ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 22, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 22, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

22/10/24
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ- ತಂದೆಯು ನಿಮಗೆ ಯಾವ ವಿದ್ಯೆಯನ್ನು ಓದಿಸುತ್ತಾರೆಯೋ ಇದರಲ್ಲಿ ರಿದ್ಧಿಸಿದ್ಧಿಯ ಮಾತಿಲ್ಲ, ವಿದ್ಯೆಯಲ್ಲಿ ಯಾವುದೇ ಛೂ ಮಂತ್ರದಿಂದ ಕೆಲಸ ನಡೆಯುವುದಿಲ್ಲ”
ಪ್ರಶ್ನೆ: ದೇವತೆಗಳಿಗೇ ಬುದ್ಧಿವಂತರೆಂದು ಹೇಳುತ್ತಾರೆ, ಮನುಷ್ಯರಿಗಲ್ಲ- ಏಕೆ?
ಉತ್ತರ: ಏಕೆಂದರೆ ದೇವತೆಗಳು ಸರ್ವಗುಣ ಸಂಪನ್ನರಾಗಿದ್ದಾರೆ ಮತ್ತು ಮನುಷ್ಯರಲ್ಲಿ ಯಾವುದೇ ಗುಣವಿಲ್ಲ, ದೇವತೆಗಳು ಬುದ್ಧಿವಂತರಾಗಿದ್ದಾರೆ ಆದ್ದರಿಂದಲೆ ಮನುಷ್ಯರು ಅವರಿಗೆ ಪೂಜೆ ಮಾಡುತ್ತಾರೆ. ಅವರ (ದೇವತೆಗಳು) ಬ್ಯಾಟರಿಯು ಚಾರ್ಜ್ ಆಗಿದೆ ಆದ್ದರಿಂದ ಅವರಿಗೆ ಮೌಲ್ಯವಂತರೆಂದು ಹೇಳುತ್ತಾರೆ. ಯಾವಾಗ ಬ್ಯಾಟರಿಯು ಖಾಲಿಯಾಗುತ್ತಿದೆಯೋ ಆಗ ಬೆಲೆಯಿಲ್ಲದವರಾಗುತ್ತಾರೆ ಆಗ ಬುದ್ಧಿಹೀನರೆಂದು ಹೇಳುತ್ತಾರೆ.

ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ- ಇದು ಪಾಠಶಾಲೆಯಾಗಿದೆ, ಇದು ವಿದ್ಯೆಯಾಗಿದೆ. ಈ ವಿದ್ಯೆಯಿಂದ ಇಂತಹ ಪದವಿಯು ಪ್ರಾಪ್ತಿಯಾಗುತ್ತದೆ. ಇದನ್ನು ಶಾಲೆ ಅಥವಾ ವಿಶ್ವವಿದ್ಯಾಲಯವೆಂದು ತಿಳಿಯಬೇಕು. ಇಲ್ಲಿಗೆ ದೂರ-ದೂರದಿಂದ ಓದಲು ಬರುತ್ತೀರಿ. ಏನನ್ನು ಓದಲು ಬರುತ್ತೀರಿ? ಈ ಗುರಿ-ಉದ್ದೇಶವು ಬುದ್ಧಿಯಲ್ಲಿದೆ. ನಾವು ವಿದ್ಯೆಯನ್ನು ಓದುವುದಕ್ಕಾಗಿ ಬರುತ್ತೇವೆ, ಓದಿಸುವವರಿಗೆ ಶಿಕ್ಷಕರೆಂದು ಹೇಳಲಾಗುತ್ತದೆ. ಭಗವಾನುವಾಚವು ಗೀತೆಯಾಗಿದೆ, ಮತ್ತ್ಯಾವುದೇ ಮಾತಿಲ್ಲ. ಗೀತೆಯನ್ನು ಓದಿಸುವವರಿಗೆ ಪುಸ್ತಕವಿರುತ್ತದೆ ಆದರೆ ಇಲ್ಲಿ ತಂದೆಯು ಪುಸ್ತಕವನ್ನು ಓದಿಸುವುದಿಲ್ಲ. ಯಾವುದೇ ಗೀತೆಯನ್ನು ಕೈಯಲ್ಲಿ ಹಿಡಿದುಕೊಂಡಿಲ್ಲ. ಇದಂತೂ ಭಗವಾನುವಾಚವಾಗಿದೆ. ತಂದೆಯು ನೇರವಾಗಿ ತಿಳಿಸುತ್ತಾರೆ. ಮನುಷ್ಯರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಶ್ರೇಷ್ಠಾತಿಶ್ರೇಷ್ಠ ಭಗವಂತನು ಒಬ್ಬರೇ ಆಗಿದ್ದಾರೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ ಇದೆಲ್ಲವೂ ಸೃಷ್ಟಿಯಾಗಿದೆ. ಆಟವು ಸೂಕ್ಷ್ಮವತನ ಅಥವಾ ಮೂಲವತನದಲ್ಲಿ ನಡೆಯುವುದಿಲ್ಲ. ನಾಟಕವು ಇಲ್ಲಿಯೇ ನಡೆಯುತ್ತದೆ. 84ರ ಚಕ್ರವು ಇಲ್ಲಿಯೇ ಇದೆ, ಇದಕ್ಕೆ 84 ಜನ್ಮಗಳ ಚಕ್ರದ ನಾಟಕವೆಂದು ಹೇಳಲಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ ಏಕೆಂದರೆ ಸರ್ವಶ್ರೇಷ್ಠ ಭಗವಂತನ ಮತವು ನಿಮಗೆ ಸಿಗುತ್ತದೆ. ಎರಡನೆಯವರು ಯಾರೂ ಇಲ್ಲ. ಒಬ್ಬರಿಗೇ ಸರ್ವಶಕ್ತಿವಂತ, ಆಲ್ಮೈಟಿ ಅಥಾರಿಟಿ ಎಂದು ಹೇಳಲಾಗುತ್ತದೆ. ಅಥಾರಿಟಿಯ ಅರ್ಥವನ್ನು ತಾವೇ ತಿಳಿಸುತ್ತಾರೆ. ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ ಏಕೆಂದರೆ ಅವರು ತಮೋಪ್ರಧಾನರಾಗಿದ್ದಾರೆ, ಇದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಕೆಲವರಿಗೆ ಕಲಿಯುಗ, ಕೆಲವರಿಗೆ ಸತ್ಯಯುಗ, ಕೆಲವರಿಗೆ ತ್ರೇತಾಯುಗವಾಗಿದೆ ಎಂದು ಹೇಳುವುದಿಲ್ಲ. ಈಗಂತೂ ಇರುವುದೇ ನರಕವೆಂದಾಗ ಯಾವುದೇ ಮನುಷ್ಯರು ನಮಗೆ ಇದು ಸ್ವರ್ಗವಾಗಿದೆ ಎಂದು ಹೇಳುವುದಿಲ್ಲ. ಈಗಂತೂ ಇರುವುದೇ ನರಕ ಅಂದಾಗ ಯಾವುದೇ ಮನುಷ್ಯರು ನಮಗೆ ಇದು ಸ್ವರ್ಗವಾಗಿದೆ ಏಕೆಂದರೆ ನಮ್ಮ ಹಣ-ಅಂತಸ್ತು ಬಹಳ ಇದೆ ಎಂದು ಹೇಳಲು ಸಾಧ್ಯವಿಲ್ಲ. ಇದಂತೂ ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ. ಸತ್ಯಯುಗವು ಕಳೆದುಹೋಯಿತು, ಈ ಸಮಯದಲ್ಲಿ ಸತ್ಯಯುಗವಿರಲು ಸಾಧ್ಯವಿಲ್ಲ, ಇವೆಲ್ಲವೂ ಅರಿತುಕೊಳ್ಳುವ ಮಾತುಗಳಾಗಿವೆ. ತಂದೆಯು ಕುಳಿತು ಇವೆಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಸತ್ಯಯುಗದಲ್ಲಿ ಇವರ ರಾಜ್ಯವಿತ್ತು, ಭಾರತವಾಸಿಗಳು ಆ ಸಮಯದಲ್ಲಿ ಸತ್ಯಯುಗ ನಿವಾಸಿಗಳೆಂದು ಕರೆಸಿಕೊಳ್ಳುತ್ತಿದ್ದರು. ಈಗ ಅವಶ್ಯವಾಗಿ ಕಲಿಯುಗಿಗಳೆಂದೇ ಕರೆಸಿಕೊಳ್ಳುತ್ತಾರೆ. ಸತ್ಯಯುಗಿಗಳಾಗಿದ್ದಾಗ ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು. ನರಕಕ್ಕೂ ಸ್ವರ್ಗವೆಂದು ಹೇಳುತ್ತಾರೆಂದಲ್ಲ. ಮನುಷ್ಯರದು ತಮ್ಮ-ತಮ್ಮದೇ ಆದ ಮತವಿದೆ. ಹಣದ ಸುಖವಿದ್ದರೆ ತಮ್ಮನ್ನು ಸುಖದಲ್ಲಿದ್ದೇವೆಂದು ತಿಳಿಯುತ್ತಾರೆ. ನನ್ನ ಬಳಿ ಬಹಳಷ್ಟು ಸಂಪತ್ತಿದೆ ಆದ್ದರಿಂದ ನಾನು ಸ್ವರ್ಗದಲ್ಲಿದ್ದೇನೆ ಎಂದುಕೊಳ್ಳುತ್ತಾರೆ ಆದರೆ ಇಲ್ಲ ಎಂದು ವಿವೇಕವು ಹೇಳುತ್ತದೆ ಏಕೆಂದರೆ ಇದು ನರಕವಾಗಿದೆ. ಭಲೆ ಯಾರ ಬಳಿಯಾದರೂ 10-20 ಲಕ್ಷ ರೂಪಾಯಿಗಳಿರಬಹುದು ಆದರೆ ಇದಂತೂ ರೋಗಿ ಪ್ರಪಂಚವಾಗಿದೆ. ಸತ್ಯಯುಗಕ್ಕೆ ನಿರೋಗಿ ಪ್ರಪಂಚವೆಂದು ಹೇಳುತ್ತಾರೆ. ಪ್ರಪಂಚವಂತೂ ಇದೇ ಆಗಿದೆ ಆದರೆ ಸತ್ಯಯುಗದಲ್ಲಿ ಇದಕ್ಕೆ ಯೋಗಿಪ್ರಪಂಚವೆಂದು ಹೇಳುತ್ತಾರೆ, ಕಲಿಯುಗಕ್ಕೆ ಭೋಗಿಪ್ರಪಂಚವೆಂದು ಹೇಳಲಾಗುತ್ತದೆ. ಅಲ್ಲಿ ಯೋಗಿಗಳಿರುತ್ತಾರೆ ಏಕೆಂದರೆ ವಿಕಾರದ ಭೋಗವಿಲಾಸವಿರುವುದಿಲ್ಲ ಅಂದಾಗ ಇದು ಶಾಲೆಯಾಗಿದೆ, ಇದರಲ್ಲಿ ಶಕ್ತಿಯ ಮಾತಿಲ್ಲ. ಶಿಕ್ಷಕರು ಶಕ್ತಿಯನ್ನು ತೋರಿಸುತ್ತಾರೆಯೇ? ಅಲ್ಲಿ ನಾವು ಈ ರೀತಿಯಾಗುತ್ತೇವೆಂದು ಗುರಿ-ಧ್ಯೇಯವಿರುತ್ತದೆ. ನೀವು ಈ ವಿದ್ಯೆಯಿಂದ ಮನುಷ್ಯರಿಂದ ದೇವತೆಗಳಾಗುತ್ತೀರಿ. ಇಲ್ಲಿ ಯಾವುದೇ ಛೂ ಮಂತ್ರ, ರಿದ್ಧಿಸಿದ್ಧಿಯ ಮಾತಿಲ್ಲ. ಇದಂತೂ ಶಾಲೆಯಾಗಿದೆ. ಶಾಲೆಯಲ್ಲಿ ರಿದ್ಧಿಸಿದ್ಧಿಯ ಮಾತಿರುತ್ತದೆಯೇ? ವಿದ್ಯೆಯನ್ನು ಓದಿ ಕೆಲವರು ವೈದ್ಯರು, ಕೆಲವರು ವಕೀಲರಾಗುತ್ತಾರೆ. ಈ ಲಕ್ಷ್ಮೀ-ನಾರಾಯಣರು ಮನುಷ್ಯರಾಗಿದ್ದರು, ಪವಿತ್ರರಾಗಿದ್ದರು ಆದ್ದರಿಂದ ಅವರಿಗೆ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ಪವಿತ್ರರು ಅವಶ್ಯವಾಗಿ ಆಗಬೇಕಾಗಿದೆ. ಇದು ಪತಿತಪ್ರಪಂಚವಾಗಿದೆ.

