| 09/10/24 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ - ವಿಶ್ವದ ರಾಜ್ಯಭಾಗ್ಯವನ್ನು ಬಾಹುಬಲದಿಂದ ಪಡೆಯಲು ಸಾಧ್ಯವಿಲ್ಲ, ಇದಕ್ಕಾಗಿ ಯೋಗಬಲ ಬೇಕು, ಇದೂ ಸಹ ಒಂದು ನಿಯಮವಾಗಿದೆ” | |
| ಪ್ರಶ್ನೆ: | ಶಿವತಂದೆಯು ತಮಗೆ ತಾವೇ ಯಾವ ಆಶ್ಚರ್ಯಪಡುತ್ತಾರೆ? |
| ಉತ್ತರ: | ತಂದೆಯು ತಿಳಿಸುತ್ತಾರೆ - ಎಂತಹ ಅದ್ಭುತ ನೋಡಿ, ನಾನು ನಿಮಗೆ ಓದಿಸುತ್ತೇನೆ. ಇದನ್ನು ನಾನು ಯಾರಿಂದಲೂ ಎಂದೂ ಸಹ ಓದಿಲ್ಲ. ನನಗೆ ಯಾರೂ ತಂದೆಯಿಲ್ಲ, ನನಗೆ ಯಾವುದೇ ಶಿಕ್ಷಕರಿಲ್ಲ, ಗುರುವೂ ಸಹ ಇಲ್ಲ. ನಾನು ಸೃಷ್ಟಿಚಕ್ರದಲ್ಲಿ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ ಆದರೂ ಸಹ ನಿಮಗೆ ಎಲ್ಲಾ ಜನ್ಮಗಳ ಕಥೆಯನ್ನು ಹೇಳುತ್ತೇನೆ. ತಾನು 84 ಜನ್ಮದ ಚಕ್ರದಲ್ಲಿ ಬರುವುದಿಲ್ಲ ಆದರೆ ಚಕ್ರದ ಜ್ಞಾನವನ್ನು ಸಂಪೂರ್ಣ ಸ್ಪಷ್ಟವಾಗಿ ನೀಡುತ್ತೇನೆ. |
ಓಂ ಶಾಂತಿ. ಆತ್ಮೀಯ ತಂದೆಯು ನೀವು ಮಕ್ಕಳನ್ನು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತಾರೆ ಅರ್ಥಾತ್ ನೀವು 84 ಜನ್ಮಗಳ ಚಕ್ರವನ್ನು ತಿಳಿದುಕೊಂಡುಬಿಡುತ್ತೀರಿ. ಮೊದಲು ತಿಳಿದುಕೊಂಡಿರಲಿಲ್ಲ, ಈಗ ತಂದೆಯ ಮೂಲಕ ನೀವು ತಿಳಿದುಕೊಂಡಿದ್ದೀರಿ. 84 ಜನ್ಮದ ಚಕ್ರದಲ್ಲಿ ನೀವು ಅವಶ್ಯವಾಗಿ ಬರುತ್ತೀರಿ. ನೀವು ಮಕ್ಕಳಿಗೆ 84 ಜನ್ಮಗಳ ಚಕ್ರದ ಜ್ಞಾನವನ್ನು ನೀಡುತ್ತೇನೆ. ನಾನು ಸ್ವದರ್ಶನ ಚಕ್ರಧಾರಿಯಾಗಿದ್ದೇನೆ ಆದರೆ ಪ್ರತ್ಯಕ್ಷದಲ್ಲಿ 84 ಜನ್ಮಗಳ ಚಕ್ರದಲ್ಲಿ ಬರುವುದಿಲ್ಲ. ಶಿವತಂದೆಯಲ್ಲಿ ಎಲ್ಲಾ ಜ್ಞಾನವಿದೆಯೆಂದು ಇದರ ಮೂಲಕ ತಿಳಿದುಕೊಳ್ಳಬೇಕು. ಹಾಗಾದರೆ ಇದರ ಅನುಭವ ಹೇಗೆ ಬಂದಿತು? ನಮಗಾದರೂ ಅನುಭವ ಪ್ರಾಪ್ತಿಯಾಗುತ್ತದೆ. ತಂದೆಯು ಎಲ್ಲಿಂದ ಅನುಭವ ಮಾಡಿ ತಮಗೆ ತಿಳಿಸುತ್ತಾರೆ? ಪ್ರತ್ಯಕ್ಷದ ಅನುಭವವಾಗಬೇಕಲ್ಲವೆ! ತಂದೆಯು ತಿಳಿಸುತ್ತಾರೆ - ನನ್ನನ್ನು ಜ್ಞಾನದ ಸಾಗರನೆಂದು ಹೇಳುತ್ತಾರೆ ಆದರೆ ನಾನು 84 ಜನ್ಮದ ಚಕ್ರದಲ್ಲಿ ಬರುವುದಿಲ್ಲ ಮತ್ತೆ ನನ್ನಲ್ಲಿ ಈ ಜ್ಞಾನವು ಎಲ್ಲಿಂದ ಬಂದಿತು? ಶಿಕ್ಷಕರು ಓದಿಸುತ್ತಾರೆಂದರೆ ಅವಶ್ಯವಾಗಿ ತಾವೂ ಓದಿರಬೇಕಲ್ಲವೆ. ಈ ಶಿವತಂದೆಯು ಹೇಗೆ ಓದಿದರು? ಇವರಿಗೆ ಹೇಗೆ 84 ಜನ್ಮಗಳ ಚಕ್ರದ ಅರಿವಾಯಿತು, ಸ್ವಯಂ 84 ಜನ್ಮದಲ್ಲಿ ಬರುವುದಿಲ್ಲ. ತಂದೆಯು ಬೀಜರೂಪನಾಗಿರುವ ಕಾರಣ ತಿಳಿದುಕೊಂಡಿದ್ದಾರೆ. ತಾನು 84 ಜನ್ಮದ ಚಕ್ರದಲ್ಲಿ ಬರುವುದಿಲ್ಲ ಆದರೆ ತಮಗೆ ಎಲ್ಲವನ್ನೂ ತಿಳಿಸುತ್ತಾರೆ. ಇದು ಎಷ್ಟೊಂದು