ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 23, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 23, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

23/10/24
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ- ನಿಮ್ಮದು ಬುದ್ಧಿಯ ಯಾತ್ರೆಯಾಗಿದೆ, ಇದಕ್ಕೆ ಆತ್ಮಿಕ ಯಾತ್ರೆಯೆನ್ನಲಾಗುವುದು, ತಮ್ಮನ್ನು ತಾವು ಆತ್ಮವೆಂದು ತಿಳಿಯಿರಿ ಶರೀರವಲ್ಲ, ಶರೀರವೆಂದು ತಿಳಿಯುವುದು ಉಲ್ಟಾ ಆಗಿರುವುದು”
ಪ್ರಶ್ನೆ: ಮಾಯೆಯ ಪಾಂಪಿನಲ್ಲಿ ಮನುಷ್ಯರಿಗೆ ಯಾವ ಮರ್ಯಾದೆಯು ಸಿಗುತ್ತದೆ?
ಉತ್ತರ: ಆಸುರೀ ಮರ್ಯಾದೆ. ಮನುಷ್ಯರು ಯಾರಿಗೇ ಆದರೂ ಸ್ವಲ್ಪ ಕೊಡುತ್ತಾರೆ ನಾಳೆ ಅವಮರ್ಯಾದೆಯನ್ನು ಮಾಡುತ್ತಾರೆ. ಮಾಯೆಯು ಎಲ್ಲರ ಮರ್ಯಾದೆಯನ್ನು ತೆಗೆದುಹಾಕಿದೆ ಅರ್ಥಾತ್ ಪತಿತರನ್ನಾಗಿ ಮಾಡಿದೆ. ತಮ್ಮನ್ನು ದೈವೀ ಮರ್ಯಾದೆಯುಳ್ಳವರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ.

ಓಂ ಶಾಂತಿ. ಆತ್ಮೀಯ ತಂದೆಯು ಆತ್ಮಗಳೊಂದಿಗೆ ಕೇಳುತ್ತಾರೆ- ನೀವೆಲ್ಲರೂ ಎಲ್ಲಿ ಕುಳಿತಿದ್ದೀರಿ? ನೀವು ಹೇಳುತ್ತೀರಿ- ವಿಶ್ವದ ಆತ್ಮೀಯ ವಿದ್ಯಾಲಯದಲ್ಲಿ ಕುಳಿತಿದ್ದೇವೆ. ಆತ್ಮೀಯ ಎಂಬ ಅಕ್ಷರವಂತೂ ಅವರುಗಳಿಗೆ ಗೊತ್ತೇ ಇಲ್ಲ. ವಿಶ್ವವಿದ್ಯಾಲಯಗಳು ಪ್ರಪಂಚದಲ್ಲಿ ಅನೇಕ ಇವೆ. ಇಡೀ ವಿಶ್ವದಲ್ಲಿ ಇದೊಂದೇ ಆತ್ಮೀಯ ವಿದ್ಯಾಲಯವಾಗಿದೆ, ಕಲಿಸುತ್ತಿರುವವರೂ ಒಬ್ಬರೇ ಆಗಿದ್ದಾರೆ. ಏನನ್ನು ಓದಿಸುತ್ತಾರೆ? ಆತ್ಮೀಯ ಜ್ಞಾನ. ಅಂದಾಗ ಇದು ಆಧ್ಯಾತ್ಮಿಕ ವಿಶ್ವವಿದ್ಯಾಲಯ ಅರ್ಥಾತ್ ಆತ್ಮಿಕ ಪಾಠಶಾಲೆಯಾಗಿದೆ. ಆಧ್ಯಾತ್ಮಿಕ ಅರ್ಥಾತ್ ಆತ್ಮಿಕ ಜ್ಞಾನವನ್ನು ಓದಿಸುವವರು ಯಾರು? ಇದನ್ನೂ ಸಹ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಆತ್ಮಿಕ ತಂದೆಯೇ ಆತ್ಮಿಕ ಜ್ಞಾನವನ್ನು ಓದಿಸುತ್ತಾರೆ ಆದ್ದರಿಂದ ಅವರಿಗೆ ಶಿಕ್ಷಕನೆಂದೂ ಹೇಳುತ್ತಾರೆ, ಆತ್ಮಿಕ ತಂದೆಯೆಂದೂ ಹೇಳುತ್ತಾರೆ. ಒಳ್ಳೆಯದು, ಮತ್ತೇನಾಗುವುದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈ ಆತ್ಮಿಕ ಜ್ಞಾನದಿಂದ ನಾವು ನಮ್ಮ ಆದಿಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇವೆ. ಒಂದು ಧರ್ಮದ ಸ್ಥಾಪನೆ ಉಳಿದೆಲ್ಲಾ ಧರ್ಮಗಳ ವಿನಾಶವಾಗುವುದು. ಈ ಆಧ್ಯಾತ್ಮಿಕ ಜ್ಞಾನಕ್ಕೆ ಮತ್ತೆ ಧರ್ಮಗಳೊಂದಿಗೆ ಯಾವ ಸಂಬಂಧವಿದೆ ಎಂಬುದನ್ನೂ ಸಹ ಇಲ್ಲಿ ನೀವು ತಿಳಿದುಕೊಂಡಿದ್ದೀರಿ. ಒಂದು ಧರ್ಮದ ಸ್ಥಾಪನೆಯು ಈ ಆತ್ಮಿಕ ಜ್ಞಾನದಿಂದಲೇ ಆಗುತ್ತದೆ. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರಲ್ಲವೆ! ಅದಕ್ಕೆ ಆತ್ಮೀಯ ಪ್ರಪಂಚ ಎಂದು ಹೇಳುತ್ತಾರೆ. ಈ ಆತ್ಮಿಕ ಜ್ಞಾನದಿಂದ ನೀವು ರಾಜಯೋಗವನ್ನು ಕಲಿಯುತ್ತೀರಿ, ರಾಜಧಾನಿಯು ಸ್ಥಾಪನೆಯಾಗುತ್ತದೆ. ಒಳ್ಳೆಯದು- ಅನ್ಯ ಧರ್ಮದವರೊಂದಿಗೆ ಯಾವ ಸಂಬಂಧವಿದೆ? ಮತ್ತೆಲ್ಲಾ ಧರ್ಮಗಳು ವಿನಾಶವನ್ನು ಹೊಂದುತ್ತವೆ ಏಕೆಂದರೆ ನೀವು ಪಾವನರಾಗುತ್ತೀರಿ ಆದ್ದರಿಂದ ನಿಮಗೆ ಹೊಸ ಪ್ರಪಂಚವು ಬೇಕು, ಇಷ್ಟೆಲ್ಲಾ ಅನೇಕ ಧರ್ಮಗಳು ಸಮಾಪ್ತಿಯಾಗಿ ಒಂದು ಧರ್ಮವು ಇರುತ್ತದೆ. ಇದಕ್ಕೆ ವಿಶ್ವದಲ್ಲಿ ಶಾಂತಿಯ ರಾಜ್ಯದ ಸ್ಥಾಪನೆಯೆಂದು ಹೇಳಲಾಗುತ್ತದೆ. ಈಗ ಪತಿತ ಅಶಾಂತಿಯ ರಾಜ್ಯವಿದೆ ನಂತರ ಪಾವನ ಶಾಂತಿಯ ರಾಜ್ಯವಾಗುತ್ತದೆ. ಈ ಅನೇಕ ಧರ್ಮಗಳು, ಎಷ್ಟೊಂದು ಅಶಾಂತಿಯಿದೆ. ಎಲ್ಲರೂ ಪತಿತರೇ ಪತಿತರಾಗಿದ್ದಾರೆ, ರಾವಣನ ರಾಜ್ಯವಲ್ಲವೆ. ಈಗ ಮಕ್ಕಳಿಗೆ ಗೊತ್ತಿದೆ, ಈ ಐದು ವಿಕಾರಗಳನ್ನು ಅವಶ್ಯವಾಗಿ ಬಿಡಲೇಬೇಕಾಗಿದೆ. ಇವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಆತ್ಮವು ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆಯಲ್ಲವೆ. ಈಗ ತಂದೆಯು ನೀವು ಮಕ್ಕಳಿಗೆ ಪವಿತ್ರರಾಗುವ ಮಾತನ್ನು ತಿಳಿಸುತ್ತಾರೆ. ಆ ಪಾವನ ಪ್ರಪಂಚದಲ್ಲಿ ಯಾವುದೇ ದುಃಖವಿರುವುದಿಲ್ಲ. ಈ ಆಧ್ಯಾತ್ಮಿಕ ಜ್ಞಾನವನ್ನು ಓದಿಸುವವರು ಯಾರು? ಆತ್ಮಿಕ ತಂದೆ. ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಆತ್ಮಿಕ ತಂದೆಯು ಏನನ್ನು ಓದಿಸುತ್ತಾರೆ? ಆತ್ಮಿಕ ಜ್ಞಾನ, ಇದರಲ್ಲಿ ಯಾವುದೇ ಗ್ರಂಥ-ಪುಸ್ತಕಗಳ ಅವಶ್ಯಕತೆಯಿಲ್ಲ. ಕೇವಲ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು, ಪಾವನರಾಗಬೇಕಾಗಿದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಅಂತ್ಯಮತಿ ಸೋ ಗತಿಯಾಗುವುದು. ಇದು ನೆನಪಿನ ಯಾತ್ರೆಯಾಗಿದೆ. ಯಾತ್ರೆ ಎಂಬ ಶಬ್ಧವು ಚೆನ್ನಾಗಿದೆ. ಅವರು ಮಾಡುವ ಯಾತ್ರೆಗಳು ದೈಹಿಕ ಯಾತ್ರೆಗಳಾಗಿವೆ, ಇದು ಆತ್ಮಿಕ ಯಾತ್ರೆಯಾಗಿದೆ. ಅದರಲ್ಲಿ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ, ಕೈಕಾಲುಗಳನ್ನು ಉಪಯೋಗಿಸುತ್ತಾರೆ, ಇದರಲ್ಲಿ ಏನೂ ಇಲ್ಲ ಕೇವಲ ನೆನಪು ಮಾಡಬೇಕಾಗಿದೆ. ಭಲೆ ಎಲ್ಲಿಯಾದರೂ ನಡೆದಾಡಿ-ತಿರುಗಾಡಿ, ಎದ್ದೇಳಿ-ಕುಳಿತುಕೊಳ್ಳಿ ಕೇವಲ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಕಷ್ಟದ ಮಾತಿಲ್ಲ ಕೇವಲ ನೆನಪು ಮಾಡಬೇಕಷ್ಟೇ. ಇದಂತೂ ಸತ್ಯವಲ್ಲವೆ. ಮೊದಲು ನೀವು ವಿರುದ್ಧವಾಗಿ ನಡೆಯುತ್ತಿದ್ದಿರಿ, ತನ್ನನ್ನು ಆತ್ಮದ ಬದಲು ಶರೀರವೆಂದು ತಿಳಿಯುವುದಕ್ಕೆ ತಲೆಕೆಳಕಾಗಿ ನಿಲ್ಲುವುದೆಂದು ಹೇಳಲಾಗುತ್ತದೆ. ನನ್ನನ್ನು ಆತ್ಮವೆಂದು ತಿಳಿಯುವುದು ಸರಿಯಾಗಿದೆ. ಅಲ್ಲಾ (ಭಗವಂತ) ನು ಯಾವಾಗ ಬರುತ್ತಾನೆಯೋ ಆಗ ಪಾವನರನ್ನಾಗಿ ಮಾಡುತ್ತಾನೆ. ಭಗವಂತನದು ಪಾವನ ಪ್ರಪಂಚವಾಗಿದೆ, ರಾವಣನದು ಪತಿತ ಪ್ರಪಂಚವಾಗಿದೆ. ಎಲ್ಲರೂ ದೇಹಾಭಿಮಾನದಲ್ಲಿ ಉಲ್ಟಾ ಆಗಿಬಿಟ್ಟಿದ್ದಾರೆ, ಈಗ ಒಂದೇ ಬಾರಿ ಆತ್ಮಾಭಿಮಾನಿ ಆಗಬೇಕಾಗಿದೆ ಅಂದಾಗ ಈಗ ನೀವು ಅಲ್ಲಾನ ಮಕ್ಕಳಾಗಿದ್ದೀರಿ. ನಾನು ಅಲ್ಲಾ ಆಗಿದ್ದೇನೆಂದು ನೀವು ಹೇಳುವುದಿಲ್ಲ. ಯಾವಾಗಲೂ ಬೆರಳನ್ನು ಮೇಲಕ್ಕೆ ತೋರಿಸಿ ಹೇಳುತ್ತಾರೆ ಅಂದಮೇಲೆ ಅವರೇ ಅಲ್ಲಾ ಆಗಿದ್ದಾರೆಂದು ಸಿದ್ದವಾಗುತ್ತದೆ. ಅಂದಮೇಲೆ ಇಲ್ಲಿ ಅವಶ್ಯವಾಗಿ ಇನ್ನ್ಯಾವುದೋ ವಸ್ತುವಿದೆ ಎಂದರ್ಥ. ನಾನು ಆ ಅಲ್ಲಾ ತಂದೆಯ ಮಗುವಾಗಿದ್ದೇನೆ, ನಾವು ಪರಸ್ಪರ ಸಹೋದರರಾಗಿದ್ದೇವೆ. ಒಂದುವೇಳೆ ನಾನೇ ಅಲ್ಲಾ ಆಗಿದ್ದೇನೆಂದು ಹೇಳುವುದಾದರೆ ಅದು ಉಲ್ಟಾ ಆಗಿಬಿಡುತ್ತದೆ. ಅಂದರೆ ನಾವೆಲ್ಲರೂ ತಂದೆಯವರಾಗಿದ್ದೇವೆಂದರ್ಥ. ಆದರೆ ಇಲ್ಲ. ತಂದೆಯು ಒಬ್ಬರೇ ಆಗಿದ್ದಾರೆ ಅವರನ್ನು ನೆನಪು ಮಾಡಬೇಕಾಗಿದೆ. ಅವರು ಸದಾ ಪಾವನನಾಗಿದ್ದಾರೆ. ಅವರೇ ಕುಳಿತು ಓದಿಸುತ್ತಾರೆ. ಅತಿಚಿಕ್ಕ ಮಾತಿನಲ್ಲಿ ಮನುಷ್ಯರು ಎಷ್ಟೊಂದು ತಬ್ಬಿಬ್ಬಾಗುತ್ತಾರೆ. ಶಿವಜಯಂತಿಯನ್ನೂ ಆಚರಿಸುತ್ತಾರಲ್ಲವೆ.