ಹಳೆಯ ಪ್ರಪಂಚವಾಗಲು ಇನ್ನೂ ಲಕ್ಷಾಂತರ ವರ್ಷಗಳಿದೆ, ಕಲಿಯುಗದ ನಂತರವೇ ಸತ್ಯಯುಗ ಬರುತ್ತದೆ ಎಂದು ಮನುಷ್ಯರು ತಿಳಿಯುತ್ತಾರೆ. ನೀವೀಗ ಸಂಗಮಯುಗದಲ್ಲಿದ್ದೀರಿ. ಈ ಸಂಗಮಯುಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಈ ಮಾತುಗಳನ್ನು ತಂದೆಯೇ ಬಂದು ತಿಳಿಸುತ್ತಾರೆ. ಅವರಿಗೆ ಪರಮ ಆತ್ಮನೆಂದು ಹೇಳುತ್ತಾರೆ. ಆತ್ಮಗಳ ತಂದೆಗೆ ಬಾಬಾ ಎಂದು ಹೇಳುತ್ತಾರೆ ಮತ್ತ್ಯಾವುದೇ ಹೆಸರಿಲ್ಲ. ಆ ತಂದೆಯ ಹೆಸರಾಗಿದೆ- ಶಿವ. ಶಿವನ ಮಂದಿರಕ್ಕೂ ಹೋಗುತ್ತಾರೆ, ಪರಮಾತ್ಮ ಶಿವನಿಗೆ ನಿರಾಕಾರನೆಂದು ಹೇಳುತ್ತಾರೆ, ಅವರಿಗೆ ಮನುಷ್ಯನ ಶರೀರವಿಲ್ಲ. ನೀವಾತ್ಮರು ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ ಆದ್ದರಿಂದ ನಿಮಗೆ ಮನುಷ್ಯನ ಶರೀರವು ಸಿಗುತ್ತದೆ. ಅವರು ಶಿವನಾಗಿದ್ದಾರೆ, ನೀವು ಸಾಲಿಗ್ರಾಮಗಳಾಗಿದ್ದೀರಿ. ಶಿವ ಮತ್ತು ಸಾಲಿಗ್ರಾಮಗಳ ಪೂಜೆಯೂ ಆಗುತ್ತದೆ ಏಕೆಂದರೆ ಚೈತನ್ಯದಲ್ಲಿ ಇದ್ದು ಹೋಗಿದ್ದಾರೆ. ಯಾವುದೋ ಕರ್ತವ್ಯವನ್ನು ಮಾಡಿ ಹೋಗಿದ್ದಾರೆ ಆದ್ದರಿಂದಲೇ ಅವರ ಮಹಿಮೆಯಾಗುತ್ತದೆ, ಪೂಜೆಯಾಗುತ್ತದೆ. ಮೊದಲಿನ ಜನ್ಮದ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಜನ್ಮದಲ್ಲಂತೂ ಗಾಯನ ಮಾಡುತ್ತಾರೆ, ದೇವಿ-ದೇವತೆಗಳನ್ನು ಪೂಜಿಸುತ್ತಾರೆ. ಈ ಜನ್ಮದಲ್ಲಂತೂ ಅನೇಕರು ನಾಯಕರೂ ಸಹ ಆಗಿಬಿಟ್ಟಿದ್ದಾರೆ. ಯಾರು ಒಳ್ಳೊಳ್ಳೆಯ ಸಾಧು-ಸಂತ ಮೊದಲಾದವರು ಇದ್ದುಹೋಗಿದ್ದಾರೆಯೋ ನಾಮಾಚಾರಕ್ಕಾಗಿ ಅವರ ಸ್ಟಾಂಪನ್ನು ಮಾಡುತ್ತಾರೆ. ವಾಸ್ತವದಲ್ಲಿ ಇಲ್ಲಿ ಎಲ್ಲರಿಗಿಂತ ದೊಡ್ಡಹೆಸರೆಂದು ಯಾರಿಗೆ ಗಾಯನ ಮಾಡಬೇಕು? ಎಲ್ಲರಿಗಿಂತ ಅತಿದೊಡ್ಡವರು ಯಾರು? ಸರ್ವಶ್ರೇಷ್ಠನಂತೂ ಒಬ್ಬ ಭಗವಂತನೇ ಆಗಿದ್ದಾರೆ. ಅವರು ನಿರಾಕಾರನಾಗಿದ್ದಾರೆ ಮತ್ತು ಅವರ ಮಹಿಮೆಯು ಸಂಪೂರ್ಣ ಭಿನ್ನವಾಗಿದೆ. ದೇವತೆಗಳ ಮಹಿಮೆಯೇ ಬೇರೆ, ಮನುಷ್ಯರ ಮಹಿಮೆಯೇ ಬೇರೆಯಾಗಿದೆ. ಮನುಷ್ಯರಿಗೆ ದೇವತೆಯೆಂದು ಹೇಳಲು ಸಾಧ್ಯವಿಲ್ಲ. ದೇವತೆಗಳಲ್ಲಿ ಸರ್ವಗುಣಗಳಿತ್ತು, ಈ ಲಕ್ಷ್ಮೀ-ನಾರಾಯಣರು ಇದ್ದು ಹೋಗಿದ್ದಾರಲ್ಲವೆ. ಅವರು ಪವಿತ್ರವಾಗಿದ್ದರು, ವಿಶ್ವದ ಮಾಲೀಕರಾಗಿದ್ದರು, ಅವರ ಪೂಜೆಯನ್ನೂ ಮಾಡುತ್ತಾರೆ ಏಕೆಂದರೆ ಪವಿತ್ರ, ಪೂಜ್ಯರಾಗಿದ್ದಾರೆ, ಅಪವಿತ್ರರಿಗೆ ಪೂಜ್ಯರೆಂದು ಹೇಳುವುದಿಲ್ಲ, ಅಪವಿತ್ರರು ಸದಾ ಪವಿತ್ರರನ್ನು ಪೂಜಿಸುತ್ತಾರೆ. ಕನ್ಯೆಯು ಪವಿತ್ರವಾಗಿದ್ದಾಗ ಪೂಜೆಗೆ ಯೋಗ್ಯಳಾಗಿರುತ್ತಾಳೆ. ಪತಿತಳಾಗುತ್ತಾಳೆಂದರೆ ಎಲ್ಲರ ಕಾಲಿಗೆ ಬೀಳಬೇಕಾಗುತ್ತದೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಸತ್ಯಯುಗದಲ್ಲಿ ಎಲ್ಲರೂ ಪವಿತ್ರರಿದ್ದರು. ಅದು ಪಾವನ ಪ್ರಪಂಚ, ಕಲಿಯುಗವು ಪತಿತ ಪ್ರಪಂಚವಾಗಿದೆ. ಆದ್ದರಿಂದಲೇ ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ಪವಿತ್ರರಾಗಿರುವಾಗ ತಂದೆಯನ್ನು ಕರೆಯುವುದಿಲ್ಲ. ಸ್ವಯಂ ತಂದೆಯೇ ತಿಳಿಸುತ್ತಾರೆ- ನನ್ನನ್ನು ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಇದು ಭಾರತದ ಮಾತಾಗಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಭಾರತವೇ ಈ ಸಮಯದಲ್ಲಿ ಪತಿತವಾಗಿದೆ. ಹಿಂದೆ ಭಾರತವೇ ಪತಿತವಾಗಿತ್ತು, ಪಾವನ ದೇವತೆಗಳನ್ನು ನೋಡಬೇಕೆಂದರೆ ಮಂದಿರಗಳಲ್ಲಿ ಹೋಗಿ ನೋಡಿ! ದೇವತೆಗಳೆಲ್ಲರೂ ಪಾವನರಾಗಿದ್ದಾರೆ, ಅವರಲ್ಲಿ ಯಾರು ಮುಖ್ಯವಾಗಿದ್ದಾರೆಯೋ ಅವರನ್ನು ಮಂದಿರಗಳಲ್ಲಿ ತೋರಿಸುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಎಲ್ಲರೂ ಪಾವನರಿದ್ದರು, ಯಥಾರಾಜಾ-ರಾಣಿ ತಥಾ ಪ್ರಜಾ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಿರುತ್ತಾರೆ. ಸನ್ಯಾಸಿಗಳು ಎಂದೂ ಕೃಷ್ಣನನ್ನು ಭಗವಂತ ಅಥವಾ ಬ್ರಹ್ಮನೆಂದು ಒಪ್ಪುವುದಿಲ್ಲ. ಭಗವಂತನು ನಿರಾಕಾರನಾಗಿದ್ದಾನೆಂದು ಅವರು ತಿಳಿಯುತ್ತಾರೆ. ಅವರ ಚಿತ್ರವನ್ನೂ ನಿರಾಕಾರನ ರೂಪದಿಂದಲೇ ಪೂಜಿಸಲಾಗುತ್ತದೆ. ಅವರ ಸತ್ಯ ಹೆಸರಾಗಿದೆ- ಶಿವ. ನೀವಾತ್ಮಗಳು ಯಾವಾಗ ಇಲ್ಲಿ ಬಂದು ಶರೀರವನ್ನು ಧಾರಣೆ ಮಾಡುತ್ತೀರೋ ಆಗ ನಿಮಗೆ ಹೆಸರನ್ನಿಡಲಾಗುತ್ತದೆ. ಆತ್ಮವು ಅವಿನಾಶಿ ಶರೀರವು ವಿನಾಶಿಯಾಗಿದೆ. ಆತ್ಮವು ಒಂದು ಶರೀರವನ್ನು ಬಿಟ್ಟುಹೋಗಿ ಇನ್ನೊಂದನ್ನು ತೆಗೆದುಕೊಳ್ಳುತ್ತದೆ. 84 ಜನ್ಮಗಳಂತೂ ಬೇಕಲ್ಲವೆ, 84 ಲಕ್ಷ ಜನ್ಮಗಳಿರುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಇದೇ ಪ್ರಪಂಚವು ಸತ್ಯಯುಗದಲ್ಲಿ ಸತ್ಯವಾಗಿತ್ತು, ಇದೇ ಪ್ರಪಂಚವು ನಂತರ ಅಸತ್ಯಖಂಡವಾಗಿಬಿಡುತ್ತದೆ. ಸ್ವರ್ಗವು ಸತ್ಯಖಂಡವಾಗಿದೆ. ಎಲ್ಲರೂ ಸತ್ಯವನ್ನೇ ಹೇಳುವವರಿರುತ್ತಾರೆ. ಭಾರತಕ್ಕೆ ಸತ್ಯಖಂಡವೆಂದು ಹೇಳಲಾಗುತ್ತದೆ. ಅಸತ್ಯಖಂಡವೇ ನಂತರ ಸತ್ಯಖಂಡವಾಗುತ್ತದೆ. ಸತ್ಯತಂದೆಯೇ ಬಂದು ಸತ್ಯಖಂಡವನಾಗಿ ಮಾಡುತ್ತಾರೆ. ಅವರಿಗೆ ಸತ್ಯಸಾಮ್ರಾಟ ಅಥವಾ ಸತ್ಯವೆಂದು ಹೇಳಲಾಗುತ್ತದೆ. ಇದಂತೂ ಅಸತ್ಯಖಂಡವಾಗಿದೆ. ಮನುಷ್ಯರು ಏನನ್ನು ಹೇಳುತ್ತಾರೆಯೋ ಎಲ್ಲವೂ ಅಸತ್ಯವಾಗಿದೆ. ಸೂಕ್ಷ್ಮಬುದ್ಧಿಯವರು ದೇವತೆಗಳಾಗಿದ್ದಾರೆ. ಅವರನ್ನು ಮನುಷ್ಯರು ಪೂಜಿಸುತ್ತಾರೆ. ಬುದ್ಧಿವಂತರು ಮತ್ತು ಬುದ್ಧಿಹೀನರೆಂದು ಹೇಳಲಾಗುತ್ತದೆ. ಬುದ್ಧಿವಂತರನ್ನಾಗಿ ಯಾರು ಮಾಡುತ್ತಾರೆ ಮತ್ತು ಬುದ್ಧಿಹೀನರನ್ನಾಗಿ ಯಾರು ಮಾಡುತ್ತಾರೆ- ಇದನ್ನೂ ಸಹ ತಂದೆಯು ತಿಳಿಸುತ್ತಾರೆ. ಬುದ್ಧಿವಂತರ ಸರ್ವಗುಣ ಸಂಪನ್ನರನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ತಾವೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ಹೇಗೆ ನೀವು ಆತ್ಮಗಳಾಗಿದ್ದೀರಿ ಮತ್ತೆ ಇಲ್ಲಿ ಶರೀರದಲ್ಲಿ ಪ್ರವೇಶ ಮಾಡಿ ಪಾತ್ರವನ್ನಭಿನಯಿಸುತ್ತೀರಿ. ನಾನೂ ಸಹ ಒಂದೇಬಾರಿ ಇವರಲ್ಲಿ ಪ್ರವೇಶ ಮಾಡುತ್ತೇನೆ. ಮಕ್ಕಳಿಗೆ ತಿಳಿದಿದೆ- ತಂದೆಯು ಒಬ್ಬರೇ ಆಗಿದ್ದಾರೆ, ಅವರಿಗೇ ಸರ್ವಶಕ್ತಿವಂತನೆಂದು ಹೇಳಲಾಗುತ್ತದೆ. ಸರ್ವಶಕ್ತಿವಂತನೆಂದು ಹೇಳಲು ಅಂತಹ ಮನುಷ್ಯರು ಯಾರೂ ಇಲ್ಲ. ಲಕ್ಷ್ಮೀ-ನಾರಾಯಣರಿಗೂ ಈ ರೀತಿ ಹೇಳಲು ಸಾಧ್ಯವಿಲ್ಲ ಏಕೆಂದರೆ ಅವರಿಗೂ ಶಕ್ತಿಯನ್ನು ಕೊಡುವವರು ಒಬ್ಬರಿದ್ದಾರೆ. ಪತಿತ ಮನುಷ್ಯರಲ್ಲಿ ಶಕ್ತಿಯಿರಲು ಸಾಧ್ಯವಿಲ್ಲ. ಆತ್ಮದಲ್ಲಿ ಯಾವ ಶಕ್ತಿಯಿರುತ್ತದೆಯೋ ಅದು ನಿಧಾನ-ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ಅರ್ಥಾತ್ ಆತ್ಮದಲ್ಲಿ ಯಾವ ಸತೋಪ್ರಧಾನ ಶಕ್ತಿಯಿತ್ತೋ ಅದು ತಮೋಪ್ರಧಾನ ಶಕ್ತಿಯಾಗಿಬಿಡುತ್ತದೆ. ಹೇಗೆ ತೈಲವು ಖಾಲಿಯಾದಾಗ ವಾಹನವು ನಿಂತುಬಿಡುತ್ತದೆ. ಈ (ಆತ್ಮ) ಬ್ಯಾಟರಿಯು ಪದೇ-ಪದೇ ಖಾಲಿಯಾಗುವುದಿಲ್ಲ, ಇದಕ್ಕೆ ನಿಗಧಿಯಾದ ಸಮಯವು ಸಿಕ್ಕಿದೆ, ಕಲಿಯುಗದ ಅಂತಿಮದಲ್ಲಿ ಬ್ಯಾಟರಿಯು ತಣ್ಣಗಾಗಿಬಿಡುತ್ತದೆ. ಮೊದಲು ಯಾರು ಸತೋಪ್ರಧಾನ, ವಿಶ್ವದ ಮಾಲೀಕರಾಗಿದ್ದರೋ ಅವರು ಈಗ ತಮೋಪ್ರಧಾನರಾಗಿರುವುದರಿಂದ ಶಕ್ತಿಯು ಕಡಿಮೆಯಾಗಿಬಿಟ್ಟಿದೆ. ಶಕ್ತಿಯು ಉಳಿದಿಲ್ಲ. ಸಂಪೂರ್ಣ ಬೆಲೆಯಿಲ್ಲದವರಾಗಿಬಿಟ್ಟಿದ್ದಾರೆ. ಭಾರತದಲ್ಲಿ ದೇವಿ-ದೇವತಾ ಧರ್ಮವಿದ್ದಾಗ ಮೌಲ್ಯವಂತ ವ್ಯಕ್ತಿಗಳಾಗಿದ್ದರು. ಧರ್ಮವೇ ಶಕ್ತಿಯೆಂದು ಹೇಳಲಾಗುತ್ತದೆ, ದೇವತಾ ಧರ್ಮದಲ್ಲಿ ಶಕ್ತಿಯಿದೆ. ವಿಶ್ವದ ಮಾಲೀಕರಾಗಿದ್ದಾರೆ, ಅವರಲ್ಲಿ ಯಾವ ಶಕ್ತಿಯಿತ್ತು? ಯಾವುದೇ ಯುದ್ಧ ಮಾಡುವ ಶಕ್ತಿಯಿರಲಿಲ್ಲ. ಶಕ್ತಿಯು ಸರ್ವಶಕ್ತಿವಂತ ತಂದೆಯಿಂದ ಸಿಗುತ್ತದೆ. ಶಕ್ತಿಯು ಏನಾಗಿದೆ?

ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೀವಾತ್ಮಗಳು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನರಾಗಿದ್ದೀರಿ. ವಿಶ್ವದ ಮಾಲೀಕರ ಬದಲು ವಿಶ್ವಕ್ಕೆ ಗುಲಾಮರಾಗಿಬಿಟ್ಟಿದ್ದೀರಿ. ಈ ಪಂಚವಿಕಾರಗಳ ರಾವಣನು ನಿಮ್ಮ ಎಲ್ಲಾ ಶಕ್ತಿಯನ್ನು ಕಸಿದುಕೊಳ್ಳುತ್ತಾನೆ ಆದ್ದರಿಂದ ಭಾರತವಾಸಿಗಳು ಕಂಗಾಲಾಗಿಬಿಟ್ಟಿದ್ದಾರೆ. ವಿಜ್ಞಾನಿಗಳಲ್ಲಿ ಬಹಳ ಶಕ್ತಿಯಿದೆ ಎಂದು ತಿಳಿಯಬೇಡಿ. ಅದು ಶಕ್ತಿಯಲ್ಲ, ಇದು ಆತ್ಮಿಕ ಶಕ್ತಿಯಾಗಿದೆ. ಸರ್ವಶಕ್ತಿವಂತ ತಂದೆಯೊಂದಿಗೆ ಬುದ್ಧಿಯೋಗವನ್ನಿಡುವುದರಿಂದ ಈ ಶಕ್ತಿಯು ಸಿಗುತ್ತದೆ. ಈ ಸಮಯದಲ್ಲಿ ಸೈನ್ಸ್ ಮತ್ತು ಸೈಲೆನ್ಸ್ ಯುದ್ಧವಾಗಿದೆ. ನೀವು ಸೈಲೆನ್ಸ್ನಲ್ಲಿ ಹೋಗುತ್ತೀರಿ. ನಿಮಗೆ ಅದರ ಫಲವು ಸಿಗುತ್ತಿದೆ, ಸೈಲೆನ್ಸ್ನ ಬಲವನ್ನು ನೀವು ತೆಗೆದುಕೊಂಡು ಸೈಲೆನ್ಸ್ನ ಪ್ರಪಂಚದಲ್ಲಿ ಹೊರಟುಹೋಗುತ್ತೀರಿ. ತಂದೆಯನ್ನು ನೆನಪು ಮಾಡಿ, ತಮ್ಮನ್ನು ಶರೀರದಿಂದ ಭಿನ್ನ ಮಾಡಿಕೊಳ್ಳುತ್ತೀರಿ. ಭಕ್ತಿಮಾರ್ಗದಲ್ಲಿ ಭಗವಂತನ ಬಳಿ ಹೋಗಲು ನೀವು ಬಹಳಷ್ಟು ತಲೆಕೆಡಿಸಿಕೊಂಡಿದ್ದೀರಿ ಆದರೆ ಸರ್ವವ್ಯಾಪಿ ಎಂದು ಹೇಳುವಕಾರಣ ಆ ಮಾರ್ಗವು ಸಿಗುವುದೇ ಇಲ್ಲ, ತಮೋಪ್ರಧಾನರಾಗಿಬಿಟ್ಟಿದ್ದಾರೆ. ಅಂದಾಗ ಇದು ವಿದ್ಯೆಯಾಗಿದೆ, ವಿದ್ಯೆಗೆ ಶಕ್ತಿಯೆಂದು ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಮೊದಲು ಪವಿತ್ರರಾಗಿ ನಂತರ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದರ ಜ್ಞಾನವನ್ನು ತಿಳಿದುಕೊಳ್ಳಿ. ಜ್ಞಾನಸಾಗರನು ತಂದೆಯೇ ಆಗಿದ್ದಾರೆ, ಇದರಲ್ಲಿ ಜಾದುವಿನ ಮಾತಿಲ್ಲ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆಯೆಂದು ಮಕ್ಕಳಿಗೆ ತಿಳಿದಿಲ್ಲ. ನೀವು ಪಾತ್ರಧಾರಿಗಳಾಗಿದ್ದೀರಲ್ಲವೆ! ಇದು ಬೇಹದ್ದಿನ ನಾಟಕವಾಗಿದೆ. ಮೊದಲು ಮನುಷ್ಯರ ನಾಟಕವು ನಡೆಯುತ್ತಿತ್ತು, ಅದರಲ್ಲಿ ಅದಲು-ಬದಲಾಗುವ ಸಾಧ್ಯತೆಯಿದೆ. ಇತ್ತೀಚೆಗಂತೂ ಸಿನೆಮಾಗಳು ಬಂದಿವೆ. ತಂದೆಗೂ ಸಹ ಸಿನೆಮಾದ ಉದಾಹರಣೆಯನ್ನು ಕೊಟ್ಟು ತಿಳಿಸುವುದು ಸಹಜವಾಗುತ್ತದೆ. ಅದು ಚಿಕ್ಕ ಸಿನಿಮಾ, ಇದು ದೊಡ್ಡದಾಗಿದೆ. ನಾಟಕದಲ್ಲಿ ಪಾತ್ರಧಾರಿಗಳನ್ನು ಬದಲಾಯಿಸಬಹುದು ಆದರೆ ಇದು ಅನಾದಿ ನಾಟಕವಾಗಿದೆ. ಒಂದುಬಾರಿ ಯಾವುದು ಚಿತ್ರೀಕರಣವಾಗುತ್ತದೆಯೋ ಅದು ಮತ್ತೆ ಬದಲಾಗಲು ಸಾಧ್ಯವಿಲ್ಲ. ಇಡೀ ಪ್ರಪಂಚವು ಬೇಹದ್ದಿನ ಸಿನೆಮಾ ಆಗಿದೆ, ಯಾವುದೇ ಶಕ್ತಿಯ ಮಾತಿಲ್ಲ. ಜಗದಂಬೆಗೆ ಶಕ್ತಿಯೆಂದು ಹೇಳುತ್ತಾರೆ ಆದರೆ ಅವರಿಗೆ ಹೆಸರಂತೂ ಇದೆಯಲ್ಲವೆ. ಅಂದಮೇಲೆ ಯಾರಿಗೆ ಅಂಬಾ ಎಂದು ಏಕೆ ಹೇಳುತ್ತಾರೆ? ಅವರು ಏನು ಮಾಡಿ ಹೋಗಿದ್ದಾರೆ? ಈಗ ನೀವು ತಿಳಿದುಕೊಂಡಿದ್ದೀರಿ- ಶ್ರೇಷ್ಠಾತಿಶ್ರೇಷ್ಠ ಅಂಬಾ ಮತ್ತು ಲಕ್ಷ್ಮೀಯಾಗಿದ್ದಾರೆ. ಜಗದಂಬೆಯೇ ಮತ್ತೆ ಲಕ್ಷ್ಮೀಯಾಗುತ್ತಾರೆ, ಇದನ್ನೂ ಸಹ ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ. ನೀವು ಜ್ಞಾನಪೂರ್ಣರೂ ಆಗುತ್ತೀರಿ ಮತ್ತು ನಿಮಗೆ ಪವಿತ್ರತೆಯನ್ನು ಕಲಿಸುತ್ತೇನೆ. ಆ ಪವಿತ್ರತೆಯು ಅರ್ಧಕಲ್ಪ ನಡೆಯುತ್ತದೆ ನಂತರ ತಂದೆಯೇ ಬಂದು ಪವಿತ್ರತೆಯ ಮಾರ್ಗವನ್ನು ತಿಳಿಸುತ್ತಾರೆ. ಬಂದು ಮಾರ್ಗವನ್ನು ತೋರಿಸಿ ಮತ್ತು ಮಾರ್ಗದರ್ಶಕನಾಗಿ ಎಂದು ತಂದೆಯನ್ನು ಈ ಸಮಯಕ್ಕಾಗಿಯೇ ಕರೆಯುತ್ತೀರಿ ಅವರು ಪರಮ ಆತ್ಮನಾಗಿದ್ದಾರೆ. ಸುಪ್ರೀಂ ತಂದೆಯ ವಿದ್ಯೆಯಿಂದ ಆತ್ಮವು ಸುಪ್ರೀಂ (ಶ್ರೇಷ್ಠ) ಆಗುತ್ತದೆ. ಶ್ರೇಷ್ಠ ಎಂದು ಪವಿತ್ರರಿಗೆ ಹೇಳಲಾಗುತ್ತದೆ, ಈಗಂತೂ ಪತಿತರಾಗಿದ್ದೀರಿ, ತಂದೆಯು ಸದಾ ಪಾವನರಾಗಿದ್ದಾರೆ. ಅಂತರವಿದೆಯಲ್ಲವೆ! ಸದಾ ಪಾವನನೇ ಬಂದು ಎಲ್ಲರಿಗೆ ಆಸ್ತಿಯನ್ನು ಕೊಡಬೇಕು ಮತ್ತು ಕಲಿಸಬೇಕು ಆದ್ದರಿಂದ ಅವರೇ ಸ್ವಯಂ ಬಂದು ತಿಳಿಸುತ್ತಾರೆ- ನಾನು ನಿಮ್ಮ ತಂದೆಯಾಗಿದ್ದೇನೆ, ನನಗೆ ರಥವಂತೂ ಅವಶ್ಯವಾಗಿ ಬೇಕು ಇಲ್ಲದಿದ್ದರೆ ಆತ್ಮವು ಮಾತನಾಡುವುದಾದರೂ ಹೇಗೆ! ರಥವು ಪ್ರಸಿದ್ಧವಾಗಿದೆ, ಭಾಗ್ಯಶಾಲಿ ರಥವೆಂದು ಹೇಳುತ್ತಾರೆ ಅಂದಾಗ ಭಾಗ್ಯಶಾಲಿ ರಥವು ಮನುಷ್ಯನದಾಗಿದೆಯೇ ಹೊರತು ಯಾವುದೇ ಕುದುರೆಗಾಡಿಯ ಮಾತಿಲ್ಲ. ಮನುಷ್ಯರಿಗೆ ತಿಳಿಸಿಕೊಡಲು ಮನುಷ್ಯನ ರಥವೇ ಬೇಕು. ಇದನ್ನು ಮನುಷ್ಯರು ಕುದುರೆಗಾಡಿಯನ್ನು ತೋರಿಸಿಬಿಟ್ಟಿದ್ದಾರೆ. ಭಾಗ್ಯಶಾಲಿ ರಥವೆಂದು ಮನುಷ್ಯನಿಗೆ ಹೇಳಲಾಗುತ್ತದೆ. ಇಲ್ಲಂತೂ ಕೆಲಕೆಲವು ಪ್ರಣಿಗಳಿಗೂ ಸಹ ಬಹಳ ಒಳ್ಳೆಯ ಸೇವೆಯಾಗುತ್ತದೆ, ಅದು ಮನುಷ್ಯರಿಗೂ ಆಗುವುದಿಲ್ಲ. ನಾಯಿಯನ್ನು ಎಷ್ಟು ಪ್ರೀತಿ ಮಾಡುತ್ತಾರೆ, ಕುದುರೆ, ಹಸುವನ್ನೂ ಸಹ ಪ್ರೀತಿ ಮಾಡುತ್ತಾರೆ. ನಾಯಿಗಳ ಪ್ರದರ್ಶನಿಯಾಗುತ್ತದೆ. ಇದೆಲ್ಲವೂ ಸತ್ಯಯುಗದಲ್ಲಿರುವುದಿಲ್ಲ. ಲಕ್ಷ್ಮೀ-ನಾರಾಯಣರು ನಾಯಿಗಳನ್ನು ಸಾಕುತ್ತಾರೆಯೇ?

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಈ ಸಮಯದ ಮನುಷ್ಯರೆಲ್ಲರೂ ತಮೋಪ್ರಧಾನ ಬುದ್ಧಿಯವರಾಗಿದ್ದಾರೆ, ಅವರನ್ನು ಸತೋಪ್ರಧಾನರನ್ನಾಗಿ ಮಾಡಿದ್ದಾರೆ, ಸತ್ಯಯುಗದಲ್ಲಿ ಮನುಷ್ಯರು ಅವುಗಳ ಸೇವೆ ಮಾಡಲು ಕುದುರೆ ಮೊದಲಾದವುಗಳು ಈ ರೀತಿ ಇರುವುದೇ ಇಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಿಮ್ಮ ಗತಿಯು ನೋಡಿ ಏನಾಗಿಬಿಟ್ಟಿದೆ! ರಾವಣನು ಬಂದು ಈ ಗತಿಯನ್ನು ಮಾಡಿಬಿಟ್ಟಿದ್ದಾರೆ. ಈ ರಾವಣನು ನಿಮ್ಮ ಶತ್ರುವಾಗಿದ್ದಾನೆ ಆದರೆ ಈ ಶತ್ರುವಿನ ಜನ್ಮವು ಯಾವಾಗ ಆಗುತ್ತದೆಯೆಂದು ನಿಮಗೆ ತಿಳಿದಿಲ್ಲ. ಶಿವನ ಜನ್ಮದ ಬಗ್ಗೆಯೇ ತಿಳಿದಿಲ್ಲವೆಂದಾಗ ರಾವಣನ ಜನ್ಮದ ಬಗ್ಗೆಯೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ- ತ್ರೇತಾಯುಗದ ಅಂತ್ಯ ಮತ್ತು ದ್ವಾಪರದ ಆದಿಯಲ್ಲಿ ರಾವಣನು ಬರುತ್ತಾನೆ. ರಾವಣನಿಗೆ 10 ತಲೆಗಳನ್ನು ಏಕೆ ತೋರಿಸಿದ್ದಾರೆ? ಪ್ರತೀ ವರ್ಷವು ಏಕೆ ಸುಡುತ್ತಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮನುಷ್ಯರಿಂದ ದೇವತೆಗಳಾಗಲು ಓದುತ್ತೀರಿ, ಯಾರು ಓದುವುದಿಲ್ಲವೋ ಅವರು ದೇವತೆಗಳಾಗಲು ಸಾಧ್ಯವಿಲ್ಲ. ಮತ್ತೆ ಯಾವಾಗ ರಾವಣರಾಜ್ಯವು ಪ್ರಾರಂಭವಾಗುವುದೋ ಆಗ ಅವರು ಬರುತ್ತಾರೆ. ನಾವು ದೇವತಾಧರ್ಮದವರಾಗಿದ್ದೆವು, ಈಗ ಮತ್ತೆ ದೇವತಾಧರ್ಮದ ಸಸಿಯು ನಾಟಿಯಗುತ್ತಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ- ನಾನು ಪ್ರತೀ 5000 ವರ್ಷಗಳ ನಂತರ ಬಂದು ಈ ರೀತಿಯಾಗಿ ಓದಿಸುತ್ತೇನೆ. ಈ ಸಮಯದಲ್ಲಿ ಇಡೀ ಸೃಷ್ಟಿಯ ವೃಕ್ಷವು ಹಳೆಯದಾಗಿದೆ. ಅದು ಹೊಸದಾಗಿದ್ದಾಗ ಒಂದೇ ದೇವತಾ ಧರ್ಮವಿತ್ತು ನಂತರ ನಿಧಾನ-ನಿಧಾನವಾಗಿ ಕೆಳಗಿಳಿಯುತ್ತಾರೆ. ತಂದೆಯು ನಿಮಗೆ 84 ಜನ್ಮಗಳ ಲೆಕ್ಕವನ್ನು ತಿಳಿಸುತ್ತಾರೆ ಏಕೆಂದರೆ ತಂದೆಯು ಜ್ಞಾನಸಾಗರನಾಗಿದ್ದಾರಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಶಾಂತಿಯ ಶಕ್ತಿಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಶಾಂತಿಯ ಶಕ್ತಿಯಿಂದ ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ತಂದೆಯ ನೆನಪಿನಿಂದ ಶಕ್ತಿಯನ್ನು ತೆಗೆದುಕೊಂಡು ಗುಲಾಮೀತನದಿಂದ ಮುಕ್ತರಾಗಬೇಕಾಗಿದೆ, ಮಾಲೀಕರಾಗಬೇಕಾಗಿದೆ.

2. ಶ್ರೇಷ್ಠ ತಂದೆಯ ವಿದ್ಯೆಯನ್ನು ಓದಿ ಆತ್ಮವನ್ನು ಶ್ರೇಷ್ಠ ಮಾಡಿಕೊಳ್ಳಬೇಕಾಗಿದೆ. ಪವಿತ್ರತೆಯ ಮಾರ್ಗದಂತೆಯೇ ನಡೆದು ಪವಿತ್ರರಾಗಿ ಅನ್ಯರನ್ನೂ ಮಾಡಬೇಕಾಗಿದೆ. ಮಾರ್ಗದರ್ಶಕರಾಗಬೇಕಾಗಿದೆ.

ವರದಾನ: ಅಲ್ಫ್ ಅನ್ನು ತಿಳಿದುಕೊಳ್ಳುವುದು ಮತ್ತು ಪವಿತ್ರತೆಯ ಸ್ವಧರ್ಮವನ್ನು ತಮ್ಮದನ್ನಾಗಿಸಿಕೊಳ್ಳುವಂತಹ ವಿಶೇಷ ಆತ್ಮ ಭವ.
ಬಾಪ್ದಾದಾರವರಿಗೆ ನನ್ನ ಒಂದೊಂದು ಮಗುವೂ ವಿಶೇಷ ಆತ್ಮ ಆಗಿದ್ದಾರೆ ಎಂದು ಖುಷಿಯಾಗುವುದು, ಇಲ್ಲಾ ವೃದ್ಧರಿರಬಹುದು, ಅವಿದ್ಯೆವಂತರಾಗಿರಬಹುದು, ಚಿಕ್ಕ ಮಕ್ಕಳಾಗಿರಬಹುದು, ಯುವಕರಿರಬಹುದು, ಪ್ರವೃತ್ತಿಯವರಾಗಿರಬಹುದು ಆದರೆ ವಿಶ್ವದ ಮುಂದೆ ವಿಶೇಷವಾಗಿದ್ದಾರೆ. ಪ್ರಪಂಚದಲ್ಲಿ ಯಾರು ಎಷ್ಟೇ ದೊಡ್ಡ ನೇತಾ ಇರಬಹುದು, ಅಭಿನೇತಾ ಇರಬಹುದು ವೈಜ್ಞಾನಿಕರಿರಬಹುದು ಆದರೆ ಅಲ್ಫ್ ನನ್ನು ತಿಳಿದುಕೊಂಡಿಲ್ಲಾ ಎಂದರೆ ಬೇರೆ ಏನು ತಿಳಿದುಕೊಂಡಿದ್ದಾರೆ ! ನೀವು ನಿಶ್ಚಯ ಬುದ್ಧಿಯವರಾಗಿರುವಿರಿ. ಹೆಮ್ಮೆಯಿಂದ ಹೇಳುವಿರಿ, ನೀವು ಇನ್ನೂ ಹುಡುಕುತ್ತಲೇ ಇರಿ ನಾವಂತೂ ಅವರನ್ನು ಪಡೆದುಕೊಂಡು ಬಿಟ್ಟೆವು. ಪ್ರವೃತ್ತಿಯಲ್ಲಿರುತ್ತಾ ಪವಿತ್ರತೆಯ ಸ್ವಧರ್ಮವನ್ನು ತಮ್ಮದಾಗಿಸಿಕೊಂಡಿರುವಿರಿ ಆದ್ದರಿಂದ ಪವಿತ್ರ ಆತ್ಮ ವಿಶೇಷ ಆತ್ಮ ಆಗುತ್ತೀರಿ.
ಸ್ಲೋಗನ್: ಯಾರು ಸದಾ ಖುಷಿಯಿಂದ ಇರುತ್ತಾರೆ ಅವರೇ ಸ್ವಯಂಗೆ ಹಾಗೂ ಸರ್ವರಿಗೆ ಪ್ರಿಯರೆನಿಸುತ್ತಾರೆ.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.