| 24/10/24 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ- ಬೇಹದ್ದಿನ ಅಪಾರ ಖುಷಿಯ ಅನುಭವ ಮಾಡಲು ಪ್ರತೀ ಘಳಿಗೆ ತಂದೆಯ ಜೊತೆಯಲ್ಲಿರಿ” | |
| ಪ್ರಶ್ನೆ: | ತಂದೆಯಿಂದ ಯಾವ ಮಕ್ಕಳಿಗೆ ಬಹಳ-ಬಹಳ ಶಕ್ತಿಯು ಸಿಗುತ್ತದೆ? |
| ಉತ್ತರ: | ನಾವು ಬೇಹದ್ದಿನ ವಿಶ್ವಪರಿವರ್ತನೆ ಮಾಡುವವರಾಗಿದ್ದೇವೆ, ನಾವು ಬೇಹದ್ದಿನ ವಿಶ್ವದ ಮಾಲೀಕರಾಗಬೇಕಾಗಿದೆ. ನಮಗೆ ಓದಿಸುವವರು ಸ್ವಯಂ ವಿಶ್ವದ ಮಾಲೀಕ ತಂದೆಯಾಗಿದ್ದಾರೆ ಎಂದು ಯಾರಿಗೆ ನಿಶ್ಚಯವಿರುತ್ತದೆಯೋ ಅಂತಹ ಮಕ್ಕಳಿಗೆ ಬಹಳ ಶಕ್ತಿಯು ಸಿಗುತ್ತದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಅಥವಾ ಆತ್ಮಗಳಿಗೆ ಆತ್ಮಿಕ ತಂದೆಯಾದ ಪರಮಪಿತ ಪರಮಾತ್ಮನು ಓದಿಸುತ್ತಾರೆ ಮತ್ತು ತಿಳಿಸಿಕೊಡುತ್ತಾರೆ ಏಕೆಂದರೆ ಮಕ್ಕಳೇ ಪಾವನರಾಗಿ ಪುನಃ ಸ್ವರ್ಗದ ಮಾಲೀಕರಾಗುವವರಿದ್ದೀರಿ. ಇಡೀ ವಿಶ್ವದ ತಂದೆಯಂತೂ ಒಬ್ಬರೇ ಆಗಿದ್ದಾರೆ. ಇದು ಮಕ್ಕಳಿಗೆ ನಿಶ್ಚಯವಿರುತ್ತದೆ. ಇಡೀ ವಿಶ್ವದ ತಂದೆ, ಎಲ್ಲಾ ಆತ್ಮಗಳ ತಂದೆಯು ನೀವು ಮಕ್ಕಳಿಗೆ ಓದಿಸುತ್ತಿದ್ದಾರೆ. ಇಷ್ಟು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆಯೇ? ಏಕೆಂದರೆ ಬುದ್ಧಿಯು ತಮೋಪ್ರಧಾನ, ಕಬ್ಬಿಣದ ಪಾತ್ರೆಯ ಸಮಾನವಾಗಿದೆ. ಬುದ್ಧಿಯು ಆತ್ಮದಲ್ಲಿದೆ ಅಂದಮೇಲೆ ಇಷ್ಟು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೇ? ಬೇಹದ್ದಿನ ತಂದೆಯು ನಮಗೆ ಓದಿಸುತ್ತಿದ್ದಾರೆ. ನಾವು ಬೇಹದ್ದಿನ ವಿಶ್ವವನ್ನೇ ಪರಿವರ್ತನೆ ಮಾಡುತ್ತೇವೆಂದು ಅರಿತುಕೊಳ್ಳುವಷ್ಟು ಶಕ್ತಿಯು ಸಿಗುತ್ತದೆ. ಈ ಸಮಯದಲ್ಲಿ ಬೇಹದ್ದಿನ ಸೃಷ್ಟಿಗೆ ನರಕವೆಂದು ಹೇಳಲಾಗುತ್ತದೆ. ಇದು ನಿಮಗೆ ತಿಳಿದಿದೆಯೋ ಅಥವಾ ಈಗಲೂ ಸಹ ಬಡವರು ನರಕದಲ್ಲಿದ್ದಾರೆ, ಉಳಿದ ಸನ್ಯಾಸಿಗಳು, ಸಾಹುಕಾರರು, ದೊಡ್ಡ ಸ್ಥಾನಮಾನದಲ್ಲೋ, ಸ್ವರ್ಗದಲ್ಲಿದ್ದಾರೆಂದು ತಿಳಿಯುತ್ತೀರೋ? ತಂದೆಯು ತಿಳಿಸುತ್ತಾರೆ- ಈ ಸಮಯದಲ್ಲಿ ಎಲ್ಲಾ ಮನುಷ್ಯಾತ್ಮರು ನರಕದಲ್ಲಿದ್ದಾರೆ. ಆತ್ಮವು ಇಷ್ಟು ಸೂಕ್ಷ್ಮವಾಗಿದೆ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಇಷ್ಟು ಚಿಕ್ಕಆತ್ಮದಲ್ಲಿ ಪೂರ್ಣಜ್ಞಾನವು ನಿಲ್ಲುತ್ತದೆಯೋ ಅಥವಾ ಮರೆತು ಹೋಗುತ್ತೀರೋ? ವಿಶ್ವದ ಸರ್ವಆತ್ಮಗಳ ತಂದೆಯು ನಿಮ್ಮ ಸನ್ಮುಖದಲ್ಲಿ ಕುಳಿತು ನಿಮಗೆ ಓದಿಸುತ್ತಿದ್ದಾರೆ. ಅವಶ್ಯವಾಗಿ ತಂದೆಯು ನಮ್ಮ ಜೊತೆಯಲ್ಲಿಯೇ ಇದ್ದಾರೆಂದು ಇಡೀ ದಿನ ಬುದ್ಧಿಯಲ್ಲಿರುತ್ತದೆಯೇ? ಎಷ್ಟು ಸಮಯ ಕುಳಿತುಕೊಳ್ಳುತ್ತದೆ? ಒಂದು ಘಂಟೆಯೋ, ಅರ್ಧ ಗಂಟೆಯೋ ಅಥವ ಇಡೀ ದಿನವೋ? ಇದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಕ್ಕೂ ಶಕ್ತಿಯು ಬೇಕು. ಪರಮಪಿತ ಪರಮಾತ್ಮನೇ ನಿಮಗೆ ಓದಿಸುತ್ತಾರೆ. ಹೊರಗೆ ತಮ್ಮ ಮನೆಯಲ್ಲಿದ್ದಾಗ ಅಲ್ಲಿ ಜೊತೆಯಿರುವುದಿಲ್ಲ. ಇಲ್ಲಿ ಪ್ರತ್ಯಕ್ಷ ರೂಪದಲ್ಲಿ ತಂದೆಯು ನಿಮ್ಮ ಜೊತೆಯಲ್ಲಿದ್ದಾರೆ. ಯಾರ ಪತಿಯಾದರೂ ಹೊರಗಡೆಯಿದ್ದು ಪತ್ನಿಯು ಇಲ್ಲಿದ್ದರೆ ನನ್ನ ಪತಿಯು ನನ್ನ ಜೊತೆಯಿದ್ದಾರೆಂದು ಹೇಳುತ್ತಾರೆಯೇ? ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ತಂದೆಯು ಎಲ್ಲರಲ್ಲಿಯೂ ಇಲ್ಲ, ತಂದೆಯು ಅವಶ್ಯವಾಗಿ ಒಂದು ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಅಂದಮೇಲೆ ಬೇಹದ್ದಿನ ತಂದೆಯು ನಮ್ಮನ್ನು ಹೊಸಪ್ರಪಂಚದ ಮಾಲೀಕರನ್ನಾಗಿ ಮಾಡಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆಂದು ಬುದ್ಧಿಯಲ್ಲಿ ಬರುತ್ತದೆಯೇ? ನಾವು ಇಡೀ ವಿಶ್ವದಲ್ಲಿ ಮಾಲೀಕರಾಗಲು ಯೋಗ್ಯರಾಗಿದ್ದೇವೆ ಎನ್ನುವಷ್ಟಾದರೂ ತಮ್ಮನ್ನು ತಿಳಿದುಕೊಳ್ಳುತ್ತೀರಾ? ಇದು ಬಹಳ ಖುಷಿಯ ಮಾತಾಗಿದೆ. ಇದಕ್ಕಿಂತ ಹೆಚ್ಚಿನ ಖುಷಿಯ ಖಜಾನೆಯು ಮತ್ತ್ಯಾರಿಗೂ ಸಿಗುವುದಿಲ್ಲ. ಒಂದುವೇಳೆ ನಾವು ಇಂತಹ ದೇವತೆಗಳಾಗುವವರಿದ್ದೇವೆ ಎಂಬುದಾದರೂ ಬುದ್ಧಿಯಲ್ಲಿದೆಯೇ? ಆ ಚಲನೆಯಿದೆಯೇ? ಅವರಂತೆ ಮಾತನಾಡುವ ಲಕ್ಷಣಗಳಿವೆಯೇ, ಆ ಬುದ್ಧಿಯಿದೆಯೇ? ಯಾವುದೇ ಮಾತಿನಲ್ಲಿ ತಕ್ಷಣ ಕೋಪ ಬಂದುಬಿಟ್ಟಿತು, ಅದರಿಂದ ಬೇರೆಯವರಿಗೆ ನಷ್ಟವನ್ನುಂಟು ಮಾಡುವುದು, ಅನ್ಯರ ನಿಂದನೆ ಮಾಡಿಬಿಡುವಂತಹ ನಡವಳಿಕೆಯಲ್ಲಿ ನಡೆಯುವುದಿಲ್ಲವೇ? ಸತ್ಯಯುಗದಲ್ಲಿ ದೇವತೆಗಳು ಎಂದಾದರೂ ಯಾರ ನಿಂದನೆಯಾದರೂ ಮಾಡುತ್ತಾರೆಯೇ! ಅಲ್ಲಿ ನಿಂದನೆ ಮಾಡುವ ಛೀ ಛೀ ವಿಚಾರವಿರುವವರು ಇರುವುದೇ ಇಲ್ಲ. ತಂದೆಯಂತೂ ಮಕ್ಕಳನ್ನು ಎಷ್ಟು ಒತ್ತುಕೊಟ್ಟು ಮೇಲೆತ್ತುತ್ತಾರೆ- ಮಕ್ಕಳೇ, ನೀವು ತಂದೆಯನ್ನು ನೆನಪು ಮಾಡಿ ಅದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆಯೇ? ತಂದೆಗೆ ಗೊತ್ತಿದೆ, ಅನೇಕರ ನಶೆಯು ಸೋಡಾ ನೀರಿನಂತಾಗಿಬಿಡುತ್ತದೆ. ಎಲ್ಲರಿಗೆ ಇಷ್ಟೊಂದು ಖುಷಿಯ ನಶೆಯೇರುವುದಿಲ್ಲ. ಬುದ್ಧಿಯಲ್ಲಿ ಕುಳಿತುಕೊಂಡಾಗಲೇ ನಶೆಯೇರುತ್ತದೆ. ವಿಶ್ವದ ಮಾಲೀಕರನ್ನಾಗಿ ಮಾಡಲು ತಂದೆಯೇ ಓದಿಸುತ್ತಾರೆ.
