ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 26, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 26, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

26/10/24
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ- ನಿಮಗೆ ಶಕ್ತಿಯನ್ನು ಕೊಡಲು ಸರ್ವಶಕ್ತಿವಂತ ತಂದೆಯು ಬಂದಿದ್ದಾರೆ, ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಶಕ್ತಿಯು ಸಿಗುತ್ತಾ ಹೋಗುತ್ತದೆ”
ಪ್ರಶ್ನೆ: ಈ ಡ್ರಾಮಾದಲ್ಲಿ ಎಲ್ಲರಿಗಿಂತ ಶ್ರೇಷ್ಠಾತಿಶ್ರೇಷ್ಠ ಪಾತ್ರವು ನೀವು ಮಕ್ಕಳದಾಗಿದೆ- ಹೇಗೆ?
ಉತ್ತರ: ನೀವು ಮಕ್ಕಳೇ ಬೇಹದ್ದಿನ ತಂದೆಯ ಮಕ್ಕಳಾಗುತ್ತೀರಿ. ಭಗವಂತ ಶಿಕ್ಷಕರಾಗಿ ನಿಮಗೇ ಓದಿಸುತ್ತಾರೆ ಅಂದಾಗ ಭಾಗ್ಯಶಾಲಿಗಳಾದಿರಲ್ಲವೆ! ವಿಶ್ವದ ಮಾಲೀಕ ನಿಮ್ಮ ಅತಿಥಿಯಾಗಿ ಬಂದಿದ್ದಾರೆ, ಅವರು ನಿಮ್ಮ ಸಹಯೋಗದಿಂದ ವಿಶ್ವದ ಕಲ್ಯಾಣ ಮಾಡುತ್ತಾರೆ. ನೀವು ಮಕ್ಕಳು ಕರೆದಿರಿ ಮತ್ತು ತಂದೆಯು ಬಂದರು, ಇದೇ ಎರಡು ಕೈಗಳ ಚಪ್ಪಾಳೆಯಾಗಿದೆ. ಈಗ ತಂದೆಯಿಂದ ನೀವು ಮಕ್ಕಳಿಗೆ ಪೂರ್ಣವಿಶ್ವದ ಮೇಲೆ ರಾಜ್ಯ ಮಾಡುವ ಶಕ್ತಿಯು ಸಿಗುತ್ತದೆ.

ಓಂ ಶಾಂತಿ. ಮಧುರಾತಿ ಮಧುರ ಆತ್ಮೀಯ ಮಕ್ಕಳು ಆತ್ಮೀಯ ತಂದೆಯ ಸಮೀಪದಲ್ಲಿ ಕುಳಿತಿದ್ದೀರಿ. ಶಿಕ್ಷಕನ ಮುಂದೆಯೂ ಸಹ ಕುಳಿತಿದ್ದೀರಿ ಮತ್ತು ಇದನ್ನೂ ತಿಳಿದುಕೊಂಡಿದ್ದೀರಿ- ನೀವು ಮಕ್ಕಳನ್ನು ಕರೆದುಕೊಂಡು ಹೋಗಲು ಈ ತಂದೆಯು ಗುರುವಿನ ರೂಪದಲ್ಲಿ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ- ಹೇ ಆತ್ಮಿಕ ಮಕ್ಕಳೇ, ನಾನು ನಿಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಲು ಬಂದಿದ್ದೇನೆ. ಇದು ಹಳೆಯ ಪ್ರಪಂಚವಾಗಿಬಿಟ್ಟಿದೆ ಮತ್ತು ಈ ಪ್ರಪಂಚವು ಕೊಳಕಾಗಿಬಿಟ್ಟಿದೆ ಎಂಬುದೂ ಸಹ ತಿಳಿದಿದೆ. ನೀವು ಮಕ್ಕಳೂ ಕೊಳಕಾಗಿಬಿಟ್ಟಿದ್ದೀರಿ. ಪತಿತ-ಪಾವನ ತಂದೆಯೇ ಬಂದು ನಾವು ಪತಿತರನ್ನು ಈ ದುಃಖಧಾಮದಿಂದ ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ತಮಗೆ ತಾವೇ ಹೇಳುತ್ತಿದ್ದಿರಿ. ನೀವಿಲ್ಲಿ ಕುಳಿತುಕೊಳ್ಳುತ್ತೀರೆಂದರೆ ಇದು ನಿಮ್ಮ ಮನಸ್ಸಿನಲ್ಲಿ ಬರಬೇಕಾಗಿದೆ. ತಂದೆಯೂ ಸಹ ಹೇಳುತ್ತಾರೆ- ನೀವು ನಿಮಂತ್ರಣ ಕೊಟ್ಟಿದ್ದಕ್ಕಾಗಿ ನಾನು ಬಂದಿದ್ದೇನೆ. ತಂದೆಯು ನೆನಪಿಗೆ ತರಿಸುತ್ತಾರೆ- ನೀವು ನನ್ನನ್ನು ಬನ್ನಿ ಎಂದು ಕರೆದಿರಲ್ಲವೆ. ನಾವು ಕರೆಯುತ್ತಿದ್ದೆವು ಎಂಬುದು ಈಗ ತಮ್ಮ ಸ್ಮೃತಿಗೆ ಬಂದಿದೆ. ತಂದೆಯು ಡ್ರಾಮಾನುಸಾರ ಕಲ್ಪದ ಹಿಂದಿನಂತೆ ಈಗ ಬಂದಿದ್ದಾರೆ. ಅವರೂ (ಲೌಕಿಕ) ಸಹ ಯೋಜನೆಯನ್ನು ಮಾಡುತ್ತಾರಲ್ಲವೆ. ತಂದೆಯೂ ಸಹ ಯೋಜನೆ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲರದೂ ತಮ್ಮತಮ್ಮದೇ ಆದ ಯೋಜನೆಗಳಿವೆ. ಪಂಚವಾರ್ಷಿಕ ಯೋಜನೆಯನ್ನು ಮಾಡುತ್ತಾರೆ, ಅದರಲ್ಲಿ ಈ ರೀತಿ ಈರೀತಿ ಮಾಡುತ್ತೇವೆ ಎಂದು ಮಾತುಗಳನ್ನು ನೋಡಿ ಹೇಗೆ ಸೇರಿಸುತ್ತಾರೆ! ಮೊದಲು ಈ ರೀತಿಯ ಯೋಜನೆ ಮುಂತಾದವುಗಳನ್ನು ಮಾಡುತ್ತಿರಲಿಲ್ಲ, ಈಗ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾರೆ. ನಮ್ಮ ತಂದೆಯ ಯೋಜನೆ ಯಾವುದು ಎಂಬುದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಡ್ರಾಮಾದ ಪ್ಲಾನನುಸಾರ 5000 ವರ್ಷಗಳ ಮೊದಲು ನಾನು ಇದೇ ಯೋಜನೆಯನ್ನು ಮಾಡಿದ್ದೆನು. ಈ ಎರಡೂ ಮಾತುಗಳು ಹೇಗೆ ಸೇರಿದೆ ನೋಡಿ! ಯಾರು ಇಲ್ಲಿ ಬಹಳ ದುಃಖಿಗಳಾಗಿದ್ದೀರಿ, ವೇಶ್ಯಾಲಯದಲ್ಲಿದ್ದೀರಿ ಅವರನ್ನು ಈಗ ನಾನು ಶಿವಾಲಯದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಅದು ಶಾಂತಿಧಾಮ, ನಿರಾಕಾರಿ ಶಿವಾಲಯ ಮತ್ತು ಸತ್ಯಯುಗ ಸಾಕಾರಿ ಶಿವಾಲಯವಾಗಿದೆ. ಈ ಸಮಯದಲ್ಲಿ ತಂದೆಯು ನೀವು ಮಕ್ಕಳನ್ನು ಪ್ರಫುಲ್ಲಿರನ್ನಾಗಿ ಮಾಡುತ್ತಿದ್ದಾರೆ. ನೀವು ತಂದೆಯ ಸನ್ಮುಖದಲ್ಲಿ ಕುಳಿತುಕೊಂಡಿದ್ದೀರಲ್ಲವೆ. ತಂದೆಯು ಬಂದಿದ್ದಾರೆಂಬುದು ಬುದ್ಧಿಯಲ್ಲಿ ನಿಶ್ಚಯವಿದೆ. ತಂದೆ ಎಂಬ ಅಕ್ಷರವು ಎಷ್ಟೊಂದು ಮಧುರವಾಗಿದೆ! ನಾವು ಆತ್ಮರು ಆ ತಂದೆಯ ಮಕ್ಕಳಾಗಿದ್ದೆವು, ಮತ್ತೆ ಪಾತ್ರವನ್ನಭಿನಯಿಸಲು ಈ ತಂದೆಯ ಮಕ್ಕಳಾಗಿದ್ದೇವೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಎಷ್ಟು ಸಮಯ ನಿಮಗೆ ಲೌಕಿಕ ತಂದೆಯರು ಸಿಕ್ಕಿದ್ದಾರೆ? ಸತ್ಯಯುಗದಿಂದ ಹಿಡಿದು ಸುಖ ಮತ್ತು ದುಃಖದ ಪಾತ್ರವನ್ನು ಅಭಿನಯಿಸಿದ್ದೀರಿ. ಈಗ ಈ ದುಃಖಧಾಮದ ಪಾತ್ರವು ಪೂರ್ಣವಾಗುತ್ತದೆ, ಸುಖಧಾಮದ ಪಾತ್ರವೂ ಸಹ ಪೂರ್ಣ 21 ಜನ್ಮಗಳು ಅಭಿನಯಿಸಿದ್ದೇವೆ ಎಂಬುದು ನಿಮಗೆ ತಿಳಿದಿದೆ. ನಂತರ ಅರ್ಧಕಲ್ಪ ದುಃಖದ ಪಾತ್ರವನ್ನು ಮಾಡಿದ್ದೇವೆ. ತಂದೆಯು ನಿಮ್ಮ ಪಾತ್ರವು ಈ ರೀತಿಯಿದೆ ಎಂದು ನಿಮಗೆ ಸ್ಮೃತಿಯನ್ನು ತರಿಸಿದ್ದಾರೆ. ಮತ್ತೆ ಈಗ ನೀವು ಅರ್ಧಕಲ್ಪ ಸುಖದ ಪಾತ್ರವನ್ನು ಅಭಿನಯಿಸಬೇಕಾಗಿದೆ. ಈ ಜ್ಞಾನದಿಂದ ಆತ್ಮವು ಸಂಪನ್ನವಾಗಿಬಿಡುತ್ತದೆ ನಂತರ ಖಾಲಿಯಾಗಿಬಿಡುತ್ತದೆ. ಮತ್ತೆ ತಂದೆಯು ಸಂಪನ್ನರನ್ನಾಗಿ ಮಾಡುತ್ತಾರೆ. ನಿಮ್ಮ ಕೊರಳಿನಲ್ಲಿ ವಿಜಯದ ಮಾಲೆಯು ಹಾಕಲ್ಪಟ್ಟಿದೆ. ಕೊರಳಲ್ಲಿ ಜ್ಞಾನದ ಮಾಲೆಯಿದೆ. ನಾವು ಚಕ್ರವನ್ನು ಸುತ್ತುತ್ತಾ ಬರುತ್ತೇವೆ, ಸತ್ಯಯುಗ-ತ್ರೇತಾ, ದ್ವಾಪರ-ಕಲಿಯುಗ ಮತ್ತೆ ಮಧುರವಾದ ಸಂಗಮಯುಗ ಬರುತ್ತದೆ. ಇದಕ್ಕೆ ಮಧುರವಾದದ್ದೆಂದು ಕರೆಯಲಾಗುತ್ತದೆ. ಶಾಂತಿಧಾಮದಲ್ಲಿ ಮಧುರತೆಯೇನಿಲ್ಲ. ಎಲ್ಲದಕ್ಕಿಂತ ಮಧುರವಾದದ್ದು ಪುರುಷೋತ್ತಮ ಕಲ್ಯಾಣಕಾರಿ ಸಂಗಮಯುಗ. ಡ್ರಾಮಾದಲ್ಲಿ ನಿಮ್ಮದೂ ಸಹ ಬಹಳ ಒಳ್ಳೆಯ ಪಾತ್ರವಿದೆ. ನೀವು ಎಷ್ಟು ಅದೃಷ್ಟವಂತರು! ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ, ಅವರು ಬಂದು ನೀವು ಮಕ್ಕಳಿಗೆ ಓದಿಸುತ್ತಾರೆ. ಎಷ್ಟೊಂದು ಶ್ರೇಷ್ಠ, ಎಷ್ಟೊಂದು ಸಹಜವಿದ್ಯೆಯಾಗಿದೆ. ಎಷ್ಟೊಂದು ಧನವಂತರಾಗುತ್ತೀರಿ. ಇದರಲ್ಲಿ ಯಾವುದೇ ಕಷ್ಟಪಡುವ ಅಗತ್ಯವಿಲ್ಲ. ಡಾಕ್ಟರ್, ಇಂಜಿನಿಯರ್ ಮೊದಲಾದವರು ಎಷ್ಟೊಂದು ಶ್ರಮಪಡುತ್ತಾರೆ. ತಂದೆಯ ಸಂಪಾದನೆಯ ಮೇಲೆ ಮಕ್ಕಳಿಗೆ ಹಕ್ಕು ಇರುತ್ತದೆಯಲ್ಲವೆ. ನೀವು ಇಲ್ಲಿ ಓದಿ 21 ಜನ್ಮಗಳವರೆಗೆ ಸತ್ಯಸಂಪಾದನೆಯನ್ನು ಮಾಡಿಕೊಳ್ಳುತ್ತೀರಿ. ಅಲ್ಲಿ ನಿಮಗೆ ಯಾವುದೇ ನಷ್ಟವಾಗುವುದಿಲ್ಲ. ತಂದೆಯನ್ನು ನೆನಪು ಮಾಡುವಂತಹ ಯಾವುದೇ ಕಷ್ಟವಿರುವುದಿಲ್ಲ. ಇದಕ್ಕೆ ಅಜಪಾಜಪವೆಂದು ಕರೆಯಲಾಗುತ್ತದೆ.

ತಂದೆಯು ಬಂದಿದ್ದಾರೆಂದು ನಿಮಗೆ ತಿಳಿದಿದೆ. ತಂದೆಯೂ ಸಹ ತಿಳಿಸುತ್ತಾರೆ- ನಾನು ಬಂದಿದ್ದೇನೆ ಅಂದಮೇಲೆ ಎರಡೂ ಕೈಗಳ ಚಪ್ಪಾಳೆಯಾಗುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದ್ದೇ ಆದರೆ ಜನ್ಮ-ಜನ್ಮಾಂತರ ಪಾಪಗಳೆಲ್ಲವೂ ಭಸ್ಮವಾಗುತ್ತದೆ, ಐದು ವಿಕಾರ ರೂಪಿ ರಾವಣನು ತಮ್ಮನ್ನು ಪಾಪಾತ್ಮರನ್ನಾಗಿ ಮಾಡಿದ್ದಾನೆ, ಮತ್ತೆ ಪುಣ್ಯಾತ್ಮರನ್ನಾಗಿ ಮಾಡಬೇಕಾಗಿದೆ. ಇದು ಬುದ್ಧಿಯಲ್ಲಿ ಬರಬೇಕಾಗಿದೆ. ನಾವು ತಂದೆಯ ನೆನಪಿನಿಂದ ಪವಿತ್ರರಾಗಿ ತಂದೆಯ ಜೊತೆ ಮತ್ತೆ ಮನೆಗೆ ಹೋಗುತ್ತೇವೆ. ನಂತರ ಈ ವಿದ್ಯೆಯಿಂದ ನಮಗೆ ಶಕ್ತಿಯು ಸಿಗುತ್ತದೆ. ಧರ್ಮದಲ್ಲಿ ಶಕ್ತಿಯಿದೆ ಎಂದು ದೇವಿ-ದೇವತಾಧರ್ಮಕ್ಕೆ ಹೇಳಲಾಗುತ್ತದೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ತಂದೆಯಿಂದ ನಮಗೆ ವಿಶ್ವದಲ್ಲಿ ಶಾಂತಿಸ್ಥಾಪನೆ ಮಾಡುವಂತಹ ಶಕ್ತಿಯು ಸಿಗುತ್ತದೆ. ಆ ರಾಜ್ಯಭಾಗ್ಯವನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇಷ್ಟೊಂದು ಶಕ್ತಿಯು ಸಿಗುತ್ತದೆ, ರಾಜರುಗಳ ಕೈಯಲ್ಲಿಯೂ ನೋಡಿ ಎಷ್ಟೊಂದು ಶಕ್ತಿಯಿರುತ್ತದೆ. ಅವರಿಗೆ ಎಷ್ಟೊಂದು ಹೆದರುತ್ತಾರೆ, ಒಬ್ಬ ರಾಜನಿಗೆ ಎಷ್ಟೊಂದು ಪ್ರಜೆಗಳಿರುತ್ತಾರೆ, ಸೈನ್ಯ ಮುಂತಾದವುಗಳಿವೆ. ಆದರೂ ಅದು ಅಲ್ಪಕಾಲದ ಶಕ್ತಿಯಾಗಿದೆ, ಇದು 21 ಜನ್ಮಗಳ ಶಕ್ತಿಯಾಗಿದೆ. ನಮಗೆ ಸರ್ವಶಕ್ತಿವಂತ ತಂದೆಯಿಂದ ವಿಶ್ವದ ಮೇಲೆ ರಾಜ್ಯಮಾಡುವಂತಹ ಶಕ್ತಿಯು ಸಿಗುತ್ತಾ ಇದೆ ಎಂಬುದನ್ನು ಈಗ ತಿಳಿದುಕೊಳ್ಳುತ್ತಿದ್ದೀರಿ. ಪ್ರೀತಿಯಂತೂ ಇರುತ್ತದೆಯಲ್ಲವೆ. ಈಗ ದೇವತೆಗಳು ಪ್ರತ್ಯಕ್ಷವಾಗಿಲ್ಲ ಆದರೂ ಸಹ ಅವರ ಬಗ್ಗೆ ಎಷ್ಟೊಂದು ಪ್ರೀತಿಯಿರುತ್ತದೆ! ಒಂದುವೇಳೆ ಸನ್ಮುಖದಲ್ಲಿದ್ದರೆ ಪ್ರಜೆಗಳಿಗೆ ಎಷ್ಟೊಂದು ಪ್ರೀತಿಯಿರುತ್ತದೆ. ನೆನಪಿನ ಯಾತ್ರೆಯಿಂದ ಈ ಎಲ್ಲಾ ಶಕ್ತಿಯನ್ನು ನೀವು ಪಡೆಯುತ್ತಿದ್ದೀರಿ. ಈ ಮಾತನ್ನು ಮರೆಯಬಾರದು. ನೆನಪು ಮಾಡುತ್ತಾ-ಮಾಡುತ್ತಾ ನೀವು ಬಹಳ ಶಕ್ತಿಶಾಲಿಗಳಾಗಿಬಿಡುತ್ತೀರಿ. ಸರ್ವಶಕ್ತಿವಂತನೆಂದು ಮತ್ತ್ಯಾರಿಗೂ ಸಹ ಹೇಳಲು ಸಾಧ್ಯವಿಲ್ಲ. ಎಲ್ಲರಿಗೂ ಶಕ್ತಿಯು ಸಿಗುತ್ತಾ ಇದೆ. ಈ ಸಮಯದಲ್ಲಿ ಯಾರಲ್ಲಿಯೂ ಶಕ್ತಿಯಿಲ್ಲ, ಎಲ್ಲರೂ ತಮೋಪ್ರಧಾನರಾಗಿದ್ದಾರೆ ನಂತರ ಎಲ್ಲಾ ಆತ್ಮಗಳಿಗೆ ಒಬ್ಬ ತಂದೆಯಿಂದ ಶಕ್ತಿಯು ಸಿಗುತ್ತದೆ. ನಂತರ ತಮ್ಮ ರಾಜಧಾನಿಯಲ್ಲಿ ಹೋಗಿ ತಮ್ಮತಮ್ಮದೇ ಆದಂತಹ ಪಾತ್ರವನ್ನಭಿನಯಿಸುತ್ತಾರೆ. ತನ್ನ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಂಡು ಮತ್ತೆ ಹೀಗೆಯೇ ನಂಬರ್ವಾರ್ ಶಕ್ತಿವಂತರಾಗುತ್ತಾರೆ. ಈ ದೇವತೆಗಳಲ್ಲಿ ನಂಬರ್ವನ್ ಶಕ್ತಿಯಿದೆ. ಈ ಲಕ್ಷ್ಮೀ-ನಾರಾಯಣರು ಇಡೀ ವಿಶ್ವಕ್ಕೆ ಮಾಲೀಕರಾಗಿದ್ದರಲ್ಲವೆ. ನೀವು ಮಕ್ಕಳ ಬುದ್ಧಿಯಲ್ಲಿ ಸೃಷ್ಟಿಚಕ್ರದ ಸಾರವಿದೆ. ಹೇಗೆ ನೀವು ಆತ್ಮರಲ್ಲಿ ಜ್ಞಾನವಿದೆಯೋ ಹಾಗೆಯೇ ಬಾಬಾರವರ ಆತ್ಮದಲ್ಲಿಯೂ ಸಹ ಎಲ್ಲಾ ಜ್ಞಾನವಿದೆ. ಈಗ ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ಡ್ರಾಮಾದಲ್ಲಿ ಪಾತ್ರವು ತುಂಬಲ್ಪಟ್ಟಿದೆ, ಅದೇ ಮತ್ತೆ ಪುನರಾವರ್ತನೆಯಾಗುತ್ತದೆ ನಂತರ ಮತ್ತೆ ಆ ಪಾತ್ರವು 5000 ವರ್ಷಗಳ ನಂತರವೇ ಪುನರಾವರ್ತನೆಯಾಗುತ್ತದೆ. ಇದನ್ನು ಸಹ ನೀವು ಮಕ್ಕಳು ತಿಳಿದಿದ್ದೀರಿ, ನೀವು ಸತ್ಯಯುಗದಲ್ಲಿ ರಾಜ್ಯವನ್ನು ಮಾಡುತ್ತಿದ್ದಾಗ ತಂದೆಯು ನಿವೃತ್ತಿಹೊಂದಿರುತ್ತಾರೆ ಮತ್ತೆ ಯಾವಾಗ ಸ್ಟೇಜಿನ ಮೇಲೆ ಬರುತ್ತಾರೆ? ಯಾವಾಗ ನೀವು ದುಃಖಿಗಳಾಗುತ್ತೀರೋ ಆಗ ತಂದೆಯು ಬರುತ್ತಾರೆ. ಅವರಲ್ಲಿ ಎಲ್ಲಾ ರೆಕಾರ್ಡ್ ತುಂಬಲ್ಪಟ್ಟಿದೆ ಎಂಬುದು ನಿಮಗೆ ತಿಳಿದಿದೆ. ಇಷ್ಟೊಂದು ಚಿಕ್ಕದಾದ ಆತ್ಮದಲ್ಲಿ ಎಷ್ಟೊಂದು ತಿಳುವಳಿಕೆಯಿರುತ್ತದೆ. ತಂದೆಯು ಬಂದು ಎಷ್ಟೊಂದು ತಿಳುವಳಿಕೆಯನ್ನು ಕೊಡುತ್ತಾರೆ ನಂತರ ಸತ್ಯಯುಗದಲ್ಲಿ ಇದೆಲ್ಲವನ್ನೂ ಮರೆತುಬಿಡುತ್ತೀರಿ. ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವಿರುವುದಿಲ್ಲ, ಅಲ್ಲಿ ನೀವು ಸುಖವನ್ನು ಭೋಗಿಸುತ್ತಿರುತ್ತೀರಿ. ಸತ್ಯಯುಗದಲ್ಲಿ ನಾವೇ ದೇವತೆಗಳಾಗಿ ಸುಖವನ್ನು ಭೋಗಿಸುತ್ತೇವೆ ಎಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ. ನಾವು ಈಗ ಬ್ರಾಹ್ಮಣರಾಗಿದ್ದೇವೆ ಮತ್ತೆ ನಾವೇ ದೇವತೆಗಳಾಗುತ್ತೇವೆ. ಈ ಜ್ಞಾನವನ್ನು ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಬೇಕು. ಯಾರಿಗಾದರೂ ಈ ವಿಚಾರವನ್ನು ತಿಳಿಸುವುದರಲ್ಲಿ ಖುಷಿಯಾಗುತ್ತದೆಯಲ್ಲವೆ. ನೀವು ಪ್ರಾಣದಾನವನ್ನು ನೀಡುತ್ತೀರಿ. ಕಾಲನು (ಮೃತ್ಯು) ಬಂದು ಎಲ್ಲರನ್ನೂ ತೆಗೆದುಕೊಂಡು ಹೋಗುತ್ತಾನೆಂದು ಹೇಳುತ್ತಾರಲ್ಲವೆ. ಇದ್ಯಾವುದೂ ಇಲ್ಲ. ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ನಾನು ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ಧಾರಣೆ ಮಾಡುತ್ತೇನೆ, ನನಗೆ ಯಾವುದೇ ಕಾಲ ಕಬಳಿಸುವುದಿಲ್ಲ ಎಂದು ಆತ್ಮವೇ ಹೇಳುತ್ತದೆ. ಆತ್ಮನಿಗೆ ಅನುಭೂತಿಯಾಗುತ್ತದೆ. ಆತ್ಮವು ಯಾವಾಗ ಗರ್ಭದಲ್ಲಿರುತ್ತದೆ ಆಗ ಸಾಕ್ಷಾತ್ಕಾರವನ್ನು ನೋಡುತ್ತಾ ದುಃಖವನ್ನು ಭೋಗಿಸುತ್ತಿರುತ್ತದೆ. ಶಿಕ್ಷೆಯನ್ನೂ ಭೋಗಿಸುತ್ತಿರುತ್ತದೆ ಆದ್ದರಿಂದ ಅದಕ್ಕೆ ಗರ್ಭಜೈಲು ಎಂದು ಕರೆಯಲಾಗುತ್ತದೆ. ಎಷ್ಟೊಂದು ವಿಚಿತ್ರವಾದ ನಾಟಕ ಮಾಡಲ್ಪಟ್ಟಿದೆ. ಗರ್ಭಜೈಲಿನಲ್ಲಿ ಶಿಕ್ಷೆಯನ್ನು ಭೋಗಿಸುತ್ತಾ, ಶಿಕ್ಷೆಯು ಹೇಗೆ ಸಿಗುತ್ತಿದೆಯೆಂಬ ಸಾಕ್ಷಾತ್ಕಾರವನ್ನು ನೋಡುತ್ತಿರುತ್ತದೆ. ಇಂತಿಂತಹ ಉಲ್ಲಂಘನೆಯನ್ನು (ತಪ್ಪು) ಮಾಡಿದ್ದೇನೆ, ಅದಕ್ಕೇ ದುಃಖವನ್ನು ಅನುಭವಿಸಬೇಕಾಗಿದೆ ಎಂಬುದನ್ನು ಸಾಕ್ಷಾತ್ಕಾರವಾಗುತ್ತದೆ. ಅಲ್ಲಿ (ಗರ್ಭಜೈಲು) ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ ಆದರೂ ಸಹ ಹೊರಗೆ ಬಂದ ನಂತರ ಪಾಪಾತ್ಮರಾಗಿಬಿಡುತ್ತಾರೆ. ಎಲ್ಲಾ ಪಾಪಗಳು ಹೇಗೆ ಭಸ್ಮವಾಗುವುದು! ಈ ನೆನಪಿನ ಯಾತ್ರೆಯಿಂದ ಪಾಪವು ಭಸ್ಮವಾಗುತ್ತದೆಯೆಂದು ಮಕ್ಕಳಿಗೆ ತಿಳಿಸಿಕೊಡಲಾಗಿದೆ ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸುವುದರಿಂದ ಪಾಪವು ಭಸ್ಮವಾಗಿಬಿಡುತ್ತದೆ. ತಂದೆಯೂ ಸಹ ತಿಳಿಸುತ್ತಾರೆ- ಮಧುರಾತಿ ಮಧುರ ಸ್ವದರ್ಶನ ಚಕ್ರಧಾರಿ ಮಕ್ಕಳೇ, ನೀವು 84 ಜನ್ಮಗಳ ಸ್ವದರ್ಶನ ಚಕ್ರವನ್ನು ತಿರುಗಿಸಿದ್ದೇ ಆದರೆ ನಿಮ್ಮ ಜನ್ಮ-ಜನ್ಮಾಂತರದ ಪಾಪವು ತುಂಡಾಗುತ್ತದೆ. ಚಕ್ರವನ್ನೂ ಸಹ ನೆನಪು ಮಾಡಬೇಕು. ಈ ಜ್ಞಾನವನ್ನು ಯಾರು ತಿಳಿಸಿದ್ದಾರೆಯೋ ಅವರನ್ನು ನೆನಪು ಮಾಡಬೇಕು. ತಂದೆಯು ನಮ್ಮನ್ನು ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡಿದ್ದಾರೆ ಆದರೆ ನಿತ್ಯವೂ ಹೊಸ-ಹೊಸಬರು ಬರುತ್ತಿರುತ್ತಾರೆ. ಅವರಿಗೆ ರಿಫ್ರೆಷ್ ಮಾಡಬೇಕಾಗುತ್ತದೆ. ನಿಮಗೆ ಎಲ್ಲದರ ಜ್ಞಾನವು ಸಿಕ್ಕಿದೆ. ನಾವು ಪಾತ್ರವನ್ನಭಿನಯಿಸಲು ಬಂದಿದ್ದೇವೆಂದು ತಿಳಿದಿದ್ದೀರಿ. 84 ಜನ್ಮಗಳ ಚಕ್ರವನ್ನು ಸುತ್ತಿ ಮತ್ತೆ ಈಗ ಹಿಂತಿರುಗಿ ಹೋಗಬೇಕಾಗಿದೆ. ಈ ರೀತಿ ಚಕ್ರವನ್ನು ಸುತ್ತಿಸುತ್ತೀರಲ್ಲವೆ. ಮಕ್ಕಳು ಬಹಳಷ್ಟು ಮರೆತುಬಿಡುತ್ತಾರೆ ಎಂಬುದನ್ನು ತಂದೆಯು ತಿಳಿದುಕೊಂಡಿದ್ದಾರೆ. ಚಕ್ರವನ್ನು ಸುತ್ತಿಸುವುದರಲ್ಲಿ ಯಾವುದೇ ಕಷ್ಟವಾಗುವುದಿಲ್ಲ. ಸಮಯವೂ ಸಹ ಬಹಳಷ್ಟು ಸಿಗುತ್ತದೆ. ಕೊನೆಯಲ್ಲಿ ನಿಮ್ಮದು ಸ್ವದರ್ಶನಚಕ್ರಧಾರಿ ಸ್ಥಿತಿಯಾಗಿರುತ್ತದೆ. ನೀವು ಇಂತಹವರಾಗಬೇಕಾಗಿದೆ. ಸನ್ಯಾಸಿಗಳು ಈ ಶಿಕ್ಷಣವನ್ನು ಕೊಡಲು ಸಾಧ್ಯವಿಲ್ಲ. ಸ್ವದರ್ಶನ ಚಕ್ರದ ಜ್ಞಾನವನ್ನು ಆ ಗುರುಜನರೇನೂ ತಿಳಿದುಕೊಂಡಿಲ್ಲ. ಅವರು ಕೇವಲ ಗಂಗೆಯ ಬಳಿ ನಡೆಯಿರೆಂದು ಹೇಳುತ್ತಾರೆ, ಎಷ್ಟೊಂದು ಸ್ನಾನ ಮಾಡುತ್ತಾರೆ! ಅನೇಕರು ಸ್ನಾನ ಮಾಡುವುದರಿಂದ ಗುರುಗಳಿಗೆ ಸಂಪಾದನೆಯಾಗುತ್ತದೆ. ಗಳಿಗೆ-ಗಳಿಗೆಗೆ ಯಾತ್ರೆಗೆ ಹೋಗುತ್ತಾರೆ. ಆಗ ಆ ಯಾತ್ರೆ ಮತ್ತು ಈ ಯಾತ್ರೆಯಲ್ಲಿ ಎಷ್ಟು ವ್ಯತ್ಯಾಸವಿದೆ ನೋಡಿ. ಈ ಯಾತ್ರೆಯು ಆ ಎಲ್ಲಾ ಯಾತ್ರೆಯಿಂದ ಇಳಿಸಿಬಿಡುತ್ತದೆ. ಈ ಯಾತ್ರೆಯು ಎಷ್ಟೊಂದು ಸಹಜವಾಗಿದೆ, ಚಕ್ರವನ್ನು ಸುತ್ತಿಸಿ ನಾಲ್ಕೂಧಾಮವನ್ನು ಸುತ್ತಿಹಾಕಿದೆವು. ಆದರೂ ಸಹ ಸದಾಕಾಲ ದೂರವೇ ಉಳಿದೆವು ಎಂಬ ಗೀತೆಯನ್ನು ಹಾಡುತ್ತಾರಲ್ಲವೆ. ಬೇಹದ್ದಿನ ತಂದೆಯಿಂದ ದೂರ ಉಳಿದೆವು. ಇದು ತಮಗೆ ಅನುಭೂತಿಯಾಗುತ್ತದೆ ಆದರೆ ಆ ಜನರು ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ನಾವು ಬಹಳಷ್ಟು ಸುತ್ತಿಬಂದೆವು ಎಂಬುದು ನೀವು ತಿಳಿದಿದ್ದೀರಿ. ಈಗ ಈ ಎಲ್ಲಾ ಪ್ರಕಾರದ ಅಲೆದಾಟದಿಂದ ಮುಕ್ತರಾಗಿಬಿಟ್ಟಿರಿ. ಹುಡುಕಾಡುತ್ತಾ ಯಾರೂ ಸಮೀಪದಲ್ಲಿ ಬರಲಿಲ್ಲ, ಇನ್ನೂ ದೂರವೇ ಉಳಿದೆವು.

ಈಗ ಡ್ರಾಮ ಪ್ಲಾನನುಸಾರ ತಂದೆಯೇ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ಬರಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ- ನನ್ನ ಮತದಂತೆ ನೀವು ನಡೆಯಬೇಕಾಗಿದೆ, ಪವಿತ್ರರಾಗಬೇಕಾಗಿದೆ. ಈ ಜಗತ್ತನ್ನು ನೋಡುತ್ತಾ ಇದ್ದರೂ ಸಹ ನೋಡದಂತೆ ಇರಬೇಕು. ಎಲ್ಲಿಯವರೆಗೂ ಹೊಸಮನೆಯ ತಯಾರಿಯಾಗುವುದಿಲ್ಲವೋ ಅಲ್ಲಿಯವರೆಗೂ ಹಳೆಯ ಮನೆಯಲ್ಲಿರಬೇಕಾಗುತ್ತದೆ. ತಂದೆಯು ಸಂಗಮಯುಗದಲ್ಲಿಯೇ ಆಸ್ತಿಯನ್ನು ಕೊಡಲು ಬರಬೇಕಾಗುತ್ತದೆ. ಬೇಹದ್ದಿನ ತಂದೆಯದು ಬೇಹದ್ದಿನ ಆಸ್ತಿಯಾಗಿದೆ. ತಂದೆಯ ಆಸ್ತಿಯು ನಮ್ಮದಾಗಿದೆ ಎಂಬುದು ಮಕ್ಕಳು ತಿಳಿದಿರುತ್ತಾರೆ, ಅದೇ ಖುಷಿಯಲ್ಲಿರುತ್ತಾರೆ. ತಮ್ಮ ಸಂಪಾದನೆಯನ್ನೂ ಸಹ ಮಾಡುತ್ತಾರೆ ಮತ್ತು ತಂದೆಯ ಆಸ್ತಿಯೂ ಸಹ ಸಿಗುತ್ತದೆ. ನಿಮಗಂತೂ ಕೇವಲ ಆಸ್ತಿಯು ಮಾತ್ರವೇ ಸಿಗುತ್ತದೆ. ಸ್ವರ್ಗದಲ್ಲಿ ಆಸ್ತಿಯು ನಮಗೆ ಹೇಗೆ ಸಿಕ್ಕಿದೆ ಎಂಬುದು ಇಲ್ಲಿ ನಿಮಗೆ ತಿಳಿದಿರುವುದಿಲ್ಲ. ಅಲ್ಲಿ ನಿಮ್ಮ ಜೀವನ ಬಹಳ ಸುಖವಾಗಿರುತ್ತದೆ ಏಕೆಂದರೆ ತಾವು ತಂದೆಯನ್ನು ನೆನಪು ಮಾಡಿ ಶಕ್ತಿಯನ್ನು ಪಡೆದುಕೊಳ್ಳುತ್ತೀರಿ. ಪಾಪವನ್ನು ಹರಣ ಮಾಡುವಂತಹ ಪತಿತ-ಪಾವನ ಒಬ್ಬರೇ ತಂದೆಯಾಗಿದ್ದಾರೆ. ತಂದೆಯನ್ನು ನೆನಪು ಮಾಡಿ ಮತ್ತು ಸ್ವದರ್ಶನಚಕ್ರವನ್ನು ತಿರುಗಿಸುವುದರಿಂದಲೇ ನಿಮ್ಮ ಪಾಪವೆಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ಇದನ್ನು ಚೆನ್ನಾಗಿ ನೋಟ್ ಮಾಡಿಕೊಳ್ಳಬೇಕಾಗಿದೆ. ಈ ರೀತಿ ತಿಳಿಸಿಕೊಡಬೇಕಷ್ಟೆ. ಮುಂದೆಹೋದಂತೆ ನಿಮಗೆ ಇಷ್ಟೆಲ್ಲಾ ಹೇಳುವ ಅವಶ್ಯಕತೆಯಿಲ್ಲ. ಕೇವಲ ಒಂದು ಸೂಚನೆ ಕೊಟ್ಟರೆ ಸಾಕು- ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ನಿಮ್ಮ ಪಾಪವೆಲ್ಲವೂ ಭಸ್ಮವಾಗಿಬಿಡುತ್ತದೆ ಎಂದು ತಿಳಿಸಿ. ನೀವು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮೀಯಾಗಲು ಬರುತ್ತೀರಿ, ಇದು ನೆನಪಿದೆಯಲ್ಲವೆ ಮತ್ತೆ ಯಾರದೇ ಬುದ್ಧಿಯಲ್ಲಿ ಈ ಮಾತುಗಳು ನೆನಪಿಗೆ ಬರುವುದಿಲ್ಲ. ನಾವು ಬಾಪ್ದಾದಾರವರ ಬಳಿ ಬರುತ್ತೇವೆ ಎಂಬುದು ಬುದ್ಧಿಯಲ್ಲಿದೆ. ಅವರಿಂದ ಹೊಸ ಪ್ರಪಂಚ, ಸ್ವರ್ಗದ ಆಸ್ತಿಯನ್ನು ಪಡೆಯುತ್ತೇವೆ.

ತಂದೆಯು ತಿಳಿಸುತ್ತಾರೆ- ಸ್ವದರ್ಶನ ಚಕ್ರಧಾರಿಗಳಾಗುವುದರಿಂದ ನಿಮ್ಮ ವಿಕರ್ಮ ವಿನಾಶವಾಗಿಬಿಡುತ್ತದೆ. ಯಾರು ಈಗ ನಿಮ್ಮ ಜೀವನವನ್ನು ವಜ್ರಸಮಾನವನ್ನಾಗಿ ಮಾಡುತ್ತಾರೆ ಅವರನ್ನು ನೋಡಿ. ಇದರಲ್ಲಿ ನೋಡುವ ಮಾತೇನೂ ಇಲ್ಲ ಎಂಬುದು ನಿಮಗೆ ತಿಳಿದಿದೆ. ಇದನ್ನು ನೀವು ದಿವ್ಯದೃಷ್ಟಿಯಿಂದ ತಿಳಿದುಕೊಳ್ಳುತ್ತೀರಿ. ಈ ಶರೀರದ ಮೂಲಕ ಆತ್ಮವೇ ಓದುತ್ತದೆ, ಈ ಜ್ಞಾನವು ಈಗ ಸಿಕ್ಕಿದೆ. ನಾವು ಯಾವ ಕರ್ಮವನ್ನು ಮಾಡುತ್ತೇವೆ, ಆತ್ಮವು ಶರೀರವನ್ನು ತೆಗೆದುಕೊಂಡು ಕರ್ಮವನ್ನು ಮಾಡುತ್ತದೆ. ತಂದೆಯೂ ಸಹ ಓದಿಸಬೇಕಾಗಿದೆ. ಅವರ ಹೆಸರು ಸದಾಕಾಲ ಶಿವ ಎಂದೇ ಆಗಿದೆ. ಶರೀರದ ಹೆಸರು ಬದಲಾಗುತ್ತಿರುತ್ತದೆ ಆದರೆ ಈ ಶರೀರವು ನನ್ನದಲ್ಲ. ಇದು (ಬ್ರಹ್ಮಾ) ಇವರ ಸ್ವತ್ತಾಗಿದೆ. ಶರೀರ ಆತ್ಮನ ಸ್ವತ್ತು ಆಗಿದೆ. ಇದರಿಂದ ಆತ್ಮವು ಪಾತ್ರವನ್ನಭಿನಯಿಸುತ್ತದೆ. ಇದು ಬಹಳ ಸಹಜವಾಗಿ ತಿಳಿದುಕೊಳ್ಳುವ ಮಾತಾಗಿದೆ. ಆತ್ಮವಂತೂ ಎಲ್ಲರಲ್ಲಿಯೂ ಇದೆ, ಎಲ್ಲರ ಶರೀರದ ಹೆಸರು ಬೇರೆ-ಬೇರೆಯಾಗುತ್ತದೆ, ಇವರು ಪರಮಾತ್ಮನಾಗಿದ್ದಾರೆ, ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ. ಭಗವಂತ ಒಬ್ಬರೇ ರಚಯಿತನಾಗಿದ್ದಾರೆ ಎಂಬುದನ್ನು ನೀವು ತಿಳಿದಿದ್ದೀರಿ. ಉಳಿದವರೆಲ್ಲರೂ ರಚನೆ, ಪಾತ್ರವನ್ನು ಅಭಿನಯಿಸುವವರಾಗಿದ್ದಾರೆ. ಹೇಗೆ ಆತ್ಮರು ಬರುತ್ತಾರೆ ಎಂಬುದನ್ನೂ ಸಹ ತಿಳಿದುಕೊಂಡಿದ್ದೀರಿ. ಮೊಟ್ಟಮೊದಲು ಆದಿಸನಾತನ ದೇವಿ-ದೇವತಾಧರ್ಮದವರು ಸ್ವಲ್ಪವೇ ಇರುತ್ತಾರೆ ನಂತರ ಕೊನೆಯಲ್ಲಿ ಸೃಷ್ಟಿಯಲ್ಲಿ ಮೊದಲು ಬರಲು ಯೋಗ್ಯರಾಗುತ್ತಾರೆ. ಈ ಸೃಷ್ಟಿಚಕ್ರವು ಮಾಲೆಯ ರೀತಿಯಿದೆ, ಇದು ಸುತ್ತುತ್ತಾ ಇರುತ್ತದೆ. ಮಾಲೆಯನ್ನು ನೀವು ಜಪಿಸುತ್ತಾ ಹೋದರೆ ಎಲ್ಲಾ ಮಣಿಯು ಸುತ್ತುತ್ತಾ ಇರುತ್ತದೆ. ಸತ್ಯಯುಗದಲ್ಲಿ ಅಂಶಮಾತ್ರವೂ ಭಕ್ತಿಮಾಡುವುದಿಲ್ಲ. ಹೇ ಆತ್ಮಗಳೇ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಿಳಿಸುತ್ತಾರೆ. ನೀವು ಅವಶ್ಯವಾಗಿ ಮನೆಗೆ ಹೋಗಬೇಕಾಗಿದೆ, ವಿನಾಶವು ಎದುರಿನಲ್ಲಿ ನಿಂತಿದೆ. ನೆನಪಿನಿಂದಲೇ ಪಾಪವು ತುಂಡಾಗಿಬಿಡುತ್ತದೆ ಮತ್ತೆ ಶಿಕ್ಷೆಯನ್ನು ಅನುಭವಿಸುವುದರಿಂದ ಮುಕ್ತರಾಗಿಬಿಡುತ್ತೀರಿ. ಪದವಿಯೂ ಸಹ ಒಳ್ಳೆಯದನ್ನೇ ಪಡೆಯುತ್ತೀರಿ. ಇಲ್ಲವೆಂದರೆ ಬಹಳಷ್ಟು ಶಿಕ್ಷೆಯನ್ನು ಭೋಗಿಸಬೇಕಾಗುತ್ತದೆ. ನಾನು ನೀವು ಮಕ್ಕಳಬಳಿ ಎಷ್ಟು ಒಳ್ಳೆಯ ಅತಿಥಿಯಾಗಿ ಬಂದಿದ್ದೇನೆ ಅಲ್ಲವೆ. ಇಡೀ ವಿಶ್ವವನ್ನೇ ಪರಿವರ್ತನೆ ಮಾಡುತ್ತೇನೆ, ಹಳೆಯದನ್ನು ಹೊಸದನ್ನಾಗಿ ಮಾಡುತ್ತೇನೆ. ನಿಮಗೂ ಸಹ ತಿಳಿದಿದೆ- ತಂದೆಯು ಕಲ್ಪ-ಕಲ್ಪವೂ ಬಂದು ವಿಶ್ವವನ್ನು ಪರಿವರ್ತನೆ ಮಾಡಿ ಹಳೆಯ ವಿಶ್ವವನ್ನು ಹೊಸದನ್ನಾಗಿ ಮಾಡಿಬಿಡುತ್ತಾರೆ. ಈ ವಿಶ್ವವು ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದಾಗುತ್ತದೆ. ನೀವು ಈ ಸಮಯದಲ್ಲಿ ಚಕ್ರವನ್ನು ಸುತ್ತಿಸುತ್ತೀರಿ. ತಂದೆಯ ಬುದ್ಧಿಯಲ್ಲಿ ಜ್ಞಾನವಿದೆ, ವರ್ಣನೆ ಮಾಡುತ್ತಾರೆ. ನೀವು ಮಕ್ಕಳ ಬುದ್ಧಿಯಲ್ಲಿ ಈ ಚಕ್ರವನ್ನು ಸುತ್ತಿಸುತ್ತೀರಿ. ತಂದೆಯು ಬಂದಿದ್ದಾರೆ, ಅವರ ಮತದಂತೆ ನಾವು ಪಾವನರಾಗುತ್ತೇವೆ ಎಂಬುದನ್ನು ತಿಳಿದಿದ್ದೀರಿ. ನೆನಪಿನಿಂದಲೇ ಪಾವನರಾಗುತ್ತೀರಿ ಮತ್ತೆ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಪುರುಷಾರ್ಥವನ್ನೂ ಸಹ ಅವಶ್ಯವಾಗಿ ಮಾಡಬೇಕಾಗಿದೆ. ಪುರುಷಾರ್ಥವನ್ನು ಮಾಡಿಸಲು ಎಷ್ಟೊಂದು ಚಿತ್ರ ಮುಂತಾದವನ್ನು ಮಾಡಿಸುತ್ತಾರೆ. ಯಾರೆಲ್ಲರೂ ಬರುತ್ತಾರೆಯೋ ಅವರಿಗೆ ನೀವು 84 ಜನ್ಮಗಳ ಚಕ್ರವನ್ನು ತಿಳಿಸಿಕೊಡುತ್ತೀರಿ. ತಂದೆಯನ್ನು ನೆನಪು ಮಾಡುವುದರಿಂದ ನೀವು ಪತಿತರಿಂದ ಪಾವನರಾಗಿಬಿಡುವಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಜ್ಞಾನವನ್ನು ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಿ ಅನೇಕರಿಗೆ ಪ್ರಾಣದಾನ ನೀಡಬೇಕು, ಸ್ವದರ್ಶನ ಚಕ್ರಧಾರಿಗಳಾಗಬೇಕು.

2. ಈ ಮಧುರವಾದ ಸಂಗಮದಲ್ಲಿ ತನ್ನ ಸಂಪಾದನೆಯ ಜೊತೆಜೊತೆಗೆ ತಂದೆಯ ಶ್ರೀಮತದಂತೆ ನಡೆದು ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ತನ್ನ ಜೀವನವನ್ನು ಸದಾ ಸುಖಿಯನ್ನಾಗಿ ಮಾಡಿಕೊಳ್ಳಬೇಕು.

ವರದಾನ: ಸರ್ವ ಗಳನ್ನು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಿ ಫಲೀಭೂತವನ್ನಾಗಿ ಮಾಡುವಂತಹ ಫಲ ಸ್ವರೂಪ ಭವ
ಬಾಪ್ದಾದಾರವರ ಮೂಲಕ ಸಮಯ ಪ್ರತಿ ಸಮಯ ಏನೆಲ್ಲಾ ವರದಾನ ಸಿಕ್ಕಿದೆ, ಅದನ್ನು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಿ. ಕೇವಲ ವರದಾನ ಕೇಳಿ ