿದ್ದಾರೆಂದರೆ ಇದೇ ಎಲ್ಲದಕ್ಕಿಂತ ಸರ್ವಶ್ರೇಷ್ಠ ತೀರ್ಥಸ್ಥಾನವಾಯಿತು. ಈಗಿನ್ನೂ ಮನುಷ್ಯರಿಗೆ ಇಷ್ಟೊಂದು ಭಾವನೆಯಿಲ್ಲ, ಕೇವಲ ಒಬ್ಬ ಶಿವನಲ್ಲಿ ಭಾವನೆಯಿದೆ. ಎಲ್ಲಿಗೇ ಹೋದರೂ ಶಿವನ ಮಂದಿರವು ಅವಶ್ಯವಾಗಿ ಇರುತ್ತದೆ. ಅಮರನಾಥದಲ್ಲಿಯೂ ಶಿವಲಿಂಗವೇ ಇದೆ. ಶಂಕರನು ಪಾರ್ವತಿಗೆ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಅಲ್ಲಂತೂ ಕಥೆಯ ಮಾತೇ ಇಲ್ಲ. ಮನುಷ್ಯರಿಗೆ ಸ್ವಲ್ಪವೂ ತಿಳುವಳಿಕೆಯಿಲ್ಲ. ಮೊದಲು ನಿಮಗೂ ತಿಳಿದಿರಲಿಲ್ಲ, ಈಗ ನಿಮಗೆ ತಿಳುವಳಿಕೆ ಬಂದಿದೆ.
ಈಗ ತಂದೆಗೆ ಅಬುಪರ್ವತದ ಎಷ್ಟೊಂದು ಮಹಿಮೆ ಮಾಡುತ್ತಾರೆ. ಸರ್ವತೀರ್ಥಗಳಲ್ಲಿ ಇದು ಮಹಾನ್ ತೀರ್ಥಸ್ಥಾನವಾಗಿದೆ. ತಂದೆಯಂತೂ ಬಹಳಷ್ಟು ತಿಳಿಸುತ್ತಾರೆ ಆದರೆ ಇದು ಅನನ್ಯ ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು. ಈಗಂತೂ ಕೆಲವರಿಗೆ ಯೋಗವು ಬಹಳ ಕಠಿಣವೆನಿಸುತ್ತದೆ. ಯೋಗದ ಜೊತೆಗೆ ಜ್ಞಾನವೂ ಸಹ ಬೇಕಾಗಿದೆ. ಕೇವಲ ಯೋಗದಲ್ಲಿ ಇರುವುದಲ್ಲ. ಯೋಗದಲ್ಲಿ ಜ್ಞಾನದ ಅವಶ್ಯಕತೆ ಬಹಳ ಇದೆ. ದೆಹಲಿಯಲ್ಲಿ ಜ್ಞಾನ-ವಿಜ್ಞಾನಭವನ ಎಂದು ಹೆಸರನ್ನಿಟ್ಟಿದ್ದಾರೆ ಆದರೆ ಇದರ ಅರ್ಥವೇನು ಎಂಬುದನ್ನು ತಿಳಿದಿದ್ದಾರೆಯೇ. ಜ್ಞಾನ-ವಿಜ್ಞಾನವಂತೂ ಒಂದು ಸೆಕೆಂಡಿನದಾಗಿದೆ. ಶಾಂತಿಧಾಮ, ಸುಖಧಾಮ ಆದರೆ ಮನುಷ್ಯರಿಗೆ ಸ್ವಲ್ಪವೂ ಬುದ್ಧಿಯಿಲ್ಲ, ಅರ್ಥವನ್ನು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ಚಿನ್ಮಯಾನಂದ ಮುಂತಾದ ದೊಡ್ಡ-ದೊಡ್ಡ ಸನ್ಯಾಸಿಗಳು ಗೀತೆಯನ್ನು ತಿಳಿಸುತ್ತಾರೆ, ಅವರಿಗೆ ಎಷ್ಟೊಂದು ಜನ ಅನುಯಾಯಿಗಳಿರುತ್ತಾರೆ. ಎಲ್ಲದಕ್ಕಿಂತ ದೊಡ್ಡ ಜಗತ್ತಿನ ಗುರು ಒಬ್ಬರೇ ತಂದೆಯಾಗಿದ್ದಾರೆ. ತಂದೆ ಮತ್ತು ಶಿಕ್ಷಕನಿಗಿಂತ ದೊಡ್ಡವರು ಗುರುವಾಗಿರುತ್ತಾರೆ. ಸ್ತ್ರೀ ಎಂದೂ ಸಹ ಅನ್ಯಪತಿಯನ್ನು ಮಾಡಿಕೊಳ್ಳುವುದಿಲ್ಲ ಅಂದಾಗ ಅನ್ಯರನ್ನು ಗುರುವನ್ನಾಗಿ ಮಾಡಿಕೊಳ್ಳಬಾರದು. ಒಬ್ಬ ಗುರುವನ್ನು ಮಾಡಿಕೊಂಡರೆ ಅವರೇ ಸದ್ಗತಿಯನ್ನು ಮಾಡಬೇಕಾಗಿದೆ, ಮತ್ತೊಬ್ಬ ಗುರುವೇಕೆ? ಸದ್ಗುರುವಾದರೂ ಒಬ್ಬರೇ ಬೇಹದ್ದಿನ ತಂದೆಯಾಗಿದ್ದಾರೆ. ಎಲ್ಲರಿಗೂ ಸದ್ಗತಿಯನ್ನು ಮಾಡುವವರಾಗಿದ್ದಾರೆ. ಆದರೆ ಈ ಎಲ್ಲ ಮಾತುಗಳನ್ನು ಅನೇಕರು ತಿಳಿದುಕೊಳ್ಳುವುದೇ ಇಲ್ಲ. ತಂದೆಯು ರಾಜಧಾನಿ ಸ್ಥಾಪನೆಯಾಗುತ್ತಾ ಇದೆ ಎಂದು ತಿಳಿಸಿದ್ದಾರೆ ಅಂದಾಗ ಅದರಲ್ಲಿ ನಂಬರ್ವಾರ್ ಇರುತ್ತಾರಲ್ಲವೆ. ಕೆಲವರಾದರೂ ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ, ಅವರದು ಡ್ರಾಮಾದಲ್ಲಿ ಪಾತ್ರವೇ ಹಾಗಿರುತ್ತದೆ. ಶಿಕ್ಷಕರು ತಿಳಿದುಕೊಳ್ಳಲು ಸಾಧ್ಯತೆಯಿದೆ. ಯಾವ ಶರೀರದ ಮೂಲಕ ತಿಳಿಸುತ್ತಾರೆಯೋ ಅವರಿಗೂ ಸಹ ಗೊತ್ತಿರುತ್ತದೆ. ಇದು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ಬೆಲ್ಲವೆಂದು ಶಿವತಂದೆಗೆ ಹೇಳಲಾಗುತ್ತದೆ. ಅವರು ಎಲ್ಲರ ಸ್ಥಿತಿಯನ್ನು ತಿಳಿದಿದ್ದಾರೆ. ಯಾರು ಹೇಗೆ ಓದುತ್ತಾರೆ, ಎಷ್ಟು ಸೇವೆಯನ್ನು ಮಾಡುತ್ತಾರೆ, ತಂದೆಯ ಸೇವೆಯಲ್ಲಿ ಎಷ್ಟು ಸಫಲ ಮಾಡಿಕೊಳ್ಳುತ್ತಾರೆ ಎಂಬುದನ್ನು ಪ್ರತಿಯೊಬ್ಬರೂ ಓದಿನಿಂದ ತಿಳಿಯಲು ಸಾಧ್ಯತೆಯಿದೆ. ಈ ಬ್ರಹ್ಮಾರವರು ಮನೆ-ಮಠವನ್ನು ಬಿಟ್ಟಿದ್ದಾರೆ ಆದ್ದರಿಂದ ಲಕ್ಷ್ಮಿ-ನಾರಾಯಣರಾಗುತ್ತಾರೆ ಎಂದಲ್ಲ. ಪರಿಶ್ರಮ ಪಡುತ್ತಾರಲ್ಲವೆ. ಈ ಜ್ಞಾನವು ಬಹಳ ಶ್ರೇಷ್ಠವಾದದ್ದಾಗಿದೆ. ಯಾರಾದರೂ ಒಂದುವೇಳೆ ತಂದೆಯ ಅವಜ್ಞೆಯನ್ನು ಮಾಡುತ್ತಾರೆಂದರೆ ಒಂದೇಸಾರಿ ಕಲ್ಲುಬುದ್ಧಿಯವರಾಗುತ್ತಾರೆ. ಇದು ಇಂದ್ರಸಭೆಯಾಗಿದೆ ಎಂದು ತಂದೆಯು ತಿಳಿಸಿದ್ದಾರೆ. ಶಿವತಂದೆಯು ಜ್ಞಾನದ ಮಳೆಯನ್ನು ಸುರಿಸುತ್ತಾರೆ. ಅವರ ಆಜ್ಞೆಯನ್ನು ಉಲ್ಲಂಘನೆ ಮಾಡಿದ್ದೇ ಆದರೆ ಕಲ್ಲುಬುದ್ಧಿಯವರಾಗುತ್ತಾರೆ ಎಂದು ಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ ಆದ್ದರಿಂದ ತಂದೆಯು ಎಲ್ಲರಿಗೂ ಬರೆಯುತ್ತಾ ಇರುತ್ತಾರೆ. ಜೊತೆಯಲ್ಲಿ ಕರೆದುಕೊಂಡು ಬರಬೇಕಾದರೆ ಎಚ್ಚರವಹಿಸಿ ಕರೆದುಕೊಂಡು ಬನ್ನಿ. ವಿಕಾರಿ, ಅಪವಿತ್ರರು ಬಂದು ಇಲ್ಲಿ ಕುಳಿತುಕೊಳ್ಳಬಾರದು. ಇಲ್ಲವೆಂದರೆ ಕರೆದುಕೊಂಡು ಬಂದಂತಹ ಬ್ರಾಹ್ಮಣಿಯರ ಮೇಲೆ ದೋಷವಾಗುತ್ತದೆ. ಈ ರೀತಿ ಯಾರನ್ನೂ ಸಹ ಕರೆದುಕೊಂಡು ಬರಬೇಡಿ. ಬಹಳ ದೊಡ್ಡ ಜವಾಬ್ದಾರಿಯಿದೆ. ಬಹಳ ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ತಮಗೆ ವಿಶ್ವದ ರಾಜ್ಯಭಾಗ್ಯವನ್ನು ನೀಡುತ್ತಾರೆ ಅಂದಾಗ ಅವರಿಗೆ ಎಷ್ಟೊಂದು ಗೌರವವನ್ನು ಇಡಬೇಕು. ಅನೇಕರಿಗೆ ಮಿತ್ರಸಂಬಂಧಿಗಳು ಮುಂತಾದವರ ನೆನಪು ಬರುತ್ತಾ ಇರುತ್ತದೆ. ತಂದೆಯ ನೆನಪೇ ಇರುವುದಿಲ್ಲ. ಆಂತರ್ಯದಲ್ಲಿ ಅದೇ ಚಿಂತೆಯಿರುತ್ತದೆ. ಇದು ಅಸುರಿ ಪ್ರಪಂಚವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಈಗ ದೈವೀ ಪ್ರಪಂಚವಾಗುತ್ತದೆ. ನಮ್ಮ ಗುರಿ-ಧ್ಯೇಯವೇ ಲಕ್ಷ್ಮಿ-ನಾರಾಯಣರಾಗುವುದಾಗಿದೆ. ಯಾವುದೆಲ್ಲಾ ಚಿತ್ರಗಳಿವೆಯೋ ಎಲ್ಲರ ಜೀವನದ ಕಥೆಯನ್ನು ನೀವು ತಿಳಿದಿದ್ದೀರಿ. ಮನುಷ್ಯರಿಗೆ ತಿಳಿಸಲು ಎಷ್ಟೊಂದು ಶ್ರಮಪಡುತ್ತೀರಿ. ಇವರು ಒಳ್ಳೆಯ ಬುದ್ಧಿವಂತರಾಗಿದ್ದಾರೆ ಎಂಬುದು ತಮಗೂ ಸಹ ತಿಳಿದುಬರುತ್ತದೆ. ಇವರು ಏನನ್ನೂ ತಿಳಿದುಕೊಳ್ಳುವುದಿಲ್ಲ ಎಂದು ತಿಳಿದುಬರುತ್ತದೆ. ನಿಮ್ಮಲ್ಲಿಯೂ ಯಾರೆಷ್ಟು ಜ್ಞಾನವನ್ನು ತನ್ನದನ್ನಾಗಿಸಿಕೊಂಡಿದ್ದೀರೋ ಅದರನುಸಾರ ಸೇವೆಯನ್ನೂ ಮಾಡುತ್ತಿದ್ದೀರಿ. ಗೀತೆಯ ಭಗವಂತನ ಬಗ್ಗೆ ತಿಳಿಸುವುದೇ ಮುಖ್ಯಮಾತಾಗಿದೆ. ಸೂರ್ಯವಂಶಿ ದೇವಿ-ದೇವತೆಗಳದು ಇದೊಂದೇ ಶಾಸ್ತ್ರವಾಗಿದೆ, ಬೇರೆ-ಬೇರೆಯಿಲ್ಲ. ಬ್ರಾಹ್ಮಣರದೂ ಸಹ ಬೇರೆಯಿಲ್ಲ. ಇದು ಬಹಳ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಈ ಜ್ಞಾನಮಾರ್ಗದಲ್ಲಿಯೂ ಸಹ ನಡೆಯುತ್ತಾ-ನಡೆಯುತ್ತಾ ಒಂದುವೇಳೆ ವಿಕಾರದಲ್ಲಿ ಬಿದ್ದುಹೋದರೆ ಈ ಜ್ಞಾನವು ಇಲ್ಲದಂತಾಗುತ್ತದೆ. ಬಹಳ ಒಳ್ಳೊಳ್ಳೆಯವರು ಹೋಗಿ ವಿಕಾರಿಗಳಾಗಿ ಕಲ್ಲುಬುದ್ಧಿಯವರಾದರು. ಇದರಲ್ಲಿ ಬಹಳ ತಿಳುವಳಿಕೆ ಬೇಕಾಗಿದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಮೆಲುಕು ಹಾಕುತ್ತಿರಬೇಕು. ಇಲ್ಲಿ ತಮಗೆ ಬಹಳ ಸುಲಭವಾಗಿರುತ್ತದೆ, ಏಕೆಂದರೆ ಇಲ್ಲಿ ಯಾವುದೇ ವ್ಯಾಪಾರ-ವ್ಯವಹಾರ ಮುಂತಾದ ಜಂಜಾಟವಿರುವುದಿಲ್ಲ. ಹೊರಗಡೆ ಇರುವುದರಿಂದ ವ್ಯಾಪಾರ-ವ್ಯವಹಾರದ್ದು ಎಷ್ಟೊಂದು ಚಿಂತೆಯಿರುತ್ತದೆ. ಮಾಯೆಯು ಬಿರುಗಾಳಿ ತಂದುಬಿಡುತ್ತದೆ, ಇಲ್ಲಿಯಾದರೂ ಯಾವುದೇ ವ್ಯಾಪಾರ-ವ್ಯವಹಾರವಿರುವುದಿಲ್ಲ, ಏಕಾಂತವಿರುತ್ತದೆ. ತಂದೆಯಾದರೂ ಮಕ್ಕಳಿಗೆ ಪುರುಷಾರ್ಥ ಮಾಡಿಸುತ್ತಿರುತ್ತಾರೆ. ಈ ತಂದೆಯೂ (ಬ್ರಹ್ಮಾ) ಸಹ ಪುರುಷಾರ್ಥಿಯಾಗಿದ್ದಾರೆ. ಪುರುಷಾರ್ಥವನ್ನು ಮಾಡಿಸುವಂತಹವರು ತಂದೆ(ಶಿವ)ಯಾಗಿದ್ದಾರೆ. ಇದರಲ್ಲಿ ವಿಚಾರಸಾಗರ ಮಂಥನ ಮಾಡಬೇಕಾಗುತ್ತದೆ. ಇಲ್ಲಿಯಾದರೂ ತಂದೆಯು ಮಕ್ಕಳ ಜೊತೆ ಕುಳಿತಿದ್ದಾರೆ. ಯಾರು ಪೂರ್ಣ ಸಹಯೋಗದ ಬೆರಳನ್ನು ನೀಡುತ್ತಾರೆಯೋ ಅವರಿಗೇ ಸೇವಾಧಾರಿ ಎಂದು ಕರೆಯಲಾಗುತ್ತದೆ. ಉಳಿದವರು ನಷ್ಟವನ್ನುಂಟು ಮಾಡುತ್ತಾರೆ, ಸೇವಾಭಂಗವನ್ನೂ ಸಹ ಮಾಡುತ್ತಾರೆ, ವಿಘ್ನವನ್ನೂ ಹಾಕುತ್ತಾರೆ. ಮಹಾರಾಜ-ಮಹಾರಾಣಿ ಆಗುತ್ತಾರೆಂದರೆ ಅವರಿಗೆ ದಾಸ-ದಾಸಿಗಳೂ ಸಹ ಬೇಕಲ್ಲವೆ, ಅವರೂ ಇಲ್ಲಿದ್ದವರೇ ಆಗುತ್ತಾರೆ ಎಂಬುದು ತಮಗೆ ತಿಳಿದಿದೆ. ಎಲ್ಲವೂ ವಿದ್ಯೆಯನ್ನು ಅವಲಂಭಿಸಿದೆ. ಈ ಶರೀರವನ್ನು ಖುಷಿಯಿಂದ ಬಿಡಬೇಕಾಗಿದೆ, ದುಃಖದ ಮಾತೇ ಇಲ್ಲ. ಪುರುಷಾರ್ಥಕ್ಕಾಗಿ ಸಮಯವಂತೂ ಸಿಕ್ಕಿಯೇ ಇದೆ. ಜ್ಞಾನವು ಸೆಕೆಂಡಿನದಾಗಿದೆ, ಶಿವತಂದೆಯಿಂದ ಆಸ್ತಿಯು ಸಿಗುತ್ತದೆಯೆಂಬುದು ಬುದ್ಧಿಯಲ್ಲಿದೆ. ಸ್ವಲ್ಪವಾದರೂ ಜ್ಞಾನವನ್ನು ಕೇಳಿದರೂ, ಶಿವತಂದೆಯನ್ನು ನೆನಪು ಮಾಡಿದರೂ ಸಹ ಸ್ವರ್ಗದಲ್ಲಿ ಬರಲು ಸಾಧ್ಯತೆಯಿದೆ. ಪ್ರಜೆಗಳು ಅನೇಕರು ಆಗುವವರಿದ್ದಾರೆ, ನಮ್ಮ ರಾಜಧಾನಿ ಸೂರ್ಯವಂಶಿ, ಚಂದ್ರವಂಶಿ ಇಲ್ಲಿಯೇ ಸ್ಥಾಪನೆಯಾಗುತ್ತಾ ಇದೆ. ತಂದೆಯ ಮಕ್ಕಳಾಗಿಯೂ ಒಂದುವೇಳೆ ನಿಂಧನೆ ಹಾಕುತ್ತಾರೆಂದರೆ ಬಹಳ ಹೊರೆ ಹೆಚ್ಚಾಗುತ್ತದೆ. ಒಂದೇಬಾರಿ ಪಾತಾಳದಲ್ಲಿ ಹೋಗಿಬಿಡುತ್ತಾರೆ. ಯಾರು ತಮ್ಮ ಪೂಜೆಯನ್ನು ಕುಳಿತು ಮಾಡಿಸುತ್ತಾರೆಯೋ ಅವರು ಪೂಜ್ಯರೆಂದು ಹೇಗೆ ಕರೆಸಿಕೊಳ್ಳಲು ಸಾಧ್ಯ! ಸರ್ವರ ಸದ್ಗತಿದಾತ ಕಲ್ಯಾಣ ಮಾಡುವಂತಹವರು ಒಬ್ಬರೇ ತಂದೆಯಾಗಿದ್ದಾರೆ. ಮನುಷ್ಯರಾದರೂ ಶಾಂತಿಯ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ಹಠಯೋಗದಿಂದ ಪ್ರಾಣಾಯಾಮ ಮುಂತಾದುದನ್ನು ಮಾಡುವುದೇ ಶಾಂತಿಯೆಂದು ತಿಳಿದುಕೊಳ್ಳುತ್ತಾರೆ. ಇದರಲ್ಲಿಯೂ ಸಹ ಬಹಳ ಪರಿಶ್ರಮವೆನಿಸುತ್ತದೆ. ಕೆಲವರದು ಮೆದುಳು ಕೆಟ್ಟು ಹೋಗಿಬಿಡುತ್ತದೆ, ಪ್ರಾಪ್ತಿಯೂ ಸಹ ಏನೂ ಇರುವುದಿಲ್ಲ. ಅದು ಅಲ್ಪಕಾಲದ ಶಾಂತಿಯಾಗಿದೆ. ಹೇಗೆ ಸುಖವನ್ನು ಅಲ್ಪಕಾಲ ಕಾಗವಿಷ್ಟ ಸಮಾನವೆಂದು ಹೇಳುತ್ತಾರೆಯೋ ಹಾಗೆಯೇ ಶಾಂತಿಯೂ ಸಹ ಕಾಗವಿಷ್ಟ ಸಮಾನವಾಗಿದೆ. ಅವರದೆಲ್ಲವೂ ಅಲ್ಪಕಾಲದ್ದಾಗಿದೆ. ತಂದೆಯಂತೂ 21 ಜನ್ಮದವರೆಗೆ ತಮಗೆ ಸುಖ-ಶಾಂತಿ ಎರಡನ್ನೂ ನೀಡುತ್ತಾರೆ. ಕೆಲವರಾದರೂ ಶಾಂತಿಧಾಮದಲ್ಲಿ ಕೊನೆಯವರೆಗೂ ಇರುತ್ತಾರೆ. ಎಷ್ಟು ಪಾತ್ರವಿದೆ, ಅವರು ಇಷ್ಟೆಲ್ಲಾ ಸುಖವನ್ನು ನೋಡಲು ಹೇಗೆ ಸಾಧ್ಯವಿದೆ! ಅಲ್ಲಿಯೂ ಸಹ ನಂಬರ್ವಾರ್ ಪದವೀಧರರಿರುತ್ತಾರಲ್ಲವೆ. ದಾಸ-ದಾಸಿಯರಾಗಿರುತ್ತಾರೆ ಆದರೆ ಅರಮನೆಯೊಳಗಡೆ ಹೋಗಲು ಹೇಗೆ ಸಾಧ್ಯತೆಯಿದೆ! ಕೃಷ್ಣನನ್ನೂ ಸಹ ನೋಡಲೂ ಸಾಧ್ಯತೆಯಿಲ್ಲ. ಪ್ರತಿಯೊಬ್ಬರದೂ ಬೇರೆ-ಬೇರೆ ಮಹಲುಗಳಿರುತ್ತವೆಯಲ್ಲವೆ. ಅವನನ್ನು ನೋಡುವುದಕ್ಕೂ ನಿಗಧಿತ ಸಮಯವಿರುತ್ತದೆ. ಹೇಗೆ ಪೋಪ್ ಬರುತ್ತಾರೆಂದರೆ ಅವರ ದರ್ಶನಕ್ಕಾಗಿ ಎಷ್ಟೊಂದು ಜನರು ಹೋಗುತ್ತಾರೆ. ಹೀಗೆ ಅನೇಕರು ಹುಟ್ಟಿಕೊಳ್ಳುತ್ತಾರೆ. ಅವರದು ಬಹಳ ಪ್ರಭಾವವೂ ಇರುತ್ತದೆ. ಲಕ್ಷಾಂತರ ಮನುಷ್ಯರು ದರ್ಶನ ಮಾಡಲು ಹೋಗುತ್ತಾರೆ. ಇಲ್ಲಿ ಶಿವತಂದೆಯ ದರ್ಶನವು ಹೇಗಾಗುತ್ತದೆ? ಇದು ತಿಳಿದುಕೊಳ್ಳುವಂತಹ ಮಾತಾಗಿದೆ.
ಇದು ಎಲ್ಲದಕ್ಕಿಂತ ಶ್ರೇಷ್ಠವಾದಂತಹ ತೀರ್ಥಸ್ಥಾನವಾಗಿದೆ ಎಂಬುದು ಪ್ರಪಂಚದವರಿಗೆ ಹೇಗೆ ತಿಳಿದುಬರುತ್ತದೆ! ದಿಲ್ವಾಡಾ ಮಂದಿರದಂತಹ ಮಂದಿರಗಳು ಇನ್ನೂ ಅಕ್ಕಪಕ್ಕದಲ್ಲಿ ಇರಬಹುದೇನೋ ಎಂದು ನೋಡಬೇಕು. ಇದನ್ನು ಯಾವ ಕಾರಣದಿಂದ ಮಾಡಲಾಗಿದೆ ಎಂಬುದರ ಜ್ಞಾನವನ್ನು ನೀವು ಹೇಳುವ ಅವಶ್ಯಕತೆಯಿಲ್ಲ, ಅವರೇ ಇದನ್ನು ತಿಳಿದುಕೊಂಡುಬಿಡುತ್ತಾರೆ. ಇವರಿಗೆ ಓದಿಸುವವರು ಯಾರೆಂಬುದನ್ನು ತಿಳಿದುಕೊಂಡಿಲ್ಲ. ಇದರ ಬಗ್ಗೆ ಒಂದು ಕಥೆಯೂ ಸಹ ಇದೆ - ಹುಲಿ ಬಂದಿತು, ಹುಲಿ ಬಂದಿತು........ ಎಂದು ಹೇಳುತ್ತಿದ್ದರು. ತಾವೂ ಸಹ ಹೇಳುತ್ತೀರಿ - ಮೃತ್ಯುವು ಬಂದೇಬಿಟ್ಟಿತು ಎಂದು ಹೇಳುತ್ತೀರಿ ಆದರೆ ಅವರು ವಿಶ್ವಾಸವನ್ನು ಇಡುವುದಿಲ್ಲ. ಇನ್ನೂ 40 ಸಾವಿರ ವರ್ಷಗಳಿದೆ. ಮೃತ್ಯು (ವಿನಾಶ) ಎಲ್ಲಿಂದ ಬರುತ್ತದೆಯೆಂದು ತಿಳಿದುಕೊಂಡಿದ್ದಾರೆ. ಮೃತ್ಯುವು ಅವಶ್ಯವಾಗಿ ಬರುತ್ತದೆ, ಎಲ್ಲರನ್ನೂ ತೆಗೆದುಕೊಂಡು ಹೋಗುತ್ತದೆ. ಸತ್ಯಯುಗದಲ್ಲಾದರೂ ಯಾವುದೇ ಪ್ರಕಾರದ ಕೊಳಕು ಇರುವುದಿಲ್ಲ. ಇಲ್ಲಿಯ ಹಸುಗಳು ಮತ್ತು ಅಲ್ಲಿನ ಹಸುಗಳಿಗೆ ಎಷ್ಟೊಂದು ವ್ಯತ್ಯಾಸವಿರುತ್ತದೆ. ಕೃಷ್ಣನು ಗೋವುಗಳನ್ನು ಕಾಯಲು ಹೇಗೆ ಸಾಧ್ಯ! ಅವನ ಬಳಿಯಾದರೂ ಹಾಲು ಎಲಿಕ್ಯಾಪ್ಟರ್ನಲ್ಲಿ ಬರಬಹುದು. ಈ ಕೊಳಕೆಲ್ಲವೂ ದೂರವಿರುತ್ತದೆ. ಮನೆಯ ಮುಂದೆ ಕೊಳಕಿರುವುದಿಲ್ಲ. ಅಲ್ಲಿಯಾದರೂ ಅಪರಮಪಾರ ಸುಖವಿರುತ್ತದೆ, ಅದಕ್ಕೋಸ್ಕರ ಪೂರ್ಣ ಪುರುಷಾರ್ಥ ಮಾಡಬೇಕು. ಎಷ್ಟೊಂದು ಒಳ್ಳೊಳ್ಳೆಯ ಮಕ್ಕಳು ಸೇವಾಕೇಂದ್ರಕ್ಕೆ ಬರುತ್ತಾರೆ, ತಂದೆಯು ನೋಡಿ ಖುಷಿಪಡುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರ ಹೂಗಳು ಹುಟ್ಟಿಕೊಳ್ಳುತ್ತವೆ. ಯಾರು ಹೂವಾಗಿದ್ದಾರೆಯೋ ಅವರು ತನ್ನನ್ನೂ ಸಹ ಹೂವೆಂದು ತಿಳಿದುಕೊಳ್ಳುತ್ತಾರೆ. ದೆಹಲಿಯಲ್ಲಿಯೂ ಸಹ ಮಕ್ಕಳು ಹಗಲು-ರಾತ್ರಿ ಎಷ್ಟೊಂದು ಸೇವೆ ಮಾಡುತ್ತಾರೆ. ಜ್ಞಾನವೂ ಸಹ ಎಷ್ಟೊಂದು ಶ್ರೇಷ್ಠವಾಗಿದೆ, ಹಿಂದೆ ಏನನ್ನೂ ತಿಳಿದುಕೊಂಡಿರಲಿಲ್ಲ, ಈಗ ಎಷ್ಟೊಂದು ಪರಿಶ್ರಮಪಡಬೇಕಾಗುತ್ತದೆ. ತಂದೆಯ ಬಳಿ ಎಲ್ಲಾ ಸಮಾಚಾರ ಬರುತ್ತಿರುತ್ತದೆ. ಕೆಲವರದನ್ನು ಹೇಳುತ್ತಾರೆ, ಕೆಲವರದನ್ನು ಹೇಳುವುದಿಲ್ಲ ಏಕೆಂದರೆ ಸೇವಾಭಂಗ ಮಾಡುವಂತಹವರೂ ಸಹ ಬಹಳಷ್ಟಿರುತ್ತಾರೆ. ಬಹಳ ಉತ್ತಮರಾಗಿರುವಂತಹ ದ್ರೋಹಿಗಳಾಗಿ (ಸೇವಾದ್ರೋಹಿ) ಬಿಡುತ್ತಾರೆ. ಮೂರನೆಯ ದರ್ಜೆಯವರೂ ಸಹ ದ್ರೋಹಿಗಳಾಗಿರುತ್ತಾರೆ. ಸ್ವಲ್ಪ ಜ್ಞಾನವು ಸಿಕ್ಕಿದರೆ ಸಾಕು ಆಗ ನಾವು ಶಿವಬಾಬಾನಿಗೂ ಸಹ ತಂದೆಯಾಗಿಬಿಟ್ಟಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ನಮಗೆ ಜ್ಞಾನವನ್ನು ತಿಳಿಸುವಂತಹವರು ಯಾರೆಂಬುದನ್ನು ತಿಳಿದುಕೊಳ್ಳುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಿಶ್ವದ ರಾಜ್ಯಭಾಗ್ಯವನ್ನು ನೀಡುವಂತಹ ತಂದೆಗೆ ಬಹಳ-ಬಹಳ ಗೌರವವನ್ನು ನೀಡಬೇಕಾಗಿದೆ. ತಂದೆಯ ಸೇವೆಯಲ್ಲಿ ತಮ್ಮ ಜೀವನವನ್ನು ಸಫಲ ಮಾಡಿಕೊಳ್ಳಬೇಕು. ವಿದ್ಯೆಯ ಕಡೆ ಪೂರ್ಣ ಗಮನ ಕೊಡಬೇಕು.
2. ತಂದೆಯಿಂದ ಯಾವ ಜ್ಞಾನವು ಸಿಗುತ್ತದೆಯೋ ಅದರ ಮೇಲೆ ವಿಚಾರಸಾಗರ ಮಂಥನವನ್ನು ಮಾಡಬೇಕು. ಎಂದೂ ಸಹ ವಿಘ್ನರೂಪವಾಗಬಾರದು. ಸೇವಾಭಂಗವನ್ನು ಮಾಡಬಾರದು. ಅಹಂಕಾರದಲ್ಲಿ ಬರಬಾರದು.
| ವರದಾನ: |
ನಾಲ್ಕೂ ಸಬ್ಜೆಕ್ಟ್ ಗಳಲ್ಲಿ ತಂದೆಯ ಮನಸ್ಸಿಗೆ ಇಷ್ಟವಾಗುವಂತಹ ಮಾಕ್ರ್ಸ್ ತೆಗೆದುಕೊಳ್ಳುವಂತಹ ಹೃದಯಸಿಂಹಾಸನಾಧಿಕಾರಿ ಭವ ಯಾವ ಮಕ್ಕಳು ನಾಲ್ಕೂ ಸಬ್ಜೆಕ್ಟ್ ಗಳಲ್ಲಿ ಒಳ್ಳೆಯ ಮಾಕ್ರ್ಸ್ ಪಡೆಯುತ್ತಾರೆ, ಆದಿಯಿಂದ ಅಂತ್ಯದವರೆಗೆ ಒಳ್ಳೆಯ ನಂಬರ್ಸ್ ನಿಂದ ಪಾಸ್ ಆಗುತ್ತಾರೆ ಅವರನ್ನೇ ಪಾಸ್ ವಿತ್ ಹಾನರ್ ಎಂದು ಕರೆಯಲಾಗುವುದು. ಮಧ್ಯ-ಮಧ್ಯದಲ್ಲಿ ಮಾಕ್ರ್ಸ್ ಕಡಿಮೆಯಾಯಿತು ಅದನ್ನು ಅಡ್ಜೆಸ್ಟ್ ಮಾಡಿದೆ ಹೀಗಲ್ಲಾ, ಆದರೆ ಎಲ್ಲಾ ಸಬ್ಜೆಕ್ಟ್ ನಲ್ಲಿ ತಂದೆಯ ಮನಸ್ಸಿಗೆ ಒಪ್ಪುವಂತಿರುವವರೇ ಹೃದಯ ಸಿಂಹಾಸನಾಧಿಕಾರಿಗಳಾಗುತ್ತಾರೆ. ಜೊತೆ-ಜೊತೆಗೆ ಬ್ರಾಹ್ಮಣರ ಸಂಸಾರದಲ್ಲಿ ಸರ್ವರಿಗೂ ಪ್ರಿಯ, ಸರ್ವರ ಸಹಯೋಗಿ, ಸರ್ವರಿಂದ ಸಮ್ಮಾನ ಪ್ರಾಪ್ತಿ ಮಾಡಿಕೊಳ್ಳುವಂತಹ ಹೃದಯ-ಸಿಂಹಾಸನಾಧಿಕಾರಿಯಿಂದ ರಾಜ್ಯ ಸಿಂಹಾಸನಾಧಿಕಾರಿಗಳಾಗುತ್ತಾರೆ. |
| ಸ್ಲೋಗನ್: | ಪ್ರಿಯತಮೆಯರು ಅವರೇ ಆಗಿದ್ದಾರೆ ಯಾರ ಹೃದಯದಲ್ಲಿ ಸದಾ ಇದೇ ನಿರಂತರವಾಗಿ ಗೀತೆ ನುಡಿಯುತ್ತಿರುತ್ತೆ, ನಾನು ಬಾಬಾರವರ ಮಗು ಆಗಿದ್ದೇನೆ, ಬಾಬಾ ನಮ್ಮವರಾಗಿದ್ದಾರೆ. |