| 10/10/24 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ- ಏಳುತ್ತಾ-ಕುಳಿತುಕೊಳ್ಳುತ್ತಾ ಬುದ್ಧಿಯಲ್ಲಿ ಜ್ಞಾನದಲ್ಲಿ ಚಿಮ್ಮುತ್ತಿರಲಿ ಆಗ ಅಪಾರ ಖುಷಿಯಲ್ಲಿರುತ್ತೀರಿ” | |
| ಪ್ರಶ್ನೆ: | ನೀವು ಮಕ್ಕಳು ಯಾರ ಸಂಗದಿಂದ ಬಹಳ-ಬಹಳ ರಕ್ಷಣೆ ಮಾಡಿಕೊಳ್ಳಬೇಕು? |
| ಉತ್ತರ: | ಯಾರ ಬುದ್ಧಿಯಲ್ಲಿ ತಂದೆಯ ನೆನಪು ಉಳಿಯುವುದಿಲ್ಲವೋ, ಬುದ್ಧಿಯು ಅಲ್ಲಿ-ಇಲ್ಲಿ ಅಲೆಯುತ್ತಿರುತ್ತದೆಯೋ, ಅವರ ಸಂಗದಿಂದ ತಮ್ಮನ್ನು ರಕ್ಷಿಸಿಕೊಳ್ಳಿ, ಅವರ ಅಂಗದೊಂದಿಗೆ ನಿಮ್ಮ ಅಂಗವು ಸ್ಪರ್ಷಿಸಬಾರದು ಏಕೆಂದರೆ ನೆನಪಿನಲ್ಲಿ ಇಲ್ಲದೇ ಇರುವವರು ವಾಯುಮಂಡಲವನ್ನು ಹಾಳುಮಾಡಿಬಿಡುತ್ತಾರೆ. |
| ಪ್ರಶ್ನೆ: | ಮನುಷ್ಯರಿಗೆ ಯಾವಾಗ ಪಶ್ಚಾತ್ತಾಪವಾಗುತ್ತದೆ? |
| ಉತ್ತರ: | ಇವರಿಗೆ ಓದಿಸುವಂತಹವರು ಸ್ವಯಂ ಭಗವಂತನೇ ಆಗಿದ್ದಾರೆಂಬುದು ಯಾವಾಗ ತಿಳಿಯುತ್ತದೆಯೋ ಆಗ ಅವರ ಮುಖ ಸಪ್ಪಗೆ ಆಗಿಬಿಡುತ್ತದೆ ಮತ್ತು ನಾವು ಹುಡುಗಾಟಿಕೆಯಿಂದ ವಿದ್ಯೆಯನ್ನು ಓದಲಿಲ್ಲವೆಂದು ಪಶ್ಚಾತ್ತಾಪಪಡುತ್ತಾರೆ. |
ಓಂ ಶಾಂತಿ. ಈಗ ಆತ್ಮಿಕ ಯಾತ್ರೆಯನ್ನಂತೂ ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಇಲ್ಲಿ ಯಾವುದೇ ಹಠಯೋಗದ ಯಾತ್ರೆಯಿಲ್ಲ. ಇದು ನೆನಪಾಗಿದೆ. ನೆನಪು ಮಾಡಲು ಯಾವುದೇ ಕಷ್ಟದ ಮಾತಿಲ್ಲ. ತಂದೆಯ ನೆನಪು ಮಾಡುವುದರಲ್ಲಂತೂ ಕಷ್ಟವೇ ಇಲ್ಲ. ಇದು ತರಗತಿಯಾಗಿದೆ ಆದ್ದರಿಂದ ಕಾಯಿದೆಯನುಸಾರ ಕುಳಿತುಕೊಳ್ಳಬೇಕಾಗುತ್ತದೆ. ನೀವು ತಂದೆಯ ಮಕ್ಕಳಾಗಿದ್ದೀರಿ, ಮಕ್ಕಳ ಪಾಲನೆಯಾಗುತ್ತಿದೆ. ಯಾವ ತಂದೆಯಿಂದ ಅವಿನಾಶಿ ಜ್ಞಾನರತ್ನಗಳ ಖಜಾನೆಯು ಸಿಗುತ್ತಿದೆ. ತಂದೆಯನ್ನು ನೆನಪು ಮಾಡುವುದರಲ್ಲಿ ಯಾವುದೇ ಕಷ್ಟವಿಲ್ಲ, ಕೇವಲ ಮಾಯೆಯು ಬುದ್ಧಿಯೋಗವನ್ನು ತುಂಡರಿಸುತ್ತದೆ. ಭಲೆ ನೀವು ಹೇಗಾದರೂ ಕುಳಿತುಕೊಳ್ಳಿ, ಅದಕ್ಕೂ ನೆನಪಿಗೂ ಯಾವುದೇ ಸಂಬಂಧವಿಲ್ಲ. ಬಹಳ ಮಕ್ಕಳು ಹಠಯೋಗದಿಂದ ಮೂರು ನಾಲ್ಕು ಗಂಟೆ ಕುಳಿತುಕೊಳ್ಳುತ್ತಾರೆ, ಇಡೀ ರಾತ್ರಿಯೂ ಕುಳಿತುಕೊಳ್ಳುತ್ತಾರೆ. ಮೊದಲಾದರೆ ನಿಮ್ಮದು ಭಟ್ಟಿಯಿತ್ತು, ಅದು ಬೇರೆ ಮಾತಾಗಿತ್ತು. ಆಗ ನಿಮಗೆ ಯಾವುದೇ ಉದ್ಯೋಗವಿರಲಿಲ್ಲ. ಅದಕ್ಕಾಗಿ ಕಲಿಸಿಕೊಡಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ- ನೀವು ಗೃಹಸ್ಥ ವ್ಯವಹಾರದಲ್ಲಿ ಇರಿ. ವ್ಯಾಪಾರ-ವ್ಯವಹಾರವನ್ನೂ ಭಲೆ ಮಾಡಿ, ಯಾವುದೇ ಕೆಲಸ-ಕಾರ್ಯಗಳನ್ನು ಮಾಡುತ್ತಾ ತಂದೆಯನ್ನು ನೆನಪು ಮಾಡಬೇಕು. ಈಗ ನಾವು ನಿರಂತರ ನೆನಪು ಮಾಡುವುದಕ್ಕೂ ಸಾಧ್ಯವಿಲ್ಲ. ಈ ಸ್ಥಿತಿಯು ಬರಲು ಸಮಯ ಹಿಡಿಸುತ್ತದೆ. ಒಂದುವೇಳೆ ನಿರಂತರ ನೆನಪು ಇದ್ದಿದ್ದೇ ಆದರೆ ಕರ್ಮಾತೀತ ಸ್ಥಿತಿಯಾಗಿಬಿಡುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಡ್ರಾಮಾ ಪ್ಲಾನನುಸಾರ ಈಗ ಸ್ವಲ್ಪ ಸಮಯ ಮಾತ್ರವೇ ಉಳಿದಿದೆ. ಎಲ್ಲದರ ಲೆಕ್ಕವು ಬುದ್ಧಿಯಲ್ಲಿದೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತ ಇತ್ತೆಂದು ಹೇಳುತ್ತಾರೆ. ಅದಕ್ಕೆ ಸ್ವರ್ಗವೆಂದು ಕರೆಯಲಾಗುತ್ತಿತ್ತು, ಈಗ ಕ್ರಿಸ್ತನು ಬಂದು 2000 ವರ್ಷಗಳ ಪೂರ್ಣವಾಯಿತು ಅಂದಮೇಲೆ ಪೂರ್ತಿ 5000 ವರ್ಷಗಳ ಲೆಕ್ಕವಾಯಿತಲ್ಲವೆ.
ನಿಮ್ಮ ಹೆಸರು ವಿದೇಶದಲ್ಲಿಯೂ ಪ್ರಸಿದ್ಧವಾಗುತ್ತದೆ. ನೋಡಿ, ಏಕೆಂದರೆ ಅವರ ಬುದ್ಧಿಯು ಭಾರತವಾಸಿಗಳಿಗಿಂತಲೂ ತೀಕ್ಷ್ಣವಾಗಿದೆ. ಭಾರತದಿಂದ ಶಾಂತಿಯನ್ನು ಬಯಸುತ್ತಾರೆ, ಭಾರತವಾಸಿಗಳೇ ಲಕ್ಷಾಂತರ ವರ್ಷಗಳೆಂದು ಹೇಳಿ ಮತ್ತು ಸರ್ವವ್ಯಾಪಿಯ ಜ್ಞಾನವನ್ನು ಕೊಟ್ಟು ಬುದ್ಧಿಯನ್ನು ಹಾಳು ಮಾಡಿಬಿಟ್ಟಿದ್ದಾರೆ. ತಮೋಪ್ರಧಾನರಾಗಿಬಿಟ್ಟಿದ್ದಾರೆ ಆದರೆ ವಿದೇಶಿಯರು ಅಷ್ಟೊಂದು ತಮೋಪ್ರಧಾನರಾಗಿಲ್ಲ. ಅವರ ಬುದ್ಧಿಯು ಸ್ವಲ್ಪವಾದರೂ ತೀಕ್ಷ್ಣವಾಗಿದೆ. ಭಾರತವಾಸಿಗಳಿಂದ ಅವರು ಬಹಳಷ್ಟು ಕಲಿಯುತ್ತಾರೆ. ಯಾವಾಗ ಅವರಿಂದ ಈ ಮಾತು ಕೇಳಿಬರುತ್ತದೆಯೋ ಆಗ ಭಾರತವಾಸಿಗಳು ಜಾಗೃತರಾಗುತ್ತಾರೆ ಏಕೆಂದರೆ ಭಾರತವಾಸಿಗಳು ಸಂಪೂರ್ಣ ಘೋರ ನಿದ್ರೆಯಲ್ಲಿ ಮಲಗಿಬಿಟ್ಟಿದ್ದಾರೆ. ಅವರಾದರೂ ಸ್ವಲ್ಪ ಮಲಗಿದ್ದಾರೆ. ಅವರಿಂದ ಚೆನ್ನಾಗಿ ಪ್ರಭಾವ ಬೀರುತ್ತದೆ. ನಮಗೆ ಯಾರಾದರೂ ಶಾಂತಿಯು ಹೇಗೆ ಸಿಗುತ್ತದೆ ಎಂದು ತಿಳಿಸಿ ಎಂದು ವಿದೇಶದಿಂದಲೂ ಬಂದಿದ್ದರು ಏಕೆಂದರೆ ಭಾರತದಲ್ಲಿಯೇ ತಂದೆಯು ಬರುತ್ತಾರೆ. ಪ್ರಪಂಚದಲ್ಲಿ ಪುನಃ ಶಾಂತಿ ಹೇಗೆ ಮತ್ತು ಯಾವಾಗ ಸ್ಥಾಪನೆಯಾಗುತ್ತದೆ ಎಂಬುದನ್ನು ನೀವು ಮಕ್ಕಳೇ ತಿಳಿಸಬಲ್ಲಿರಿ. ನಿಮಗೆ ತಿಳಿದಿದೆ- ಅವಶ್ಯವಾಗಿ ಸ್ವರ್ಗವಿತ್ತು, ಹೊಸ ಪ್ರಪಂಚದಲ್ಲಿ ಭಾರತವು ಸ್ವರ್ಗವಾಗಿತ್ತು. ಇದು ಮತ್ತ್ಯಾರಿಗೂ ಗೊತ್ತಿಲ್ಲ. ಮನುಷ್ಯರ ಬುದ್ಧಿಯಲ್ಲಂತೂ ಈಶ್ವರ ಸರ್ವವ್ಯಾಪಿ ಎಂಬುದೇ ಕುಳಿತುಬಿಟ್ಟಿದೆ ಮತ್ತು ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಎಲ್ಲರಿಗಿಂತ ಹೆಚ್ಚು ಕಲ್ಲುಬುದ್ಧಿಯವರು ಭಾರತವಾಸಿಗಳೇ ಆಗಿದ್ದಾರೆ. ಗೀತಾಶಾಸ್ತ್ರ ಮುಂತಾದವುಗಳೆಲ್ಲವೂ ಭಕ್ತಿಮಾರ್ಗವಾಗಿದೆ. ಮತ್ತೆ ಇದೇ ರೀತಿ ಮಾಡಲ್ಪಡುತ್ತದೆ. ಭಲೆ ಇದೆಲ್ಲವೂ ಡ್ರಾಮಾ ಎಂದು ತಿಳಿದಿದ್ದರೂ ಸಹ ತಂದೆಯು ಮತ್ತೆ ಪುರುಷಾರ್ಥ ಮಾಡಿಸುತ್ತಾರೆ. ವಿನಾಶವೂ ಆಗುತ್ತದೆಯೆಂಬುದು ನೀವು ಮಕ್ಕಳಿಗೆ ತಿಳಿದಿದೆ. ತಂದೆಯು ಬಂದಿರುವುದೇ ಹೊಸಜಗತ್ತಿನ ಸ್ಥಾಪನೆ ಮಾಡಲು. ಇದು ಖುಷಿಯ ಮಾತಲ್ಲವೆ. ದೊಡ್ಡ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಒಳಗಡೆ ಖುಷಿಯಾಗುತ್ತದೆಯಲ್ಲವೆ. ನಾವೆಲ್ಲರೂ ಉತ್ತೀರ್ಣರಾಗಿ ದೇವತೆಗಳಾಗುತ್ತೇವೆ ಆದರೆ ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ.
