| 17/10/24 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ - ನೆನಪಿನ ಯಾತ್ರೆಯ ಮೇಲೆ ಪೂರ್ಣ ಗಮನ ಕೊಡಿ, ಇದರಿಂದಲೇ ನೀವು ಸತೋಪ್ರಧಾನರಾಗುತ್ತೀರಿ” | |
| ಪ್ರಶ್ನೆ: | ತಂದೆಯು ತಾವು ಮಕ್ಕಳ ಮೇಲೆ ಯಾವ ದಯೆತೋರುತ್ತಾರೆ? |
| ಉತ್ತರ: | ತಂದೆಯು ಮಕ್ಕಳ ಕಲ್ಯಾಣಕ್ಕಾಗಿ ಯಾವ ಆದೇಶವನ್ನು ನೀಡುತ್ತಾರೆಯೋ ಇದೇ ಅವರ ಕೃಪೆಯಾಗಿದೆ. ತಂದೆಯ ಮೊದಲ ಸಲಹೆಯಾಗಿದೆ - ಮಧುರ ಮಕ್ಕಳೇ, ದೇಹೀ-ಅಭಿಮಾನಿಗಳಾಗಿ. ದೇಹಿ-ಅಭಿಮಾನಿಗಳು ಬಹಳ ಶಾಂತವಾಗಿರುತ್ತಾರೆ, ಅವರಿಗೆ ಎಂದೂ ಉಲ್ಟಾ ವಿಚಾರಗಳು ನಡೆಯಲು ಸಾಧ್ಯವಿಲ್ಲ. |
| ಪ್ರಶ್ನೆ: | ಮಕ್ಕಳು ಪರಸ್ಪರದಲ್ಲಿ ಯಾವ ಚರ್ಚಾಗೋಷ್ಠಿಯನ್ನು ಮಾಡಬೇಕು? |
| ಉತ್ತರ: | ಯಾವಾಗ ತಿರುಗಾಡಲು ಹೋಗುತ್ತೀರೆಂದರೆ ನೆನಪಿನ ಸ್ಪರ್ಧೆ ಮಾಡಿ ನಂತರ ಕುಳಿತು ಪರಸ್ಪರದಲ್ಲಿ ಚರ್ಚೆ ಮಾಡಿ - ಯಾರು ಎಷ್ಟು ಸಮಯ ತಂದೆಯನ್ನು ನೆನಪು ಮಾಡಿದೆವು, ಇಲ್ಲಿ ನೆನಪಿಗಾಗಿ ಏಕಾಂತವು ಬಹಳ ಚೆನ್ನಾಗಿದೆ. |
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳನ್ನು ಕೇಳುತ್ತಿದ್ದಾರೆ - ಮಕ್ಕಳೇ, ನೀವು ಏನು ಮಾಡುತ್ತಿದ್ದೀರಿ? ಆತ್ಮಿಕ ಮಕ್ಕಳು ಹೇಳುತ್ತಾರೆ - ಬಾಬಾ, ನಾವು ಸತೋಪ್ರಧಾನರಾಗಿದ್ದೆವು, ಈಗ ತಮೋಪ್ರಧಾನರಾಗಿದ್ದೇವೆ, ಈಗ ಮತ್ತೆ ಬಾಬಾ, ತಮ್ಮ ಶ್ರೀಮತದನುಸಾರ ನಾವು ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ಈಗ ಬಾಬಾ, ತಾವು ಮಾರ್ಗವನ್ನು ತಿಳಿಸಿದ್ದೀರಿ, ಇದೇನೂ ಹೊಸಮಾತಲ್ಲ, ಹಳೆಯದಕ್ಕಿಂತ ಹಳೆಯ ಮಾತಾಗಿದೆ. ಎಲ್ಲದಕ್ಕಿಂತ ಹಳೆಯದು ನೆನಪಿನ ಯಾತ್ರೆಯಾಗಿದೆ. ಇದರಲ್ಲಿ ಶೋ ಮಾಡುವ ಮಾತಿಲ್ಲ. ಪ್ರತಿಯೊಬ್ಬರೂ ತಮ್ಮೊಳಗೆ ಕೇಳಿಕೊಳ್ಳಿ - ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆಯೇ? ಎಷ್ಟು ಸತೋಪ್ರಧಾನರಾಗಿದ್ದೇವೆ? ಎಷ್ಟು ಪುರುಷಾರ್ಥ ಮಾಡುತ್ತಿದ್ದೇವೆ? ಯಾವಾಗ ಅಂತಿಮದಲ್ಲಿಯೂ ಅಂತಿಮವು ಬರುವುದೋ ಆಗ ಸತೋಪ್ರಧಾನರಾಗುತ್ತೀರಿ, ಅದರ ಸಾಕ್ಷಾತ್ಕಾರವಾಗುತ್ತಾ ಇರುವುದು. ಯಾರು ಏನೇ ಮಾಡಿದರೂ ತಮಗಾಗಿಯೇ ಮಾಡಿಕೊಳ್ಳುತ್ತಾರೆ. ತಂದೆಯೇನೂ ದಯೆತೋರುವುದಿಲ್ಲ. ತಂದೆಯು ಮಕ್ಕಳ ಕಲ್ಯಾಣಾರ್ಥವಾಗಿ ಮಕ್ಕಳಿಗೆ ಆದೇಶ ನೀಡುತ್ತಾರೆ, ಇದೇ ಅವರ ಕೃಪೆಯಾಗಿದೆ. ತಂದೆಯಂತೂ ಕಲ್ಯಾಣಕಾರಿಯಾಗಿದ್ದಾರೆ, ಕೆಲವು ಮಕ್ಕಳು ಉಲ್ಟಾಜ್ಞಾನದಲ್ಲಿ ಬಂದುಬಿಡುತ್ತಾರೆ. ತಂದೆಯೂ ಸಹ ಇದನ್ನು ಅನುಭವ ಮಾಡುತ್ತಾರೆ - ದೇಹಾಭಿಮಾನಿಗಳು ಅಭಿಮಾನದಲ್ಲಿರುತ್ತಾರೆ, ದೇಹಿ-ಅಭಿಮಾನಿಗಳು ಬಹಳ ಶಾಂತವಾಗಿರುತ್ತಾರೆ. ಅವರಿಗೆ ಎಂದೂ ಉಲ್ಟಾ-ಸುಲ್ಟಾ ವಿಚಾರಗಳು ಬರುವುದಿಲ್ಲ. ತಂದೆಯಂತೂ ಪ್ರತಿಯೊಂದು ಪ್ರಕಾರದಲ್ಲಿ ಪುರುಷಾರ್ಥ ಮಾಡಿಸುತ್ತಾರೆ. ಮಾಯೆಯೂ ಸಹ ಬಹಳ ಶಕ್ತಿಶಾಲಿಯಾಗಿದೆ. ಒಳ್ಳೊಳ್ಳೆಯ ಮಕ್ಕಳ ಮೇಲೂ ಸಹ ಯುದ್ಧ ಮಾಡುತ್ತದೆ ಆದ್ದರಿಂದ ಬ್ರಾಹ್ಮಣರ ಮಾಲೆಯು ತಯಾರಾಗುವುದಿಲ್ಲ. ಇಂದು ಬಹಳ ಚೆನ್ನಾಗಿ ನೆನಪು ಮಾಡುತ್ತಾರೆ, ನಾಳೆ ದೇಹದ ಅಹಂಕಾರದಲ್ಲಿ ಈ ರೀತಿ ಬಂದುಬಿಡುತ್ತಾರೆ ಹೇಗೆ ಗೂಳಿಯ (ಉನ್ಮತ್ತ ಹೋರಿ) ಸಮಾನ. ಗೂಳಿಗೆ ಬಹಳ ಅಹಂಕಾರವಿರುತ್ತದೆ. ಇದರಲ್ಲಿ ಒಂದು ಗಾದೆಮಾತಿದೆ - ಸುರಮಂಡಲದ ಸಂಗೀತವು ದೇಹಾಭಿಮಾನಿ ಹೋರಿಗೆ ಏನು ಗೊತ್ತು....... ದೇಹಾಭಿಮಾನವು ಬಹಳ ಕೆಟ್ಟದ್ದಾಗಿದೆ. ಪರಿಶ್ರಮಪಡಬೇಕಾಗುತ್ತದೆ. ಶಿವತಂದೆಯಂತೂ ಹೇಳುತ್ತಾರೆ - ನಾನು ಬಹಳ ವಿಧೇಯ ಸೇವಕನಾಗಿದ್ದೇನೆ ಅಂದರೆ ತಮ್ಮನ್ನು ಹೇಳಿಕೊಳ್ಳುವುದು ಸೇವಕ ಮತ್ತು ನಡೆಯುವುದು ರಾಜನಂತೆ ಎಂದಲ್ಲ. ಈ ರೀತಿಯಂತೂ ಇಲ್ಲ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಸತೋಪ್ರಧಾನರು ಅವಶ್ಯವಾಗಿ ಆಗಬೇಕಾಗಿದೆ. ಇದು ಬಹಳ ಸಹಜವಾಗಿದೆ. ಇದರಲ್ಲೇನೂ ಕಷ್ಟವಿಲ್ಲ, ಬಾಯಿಂದ ಏನನ್ನೂ ಮಾತನಾಡಬೇಕಾಗಿಲ್ಲ. ಎಲ್ಲಿಯೇ ಹೋಗಿ ಆದರೆ ಒಳಗೆ ತಂದೆಯನ್ನು ನೆನಪು ಮಾಡುತ್ತಿರಬೇಕು. ಇಲ್ಲಿ ಕುಳಿತುಕೊಂಡಾಗಷ್ಟೇ ತಂದೆಯು ಸಹಯೋಗ ನೀಡುತ್ತಾರೆಂದಲ್ಲ. ತಂದೆಯಂತೂ ಸಹಯೋಗ ನೀಡುವುದಕ್ಕಾಗಿಯೇ ಬಂದಿದ್ದಾರೆ. ನನ್ನ ಮಕ್ಕಳು ಎಲ್ಲಿಯೂ ತಪ್ಪು ಮಾಡಬಾರದೆಂದು ತಂದೆಗೆ ವಿಚಾರವಿರುತ್ತದೆ. ಮಾಯೆಯು ಇಲ್ಲಿಯೇ ಪೆಟ್ಟುಕೊಡುತ್ತದೆ. ದೇಹಾಭಿಮಾನವು ಬಹಳ-ಬಹಳ ಕೆಟ್ಟದ್ದಾಗಿದೆ, ದೇಹಾಭಿಮಾನದಲ್ಲಿ ಬರುವುದರಿಂದ ಒಮ್ಮೆಲೆ ಬಂದು ಕೆಸರಿನಲ್ಲಿ ಬಿದ್ದಿದ್ದೀರಿ. ತಂದೆಯು ತಿಳಿಸುತ್ತಾರೆ - ಇಲ್ಲಿಗೆ ಬಂದು ಕುಳಿತುಕೊಳ್ಳುತ್ತೀರೆಂದರೂ ಸಹ ಅತಿಪ್ರಿಯ ತಂದೆಯನ್ನು ನೆನಪು ಮಾಡಿ. ತಂದೆಯು ತಿಳಿಸುತ್ತಾರೆ - ನಾನೇ ಪತಿತ-ಪಾವನನಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ಈ ಯೋಗಾಗ್ನಿಯಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ. ಯಾರಿಗೆ ಬೇಕಾದರೂ ಬಹಳ ಒಳ್ಳೆಯ ರೀತಿಯಲ್ಲಿ ತಿಳಿಸುವಂತಹ ಸ್ಥಿತಿಯು ಮಕ್ಕಳಿಗೆ ಇನ್ನೂ ಬಂದಿಲ್ಲ. ಜ್ಞಾನದ ಕತ್ತಿಯಲ್ಲಿ ಯೋಗದ ಹೊಳಪಿರಬೇಕು ಇಲ್ಲವೆಂದರೆ ಆ ಕತ್ತಿಯು ಯಾವುದೇ ಕೆಲಸಕ್ಕೆ ಬರುವುದಿಲ್ಲ. ಮೂಲಮಾತೇ ನೆನಪಿನ ಯಾತ್ರೆಯಾಗಿದೆ. ಅನೇಕ ಮಕ್ಕಳು ಉಲ್ಟಾ-ಸುಲ್ಟಾ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ನೆನಪಿನ ಯಾತ್ರೆ ಮತ್ತು ವಿದ್ಯಾಭ್ಯಾಸ ಮಾಡುವುದೇ ಇಲ್ಲ ಆದ್ದರಿಂದ ಇದರಲ್ಲಿ ಸಮಯವು ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹಾಗೆಯೇ ವ್ಯಾಪಾರ-ವ್ಯವಹಾರಗಳ ಹಿಂದೆ ಹೋಗಿ ತಮ್ಮ ಪದವಿಯನ್ನೇ ಕಳೆದುಕೊಳ್ಳುವಂತಹ ಪರಿಶ್ರಮಪಡಬೇಡಿ. ವರ್ತಮಾನದ ಜೊತೆಜೊತೆಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆಯಲ್ಲವೆ ಆದರೆ ಸತೋಪ್ರಧಾನರಾಗಬೇಕಾಗಿದೆ, ಇದರಲ್ಲಿಯೇ ಬಹಳ ಪರಿಶ್ರಮವಿದೆ. ಬಹಳ ದೊಡ್ಡ-ದೊಡ್ಡ ಮ್ಯೂಸಿಯಂ ಇತ್ಯಾದಿಗಳನ್ನು ಮಾಡುವವರಲ್ಲಿಯೂ ಸಹ ಕೆಲವರು ನೆನಪಿನ ಯಾತ್ರೆಯಲ್ಲಿರುವುದಿಲ್ಲ. ತಂದೆಯು ತಿಳಿಸಿದ್ದಾರೆ - ಬಡವರು, ಬಂಧನದಲ್ಲಿರುವವರೇ ಹೆಚ್ಚಿನ ನೆನಪಿನ ಯಾತ್ರೆಯಲ್ಲಿರುತ್ತಾರೆ. ಕ್ಷಣ-ಕ್ಷಣವೂ ತಂದೆಯ ನೆನಪು ಮಾಡುತ್ತಿರುತ್ತಾರೆ - ಬಾಬಾ, ನಮ್ಮ ಈ ಬಂಧನವನ್ನು ಸಮಾಪ್ತಿ ಮಾಡಿ ಎನ್ನುತ್ತಾರೆ. ಅಬಲೆಯರ ಮೇಲೆ ಹತ್ಯಾಚಾರಗಳಾಗುತ್ತವೆ. ಇದೂ ಸಹ ಗಾಯನವಿದೆ.
ನೀವು ಮಕ್ಕಳು ಬಹಳ ಮಧುರರಾಗಬೇಕಾಗಿದೆ. ಸತ್ಯ-ಸತ್ಯ ವಿದ್ಯಾರ್ಥಿಗಳಾಗಿ. ಒಳ್ಳೆಯ ವಿದ್ಯಾರ್ಥಿಗಳು ಏಕಾಂತದಲ್ಲಿ ಉದ್ಯಾನವನದಲ್ಲಿ ಹೋಗಿ ಕುಳಿತು ಓದುತ್ತಾರೆ. ನಿಮಗೂ ಸಹ ತಂದೆಯು ತಿಳಿಸುವುದೇನೆಂದರೆ ಭಲೆ ಎಲ್ಲಿಗೇ ತಿರುಗಾಡಲು ಹೋಗಿ ಆದರೆ ಆಗಲೂ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನೆನಪಿನ ಯಾತ್ರೆಯ ಉಮ್ಮಂಗವನ್ನಿಟ್ಟುಕೊಳ್ಳಿ. ಆ ಧನವನ್ನು ಸಂಪಾದಿಸುವ ಹೋಲಿಕೆಯಲ್ಲಿ ಈ ಅವಿನಾಶಿ ಧನವು ಬಹಳ-ಬಹಳ ಶ್ರೇಷ್ಠವಾಗಿದೆ. ಆ ವಿನಾಶಿ ಧನವಂತೂ ಸುಟ್ಟು ಭಸ್ಮವಾಗಲಿದೆ. ತಂದೆಗೆ ಗೊತ್ತಿದೆ, ಮಕ್ಕಳು ಪೂರ್ಣ ಸರ್ವೀಸ್ ಮಾಡುವುದಿಲ್ಲ. ಕಡಿಮೆ ನೆನಪಿನಲ್ಲಿ ಇರುತ್ತಾರೆ. ಯಾವ ಸತ್ಯಸೇವೆಯನ್ನು ಮಾಡಬೇಕೋ ಅದನ್ನು ಮಾಡುವುದಿಲ್ಲ ಉಳಿದಂತೆ ಸ್ಥೂಲಸೇವೆಯಲ್ಲಿ ಗಮನವು ಹೊರಟುಹೋಗುತ್ತದೆ. ಭಲೆ ನಾಟಕದನುಸಾರ ಆಗುತ್ತದೆ ಆದರೆ ತಂದೆಯಂತೂ ಪುರುಷಾರ್ಥವನ್ನು ಮಾಡಿಸುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ - ಯಾವುದೇ ಕೆಲಸವನ್ನು ಮಾಡಿ, ಬಟ್ಟೆಗಳನ್ನು ಹೊಲಿಯುತ್ತಿದ್ದರೂ ಸಹ ತಂದೆಯನ್ನು ನೆನಪು ಮಾಡಿ. ನೆನಪಿನಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ತಂದೆಯು ತಿಳಿಸಿದ್ದಾರೆ - ಶಕ್ತಿಶಾಲಿಗಳೊಂದಿಗೆ ಮಾಯೆಯೂ ಸಹ ಶಕ್ತಿಶಾಲಿಯಾಗಿ ಹೋರಾಡುತ್ತದೆ. ತಂದೆಯು ತಮ್ಮ ಅನುಭವವನ್ನೂ ತಿಳಿಸುತ್ತಾರೆ - ನಾನು ಶಕ್ತಿಶಾಲಿಯಾಗಿದ್ದೇನೆ, ನಾನು ಬಿಕಾರಿಯಿಂದ ರಾಜಕುಮಾರನಾಗುವವನಿದ್ದೇನೆ ಎಂಬುದೂ ಸಹ ನನಗೆ ಗೊತ್ತಿದೆ. ಆದರೂ ಸಹ ಮಾಯೆಯು ಎದುರಿಸುತ್ತದೆ, ಮಾಯೆಯು ಯಾರನ್ನೂ ಬಿಡುವುದಿಲ್ಲ, ಶಕ್ತಿಶಾಲಿಗಳ ಜೊತೆಯಂತೂ ಮಾಯೆಯು ಇನ್ನೂ ಹೆಚ್ಚಾಗಿ ಹೋರಾಡುತ್ತದೆ. ಕೆಲವು ಮಕ್ಕಳು ತಮ್ಮ ದೇಹದ ಅಹಂಕಾರದಲ್ಲಿರುತ್ತಾರೆ. ತಂದೆಯು ಎಷ್ಟೊಂದು ನಿರಹಂಕಾರಿಯಾಗಿರುತ್ತಾರೆ ಆದ್ದರಿಂದ ನಾನು ಈ ಮಕ್ಕಳಿಗೆ ನಮಸ್ಕಾರ ಮಾಡುವ ಸೇವೆ ಮಾಡುತ್ತೇನೆಂದು ಹೇಳುತ್ತಾರೆ. ಮನುಷ್ಯರಂತೂ ತಮ್ಮನ್ನು ಬಹಳ ಹಿರಿಯರೆಂದು ತಿಳಿಯುತ್ತಾರೆ, ಈ ದೇಹದ ಅಹಂಕಾರವನ್ನು ಬಿಡಬೇಕಾಗಿದೆ. ಅನೇಕರಲ್ಲಿ ಅಹಂಕಾರದ ಭೂತವು ಕುಳಿತಿದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡುತ್ತಾ ಇರಿ. ಇಲ್ಲಂತೂ ಮಕ್ಕಳಿಗೆ ಬಹಳ ಅವಕಾಶವಿದೆ, ತಿರುಗಾಡಲೂ ಚೆನ್ನಾಗಿದೆ - ಬಿಡುವೂ ಇದೆ. ಭಲೆ ತಿರುಗಾಡಿ, ಜೊತೆಜೊತೆಗೆ ಪರಸ್ಪರ ಒಬ್ಬರು ಇನ್ನೊಬ್ಬರೊಂದಿಗೆ ಎಷ್ಟು ಸಮಯ ನೆನಪಿನಲ್ಲಿದ್ದೆವು, ಮತ್ತ್ಯಾವ ಕಡೆಯೂ ಬುದ್ಧಿಯು ಹೋಗಲಿಲ್ಲವೆ ಎಂದು ಕೇಳುತ್ತಾ ಇರಿ. ಹೀಗೆ ಪರಸ್ಪರ ಜ್ಞಾನದ ಚರ್ಚೆ ಮಾಡಬೇಕು. ಭಲೆ ಸ್ತ್ರೀ-ಪುರುಷರು ಬೇರೆ-ಬೇರೆಯಾಗಿಯೇ ಕುಳಿತು ಚರ್ಚೆ ಮಾಡಬಹುದು. ಇಲ್ಲಿ ಏಕಾಂತವು ಬಹಳ ಚೆನ್ನಾಗಿದೆ, ಸನ್ಯಾಸಿಗಳೂ ಸಹ ಏಕಾಂತದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಯಾರು ಸತೋಪ್ರಧಾನ ಸನ್ಯಾಸಿಗಳಿದ್ದರೋ ಅವರು ಬಹಳ ನಿರ್ಭಯರಾಗಿದ್ದರು, ಯಾವುದೇ ಕಾಡುಪ್ರಾಣಿಗಳಿಗೂ ಸಹ ಹೆದರುತ್ತಿರಲಿಲ್ಲ, ಅವರ ನಶೆಯಲ್ಲಿದ್ದರು. ಈಗಂತೂ ತಮೋಪ್ರಧಾನರಾಗಿಬಿಟ್ಟಿದ್ದಾರೆ. ಪ್ರತಿಯೊಂದು ಧರ್ಮವು ಸ್ಥಾಪನೆಯಾದಾಗ ಮೊದಲು ಸತೋಪ್ರಧಾನವಾಗಿರುತ್ತದೆ ನಂತರ ರಜೋ, ತಮೋದಲ್ಲಿ ಬರುತ್ತವೆ. ಯಾವ ಸನ್ಯಾಸಿಗಳು ಸತೋಪ್ರಧಾನರಾಗಿದ್ದರೋ ಅವರು ಬ್ರಹ್ಮತತ್ವದ ನಶೆಯಲ್ಲಿ ಮಸ್ತರಾಗಿದ್ದರು, ಅವರಲ್ಲಿ ಬಹಳ ಆಕರ್ಷಣೆಯಿರುತ್ತಿತ್ತು, ಆದ್ದರಿಂದ ಗ್ರಾಮಸ್ಥರು ಅಲ್ಲಿಗೆ (ಕಾಡಿಗೆ) ಹೋಗಿ ಭೋಜನವನ್ನು ತಲುಪಿಸುತ್ತಿದ್ದರು. ದಿನ-ಪ್ರತಿದಿನ ತಮೋಪ್ರಧಾನವಾಗುತ್ತಾ ಆ ಶಕ್ತಿಯು ಕಡಿಮೆಯಾಗುತ್ತದೆ
ಅಂದಾಗ ತಂದೆಯು ಸಲಹೆ ನೀಡುತ್ತಾರೆ - ಇಲ್ಲಿ ಮಕ್ಕಳಿಗೆ ತಮ್ಮ ಉನ್ನತಿ ಮಾಡಿಕೊಳ್ಳಲು ಬಹಳ ಅವಕಾಶವಿದೆ, ಇಲ್ಲಿ ನೀವು ಬರುವುದೇ ಸಂಪಾದನೆ ಮಾಡಿಕೊಳ್ಳುವುದಕ್ಕಾಗಿ, ಕೇವಲ ತಂದೆಯೊಂದಿಗೆ ಮಿಲನ ಮಾಡುವುದರಿಂದ ಸಂಪಾದನೆಯಾಗುವುದಿಲ್ಲ. ತಂದೆಯನ್ನು ನೆನಪು ಮಾಡಿದಾಗಲೇ ಸಂಪಾದನೆಯಾಗುವುದು. ತಂದೆಯು ಆಶೀರ್ವಾದ ಮಾಡಿಬಿಡುತ್ತಾರೆಂದು ತಿಳಿಯಬೇಡಿ. ಸಾಧು-ಸಂತರು ಆಶೀರ್ವಾದ ಮಾಡುತ್ತಾರೆ ಆದರೆ ನೀವು ಕೆಳಗಿಳಿಯಲೇಬೇಕಾಗಿದೆ. ಅದರಿಂದೇನೂ ಆಗುವುದಿಲ್ಲ ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಜಿನ್ಹನ ತರಹ ಆಗಿ ತಮ್ಮ ಬುದ್ಧಿಯೋಗವನ್ನು ಮೇಲೆ (ಪರಮಧಾಮ) ಜೋಡಿಸಿ, ಜಿನ್ಹನ ಕಥೆಯಿದೆಯಲ್ಲವೆ - ನನಗೆ ಕೆಲಸ ಕೊಡಿ, ಇಲ್ಲದಿದ್ದರೆ ನಿಮ್ಮನ್ನೇ ನುಂಗಿಬಿಡುತ್ತೇನೆ ಎಂದು ಜಿನ್ಹನು ಹೇಳಿದನು. ಹಾಗೆಯೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮಗೆ ಆದೇಶ ನೀಡುತ್ತೇನೆ, ನೀವು ನೆನಪಿನಲ್ಲಿದ್ದರೆ ನಿಮ್ಮ ದೋಣಿಯು ಪಾರಾಗಿಬಿಡುತ್ತದೆ. ನೀವು ಖಂಡಿತ ಸತೋಪ್ರಧಾನರಾಗಬೇಕಾಗಿದೆ, ಮಾಯೆಯು ಎಷ್ಟೇ ತಲೆಕೆಡಿಸಲಿ ಆದರೆ ನಾವಂತೂ ಶ್ರೇಷ್ಠತಂದೆಯನ್ನು ನೆನಪು ಮಾಡುತ್ತೇವೆ. ಹೀಗೆ ಅಂತರಿಕವಾಗಿ ತಂದೆಯ ಮಹಿಮೆ ಮಾಡುತ್ತಾ ತಂದೆಯನ್ನು ನೆನಪು ಮಾಡುತ್ತಾ ಇರಿ, ಯಾವುದೇ ಮನುಷ್ಯರನ್ನು ನೆನಪು ಮಾಡಬೇಡಿ. ಭಕ್ತಿಮಾರ್ಗದ ಪದ್ಧತಿಗಳು ಜ್ಞಾನಮಾರ್ಗದಲ್ಲಿಲ್ಲ. ತಂದೆಯು ಶಿಕ್ಷಣವನ್ನು ಕೊಡುತ್ತಾರೆ- ನೆನಪಿನ ಯಾತ್ರೆಯಲ್ಲಿ ತೀಕ್ಷ್ಣವಾಗಿ ಹೋಗಬೇಕಾಗಿದೆ, ಮೂಲಮಾತೇ ಇದಾಗಿದೆ, ಸತೋಪ್ರಧಾನರಾಗಬೇಕಾಗಿದೆ. ತಂದೆಯ ಆದೇಶವು ಸಿಗುತ್ತದೆ - ನೀವು ತಿರುಗಾಡಲು ಹೋಗುತ್ತೀರೆಂದರೂ ಸಹ ನೆನಪಿನಲ್ಲಿರಿ ಆಗ ಮನೆಯ ನೆನಪೂ ಇರುವುದು, ರಾಜಧಾನಿಯ ನೆನಪೂ ಇರುವುದು. ನೆನಪಿನಲ್ಲಿ ಕುಳಿತು-ಕುಳಿತಿದ್ದಂತೆಯೇ ಕೆಳಗೆ ಬಂದುಬಿಡುವುದಲ್ಲ. ಹಾಗಿದ್ದರೆ ಅದು ಹಠಯೋಗವಾಗಿಬಿಡುತ್ತದೆ. ಇದು ನೇರಮಾತಾಗಿದೆ, ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಕೆಲವು ಮಕ್ಕಳು ಕುಳಿತು-ಕುಳಿತಿದ್ದಂತೆಯೇ ಬೀಳುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಡೆಯುತ್ತಾ-ತಿರುಗಾಡುತ್ತಾ, ತಿನ್ನುತ್ತಾ-ಕುಡಿಯುತ್ತಲೂ ನೆನಪು ಮಾಡಿ. ನೆನಪಿನಲ್ಲಿ ಕುಳಿತಿದ್ದಂತೆಯೇ ಆ ಸ್ಥಿತಿಯಿಂದ ಕೆಳಗೆ ಬಂದುಬಿಡುವುದಲ್ಲ, ಇದರಿಂದ ನಿಮ್ಮ ಪಾಪಗಳು ಪರಿಹಾರವಾಗುವುದಿಲ್ಲ. ಮಾಯೆಯ ವಿಘ್ನಗಳು ಈ ರೂಪದಲ್ಲಿಯೂ ಬರುತ್ತವೆ. ಈ ಭೋಗ ಇಡುವ ಪದ್ಧತಿಯಾಗಿದೆ. ಇದರಲ್ಲಿ ಮತ್ತೇನೂ ಇಲ್ಲ ಆದರೆ ಇದರಲ್ಲಿ ಮಾಯೆಯ ವಿಘ್ನಗಳು ಬೀಳುತ್ತವೆ. ಇದು ಜ್ಞಾನವೂ ಅಲ್ಲ, ಯೋಗವೂ ಅಲ್ಲ. ಸಾಕ್ಷಾತ್ಕಾರದ ಅವಶ್ಯಕತೆಯೂ ಇಲ್ಲ. ಯಾರಿಗೆ ಸಾಕ್ಷಾತ್ಕಾರವಾಯಿತು, ಅವರು ಇಂದು ಇಲ್ಲ. ಮಾಯೆಯು ಬಹಳ ಪ್ರಬಲವಾಗಿದೆ ಆದ್ದರಿಂದ ಎಂದೂ ಸಾಕ್ಷಾತ್ಕಾರದ ಆಸೆಯನ್ನಿಟ್ಟುಕೊಳ್ಳಬಾರದು. ಇದರಲ್ಲಿ ಸತೋಪ್ರಧಾನರಾಗಲು ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾಟಕದ ರಹಸ್ಯವನ್ನೂ ನೀವು ತಿಳಿದುಕೊಂಡಿದ್ದೀರಿ. ಈ ಅನಾದಿ ನಾಟಕವು ಮಾಡಲ್ಪಟ್ಟಿದೆ, ಇದು ಪುನರಾವರ್ತನೆಯಾಗುತ್ತಾ ಇರುತ್ತದೆ ಅಂದಾಗ ಇದನ್ನೂ ತಿಳಿಯಬೇಕು ಮತ್ತು ತಂದೆಯು ಯಾವ ಆದೇಶವನ್ನು ನೀಡುತ್ತಾರೆಯೋ ಅದರಂತೆಯೂ ನಡೆಯಬೇಕಾಗಿದೆ. ನಾವು ಪುನಃ ರಾಜಯೋಗವನ್ನು ಕಲಿಯಲು ಬಂದಿದ್ದೇವೆಂದು ನೀವು ಮಕ್ಕಳಿಗೆ ಗೊತ್ತಿದೆ, ಇದು ಭಾರತದ ಮಾತೇ ಆಗಿದೆ ಏಕೆಂದರೆ ಈ ಭಾರತವೇ ತಮೋಪ್ರಧಾನವಾಗಿದೆ ಮತ್ತೆ ಇದೇ ಸತೋಪ್ರಧಾನವಾಗಬೇಕಾಗಿದೆ. ತಂದೆಯು ಭಾರತದಲ್ಲಿಯೇ ಬಂದು ಎಲ್ಲರ ಸದ್ಗತಿ ಮಾಡುತ್ತಾರೆ. ಇದು ಬಹಳ ವಿಚಿತ್ರವಾದ ಆಟವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ತನ್ನನ್ನು ಆತ್ಮವೆಂದು ತಿಳಿಯಿರಿ, ನೀವು 84 ಜನ್ಮಗಳ ಚಕ್ರವನ್ನು ಸುತ್ತುತ್ತಾ ಪೂರ್ಣ 5000 ವರ್ಷಗಳಾಗಿದೆ. ಈಗ ಮತ್ತೆ ಹಿಂತಿರುಗಿ ಹೋಗಬೇಕಾಗಿದೆ. ಈ ಮಾತುಗಳನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ನೀವು ಮಕ್ಕಳಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ನಿಶ್ಚಯಬುದ್ಧಿಯವರಾಗುತ್ತಾ ಹೋಗುತ್ತಾರೆ. ಇದು ಬೇಹದ್ದಿನ ಪಾಠಶಾಲೆಯಾಗಿದೆ. ಇದು ಮಕ್ಕಳಿಗೆ ಗೊತ್ತಿದೆ - ನಮಗೆ ಬೇಹದ್ದಿನ ತಂದೆಯು ಓದಿಸುತ್ತಾರೆ, ಅವರು ಶಿಕ್ಷಕನೂ ಆಗಿದ್ದಾರೆ, ಬಹಳ ದೊಡ್ಡ ಮಾಲೀಕನಾಗಿದ್ದಾರೆ, ಬಹಳ ಪ್ರೀತಿಯಿಂದ ತಿಳಿಸಿಕೊಡುತ್ತಾರೆ. ಕೆಲವರು ಒಳ್ಳೊಳ್ಳೆಯ ಮಕ್ಕಳೂ ಸಹ ಆರಾಮವಾಗಿ ಆರು ಗಂಟೆಯವರೆಗೆ ಮಲಗಿರುತ್ತಾರೆ, ಮಾಯೆಯು ಒಮ್ಮೆಲೆ ಕಿವಿಯನ್ನಿಡಿದುಬಿಡುತ್ತದೆ. ಆರಂಭದಲ್ಲಿ ನೀವು ಭಟ್ಟಿಯಲ್ಲಿದ್ದಾಗ ಮಮ್ಮಾ-ಬಾಬಾರವರೂ ಸಹ ಎಲ್ಲಾ ಸೇವೆಯನ್ನು ಮಾಡುತ್ತಿದ್ದರು. ನಾವು ಎಂತಹ ಕರ್ಮವನ್ನು ಮಾಡುತ್ತೇವೆಯೋ ನಮ್ಮನ್ನು ನೋಡಿ ಅನ್ಯರೂ ಮಾಡುತ್ತಾರೆ. ತಂದೆಯು ತಿಳಿದುಕೊಂಡಿದ್ದಾರೆ - ಮಹಾರಥಿ, ಕುದುರೆ ಸವಾರರು, ಕಾಲಾಳುಗಳು ಎಲ್ಲರೂ ಇಲ್ಲಿ ನಂಬರ್ವಾರ್ ಇದ್ದಾರೆ. ಕೆಲವು ಮಕ್ಕಳು ಬಹಳ ಆರಾಮವಾಗಿದ್ದಾರೆ. ಯಾರಾದರೂ ಎಲ್ಲಿದ್ದಾರೆಂದು ಕೇಳಿದರೆ ಅವರು ಇಲ್ಲವೆಂದು ಹೇಳಿಬಿಡುತ್ತಾರೆ ಆದರೆ ಒಳಗೆ ಮಲಗಿರುತ್ತಾರೆ, ಏನೇನೋ ನಡೆಯುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ - ಇನ್ನೂ ಯಾರೂ ಸಹ ಸಂಪೂರ್ಣರಾಗಿಲ್ಲ, ಕೆಲವರಂತೂ ಎಷ್ಟೊಂದು ಸೇವಾಭಂಗವನ್ನು ಮಾಡಿಬಿಡುತ್ತಾರೆ ಇಲ್ಲವೆಂದರೆ ತಂದೆಗಾಗಿ ಗಾಯನವಿದೆ - ನೀವು ನಮ್ಮನ್ನು ತಿರಸ್ಕಾರವಾದರೂ ಮಾಡಿ ಅಥವಾ ಪ್ರೀತಿಯಾದರೂ ಮಾಡಿ ಆದರೆ ನಾವು ನಿಮ್ಮ ಬಾಗಿಲನ್ನು ಬಿಟ್ಟುಹೋಗುವುದಿಲ್ಲ. ಆದರೆ ಇಲ್ಲಿ ಕೆಲವರು ಚಿಕ್ಕಮಾತಿಗೂ ಸಹ ಮುನಿಸಿಕೊಳ್ಳುತ್ತಾರೆ. ಯೋಗವು ಬಹಳ ಕಡಿಮೆಯಿದೆ, ತಂದೆಯು ಮಕ್ಕಳಿಗೆ ಎಷ್ಟೊಂದು ತಿಳಿಸುತ್ತಿರುತ್ತಾರೆ ಆದರೆ ಕೆಲವರಲ್ಲಿ ಪತ್ರವನ್ನು ಬರೆಯುವಷ್ಟೂ ಶಕ್ತಿಯಿಲ್ಲ. ಯೋಗವಿದ್ದರೆ ಬರೆಯುವುದಕ್ಕೂ ಶಕ್ತಿ ತುಂಬುವರು. ತಂದೆಯು ತಿಳಿಸುತ್ತಾರೆ - ಗೀತೆಯ ಭಗವಂತನು ಶಿವನಾಗಿದ್ದಾರೆಯೇ ಹೊರತು ಶ್ರೀಕೃಷ್ಣನಲ್ಲ ಎಂಬುದನ್ನು ಚೆನ್ನಾಗಿ ಸಿದ್ಧ ಮಾಡಿ.