ವಿಚಿತ್ರವಾಗಿದೆ! ತಂದೆಯು ಯಾವುದೇ ಶಾಸ್ತ್ರವನ್ನು ಓದಿದ್ದಾರೆಂಬುದೂ ಸಹ ಇಲ್ಲ. ಡ್ರಾಮಾನುಸಾರ ಅವರಲ್ಲಿ ಈ ಜ್ಞಾನವು ನೊಂದಾವಣೆಯಾಗಿದೆ ಅದನ್ನು ತಮಗೆ ತಿಳಿಸುತ್ತಾರೆ. ಅದ್ಭುತವಾದ ಶಿಕ್ಷಕರಾಗಿದ್ದಾರಲ್ಲವೆ! ಆಶ್ಚರ್ಯಪಡಬೇಕಲ್ಲವೆ ಆದ್ದರಿಂದ ಇವರಿಗೆ ಅನೇಕ ಹೆಸರುಗಳನ್ನು ನೀಡಲಾಗಿದೆ. ಈಶ್ವರ, ಪ್ರಭು, ಅಂತರ್ಯಾಮಿ ಮುಂತಾದವು.... ಹೇಳುತ್ತಿರುತ್ತಾರೆ. ಈಶ್ವರನಲ್ಲಿ ಹೇಗೆ ಎಲ್ಲಾ ಜ್ಞಾನವು ತುಂಬಲ್ಪಟ್ಟಿದೆ ಎಂದು ನೀವು ಆಶ್ಚರ್ಯಪಡುತ್ತೀರಿ. ಅವರಿಗೆ ಇದೆಲ್ಲವೂ ನಿಮಗೆ ತಿಳಿಸಲು ಎಲ್ಲಿಂದ ಬಂದಿತು. ಯಾರಿಂದ ಜನ್ಮವನ್ನು ತೆಗೆದುಕೊಂಡಿದ್ದಾರೆಯೋ ಅವರು ತಿಳಿಸಿರಬಹುದು ಎನ್ನುವುದಕ್ಕೆ ಅವರಿಗೆ ಯಾವುದೇ ತಂದೆಯೂ ಇಲ್ಲ, ತಾವೆಲ್ಲರೂ ಸಹೋದರ-ಸಹೋದರರಾಗಿದ್ದೀರಿ. ನಿಮ್ಮೆಲ್ಲರಿಗೂ ಅವರೊಬ್ಬರೇ ತಂದೆ ಹೇಗೆ ಆಗುತ್ತಾರೆ, ಅಲ್ಲದೆ ಅವರು ಬೀಜರೂಪನಾಗಿದ್ದಾರೆ. ಎಷ್ಟೊಂದು ಜ್ಞಾನವನ್ನು ಮಕ್ಕಳಿಗೆ ಕುಳಿತು ತಿಳಿಸುತ್ತಾರೆ. 84 ಜನ್ಮವನ್ನು ನಾನು ತೆಗೆದುಕೊಳ್ಳುವುದಿಲ್ಲ, ನೀವು ತೆಗೆದುಕೊಳ್ಳುತ್ತೀರಿ ಇದೆಲ್ಲವೂ ತಂದೆಗೆ ಹೇಗೆ ತಿಳಿದುಬಂದಿತು ಎಂಬುದು ಅವಶ್ಯವಾಗಿ ಪ್ರಶ್ನೆ ಉದ್ಭವವಾಗುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅನಾದಿ ಡ್ರಾಮಾನುಸಾರ ನನ್ನಲ್ಲಿ ಮೊದಲಿನಿಂದಲೂ ಈ ಜ್ಞಾನವಿದೆ, ಅದನ್ನು ತಮಗೆ ಓದಿಸುತ್ತೇನೆ ಆದ್ದರಿಂದಲೇ ನನ್ನನ್ನು ಶ್ರೇಷ್ಠಾತಿಶ್ರೇಷ್ಠ ಭಗವಂತನೆಂದು ಕರೆಯಲಾಗುತ್ತದೆ. ಸ್ವಯಂ ಚಕ್ರದಲ್ಲಿ ಬರುವುದಿಲ್ಲ ಆದರೆ ಅವರಲ್ಲಿ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ ಅಂದಾಗ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಾಗಬೇಕು! ಅವರಿಗೆ 84 ಜನ್ಮಗಳ ಚಕ್ರದ ಜ್ಞಾನವು ಎಲ್ಲಿಂದ ದೊರೆಯಿತು? ನಿಮಗಾದರೂ ತಂದೆಯಿಂದ ಸಿಕ್ಕಿದೆ. ತಂದೆಯಲ್ಲಿ ನಿಜವಾದಂತಹ ಜ್ಞಾನವಿದೆ, ಅವರಿಗೆ ಜ್ಞಾನಪೂರ್ಣನೆಂದು ಕರೆಯಲಾಗುತ್ತದೆ. ಅವರು ಯಾರಿಂದಲೂ ಸಹ ಓದಲಿಲ್ಲ ಆದರೂ ಅವರಲ್ಲಿ ನಿಜವಾದ ಜ್ಞಾನವು ತಿಳಿದಿದೆ ಆದ್ದರಿಂದ ಜ್ಞಾನಪೂರ್ಣನೆಂದು ಕರೆಯಲಾಗುತ್ತದೆ. ಇದು ಅದ್ಭುತವಲ್ಲವೆ! ಆದ್ದರಿಂದ ಇದಕ್ಕೆ ಶ್ರೇಷ್ಠಾತಿಶ್ರೇಷ್ಠವಾದ ವಿದ್ಯೆಯೆಂದು ಗಾಯನ ಮಾಡಲಾಗುತ್ತದೆ. ತಂದೆಯ ಬಗ್ಗೆ ನೀವು ಮಕ್ಕಳಿಗೆ ಆಶ್ಚರ್ಯವೆನಿಸುತ್ತದೆ. ಅವರಿಗೆ ಏಕೆ ಜ್ಞಾನಪೂರ್ಣನೆಂದು ಕರೆಯಲಾಗುತ್ತದೆ - ಇದೆಲ್ಲವೂ ತಿಳಿದುಕೊಳ್ಳುವಂತಹ ಮಾತುಗಳಾಗಿವೆ ಮತ್ತೆ ಯಾವ ಮಾತಿದೆ? ಈ ಚಿತ್ರವನ್ನು ತೋರಿಸಿದಾಗ ಇದರ ಬಗ್ಗೆ ನಿಮ್ಮನ್ನು ಕೇಳುತ್ತಾರೆ - ಬ್ರಹ್ಮನಲ್ಲಿಯೂ ಆತ್ಮವಿದೆ, ಇವರು ಯಾವ ನಾರಾಯಣನಾಗುತ್ತಾರೆಯೋ ಅವರಲ್ಲಿಯೂ ತನ್ನ ಆತ್ಮವಿರುತ್ತದೆ ಅಂದಾಗ ಎರಡು ಆತ್ಮವಾಯಿತಲ್ಲವೆ! ಒಂದು ಬ್ರಹ್ಮಾ ಮತ್ತೊಂದು ನಾರಾಯಣ ಆದರೆ ವಿಚಾರ ಮಾಡಿದ್ದೇ ಆದರೆ ಇವರು ಎರಡು ಆತ್ಮರಲ್ಲ, ಆತ್ಮನಂತೂ ಒಂದೇ ಆಗಿದೆ. ಕೇವಲ ಉದಾಹರಣೆಯ ರೂಪದಲ್ಲಿ ದೇವತೆಯ ರೂಪವನ್ನು ತೋರಿಸಲಾಗುತ್ತದೆ. ಈ ಬ್ರಹ್ಮಾರವರೇ ವಿಷ್ಣು ಅರ್ಥಾತ್ ನಾರಾಯಣನಾಗುತ್ತಾರೆ. ಇದಕ್ಕೆ ಗುಹ್ಯವಾದಂತಹ ಮಾತುಗಳೆಂದು ಕರೆಯಲಾಗುತ್ತದೆ. ತಂದೆಯು ಬಹಳ ಗುಹ್ಯವಾದಂತಹ ಜ್ಞಾನವನ್ನು ತಿಳಿಸುತ್ತಾರೆ. ಮತ್ತೆ ತಂದೆಯನ್ನು ಬಿಟ್ಟು ಇಂತಹ ಜ್ಞಾನವನ್ನು ಬೇರೆ ಯಾರೂ ಸಹ ಓದಿಸಲು ಸಾಧ್ಯವಿಲ್ಲ. ಬ್ರಹ್ಮಾ ಮತ್ತು ವಿಷ್ಣು ಎರಡು ಆತ್ಮರಲ್ಲ, ಹಾಗೆಯೇ ಸರಸ್ವತಿ ಮತ್ತು ಲಕ್ಷ್ಮಿ ಇವರಿಬ್ಬರಲ್ಲಿ ಎರಡು ಆತ್ಮವಿದೆಯೋ ಅಥವಾ ಒಂದೇ ಇದೆಯೋ? ಆತ್ಮವು ಒಂದೇ ಆದರೆ ಶರೀರ ಎರಡು. ಸರಸ್ವತಿಯ ನಂತರ ಲಕ್ಷ್ಮಿಯಾಗುತ್ತಾರೆ ಆದ್ದರಿಂದ ಒಂದೇ ಆತ್ಮನೆಂದು ಎಣಿಸಲಾಗುತ್ತದೆ. 84 ಜನ್ಮವನ್ನು ಒಂದೇ ಆತ್ಮವೇ ಪಡೆಯುತ್ತದೆ. ಇದು ಬಹಳ ತಿಳಿದುಕೊಳ್ಳುವಂತಹ ಮಾತಾಗಿದೆ. ಬ್ರಾಹ್ಮಣರೇ ದೇವತೆಗಳು, ದೇವತೆಗಳಿಂದ ಕ್ಷತ್ರಿಯರಾಗುತ್ತಾರೆ. ಆತ್ಮವು ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮವು ಒಂದೇ ಆಗಿದೆ, ಹೇಗೆ ಬ್ರಾಹ್ಮಣರೇ ದೇವತೆಗಳಾಗುತ್ತಾರೆ ಎಂದು ಈ ಒಂದು ಆತ್ಮನನ್ನು ಉದಾಹರಣೆಯಾಗಿ ತೋರಿಸಲಾಗುತ್ತದೆ. ನಾನೇ ಅದು - ಇದರ ಅರ್ಥವು ಎಷ್ಟು ಚೆನ್ನಾಗಿದೆ! ಇದಕ್ಕೆ ಗುಹ್ಯಾತಿಗುಹ್ಯವಾದಂತಹ ಮಾತುಗಳೆಂದು ಕರೆಯಲಾಗುತ್ತದೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ ಎಂಬ ತಿಳುವಳಿಕೆ ಮೊಟ್ಟಮೊದಲು ಬೇಕಾಗಿದೆ. ಎಲ್ಲಾ ಆತ್ಮರು ಮೂಲತಃ ಪರಮಧಾಮದವರು, ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಇದು ಆಟವಾಗಿದೆ. ತಂದೆಯು ತಮಗೆ ಈ ಆಟದ ಸಮಾಚಾರವನ್ನು ಕುಳಿತು ತಿಳಿಸುತ್ತಾರೆ. ತಂದೆಯು ವಾಸ್ತವಿಕತೆಯನ್ನು ತಿಳಿದಿದ್ದಾರೆ. ಅವರಿಗೆ ಯಾರೂ ಸಹ ಕಲಿಸಲಿಲ್ಲ, 84 ಜನ್ಮಗಳ ಚಕ್ರವನ್ನು ಅವರೇ ತಿಳಿದಿದ್ದಾರೆ, ಈ ಸಮಯದಲ್ಲಿ ತಮಗೆ ತಿಳಿಸುತ್ತಾರೆ ಮತ್ತೆ ನೀವು ಇದನ್ನು ಮರೆತುಬಿಡುತ್ತೀರಿ. ಅದರ ಶಾಸ್ತ್ರ ಹೇಗೆ ರೂಪುಗೊಳ್ಳಲು ಸಾಧ್ಯವಿದೆ? ತಂದೆಯಂತೂ ಯಾವುದೇ ಶಾಸ್ತ್ರವನ್ನು ಓದಿದವರಲ್ಲ. ಹೇಗೆ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ, ಅರ್ಧಕಲ್ಪ ಭಕ್ತಿಮಾರ್ಗವಾಗಿದೆ - ಈ ಮಾತೂ ಸಹ ಶಾಸ್ತ್ರದಲ್ಲಿಲ್ಲ. ಶಾಸ್ತ್ರಗಳೂ ಸಹ ಡ್ರಾಮಾನುಸಾರ ಭಕ್ತಿಮಾರ್ಗದಲ್ಲಿ ಮಾಡಲ್ಪಟ್ಟಿವೆ. ತಮ್ಮ ಬುದ್ಧಿಯಲ್ಲಿ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೆ ಈ ಡ್ರಾಮಾದ ಎಷ್ಟು ವಿಸ್ತಾರವಾದ ಜ್ಞಾನವಿದೆ! ತಂದೆಯು ಅವಶ್ಯವಾಗಿ ಮನುಷ್ಯನ ತನುವನ್ನೇ ಆಧಾರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಶಿವತಂದೆಯು ಬ್ರಹ್ಮಾರವರ ತನುವಿನಲ್ಲಿ ಕುಳಿತು ಈ ಸೃಷ್ಟಿಚಕ್ರದ ಜ್ಞಾನವನ್ನು ತಿಳಿಸುತ್ತಾರೆ. ಮನುಷ್ಯರಾದರೂ ಸುಳ್ಳನ್ನು ಸೇರಿಸಿ ಸೃಷ್ಟಿಯ ಆಯಸ್ಸನ್ನು ಎಷ್ಟೊಂದು ಧೀರ್ಘವಾಗಿ ಮಾಡಿಬಿಟ್ಟಿದ್ದಾರೆ. ಹೊಸ ಪ್ರಪಂಚವೇ ಮತ್ತೆ ಹಳೆಯದಾಗುತ್ತದೆ. ಹೊಸ ಪ್ರಪಂಚಕ್ಕೆ ಸ್ವರ್ಗವೆಂದು, ಹಳೆಯ ಪ್ರಪಂಚಕ್ಕೆ ನರಕವೆಂದು ಕರೆಯಲಾಗುತ್ತದೆ. ಪ್ರಪಂಚವಂತೂ ಒಂದೇ ಆಗಿದೆ, ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳು ಇರುತ್ತಾರೆ. ಅಲ್ಲಿ ಅಪಾರ ಸುಖವಿರುತ್ತದೆ. ಇಡೀ ಸೃಷ್ಟಿ ಹೊಸದಾಗಿರುತ್ತದೆ. ಈಗ ಇದಕ್ಕೆ ಹಳೆಯ ಪ್ರಪಂಚವೆಂದು ಕರೆಯಲಾಗುತ್ತದೆ. ಹೆಸರೇ ಕಬ್ಬಿಣದ ಯುಗವೆಂದಾಗಿದೆ. ಹೇಗೆ ಹಳೆಯ ದೆಹಲಿ ಮತ್ತು ಹೊಸ ದೆಹಲಿಯೆಂದು ಕರೆಯಲಾಗುತ್ತದೆ. ಮಧುರ ಮಕ್ಕಳೇ, ಹೊಸ ಜಗತ್ತಿನಲ್ಲಿ ಹೊಸ ದೆಹಲಿಯಿರುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಹಳೆಯ ಪ್ರಪಂಚದಲ್ಲಿ ಹೊಸ ದೆಹಲಿಯೆಂದು ಕರೆಯುತ್ತಾರೆ, ಇದಕ್ಕೆ ಹೊಸದೆಂದು ಹೇಗೆ ಹೇಳುವುದು! ಹೊಸ ಪ್ರಪಂಚದಲ್ಲಿ ಹೊಸ ದೆಹಲಿಯಿರುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಅಲ್ಲಿ ಲಕ್ಷ್ಮಿ-ನಾರಾಯಣರು ರಾಜ್ಯ ಮಾಡುತ್ತಾರೆ, ಅದಕ್ಕೆ ಸತ್ಯಯುಗವೆಂದು ಕರೆಯಲಾಗುತ್ತದೆ. ನೀವು ಇಡೀ ಭಾರತದಲ್ಲಿ ರಾಜ್ಯವನ್ನು ಮಾಡುತ್ತೀರಿ. ನಿಮ್ಮ ಗದ್ದಿಯು ಯಮುನಾನದಿಯ ತೀರದಲ್ಲಿರುತ್ತದೆ. ಕೊನೆಯಲ್ಲಿ ರಾವಣರಾಜ್ಯದಲ್ಲಿಯೂ ಸಹ ಗದ್ದಿಯು ಇಲ್ಲಿಯೇ ಇದೆ. ರಾಮರಾಜ್ಯದ ಗದ್ದಿಯೂ ಸಹ ಇಲ್ಲಿಯೇ ಇರುತ್ತದೆ ಆದರೆ ಹೆಸರು ದೆಹಲಿ ಎಂದು ಇರುವುದಿಲ್ಲ, ಅದಕ್ಕೆ ಫರಿಸ್ತಾನವೆಂದು ಕರೆಯಲಾಗುತ್ತದೆ. ಯಾವ ರಾಜನು ಆಡಳಿತ ಮಾಡುತ್ತಾನೆಯೋ ಅಂತಹ ಹೆಸರನ್ನಿಡುತ್ತಾನೆ. ಈ ಸಮಯದಲ್ಲಿ ಎಲ್ಲರೂ ಹಳೆಯ ಪ್ರಪಂಚದಲ್ಲಿದ್ದಾರೆ. ಹೊಸಪ್ರಪಂಚದಲ್ಲಿ ಹೋಗಲು ನೀವು ಓದುತ್ತಿದ್ದೀರಿ ಮತ್ತೆ ಮನುಷ್ಯನಿಂದ ದೇವತೆಗಳಾಗುತ್ತಾ ಇದ್ದೀರಿ. ಓದಿಸುವಂತಹವರು ತಂದೆಯಾಗಿದ್ದಾರೆ.
ಶ್ರೇಷ್ಠಾತಿಶ್ರೇಷ್ಠ ತಂದೆಯು ಕೆಳಗೆ ಬಂದು ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂಬುದನ್ನು ನೀವು ತಿಳಿದಿದ್ದೀರಿ. ನೀವು ಈಗ ಸಂಗಮಯುಗದಲ್ಲಿದ್ದೀರಿ, ನಂತರ ಕಲಿಯುಗೀ ಹಳೆಯ ಪ್ರಪಂಚ ನಾಶವಾಗುತ್ತದೆ. ತಂದೆಯು ಇದರ ಲೆಕ್ಕವನ್ನೂ ಸಹ ತಿಳಿಸಿದ್ದಾರೆ. ನಾನು ಬ್ರಹ್ಮಾರವರ ತನುವಿನಲ್ಲಿ ಬರುತ್ತೇನೆ, ಆದರೆ ಮನುಷ್ಯರಿಗೆ ಬ್ರಹ್ಮಾ ಎಂದರೆ ಯಾರು? ಎಂಬುದೇ ತಿಳಿದಿಲ್ಲ. ಪ್ರಜಾಪಿತ ಬ್ರಹ್ಮಾ ಎಂದು ಹೇಳುತ್ತಾರೆ. ನೀವು ಬ್ರಹ್ಮಾರವರ ಪ್ರಜೆಯಾಗಿದ್ದೀರಲ್ಲವೆ ಆದ್ದರಿಂದ ತಮ್ಮನ್ನು ಬಿ.ಕೆ. ಎಂದು ಕರೆಸಿಕೊಳ್ಳುತ್ತೀರಿ. ವಾಸ್ತವದಲ್ಲಿ ಶಿವತಂದೆಯ ಮಕ್ಕಳು ನಿರಾಕಾರ ಆತ್ಮರಾಗಿದ್ದಾಗ ಶಿವವಂಶಿಯರಾಗಿರುತ್ತೀರಿ ನಂತರ ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮಾರವರ ಮಕ್ಕಳು ಸಹೋದರ-ಸಹೋದರಿಯಾಗುತ್ತೀರಿ, ಅನ್ಯ ಯಾವುದೇ ಸಂಬಂಧವಿಲ್ಲ. ಈ ಸಮಯದಲ್ಲಿ ನೀವು ಆ ಕಲಿಯುಗೀ ಸಂಬಂಧವನ್ನು ಮರೆಯುತ್ತೀರಿ ಏಕೆಂದರೆ ಅದರಲ್ಲಿ ಬಂಧನವಿದೆ. ನೀವು ಹೊಸ ಪ್ರಪಂಚದಲ್ಲಿ ಹೋಗುತ್ತೀರಿ, ಶಿಖೆಯು ಬ್ರಾಹ್ಮಣರ ಗುರುತಾಗಿದೆ. ನಿಮ್ಮದು ಬ್ರಾಹ್ಮಣ ಕುಲವಾಗಿದೆ, ಅವರು ಕಲಿಯುಗದ ಬ್ರಾಹ್ಮಣರಾಗಿದ್ದಾರೆ. ಬ್ರಾಹ್ಮಣರು ಹೆಚ್ಚುವಾರಿ ಮಾರ್ಗದರ್ಶಕರಾಗಿರುತ್ತಾರೆ, ಒಂದು ಔತಣದ ಊಟವನ್ನು ಸ್ವೀಕರಿಸುತ್ತಾರೆ, ಮತ್ತೊಂದು ಗೀತೆಯನ್ನು ತಿಳಿಸುತ್ತಾರೆ. ಈಗ ನೀವು ಬ್ರಾಹ್ಮಣರು ಗೀತೆಯನ್ನು ತಿಳಿಸುತ್ತೀರಿ, ಅವರೂ ಸಹ ಗೀತೆಯನ್ನು ತಿಳಿಸುತ್ತಾರೆ. ಎಷ್ಟು ವ್ಯತ್ಯಾಸವಿದೆ ನೋಡಿ! ಕೃಷ್ಣ ಭಗವಂತನಲ್ಲ ಎಂದು ನೀವು ಹೇಳುತ್ತೀರಿ, ಕೃಷ್ಣನಿಗೆ ದೇವತೆಯೆಂದು ಕರೆಯಲಾಗುತ್ತದೆ. ಅವನಲ್ಲಿ ದೈವೀಗುಣಗಳಿವೆ, ಆತನನ್ನು ಈ ಕಣ್ಣುಗಳಿಂದ ನೋಡಲಾಗುತ್ತದೆ. ಶಿವನ ಮಂದಿರದಲ್ಲಿ ನೋಡುತ್ತೀರೆಂದರೆ ಶಿವನಿಗಾದರೂ ತನ್ನ ಶರೀರವಿಲ್ಲ, ಅವರು ಪರಮ ಆತ್ಮ ಅರ್ಥಾತ್ ಪರಮಾತ್ಮ, ಈಶ್ವರ, ಪ್ರಭು, ಭಗವಂತ ಮುಂತಾದ ಅಕ್ಷರದ ಯಾವುದೇ ಅರ್ಥ ಬರುವುದಿಲ್ಲ. ಪರಮಾತ್ಮನೇ ಶ್ರೇಷ್ಠನಾದ ಆತ್ಮನಾಗಿದ್ದಾರೆ. ನೀವು ಶ್ರೇಷ್ಠರಲ್ಲ, ಎಷ್ಟೊಂದು ವ್ಯತ್ಯಾಸವಿದೆ! ಪರಮಾತ್ಮನಿಂದ ನೀವು ಕಲಿಯುತ್ತಿದ್ದೀರಿ, ಅವರು ಯಾರಿಂದಲೂ ಕಲಿತಿಲ್ಲ. ಇವರು ತಂದೆಯಾಗಿದ್ದಾರಲ್ಲವೆ! ಆ ಪರಮಪಿತ ಪರಮಾತ್ಮನನ್ನು ನೀವು ತಂದೆಯೆಂದೂ ಸಹ ಕರೆಯುತ್ತೀರಿ, ಶಿಕ್ಷಕನೆಂದೂ ಸಹ ಕರೆಯುತ್ತೀರಿ, ಸದ್ಗುರುವೆಂದೂ ಕರೆಯುತ್ತೀರಿ ಆದರೆ ಅವರು ಒಬ್ಬರೇ ಆಗಿದ್ದಾರೆ. ಯಾವುದೇ ಆತ್ಮವು ತಂದೆ, ಶಿಕ್ಷಕ, ಗುರುವಾಗಲು ಸಾಧ್ಯವಿಲ್ಲ. ಒಬ್ಬ ಪರಮಾತ್ಮನಿಗೆ ಪರಮ ಅರ್ಥಾತ್ ಶ್ರೇಷ್ಠನೆಂದು ಕರೆಯಲಾಗುತ್ತದೆ. ಪ್ರತಿಯೊಬ್ಬರಿಗೂ ಮೊದಲು ತಂದೆಯು ಬೇಕು ನಂತರ ಶಿಕ್ಷಕ, ಮತ್ತೆ ಕೊನೆಯಲ್ಲಿ ಗುರುವು ಬೇಕಾಗುತ್ತಾರೆ. ತಂದೆಯೂ ಸಹ ತಿಳಿಸುತ್ತಾರೆ - ನಾನು ನಿಮ್ಮ ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗುತ್ತೇನೆ ಮತ್ತೆ ನಾನೇ ನಿಮ್ಮೆಲ್ಲರಿಗೂ ಸದ್ಗತಿಯ ದಾತ ಸದ್ಗುರುವೂ ಆಗುತ್ತೇನೆ. ಸದ್ಗತಿಯನ್ನು ನೀಡುವಂತಹ ಗುರು ಒಬ್ಬರೇ ಆಗಿದ್ದಾರೆ ಉಳಿದವರು ಅನೇಕ ಗುರುಗಳಿದ್ದಾರೆ. ನಾನು ತಮ್ಮೆಲ್ಲರಿಗೂ ಸದ್ಗತಿಯನ್ನು ನೀಡುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ನೀವೆಲ್ಲರೂ ಸತ್ಯಯುಗದಲ್ಲಿ ಹೋಗುತ್ತೀರಿ, ಉಳಿದವರೆಲ್ಲರೂ ಶಾಂತಿಧಾಮ ಯಾವುದಕ್ಕೆ ಪರಮಧಾಮವೆಂದು ಕರೆಯಲಾಗುತ್ತದೆ ಅಲ್ಲಿಗೆ ಹೊರಟುಹೋಗುತ್ತಾರೆ. ಸತ್ಯಯುಗದಲ್ಲಿ ಆದಿಸನಾತನ ದೇವಿ-ದೇವತಾಧರ್ಮವಿತ್ತು, ಅನ್ಯ ಯಾವುದೇ ಧರ್ಮವಿರಲಿಲ್ಲ, ಆ ಎಲ್ಲಾ ಆತ್ಮಗಳೂ ಮುಕ್ತಿಧಾಮದಲ್ಲಿ ಹೊರಟುಹೋಗುತ್ತಾರೆ. ಸತ್ಯಯುಗಕ್ಕೆ ಸದ್ಗತಿಯೆಂದು ಕರೆಯಲಾಗುತ್ತದೆ, ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ನಂತರ ದುರ್ಗತಿಯಲ್ಲಿ ಬಂದುಬಿಡುತ್ತಾರೆ. ನೀವೇ ಸದ್ಗತಿಯಿಂದ ಮತ್ತೆ ದುರ್ಗತಿಯಲ್ಲಿ ಬರುತ್ತೀರಿ, ನೀವೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಯಥಾ ರಾಜ-ರಾಣಿ ತಥಾ ಪ್ರಜೆ..... ಆ ಸಮಯದಲ್ಲಿರುತ್ತಾರೆ. 9 ಲಕ್ಷ ಜನರು ಮೊದಲು ಬರುತ್ತಾರೆ, ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ನಂತರ ಅನ್ಯ ಎಲ್ಲಾ ಆತ್ಮಗಳು ಬರುತ್ತಾ ಹೋಗುತ್ತಾರೆ. ಇದನ್ನು ಲೆಕ್ಕ ಮಾಡಲಾಗುತ್ತದೆ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ, ಮೊಟ್ಟಮೊದಲು ಬರುವಂತಹವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ನಂತರ ಕಡಿಮೆ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಅತಿಹೆಚ್ಚೆಂದರೆ 84 ಜನ್ಮ, ಈ ಎಲ್ಲಾ ಮಾತುಗಳನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಭಗವಾನುವಾಚ ಎಂದು ಗೀತೆಯಲ್ಲಿದೆ, ಆದಿಸನಾತನ ದೇವಿ-ದೇವತಾ ಧರ್ಮವನ್ನು ಕೃಷ್ಣನೇನೂ ರಚಿಸಿಲ್ಲ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ, ಕೃಷ್ಣನ ಆತ್ಮವೇ 84 ಜನ್ಮಗಳ ಕೊನೆಯಲ್ಲಿ ಈ ಜ್ಞಾನವನ್ನು ಕೇಳಿ ಮೊದಲನೆಯ ನಂಬರಿನಲ್ಲಿ ಬರುತ್ತಾರೆ - ಈ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ. ನಿತ್ಯವೂ ಓದಬೇಕಾಗಿದೆ. ನೀವು ಭಗವಂತನ ವಿದ್ಯಾರ್ಥಿಗಳಾಗಿದ್ದೀರಿ. ಭಗವಾನುವಾಚ - ನಾನು ನಿಮ್ಮನ್ನು ರಾಜರುಗಳ ರಾಜರನ್ನಾಗಿ ಮಾಡುತ್ತೇನೆ. ಇದು ಹಳೆಯ ಪ್ರಪಂಚವಾಗಿದೆ. ಸತ್ಯಯುಗವು ಹೊಸ ಪ್ರಪಂಚವಾಗಿದೆ, ಈಗ ಕಲಿಯುಗವಿದೆ. ತಂದೆಯು ಬಂದು ಕಲಿಯುಗೀ ಪತಿತರಿಂದ ಸತ್ಯಯುಗೀ ಪಾವನ ದೇವತೆಗಳನ್ನಾಗಿ ಮಾಡುತ್ತಾರೆ ಆದ್ದರಿಂದ ತಂದೆಯೇ, ತಾವು ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ, ಕಲಿಯುಗೀ ಪತಿತರಿಂದ ಸತ್ಯಯುಗೀ ಪಾವನರನ್ನಾಗಿ ಮಾಡಿ ಎಂದು ಕಲಿಯುಗೀ ಮನುಷ್ಯರು ಕರೆಯುತ್ತಾರೆ. ಎಷ್ಟೊಂದು ವ್ಯತ್ಯಾಸ ನೋಡಿ, ಕಲಿಯುಗದಲ್ಲಿ ಅಪಾರ ದುಃಖವಿದೆ, ಮಗು ಜನ್ಮವಾಯಿತೆಂದರೆ ಸುಖವೆನಿಸುತ್ತದೆ, ಅದು ಶರೀರಬಿಟ್ಟಾಗ ದುಃಖವಾಗುತ್ತದೆ, ಇರುವವರೆವಿಗೂ ದುಃಖಿತರಾಗುತ್ತಾರೆ. ಇದು ದುಃಖದ ಪ್ರಪಂಚವಾಗಿದೆ, ತಂದೆಯು ಈಗ ಸುಖದ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ತಮ್ಮನ್ನು ಸ್ವರ್ಗವಾಸಿ ದೇವತೆಗಳನ್ನಾಗಿ ಮಾಡುತ್ತಾರೆ. ನೀವೀಗ ಪುರುಷೋತ್ತಮ ಸಂಗಮಯುಗದವರಾಗಿದ್ದೀರಿ. ಉತ್ತಮರಿಗಿಂತ ಉತ್ತಮ ಪುರುಷ ಅಥವಾ ನಾರಿಯರು ಆಗುತ್ತೀರಿ. ನೀವು ಲಕ್ಷ್ಮಿ-ನಾರಾಯಣರಾಗಲು ಬರುತ್ತೀರಿ. ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಯೋಗವನ್ನು ಇಡುತ್ತಾರೆ ಏಕೆಂದರೆ ಇವರ ಮೂಲಕ ನಾವು ಓದಿ ಇಂತಹವರಾಗುತ್ತೇವೆ ಎಂಬುದು ತಿಳಿದಿರುತ್ತದೆ. ಇಲ್ಲಿ ನೀವು ಪರಮಪಿತ ಪರಮಾತ್ಮ ಶಿವನ ಜೊತೆ ಯೋಗವನ್ನು ಜೋಡಿಸುತ್ತೀರಿ. ಅವರು ತಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಯಾರಿಗೆ ನೀವು ಸಾಲಿಗ್ರಾಮ ಮಕ್ಕಳಾಗಿದ್ದೀರಿ, ನಾನು ನಿಮ್ಮ ತಂದೆಯಾಗಿದ್ದೇನೆ, ನನ್ನನ್ನು ನೆನಪು ಮಾಡಿ, ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಅವರೇ ಜ್ಞಾನಪೂರ್ಣನಾಗಿದ್ದಾರೆ. ತಂದೆಯು ನಿಮಗೆ ಸತ್ಯಗೀತೆಯನ್ನು ತಿಳಿಸುತ್ತಾರೆ ಆದರೆ ಅವರೇನು ಓದಿಲ್ಲ. ನಾನು ಯಾರ ಮಗನೂ ಅಲ್ಲ, ಯಾರಿಂದಲೂ ಕಲಿತವನೂ ಅಲ್ಲ, ನನಗೆ ಯಾವುದೇ ಗುರುಗಳಿಲ್ಲ ಎಂದು ತಂದೆಯು ತಿಳಿಸುತ್ತಾರೆ. ನಾನು ಮತ್ತೆ ನೀವು ಮಕ್ಕಳ ತಂದೆ, ಶಿಕ್ಷಕ, ಸದ್ಗುರುವಾಗಿದ್ದೇನೆ, ಅವರಿಗೆ ಪರಮಾತ್ಮನೆಂದು ಕರೆಯಲಾಗುತ್ತದೆ. ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ, ಅವರು ಬಂದು ಎಲ್ಲಿಯವರೆಗೂ ತಿಳಿಸುವುದಿಲ್ಲವೋ ಅಲ್ಲಿಯವರೆಗೆ ನೀವು ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ನಿಮಗೆ ಈ ಬ್ರಹ್ಮಾತಂದೆಯು ಓದಿಸುವುದಿಲ್ಲ. ಇವರಲ್ಲಿ ಶಿವತಂದೆಯು ಪ್ರವೇಶವಾಗಿ ಆತ್ಮಗಳಿಗೆ ಓದಿಸುತ್ತಾರೆ. ಇದು ಹೊಸಮಾತಲ್ಲವೆ! ಇದು ಸಂಗಮದಲ್ಲಿಯೇ ಆಗುತ್ತದೆ. ಹಳೆಯ ಪ್ರಪಂಚ ಸಮಾಪ್ತಿಯಾಗುತ್ತದೆ, ಯಾರ ಕೂಡಿಟ್ಟ ಹಣವು ಮಣ್ಣಿನಲ್ಲಿ ಮುಚ್ಚಿಹೋಗುತ್ತದೆ, ಕೆಲವರದು ರಾಜನು ತಿನ್ನುತ್ತಾನೆ.......... ನೀವು ಅನೇಕರ ಕಲ್ಯಾಣವನ್ನು ಮಾಡಲು ಮತ್ತೆ ಅನ್ಯರನ್ನೂ ದೇವತೆಗಳನ್ನಾಗಿ ಮಾಡಲು ಈ ಪಾಠಶಾಲೆ, ಮ್ಯೂಸಿಯಂಗಳನ್ನು ತೆರೆಯಿರಿ ಎಂದು