ತಂದೆಯು ನಮಗೆ ಓದಿಸಿ ಇಂತಹ ದೇವತೆಗಳನ್ನಾಗಿ ಮಾಡುತ್ತಾರೆಂದು ಮಕ್ಕಳಿಗೆ ತಿಳಿದಿದೆ. ಸ್ವರ್ಗವು ಅವಶ್ಯವಾಗಿ ಇತ್ತು, ಮನುಷ್ಯರಂತೂ ಸಂಪೂರ್ಣ ತಬ್ಬಿಬ್ಬಾಗಿದ್ದಾರೆ. ಬೇಹದ್ದಿನ ತಂದೆಯ ಬಳಿ ಯಾವ ಜ್ಞಾನವಿದೆಯೋ ಅದನ್ನು ನೀವು ಮಕ್ಕಳಿಗೆ ಕೊಡುತ್ತಿದ್ದಾರೆ. ತಂದೆಯ ಮಹಿಮೆ ಮಾಡುತ್ತೀರಿ, ತಂದೆಯು ಜ್ಞಾನಸಾಗರ, ಆನಂದಸಾಗರನಾಗಿದ್ದಾರೆ, ಖಜಾನೆಯೂ ಅವರ ಬಳಿಯೇ ತುಂಬಿದೆ. ನಿಮ್ಮನ್ನು ಇಷ್ಟೊಂದು ಸಾಹುಕಾರರನ್ನಾಗಿ ಯಾರು ಮಾಡುತ್ತಾರೆ? ಇಲ್ಲಿ ನೀವು ಏಕೆ ಬಂದಿದ್ದೀರಿ? ಆಸ್ತಿಯನ್ನು ಪಡೆಯುವುದಕ್ಕಾಗಿ. ಒಂದುವೇಳೆ ಯಾರಿಗಾದರೂ ಆರೋಗ್ಯ ಚೆನ್ನಾಗಿದ್ದು ಹಣವಿಲ್ಲದಿದ್ದರೆ ಏನಾಗುತ್ತದೆ? ವೈಕುಂಠದಲ್ಲಾದರೂ ನಿಮ್ಮ ಬಳಿ ಹಣವಿರುತ್ತದೆ. ಇಲ್ಲಿ ಯಾರೆಲ್ಲಾ ಸಾಹುಕಾರರಿದ್ದಾರೆಯೋ ಅವರಿಗೆ ನಮ್ಮ ಬಳಿ ಎಷ್ಟೊಂದು ಹಣವಿದೆ, ಎಷ್ಟು ಕಾರ್ಖಾನೆಗಳಿದೆ ಎಂದು ನಶೆಯಿರುತ್ತದೆ ಆದರೆ ಶರೀರ ಬಿಟ್ಟರೆ ಎಲ್ಲವೂ ಸಮಾಪ್ತಿ. ನಮಗೆ ತಂದೆಯು 21 ಜನ್ಮದವರೆಗೆ ಇಷ್ಟೊಂದು ಖಜಾನೆಯನ್ನು ಕೊಡುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆ. ತಂದೆಯಂತೂ ಖಜಾನೆಗೆ ಮಾಲೀಕರಾಗುವುದಿಲ್ಲ, ನೀವು ಮಕ್ಕಳನ್ನು ಮಾಲೀಕರನ್ನಾಗಿ ಮಾಡುತ್ತಾರೆ. ವಿಶ್ವದಲ್ಲಿ ಶಾಂತಿಯನ್ನು ಪರಮಪಿತನ ವಿನಃ ಯಾರೂ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ತ್ರಿಮೂರ್ತಿ-ಗೋಲದ ಚಿತ್ರವು ಫಸ್ಟ್ ಕ್ಲಾಸ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಎಲ್ಲಾ ಜ್ಞಾನವು ತುಂಬಲ್ಪಟ್ಟಿದೆ. ಯಾವಾಗ ಇಂತಹ ಅದ್ಭುತ ಚಿತ್ರಗಳನ್ನು ನೋಡುವರೋ ಇದರಲ್ಲಿ ಅವಶ್ಯವಾಗಿ ಏನೋ ರಹಸ್ಯವು ತುಂಬಿದೆ ಎಂದು ತಿಳಿಯುತ್ತಾರೆ. ಮಕ್ಕಳು ಚಿಕ್ಕ-ಚಿಕ್ಕದಾದ ಆಟದ ಸಾಮಾನು (ಚಿತ್ರ) ಗಳನ್ನು ಮಾಡುತ್ತೀರಿ, ಇದು ತಂದೆಗೆ ಇಷ್ಟವಾಗುವುದಿಲ್ಲ. ದೂರದಿಂದಲೇ ನೋಡಿ, ಓದಿ ತಿಳಿದುಕೊಳ್ಳುವಂತಹ ದೊಡ್ಡ-ದೊಡ್ಡ ಚಿತ್ರಗಳನ್ನು ಹಾಕಿರಿ ಎಂದು ತಂದೆಯು ಹೇಳುತ್ತಾರೆ ಏಕೆಂದರೆ ಮನುಷ್ಯರು ದೊಡ್ಡ ಚಿತ್ರಗಳಕಡೆ ಗಮನ ಹರಿಸುತ್ತಾರೆ. ಈ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ- ಒಂದುಕಡೆ ಕಲಿಯುಗ, ಇನ್ನೊಂದುಕಡೆ ಸತ್ಯಯುಗ. ದೊಡ್ಡ-ದೊಡ್ಡ ಚಿತ್ರಗಳಿದ್ದರೆ ಮನುಷ್ಯರ ಗಮನ ಸೆಳೆಯುತ್ತದೆ. ಯಾತ್ರಿಕರೂ ಸಹ ನೋಡುತ್ತಾರೆ, ಅವರಿಗೂ ಅರ್ಥವಾಗುತ್ತದೆ, ಕ್ರಿಸ್ತನಿಗೆ 3000 ವರ್ಷಗಳ ಮೊದಲು ಸ್ವರ್ಗವಿತ್ತೆಂದು ತಿಳಿದಿದೆ. ಅನ್ಯರಿಗೆ ಇದು ಗೊತ್ತಿಲ್ಲ. 5000 ವರ್ಷಗಳ ಲೆಕ್ಕವನ್ನು ಸ್ಪಷ್ಟವಾಗಿ ತಿಳಿಸುವುದಾದರೆ ಅದನ್ನು ದೊಡ್ಡದನ್ನಾಗಿ ಮಾಡಿಸಿ. ದೂರದಿಂದಲೇ ಕಾಣುವಂತಿರಲಿ ಮತ್ತು ಅಕ್ಷರಗಳು ಓದುವಂತಿರಬೇಕು. ಇದರಿಂದ ಪ್ರಪಂಚದ ಅಂತ್ಯ ಖಂಡಿತ ಎಂದು ತಿಳಿದುಬರಲಿ. ಬಾಂಬುಗಳನ್ನು ತಯಾರಿಸುತ್ತಾರೆ, ಪ್ರಾಕೃತಿಕ ವಿಕೋಪಗಳಾಗುತ್ತವೆ. ವಿನಾಶದ ಹೆಸರನ್ನು ಕೇಳಿದಾಗ ನಿಮಗೆ ಬಹಳ ಖುಷಿಯಾಗಬೇಕು. ಆದರೆ ಜ್ಞಾನವಿಲ್ಲದಿದ್ದರೆ ಖುಷಿಯೂ ಆಗುವುದಿಲ್ಲ. ದೇಹಸಹಿತ ಎಲ್ಲವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ. ನಿಮ್ಮ ಬುದ್ಧಿಯೋಗವನ್ನು ನನ್ನೊಂದಿಗೆ ಜೋಡಿಸಿ ಎಂದು ತಂದೆಯು ಹೇಳುತ್ತಾರೆ. ಇದು ಪರಿಶ್ರಮದ ಮಾತಾಗಿದೆ. ಪಾವನರಾಗಿಯೇ ಪಾವನ ಪ್ರಪಂಚದಲ್ಲಿ ಬರಬೇಕಾಗಿದೆ. ನಾವೇ ರಾಜ್ಯಭಾಗ್ಯವನ್ನು ಪಡೆಯುತ್ತೇವೆ ಮತ್ತೆ ಕಳೆದುಕೊಳ್ಳುತ್ತೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದು ಬಹಳ ಸಹಜವಾಗಿದೆ. ಏಳುತ್ತಾ-ಕುಳಿತುಕೊಳ್ಳುತ್ತಾ, ಓಡಾಡುತ್ತಾ ಆಂತರ್ಯದಲ್ಲಿ ಹೇಗೆ ತಂದೆಯ ಬಳಿ ಜ್ಞಾನವಿದೆಯೋ ಹಾಗೆಯೇ ನಿಮ್ಮಲ್ಲಿಯೂ ಹನಿಯುತ್ತಿರಲಿ. ತಂದೆಯು ಬಂದಿರುವುದೇ ಓದಿಸಿ ದೇವತೆಗಳನ್ನಾಗಿ ಮಾಡಲು. ಅಂದಮೇಲೆ ಇಷ್ಟು ಅಪಾರವಾದ ಖುಷಿ ನೀವು ಮಕ್ಕಳಿಗೆ ಇರಬೇಕು. ತಮ್ಮೊಂದಿಗೆ ಕೇಳಿಕೊಳ್ಳಿ - ಇಷ್ಟು ಅಪಾರಖುಷಿ ನನ್ನಲ್ಲಿದೆಯೇ? ತಂದೆಯನ್ನು ಅಷ್ಟು ನೆನಪು ಮಾಡುತ್ತೇನೆಯೇ? ಚಕ್ರದ ಎಲ್ಲಾ ಜ್ಞಾನವು ಬುದ್ಧಿಯಲ್ಲಿದೆ. ಆದ್ದರಿಂದ ಬಹಳ ಖುಷಿಯಿರಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ ಮತ್ತು ಸಂಪೂರ್ಣ ಖುಷಿಯಲ್ಲಿರಿ, ನಿಮಗೆ ಯಾರು ಓದಿಸುತ್ತಿದ್ದಾರೆ! ಇದು ಯಾವಾಗ ಎಲ್ಲರಿಗೆ ಅರ್ಥವಾಗಿ ಬಿಡುವುದೋ ಆಗ ಎಲ್ಲರ ಮುಖ ಸಪ್ಪಗಾಗುವುದು ಆದರೆ ಅವರಿಗಿನ್ನೂ ಅರ್ಥವಾಗಲು ಸ್ವಲ್ಪ ತಡವಾಗುತ್ತದೆ. ಈಗ ದೇವತಾ ಧರ್ಮದವರದು ಅಷ್ಟೊಂದು ಸಂಖ್ಯೆಯಿಲ್ಲ. ಇಡೀ ರಾಜಧಾನಿಯಾಗಿಲ್ಲ. ಇಷ್ಟು ಜನರಿಗೆ ಈಗ ಸಂದೇಶ ಕೊಡಬೇಕಾಗಿದೆ! ಬೇಹದ್ದಿನ ತಂದೆಯು ಪುನಃ ನಮಗೆ ಸ್ವರ್ಗದ ರಾಜ್ಯಭಾಗ್ಯ ಕೊಡುತ್ತಿದ್ದಾರೆ. ನೀವೂ ಸಹ ಆ ತಂದೆಯನ್ನು ನೆನಪು ಮಾಡಿರಿ. ಬೇಹದ್ದಿನ ತಂದೆಯು ಅವಶ್ಯವಾಗಿ ಬೇಹದ್ದಿನ ಸುಖವನ್ನು ಕೊಡುತ್ತಾರಲ್ಲವೆ. ಮಕ್ಕಳ ಆಂತರ್ಯದಲ್ಲಿ ಅಪಾರವಾದ ಜ್ಞಾನದ ಖುಷಿಯಿರಬೇಕು ಮತ್ತು ತಂದೆಯ ಎಷ್ಟು ನೆನಪು ಮಾಡುತ್ತೀರೋ ಅಷ್ಟು ಆತ್ಮವು ಪವಿತ್ರವಾಗುತ್ತದೆ.
ಡ್ರಾಮಾಪ್ಲಾನನುಸಾರ ನೀವು ಎಷ್ಟು ಸೇವೆ ಮಾಡಿ ಪ್ರಜೆಗಳನ್ನು ಮಾಡಿಕೊಳ್ಳುತ್ತೀರೋ, ಯಾರ ಕಲ್ಯಾಣವಾಗುತ್ತದೆಯೋ ಅವರಿಂದ ಆಶೀರ್ವಾದವು ಸಿಕ್ಕಿಬಿಡುತ್ತದೆ. ಬಡವರ ಸೇವೆ ಮಾಡುತ್ತೀರಿ, ನಿಮಂತ್ರಣ ಕೊಡುತ್ತೀರಿ, ರೈಲಿನಲ್ಲಿಯೂ ನೀವು ಬಹಳ ಸೇವೆ ಮಾಡಬಹುದು. ಇಷ್ಟು ಚಿಕ್ಕದಾದ ಬ್ಯಾಡ್ಜ್ನಲ್ಲಿ ಎಷ್ಟು ಜ್ಞಾನವು ತುಂಬಲ್ಪಟ್ಟಿದೆ. ಪೂರ್ಣ ವಿದ್ಯೆಯ ಸಾರವು ಇದರಲ್ಲಿದೆ. ಒಳ್ಳೊಳ್ಳೆಯ ಬ್ಯಾಡ್ಜ್ಗಳನ್ನು ಬಹಳಷ್ಟು ಮಾಡಿಸಬೇಕು. ಇದನ್ನು ಉಡುಗೊರೆಯ ರೂಪದಲ್ಲಿಯೂ ಕೊಡಬಹುದು. ಇದರ ಬಗ್ಗೆ ಅನ್ಯರಿಗೆ ತಿಳಿಸುವುದೂ ಸಹ ಸಹಜವಾಗುತ್ತದೆ. ಕೇವಲ ತಂದೆಯನ್ನು ನೆನಪು ಮಾಡಿ, ತಂದೆಯಿಂದ ಆಸ್ತಿಯು ಸಿಗುತ್ತದೆ. ತಂದೆ ಮತ್ತು ಆಸ್ತಿಯು ಸ್ವರ್ಗದ ರಾಜ್ಯಭಾಗ್ಯವನ್ನು, ಕೃಷ್ಣಪುರಿಯನ್ನು ನೆನಪು ಮಾಡಬೇಕು. ಮನುಷ್ಯರ ಮತವು ಎಷ್ಟು ತಬ್ಬಿಬ್ಬಾಗಿದೆ, ಏನನ್ನೂ ತಿಳಿದುಕೊಂಡಿಲ್ಲ. ವಿಕಾರಕ್ಕಾಗಿ ಎಷ್ಟು ಸತಾಯಿಸುತ್ತಾರೆ. ಕಾಮದ ಹಿಂದೆ ಎಷ್ಟೊಂದು ಹಿಂಸಿಸುತ್ತಾರೆ. ಯಾವ ಮಾತನ್ನೂ ತಿಳಿದುಕೊಳ್ಳುವುದಿಲ್ಲ. ಎಲ್ಲರ ಬುದ್ಧಿ ಸಂಪೂರ್ಣ ಕೆಟ್ಟುಹೋಗಿದೆ, ತಂದೆಯನ್ನೇ ತಿಳಿದುಕೊಂಡಿಲ್ಲ. ಇದೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಎಲ್ಲರ ಮಾನಸಿಕ ಶಕ್ತಿಯು ಸಮಾಪ್ತಿಯಾಗಿಬಿಟ್ಟಿದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಪವಿತ್ರರಾದರೆ ಇಂತಹ ಸ್ವರ್ಗಕ್ಕೆ ಮಾಲೀಕರಾಗುತ್ತೀರಿ ಆದರೆ ಇದು ಅರ್ಥವಾಗುವುದೇ ಇಲ್ಲ. ಆತ್ಮದಲ್ಲಿ ಸಂಪೂರ್ಣ ಶಕ್ತಿ ಹೊರಟುಹೋಗಿದೆ. ಎಷ್ಟೊಂದು ತಿಳಿಸುತ್ತಾರೆ ಆದರೂ ಪುರುಷಾರ್ಥವನ್ನು ಮಾಡಿ, ಮಾಡಿಸಬೇಕು. ಪುರುಷಾರ್ಥದಲ್ಲಿ ಸುಸ್ತಾಗಬಾರದು. ಹೃದಯವಿಧೀರ್ಣರಾಗಬಾರದು. ಇಷ್ಟೊಂದು ಶ್ರಮಪಟ್ಟರೂ, ಭಾಷಣದಿಂದ ಒಬ್ಬರೂ ಸಹ ಹುಟ್ಟಲಿಲ್ಲ ಆದರೆ ನೀವು ಏನೆಲ್ಲಾ ತಿಳಿಸಿದಿರೋ ಅದನ್ನು ಯಾರೆಲ್ಲಾ ಕೇಳಿದರೋ ಅವರ ಮೇಲೆ ಪ್ರಭಾವವಂತೂ ಬೀರುತ್ತದೆ. ಅಂತ್ಯದಲ್ಲಿ ಎಲ್ಲರೂ ಖಂಡಿತ ತಿಳಿದುಕೊಳ್ಳುತ್ತಾರೆ. ನೀವು ಬಿ.ಕೆ.ಗಳದು ಬಹಳ ಮಹಿಮೆಯಾಗಲಿದೆ ಆದರೆ ಚಲನ-ವಲನವನ್ನು ನೋಡಿದಾಗ ಸಂಪೂರ್ಣ ಬುದ್ಧಿಹೀನರಾಗಿದ್ದಾರೆ. ಯಾವುದೇ ಗೌರವವೂ ಇಲ್ಲ, ತಿಳುವಳಿಕೆಯೂ ಇಲ್ಲ. ಬುದ್ಧಿಯು ಹೊರಗಡೆ ಅಲೆದಾಡುತ್ತಿರುತ್ತದೆ. ತಂದೆಯನ್ನು ನೆನಪು ಮಾಡುತ್ತಾರೆಂದರೆ ಸಹಾಯವು ಸದಾ ಸಿಗುತ್ತದೆ. ತಂದೆಯನ್ನು ನೆನಪು ಮಾಡಲಿಲ್ಲವೆಂದರೆ ಅವರು ಪತಿತರಾಗಿರುತ್ತಾರೆ. ನೀವು ಪಾವನರಾಗುತ್ತಿದ್ದೀರಿ, ಯಾರು ತಂದೆಯನ್ನು ನೆನಪು ಮಾಡುವುದಿಲ್ಲವೋ ಅವರ ಬುದ್ಧಿಯು ಅವಶ್ಯವಾಗಿ ಒಂದಲ್ಲ ಒಂದರಲ್ಲಿ ಅಲೆದಾಡುತ್ತಿರುತ್ತದೆ. ಅಂತಹವರ ಜೊತೆ ಅಂಗ-ಅಂಗದೊಂದಿಗೆ ಸ್ಪರ್ಷವಾಗಬಾರದು ಏಕೆಂದರೆ ನೆನಪಿನಲ್ಲಿರದ ಕಾರಣ ಅವರು ವಾಯುಮಂಡಲವನ್ನು ಹಾಳು ಮಾಡಿಬಿದುತ್ತಾರೆ. ಪವಿತ್ರತೆ ಮತ್ತು ಅಪವಿತ್ರತೆಯು ಜೊತೆಯಲ್ಲಿರಲು ಸಾಧ್ಯವಿಲ್ಲ ಆದ್ದರಿಂದ ತಂದೆಯ ಹಳೆಯ ಸೃಷ್ಟಿಯನ್ನು ಸಮಾಪ್ತಿ ಮಾಡಿಬಿಡುತ್ತಾರೆ. ದಿನ-ಪ್ರತಿದಿನ ಕಾನೂನು ಸಹ ಕಠಿಣವಾಗಿರುವುದ್ದೇ ರಚಿಸಲ್ಪಡುತ್ತದೆ. ತಂದೆಯನ್ನು ನೆನಪು ಮಾಡಲಿಲ್ಲವೆಂದರೆ ಲಾಭಕ್ಕೆ ಬದಲಾಗಿ ಇನ್ನೂ ನಷ್ಟವಾಗಿಬಿಡುತ್ತದೆ. ಪವಿತ್ರತೆಯ ಆಧಾರ ನೆನಪಿನ ಮೇಲಿದೆ. ಒಂದು ಸ್ಥಳದಲ್ಲಿ ಕುಳಿತುಕೊಳ್ಳುವ ಮಾತಿಲ್ಲ. ಇಲ್ಲಿ ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುವ ಬದಲು ಬೇರೆ-ಬೇರೆ ಬೆಟ್ಟಗಳ ಮೇಲೆ ಹೋಗಿ ಕುಳಿತುಕೊಳ್ಳಿ ಅದು ಚೆನ್ನಾಗಿರುತ್ತದೆ. ಯಾರು ಚೆನ್ನಾಗಿ ಓದುವುದಿಲ್ಲವೋ ಅವರು ಪತಿತರು, ಅವರ ಸಂಗವನ್ನೂ ಮಾಡಬಾರದು. ನಡತೆಯಿಂದಲೇ ತಿಳಿದುಬರುತ್ತದೆ. ನೆನಪಿನ ವಿನಃ ಪಾವನರಾಗಲು ಸಾಧ್ಯವಿಲ್ಲ. ಎಲ್ಲರ ಮೇಲೆ ಪಾಪದ ಹೊರೆ ಜನ್ಮ-ಜನ್ಮಾಂತರದಿಂದ ಬಹಳಷ್ಟಿದೆ. ನೆನಪಿನ ಯಾತ್ರೆಯಲ್ಲಿರದೆ ಹೇಗೆ ಹೋಗಲು ಸಾಧ್ಯವಿಲ್ಲ! ಯಾರು ನೆನಪು ಮಾಡುವುದಿಲ್ಲವೋ ಅವರು ಪತಿತರಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ನಾನು ನೀವು ಮಕ್ಕಳಿಗಾಗಿ ಇಡೀ ಪತಿತ ಪ್ರಪಂಚವನ್ನೇ ಸಮಾಪ್ತಿ ಮಾಡಿಬಿಡುತ್ತೇನೆ. ಅವರ ಸಂಗವೂ ಸಹ ಇರಬಾರದು. ಯಾರ ಸಂಗ ಮಾಡಬೇಕೆನ್ನುವುದೂ ಇಷ್ಟಾದರೂ ಬುದ್ಧಿಯಿಲ್ಲ. ನಿಮ್ಮ ಪ್ರೀತಿಯು ಪಾವನರ ಜೊತೆಯಿರಬೇಕು. ಇದೂ ಸಹ ಬುದ್ಧಿಯಿರಬೇಕು. ಮಧುರ ತಂದೆ ಮತ್ತು ಮಧುರ ರಾಜಧಾನಿಯ ವಿನಃ ಬೇರೆ ಯಾರದೂ ನೆನಪಿಗೆ ಬರಬಾರದು. ಇಷ್ಟೆಲ್ಲಾ ತ್ಯಾಗ ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ. ತಂದೆಗಂತೂ ಮಕ್ಕಳ ಮೇಲೆ ಅಪಾರ ಪ್ರೀತಿಯಿದೆ. ಮಕ್ಕಳು ಪಾವನರಾಗುತ್ತಾರೆಂದರೆ ನೀವು ಪಾವನ ಪ್ರಪಂಚದ ಮಾಲೀಕರಾಗಿಬಿಡುತ್ತೀರಿ. ನಾನು ನಿಮಗಾಗಿ ಪಾವನ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇನೆ. ಈ ಪತಿತ ಪ್ರಪಂಚವು ಸಂಪೂರ್ಣ ವಿನಾಶವಾಗಲಿದೆ, ನಿಮ್ಮ ಪ್ರಪಂಚವು ಸ್ಥಾಪನೆಯಾಗಲಿದೆ. ಈ ಪತಿತ ಪ್ರಪಂಚದಲ್ಲಿ ಪ್ರತಿಯೊಂದು ವಸ್ತುವು ನಿಮಗೆ ದುಃಖವನ್ನು ಕೊಡುತ್ತದೆ. ಆಯಸ್ಸೂ ಸಹ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಕಾಸಿಗೂ ಬೆಲೆಯಿಲ್ಲದ್ದು ಎಂದು ಹೇಳಲಾಗುತ್ತದೆ. ವಜ್ರ ಮತ್ತು ಕವಡೆಗೆ ವ್ಯತ್ಯಾಸವಿದೆಯಲ್ಲವೆ. ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಾಗಬೇಕು. ಗಾಯನವಿದೆ- ಸತ್ಯತೆಯಿರುವಂತಹವರೆಂದು ಗಾಯನ ಮಾಡುತ್ತಾರೆ. ಸತ್ಯಯುಗದಲ್ಲಿ ಖುಷಿಯಲ್ಲಿ ನರ್ತನ ಮಾಡುತ್ತಿರುತ್ತಾರೆ. ಅಂದಾಗ ಇಲ್ಲಿಯ ಯಾವುದೇ ವಸ್ತುವಿನೊಂದಿಗೆ ಮನಸ್ಸನ್ನಿಡಬಾರದು. ಇದನ್ನು ನೋಡುತ್ತಿದ್ದರೂ ನೋಡದ ಹಾಗಿರಬೇಕು. ನೋಡಿಯೂ ನೋಡದಂತಿರಬೇಕು. ಆ ಸಾಹಸ, ಅಂತಹ ಸ್ಥಿತಿಯಿರಬೇಕಾಗಿದೆ. ಈ ಹಳೆಯ ಪ್ರಪಂಚವಿರುವುದೇ ಇಲ್ಲವೆಂದು ನಿಶ್ಚಯವಿದೆ. ಇಷ್ಟೊಂದು ಖುಷಿಯ ನಶೆಯು ಏರಿರಬೇಕು. ನಾವು ಶಿವತಂದೆಯನ್ನು ನೆನಪು ಮಾಡಿದ್ದೇ ಆದರೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಹಠಯೋಗದಿಂದಲೂ ಕುಳಿತುಕೊಳ್ಳಬಾರದು. ತಿನ್ನುತ್ತಾ-ಕುಡಿಯುತ್ತಾ, ಕೆಲಸಕಾರ್ಯವನ್ನು ಮಾಡುತ್ತಾ ತಂದೆಯನ್ನು ನೆನಪು ಮಾಡಿ. ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದೂ ಸಹ ತಿಳಿದಿದೆ. ಪುರುಷಾರ್ಥವನ್ನು ಮಾಡಿ ಪಾವನರಾಗಿ ಎಂದು ತಂದೆಯು ಹೇಳುತ್ತಾರೆ. ತಂದೆಯು ಪಾವನರಾಗುವ ಪುರುಷಾರ್ಥವನ್ನು ಮಾಡಿಸುತ್ತಾರೆ. ನೀವು ಮತ್ತೆ ಪತಿತರಾಗುತ್ತೀರಿ, ಎಷ್ಟೊಂದು ಸುಳ್ಳು, ಪಾಪವನ್ನು ಮಾಡುತ್ತೀರಿ. ಸದಾ ಶಿವತಂದೆಯ ನೆನಪಿರಲಿ. ಪಾಪವೆಲ್ಲವೂ ಸ್ವಾಹಾ ಆಗಿಬಿಡಲಿ. ಇದು ತಂದೆಯ ಯಜ್ಞವಾಗಿದೆಯಲ್ಲವೆ. ಇದು ಅತಿದೊಡ್ಡ ಯಜ್ಞವಾಗಿದೆ. ಆ ಜನರು ಯಜ್ಞಗಳನ್ನು ರಚಿಸಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇಲ್ಲಿ ನಿಮಗೆ ತಿಳಿದಿದೆ- ಇಡೀ ಪ್ರಪಂಚವು ಇದರಲ್ಲಿ ಸ್ವಾಹಾ ಆಗಲಿದೆ. ಹೊರಗಿನಿಂದ ಸಂದೇಶ ಬರುತ್ತದೆ, ಭಾರತದಲ್ಲಿಯೂ ಹರಡುತ್ತದೆ. ತಂದೆಯೊಂದಿಗೆ ಬುದ್ಧಿಯೋಗವಿದೆಯೆಂದರೆ ಪಾಪವು ತುಂಡಾಗುತ್ತದೆ ಮತ್ತೆ ಶ್ರೇಷ್ಠಪದವಿಯೂ ಸಹ ಸಿಗುತ್ತದೆ. ಮಕ್ಕಳ ಪುರುಷಾರ್ಥವನ್ನು ಮಾಡಿಸುವುದು ತಂದೆಯ ಕರ್ತವ್ಯವಾಗಿದೆ. ಲೌಕಿಕ ತಂದೆಯಾದರೂ ಮಕ್ಕಳ ಸೇವೆಯನ್ನು ಮಾಡುತ್ತಾರೆ, ನಂತರ ಸೇವೆಯನ್ನೂ ಪಡೆಯುತ್ತಾರೆ. ತಂದೆಯು ತಿಳಿಸುತ್ತಾರೆ- ನಾವು ನೀವು ಮಕ್ಕಳಿಗೆ 21 ಜನ್ಮಗಳ ಆಸ್ತಿಯನ್ನು ಕೊಡುತ್ತೇನೆ ಅಂದಾಗ ಇಂತಹ ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ಇದರಿಂದ ಪಾಪಗಳು ತುಂಡಾಗುತ್ತವೆ. ಬಾಕಿ ನೀರಿನಿಂದ ಪಾಪವು ತುಂಡಾಗುತ್ತದೆಯೇನು! ನೀರಂತೂ ಎಲ್ಲಾಕಡೆಯೂ ಇರುತ್ತದೆ, ವಿದೇಶದಲ್ಲಿಯೂ ಸಹ ನದಿಗಳಿರುತ್ತವೆ. ಇಲ್ಲಿಯ ನದಿಗಳು ಪಾವನ ಮಾಡುವಂತಹದು, ವಿದೇಶದ ನದಿಗಳು ಪತಿತರನ್ನಾಗಿ ಮಾಡುತ್ತದೆಯೇನು? ಮನುಷ್ಯರಲ್ಲಿ ಏನೂ ಸಹ ತಿಳುವಳಿಕೆಯಿಲ್ಲ. ತಂದೆಗೆ ದಯೆ ಬರುತ್ತದೆಯಲ್ಲವೆ! ತಂದೆಯು ತಿಳಿಸುತ್ತಾರೆ- ಮಕ್ಕಳೇ, ಹುಡುಗಾಟಿಕೆಯನ್ನು ಮಾಡಬೇಡಿ. ತಂದೆಯು ಇಷ್ಟೊಂದು ಸುಂದರರನ್ನಾಗಿ ಮಾಡುತ್ತಾರೆಂದರೆ ಶ್ರಮಪಡಬೇಕಲ್ಲವೆ. ತಮ್ಮ ಮೇಲೆ ದಯೆತೋರಿಸಿಕೊಳ್ಳಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಇಲ್ಲಿಯ ಯಾವುದೇ ವಸ್ತುವಿನೊಂದಿಗೆ ಮನಸ್ಸನ್ನಿಡಬಾರದು. ನೋಡುತ್ತಿದ್ದರೂ ನೋಡದಂತಿರಬೇಕು. ಕಣ್ಣು ತೆರೆದಿದ್ದರೂ ಸಹ ಹೇಗೆ ನಿದ್ರೆಯ ನಶೆಯಿರುತ್ತದೆಯೋ ಹಾಗೆಯೇ ಖುಷಿಯ ನಶೆಯೇರಿರಬೇಕು.
2. ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ ಆದ್ದರಿಂದ ಜಾಗೃತವಾಗಿರಬೇಕು- ಪತಿತರ ಅಂಗದೊಂದಿಗೆ ಅಂಗವು ಸ್ಪರ್ಷಿಸಬಾರದು. ಮಧುರ ತಂದೆ ಮತ್ತು ಮಧುರ ರಾಜಧಾನಿಯನ್ನು ಬಿಟ್ಟು ಬೇರೆ ಯಾವುದೂ ಸಹ ನೆನಪಿಗೆ ಬರಬಾರದು.
| ವರದಾನ: |
ಹದ್ಧಿನ ಇಚ್ಛೆಗಳನ್ನು ಬಿಟ್ಟು ಒಳ್ಳೆಯವರಾಗುವಂತಹ ಇಚ್ಛಾಮಾತ್ರಂ ಅವಿಧ್ಯ ಭವ ಮನಸ್ಸಿನಲ್ಲಿ ಯಾವುದಾದರೂ ಸಹಾ ಹದ್ಧಿನ ಇಚ್ಛೆ ಇದ್ದಿದ್ದೇ ಆದರೆ ಒಳ್ಳೆಯವರಾಗಲು ಬಿಡುವುದಿಲ್ಲ. ಹೇಗೆ ಬಿಸಿಲಿನಲ್ಲಿ ಹೋಗುತ್ತಿದ್ದರೆ ನೆರಳು ಮುಂದೆ ಹೋಗುತ್ತಿರುತ್ತೆ, ಒಂದುವೇಳೆ ಅದನ್ನು ನೀವು ಅದನ್ನು ಹಿಡಿದುಕೊಳ್ಳಲು ಪ್ರಯತ್ನಪಟ್ಟರೂ ಅದನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲ, ನೀವು ಹಿಂದೆತಿರುಗಿ ನಡೆದಾಗ ಅದು ನಿಮ್ಮ ಹಿಂದೆ-ಹಿಂದೆ ಬರುವುದು. ಅದೇ ರೀತಿ ಇಚ್ಛೆ ಆಕರ್ಷಣೆ ಮಾಡಿ ಅಳಿಸುವಂತಹದಾಗಿದೆ, ಅದನ್ನು ಬಿಟ್ಟಾಗ ಅದು ನಿಮ್ಮ ಹಿಂದೆ-ಹಿಂದೆ ಬರುವುದು. ಬೇಡುವಂತಹವರು ಎಂದೂ ಸಹಾ ಸಂಪನ್ನರಾಗಲು ಸಾಧ್ಯವಿಲ್ಲ. ಯಾವುದಾದರೂ ಹದ್ಧಿನ ಇಚ್ಛೆಗಳ ಹಿಂದೆ ಓಡುವುದು ಎಂದರೆ ಮೃಗತೃಷ್ಣದ ಸಮಾನವಾಗಿದೆ. ಇದರಿಂದ ಸದಾ ಸುರಕ್ಷಿತರಾಗಿರಿ ಆಗ ಇಚ್ಛಾ ಮಾತ್ರಂ ಅವಿದ್ಯೆ ಆಗಿಬಿಡುವಿರಿ. |
| ಸ್ಲೋಗನ್: | ತಮ್ಮ ಶ್ರೇಷ್ಠ ಕರ್ಮ ಅಥವಾ ಶ್ರೇಷ್ಠ ಚಲನೆಯಿಂದ ಆಶೀರ್ವಾದಗಳನ್ನು ಜಮಾ ಮಾಡಿಕೊಂಡಾಗ ಬೆಟ್ಟದಂತಹ ಮಾತೂ ಸಹಾ ಹತ್ತಿಯ ತರಹ ಅನುಭವವಾಗುವುದು. |