| 18/10/24 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ - ತಂದೆಯು ನಿಮ್ಮನ್ನು ಸುಂದರವಾದ ಹೂಗಳನ್ನಾಗಿ ಮಾಡಲು ಬಂದಿದ್ದಾರೆ, ಹೂವಾದಂತಹ ಮಕ್ಕಳು ತಾವು ಎಂದೂ ಸಹ ಯಾರಿಗೂ ದುಃಖವನ್ನು ಕೊಡಲು ಸಾಧ್ಯವಿಲ್ಲ, ಸದಾ ಸುಖವನ್ನೇ ಕೊಡುತ್ತಾ ಇರಿ” | |
| ಪ್ರಶ್ನೆ: | ಯಾವ ಒಂದು ಮಾತಿನಲ್ಲಿ ನೀವು ಮಕ್ಕಳು ಬಹಳ-ಬಹಳ ಎಚ್ಚರಿಕೆ ವಹಿಸಬೇಕಾಗಿದೆ? |
| ಉತ್ತರ: | ಮನಸ್ಸಾ-ವಾಚಾ-ಕರ್ಮಣಾ ತಮ್ಮ ನಾಲಿಗೆಯ ಮೇಲೆ ಬಹಳ ಎಚ್ಚರಿಕೆ ವಹಿಸಬೇಕು, ಬುದ್ಧಿಯಿಂದ ವಿಕಾರೀ ಪ್ರಪಂಚದ ಎಲ್ಲಾ ಕುಲ ಮರ್ಯಾದೆಗಳನ್ನು ಮರೆತುಬಿಡಬೇಕು. ನಾನು ಎಷ್ಟು ದೈವೀ ಗುಣವನ್ನು ಧಾರಣೆ ಮಾಡಿದ್ದೇನೆ, ಲಕ್ಷ್ಮೀ-ನಾರಾಯಣರ ಹಾಗೆ ಎಷ್ಟು ಪವಿತ್ರನಾಗಿದ್ದೇನೆ, ಎಷ್ಟರ ಮಟ್ಟಿಗೆ ಹೂವಿನ ಸಮಾನನಾಗಿದ್ದೇನೆ ಎಂಬುದನ್ನು ತನ್ನಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ನನ್ನ ಮಕ್ಕಳೆಲ್ಲರೂ ಆತ್ಮರಾಗಿದ್ದಾರೆ ಎಂಬುದು ಶಿವತಂದೆಗೆ ತಿಳಿದಿದೆ. ನೀವು ಮಕ್ಕಳು ಆತ್ಮನೆಂದು ತಿಳಿದು ಶರೀರವನ್ನು ಮರೆತು ಶಿವತಂದೆಯನ್ನು ನೆನಪು ಮಾಡಿ. ನಾನು ನೀವು ಮಕ್ಕಳಿಗೆ ಓದಿಸುತ್ತೇನೆಂದು ಶಿವತಂದೆಯು ತಿಳಿಸುತ್ತಾರೆ. ಶಿವತಂದೆಯೂ ಸಹ ನಿರಾಕಾರನಾಗಿದ್ದಾರೆ, ನೀವು ಆತ್ಮರೂ ಸಹ ನಿರಾಕಾರರಾಗಿದ್ದೀರಿ, ಇಲ್ಲಿಗೆ ಬಂದು ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ತಂದೆಯೂ ಸಹ ಬಂದು ಪಾತ್ರವನ್ನು ಅಭಿನಯಿಸುತ್ತಾರೆ. ಡ್ರಾಮ ಪ್ಲಾನನುಸಾರ ತಂದೆಯು ನಮ್ಮನ್ನು ಸುಂದರವಾದ ಹೂಗಳನ್ನಾಗಿ ಮಾಡುತ್ತಾರೆ ಎಂಬುದನ್ನು ನೀವು ತಿಳಿದಿದ್ದೀರಿ ಅಂದಾಗ ಎಲ್ಲಾ ಅವಗುಣಗಳನ್ನು ಬಿಟ್ಟು ಗುಣವಂತರಾಗಬೇಕಾಗಿದೆ. ಗುಣವಂತರು ಎಂದೂ ಸಹ ದುಃಖವನ್ನು ಕೊಡುವುದಿಲ್ಲ. ಕೇಳಿದರೂ ಕೇಳದ ಹಾಗೆ ಇರುವುದಿಲ್ಲ. ಯಾರಾದರೂ ದುಃಖಿತರಾಗಿರುತ್ತಾರೆಂದರೆ ಅವರ ದುಃಖವನ್ನು ದೂರ ಮಾಡುತ್ತಾರೆ. ತಂದೆಯು ಬರುತ್ತಾರೆಂದರೆ ಇಡೀ ಜಗತ್ತಿನ ದುಃಖವು ಅವಶ್ಯವಾಗಿ ದೂರವಾಗಬೇಕಾಗಿದೆ. ತಂದೆಯು ಶ್ರೀಮತವನ್ನು ಕೊಡುತ್ತಾರೆ. ಎಷ್ಟು ಸಾಧ್ಯವೋ ಪುರುಷಾರ್ಥ ಮಾಡಿ ಎಲ್ಲರ ದುಃಖವನ್ನು ದೂರ ಮಾಡುತ್ತಾ ಇರಿ. ಪುರುಷಾರ್ಥದಿಂದಲೇ ಒಳ್ಳೆಯ ಪದವಿ ಸಿಗುತ್ತದೆ. ಪುರುಷಾರ್ಥವನ್ನು ಮಾಡದೇ ಇರುವುದರಿಂದ ಪದವಿಯು ಕಡಿಮೆಯಾಗಿಬಿಡುತ್ತದೆ ನಂತರ ಕಲ್ಪ-ಕಲ್ಪಾಂತರಕ್ಕೆ ನಷ್ಟವಾಗಿಬಿಡುತ್ತದೆ. ತಂದೆಯು ಮಕ್ಕಳಿಗೆ ಪ್ರತಿಯೊಂದು ಮಾತಿನ ಬಗ್ಗೆ ತಿಳುವಳಿಕೆಯನ್ನು ನೀಡುತ್ತಾರೆ. ತನ್ನ ಮಕ್ಕಳಿಗೆ ನಷ್ಟವಾಗಲಿ ಎಂದು ತಂದೆಯು ಎಂದೂ ಸಹ ಬಯಸುವುದಿಲ್ಲ. ಪ್ರಪಂಚದವರಿಗೆ ಲಾಭ ಮತ್ತು ನಷ್ಟವೇನೆಂಬುದು ತಿಳಿದಿಲ್ಲ ಆದ್ದರಿಂದ ಮಕ್ಕಳು ತಮ್ಮಮೇಲೆ ದಯೆ ತೋರಿಸಿಕೊಳ್ಳಬೇಕಾಗಿದೆ. ಶ್ರೀಮತದಂತೆ ನಡೆಯುತ್ತಾ ಇರಬೇಕು. ಭಲೆ ಬುದ್ಧಿಯು ಆಕಡೆ-ಈಕಡೆ ಓಡುತ್ತಾ ಇದ್ದರೂ ಸಹ ಪ್ರಯತ್ನಪಡಬೇಕು, ಇಂತಹ ಬೇಹದ್ದಿನ ತಂದೆಯನ್ನು ನಾವು ಏಕೆ ನೆನಪು ಮಾಡುತ್ತಿಲ್ಲ, ಅವರ ನೆನಪಿನಿಂದಲೇ ಶ್ರೇಷ್ಠ ಪದವಿಯು ಸಿಗುತ್ತದೆ. ಕೊನೆ ಪಕ್ಷ ಸ್ವರ್ಗದಲ್ಲಿಯಾದರೂ ಹೋಗುತ್ತೀರಿ ಆದರೆ ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಲೌಕಿಕದಲ್ಲಿ ತಾಯಿ-ತಂದೆಯು ಮಕ್ಕಳ ಬಗ್ಗೆ ನಮ್ಮ ಮಗು ಶಾಲೆಯಲ್ಲಿ ಓದಿ ಉತ್ತಮ ಪದವಿಯನ್ನು ಪಡೆಯಲಿ ಎಂದು ಬಯಸುತ್ತಾರೆ ಆದರೆ ಇಲ್ಲಿ ಯಾರಿಗೂ ಸಹ ಅರ್ಥವಾಗುವುದಿಲ್ಲ. ನಿಮ್ಮ ಸಂಬಂಧಿಗಳೂ ಸಹ ನೀವು ಯಾವ ವಿದ್ಯೆಯನ್ನು ಓದುತ್ತಿದ್ದೀರಿ ಎಂಬುದೂ ತಿಳಿದಿಲ್ಲ. ಆ ಓದಿನಂತೂ ಮಿತ್ರಸಂಬಂಧಿಗಳು ಎಲ್ಲರೂ ತಿಳಿದಿರುತ್ತಾರೆ. ಇದರಬಗ್ಗೆ ಕೆಲವರಿಗೆ ತಿಳಿದಿರುತ್ತದೆ, ಕೆಲವರಿಗೆ ತಿಳಿದಿರುವುದಿಲ್ಲ. ಈ ವಿದ್ಯೆಯ ಬಗ್ಗೆ ತಂದೆಯು ತಿಳಿದುಕೊಂಡಿರುತ್ತಾರೆಂದರೆ ಸಹೋದರ-ಸಹೋದರಿಯರು ತಿಳಿದುಕೊಂಡಿರುವುದಿಲ್ಲ. ಕೆಲವರಲ್ಲಿ ತಾಯಿಗೆ ತಿಳಿದಿರುತ್ತದೆ ಆದರೆ ತಂದೆಯು ತಿಳಿದುಕೊಂಡಿರುವುದಿಲ್ಲ ಏಕೆಂದರೆ ಇದು ವಿಚಿತ್ರ ವಿದ್ಯೆಯಾಗಿದೆ ಮತ್ತು ಓದಿಸುವಂತಹವರೂ ಸಹ ವಿಚಿತ್ರನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ಭಕ್ತಿಯನ್ನು ಬಹಳಷ್ಟು ಮಾಡಿದ್ದೀರಿ ಆದರೂ ಸಹ ನಂಬರ್ವಾರ್. ಯಾರು ಬಹಳಷ್ಟು ಭಕ್ತಿ ಮಾಡಿದ್ದಾರೆ ಅವರೇ ಮತ್ತೆ ಈ ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ಈಗ ಭಕ್ತಿಯ ಎಲ್ಲಾ ರೀತಿ-ಪದ್ಧತಿಗಳು ಪೂರ್ಣವಾಗುತ್ತವೆ. ಮೊದಲು ಕುಲ ಮರ್ಯಾದೆಯನ್ನು ಬಿಟ್ಟು ಹೋದಳೆಂದು ಮೀರಾಳ ಬಗ್ಗೆ ಹೇಳಲಾಗುತ್ತಿತ್ತು. ಇಲ್ಲಿಯಾದರೂ ನೀವು ವಿಕಾರಿ ಕುಲ ಮರ್ಯಾದೆಯನ್ನೆಲ್ಲವನ್ನೂ ಬಿಡಬೇಕಾಗಿದೆ. ಬುದ್ಧಿಯಿಂದ ಎಲ್ಲದರ ಸನ್ಯಾಸವನ್ನು ಮಾಡಬೇಕಾಗಿದೆ. ಈ ವಿಕಾರಿ ಪ್ರಪಂಚದ್ದು ಯಾವುದೂ ಇಷ್ಟವಾಗುವುದಿಲ್ಲ. ವಿಕರ್ಮವನ್ನು ಮಾಡುವಂತಹವರನ್ನು ಸ್ವಲ್ಪವೂ ಸಹ ಇಷ್ಟಪಡುವುದಿಲ್ಲ. ಅವರು ತನ್ನದೇ ಆದಂತಹ ಅದೃಷ್ಟವನ್ನು ಹಾಳು ಮಾಡಿಕೊಳ್ಳುತ್ತಾರೆ. ಮಕ್ಕಳು ಯಾರನ್ನಾದರೂ ಸತಾಯಿಸುವುದನ್ನು ಅಥವಾ ಓದದೇ ಇರುವುದನ್ನು ನೋಡಲು ಯಾವುದೇ ತಂದೆಗೆ ಇಷ್ಟವಾಗುತ್ತದೆಯೇನು? ಆದರೆ ಸತ್ಯಯುಗದಲ್ಲಿ ಇಂತಹ ಮಕ್ಕಳು ಇರುವುದಿಲ್ಲ ಎಂಬುದನ್ನು ನೀವು ತಿಳಿದಿದ್ದೀರಿ. ಹೆಸರೇ ದೇವಿ-ದೇವತಾ ಎಂಬುದಾಗಿದೆ. ಎಂತಹ ಪವಿತ್ರ ಹೆಸರಾಗಿದೆ! ನನ್ನಲ್ಲಿ ದೈವೀ ಗುಣಗಳಿವೆಯೇ? ಎಂಬುದನ್ನು ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಸಹನಾಶೀಲರೂ ಸಹ ಆಗಬೇಕಾಗಿದೆ. ಇದು ಬುದ್ಧಿಯೋಗದ ಮಾತಾಗಿದೆ. ಈ ವಿದ್ಯೆ ಬಹಳ ಮಧುರವಾದದ್ದಾಗಿದೆ. ತಂದೆಯನ್ನು ನೆನಪು ಮಾಡುವುದರಲ್ಲಿ ಯಾವುದೇ ಯುದ್ಧ ಮಾಡುವ ಮಾತಿಲ್ಲ ಆದರೆ ಇದರಲ್ಲಿ ಮಾಯೆಯು ವಿಘ್ನವನ್ನು ಹಾಕುತ್ತದೆ. ಅದರಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಮಾಯೆಯ ಮೇಲೆ ವಿಜಯವನ್ನು ನೀವೇ ಗಳಿಸಬೇಕಾಗಿದೆ. ಕಲ್ಪ-ಕಲ್ಪ ನಾವು ಏನನ್ನು ಮಾಡುತ್ತಾ ಬಂದಿದ್ದೇವೆಯೋ ಮತ್ತೆ ಅದೇ ರೀತಿಯ ಪುರುಷಾರ್ಥವು ಈಗಲೂ ನಡೆಯುತ್ತಾ ಇದೆ ಎಂಬುದನ್ನು ನೀವು ತಿಳಿದಿದ್ದೀರಿ. ನಾವು ಪದಮಾಪದಮ ಭಾಗ್ಯಶಾಲಿಗಳಾಗುತ್ತಿದ್ದೇವೆ, ಮತ್ತೆ ಸತ್ಯಯುಗದಲ್ಲಿ ಅಪಾರವಾದ ಸುಖದಲ್ಲಿರುತ್ತೇವೆ ಎಂಬುದು ತಿಳಿದಿದ್ದೇವೆ.
ತಂದೆಯು ಕಲ್ಪ-ಕಲ್ಪವೂ ಇದೇ ರೀತಿಯಾಗಿ ತಿಳಿಸುತ್ತಾರೆ. ಇದ್ಯಾವುದೂ ಹೊಸಮಾತಲ್ಲ, ಇದು ಬಹಳ ಹಳೆಯ ಮಾತಾಗಿದೆ. ಮಕ್ಕಳು ಸಂಪೂರ್ಣ ಹೂಗಳಾಗಬೇಕು ಎಂಬುದು ತಂದೆಯ ಬಯಕೆಯಾಗಿದೆ. ಲೌಕಿಕ ತಂದೆಗೂ ಸಹ ತನ್ನ ಮಕ್ಕಳು ಹೂಗಳಾಗ (ಸುಖವನ್ನು ನೀಡುವಂಥಹವರು) ಬೇಕೆಂಬುದೇ ತನ್ನ ಮನಸ್ಸಿನಲ್ಲಿರುತ್ತದೆ. ಪಾರಲೌಕಿಕ ತಂದೆಯು ಮುಳ್ಳುಗಳಿಂದ ಹೂಗಳನ್ನಾಗಿ ಮಾಡಲು ಬರುತ್ತಾರೆ ಅಂದಾಗ ಇಂತಹವರಾಗಬೇಕಲ್ಲವೆ. ಮನಸ್ಸಾ-ವಾಚಾ-ಕರ್ಮಣಾ ನಾಲಿಗೆಯ ಮೇಲೂ ಸಹ ಬಹಳ ಎಚ್ಚರಿಕೆಯಿರಬೇಕು. ಪ್ರತಿಯೊಂದು ಕರ್ಮೇಂದ್ರಿಯದ ಮೇಲೆ ಬಹಳ ಎಚ್ಚರಿಕೆಯಿರಬೇಕು. ಮಾಯೆಯು ಬಹಳ ಮೋಸಮಾಡುವಂಥಹದ್ದಾಗಿದೆ. ಅದರ ಬಗ್ಗೆ ಪೂರ್ಣ ಎಚ್ಚರಿಕೆವಹಿಸಬೇಕು. ಗುರಿಯು ಅತ್ಯುತ್ತಮದ್ದಾಗಿದೆ, ಅರ್ಧಕಲ್ಪದಿಂದ ದೃಷ್ಟಿಯು ವಿಕಾರದಿಂದಲೇ ಕೂಡಿದೆ. ಅದನ್ನು ಒಂದೇ ಜನ್ಮದಲ್ಲಿ ನಿರ್ವಿಕಾರಿಯನ್ನಾಗಿ ಮಾಡಬೇಕಾಗಿದೆ. ಹೇಗೆ ಈ ಲಕ್ಷ್ಮೀ-ನಾರಾಯಣರ ಹಾಗೆ. ಇವರು ಸರ್ವಗುಣ ಸಂಪನ್ನರಾಗಿದ್ದಾರಲ್ಲವೆ! ಅಲ್ಲಿ ವಿಕಾರಿ ದೃಷ್ಟಿಯಿರುವುದಿಲ್ಲ, ರಾವಣನೇ ಇರುವುದಿಲ್ಲ. ಇದೇನು ಹೊಸ ಮಾತಲ್ಲ. ನೀವು ಅನೇಕಬಾರಿ ಈ ಪದವಿಯನ್ನು ಪಡೆದಿದ್ದೀರಿ. ಪ್ರಪಂಚದವರಿಗಾದರೂ ನೀವು ಏನು ಓದುತ್ತಿದ್ದೀರಿ ಎಂಬುದು ಸ್ವಲ್ಪವೂ ತಿಳಿದಿಲ್ಲ. ತಂದೆಯು ನಿಮ್ಮೆಲ್ಲಾ ಆಸೆಗಳನ್ನು ಪೂರ್ಣ ಮಾಡಲು ಬರುತ್ತೇವೆ. ಅಶುಭ ಆಸೆಗಳೆಲ್ಲವೂ ರಾವಣನದ್ದಾಗಿದೆ, ನಿಮ್ಮದು ಶುಭ ಆಸೆಯಾಗಿದೆ. ವಿಕಾರದಿಂದ ಕೂಡಿದ ಇಚ್ಛೆಗಳು ಇರಬಾರದು. ಮಕ್ಕಳು ಸುಖದ ಅಲೆಯಲ್ಲಿ ತೂಗಾಡಬೇಕು. ನಿಮ್ಮ ಅಪಾರವಾದ ಸುಖದ ವರ್ಣನೆಯನ್ನು ಮಾಡಲು ಸಾಧ್ಯವಿಲ್ಲ, ದುಃಖದ ವರ್ಣನೆಯಿದೆ, ಸುಖದ ವರ್ಣನೆಯಿರುವುದಿಲ್ಲ. ನಾವು ಪಾವನರಾಗಬೇಕೆಂಬುದು ನೀವೆಲ್ಲಾ ಮಕ್ಕಳ ಒಂದೇ ಆಸೆಯಾಗಿದೆ. ಹೇಗೆ ಪಾವನರಾಗುತ್ತೀರಿ? ಅದನ್ನು ನೀವು ತಿಳಿದಿದ್ದೀರಿ. ಹೊಸ ಪ್ರಪಂಚದಲ್ಲಿ ಮೊದಲನೇ ನಂಬರಿನಲ್ಲಿ ಈ ದೇವಿ-ದೇವತೆಗಳು ಪಾವನರಾಗಿರುತ್ತಾರೆ. ಪಾವನರಾಗುವುದರಲ್ಲಿಯೇ ನೋಡಿ, ಎಷ್ಟೊಂದು ಶಕ್ತಿಯಿರುತ್ತದೆ! ನೀವು ಪಾವನರಾಗಿ ಪಾವನ ಪ್ರಪಂಚದ ರಾಜ್ಯವನ್ನು ಪಡೆಯುತ್ತೀರಿ ಆದ್ದರಿಂದ ಈ ದೇವಿ-ದೇವತಾ ಧರ್ಮದಲ್ಲಿ ಬಹಳಷ್ಟು ಶಕ್ತಿಯಿದೆ ಎಂದು ಕರೆಯಲಾಗುತ್ತದೆ. ಈ ಶಕ್ತಿಯು ಎಲ್ಲಿಂದ ಸಿಗುತ್ತದೆ? ಸರ್ವಶಕ್ತಿವಂತ ತಂದೆಯಿಂದ. ಮನೆ-ಮನೆಗೂ ನೀವು ಮುಖ್ಯವಾದ ಎರಡು ಚಿತ್ರಗಳನ್ನು ಇಟ್ಟುಕೊಂಡು ಬಹಳ ಸೇವೆಯನ್ನು ಮಾಡಲು ಸಾಧ್ಯತೆಯಿದೆ. ಮುಂದೆ ಇಂತಹ ಸಮಯವು ಬರುತ್ತದೆ, ಕಫ್ರ್ಯೂ ವಿಧಿಸಿರುತ್ತಾರೆ, ನೀವು ಎಲ್ಲಿಗೂ ಹೋಗಿ-ಬರಲು ಸಾಧ್ಯತೆಯಿಲ್ಲ.
ನೀವು ಸತ್ಯಗೀತೆಯನ್ನು ತಿಳಿಸುವಂತಹ ಬ್ರಾಹ್ಮಣರಾಗಿದ್ದೀರಿ. ಜ್ಞಾನವು ಬಹಳ ಸಹಜವಾಗಿದೆ, ಯಾರ ಮನೆಯಲ್ಲಿ ಎಲ್ಲರೂ ಬರುತ್ತಾರೆಯೋ ಅವರ ಮನೆಯಲ್ಲಿ ಶಾಂತಿ ನೆಲೆಸುತ್ತದೆ, ಅವರಿಗೆ ಇದು ಬಹಳ ಸಹಜವೆನಿಸುತ್ತದೆ. 2-4 ಮುಖ್ಯ ಚಿತ್ರಗಳನ್ನು ಮನೆಯಲ್ಲಿಟ್ಟುಕೊಳ್ಳಿ. ತ್ರಿಮೂರ್ತಿ, ಗೋಲ, ವೃಕ್ಷ, ಏಣಿಚಿತ್ರಗಳಿದ್ದರೆ ಸಾಕು. ಇದರ ಜೊತೆಗೆ ಗೀತೆಯ ಭಗವಂತ ಕೃಷ್ಣನಲ್ಲ ಎಂಬ ಚಿತ್ರವೂ ಸಹ ಚೆನ್ನಾಗಿದೆ. ಎಷ್ಟೊಂದು ಸಹಜವಾಗಿದೆ! ಇದರಲ್ಲಿ ಯಾವುದೇ ಹಣದ ಖರ್ಚು ಇರುವುದಿಲ್ಲ. ಚಿತ್ರವನ್ನಂತೂ ಇಟ್ಟಿರುತ್ತೀರಿ. ಚಿತ್ರವನ್ನು ನೋಡುವುದರಿಂದಲೇ ಜ್ಞಾನವು ಸ್ಮೃತಿಯಲ್ಲಿ ಬಂದುಬಿಡುತ್ತದೆ. ಒಂದು ಕೋಣೆಯಲ್ಲಿ ಚಿತ್ರಗಳನ್ನು ಹಾಕಿ, ಭಲೆ ನೀವು ಅಲ್ಲಿಯೇ ಮಲಗಿಕೊಳ್ಳಿ. ನೀವು ಶ್ರೀಮತದಂತೆ ನಡೆದಿದ್ದೇ ಆದರೆ ಅನೇಕರ ಕಲ್ಯಾಣ ಮಾಡಲು ಸಾಧ್ಯತೆಯಿದೆ. ನೀವು ಕಲ್ಯಾಣವನ್ನು ಮಾಡುತ್ತಲೂ ಸಹ ಇರಬಹುದು. ಆದರೂ ಸಹ ತಂದೆಯು ತಮಗೆ ಮತ್ತೆ-ಮತ್ತೆ ನೀವು ಈ ರೀತಿ ಸೇವೆ ಮಾಡಿ ಎಂದು ತಿಳುವಳಿಕೆಯನ್ನು ನೀಡುತ್ತಿರುತ್ತಾರೆ. ಈ ಚಿತ್ರಗಳಲ್ಲಿ ತಿಳುವಳಿಕೆಯನ್ನು ನೀಡುವಂತಹ ಮಾತುಗಳಿವೆ. ಜನ್ಮ-ಜನ್ಮಾಂತರ ನೀವು ಭಕ್ತಿಮಾರ್ಗದಲ್ಲಿ ಮಂದಿರಗಳಲ್ಲಿ ಅಲೆಯುತ್ತಿದ್ದಿರಿ ಆದರೂ ಇವರು (ಮೂರ್ತಿಗಳು) ಯಾರು ಎಂಬುದು ತಿಳಿದಿರಲಿಲ್ಲ. ಮಂದಿರಗಳಲ್ಲಿ ದೇವಿಯರ ಮೂರ್ತಿಗಳಿಗೆ ಪೂಜಿಸುತ್ತಾರೆ ನಂತರ ಆ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸುತ್ತಾರೆ, ಎಷ್ಟೊಂದು ಅಂಧಕಾರವಿದೆ! ಪೂಜ್ಯರನ್ನು ಪೂಜಿಸಿ ನಂತರ ಸಮುದ್ರದಲ್ಲಿ ಮುಳುಗಿಸಿಬಿಡುತ್ತಾರೆ. ಗಣೇಶನಿಗೆ, ಅಂಬಾಮಾತೆಗೆ, ಸರಸ್ವತಿಯನ್ನೂ ಮುಳುಗಿಸಿಬಿಡುತ್ತಾರೆ. ತಂದೆಯು ಕುಳಿತು ಮಕ್ಕಳಿಗೆ ತಿಳುವಳಿಕೆಯನ್ನು ನೀಡುತ್ತಾರೆ ನಂತರ ಕಲ್ಪ-ಕಲ್ಪವೂ ಈ ಮಾತಿನಬಗ್ಗೆ ತಿಳುವಳಿಕೆಯನ್ನು ನೀಡುತ್ತಾರೆ, ನೀವು ಏನು ಮಾಡುತ್ತಿದ್ದೀರಿ ಎಂದು ಅನುಭೂತಿಯನ್ನು ಮಾಡಿಸುತ್ತಾರೆ. ಮಕ್ಕಳಿಗೆ ತಿರಸ್ಕಾರ ಬರಬೇಕು. ತಂದೆಯು ನಮಗೆ ಇಷ್ಟೆಲ್ಲಾ ತಿಳುವಳಿಕೆಯನ್ನು ನೀಡುತ್ತಿದ್ದಾರೆ - ಮಧುರಾತಿ ಮಧುರ ಮಕ್ಕಳೇ, ನೀವು ಏನನ್ನು ಮಾಡುತ್ತಿದ್ದೀರಿ! ಇದಕ್ಕೆ ವಿಷಯ ವೈತರಣಿ ನದಿಯೆಂದು ಹೇಳಲಾಗುತ್ತದೆ. ಸ್ವರ್ಗದಲ್ಲಿಯಾದರೂ ಹಾಲಿನ ನದಿಯಿರುವುದಿಲ್ಲ ಆದರೆ ಎಲ್ಲಾ ಪ್ರಕಾರದ ವಸ್ತುಗಳು ಯಥೇಚ್ಛವಾಗಿರುತ್ತದೆ. ಯಾವುದೇ ವಸ್ತುವಿನ ಮೇಲೆ ಹಣ ಕೊಡುವ ಅಗತ್ಯವಿಲ್ಲ. ಹಣದ ವ್ಯವಹಾರ ಅಲ್ಲಿ ಇರುವುದೇ ಇಲ್ಲ. ಚಿನ್ನದ ಬಿಲ್ಲೆಗಳೇ ಕಾಣಿಸುತ್ತಿರುತ್ತದೆ, ಮನೆಗಳಿಗೂ ಸಹ ಚಿನ್ನದ ಇಟ್ಟಿಗೆಯನ್ನೇ ಬಳಸಲಾಗುತ್ತದೆ. ಇದರಿಂದ ಅಲ್ಲಿ ಚಿನ್ನ, ಬೆಳ್ಳಿಗೆ ಯಾವುದೇ ಬೆಲೆಯಿರುವುದಿಲ್ಲ ಎಂಬುದು ಸಿದ್ಧವಾಗುತ್ತದೆ. ಇಲ್ಲಿಯಾದರೂ ಎಷ್ಟೊಂದು ಬೆಲೆಯಿದೆ ನೋಡಿ! ಒಂದೊಂದು ಮಾತಿನಲ್ಲಿ ಎಷ್ಟೊಂದು ಅದ್ಭುತವಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರು ಮನುಷ್ಯರೇ ಆಗಿದ್ದಾರೆ, ಈ ದೇವತೆಗಳೂ ಸಹ ಮನುಷ್ಯರೇ ಆದರೆ ಇವರ ಹೆಸರು ದೇವತೆಗಳೆಂದಾಗಿದೆ. ಇವರ ಮುಂದೆ ಮನುಷ್ಯರು ಹೋಗಿ ತಮ್ಮ ಕೊಳಕನ್ನು ತೋರ್ಪಡಿಸಿಕೊಳ್ಳುತ್ತಾರೆ - ನಾವು ಪಾಪಿ, ನೀಚರಾಗಿದ್ದೇವೆ, ನಮ್ಮಲ್ಲಿ ಯಾವುದೇ ಗುಣವಿಲ್ಲ. ನಾವು ಮನುಷ್ಯರಿಂದ ದೇವತೆಗಳಾಗುತ್ತೇವೆ ಎಂಬ ಗುರಿ-ಧ್ಯೇಯವು ನೀವು ಮಕ್ಕಳ ಬುದ್ಧಿಯಲ್ಲಿದೆ. ದೇವತೆಗಳಲ್ಲಿ ದೈವೀಗುಣವಿದೆ, ಮಂದಿರಗಳಿಗೆ ಹೋಗುತ್ತಾರೆ ಆದರೆ ಇವರೂ ಸಹ ಮನುಷ್ಯರೇ ಆಗಿದ್ದರೆಂಬುದು ಯಾರಿಗೂ ತಿಳಿದಿಲ್ಲ. ನಾವೂ ಸಹ ಮನುಷ್ಯರೇ ಆಗಿದ್ದೇವೆ ಆದರೆ ಇವರು ದೈವೀ ಗುಣವುಳ್ಳವರು, ನಾವು ಅಸುರೀ ಗುಣವುಳ್ಳಂತಹವರಾಗಿದ್ದೇವೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ನಾವು ಎಷ್ಟೊಂದು ಅಯೋಗ್ಯರಾಗಿದ್ದೆವು ಎಂಬುದು ತಿಳಿದುಬರುತ್ತಿದೆ. ಅವರ ಮುಂದೆ ಹೋಗಿ ಗಾಯನ ಮಾಡುತ್ತಿದ್ದಿರಿ, ನೀವು ಸರ್ವಗುಣ ಸಂಪನ್ನರು........ ಈಗ ಅಂತಹ ದೇವತೆಗಳು ಹಿಂದೆ ಇದ್ದು ಹೋಗಿದ್ದಾರೆ ಎಂಬುದನ್ನು ತಂದೆಯು ತಿಳಿಸಿಕೊಡುತ್ತಾರೆ. ಇವರಲ್ಲಿ ದೈವೀ ಗುಣಗಳಿದ್ದವು, ಅಪಾರವಾದಂತಹ ಸುಖವಿತ್ತು, ಅವರೇ ಮತ್ತೆ ಅಪಾರ ದುಃಖಿತರಾಗಿಬಿಟ್ಟಿದ್ದಾರೆ. ಈ ಸಮಯದಲ್ಲಿ ಎಲ್ಲರಲ್ಲಿಯೂ ಪಂಚವಿಕಾರಗಳ ಪ್ರವೇಶತೆಯಾಗಿದೆ. ನಾವು ಮೇಲಿನಿಂದ ಇಳಿಯುತ್ತಾ-ಇಳಿಯುತ್ತಾ ಒಂದೇಬಾರಿ ನೆಲದ ಮೇಲೆ ಹೇಗೆ ಬಿದ್ದುಬಿಟ್ಟಿದ್ದೇವೆ ಎಂಬುದನ್ನು ನೀವು ವಿಚಾರ ಮಾಡುತ್ತೀರಿ. ಭಾರತವಾಸಿಗಳು ಎಷ್ಟೊಂದು ಸಾಹುಕಾರರಾಗಿದ್ದರು, ಈಗ ಎಷ್ಟೊಂದು ಸಾಲವನ್ನು ತೆಗೆದುಕೊಳ್ಳುತ್ತಾರೆ ನೋಡಿ! ಈ ಎಲ್ಲಾ ಮಾತುಗಳನ್ನು ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ ಮತ್ತೆ ಯಾರೂ ಇದನ್ನು ತಿಳಿಸಿಕೊಡಲು ಸಾಧ್ಯವಿಲ್ಲ. ಋಷಿ-ಮುನಿಗಳೂ ಸಹ ನೇತಿ-ನೇತಿ ಎಂದು ಹೇಳುತ್ತಿರುತ್ತಾರೆ ಅರ್ಥಾತ್ ನಮಗೆ ತಿಳಿದಿಲ್ಲವೆಂದು ಹೇಳುತ್ತಿದ್ದರು. ಅವರು ಸತ್ಯವನ್ನೇ ಹೇಳುತ್ತಿದ್ದರು ಎಂದು ನೀವು ತಿಳಿದುಕೊಂಡಿದ್ದೀರಿ. ತಂದೆಯನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದಿರಲಿಲ್ಲ. ಈಗಲೂ ಸಹ ನಿಮ್ಮನ್ನು ಬಿಟ್ಟು ಬೇರೆ ಯಾರೂ ಸಹ ತಿಳಿದುಕೊಂಡಿಲ್ಲ. ದೊಡ್ಡ-ದೊಡ್ಡ ಸನ್ಯಾಸಿಗಳು, ಮಹಾತ್ಮರು ಯಾರೂ ಸಹ ತಿಳಿದುಕೊಂಡಿಲ್ಲ, ವಾಸ್ತವದಲ್ಲಿ ಮಹಾನ್ ಆತ್ಮರು ಈ ಲಕ್ಷ್ಮಿ-ನಾರಾಯಣರಾಗಿದ್ದಾರಲ್ಲವೆ! ಇವರು ಪರಮ ಪವಿತ್ರರಾಗಿದ್ದಾರೆ. ಇವರೇ (ಬ್ರಹ್ಮಾ) ತಿಳಿದುಕೊಂಡಿರಲಿಲ್ಲ ಅಂದಾಗ ಮತ್ತೆ ಯಾರು ತಿಳಿದುಕೊಳ್ಳಲು ಸಾಧ್ಯ? ಎಷ್ಟು ಸರಳ ಮಾತುಗಳನ್ನು ಬಾಬಾ ತಿಳಿಸಿಕೊಡುತ್ತಾರೆ ಆದರೂ ಕೆಲವು ಮಕ್ಕಳು