| 16/10/24 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ- ನೀವು ಅಪಾರ ಸುಖವನ್ನು ಪಡೆಯಲು ಮಾತಾಪಿತರ ಸಮ್ಮುಖದಲ್ಲಿ ಬಂದಿದ್ದೀರಿ, ತಂದೆಯು ನಿಮ್ಮನ್ನು ಅಪಾರ ದುಃಖದಿಂದ ಬಿಡಿಸಿ ಅಪಾರ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ” | |
| ಪ್ರಶ್ನೆ: | ಒಬ್ಬ ತಂದೆಯೇ ರಿಸರ್ವ್ನಲ್ಲಿ ಇರುತ್ತಾರೆ, ಪುನರ್ಜನ್ಮದಲ್ಲಿ ಬರುವುದಿಲ್ಲ- ಏಕೆ? |
| ಉತ್ತರ: | ಏಕೆಂದರೆ ನಿಮ್ಮನ್ನು ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುವಂತಹವರು ಯಾರಾದರೂ ಬೇಕಲ್ಲವೇ! ಒಂದುವೇಳೆ ತಂದೆಯೂ ಸಹ ಪುನರ್ಜನ್ಮದಲ್ಲಿ ಬರುತ್ತಾರೆಂದರೆ ನಿಮ್ಮನ್ನು ಕಪ್ಪಾದವರಿಂದ ಸುಂದರರನ್ನಾಗಿ ಯಾರು ಮಾಡುವರು ಆದ್ದರಿಂದ ತಂದೆಯು ರಿಸರ್ವ್ನಲ್ಲಿಯೇ (ಪರಮಧಾಮದಲ್ಲಿ) ಇರುತ್ತಾರೆ. |
| ಪ್ರಶ್ನೆ: | ದೇವತೆಗಳು ಸದಾ ಸುಖಿಯಾಗಿರುತ್ತಾರೆ- ಏಕೆ? |
| ಉತ್ತರ: | ಏಕೆಂದರೆ ಪವಿತ್ರರಾಗಿರುತ್ತಾರೆ. ಪವಿತ್ರತೆಯ ಕಾರಣ ಅವರ ನಡತೆ ಸುಧಾರಣೆಯಾಗಿರುತ್ತದೆ. ಎಲ್ಲಿ ಪವಿತ್ರತೆಯಿರುತ್ತದೆಯೋ ಅಲ್ಲಿ ಸುಖ-ಶಾಂತಿಯಿದೆ. ಮುಖ್ಯವಾದ ಮಾತು ಪವಿತ್ರತೆಯದಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಆತ್ಮೀಯ ತಂದೆಯು ತಿಳಿಸುತ್ತಾರೆ- ಅವರು ತಂದೆಯೂ ಆಗಿದ್ದಾರೆ, ಮಾತಾಪಿತನೂ ಸಹ ಆಗಿದ್ದಾರೆ. ನೀವು ಮಾತಾಪಿತ ನಾನು ನಿಮ್ಮ ಬಾಲಕನಾಗಿದ್ದೇನೆ.... ಎಂದು ನೀವು ಹಾಡುತ್ತಿದ್ದಿರಲ್ಲವೆ! ಈ ರೀತಿ ಯಾರನ್ನು ಕರೆಯುತ್ತಾರೆ? ಪರಮಪಿತ ಪರಮಾತ್ಮನನ್ನು, ಆದರೆ ಅವರನ್ನೇ ತಿಳಿದುಕೊಂಡಿಲ್ಲ. ಅವರ ಕೃಪೆಯಿಂದ ಅಪಾರವಾದ ಸುಖ ಯಾವುದು ಮತ್ತು ಹೇಗೆ ಸಿಗುತ್ತದೆ? ಅಪಾರವಾದ ಸುಖವೆಂದು ಯಾವುದಕ್ಕೆ ಕರೆಯಲಾಗುತ್ತದೆ, ಅದನ್ನೂ ಸಹ ತಿಳಿದುಕೊಂಡಿಲ್ಲ. ನೀವು ಇಲ್ಲಿ ಸನ್ಮುಖದಲ್ಲಿ ಕುಳಿತುಕೊಂಡಿದ್ದೀರಿ. ಇಲ್ಲಿ ಎಷ್ಟೊಂದು ದುಃಖವಿದೆ ಎಂಬುದು ನಿಮಗೆ ತಿಳಿದಿದೆ. ಇದು ದುಃಖಧಾಮವಾಗಿದೆ, ಅದು ಸುಖಧಾಮವಾಗಿದೆ. ನಾವೇ 21 ಜನ್ಮಗಳು ಸ್ವರ್ಗದಲ್ಲಿ ಬಹಳಷ್ಟು ಸುಖಿಯಾಗಿರುತ್ತೇವೆಂದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನಿಮಗೂ ಸಹ ಮೊದಲು ಇದರ ಅನುಭವವಿರಲಿಲ್ಲ, ನಾವು ಆ ಪರಮಪಿತ ಪರಮಾತ್ಮ, ಮಾತಾಪಿತನ ಸನ್ಮುಖದಲ್ಲಿ ಕುಳಿತುಕೊಂಡಿದ್ದೇವೆ ಈಗ ನೀವು ತಿಳಿದುಕೊಂಡಿದ್ದೀರಿ. ನಾವು 21 ಜನ್ಮಕ್ಕಾಗಿ ಸ್ವರ್ಗದ ರಾಜ್ಯಭಾಗ್ಯಕ್ಕಾಗಿ ಪ್ರಾಪ್ತಿ ಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇವೆಂದು ತಿಳಿದಿದ್ದೀರಿ. ತಂದೆಯನ್ನೂ ತಿಳಿದುಕೊಂಡಿದ್ದೀರಿ ಮತ್ತು ತಂದೆಯ ಮೂಲಕ ಇಡೀ ಸೃಷ್ಟಿಚಕ್ರವನ್ನೂ ತಿಳಿದುಕೊಂಡಿರಿ. ನಾವು ಮೊದಲು ಅಪಾರ ಸುಖದಲ್ಲಿದ್ದೆವು ಮತ್ತೆ ದುಃಖದಲ್ಲಿ ಬಂದೆವು ಇದೂ ಸಹ ನಂಬರ್ವಾರಾಗಿ ಬುದ್ಧಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗಾದರೂ ಸದಾಕಾಲ ನೆನಪಿರಬೇಕು ಆದರೆ ತಂದೆಯು ನೋಡುತ್ತಾರೆ- ಇವರು ಗಳಿಗೆ-ಗಳಿಗೆಗೆ ಮರೆತುಬಿಡುತ್ತಾರೆ ಆದ್ದರಿಂದ ಮಕ್ಕಳು ಮತ್ತೆ ಬಾಡಿಹೋಗಿಬಿಡುತ್ತಾರೆ. ಮುಟ್ಟಿದರೆ ಮುನಿಯ ರೀತಿ ಸ್ಥಿತಿಯಾಗಿಬಿಡುತ್ತದೆ. ಮಾಯೆಯು ಯುದ್ಧವನ್ನು ಮಾಡುತ್ತಿರುತ್ತದೆ. ಯಾವ ಖುಷಿಯಿರಬೇಕೋ ಅದು ಇರುವುದಿಲ್ಲ. ನಂಬರ್ವಾರ್ ಪದವಿಯಂತೂ ಇರುತ್ತದೆಯಲ್ಲವೆ. ಸ್ವರ್ಗದಲ್ಲಂತೂ ಹೋಗುತ್ತಾರೆ ಆದರೆ ಅಲ್ಲಿಯೂ ಸಹ ರಾಜರಿಂದ ಹಿಡಿದು ದಾಸ-ದಾಸಿಯರವರೆಗೂ ಪದವಿಯಿರುತ್ತದೆಯಲ್ಲವೆ. ಬಡಪ್ರಜೆಗಳೂ ಇರುತ್ತಾರೆ, ಸಾಹುಕಾರರೂ ಇರುತ್ತಾರೆ. ಸ್ವರ್ಗದಲ್ಲಿಯೂ ಸಹ ಹಾಗೆಯೇ, ನರಕದಲ್ಲಿಯೂ ಸಹ ಹಾಗೆಯೇ ಶ್ರೇಷ್ಠ-ಕನಿಷ್ಠರು ಇರುತ್ತಾರೆ. ಈಗ ನೀವು ಮಕ್ಕಳು ತಿಳಿದಿದ್ದೀರಿ- ನಾವು ಅಪಾರವಾದ ಸುಖವನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೇವೆ. ಈ ಲಕ್ಷ್ಮೀ-ನಾರಾಯಣರಿಗೆ ಎಲ್ಲರಿಗಿಂತ ಹೆಚ್ಚು ಸುಖವಿರುತ್ತದೆಯಲ್ಲವೆ. ಮುಖ್ಯವಾದದ್ದು ಪವಿತ್ರತೆಯ ಮಾತಾಗಿದೆ. ಪವಿತ್ರತೆಯ ವಿನಃ ಶಾಂತಿ ಮತ್ತು ಸುಖ ಸಿಗಲು ಸಾಧ್ಯವಿಲ್ಲ. ಇದರಲ್ಲಿ ನಡತೆಯು ಬಹಳ ಚೆನ್ನಾಗಿರಬೇಕು. ಮನುಷ್ಯರ ನಡತೆಯು ಪವಿತ್ರತೆಯಿಂದ ಸುಧಾರಣೆಯಾಗುತ್ತದೆ. ಪವಿತ್ರತೆಯಿದ್ದಾಗ ಅವರಿಗೆ ದೇವತೆಗಳೆಂದು ಕರೆಯಲಾಗುತ್ತದೆ. ನೀವು ಇಲ್ಲಿ ದೇವತೆಗಳಾಗಲು ಬಂದಿದ್ದೀರಿ. ದೇವತೆಗಳು ಸದಾ ಸುಖಿಯಾಗಿದ್ದರು, ಮನುಷ್ಯರ್ಯಾರೂ ಸದಾ ಸುಖಿಗಳಾಗಿರಲು ಸಾಧ್ಯವಿಲ್ಲ. ಸುಖವು ದೇವತೆಗಳ ಬಳಿಯೇ ಇರುತ್ತದೆ. ಆ ದೇವತೆಗಳ ಪೂಜೆಯನ್ನೇ ನೀವು ಮಾಡುತ್ತಿದ್ದೀರಲ್ಲವೆ ಏಕೆಂದರೆ ಅವರು ಪವಿತ್ರರಾಗಿದ್ದರು. ಎಲ್ಲವೂ ಸಹ ಪವಿತ್ರತೆಯನ್ನೇ ಅವಲಂಭಿಸಿದೆ. ವಿಘ್ನವೂ ಸಹ ಇದರಲ್ಲಿಯೇ ಬೀಳುತ್ತದೆ ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದು ಬಯಸುತ್ತಾರೆ. ಪವಿತ್ರತೆಯ ವಿನಃ ಶಾಂತಿ ಎಂದೂ ಸಹ ನೆಲೆಸಲು ಸಾಧ್ಯವಿಲ್ಲವೆಂದು ತಂದೆಯು ತಿಳಿಸುತ್ತಾರೆ. ಇಲ್ಲಿ ಪವಿತ್ರತೆಯು ಮೊಟ್ಟಮೊದಲನೆಯ ಮುಖ್ಯಮಾತಾಗಿದೆ. ಪವಿತ್ರತೆಯಿಂದ ನಡತೆಯು ಸುಧಾರಣೆಯಾಗುತ್ತದೆ, ಪತಿತರಾಗುವುದರಿಂದ ನಡತೆಯು ಹಾಳಾಗಿಬಿಡುತ್ತದೆ. ನಾವು ಮತ್ತೆ ದೇವತೆಗಳಾಗಬೇಕೆಂದರೆ ಅವಶ್ಯವಾಗಿ ಪವಿತ್ರರಾಗಲೇಬೇಕೆಂಬುದನ್ನು ತಿಳಿಯಬೇಕಾಗಿದೆ. ದೇವತೆಗಳು ಪವಿತ್ರರಾಗಿದ್ದರು ಆದ್ದರಿಂದಲೇ ಅಪವಿತ್ರ ಮನುಷ್ಯರು ಅವರ ಮುಂದೆ ತಲೆಬಾಗುತ್ತಾರೆ. ಪವಿತ್ರತೆಯು ಮುಖ್ಯವಾದ ಮಾತಾಗಿದೆ. ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ- ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯಗಳಿಸಿ. ಇದರ ಮೇಲೆ ಜಯಗಳಿಸುವುದರಿಂದಲೇ ನೀವು ಪವಿತ್ರರಾಗುತ್ತೀರಿ. ನೀವು ಯಾವಾಗ ಪವಿತ್ರ, ಸತೋಪ್ರಧಾನರಾಗಿದ್ದಿರೋ ಆಗ ಶಾಂತಿಯಿತ್ತು, ಸುಖವೂ ಸಹ ಇತ್ತು. ಈಗ ನೀವು ಮಕ್ಕಳಿಗೆ ನೆನ್ನೆಯ ಮಾತೆಲ್ಲವೂ ನೆನಪಿಗೆ ಬಂದಿದೆ. ನೀವು ಪವಿತ್ರರಾಗಿದ್ದಾಗ ಅಪಾರವಾದ ಸುಖ-ಶಾಂತಿ ಎಲ್ಲವೂ ಇತ್ತು, ಈಗ ಮತ್ತೆ ನೀವು ಲಕ್ಷ್ಮೀ-ನಾರಾಯಣರಾಗಬೇಕಾಗಿದೆ. ಅದಕ್ಕಾಗಿ ಸಂಪೂರ್ಣ ನಿರ್ವಿಕಾರಿಗಳಾಗುವುದು ಮೊದಲ ಮುಖ್ಯಮಾತಾಗಿದೆ. ಇದು ಜ್ಞಾನಯಜ್ಞವಾಗಿದೆ, ಇದರಲ್ಲಿ ವಿಘ್ನಗಳು ಅವಶ್ಯವಾಗಿ ಬರುತ್ತವೆ ಎಂದು ಗಾಯನವೂ ಸಹ ಇದೆ. ಪವಿತ್ರತೆಯ ಬಗ್ಗೆ ಎಷ್ಟೊಂದು ಸತಾಯಿಸುತ್ತಾರೆ. ಅಸುರೀ ಸಂಪ್ರದಾಯ ಮತ್ತು ದೈವೀ ಸಂಪ್ರದಾಯದವರೆಂಬ ಗಾಯನವೂ ಸಹ ಇದೆ. ಸತ್ಯಯುಗದಲ್ಲಿ ಈ ಎಲ್ಲಾ ದೇವತೆಗಳಿದ್ದರು ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿದೆ. ಭಲೆ ಚಹರೆಯು ಮನುಷ್ಯರದಾಗಿದೆ ಆದರೆ ಅವರನ್ನು ದೇವತೆಗಳೆಂದು ಕರೆಯಲಾಗುತ್ತದೆ. ಅಲ್ಲಿ ಸಂಪೂರ್ಣ ಸತೋಪ್ರಧಾನರಿರುತ್ತಾರೆ, ಅಲ್ಲಿ ಯಾವುದೇ ಕೊರತೆಗಳಿರುವುದಿಲ್ಲ. ಪ್ರತಿಯೊಂದು ವಸ್ತುವು ಶ್ರೇಷ್ಠವಾಗಿರುತ್ತದೆ. ತಂದೆಯು ಶ್ರೇಷ್ಠರಾಗಿದ್ದಾರೆ, ಮಕ್ಕಳನ್ನೂ ಸಹ ಶ್ರೇಷ್ಠ ಮಾಡುತ್ತಾರೆ. ಯೋಗಬಲದಿಂದ ನೀವು ಎಷ್ಟೊಂದು ಪವಿತ್ರರು, ಸುಂದರರಾಗುತ್ತೀರಿ. ಈ ಯಾತ್ರಿಕನೂ ಸಹ ಎಷ್ಟೊಂದು ಸುಂದರನಾಗಿದ್ದಾರೆ. ನೀವು ಕಪ್ಪಾಗಿರುವವರನ್ನು ಸುಂದರರನ್ನಾಗಿ ಮಾಡುತ್ತಾರೆ, ಅಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ. ಅಲ್ಲಿ ಸೌಂದರ್ಯ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಸತೋಪ್ರಧಾನರು ಬಹಳ ಸುಂದರರಾಗಿರುತ್ತಾರೆ. ಅವರೇ ಮತ್ತೆ ತಮೋಪ್ರಧಾನರಾಗಿರುವುದರಿಂದ ಕಪ್ಪಾಗಿಬಿಡುತ್ತಾರೆ. ಅದಕ್ಕೆ ಶ್ಯಾಮ ಮತ್ತು ಸುಂದರ ಎಂಬ ಹೆಸರೂ ಸಹ ಇದೆ. ಕೃಷ್ಣನನ್ನು ಶ್ಯಾಮ ಮತ್ತು ಸುಂದರನೆಂದು ಏಕೆ ಹೇಳುತ್ತಾರೆ! ಇದರ ಅರ್ಥವನ್ನು ಒಬ್ಬ ತಂದೆಯ ವಿನಃ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಭಗವಂತ ತಂದೆಯು ಯಾವ ಮಾತನ್ನು ತಿಳಿಸುತ್ತಾರೆಯೋ ಅದನ್ನು ಬೇರೆ ಯಾವ ಮನುಷ್ಯರೂ ತಿಳಿಸುವುದಿಲ್ಲ. ಚಿತ್ರದಲ್ಲಿ ಸ್ವದರ್ಶನ ಚಕ್ರವನ್ನು ದೇವತೆಗಳಿಗೆ ಕೊಡಲಾಗಿದೆ.