ತಂದೆಯು ಬಂದು ನೀವು ಮಕ್ಕಳಿಗೆ ಎಲ್ಲಾ ಮಾತುಗಳ ಅರ್ಥವನ್ನು ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಇಲ್ಲಿರುವವರೆಗೆ ನಶೆಯಿರುತ್ತದೆ ಮತ್ತೆ ಹೊರಗೆ ಹೋದಾಗ ಸಮಾಪ್ತಿಯಾಗಿಬಿಡುತ್ತದೆ. ಸಮಯವನ್ನು ಬಹಳ ವ್ಯರ್ಥವಾಗಿ ಕಳೆಯುತ್ತಾರೆ. ನಾವು ಸಂಪಾದನೆ ಮಾಡಿ ಯಜ್ಞಕ್ಕೆ ಕೊಡಬೇಕೆಂದು ವಿಚಾರವನ್ನಿಟ್ಟುಕೊಂಡು ಸಮಯವನ್ನು ವ್ಯರ್ಥಮಾಡಬಾರದು. ತಂದೆಯು ತಿಳಿಸುತ್ತಾರೆ - ನಾನಂತೂ ನೀವು ಮಕ್ಕಳ ಕಲ್ಯಾಣ ಮಾಡುವುದಕ್ಕಾಗಿ ಬಂದಿದ್ದೇನೆ ಆದರೆ ನೀವು ನೋಡಿ ತಮಗೆ ನಷ್ಟವನ್ನುಂಟುಮಾಡಿಕೊಳ್ಳುತ್ತಿದ್ದೀರಿ. ಕಲ್ಪದ ಹಿಂದೆ ಯಜ್ಞದಲ್ಲಿ ಯಾರು ಸಹಯೋಗ ಕೊಟ್ಟಿದ್ದರೋ ಅವರೇ ಈಗ ಕೊಡುತ್ತಿರುತ್ತಾರೆ, ಸೇವೆ ಮಾಡುತ್ತಿರುತ್ತಾರೆ. ಇವರು ಮಾಡಲಿ, ಅವರು ಮಾಡಲಿ ಎಂದು ನೀವೇಕೆ ತಲೆಕೆಡಿಸಿಕೊಳ್ಳುತ್ತೀರಿ. ನಾಟಕದಲ್ಲಿ ನಿಗಧಿಯಾಗಿದೆ, ಕಲ್ಪದ ಹಿಂದೆ ಬೀಜವನ್ನು ಬಿತ್ತಿದ್ದಾರೆಯೋ ಅವರು ಈಗಲೂ ಬಿತ್ತುತ್ತಾರೆ, ನೀವು ಯಜ್ಞದ ಚಿಂತನೆ ಮಾಡಬೇಡಿ, ತಮ್ಮ ಕಲ್ಯಾಣವನ್ನು ಮಾಡಿಕೊಳ್ಳಿ. ತಮಗೆ ಸಹಯೋಗವನ್ನು ಕೊಟ್ಟುಕೊಳ್ಳಿ, ಭಗವಂತನಿಗೆ ನೀವು ಸಹಯೋಗ ಕೊಡುತ್ತಿರೇನು? ಭಗವಂತನಿಂದ ನೀವು ಸಹಾಯವನ್ನು ಪಡೆಯುತ್ತೀರೋ ಅಥವಾ ನೀವು ಸಹಯೋಗವನ್ನು ಪಡೆಯುತ್ತೀರೋ? ನಾವು ಸಹಯೋಗ ಕೊಡುತ್ತೇವೆಂಬ ವಿಚಾರವು ಎಂದೂ ಬರಬಾರದು. ತಂದೆಯು ತಿಳಿಸುತ್ತಾರೆ - ಮುದ್ದಾದ ಮಕ್ಕಳೇ, ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಈಗ ನೀವು ಸಂಗಮಯುಗದಲ್ಲಿ ನಿಂತಿದ್ದೀರಿ. ಸಂಗಮದಲ್ಲಿಯೇ ನೀವು ಎರಡೂ ಕಡೆ (ಕಲಿಯುಗ-ಸತ್ಯಯುಗ) ಯೂ ನೋಡಬಹುದು. ಇಲ್ಲಿ ಎಷ್ಟೊಂದು ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಆದ್ದರಿಂದ ಇಡೀ ದಿನ ನಿಮ್ಮ ಬುದ್ಧಿಯು ಸಂಗಮಯುಗದಲ್ಲಿರಬೇಕು - ತಂದೆಯು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡುತ್ತಾರೆ! ತಂದೆಯ ಪಾತ್ರವು ಎಷ್ಟು ಅದ್ಭುತವಾಗಿದೆ. ತಿರುಗಾಡಿ-ಸುತ್ತಾಡಿ ಆದರೆ ನೆನಪಿನ ಯಾತ್ರೆಯಲ್ಲಿರಿ. ಅನೇಕ ಮಕ್ಕಳು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ, ನೆನಪಿನ ಯಾತ್ರೆಯಿಂದಲೇ ದೋಣಿಯು ಪಾರಾಗಬೇಕಾಗಿದೆ. ಕಲ್ಪದ ಹಿಂದೆಯೂ ಸಹ ಮಕ್ಕಳಿಗೆ ಇದೇ ರೀತಿ ತಿಳಿಸಿದ್ದೆನು, ಈ ನಾಟಕವು ಪುನರಾವರ್ತನೆಯಾಗುತ್ತಾ ಇರುತ್ತದೆ. ಏಳುತ್ತಾ-ಕುಳಿತುಕೊಳ್ಳುತ್ತಾ ಇಡೀ ಕಲ್ಪವೃಕ್ಷವು ಬುದ್ಧಿಯಲ್ಲಿರಲಿ. ಇದು ವಿದ್ಯೆಯಾಗಿದೆ, ಲೌಕಿಕ ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿ ಆದರೆ ವಿದ್ಯಾಭ್ಯಾಸಕ್ಕಾಗಿ ಸಮಯವನ್ನು ತೆಗೆಯಲೇಬೇಕು. ಮಧುರ ತಂದೆ ಮತ್ತು