ಮರೆತುಬಿಡುತ್ತಾರೆ. ಕೆಲವರು ಚೆನ್ನಾಗಿ ಧಾರಣೆ ಮಾಡುತ್ತಾರೆ, ಅವರು ಎಲ್ಲರಿಗೂ ಪ್ರಿಯರೆನಿಸುತ್ತಾರೆ. ಮಕ್ಕಳಲ್ಲಿ ಮಧುರವಾದ ಗುಣವನ್ನು ನೋಡುತ್ತಾರೆ ಅಷ್ಟು ಮನಸ್ಸಿಗೆ ಆನಂದವಾಗುತ್ತದೆ. ಕೆಲವರಂತೂ ಹೆಸರನ್ನೇ ಹಾಳು ಮಾಡಿಬಿಡುತ್ತಾರೆ. ಇಲ್ಲಿ ತಂದೆ-ಶಿಕ್ಷಕ-ಸದ್ಗುರು ಮೂವರಿಗೂ ನಿಂದನೆಯನ್ನು ಮಾಡಿಸಿಬಿಡುತ್ತಾರೆ. ಸತ್ಯತಂದೆ, ಸತ್ಯಶಿಕ್ಷಕ, ಸದ್ಗುರುವಿನ ನಿಂದನೆ ಮಾಡಿಸುವುದರಿಂದ ಮೂರುಪಟ್ಟು ದಂಡ ವಿಧಿಸಲ್ಪಡುತ್ತದೆ. ಆದರೆ ಕೆಲವು ಮಕ್ಕಳಿಗೆ ಏನೂ ಸಹ ತಿಳುವಳಿಕೆಯಿಲ್ಲ. ತಂದೆಯು ತಿಳಿಸುತ್ತಾರೆ - ಇಂತಹವರೂ ಸಹ ಇರುತ್ತಾರೆ. ಮಾಯೆಯೇನು ಕಡಿಮೆಯಲ್ಲ, ಅರ್ಧಕಲ್ಪ ಪಾಪಾತ್ಮರನ್ನಾಗಿ ಮಾಡುತ್ತದೆ. ತಂದೆಯು ಮತ್ತೆ ಅರ್ಧಕಲ್ಪಕ್ಕಾಗಿ ಪುಣ್ಯಾತ್ಮರನ್ನಾಗಿ ಮಾಡುತ್ತಾರೆ. ಅವರೂ ಸಹ ನಂಬರ್ವಾರ್ ಆಗುತ್ತಾರೆ. ರಾಮ ಮತ್ತು ರಾವಣ ಇಬ್ಬರೂ ಸಹ ಮಾಡುತ್ತಾರೆ. ರಾಮನನ್ನು ಪರಮಾತ್ಮನೆಂದು ಕರೆಯಲಾಗುತ್ತದೆ. ರಾಮ-ರಾಮ ಎಂದು ಹೇಳುತ್ತಾ ಮತ್ತೆ ಕೊನೆಯಲ್ಲಿ ಶಿವನಿಗೆ ನಮಸ್ಕಾರ ಮಾಡುತ್ತಾರೆ. ಅವರೇ ಪರಮಾತ್ಮನಾಗಿದ್ದಾರೆ. ಪರಮಾತ್ಮನ ಹೆಸರನ್ನು ಜಪಿಸುತ್ತಾರೆ. ನೀವಂತೂ ಜಪಿಸುವ ಅವಶ್ಯಕತೆಯಿಲ್ಲ. ಈ ಲಕ್ಷ್ಮೀ-ನಾರಾಯಣರು ಪವಿತ್ರರಾಗಿದ್ದರಲ್ಲವೆ! ಇವರ ಪ್ರಪಂಚ ಮೊದಲಿತ್ತು, ಅದು ಈಗ ಕಳೆದುಹೋಗಿದೆ, ಅದಕ್ಕೆ ಸ್ವರ್ಗ, ಹೊಸ ಪ್ರಪಂಚವೆಂದು ಕರೆಯಲಾಗುತ್ತದೆ. ಹೇಗೆ ಮನೆಯು ಹಳೆಯದಾಯಿತೆಂದರೆ ಅದನ್ನು ಬೀಳಿಸಬೇಕಾಗುತ್ತದೆ. ಈ ಪ್ರಪಂಚವೂ ಸಹ ಹಾಗೆಯೇ ಆಗಿದೆ. ಕಲಿಯುಗದ ಅಂತ್ಯವಾಗಿದೆ. ಎಷ್ಟೊಂದು ಸಹಜ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ. ಧಾರಣೆ ಮಾಡಿ ಮತ್ತು ಮಾಡಿಸಬೇಕಾಗಿದೆ. ತಂದೆಯು ಎಲ್ಲರಿಗೂ ತಿಳಿಸಿಕೊಡಲು ಹೋಗುವುದಿಲ್ಲ. ನೀವು ಮಕ್ಕಳೇ ಈ ಈಶ್ವರೀಯ ಸೇವೆಯಲ್ಲಿದ್ದೀರಿ, ತಂದೆಯು ಯಾವ ಸೇವೆಯನ್ನು ಕಲಿಸುತ್ತಾರೆಯೋ ಆ ಸೇವೆಯನ್ನು ಮಾಡಬೇಕಾಗಿದೆ. ನೀವು ಈಶ್ವರೀಯ ಸೇವೆಯಲ್ಲಿ ನಿರತರಾಗಿದ್ದೀರಿ. ನಿಮ್ಮ ಹೆಸರು ಪ್ರಸಿದ್ಧ ಮಾಡಲು ತಂದೆಯು ನೀವು ಮಾತೆಯರ ತಲೆಯ ಮೇಲೆ ಕಳಸವನ್ನಿಟ್ಟಿದ್ದಾರೆ. ಪುರುಷರಿಗೆ ಅವಕಾಶವಿಲ್ಲ ಎಂದಲ್ಲ, ಎಲ್ಲರಿಗೂ ಅವಕಾಶವಿದೆ. ನಾವು ಎಷ್ಟೊಂದು ಸುಖಿಗಳು, ಸ್ವರ್ಗವಾಸಿಗಳಾಗಿದ್ದೆವು, ಅಲ್ಲಿ ಯಾವುದೇ ದುಃಖವಿರಲಿಲ್ಲ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈಗ ಸಂಗಮಯುಗದಲ್ಲಿ ಮತ್ತೆ ಆ ಹೊಸ ಪ್ರಪಂಚದ ಮಾಲೀಕರಾಗುತ್ತಿದ್ದೇವೆ ಎಂಬುದು ತಿಳಿದಿದೆ. ಈಗ ಕಲಿಯುಗ ಹಳೆಯದಾದ ಪತಿತ ಪ್ರಪಂಚವಾಗಿದೆ. ಹೇಗೆ ಮನುಷ್ಯರದು ಸಂಪೂರ್ಣ ಎಮ್ಮೆಯ ಬುದ್ಧಿಯಾಗಿದೆ. ಈಗ ಎಲ್ಲಾ ಮಾತುಗಳನ್ನು ಮರೆಯಬೇಕಾಗಿದೆ. ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿಯಬೇಕು. ಶರೀರದಲ್ಲಿ ಆತ್ಮನಿಲ್ಲದಿದ್ದರೆ ಅದು ಏನನ್ನೂ ಮಾಡಲು ಸಾಧ್ಯವಿಲ್ಲ. ಆ ಶರೀರದ ಮೇಲೆ ಎಷ್ಟೊಂದು ಮೋಹವನ್ನಿಡುತ್ತಾರೆ. ಶರೀರವು ಸುಟ್ಟುಹೋಯಿತು, ಆತ್ಮವು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತದೆ, ಆದರೂ ಸಹ 12 ತಿಂಗಳ ಕಾಲ ಅಯ್ಯೋ ದೇವರೇ! ಎಂದು ಗೋಳಾಡುತ್ತಿರುತ್ತಾರೆ. ಈಗ ನೀವು ಆತ್ಮರು ಶರೀರ ಬಿಡುತ್ತೀರೆಂದರೆ ಅವಶ್ಯವಾಗಿ ಶ್ರೇಷ್ಠ ಮನೆಯಲ್ಲಿ ನಂಬರ್ವಾರ್ ಆಗಿ ಜನ್ಮಪಡೆಯುತ್ತದೆ. ಸ್ವಲ್ಪ ಜ್ಞಾನವಿರುವವರು ಸಾಧಾರಣ ಮನೆಯಲ್ಲಿ ಜನ್ಮಪಡೆಯುತ್ತಾರೆ. ಉತ್ತಮ ಜ್ಞಾನವುಳ್ಳವರು ಉತ್ತಮ ಜನ್ಮವನ್ನು ಪಡೆಯುತ್ತಾರೆ, ಅಲ್ಲಿ ಬಹಳ ಸುಖವೂ ಸಹ ಇರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಕೇಳಿಯೂ ಕೇಳದಹಾಗೆ ಇರಬಾರದು. ಗುಣವಂತರಾಗಿ ಎಲ್ಲರಿಗೂ ಸುಖವನ್ನೇ ಕೊಡಬೇಕು. ಪುರುಷಾರ್ಥ ಮಾಡಿ ಎಲ್ಲರ ದುಃಖವನ್ನು ದೂರ ಮಾಡಬೇಕಾಗಿದೆ.
2. ವಿಕಾರಕ್ಕೆ ವಶೀಭೂತರಾಗಿ ಯಾವುದೇ ವಿಕರ್ಮವನ್ನು ಮಾಡಬಾರದು. ಸಹನಾಶೀಲರಾಗಬೇಕಾಗಿದೆ. ಯಾವುದೇ ಅಶುದ್ಧ ವಿಕಾರಿ ಆಸೆಯನ್ನಿಟ್ಟುಕೊಳ್ಳಬಾರದು.
| ವರದಾನ: |
ಶಾಂತಿಯ ಶಕ್ತಿಯ ಮೂಲಕ ಅಸಂಭವವನ್ನು ಸಂಭವ ಮಾಡುವಂತಹ ಸಹಜಯೋಗಿ ಭವ ಶಾಂತಿಯ ಶಕ್ತಿಯು ಸರ್ವಶ್ರೇಷ್ಠ ಶಕ್ತಿಯಾಗಿದೆ. ಶಾಂತಿಯ ಶಕ್ತಿಯಿಂದಲೇ ಉಳಿದೆಲ್ಲಾ ಶಕ್ತಿಗಳ ಹೊರಬರುತ್ತದೆ. ವಿಜ್ಞಾನದ ಶಕ್ತಿಯ ಪ್ರಭಾವವೂ ಸಹ ಏನಿದೆಯೋ, ಅದೂ ಸಹ ಸೈಲೆನ್ಸ್ನಿಂದಲೇ ಹೊರಬಂದಿದೆ. ಅಂದಮೇಲೆ ಶಾಂತಿಯ ಶಕ್ತಿಯಿಂದ ಏನುಬೇಕು ಅದನ್ನು ಮಾಡಬಹುದು. ಅಸಂಭವವನ್ನೂ ಸಂಭವ ಮಾಡಬಹುದು. ಯಾವುದನ್ನು ಪ್ರಪಂಚದವರು ಅಸಂಭವವೆಂದು ಹೇಳುವರು, ಅದು ತಮಗಾಗಿ ಸಂಭವವಿದೆ ಮತ್ತು ಸಂಭವವಾಗುವ ಕಾರಣ ಸಹಜವಿದೆ. ಶಾಂತಿಯ ಶಕ್ತಿಯನ್ನು ಧಾರಣೆ ಮಾಡಿಕೊಂಡು ಸಹಜಯೋಗಿಯಾಗಿರಿ. |
| ಸ್ಲೋಗನ್: | ವಾಣಿಯ ಮೂಲಕ ಎಲ್ಲರಿಗೂ ಸುಖ ಮತ್ತು ಶಾಂತಿಯನ್ನು ಕೊಡುತ್ತೀರೆಂದರೆ ಗಾಯನ ಯೋಗ್ಯ ಆಗುವಿರಿ. |