ಕೃಷ್ಣನಿಗೆ ಇಂತಹ ಪದವಿಯನ್ನು ಯಾರು ಕೊಟ್ಟರು? ಶಿವತಂದೆ. ಶ್ರೀಕೃಷ್ಣನು ಸ್ವರ್ಗದ ಮೊದಲ ರಾಜಕುಮಾರನಾಗಿದ್ದಾನೆ. ಬೇಹದ್ದಿನ ತಂದೆಯೇ ಇವರಿಗೆ ರಾಜ್ಯಭಾಗ್ಯವನ್ನು ಕೊಡುತ್ತಾರೆ. ತಂದೆಯು ಯಾವ ಹೊಸ ಪ್ರಪಂಚ, ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆಯೋ ಅದರಲ್ಲಿ ಶ್ರೀಕೃಷ್ಣನು ನಂಬರ್ವನ್ ರಾಜಕುಮಾರನಾಗಿದ್ದಾನೆ. ತಂದೆಯು ಮಕ್ಕಳಿಗೆ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಮಕ್ಕಳಿಗೆ ಗೊತ್ತಿದೆ- ಸ್ವರ್ಗ ಯಾವುದಕ್ಕೆ ವೈಕುಂಠ ವಿಷ್ಣುಪುರಿ ಎಂದು ಹೇಳುತ್ತಾರೆ ಅದು ಕಳೆದುಹೋಗಿದೆ. ಅದು ಭವಿಷ್ಯದಲ್ಲಿ ಮತ್ತೆ ಬರಲಿದೆ. ಚಕ್ರವು ಸುತ್ತುತ್ತಾ ಇರುತ್ತದೆಯಲ್ಲವೆ. ಈ ಜ್ಞಾನವು ಈಗಲೇ ತಾವು ಮಕ್ಕಳಿಗೆ ಸಿಗುತ್ತದೆ. ಇದನ್ನು ಧಾರಣೆ ಮಾಡಿ ಮತ್ತೆ ಅನ್ಯರಿಗೂ ಮಾಡಿಸಬೇಕಾಗಿದೆ. ಪ್ರತಿಯೊಬ್ಬರೂ ಶಿಕ್ಷಕರಾಗಬೇಕಾಗಿದೆ. ಶಿಕ್ಷಕರಾಗುವುದರಿಂದ ಲಕ್ಷ್ಮೀ-ನಾರಾಯಣರಾಗುತ್ತೇವೆಂದಲ್ಲ. ಶಿಕ್ಷಕರಾದ ಮೇಲೆ ನೀವು ಪ್ರಜೆಗಳನ್ನೂ ಮಾಡಿಕೊಳ್ಳುತ್ತೀರಿ. ಎಷ್ಟು ಅನೇಕರ ಕಲ್ಯಾಣ ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಸ್ಮೃತಿಯಿರುತ್ತದೆ. ತಂದೆಯು ತಿಳಿಸುತ್ತಾರೆ- ರೈಲಿನಲ್ಲಿ ಬರುವಾಗಲೂ ಸಹ ಬ್ಯಾಡ್ಜನ್ನು ಕುರಿತು ಅನ್ಯರಿಗೆ ತಿಳಿಸಿ- ತಂದೆಯು ಪತಿತ-ಪಾವನ, ಮುಕ್ತಿದಾತನಾಗಿದ್ದಾರೆ, ಪಾವನರನ್ನಾಗಿ ಮಾಡುವವರಾಗಿದ್ದಾರೆ. ಮನುಷ್ಯರು ಅನೇಕರನ್ನು ನೆನಪು ಮಾಡುತ್ತಾರೆ. ಪ್ರಾಣಿಗಳಾದ ಆನೆ, ಕುದುರೆ ಇತ್ಯಾದಿ, ಮೀನು-ಮೊಸಳೆಯನ್ನೂ ಸಹ ಅವತಾರವೆಂದು ಹೇಳಿಬಿಡುತ್ತಾರೆ. ಅವುಗಳನೂ ಪೂಜಿಸುತ್ತಿರುತ್ತಾರೆ. ಭಗವಂತನು ಸರ್ವವ್ಯಾಪಿ ಅರ್ಥಾತ್ ಎಲ್ಲರಲ್ಲಿಯೂ ಇದ್ದಾರೆಂದು ತಿಳಿದು ಎಲ್ಲರಿಗೂ ತಿನ್ನಿಸಿ ಎಂದು ಹೇಳುತ್ತಾರೆ. ಒಂದುವೇಳೆ ಕಣ-ಕಣದಲ್ಲಿಯೂ ಭಗವಂತನಿದ್ದಾರೆಂದು ಹೇಳುವುದಾದರೆ ಮತ್ತೆ ಅವರಿಗೇಕೆ ತಿನ್ನಿಸುತ್ತೀರಿ! ಮನುಷ್ಯರು ತಿಳುವಳಿಕೆಯಿಂದ ಆಚೆ ಇದ್ದಾರೆ. ಲಕ್ಷ್ಮೀ-ನಾರಾಯಣ ಮೊದಲಾದ ದೇವಿ-ದೇವತೆಗಳು ಈ ಕೆಲಸವನ್ನು ಮಾಡುತ್ತಾರೆಯೇ! ಇಲ್ಲಿ ಇರುವೆಗಳಿಗೆ ಆಹಾರವನ್ನು ಕೊಡುತ್ತಾರೆ ತಂದೆಯು ತಿಳಿಸುತ್ತಾರೆ- ನೀವು ಧಾರ್ಮಿಕ ರಾಜಕಾರಣಿಗಳಾಗಿದ್ದೀರಿ. ನಿಮಗೆ ತಿಳಿದಿದೆ- ನಾವು ಧರ್ಮಸ್ಥಾಪನೆ ಮಾಡುತ್ತಿದ್ದೇವೆ, ರಾಜ್ಯಸ್ಥಾಪನೆ ಮಾಡುವುದಕ್ಕಾಗಿ ಸೈನ್ಯವಿದೆ ಆದರೆ ನೀವು ಗುಪ್ತವಾಗಿದ್ದೀರಿ. ನಿಮ್ಮದು ಆತ್ಮಿಕ ವಿಶ್ವವಿದ್ಯಾಲಯವಾಗಿದೆ ನಂತರ ಇಡೀ ಪ್ರಪಂಚದ ಮನುಷ್ಯಾತ್ಮರೆಲ್ಲರೂ ಈ ಧರ್ಮಗಳಿಂದ ಹೊರಬಂದು ತಮ್ಮ ಮನೆಗೆ ಹೋಗುತ್ತಾರೆ. ಎಲ್ಲಾ ಆತ್ಮಗಳೂ ಹೊರಟುಹೋಗುತ್ತಾರೆ. ಅದು ಆತ್ಮಗಳಿರುವ ಮನೆಯಾಗಿದೆ. ಈಗ ನೀವು ಸಂಗಮಯುಗದಲ್ಲಿ ಓದುತ್ತಿದ್ದೀರಿ ನಂತರ ಸತ್ಯಯುಗದಲ್ಲಿ ಬಂದು ರಾಜ್ಯ ಮಾಡುತ್ತೀರಿ, ಆಗ ಮತ್ತ್ಯಾವುದೇ ಧರ್ಮವಿರುವುದಿಲ್ಲ. ಗೀತೆಯಲ್ಲಿಯೂ ಇದೆಯಲ್ಲವೆ- ಬಾಬಾ, ತಾವು ಯಾವುದನ್ನು ಕೊಡುತ್ತೀರೋ ಅದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ ಅಂದರೆ ಆಕಾಶ ಭೂಮಿ ಎಲ್ಲವೂ ನಿಮ್ಮದಾಗಿರುತ್ತದೆ. ನೀವು ಇಡೀ ವಿಶ್ವಕ್ಕೆ ಮಾಲೀಕರಾಗಿಬಿಡುತ್ತೀರಿ. ಈ ಮಾತುಗಳನ್ನೂ ಸಹ ಈಗಲೇ ತಿಳಿದುಕೊಳ್ಳುತ್ತೀರಿ. ಹೊಸ ಪ್ರಪಂಚದಲ್ಲಿ ಈ ಮಾತುಗಳೆಲ್ಲವೂ ಮರೆತುಹೋಗುತ್ತದೆ. ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ನಾವು ಪ್ರತೀ 5000 ವರ್ಷಗಳ ನಂತರ ರಾಜ್ಯವನ್ನು ಪಡೆಯುತ್ತೇವೆ ಮತ್ತು ಕಳೆದುಕೊಳ್ಳುತ್ತೇವೆಂದು ನಿಮಗೆ ತಿಳಿದಿದೆ. ಈ 84 ಜನ್ಮಗಳ ಚಕ್ರವು ಸುತ್ತುತ್ತಲೇ ಇರುತ್ತದೆ ಅಂದಾಗ ವಿದ್ಯೆಯನ್ನು ಓದಲೇಬೇಕು ಆಗ ಮಾತ್ರ ಹೋಗಲು ಸಾಧ್ಯವಲ್ಲವೆ! ಓದದಿದ್ದರೆ ಹೊಸ ಪ್ರಪಂಚದಲ್ಲಿ ಹೋಗಲು ಸಾಧ್ಯವಿಲ್ಲ. ಅಲ್ಲಂತೂ ಅಪರಿಮಿತ ಸಂಖ್ಯೆಯಿದೆ. ನಂಬರ್ವಾರ್ ಪುರುಷಾರ್ಥದನುಸಾರ ಅಲ್ಲಿಗೆ ಹೋಗಿ ಪದವಿಯನ್ನು ಪಡೆಯುತ್ತೀರಿ. ಎಲ್ಲರೂ ಈ ವಿದ್ಯೆಯನ್ನು ಓದುವುದಿಲ್ಲ. ಒಂದುವೇಳೆ ಎಲ್ಲರೂ ಈ ವಿದ್ಯೆಯನ್ನು ಓದಿದ್ದೇ ಆದರೆ ಇನ್ನೊಂದು ಜನ್ಮದಲ್ಲಿ ರಾಜ್ಯವನ್ನೂ ಪಡೆಯಬೇಕು ಆದ್ದರಿಂದ ಓದುವವರದು ಒಂದು ಅಪರಿಮಿತ ಸಂಖ್ಯೆಯಿದೆ. ಸತ್ಯಯುಗ-ತ್ರೇತಾಯುಗದಲ್ಲಿ ಬರುವವರೇ ಓದುತ್ತಾರೆ. ಅನೇಕ ಮಂದಿ ನಿಮ್ಮ ಪ್ರಜೆಗಳಾಗುತ್ತಾರೆ, ತಡವಾಗಿ ಬರುವವರು ಪಾಪವನ್ನು ಭಸ್ಮ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪಾಪಾತ್ಮರು ಶಿಕ್ಷೆಗಳನ್ನನುಭವಿಸಿ ಅಲ್ಪಸ್ವಲ್ಪ ಪದವಿಯನ್ನು ಪಡೆಯುತ್ತಾರೆ. ಅವರಿಗೆ ಅಗೌರವವಾಗುತ್ತದೆ. ಯಾರೀಗ ಮಾಯೆಯ ಗೌರವವನ್ನು ಪಡೆಯುವವರಿದ್ದಾರೆಯೋ ಅವರು ಅಗೌರವಾನ್ವಿತರಾಗಿಬಿಡುತ್ತಾರೆ. ಇದು ಈಶ್ವರೀಯ ಗೌರವವಾಗಿದೆ, ಅದು ಆಸುರೀ ಗೌರವವಾಗಿದೆ. ಈಶ್ವರೀಯ ಅಥವಾ ದೈವೀಮರ್ಯಾದೆ ಮತ್ತು ಆಸುರೀಮರ್ಯಾದೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ನಾವು ಆಸುರೀ ಮರ್ಯಾದೆಯವರಾಗಿದ್ದೆವು ಈಗ ದೈವೀ ಮರ್ಯಾದಾವಂತರಾಗುತ್ತೇವೆ. ಆಸುರೀ ಮರ್ಯಾದೆಯಿಂದ ಸಂಪೂರ್ಣ ವಿಕಾರಿಗಳಾಗಿಬಿಡುತ್ತೀರಿ, ಇದು ಮುಳ್ಳುಗಳ ಪ್ರಪಂಚವಾಗಿದೆಯೆಂದರೆ ಅಮರ್ಯಾದೆ ಆಗಿಬಿಡುತ್ತದೆಯಲ್ಲವೆ. ನಂತರ ಎಷ್ಟೊಂದು ಮರ್ಯಾದಾವಂತರಾಗುತ್ತೀರಿ, ಯಥಾರಾಜ-ರಾಣಿ ತಥಾ ಪ್ರಜಾ. ಬೇಹದ್ದಿನ ತಂದೆಯೇ ನಿಮ್ಮ ಗೌರವವನ್ನು ಹೆಚ್ಚಿಸುತ್ತಾರೆ ಅಂದಮೇಲೆ ಅಷ್ಟೊಂದು ಪುರುಷಾರ್ಥವನ್ನೂ ಮಾಡಬೇಕಾಗಿದೆ. ನಾವು ನಮ್ಮ ಮರ್ಯಾದೆಯನ್ನು ಈ ರೀತಿ ಹೆಚ್ಚಿಸಿಕೊಳ್ಳಬೇಕು ಅರ್ಥಾತ್ ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮೀಯಾಗಬೇಕೆಂದು ಹೇಳುತ್ತಾರೆ. ಇದಕ್ಕಿಂತ ಶ್ರೇಷ್ಠ ಮರ್ಯಾದೆ ಮತ್ತ್ಯಾರದೂ ಇಲ್ಲ. ನರನಿಂದ ನಾರಾಯಣನಾಗುವ ಕಥೆಯನ್ನೇ ನೀವು ಹೇಳುತ್ತೀರಿ, ಅಮರಕಥೆ, ಮೂರನೇಯ ನೇತ್ರದ ಕಥೆ ಎಲ್ಲವೂ ಒಂದೇ ಆಗಿದೆ. ಈ ಕಥೆಯನ್ನು ಈಗಲೇ ನೀವು ಕೇಳುತ್ತೀರಿ.

ನೀವು ಮಕ್ಕಳು ವಿಶ್ವದ ಮಾಲೀಕರಾಗಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಬರುತ್ತೀರಿ. ನಂತರ ಮೊದಲ ನಂಬರಿನ ಜನ್ಮದಲ್ಲಿ ನೀವು ಬಹಳ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ರಾಮನು (ತಂದೆ) ಗೌರವಾನ್ವಿತರನ್ನಾಗಿ ಮಾಡುತ್ತಾರೆ, ರಾವಣನು ಗೌರವವನ್ನು ಕಳೆಯುತ್ತಾನೆ. ಈ ಜ್ಞಾನದಿಂದಲೇ ನೀವು ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುತ್ತೀರಿ, ಅರ್ಧಕಲ್ಪ ರಾವಣನೇ ಇರುವುದಿಲ್ಲ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಇರುತ್ತದೆ ಅದರಲ್ಲಿಯೂ ನಂಬರ್ವಾರ್. ಕಲ್ಪ-ಕಲ್ಪವೂ ಇದೇರೀತಿ ನೀವು ನಂಬರ್ವಾರ್ ಪುರುಷಾರ್ಥದನುಸಾರ ಬುದ್ಧಿವಂತರಾಗುತ್ತೀರಿ. ಮಾಯೆಯು ತಪ್ಪು ಮಾಡಿಸುತ್ತದೆ. ಬೇಹದ್ದಿನ ತಂದೆಯನ್ನು ನೆನಪು ಮಾಡುವುದನ್ನೇ ಮರೆತುಹೋಗುತ್ತೀರಿ. ಭಗವಂತನೇ ಓದಿಸುತ್ತಾರೆ, ಅವರು ನಮ್ಮ ಶಿಕ್ಷಕನಾಗಿದ್ದಾರೆ. ಇದನ್ನು ತಿಳಿದ ಮೇಲೂ ಸಹ ಗೈರು ಹಾಜರಿಯಾಗುತ್ತಿರುತ್ತಾರೆ, ಓದುವುದೇ ಇಲ್ಲ ಏಕೆಂದರೆ ಭಕ್ತಿಯಲ್ಲಿ ಅಲ್ಲಿ-ಇಲ್ಲಿ ಅಲೆದಾಡುವ ಹವ್ಯಾಸವಾಗಿಬಿಟ್ಟಿದೆ. ವಿದ್ಯಾಭ್ಯಾಸದಲ್ಲಿ ಯಾರಿಗೆ ಗಮನವಿರುವುದಿಲ್ಲವೋ ಅವರನ್ನು ನೌಕರಿಯಲ್ಲಿ ತೊಡಗಿಸಲಾಗುತ್ತದೆ. ಅಗಸ ಮೊದಲಾದ ಕೆಲಸವನ್ನು ಮಾಡುತ್ತಾರೆ ಅದರಲ್ಲಿ ವಿದ್ಯೆಯ ಅವಶ್ಯಕತೆಯೇನಿದೆ? ವ್ಯಾಪಾರದಲ್ಲಿ ಮನುಷ್ಯರು ಪದಮಾಪದಮಪತಿಗಳಾಗುತ್ತಾರೆ, ನೌಕರಿಯಲ್ಲಿ ಇಷ್ಟೊಂದು ಆಗುವುದಿಲ್ಲ, ಅದರಲ್ಲಂತೂ ಒಂದು ನಿಗಧಿತ ಸಂಬಳವು ಸಿಗುತ್ತದೆ. ಈಗ ನಿಮ್ಮದು ವಿಶ್ವದ ರಾಜ್ಯಭಾಗ್ಯಕ್ಕಾಗಿ ವಿದ್ಯೆಯಾಗಿದೆ. ನಾವು ಭಾರತವಾಸಿಗಳಾಗಿದ್ದೇವೆ ಎಂದು ಇಲ್ಲಿ ಹೇಳುತ್ತಾರಲ್ಲವೆ ನಂತರ ನಿಮಗೆ ವಿಶ್ವದ ಮಾಲೀಕರೆಂದು ಹೇಳುತ್ತಾರೆ. ಅಲ್ಲಿ ದೇವಿ-ದೇವತಾ ಧರ್ಮದ ವಿನಃ ಮತ್ತ್ಯಾವುದೇ ಧರ್ಮವಿರುವುದಿಲ್ಲ. ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದರೆ ಅವರ ಮತದಂತೆ ನಡೆಯಬೇಕು. ಯಾವುದೇ ವಿಕಾರದ ಭೂತವಿರಬಾರದು. ಈ ಭೂತವು ಬಹಳ ಕೆಟ್ಟದ್ದಾಗಿದೆ. ಕಾಮಿಯ ಆರೋಗ್ಯವು ಹಾಳಾಗುತ್ತಿರುತ್ತದೆ, ಶಕ್ತಿಯು ಕಡಿಮೆಯಾಗುತ್ತಿರುತ್ತದೆ. ಈ ಕಾಮವಿಕಾರವೇ ಪೂರ್ಣಶಕ್ತಿಯನ್ನು ಸಮಾಪ್ತಿ ಮಾಡಿಬಿಟ್ಟಿದೆ. ನಿಮ್ಮ ಶಕ್ತಿಯು ಕಡಿಮೆಯಾಗುತ್ತಿರುತ್ತದೆ. ಈ ಕಾಮವಿಕಾರವೇ ಪೂರ್ಣಶಕ್ತಿಯನ್ನು ಸಮಾಪ್ತಿ ಮಾಡಿಬಿಟ್ಟಿದೆ. ನಿಮ್ಮ ಅದೃಷ್ಟವೇನಾಗಿದೆ, ಆಯಸ್ಸು ಕಡಿಮೆಯಾಗುತ್ತಾ ಹೋಗಿದೆ. ಭೋಗಿಗಳಾಗಿಬಿಟ್ಟಿದ್ದೀರಿ! ಕಾಮಿಯು ಭೋಗಿ-ರೋಗಿ ಎಲ್ಲವೂ ಆಗಿಬಿಡುತ್ತಾರೆ. ಸತ್ಯಯುಗದಲ್ಲಿ ವಿಕಾರವಿರುವುದಿಲ್ಲ ಅಂದಾಗ ಯೋಗಿಯಾಗಿರುತ್ತಾರೆ. ಆದ್ದರಿಂದ ಸದಾ ಆರೋಗ್ಯವಂತರು ಮತ್ತು ಆಯಸ್ಸೂ ಸಹ 150 ವರ್ಷವಿರುತ್ತದೆ. ಅಲ್ಲಿ ಕಾಲವೂ ಕಬಳಿಸುವುದಿಲ್ಲ. ಇದಕ್ಕೆ ಒಂದು ಕಥೆಯನ್ನೂ ಸಹ ಹೇಳುತ್ತಾರೆ- ಒಬ್ಬರು ಮೊದಲು ಸುಖವು ಬೇಕೋ ಅಥವಾ ದುಃಖವು ಬೇಕೋ ಎಂದು ಕೇಳಿದಾಗ ಅದಕ್ಕೆ ಮತ್ತೊಬ್ಬರು ಮೊದಲು ಸುಖವು ಬೇಕೆಂದು ಹೇಳಿ ಎಂದು ಸನ್ನೆ ಮಾಡಿದರು ಏಕೆಂದರೆ ಸುಖದಲ್ಲಿ ಹೋದರೆ ಅಲ್ಲಿ ಮೃತ್ಯುವು ಬರುವುದೇ ಇಲ್ಲ. ಒಳಗೆ ಪ್ರವೇಶಿಸುವುದಕ್ಕೆ ಸಾಧ್ಯವಿಲ್ಲ. ಇದರ ಬಗ್ಗೆ ಒಂದು ಕಥೆಯನ್ನೇ ಮಾಡಿಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ- ನೀವು ಸುಖಧಾಮದಲ್ಲಿದ್ದಾಗ ಯಾವುದೇ ದುಃಖವಿರುವುದೇ ಇಲ್ಲ, ರಾವಣರಾಜ್ಯವೇ ಇರುವುದಿಲ್ಲ ನಂತರ ವಿಕಾರಿಗಳಾದಾಗ ಮೃತ್ಯುವಿರುತ್ತದೆ. ಕಾಲವು ತೆಗೆದುಕೊಂಡು ಹೋಯಿತು ಮತ್ತೆ ಇದಾಯಿತು, ಅದಾಯಿತೆಂದು ಎಷ್ಟೊಂದು ಕಥೆಗಳನ್ನು ರಚಿಸುತ್ತಾರೆ. ಸ್ಥೂಲಕಣ್ಣಿಗೆ ಮೃತ್ಯುವು ಕಾಣಿಸುವುದಿಲ್ಲ, ಆತ್ಮವೂ ಕಾಣಿಸುವುದಿಲ್ಲ. ಇದಕ್ಕೆ ದಂತ ಕಥೆಗಳೆಂದು ಹೇಳಲಾಗುತ್ತದೆ. ಬಹಳಷ್ಟು ಕನರಸದ ಕಥೆಗಳಿವೆ. ಈಗ ತಂದೆಯು ತಿಳಿಸುತ್ತಾರೆ- ಸತ್ಯಯುಗದಲ್ಲಿ ಎಂದೂ ಅಕಾಲ ಮೃತ್ಯುವಾಗುವುದಿಲ್ಲ, ಆಯಸ್ಸು ಧೀರ್ಘವಾಗಿರುತ್ತದೆ ಮತ್ತು ಪವಿತ್ರವಾಗಿರುತ್ತಾರೆ. 16 ಕಲೆಯಿಂದ ಕಲೆಗಳು ಕಡಿಮೆಯಾಗುತ್ತಾ ಆಗುತ್ತಾ ಒಮ್ಮೆಲೆ ಕಲಾಹೀನರಾಗಿಬಿಡುತ್ತಾರೆ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹಾಡುತ್ತಾರೆ. ಮಕ್ಕಳ ಒಂದು ನಿರ್ಗುಣ ಸಂಸ್ಥೆಯೂ ಇದೆ, ನಮ್ಮಲ್ಲಿ ಯಾವುದೇ ಗುಣವಿಲ್ಲ. ನಮ್ಮನ್ನು ಗುಣವಂತರನ್ನಾಗಿ ಮಾಡಿ, ಸರ್ವಗುಣ ಸಂಪನ್ನರನ್ನಾಗಿ ಮಾಡಿ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ಈಗ ತಿಳಿಸುತ್ತಾರೆ- ಪವಿತ್ರರಾಗಬೇಕಾಗಿದೆ. ಎಲ್ಲರೂ ಶರೀರವನ್ನು ಬಿಡಬೇಕಾಗಿದೆ. ಇಷ್ಟು ಮಂದಿ ಮನುಷ್ಯರು ಸತ್ಯಯುಗದಲ್ಲಿ ಬರುವುದಿಲ್ಲ. ಈಗಂತೂ ಬಹಳಷ್ಟು ಜನಸಂಖ್ಯೆಯಾಗಿಬಿಟ್ಟಿದೆ! ಸತ್ಯಯುಗದಲ್ಲಿ ಮಗುವೂ ಸಹ ಯೋಗಬಲದಿಂದ ಜನಿಸುತ್ತದೆ. ಇಲ್ಲಂತೂ ನೋಡಿ, ಎಷ್ಟೊಂದು ಮಕ್ಕಳಿಗೆ ಜನ್ಮ ಕೊಡುತ್ತಿರುತ್ತಾರೆ! ಆದರೂ ಸಹ ಮತ್ತೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ತಂದೆಯನ್ನು ನೆನಪು ಮಾಡಬೇಕಾಗಿದೆ. ಆ ತಂದೆಯೇ ಓದಿಸುತ್ತಾರೆ. ಓದಿಸುವ ಶಿಕ್ಷಕರು ನೆನಪಿರುತ್ತಾರೆ, ನಿಮಗೆ ತಿಳಿದಿದೆ- ಶಿವತಂದೆಯು ನಮಗೆ ಓದಿಸುತ್ತಿದ್ದಾರೆ, ಏನು ಓದಿಸುತ್ತಿದ್ದಾರೆಂಬುದೂ ಸಹ ನಿಮಗೆ ತಿಳಿದಿದೆ. ಅಂದಾಗ ತಂದೆ ಅಥವಾ ಶಿಕ್ಷಕರೊಂದಿಗೆ ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಒಟ್ಟಿಗೆ ಓದುವ ಇಂತಹ ವಿಶ್ವವಿದ್ಯಾಲಯವನ್ನು ಎಂದಾದರೂ ನೋಡಿದ್ದೀರಾ? ಇದು ಒಂದೇ ಶಾಲೆ, ಓದಿಸುವ ಶಿಕ್ಷಕರೂ ಒಬ್ಬರೇ ಮತ್ತೆ ಯಾವುದರಲ್ಲಿ ಬ್ರಹ್ಮನೂ ಸಹ ಓದುತ್ತಿದ್ದಾರೆ! ಆಶ್ಚರ್ಯವಾಗಿದೆಯಲ್ಲವೆ. ಶಿವತಂದೆಯು ನಿಮಗೆ ಓದಿಸುತ್ತಾರೆ, ಇದನ್ನು ಬ್ರಹ್ಮಾರವರು ಕೇಳುತ್ತಾರೆ. ಮಕ್ಕಳು ಅಥವಾ ವೃದ್ಧರು ಯಾರು ಬೇಕಾದರೂ ಓದಬಹುದು. ಈ ಜ್ಞಾನವನ್ನು ನೀವೂ ಸಹ ಓದುತ್ತೀರಲ್ಲವೆ. ಈಗ ಓದುವುದನ್ನು ಪ್ರಾರಂಭ ಮಾಡಿದ್ದೀರಿ, ದಿನ-ಪ್ರತಿದಿನ ಸಮಯವು ಕಡಿಮೆಯಾಗುತ್ತಾ ಹೋಗುತ್ತದೆ. ಈಗ ನೀವು ಬೇಹದ್ದಿನಲ್ಲಿದ್ದೀರಿ. ಈ 5000 ವರ್ಷಗಳ ಚಕ್ರವು ಹೇಗೆ ಕಳೆಯಿತೆಂದು ನಿಮಗೆ ತಿಳಿದಿದೆ. ಮೊದಲು ಒಂದು ಧರ್ಮವಿತ್ತು, ಈಗ ಅನೇಕ ಧರ್ಮಗಳಾಗಿವೆ. ಈಗ ಇದಕ್ಕೆ ಸ್ವರ್ಗವೆಂದು ಹೇಳುವುದಿಲ್ಲ. ಇದಕ್ಕೆ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವೆಂದು ಹೇಳಲಾಗುತ್ತದೆ. ಮೊಟ್ಟಮೊದಲು ಬಹಳ ಶಕ್ತಿಶಾಲಿ ಧರ್ಮವಿತ್ತು, ಇಡೀ ವಿಶ್ವದ ಮಾಲೀಕರಾಗಿದ್ದಿರಿ, ಈಗ ಅಧರ್ಮಿಗಳಾಗಿಬಿಟ್ಟಿದ್ದೀರಿ. ಯಾವುದೇ ಧರ್ಮವಿಲ್ಲ. ಎಲ್ಲರಲ್ಲಿ 5 ವಿಕಾರಗಳಿವೆ, ಬೇಹದ್ದಿನ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಧೈರ್ಯವನ್ನು ತಾಳಿ, ಇನ್ನು ಸ್ವಲ್ಪ ಸಮಯವಷ್ಟೇ ರಾವಣರಾಜ್ಯದಲ್ಲಿರುತ್ತೀರಿ. ಈಗ ಚೆನ್ನಾಗಿ ಓದುತ್ತೀರೆಂದರೆ ಸುಖಧಾಮಕ್ಕೆ ಹೊರಟುಹೋಗುತ್ತೀರಿ. ಇದು ದುಃಖಧಾಮವಾಗಿದೆ, ನೀವು ತಮ್ಮ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಿ. ಈ ದುಃಖಧಾಮವನ್ನು ಮರೆಯುತ್ತಾ ಹೋಗಿ. ಆತ್ಮಗಳ ತಂದೆಯು ಆದೇಶ ನೀಡುತ್ತಾರೆ- ಹೇ ಆತ್ಮಿಕ ಮಕ್ಕಳೇ! ಎಂದು. ಆತ್ಮಿಕ ಮಕ್ಕಳು ಈ ಕರ್ಮೇಂದ್ರಿಯಗಳ ಮೂಲಕ ಕೇಳಿದಿರಿ, ನೀವಾತ್ಮರು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಾಗ ನಿಮ್ಮ ಶರೀರವೂ ಸಹ ಬಹಳ ಸುಂದರ, ಸತೋಪ್ರಧಾನವಾಗಿತ್ತು, ನೀವು ಬಹಳ ಧನವಂತರಾಗಿದ್ದಿರಿ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಏನಾಗಿಬಿಟ್ಟಿದ್ದೀರಿ! ರಾತ್ರಿ-ಹಗಲಿನ ಅಂತರವಿದೆ. ಹಗಲಿನಲ್ಲಿ ನಾವು ಸ್ವರ್ಗದಲ್ಲಿದ್ದೆವು, ರಾತ್ರಿಯಲ್ಲಿ ನಾವು ನರಕದಲ್ಲಿದ್ದೇವೆ. ಇದಕ್ಕೆ ಬ್ರಹ್ಮನ ಸೋ ಬ್ರಾಹ್ಮಣರ ರಾತ್ರಿಯೆಂದು ಹೇಳಲಾಗುತ್ತದೆ. 63 ಜನ್ಮಗಳ ಕಾಲ ಬಹಳ ಪೆಟ್ಟನ್ನು ತಿನ್ನುತ್ತಿರುತ್ತಾರೆ, ಅಂಧಕಾರದ ರಾತ್ರಿಯಾಗಿದೆಯಲ್ಲವೆ. ಅಲೆಯುತ್ತಿರುತ್ತಾರೆ. ಭಗವಂತನು ಯಾರಿಗೂ ಸಿಗುವುದೇ ಇಲ್ಲ, ಇದಕ್ಕೆ ಸ್ಮೃತಿ-ವಿಸ್ಮೃತಿಯ ಆಟವೆಂದು ಹೇಳಲಾಗುತ್ತದೆ ಅಂದಾಗ ತಂದೆಯೇ ನೀವು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸಮಾಚಾರವನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಅಲ್ಲಿ-ಇಲ್ಲಿ ಅಲೆದಾಡುವ ಹವ್ಯಾಸವನ್ನು ಬಿಟ್ಟು ಭಗವಂತನ ವಿದ್ಯೆಯನ್ನು ಗಮನವಿಟ್ಟು ಓದಬೇಕಾಗಿದೆ. ಎಂದೂ ಗೈರು ಹಾಜರಿಯಾಗಬಾರದು. ತಂದೆಯ ಸಮಾನ ಶಿಕ್ಷಕರೂ ಆಗಬೇಕು. ಓದಿ ಮತ್ತೆ ಅನ್ಯರಿಗೂ ಓದಿಸಬೇಕಾಗಿದೆ.

2. ಸತ್ಯನಾರಾಯಣನ ಸತ್ಯಕಥೆಯನ್ನು ಕೇಳಿ ನರನಿಂದ ನಾರಾಯಣರಾಗಬೇಕಾಗಿದೆ, ತಮ್ಮನ್ನು ತಾವೇ ಇಂತಹ ಮರ್ಯಾದಾ ಪುರುಷೋತ್ತಮರನ್ನಾಗಿ (ಗೌರವಾನ್ವಿತ) ಮಾಡಿಕೊಳ್ಳಬೇಕಾಗಿದೆ. ಎಂದೂ ಸಹ ಭೂತಗಳಿಗೆ ವಶೀಭೂತರಾಗಿ ಗೌರವವನ್ನು ಕಳೆದುಕೊಳ್ಳಬಾರದು.

ವರದಾನ: ಸಂಬಂಧ ಮತ್ತು ಪ್ರಾಪ್ತಿಯ ಸ್ಮೃತಿಯ ಮೂಲಕ ಸದಾ ಖುಷಿಯಲ್ಲಿರುವಂತಹ ಸಹಜಯೋಗಿ ಭವ
ಸಹಜಯೋಗಿಯ ಆಧಾರವಾಗಿದೆ-ಸಂಬಂಧ ಮತ್ತು ಪ್ರಾಪ್ತಿ. ಸಂಬಂಧದ ಆಧಾರದ ಮೇಲೆ ಪ್ರೀತಿ ಹುಟ್ಟುತ್ತದೆ ಮತ್ತು ಎಲ್ಲಿ ಪ್ರಾಪ್ತಿಗಳಿರುವುದು ಅಲ್ಲಿ ಮನಸ್ಸು-ಬುದ್ಧಿ ಸಹಜವಾಗಿಯೇ ಹೋಗುವುದು. ಆದ್ದರಿಂದ ಸಂಬಂಧದಲ್ಲಿ ನನ್ನತನದ ಅಧಿಕಾರದಿಂದ ನೆನಪು ಮಾಡಿ, ಹೃದಯದಿಂದ ಹೇಳಿ ನನ್ನ ಬಾಬಾ ಮತ್ತು ತಂದೆಯಿಂದ ಏನೆಲ್ಲಾ ಶಕ್ತಿಗಳ ಜ್ಞಾನದ, ಗುಣಗಳ, ಸುಖ-ಶಾಂತಿ, ಆನಂದ, ಪ್ರೇಮದ ಖಜಾನೆ ಸಿಕ್ಕಿದೆ ಅದನ್ನು ಸ್ಮೃತಿಯಲ್ಲಿ ಇಮರ್ಜ್ ಮಾಡಿಕೊಳ್ಳಿ, ಇದರಿಂದ ಅಪಾರ ಖುಷಿ ಇರುವುದು ಮತ್ತು ಸಹಜಯೋಗಿಗಳೂ ಆಗುವಿರಿ.
ಸ್ಲೋಗನ್: ದೇಹ-ಭಾನದಿಂದ ಮುಕ್ತರಾಗಿ ಆಗ ಬೇರೆ ಎಲ್ಲಾ ಬಂಧನಗಳು ಸ್ವತಃವಾಗಿ ಸಮಾಪ್ತಿಯಾಗಿಬಿಡುವುದು.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.