ಮಧುರಾತಿ ಮಧುರ ಮಕ್ಕಳೇ, ಸ್ವದರ್ಶನ ಚಕ್ರವು ದೇವತೆಗಳಿಗೆ ಅವಶ್ಯಕತೆಯಿಲ್ಲವೆಂದು ತಂದೆಯು ತಿಳಿಸುತ್ತಾರೆ. ಅವರು ಶಂಖುವನ್ನು ತೆಗೆದುಕೊಂಡು ಏನು ಮಾಡುತ್ತಾರೆ, ಸ್ವದರ್ಶನ ಚಕ್ರಧಾರಿಗಳು ನೀವು ಬ್ರಾಹ್ಮಣ ಮಕ್ಕಳಾಗಿದ್ದೀರಿ, ಶಂಖುಧ್ವನಿಯನ್ನೂ ಸಹ ನೀವು ಮಾಡಬೇಕಾಗಿದೆ. ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆಂದು ನೀವು ತಿಳಿದಿದ್ದೀರಿ. ಜೊತೆಯಲ್ಲಿ ಚಲನೆಯೂ ಸಹ ಚೆನ್ನಾಗಿರಬೇಕು. ಭಕ್ತಿಮಾರ್ಗದಲ್ಲಿ ಸದಾ ನೀವು ದೇವತೆಗಳ ಮುಂದೆಹೋಗಿ ತಮ್ಮ ನಡತೆಯನ್ನು ವರ್ಣನೆ ಮಾಡುತ್ತೀರಲ್ಲವೆ ಆದರೆ ದೇವತೆಗಳು ಯಾರೂ ನಿಮ್ಮ ನಡತೆಯನ್ನು ಸುಧಾರಣೆ ಮಾಡುವುದಿಲ್ಲ, ಸುಧಾರಣೆ ಮಾಡುವಂತಹವರು ಅವರು(ತಂದೆ) ಆಗಿದ್ದಾರೆ. ಆ ಶಿವತಂದೆ ನಿರಾಕಾರನಾಗಿದ್ದಾರೆ. ಅವರ ಮುಂದೆಹೋಗಿ ನೀವು ಸರ್ವಗುಣ ಸಂಪನ್ನರಾಗಿದ್ದೀರೆಂದು ಹೇಳುವುದಿಲ್ಲ. ಶಿವನ ಮಹಿಮೆಯೇ ಬೇರೆಯಾಗಿದೆ, ದೇವತೆಗಳ ಮಹಿಮೆಯನ್ನು ಹಾಡುತ್ತಾರೆ ಆದರೆ ನಾವು ದೇವತೆಗಳಂತೆ ಹೇಗಾಗುವುದು. ಆತ್ಮನೇ ಪವಿತ್ರ ಮತ್ತು ಅಪವಿತ್ರವಾಗುತ್ತದೆಯಲ್ಲವೆ. ಈಗ ನೀವು ಆತ್ಮರು ಪವಿತ್ರವಾಗುತ್ತಿದ್ದೀರಿ, ಯಾವಾಗ ಆತ್ಮವು ಸಂಪೂರ್ಣ ಪವಿತ್ರವಾಗಿಬಿಡುತ್ತದೆ ಆಗ ಶರೀರವು ಪತಿತವಾಗಿರುವುದಿಲ್ಲ, ಪಾವನ ಶರೀರವನ್ನು ತೆಗೆದುಕೊಳ್ಳುತ್ತೀರಿ. ಇಲ್ಲಿ ಪಾವನ ಶರೀರವಿರಲು ಸಾಧ್ಯವಿಲ್ಲ. ಯಾವಾಗ ಪ್ರಕೃತಿಯೂ ಸಹ ಸತೋಪ್ರಧಾನವಾಗಿರುತ್ತದೆ, ಇಲ್ಲಿ ಐದು ತತ್ವಗಳೂ ಪತಿತವಾಗಿದೆ ಆದ್ದರಿಂದ ಉಪದ್ರವಗಳಾಗುತ್ತಿರುತ್ತದೆ. ಹೇಗೆ ಮನುಷ್ಯರು ಸಾಯುತ್ತಿರುತ್ತಾರೆ, ತೀರ್ಥಯಾತ್ರೆಗೂ ಹೋಗುತ್ತಾರೆ. ಏನಾದರೂ ಅಪಘಾತವಾದರೆ ಸತ್ತುಹೋಗುತ್ತಾರೆ. ನೀರು, ಭೂಮಿ ಎಷ್ಟೊಂದು ಹಾನಿ ಮಾಡುತ್ತಿರುತ್ತದೆ. ಈ ಎಲ್ಲಾ ತತ್ವಗಳು ನಿಮಗೆ ಸಹಾಯ ಮಾಡುತ್ತದೆ. ವಿನಾಶದ ಸಮಯದಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಬರುತ್ತದೆ, ಬಿರುಗಾಳಿ ಬರುತ್ತದೆ- ಇದಕ್ಕೆ ಪ್ರಾಕೃತಿಕ ವಿಕೋಪಗಳೆಂದು ಕರೆಯಲಾಗುತ್ತದೆ. ಅವರು ಅಣ್ವಸ್ತ್ರ ಮುಂತಾದವುಗಳನ್ನು ಏನು ಮಾಡುತ್ತಾರೆಯೋ ಇದೂ ಸಹ ಡ್ರಾಮಾದಲ್ಲಿ ನೊಂದಾವಣೆಯಾಗಿದೆ. ಅದಕ್ಕೆ ಈಶ್ವರೀಯ ಆಪತ್ತುಗಳೆಂದು ಹೇಳುವುದಿಲ್ಲ. ಇದು ಮನುಷ್ಯರಿಂದ ಮಾಡಲ್ಪಟ್ಟಿರುವುದಾಗಿದೆ. ಭೂಕಂಪ ಮುಂತಾದವನ್ನು ಮನುಷ್ಯರು ಮಾಡುವುದಿಲ್ಲ. ಪ್ರಾಕೃತಿಕ ವಿಕೋಪಗಳು ಪರಸ್ಪರ ಸೇರಿದಾಗ ಪೃಥ್ವಿಯು ಹಗುರವಾಗಿಬಿಡುತ್ತದೆ. ತಂದೆಯು