ತಂದೆಯು ಹೇಳುತ್ತಾರೆ, ಇಲ್ಲಿ ಅನೇಕರು ಬಂದು ಸುಖದ ಆಸ್ತಿಯನ್ನು ಪಡೆಯುತ್ತಾರೆ, ಈಗ ರಾವಣರಾಜ್ಯವಲ್ಲವೆ. ರಾಮರಾಜ್ಯದಲ್ಲಿ ಸುಖವಿತ್ತು, ರಾವಣರಾಜ್ಯದಲ್ಲಿ ದುಃಖವಿರುತ್ತದೆ ಏಕೆಂದರೆ ಎಲ್ಲರೂ ವಿಕಾರಿಗಳಾಗಿದ್ದಾರೆ. ಅದು ನಿರಾಕಾರಿ ಪ್ರಪಂಚವಾಗಿದೆ, ಲಕ್ಷ್ಮಿ-ನಾರಾಯಣರಿಗೂ ಸಹ ಮಕ್ಕಳಿರುತ್ತಾರಲ್ಲವೆ ಆದರೆ ಅಲ್ಲಿ ಯೋಗಬಲವಿದೆ. ತಂದೆಯು ನಿಮಗೆ ಯೋಗಬಲವನ್ನು ಕಲಿಸುತ್ತಾರೆ, ಯೋಗಬಲದಿಂದ ನೀವು ವಿಶ್ವಕ್ಕೆ ಮಾಲೀಕರಾಗುತ್ತೀರಿ, ಬಾಹುಬಲದಿಂದ ಯಾರೂ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ, ಆಗಲೂ ನಿಯಮವೂ ಇಲ್ಲ. ನೀವು ಮಕ್ಕಳು ತಂದೆಯ ನೆನಪಿನ ಬಲದಿಂದ ಇಡೀ ವಿಶ್ವದ ರಾಜ್ಯಭಾಗ್ಯವನ್ನು ಪಡೆದುಕೊಳ್ಳುತ್ತಿದ್ದೀರಿ. ಎಷ್ಟೊಂದು ಶ್ರೇಷ್ಠವಿದ್ಯೆಯಾಗಿದೆ! ಮೊಟ್ಟಮೊದಲು ಪವಿತ್ರತೆಯ ಪ್ರತಿಜ್ಞೆ ಮಾಡಿ ಎಂದು ತಂದೆಯು ಹೇಳುತ್ತಾರೆ. ಪವಿತ್ರರಾದಾಗಲೇ ಪವಿತ್ರ ಪ್ರಪಂಚಕ್ಕೆ ಹೋಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಕಲಿಯುಗೀ ಸಂಬಂಧವು ಈ ಸಮಯದಲ್ಲಿ ಬಂಧನವಾಗಿದೆ, ಅದನ್ನು ಮರೆತು ತನ್ನನ್ನು ಸಂಗಮಯುಗೀ ಬ್ರಾಹ್ಮಣನೆಂದು ತಿಳಿದುಕೊಳ್ಳಬೇಕು. ಸತ್ಯವಾದ ಗೀತೆಯನ್ನು ಓದಿ ಮತ್ತು ಅನ್ಯರಿಗೆ ಓದಿಸಬೇಕು.
2. ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ ಆದ್ದರಿಂದ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಬೇಕು. ಅನೇಕರ ಕಲ್ಯಾಣ ಮಾಡಲು ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಈ ಪಾಠಶಾಲೆ ಅಥವಾ ಮ್ಯೂಸಿಯಂನ್ನು ತೆರೆಯಬೇಕು.
| ವರದಾನ: |
ತಂದೆಯ ಆಜ್ಞೆ ಎಂದು ತಿಳಿದು ಪ್ರೀತಿಯಿಂದ ಪ್ರತಿಮಾತನ್ನು ಸಹನೆ ಮಾಡುವಂತಹ ಸಹನಶೀಲ ಭವ ಕೆಲವು ಮಕ್ಕಳು ಹೇಳುತ್ತಾರೆ ನಾನು ಸರಿಯಾಗೆ ಇದ್ದೇನೆ ಆದರೂ ಸಹಾ ನಾನೇ ಸಹನೆ ಮಾಡಬೇಕಾಗುವುದು, ಸಾಯ ಬೇಕಾಗುವುದು ಆದರೆ ಈ ಸಹನೆ ಮಾಡುವುದು ಅಥವಾ ಸಾಯುವುದೇ ಧಾರಣೆಯ ಸಬ್ಜೆಕ್ಟ್ ನಲ್ಲಿ ನಂಬರ್ ತೆಗೆದುಕೊಳ್ಳುವುದಾಗಿದೆ, ಆದ್ದರಿಂದ ಸಹನೆ ಮಾಡುವುದರಲ್ಲಿ ಗಾಬರಿಯಾಗಬೇಡಿ. ಕೆಲವು ಮಕ್ಕಳು ಸಹನೆ ಮಾಡುತ್ತಾರೆ ಆದರೆ ಅನಿವಾರ್ಯತೆಯಿಂದ ಸಹನೆ ಮಾಡುವುದು ಪ್ರೀತಿಯಿಂದ ಸಹನೆ ಮಾಡುವುದು-ಇದರಲ್ಲಿ ಅಂತರವಿದೆ. ಮಾತುಗಳ ಕಾರಣದಿಂದ ಸಹನೆ ಮಾಡುವುದಿಲ್ಲ ಆದರೆ ತಂದೆಯ ಆಜ್ಞೆಯಾಗಿದೆ ಸಹನಶೀಲರಾಗಿ ಎಂದು. ಆದ್ದರಿಂದ ಆಜ್ಞೆ ಎಂದು ತಿಳಿದು ಪ್ರೀತಿಯಿಂದ ಸಹನೆ ಮಾಡುವುದು ಅರ್ಥಾತ್ ಸ್ವಯಂ ಅನ್ನು ಪರಿವರ್ತನೆ ಮಾಡಿಕೊಂಡು ಬಿಡುವುದು ಇದಕ್ಕೇ ಮಾಕ್ರ್ಸ್ ಸಿಗುವುದು. |
| ಸ್ಲೋಗನ್: | ಯಾರು ಸದಾ ಖುಷಿಯ ಟಾನಿಕ್ ಅನ್ನು ತೆಗೆದುಕೊಳ್ಳುತ್ತಾರೆ ಅವರು ಆರೋಗ್ಯವಾಗಿರುತ್ತಾರೆ. |