ಸ್ವರ್ಗವನ್ನು ನೆನಪು ಮಾಡಿ, ಎಷ್ಟು ನೆನಪು ಮಾಡುತ್ತೀರೋ ಅಷ್ಟು ಅಂತಿಮ ಗತಿ ಸೋ ಗತಿಯಾಗಿಬಿಡುವುದು. ಬಾಬಾ, ನಾನು ತಮ್ಮ ಬಳಿ ಬಂದುಬಿಡುವೆನು, ಹೀಗೆ ತಂದೆಯ ನೆನಪಿನಲ್ಲಿ ಶ್ವಾಸವೂ ಸಹ ಸುಖ ಕೊಡುವಂತದ್ದಾಗಿಬಿಡುವುದು. ಬ್ರಹ್ಮಜ್ಞಾನಿಗಳ ಶ್ವಾಸವು ಸುಖದ ಶ್ವಾಸವಾಗಿಬಿಡುವುದು. ಬ್ರಹ್ಮತತ್ವದ ನೆನಪಿನಲ್ಲಿಯೇ ಇರುತ್ತಾರೆ ಆದರೆ ಬ್ರಹ್ಮಲೋಕದಲ್ಲಿ ಯಾರೂ ಹೋಗುವುದಿಲ್ಲ, ತಾವಾಗಿಯೇ ಶರೀರ ಬಿಡಬಹುದು. ಕೆಲವರು ಉಪವಾಸವಿದ್ದು ಶರೀರವನ್ನು ಬಿಟ್ಟುಬಿಡುತ್ತಾರೆ ಅಂತಹವರು ದುಃಖಿಯಾಗಿ ಮರಣ ಹೊಂದುತ್ತಾರೆ. ಇಲ್ಲಿ ತಂದೆಯಂತೂ ತಿಳಿಸುತ್ತಾರೆ - ಮಕ್ಕಳೇ, ತಿನ್ನಿರಿ-ಕುಡಿಯಿರಿ ತಂದೆಯನ್ನು ನೆನಪು ಮಾಡಿ ಆಗ ಅಂತ್ಯಮತಿ ಸೋ ಗತಿಯಾಗಿಬಿಡುವುದು. ಈ ಶರೀರವನ್ನು ಬಿಡಲೇಬೇಕಾಗುತ್ತದೆಯಲ್ಲವೆ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸದಾ ನೆನಪಿರಲಿ - ಯಾವ ಕರ್ಮವನ್ನು ನಾವು ಮಾಡುತ್ತೇವೆಯೋ ನಮ್ಮನ್ನು ನೋಡಿ ಅನ್ಯರೂ ಮಾಡುತ್ತಾರೆ....... ಸೇವಾಭಂಗವಾಗುವಂತಹ ವಿಶ್ರಾಂತ ಪ್ರಿಯರಾಗಬಾರದು. ಬಹಳ-ಬಹಳ ನಿರಹಂಕಾರಿಯಾಗಿರಬೇಕು. ತಮಗೆ ತಾವೇ ಸಹಯೋಗ ನೀಡಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ.
2. ನೆನಪಿನ ಯಾತ್ರೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಸಮಯವೇ ಸಿಗದಷ್ಟು ಉದ್ಯೋಗ-ವ್ಯವಹಾರಗಳಲ್ಲಿ ತತ್ಫರರಾಗಿಬಿಡಬಾರದು. ದೇಹಾಭಿಮಾನವು ಬಹಳ ಕೆಟ್ಟದ್ದಾಗಿದೆ, ಇದನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರುವ ಪರಿಶ್ರಮಪಡಬೇಕಾಗಿದೆ.
| ವರದಾನ: |
ಯಾವುದೇ ಮಾತು ಕಲ್ಯಾಣದ ಭಾವನೆಯಿಂದ ನೋಡುವ ಮತ್ತು ಕೇಳುವಂತಹವರು ಪರದರ್ಶನ ಮುಕ್ತ ಭವ ಸಂಘಟನೆ ಎಷ್ಟು ದೊಡ್ಡದಾಗುತ್ತಾ ಹೋಗುವುದು, ಮಾತುಗಳೂ ಸಹಾ ಅಷ್ಟೇ ದೊಡ್ಡದಾಗಿರುವುದು. ಆದರೆ ನಿಮ್ಮ ಸುರಕ್ಷತೆ ಯಾವಾಗ ಇರುವುದೆಂದರೆ ಯಾವಾಗ ನೋಡುತ್ತಿದ್ದರೂ ನೋಡದಂತೆ, ಕೇಳುತ್ತಿದ್ದರೂ ಕೇಳದಂತೆ, ತಮ್ಮ ಸ್ವ-ಚಿಂತನೆಯಲ್ಲಿರುವಿರಿ ಆಗ. ಸ್ವ-ಚಿಂತನೆ ಮಾಡುವಂತಹ ಆತ್ಮ ಪರದರ್ಶನ ದಿಂದ ಮುಕ್ತವಾಗಿಬಿಡುವುದು. ಒಂದು ವೇಳೆ ಯಾವುದೇ ಕಾರಣದಿಂದ ಕೇಳಬೇಕಾಗಿ ಬರುವುದೆಂದರೆ, ತಮಗೆ ತಮ್ಮನ್ನು ಜವಾಬ್ದಾರರೆಂದು ತಿಳಿದು ಕೊಳ್ಳುವಿರಿ ಆಗ ಮೊದಲು ನಿಮ್ಮ ಬ್ರೇಕ್ ಅನ್ನು ಶಕ್ತಿಶಾಲಿ ಮಾಡಿಕೊಳ್ಳಿ. ನೋಡಿದಿರಿ-ಕೇಳಿದಿರಿ, ಎಲ್ಲಿಯವರೆಗೆ ಆಗುವುದೊ ಅಲ್ಲಿಯವರೆಗೆ ಕಲ್ಯಾಣ ಮಾಡಿದಿರಿ ನಂತರ ಫುಲ್ ಸ್ಟಾಪ್. |
| ಸ್ಲೋಗನ್: | ತಮ್ಮ ಸಂತುಷ್ಠ, ಖುಷಿಯ ಜೀವನದಿಂದ ಪ್ರತಿ ಹೆಜ್ಜೆಯಲ್ಲಿ ಸೇವೆಮಾಡುವಂತಹವರೇ ಸತ್ಯ ಸೇವಾಧಾರಿಗಳಾಗಿದ್ದಾರೆ. |