ಇಲ್ಲಂತೂ ಎಲ್ಲರೂ ಪತಿತರು, ರಾವಣ ಸಂಪ್ರದಾಯದವರಾಗಿದ್ದಾರೆ. ರಾಮನು ವಾನರ ಸೈನ್ಯದ ಸಹಾಯವನ್ನು ಪಡೆದು ಇದನ್ನು ಮಾಡಿದನು, ಅದನ್ನು ಮಾಡಿದನೆಂದು ಕಥೆಯಿದೆಯಲ್ಲವೆ. ಈಗ ನಿಮಗೆ ತಿಳಿದಿದೆ, ತಂದೆಯು ರಾವಣನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸಿ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ. ಇಲ್ಲಿ ನೀವು ಮಕ್ಕಳನ್ನು ಯಾರಾದರೂ ಪ್ರಶ್ನೆ ಮಾಡಿದರೆ ನಮಗೆ ಭಗವಂತನೇ ಓದಿಸುತ್ತಾರೆಂದು ನೀವು ಬಹುಬೇಗನೆ ಹೇಳುತ್ತೀರಿ. ಭಗವಾನುವಾಚ, ಹೇಗೆ ಶಿಕ್ಷಕರು ನಾನು ನಿಮ್ಮನ್ನು ವಕೀಲ ಅಥವಾ ಇಂತಹ ಪದವೀಧರರನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ, ನಿಶ್ಚಯದಿಂದ ಓದಿಸುತ್ತಾರೆ ಮತ್ತು ಅವರು ಆ ರೀತಿಯಾಗಿಬಿಡುತ್ತಾರೆ. ಓದುವವರಲ್ಲಿಯೂ ನಂಬರ್ವಾರ್ ಇರುತ್ತಾರಲ್ಲವೆ ಮತ್ತು ಪದವಿಯನ್ನು ನಂಬರ್ವಾರ್ ಪಡೆಯುತ್ತಾರೆ. ಇದೂ ಸಹ ವಿದ್ಯೆಯಾಗಿದೆ. ತಂದೆಯು ಗುರಿ-ಧ್ಯೇಯವನ್ನು ಸನ್ಮುಖದಲ್ಲಿ ತೋರಿಸುತ್ತಿದ್ದಾರೆ. ಈ ವಿದ್ಯೆಯಿಂದ ನಾವು ಈ ರೀತಿಯಾಗುತ್ತೇವೆಂದು ನೀವು ತಿಳಿಯುತ್ತೀರಿ. ಇದು ಖುಷಿಯ ಮಾತಲ್ಲವೆ. ಐ.ಸಿ.ಎಸ್ ವಿದ್ಯೆಯನ್ನು ಓದುವವರೂ ಸಹ ನಾವು ಇದನ್ನು ಓದಿ ನಂತರ ಇದನ್ನು ಮಾಡುತ್ತೇವೆ, ಮನೆಯನ್ನು ಕಟ್ಟುತ್ತೇವೆ, ಈ ರೀತಿ ಮಾಡುತ್ತೇವೆಂದು ತಿಳಿಯುತ್ತಾರೆ. ಅದೇ ಚಿಂತನೆ ಬುದ್ಧಿಯಲ್ಲಿ ನಡೆಯುತ್ತದೆ. ಇಲ್ಲಂತೂ ನಿಮಗೆ ತಂದೆಯು ಓದಿಸುತ್ತಾರೆ. ಎಲ್ಲರೂ ಓದಬೇಕು ಮತ್ತು ಪವಿತ್ರರಾಗಬೇಕಾಗಿದೆ. ನಾವು ಯಾವುದೇ ಅಪವಿತ್ರ ಕರ್ಮವನ್ನು ಮಾಡುವುದಿಲ್ಲವೆಂದು ತಂದೆಯೊಂದಿಗೆ ಪ್ರತಿಜ್ಞೆ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಒಂದುವೇಳೆ ಯಾವುದೇ ವಿರುದ್ಧ ಕರ್ಮವನ್ನು ಮಾಡಿದಿರೆಂದರೆ ಸಂಪಾದನೆಯು ಸಮಾಪ್ತಿಯಾಗುತ್ತದೆ. ಇದು ಮೃತ್ಯುಲೋಕ, ಹಳೆಯ ಪ್ರಪಂಚವಾಗಿದೆ. ನಾವು ಹೊಸ ಪ್ರಪಂಚಕ್ಕಾಗಿ ಓದುತ್ತೇವೆ. ಈ ಹಳೆಯ ಪ್ರಪಂಚವಂತೂ ಸಮಾಪ್ತಿಯಾಗುವುದಿದೆ. ಪರಿಸ್ಥಿತಿಗಳು ಅದೇ ರೀತಿಯಿದೆ, ತಂದೆಯು ನಿಮಗೆ ಅಮರಲೋಕಕ್ಕಾಗಿಯೇ ಓದಿಸುತ್ತಾರೆ. ಇಡೀ ಪ್ರಪಂಚದ ಚಕ್ರದ ರಹಸ್ಯವನ್ನು ತಂದೆಯು ತಿಳಿಸುತ್ತಾರೆ. ಕೈಯಲ್ಲಿ ಯಾವುದೇ ಪುಸ್ತಕವಿಲ್ಲ, ಹಾಗೆಯೇ ಸರಾಗವಾಗಿ ತಂದೆಯು ತಿಳಿಸುತ್ತಾರೆ. ಮೊಟ್ಟಮೊದಲ ಮಾತನ್ನು ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ. ಆತ್ಮವು ಭಗವಂತನ ಮಗುವಾಗಿದೆ, ಪರಮಪಿತ ಪರಮಾತ್ಮನು ಪರಮಧಾಮದಲ್ಲಿ ಇರುತ್ತಾರೆ. ನಾವಾತ್ಮರೂ ಸಹ ಅಲ್ಲಿರುತ್ತೇವೆ. ಮತ್ತೆ ಅಲ್ಲಿಂದ ನಂಬರ್ವಾರ್ ಆಗಿ ಪಾತ್ರವನ್ನಭಿನಯಿಸಲು ಇಲ್ಲಿಗೆ ಬರುತ್ತೇವೆ. ಇದು ಅತಿದೊಡ್ಡ ಬೇಹದ್ದಿನ ಸ್ಟೇಜ್ ಆಗಿದೆ. ಈ ಸ್ಟೇಜಿನಲ್ಲಿ ಮೊದಲು ಪಾತ್ರಧಾರಿಗಳು ಪಾತ್ರವನ್ನಭಿನಯಿಸಲು ಭಾರತದಲ್ಲಿ, ಹೊಸ ಪ್ರಪಂಚದಲ್ಲಿ ಬರುತ್ತಾರೆ. ಇದು ಅವರ ಚಟುವಟಿಕೆಯಾಗಿದೆ. ನೀವು ಅವರ ಮಹಿಮೆಯನ್ನೂ ಮಾಡುತ್ತೀರಿ. ಅವರಿಗೆ ಪದಮಾಪತಿಗಳೆಂದು ಹೇಳುತ್ತಾರೆಯೇ? ಅವರುಗಳ ಬಳಿಯಂತೂ ಎಣಿಸಲಾರದಷ್ಟು ಅಪಾರ ಧನವಿರುತ್ತದೆ. ತಂದೆಯಂತೂ ಅವರು ಎಂದೇ ಹೇಳುತ್ತಾರಲ್ಲವೆ ಏಕೆಂದರೆ ತಂದೆಯು ಬೇಹದ್ದಿನವರಾಗಿದ್ದಾರೆ. ನಾಟಕವು ಮಾಡಲ್ಪಟ್ಟಿದೆ ಅಂದಾಗ ಶಿವತಂದೆಯು ಇವರನ್ನು ಇಂತಹ ಸಾಹುಕಾರರನ್ನಾಗಿ ಮಾಡಿದ್ದರಿಂದಲೇ ಭಕ್ತಿಮಾರ್ಗದಲ್ಲಿ ಮತ್ತೆ ಅವರ ಮಂದಿರವನ್ನು ಪೂಜೆಗಾಗಿ ಕಟ್ಟಿಸುತ್ತಾರೆ. ಮೊಟ್ಟಮೊದಲು ಯಾರು ಪೂಜ್ಯರನ್ನಾಗಿ ಮಾಡಿದರು ಅವರು ಪೂಜೆಯನ್ನೂ ಮಾಡುತ್ತಾರೆ. ತಂದೆಯು ಪ್ರತಿನಿತ್ಯವೂ ಮಕ್ಕಳ ನಶೆಯನ್ನೇರಿಸಲು ಬಹಳಷ್ಟು ತಿಳಿಸುತ್ತಾರೆ ಆದರೆ ನಂಬರ್ವಾರ್ ಪುರುಷಾರ್ಥದನುಸಾರ ಯಾರು ಯಥಾರ್ಥವಾಗಿ ತಿಳಿದುಕೊಳ್ಳುತ್ತಾರೆಯೋ ಅವರು ಸೇವೆಯಲ್ಲಿ ತೊಡಗಿರುತ್ತಾರೆ, ಪ್ರಫುಲ್ಲಿತರಾಗಿರುತ್ತಾರೆ ಇಲ್ಲವೆಂದರೆ ಬಾಡಿಹೋಗಿರುತ್ತಾರೆ ಅವಶ್ಯವಾಗಿ ಇವರು ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು ಆಗ ಮತ್ತ್ಯಾವುದೇ ಧರ್ಮವಿರಲಿಲ್ಲ ಕೇವಲ ದೇವತಾ ಧರ್ಮವಷ್ಟೇ ಇತ್ತು. ನಂತರದಲ್ಲಿ ಅನ್ಯಧರ್ಮವು ಬಂದಿವೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆಯೆಂದು ಈಗ ನೀವು ತಿಳಿದುಕೊಂಡಿದ್ದೀರಿ. ಶಾಲೆಯಲ್ಲಿ ಗುರಿ-ಉದ್ದೇಶವಂತೂ ಬೇಕಲ್ಲವೆ. ಸತ್ಯಯುಗದ ಆದಿಯಲ್ಲಿ ಇವರು ಆಳ್ವಿಕೆ ಮಾಡುತ್ತಿದ್ದರು ನಂತರ 84 ಜನ್ಮಗಳ ಚಕ್ರದಲ್ಲಿ ಬಂದಿದ್ದಾರೆ. ಮಕ್ಕಳಿಗೆ ಗೊತ್ತಿದೆ, ಇದು ಬೇಹದ್ದಿನ ವಿದ್ಯೆಯಾಗಿದೆ. ಜನ್ಮ-ಜನ್ಮಾಂತರವಂತೂ ಲೌಕಿಕ ವಿದ್ಯೆಯನ್ನು ಓದುತ್ತಾ ಬಂದಿದ್ದೀರಿ, ಇದರಲ್ಲಿ ಪಕ್ಕಾ ನಿಶ್ಚಯವಿರಬೇಕು. ಇಡೀ ಸೃಷ್ಟಿಯಲ್ಲಿ ಪರಿವರ್ತನೆ ಮಾಡುವವರು ಪುನಃಸ್ಥಾಪನೆ ಮಾಡುವವರು ಅರ್ಥಾತ್ ನರಕವನ್ನು ಸ್ವರ್ಗವನ್ನಾಗಿ ಮಾಡುವ ತಂದೆಯು ನಮಗೆ ಓದಿಸುತ್ತಿದ್ದಾರೆ. ಇದಂತೂ ಖಚಿತವಾಗಿದೆ- ಮುಕ್ತಿಧಾಮಕ್ಕಂತೂ ಎಲ್ಲರೂ ಹೋಗುತ್ತಾರೆ. ಆದರೆ ಸ್ವರ್ಗದಲ್ಲಿ ಎಲ್ಲರೂ ಬರುವುದಿಲ್ಲ. ಈಗ ನೀವು ಇದನ್ನು ತಿಳಿದುಕೊಂಡಿದ್ದೀರಿ- ತಂದೆಯು ನಮ್ಮನ್ನು ಈ ವಿಷಯಸಾಗರ, ವೇಶ್ಯಾಲಯದಿಂದ ಬಿಡಿಸುತ್ತಾರೆ. ಈಗಂತೂ ಇದು ಅವಶ್ಯವಾಗಿ ವೇಶ್ಯಾಲಯವಾಗಿದೆ. ಯಾವಾಗಿನಿಂದ ಇದು ಪ್ರಾರಂಭವಾಗುತ್ತದೆ ಎಂಬುದನ್ನೂ ಸಹ ನೀವು ಈಗಾಗಲೇ ಅರಿತುಕೊಂಡಿದ್ದೀರಿ. ಈ ರಾವಣರಾಜ್ಯವು 2500 ವರ್ಷಗಳ ಹಿಂದೆ ಭಕ್ತಿಯು ಪ್ರಾರಂಭವಾಗಿದೆ. ಆ ಸಮಯದಲ್ಲಿ ದೇವಿ-ದೇವತಾಧರ್ಮದವರೇ ಇದ್ದರು ಅನಂತರ ಅವರು ವಾಮ ಮಾರ್ಗದಲ್ಲಿ ಬಂದುಬಿಟ್ಟರು. ಭಕ್ತಿಗಾಗಿ ಮಂದಿರಗಳನ್ನು ಮಾಡುತ್ತಾರೆ. ಸೋಮನಾಥ ಮಂದಿರವು ಎಷ್ಟು ದೊಡ್ಡದಾಗಿ ಕಟ್ಟಲ್ಪಟ್ಟಿದೆ, ಅದರ ಇತಿಹಾಸವನ್ನು ಕೇಳಿದ್ದೀರಿ. ಮಂದಿರವು ಹೇಗಿತ್ತು! ಅಂದಾಗ ಆ ಸಮಯದಲ್ಲಿ ಇವರು ಇನ್ನೆಷ್ಟು ಧನವಂತರಿರಬಹುದು! ಕೇವಲ ಒಂದು ಮಂದಿರವಂತೂ ಇರುವುದಿಲ್ಲ. ಅದರ ಜೊತೆಗೆ ಬಹಳಷ್ಟು ಮಂದಿರಗಳು ಇರುತ್ತವೆ. ಇತಿಹಾಸದಲ್ಲಿ ಕೇವಲ ಒಂದು ಮಂದಿರದ ಹೆಸರನ್ನು ಹಾಕಿದ್ದಾರೆ. ಅನೇಕ ರಾಜರುಗಳು ಬಹಳಷ್ಟು ಮಂದಿರಗಳನ್ನು ಕಟ್ಟಿಸುತ್ತಾರೆ. ಒಬ್ಬರು ಇನ್ನೊಬ್ಬರನ್ನು ನೋಡಿ ಎಲ್ಲರೂ ಪೂಜೆ ಮಾಡುತ್ತಾರಲ್ಲವೆ ಅಂದಾಗ ಅನೇಕ ಮಂದಿರಗಳಿರುತ್ತವೆ ಎಂದಾಗ ಕೇವಲ ಒಂದನ್ನಷ್ಟೇ ಲೂಟಿ ಮಾಡಿಲ್ಲ. ಅದರ ಸುತ್ತಮುತ್ತಲಿರುವ ಮಂದಿರಗಳನ್ನು ಲೂಟಿ ಮಾಡಿರುತ್ತಾರೆ. ಅಲ್ಲಿ ಹಳ್ಳಿಗಳೂ ಸಹ ಬಹಳ ದೂರ-ದೂರದಲ್ಲಿರುವುದಿಲ್ಲ. ಒಂದಕ್ಕೊಂದು ಸಮೀಪದಲ್ಲಿರುತ್ತವೆ ಏಕೆಂದರೆ ಅಲ್ಲಿ ಪ್ರಯಾಣ ಮಾಡಲು ರೈಲು ಇತ್ಯಾದಿಗಳಿರುವುದಿಲ್ಲ ಆದ್ದರಿಂದ ಅಲ್ಲಿ ಪರಸ್ಪರ ಹತ್ತಿರುವಿರುತ್ತಾರೆ ನಂತರ ನಿಧಾನ-ನಿಧಾನವಾಗಿ ಸೃಷ್ಟಿಯು ವೃದ್ಧಿಯಾಗುತ್ತಾ ಹೋಗುತ್ತದೆ.
ಈಗ ನೀವು ಮಕ್ಕಳು ಓದುತ್ತಿದ್ದೀರಿ. ಅತಿದೊಡ್ಡ ತಂದೆಯು ನಿಮಗೆ ಓದಿಸುತ್ತಾರೆ- ಇದು ನಶೆಯಿರಬೇಕಲ್ಲವೆ. ಮನೆಯಲ್ಲೆಂದೂ ಅಳುವುದಾಗಲಿ, ದುಃಖಿಸುವುದಾಗಲಿ ಮಾಡಬಾರದು. ಇಲ್ಲಿ ನೀವು ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ನೀವು ಮಕ್ಕಳಿಗೆ ಓದಿಸಲಾಗುತ್ತದೆ. ಈ ನಡುವಿನ ಸಮಯದಲ್ಲಿ ನೀವು ಪರಿವರ್ತನೆಯಾಗುತ್ತೀರಿ. ಹಳೆಯ ಪ್ರಪಂಚದಿಂದ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿ ಓದುತ್ತಿದ್ದೀರಿ, ಭಗವಂತನೇ ಓದಿಸುತ್ತಿದ್ದಾರೆ. ಇಡೀ ಪ್ರಪಂಚವನ್ನು ಪರಿವರ್ತನೆ ಮಾಡುತ್ತಾರೆ. ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಾರೆ, ಆ ಹೊಸಪ್ರಪಂಚಕ್ಕೆ ನೀವು ಮಾಲೀಕರಾಗಬೇಕಾಗಿದೆ. ನಿಮಗೆ ಯುಕ್ತಿಯನ್ನು ತಿಳಿಸಲು ತಂದೆಯೂ ಬಂಧಿತರಾಗಿದ್ದಾರೆ ಅಂದಮೇಲೆ ನೀವು ಮಕ್ಕಳು ಇದನ್ನು ಕಾರ್ಯದಲ್ಲಿ ತರಬೇಕಲ್ಲವೆ. ಇದಂತೂ ನಿಮಗೆ ಗೊತ್ತಿದೆ, ನಾವು ಇಲ್ಲಿನ ನಿವಾಸಿಗಳಲ್ಲ. ನಮ್ಮ ರಾಜಧಾನಿಯಿತ್ತು ಎಂಬುದನ್ನು ನೀವು ತಿಳಿದುಕೊಂಡಿರಲಿಲ್ಲ. ಈಗ ತಂದೆಯು ತಿಳಿಸಿದ್ದಾರೆ- ರಾವಣರಾಜ್ಯದಲ್ಲಿ ನೀವು ಬಹಳ ದುಃಖಿಯಾಗಿದ್ದೀರಿ. ಇದಕ್ಕೆ ವಿಕಾರಿ ಪ್ರಪಂಚವೆಂದೇ ಹೇಳಲಾಗುತ್ತದೆ. ಸತ್ಯಯುಗೀ ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದಾರೆ. ಈಗ ಮನುಷ್ಯರು ತಮ್ಮನ್ನು ವಿಕಾರಿಗಳೆಂದು ಹೇಳಿಕೊಳ್ಳುತ್ತಾರೆ. ಈ ರಾವಣರಾಜ್ಯವು ಯಾವಾಗಿನಿಂದ ಪ್ರಾರಂಭವಾಯಿತು, ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ, ಬುದ್ಧಿಯು ಸಂಪೂರ್ಣ ನಿರ್ವಿಕಾರಿಗಳಾಗಿದ್ದಾರೆ. ಈಗ ಮನುಷ್ಯರು ತಮ್ಮನ್ನು ವಿಕಾರಿಗಳೆಂದು ಹೇಳಿಕೊಳ್ಳುತ್ತಾರೆ. ಈ ರಾವಣರಾಜ್ಯವು ಯಾವಾಗಿನಿಂದ ಪ್ರಾರಂಭವಾಯಿತು, ಏನಾಯಿತೆಂದು ಯಾರಿಗೂ ತಿಳಿದಿಲ್ಲ, ಬುದ್ಧಿಯು ಸಂಪೂರ್ಣ ತಮೋಪ್ರಧಾನವಾಗಿಬಿಟ್ಟಿದೆ. ಸತ್ಯಯುಗದಲ್ಲಿ ಪಾರಸಬುದ್ಧಿಯವರಾಗಿದ್ದಿರಿ, ಆಗ ವಿಶ್ವದ ಮಾಲೀಕರಾಗಿದ್ದಿರಿ, ಬಹಳ ಸುಖಿಯಾಗಿದ್ದಿರಿ. ಅದರ ಹೆಸರೇ ಆಗಿದೆ - ಸುಖಧಾಮ. ಇಲ್ಲಂತೂ ಅಪಾರ ದುಃಖವಿದೆ. ಸುಖದ ಪ್ರಪಂಚ ಹೇಗೆ ಮತ್ತು ದುಃಖದ ಪ್ರಪಂಚ ಹೇಗಿದೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಸುಖವೆಷ್ಟು ಸಮಯ ಮತ್ತು ದುಃಖದ ಸಮಯ ಎಷ್ಟು ನಡೆಯುತ್ತದೆ ಎಂಬುದನ್ನು ಮನುಷ್ಯರು ಸ್ವಲ್ಪವೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಅರಿತುಕೊಳ್ಳುತ್ತಾರೆ. ತಿಳಿಸುವವರು ಬೇಹದ್ದಿನ ತಂದೆಯಾಗಿದ್ದಾರೆ. ಕೃಷ್ಣನಿಗೆ ಬೇಹದ್ದಿನ ತಂದೆಯೆಂದು ಹೇಳಲು ಸಾಧ್ಯವಿಲ್ಲ. ಇದು ಇಷ್ಟವಾಗುವುದೂ ಇಲ್ಲ ಆದರೆ ಯಾರಿಗೆ ತಂದೆಯೆಂದು ಹೇಳುವುದು ಎಂಬುದು ಏನನ್ನು ತಿಳಿದುಕೊಂಡಿಲ್ಲ. ಭಗವಂತನು ತಿಳಿಸುತ್ತಾರೆ- ನನ್ನ ನಿಂದನೆ ಮಾಡುತ್ತೀರಿ ಆದರೆ ನಾನು ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತೇನೆ. ನನಗೆ ಎಷ್ಟೊಂದು ನಿಂದನೆ ಮಾಡಿದ್ದೀರಿ ಮತ್ತು ದೇವತೆಗಳಿಗೂ ನಿಂದನೆ ಮಾಡಿದ್ದಾರೆ, ಎಷ್ಟೊಂದು ಮೂಡಮತಿ ಮನುಷ್ಯರಾಗಿಬಿಟ್ಟಿದ್ದಾರೆ. ಭಜಗೋವಿಂದಂ.... ಎಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ- ಹೇ ಮೂಡಮತಿಗಳೇ, ಗೋವಿಂದಂ, ಗೋವಿಂದಂ, ರಾಮ-ರಾಮ ಎಂದು ಹೇಳುತ್ತಾ ನಾವು ಯಾರನ್ನು ಭಜಿಸುತ್ತೇವೆ ಎಂಬುದೇನೂ ಬುದ್ಧಿಯಲ್ಲಿ ಬರುವುದಿಲ್ಲ. ಕಲ್ಲುಬುದ್ಧಿಯವರಿಗೆ ಮೂಡಮತಿಗಳೆಂದೇ ಹೇಳುತ್ತಾರೆ. ಈಗ ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ.
ತಂದೆಯು ತಿಳಿಸುತ್ತಾರೆ- ನೀವು ತಮ್ಮ ಪರಿವಾರ ಇತ್ಯಾದಿಗಳಲ್ಲಿ ಎಷ್ಟೊಂದು ಸಿಕ್ಕಿಹಾಕಿಕೊಂಡಿದ್ದೀರಿ! ಭಗವಂತನು ಏನನ್ನು ತಿಳಿಸುತ್ತಾರೆಯೋ ಅದನ್ನು ಬುದ್ಧಿಯಲ್ಲಿ ತರಬೇಕು ಆದರೆ ಆಸುರೀ ಮತದಲ್ಲಿ ಸಿಲುಕಿಕೊಳ್ಳುವುದರಿಂದ ಈಶ್ವರೀಯ ಮತದಂತೆ ಹೇಗೆ ನಡೆಯುತ್ತಾರೆ! ಗೋವಿಂದನೆಂದರೆ ಯಾರು? ಏನಾಗಿದ್ದಾರೆ, ಏನೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ- ಬಾಬಾ ತಾವು ಅನೇಕಬಾರಿ ನಮಗೆ ತಿಳಿಸಿದ್ದೀರೆಂದು ಮಕ್ಕಳು ಹೇಳುತ್ತೀರಿ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಬಾಬಾ, ನಾವು ಪುನಃ ತಮ್ಮಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಅವಶ್ಯವಾಗಿ ನರನಿಂದ ನಾರಾಯಣರಾಗುತ್ತೇವೆ. ನಾವು ಈ ರೀತಿ ಆಗುತ್ತೇವೆಂದು ವಿದ್ಯಾರ್ಥಿಗೆ ವಿದ್ಯೆಯ ನಶೆಯಂತೂ ಇದ್ದೇ ಇರುತ್ತದೆ, ನಿಶ್ಚಯವಿರುತ್ತದೆ. ಈಗ ತಂದೆಯು ತಿಳಿಸುತ್ತಾರೆ- ನೀವು ಸರ್ವಗುಣ ಸಂಪನ್ನರಾಗಬೇಕಾಗಿದೆ. ಯಾರೊಂದಿಗೂ ಕ್ರೋಧ ಮಾಡಬಾರದು. ದೇವತೆಗಳಲ್ಲಿ ಪಂಚವಿಕಾರಗಳಿರುವುದಿಲ್ಲ ಅಂದಾಗ ಶ್ರೀಮತದಂತೆ ನಡೆಯಬೇಕು. ಶ್ರೀಮತವು ಮೊಟ್ಟಮೊದಲನೆಯದಾಗಿ ಹೇಳುತ್ತದೆ- ತನ್ನನ್ನು ಆತ್ಮನೆಂದು ತಿಳಿಯಿರಿ, ನೀವಾತ್ಮಗಳು ಪರಮಧಾಮದಿಂದ ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೀರಿ, ನಿಮ್ಮದು ವಿನಾಶೀ ಶರೀರವಾಗಿದೆ. ಆತ್ಮವು ಅವಿನಾಶಿಯಾಗಿದೆ ಅಂದಾಗ ನೀವು ತಮ್ಮನ್ನು ಆತ್ಮವೆಂದು ತಿಳಿಯಿರಿ. ನಾನಾತ್ಮ ಪರಮಧಾಮದಿಂದ ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೇನೆ. ಈಗ ನೀವಿಲ್ಲಿ ದುಃಖಿಯಾಗುತ್ತೀರಿ ಆದ್ದರಿಂದಲೇ ಮುಕ್ತಿಧಾಮಕ್ಕೆ ಹೋಗಬೇಕೆಂದು ಹೇಳುತ್ತಾರೆ ಆದ್ದರಿಂದ ನಿಮ್ಮನ್ನು ಯಾರು ಪಾವನರನ್ನಾಗಿ ಮಾಡುತ್ತಾರೆ? ಒಬ್ಬರನ್ನೇ ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ- ನಮ್ಮ ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿಯಿರಿ, ದೇಹವೆಂದು ತಿಳಿಯಬಾರದು. ನಾನು ಆತ್ಮಗಳಿಗೆ ತಿಳಿಸುತ್ತೇನೆ. ಹೇ ಪತಿತ-ಪಾವನರನ್ನಾಗಿ ಮಾಡಿ ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ಈಗ ಮತ್ತೆ ಕರೆಯುತ್ತಾರೆ. ಕೃಷ್ಣನ ಜೊತೆ ಪ್ರೀತಿಯಂತೂ ಇದೆ, ಕೃಷ್ಣನಿಗೆ ಎಲ್ಲರಿಗಿಂತ ಹೆಚ್ಚಿನದಾಗಿ ಕುಮಾರಿಯರು, ಮಾತೆಯರು ವ್ರತ-ನಿಯಮಗಳನ್ನು ಇಟ್ಟುಕೊಳ್ಳುತ್ತಾರೆ. ನಿರ್ಜಲರಾಗಿರುತ್ತಾರೆ. ಕೃಷ್ಣಪುರಿ ಅರ್ಥಾತ್ ಸತ್ಯಯುಗದಲ್ಲಿ ಹೋಗಬೇಕೆಂದು ತಿಳಿಯುತ್ತಾರೆ ಆದರೆ ಜ್ಞಾನವಿಲ್ಲದ ಕಾರಣ ಬಹಳ ಹಠಯೋಗವನ್ನು ಮಾಡುತ್ತಾರೆ. ಕೃಷ್ಣಪುರಿಯಲ್ಲಿ ಹೋಗುವುದಕ್ಕಾಗಿಯೇ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ನಿಮ್ಮನ್ನು ಯಾರೂ ತಡೆಯುವುದಿಲ್ಲ. ಅವರಂತೂ ಸರ್ಕಾರದ ಮುಂದೆ ಬೇಸರಪಡಿಸುವುದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಾರೆ, ಹಠ ಮಾಡುತ್ತಾರೆ. ನೀವಂತೂ ಯಾರ ಮುಂದೆಯೂ ಧರಣಿ ಸತ್ಯಾಗ್ರಹ ಮಾಡಬೇಕಾಗಿಲ್ಲ. ಇದನ್ನು ನಿಮಗೆ ಯಾರೂ ಕಲಿಸಿಯೂ ಇಲ್ಲ.
ಶ್ರೀಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ ಆದರೆ ಯಾರಿಗೂ ತಿಳಿದಿಲ್ಲ. ಅವರು ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಭಕ್ತಿ ಮತ್ತು ಜ್ಞಾನ ಇವೆರಡೂ ಬೇರೆ-ಬೇರೆಯಾಗಿದೆ. ಜ್ಞಾನವು ದಿನ, ಭಕ್ತಿಯು ರಾತ್ರಿಯಾಗಿದೆ. ಯಾರದು? ಬ್ರಹ್ಮನ ರಾತ್ರಿ ಮತ್ತು ಬ್ರಹ್ಮನ ಹಗಲಾಗಿದೆ ಆದರೆ ಇದರ ಅರ್ಥವನ್ನು ಗುರುಗಳಾಗಲಿ, ಅವರ ಶಿಷ್ಯರಾಗಲಿ ಅರಿತುಕೊಂಡಿಲ್ಲ. ಜ್ಞಾನ, ಭಕ್ತಿ ಮತ್ತು ವೈರಾಗ್ಯದ ರಹಸ್ಯವನ್ನು ತಂದೆಯು ನಿಮಗೆ ತಿಳಿಸಿದ್ದಾರೆ. ಜ್ಞಾನವು ದಿನ, ಭಕ್ತಿಯು ರಾತ್ರಿ ಮತ್ತು ಅದರ ನಂತರ ವೈರಾಗ್ಯ. ಇದನ್ನು ಅವರು ತಿಳಿದುಕೊಂಡಿಲ್ಲ. ಜ್ಞಾನ, ಭಕ್ತಿ ಮತ್ತು ವೈರಾಗ್ಯ- ಈ ಶಬ್ಧವು ಬಹಳ ನಿಖರವಾಗಿದೆ ಆದರೆ ಅರ್ಥವು ಗೊತ್ತಿಲ್ಲ. ಈಗ ನೀವು ಮಕ್ಕಳು ಅರಿತುಕೊಂಡಿದ್ದೀರಿ. ಜ್ಞಾನವನ್ನು ತಂದೆಯು ಕೊಡುತ್ತಾರೆ, ಆಗ ಅದರಿಂದ ದಿನವಾಗಿಬಿಡುತ್ತದೆ. ಭಕ್ತಿಯು ಪ್ರಾರಂಭವಾದಾಗ ರಾತ್ರಿಯೆಂದು ಹೇಳಲಾಗುತ್ತದೆ ಏಕೆಂದರೆ ಅಜ್ಞಾನದಲ್ಲಿ ಅಲೆಯುತ್ತಾರೆ. ಬ್ರಹ್ಮನ ರಾತ್ರಿ ಸೋ ಬ್ರಾಹ್ಮಣರ ರಾತ್ರಿ ಅನಂತರ ದಿನವಾಗುತ್ತದೆ. ಜ್ಞಾನದಿಂದ ದಿನ ಮತ್ತು ಭಕ್ತಿಯಿಂದ ರಾತ್ರಿ. ರಾತ್ರಿಯಲ್ಲಿ ನೀವು ವನವಾಸದಲ್ಲಿ ಕುಳಿತಿದ್ದೀರಿ, ನಂತರ ನೀವು ದಿನದಲ್ಲಿ ಎಷ್ಟೊಂದು ಧನವಂತರಾಗಿಬಿಡುತ್ತೀರಿ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯಿಂದ ಇಷ್ಟೊಂದು ಖುಷಿಯ ಖಜಾನೆಯು ಯಾವುದು ಸಿಗುತ್ತಿದೆ ಅದು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತಿದೆಯೇ?
2. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆಂದಮೇಲೆ ಅಂತಹ ಚಲನೆಯಿದೆಯೇ? ಮಾತನಾಡುವ ಲಕ್ಷಣಗಳು ಆ ರೀತಿಯಿದೆಯೇ? ಎಂದೂ ಯಾರ ನಿಂದನೆ ಮಾಡುವುದಿಲ್ಲವೇ?
3. ತಂದೆಯೊಂದಿಗೆ ಪ್ರತಿಜ್ಞೆ ಮಾಡಿದನಂತರ ಯಾವುದೇ ಅಪವಿತ್ರ ಕರ್ಮವಾಗುತ್ತಿಲ್ಲವೆ?
| ವರದಾನ: |
ಸಾಕ್ಷಿ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಪರಿಸ್ಥಿತಿಗಳ ಆಟವನ್ನು ನೋಡುವಂತಹ ಸಂತೋಷಿ ಆತ್ಮ ಭವ ಎಂತಹದೇ ಅಲುಗಾಡಿಸುವಂತಹ ಪರಿಸ್ಥಿತಿ ಇರಲಿ ಆದರೆ ಸಾಕ್ಷಿ ಸ್ಥಿತಿಯಲ್ಲಿ ಸ್ಥಿತರಾದಾಗ ಅನುಭವ ಮಾಡುವಿರಿ ಹೇಗೆ ಪಪೆಟ್ ಷೋ(ಸೂತ್ರದ ಗೊಂಬೆಯ ಆಟ) ಆಗಿದೆ. ಸತ್ಯವಾಗಿರುವುದಿಲ್ಲ. ತಮ್ಮ ಶಾನ್ ನಲ್ಲಿರುತ್ತಾ ಆಟವನ್ನು ನೋಡಿ. ಸಂಗಮಯುಗದ ಶ್ರೇಷ್ಠ ಶಾನ್ ಆಗಿದೆ ಸಂತುಷ್ಠ ಮಣಿಯಾಗುವುದು ಅಥವಾ ಸಂತುಷ್ಟರಾಗಿರುವುದು. ಈ ಶಾನ್ ನಲ್ಲಿರುವಂತಹ ಆತ್ಮ ಎಂದೂ ಒತ್ತಡದಲ್ಲಿ ಇರಲು ಸಾಧ್ಯವಿಲ್ಲ. ಸಂಗಮಯುಗದಲ್ಲಿ ಬಾಪ್ದಾದಾರವರ ವಿಶೇಷ ಕೊಡುಗೆ ಸಂತುಷ್ಠತೆ ಯಾಗಿದೆ. |
| ಸ್ಲೋಗನ್: | ಈ ರೀತಿ ಸುಂದರರಾಗಿ ಯಾವುದರಿಂದ ಮನಸ್ಸಿನ ಖುಷಿ ಮುಖದಲ್ಲಿ ಸ್ಪಷ್ಠವಾಗಿ ಕಂಡುಬರುವುದು. |