ನಮ್ಮನ್ನು ಹೇಗೆ ಸಂಪೂರ್ಣ ಹಗುರರನ್ನಾಗಿ ಮಾಡಿ ತನ್ನ ಜೊತೆಯಲ್ಲಿ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ. ತಲೆಯ ಮೇಲೆ ಹೊರೆಯನ್ನು ಇಳಿಸಿ ತಂದೆಯು ಸಂಪೂರ್ಣ ಹಗುರರನ್ನಾಗಿ ಮಾಡಿಬಿಡುತ್ತಾರೆ, ಎಲ್ಲಾ ದುಃಖಗಳು ದೂರವಾಗಿಬಿಡುತ್ತವೆ. ಈಗ ನಿಮ್ಮೆಲ್ಲರ ತಲೆಯು ಬಹಳ ಭಾರವಾಗಿದೆ, ನಂತರ ಎಲ್ಲರೂ ಹಗುರ, ಶಾಂತ, ಸುಖಿಯಾಗಿಬಿಡುತ್ತೀರಿ. ಯಾರು ಯಾವ ಧರ್ಮದವರಾಗಿದ್ದಾರೆ, ಎಲ್ಲರಿಗೂ ಖುಷಿಯಾಗಬೇಕು. ನಮ್ಮೆಲ್ಲರ ಸದ್ಗತಿ ಮಾಡಲು ತಂದೆಯು ಬಂದಿದ್ದಾರೆಂದು ಖುಷಿಯಾಗಬೇಕು. ಯಾರು ಯಾವ ಧರ್ಮದವರೇ ಆಗಿರಲಿ ಎಲ್ಲರಿಗೂ ನಮ್ಮೆಲ್ಲರ ಸದ್ಗತಿ ಮಾಡಲು ತಂದೆಯು ಬಂದಿದ್ದಾರೆ ಎಂದು ಖುಷಿಯಿರಬೇಕು. ಸಂಪೂರ್ಣ ಸ್ಥಾಪನೆಯಾದನಂತರ ಎಲ್ಲಾ ಧರ್ಮದ ವಿನಾಶವಾಗಿಬಿಡುತ್ತದೆ. ಮೊದಲು ನಿಮ್ಮ ಬುದ್ಧಿಯಲ್ಲಿ ಈ ವಿಚಾರಗಳು ಇರಲೇ ಇಲ್ಲ. ಈಗ ಎಲ್ಲವನ್ನು ತಿಳಿದುಕೊಂಡಿದ್ದೀರಿ. ಬ್ರಹ್ಮಾರವರ ಮೂಲಕವೇ ಸ್ಥಾಪನೆಯೆಂದು ಗಾಯನವೂ ಸಹ ಇದೆ, ಉಳಿದೆಲ್ಲಾ ಧರ್ಮಗಳ ವಿನಾಶವಾಗುತ್ತದೆ- ಈ ಕರ್ತವ್ಯವನ್ನು ಒಬ್ಬ ತಂದೆಯೇ ಮಾಡುತ್ತಾರೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಇಂತಹ ಅಲೌಕಿಕ ಜನ್ಮ ಮತ್ತು ಕರ್ತವ್ಯವನ್ನು ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯು ಶ್ರೇಷ್ಠಾತಿಶ್ರೇಷ್ಠ ಆಗಿದ್ದಾರೆ ಅಂದಾಗ ಅವರ ಕರ್ತವ್ಯವೂ ಬಹಳ ಶ್ರೇಷ್ಠವಾಗಿರುತ್ತದೆ. ಕರ್ತವ್ಯವನ್ನು ಮಾಡಿಸುವಂತಹವರಲ್ಲವೆ! ನೀವು ಜ್ಞಾನವನ್ನು ಹೇಳುತ್ತೀರಿ, ಈ ಸೃಷ್ಟಿಯಲ್ಲಿ ಪಾಪಾತ್ಮರ ಹೊರೆಯನ್ನು ಇಳಿಸಲು ತಂದೆಯು ಬಂದಿದ್ದಾರೆ. ಗಾಯನವೂ ಸಹ ಇದೆಯಲ್ಲವೆ- ತಂದೆಯು ಬಂದು ಒಂದುಧರ್ಮದ ಸ್ಥಾಪನೆ ಮಾಡಿ ಅನೇಕ ಧರ್ಮಗಳ ವಿನಾಶ ಮಾಡಲು ಬರುತ್ತಾರೆ. ನಿಮ್ಮನ್ನು ಈಗ ಎಂತಹ ಶ್ರೇಷ್ಠ ಮಹಾತ್ಮರನ್ನಾಗಿ ಮಾಡುತ್ತಿದ್ದಾರೆ. ದೇವತೆಗಳ ವಿನಃ ಮಹಾತ್ಮರು ಬೇರೆ ಯಾರೂ ಆಗಲು ಸಾಧ್ಯವಿಲ್ಲ. ಇಲ್ಲಂತೂ ಅನೇಕರನ್ನು ಮಹಾತ್ಮರೆಂದು ಹೇಳುತ್ತಿರುತ್ತಾರೆ ಆದರೆ ಮಹಾನ್ ಆತ್ಮರಿಗೆ ಮಾತ್ರ ಮಹಾತ್ಮರೆಂದು ಕರೆಯಲಾಗುತ್ತದೆ. ಸ್ವರ್ಗಕ್ಕೆ ರಾಮರಾಜ್ಯವೆಂದು ಕರೆಯಲಾಗುತ್ತದೆ, ಅಲ್ಲಿ ರಾವಣರಾಜ್ಯವಿರುವುದಿಲ್ಲ, ವಿಕಾರದ ಪ್ರಶ್ನೆಯೇ ಉದ್ಭವವಾಗಲು ಸಾಧ್ಯವಿಲ್ಲ ಆದ್ದರಿಂದ ಅವರನ್ನು ಸಂಪೂರ್ಣ ನಿರ್ವಿಕಾರಿಗಳೆಂದು ಕರೆಯಲಾಗುತ್ತದೆ. ಎಷ್ಟು ನಿರ್ವಿಕಾರಿಗಳಾಗುತ್ತಾರೆಯೋ ಅಷ್ಟು ಸಮಯ ಸುಖವನ್ನು ಪಡೆಯುತ್ತಾರೆ. ಅಪೂರ್ಣರು ಇಷ್ಟೊಂದು ಸುಖವನ್ನು ಪಡೆಯಲು ಸಾಧ್ಯವಿಲ್ಲ. ಶಾಲೆಯಲ್ಲಿಯೂ ಸಹ ಕೆಲವರು ಸಂಪೂರ್ಣರು, ಕೆಲವರು ಅಪೂರ್ಣರಾಗಿಬಿಡುತ್ತಾರೆ. ವ್ಯತ್ಯಾಸ ಕಂಡುಬರುತ್ತದೆ. ವೈದ್ಯರೆಂದರೆ ವೈದ್ಯರು ಆದರೆ ಕೆಲವರ ಆದಾಯ ಕಡಿಮೆಯಿರುತ್ತದೆ, ಕೆಲವರದು ಹೆಚ್ಚಿರುತ್ತದೆ. ಹಾಗೆಯೇ ದೇವತೆಗಳು ದೇವತೆಗಳೇ ಆಗಿರುತ್ತಾರೆ ಆದರೆ ಪದವಿಯ ವ್ಯತ್ಯಾಸವು ಎಷ್ಟೊಂದು ಇರುತ್ತದೆ. ತಂದೆಯು ಬಂದು ನಿಮಗೆ ಶ್ರೇಷ್ಠವಿದ್ಯೆಯನ್ನು ಓದಿಸುತ್ತಾರೆ. ಕೃಷ್ಣನನ್ನು ಎಂದೂ ಸಹ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಕೃಷ್ಣನಿಗೆ ಶ್ಯಾಮಸುಂದರನೆಂದು ಹೇಳಲಾಗುತ್ತದೆ. ಕೃಷ್ಣನನ್ನು ಕಪ್ಪಾಗಿಯೂ ತೋರಿಸುತ್ತಾರೆ, ಅಂದಾಗ ಅವನು ಕಪ್ಪಾಗಿರುತ್ತಾನೆಯೇ? ನಾಮ-ರೂಪವೆಲ್ಲವೂ ಬದಲಾವಣೆ ಆಗುತ್ತಿರುತ್ತದೆಯಲ್ಲವೆ. ಆತ್ಮವು ಕಪ್ಪಾಗುತ್ತದೆ, ಆಗ ನಾಮ-ರೂಪ, ದೇಶ-ಕಾಲ ಎಲ್ಲವೂ ಬದಲಾವಣೆಯಾಗುತ್ತದೆ. ನಾವು ಪ್ರಾರಂಭದಿಂದ ಹೇಗೆ ಪಾತ್ರವನ್ನಭಿನಯಿಸುತ್ತಾ ಬಂದಿದ್ದೇವೆ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ. ಮೊದಲು ದೇವತೆಗಳಾಗಿದ್ದಿರಿ ನಂತರ ದೇವತೆಗಳಿಂದ ಅಸುರರಾದಿರಿ. ತಂದೆಯು 84 ಜನ್ಮಗಳ ರಹಸ್ಯವನ್ನು ತಿಳಿಸಿದ್ದಾರೆ. ಇದರ ಬಗ್ಗೆ ಬೇರೆ ಯಾರಿಗೂ ಸಹ ತಿಳಿದಿಲ್ಲ, ತಂದೆಯೇ ಬಂದು ಎಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ- ನನ್ನ ಮುದ್ದಾದ ಮಕ್ಕಳೇ, ನೀವು ನನ್ನ ಜೊತೆ ಮನೆಯಲ್ಲಿ ಇರುತ್ತಿದ್ದಿರಲ್ಲವೆ! ನೀವು ಸಹೋದರ-ಸಹೋದರರೂ ಇದ್ದಿರಿ, ಬೇರೆ ಯಾವುದೇ ಸಂಬಂಧವಿರಲಿಲ್ಲ. ತಂದೆಯಾದರೂ ಪುನರ್ಜನ್ಮದಲ್ಲಿ ಬರುವುದಿಲ್ಲ. ಅವರು ಡ್ರಾಮಾನುಸಾರ ರಿಸರ್ವ್ (ತಟಸ್ಥ) ಆಗಿರುತ್ತಾರೆ, ಅವರ ಪಾತ್ರವೇ ಹಾಗೆ ಇದೆ. ನೀವು ಎಷ್ಟೊಂದು ಸಮಯ ಕರೆದಿರಿ ಎಂಬುದನ್ನೂ ಸಹ ತಂದೆಯೇ ತಿಳಿಸಿದ್ದಾರೆ. ದ್ವಾಪರದಿಂದ ಕರೆಯಲು ಪ್ರಾರಂಭಿಸಿದಿರಿ ಎಂದಲ್ಲ. ಬಹಳ ಸಮಯದ ನಂತರ ಕರೆಯಲು ಪ್ರಾರಂಭ ಮಾಡಿದಿರಿ. ತಂದೆಯು ನಿಮ್ಮನ್ನು ಸುಖಿಗಳನ್ನಾಗಿ ಮಾಡುತ್ತಾರೆ ಅರ್ಥಾತ್ ಸುಖದ ಆಸ್ತಿಯನ್ನು ತಂದೆಯು ಕೊಡುತ್ತಿದ್ದಾರೆ. ನೀವೂ ಹೇಳುತ್ತೀರಿ- ತಂದೆಯೇ, ನಾವು ನಿಮ್ಮ ಬಳಿ ಕಲ್ಪ-ಕಲ್ಪವೂ ಅನೇಕಬಾರಿ ಬಂದಿದ್ದೇವೆ, ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಪ್ರತೀ 5000 ವರ್ಷಗಳ ನಂತರ ತಂದೆಯು ನಿಮ್ಮನ್ನು ಮಿಲನ ಮಾಡುತ್ತಾರೆ ಮತ್ತು ಅವರಿಂದ ಆಸ್ತಿಯನ್ನು ಪಡೆಯುತ್ತೀರಿ. ಯಾರೆಲ್ಲಾ ದೇಹಧಾರಿಗಳಿದ್ದೀರಿ ಎಲ್ಲರೂ ವಿದ್ಯಾರ್ಥಿಗಳಾಗಿದ್ದೀರಿ, ಓದಿಸುವವರು ವಿದೇಹಿಯಾಗಿದ್ದಾರೆ. ಅವರಿಗೆ ತನ್ನದೇ ಆದ ದೇಹವಿಲ್ಲ. ತಾನು ವಿದೇಹಿಯಾಗಿದ್ದಾರೆ ಇಲ್ಲಿಗೆ ಬಂದು ದೇಹವನ್ನು ಧಾರಣೆ ಮಾಡುತ್ತಾರೆ. ದೇಹದ ವಿನಃ ಮಕ್ಕಳಿಗೆ ಓದಿಸುವುದಾದರೂ ಹೇಗೆ! ಎಲ್ಲಾ ಆತ್ಮಗಳ ತಂದೆಯು ಅವರಾಗಿದ್ದಾರೆ, ಭಕ್ತಿಮಾರ್ಗದಲ್ಲಿ ಎಲ್ಲರೂ ಅವರನ್ನು ಕರೆಯುತ್ತಾರೆ. ರುದ್ರಮಾಲೆಯನ್ನು ಸ್ಮರಣೆ ಮಾಡುತ್ತಾರೆ. ಮೇಲೆ ಹೂ ಮತ್ತು ಜೋಡಿಮಣಿಗಳಿವೆ. ಅದು ಒಂದೇ ಆಗಿರುತ್ತದೆ, ಹೂವಿಗೆ ಏಕೆ ನಮಸ್ಕಾರ ಮಾಡುತ್ತಾರೆ ಎಂಬುದು ಈಗ ನಿಮಗೆ ತಿಳಿದುಬಂದಿದೆ. ಯಾರ ಮಾಲೆಯನ್ನು ಜಪಿಸುತ್ತಾರೆ ಎಂಬುದು ಈಗ ನಿಮಗೆ ತಿಳಿದಿದೆ. ದೇವತೆಗಳ ಮಾಲೆಯನ್ನು ಜಪಿಸುತ್ತಾರೆ ಅಥವಾ ನಿಮ್ಮ ಮಾಲೆಯನ್ನು ಜಪಿಸುತ್ತಾರೆಯೇ? ಮಾಲೆಯು ದೇವತೆಗಳದೋ ಅಥವಾ ನಿಮ್ಮದೋ? ದೇವತೆಗಳದೆಂದು ಹೇಳುವುದಿಲ್ಲ. ಇದು ಬ್ರಾಹ್ಮಣರದಾಗಿದೆ. ಯಾರಿಗೆ ತಂದೆಯು ಕುಳಿತು ಓದಿಸುತ್ತಾರೆಯೋ ಅವರೇ ಬ್ರಾಹ್ಮಣರಾಗಿದ್ದಾರೆ. ಬ್ರಾಹ್ಮಣರಿಂದ ನಂತರ ನೀವು ದೇವತೆಗಳಾಗಿಬಿಡುತ್ತೀರಿ. ಇಲ್ಲಿ ಓದುತ್ತೀರಿ ಮತ್ತು ಅಲ್ಲಿಗೆ ಹೋಗಿ ದೇವತಾಪದವಿಯನ್ನು ಪಡೆಯುತ್ತೀರಿ. ಯಾರು ತಂದೆಯ ಮೂಲಕ ಓದಿ ಪರಿಶ್ರಮಪಟ್ಟು ಮತ್ತೆ ದೇವತೆಗಳಾಗುತ್ತೀರಿ. ಬಲಿದಾನ ನೀವು ಓದುವವರದಾಗಿದೆ. ತಂದೆಯು ನೀವು ಮಕ್ಕಳ ಸೇವೆಯನ್ನು ಎಷ್ಟೊಂದು ಮಾಡುತ್ತಿದ್ದಾರೆ. ಅಲ್ಲಂತೂ ಯಾರೂ ಸಹ ತಂದೆಯನ್ನೇ ನೆನಪು ಮಾಡುವುದಿಲ್ಲ. ಭಕ್ತಿಮಾರ್ಗದಲ್ಲಿ ನೀವು ಮಾಲೆಯನ್ನು ಜಪಿಸುತ್ತಿದ್ದಿರಿ, ಈಗ ಈ ಹೂವೇ (ತಂದೆ) ಬಂದು ನಿಮ್ಮನ್ನೂ ಸಹ ಹೂವನ್ನಾಗಿ ಮಾಡುತ್ತಾ ಇದ್ದಾರೆ ಅರ್ಥಾತ್ ತನ್ನ ಮಾಲೆಯ ಮಣಿಯನ್ನಾಗಿ ಮಾಡುತ್ತಿದ್ದಾರೆ. ನೀವು ಸುಂದರರಾಗುತ್ತೀರಲ್ಲವೆ. ಆತ್ಮದ ಜ್ಞಾನವೂ ಸಹ ಈಗ ನಿಮಗೆ ಸಿಗುತ್ತಿದೆ. ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನ ನಿಮ್ಮ ಬುದ್ಧಿಯಲ್ಲಿದೆ, ನೀವು ಬ್ರಾಹ್ಮಣರು ಕುಳಿತು ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡಿಕೊಂಡು ಮತ್ತೆ ಸ್ವರ್ಗವಾಸಿ ದೇವತೆಗಳನ್ನಾಗಿ ಮಾಡುತ್ತೀರೆಂದು ನಿಮ್ಮದೇ ಮಹಿಮೆಯಾಗಿದೆ. ದೇವತೆಗಳು ಸ್ವರ್ಗದಲ್ಲಿರುತ್ತಾರೆ. ನೀವು ಯಾವಾಗ ದೇವತೆಗಳಾಗುತ್ತೀರೋ ಆಗ ನಿಮಗೆ ಭೂತ, ವರ್ತಮಾನ, ಭವಿಷ್ಯದ ಜ್ಞಾನವಿರುವುದಿಲ್ಲ.
ಈಗ ನೀವು ಬ್ರಾಹ್ಮಣ ಮಕ್ಕಳಿಗೆ ಭೂತ, ವರ್ತಮಾನ, ಭವಿಷ್ಯದ ಜ್ಞಾನವು ಸಿಗುತ್ತದೆ, ಮತ್ತ್ಯಾರಿಗೂ ಸಹ ಈ ಜ್ಞಾನವು ಸಿಗುವುದಿಲ್ಲ. ನೀವು ಬಹಳ-ಬಹಳ ಭಾಗ್ಯಶಾಲಿಗಳಾಗಿದ್ದೀರಿ ಆದರೆ ಮಾಯೆಯು ನಿಮ್ಮನ್ನು ಮರೆಸಿಬಿಡುತ್ತದೆ. ನಿಮಗೆ ಮತ್ತೆ ಈ ತಂದೆಯು ಓದಿಸುವುದಿಲ್ಲ. ಇವರೂ (ಬ್ರಹ್ಮಾ) ಸಹ ಓದುತ್ತಿದ್ದಾರೆ, ಇವರು ಎಲ್ಲರಿಗಿಂತ ಕೊನೆಯಲ್ಲಿದ್ದರು, ಎಲ್ಲರಿಗಿಂತ ನಂಬರ್ವನ್ ಪತಿತರಾಗಿದ್ದರು, ಅವರೇ ಮತ್ತೆ ನಂಬರ್ವನ್ ಪಾವನರಾಗುತ್ತಾರೆ. ಎಷ್ಟೊಂದು ಸುಖಿಯಾಗಿಬಿಡುತ್ತಾರೆ! ಗುರಿ-ಧ್ಯೇಯವು ಎದುರಿನಲ್ಲಿದೆ. ತಂದೆಯು ನಿಮ್ಮನ್ನು ಎಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತಾರೆ, ಆಯುಷ್ಯವಾನ್ಭವ, ಪುತ್ರವಾನ್ಭವ- ಇದೂ ಸಹ ಡ್ರಾಮಾದಲ್ಲಿ ನೊಂದಣಿಯಾಗಿದೆ. ನಾನು ಒಂದುವೇಳೆ ಆಶೀರ್ವಾದವನ್ನು ಕೊಟ್ಟಿದ್ದೇ ಆದರೆ ಎಲ್ಲರಿಗೂ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ. ನಾನು ನೀವು ಮಕ್ಕಳಿಗೆ ಓದಿಸಲು ಬರುತ್ತೇನೆ, ವಿದ್ಯೆಯಿಂದಲೇ ನಿಮಗೆ ಆಶೀರ್ವಾದವು ಸಿಗುತ್ತದೆ. ಒಳ್ಳೆಯದು-
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹೇಗೆ ತಂದೆಯು ಪರ್ಫೆಕ್ಟ್ (ಸಂಪೂರ್ಣ) ಆಗಿದ್ದಾರೆಯೋ ಹಾಗೆಯೇ ಸ್ವಯಂನ್ನು ಸಂಪೂರ್ಣ ಮಾಡಿಕೊಳ್ಳಬೇಕು. ಪವಿತ್ರತೆಯನ್ನು ಧಾರಣೆ ಮಾಡಿ ತನ್ನ ನಡತೆಯನ್ನು ಸುಧಾರಣೆ ಮಾಡಿಕೊಳ್ಳಬೇಕು. ಸತ್ಯವಾದ ಸುಖ-ಶಾಂತಿಯ ಅನುಭವವನ್ನು ಮಾಡಬೇಕು.
2. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ಬ್ರಾಹ್ಮಣರೇ ದೇವತೆಗಳಾಗುವಂತಹ ಸೇವೆ ಮಾಡಬೇಕು. ತನ್ನ ಶ್ರೇಷ್ಠಭಾಗ್ಯವನ್ನು ಎಂದೂ ಸಹ ಮರೆಯಬಾರದು.
| ವರದಾನ: |
ಧಾರಣಾ ಸ್ವರೂಪದ ಮೂಲಕ ಸೇವೆ ಮಾಡಿ ಖುಶಿಯ ಪ್ರತ್ಯಕ್ಷ ಫಲ ಪ್ರಾಪ್ತಿ ಮಾಡಿಕೊಳ್ಳುವಂತಹ ಸತ್ಯ ಸೇವಾಧಾರಿ ಭವ ಸೇವೆಯ ಉಮಂಗ-ಉತ್ಸಾಹ ಬಹಳ ಚೆನ್ನಾಗಿದೆ ಆದರೆ ಒಂದುವೇಳೆ ಪರಿಸ್ಥಿತಿಗಳಿಗನುಸಾರ ಸೇವೆಯ ಚಾನ್ಸ್ ನಿಮಗೆ ಸಿಗದೇ ಹೋದಾಗ ನಿಮ್ಮ ಅವಸ್ಥೆ ಬೀಳುವ ಅಥವಾ ಹಲ್ಚೆಲ್ ನಲ್ಲಿ ಬರಬಾರದು. ಒಂದುವೇಳೆ ಜ್ಞಾನ ತಿಳಿಸುವ ಚಾನ್ಸ್ ಸಿಗುವುದಿಲ್ಲ ಆದರೆ ನೀವು ನಿಮ್ಮ ಧಾರಣಾ ಸ್ವರೂಪದ ಫ್ರಭಾವ ಹಾಕುವಿರೆಂದರೆ ಆಗ ಸೇವೆಯ ಮಾಕ್ರ್ಸ್ ಜಮಾ ಆಗಿಬಿಡುವುದು. ಧಾರಣಾ ಸ್ವರೂಪ ಮಕ್ಕಳೇ ಸತ್ಯ ಸೇವಾಧಾರಿಗಳಾಗಿದ್ದಾರೆ. ಅವರಿಗೆ ಎಲ್ಲರಿಂದ ಆಶೀರ್ವಾದ ಮತ್ತು ಸೇವೆಯ ಪ್ರತ್ಯಕ್ಷ ಫಲ ಖುಶಿಯ ಅನುಭೂತಿಯಾಗುವುದು. |
| ಸ್ಲೋಗನ್: | ಸತ್ಯ ಹೃದಯದಿಂದ ದಾತಾ, ವಿಧಾತಾ, ವರದಾತನನ್ನು ರಾಜಿó ಮಾಡಿಕೊಂಡಾಗ ಆತ್ಮೀಯ ಮೋಜಿನಲ್ಲಿರುವಿರಿ. |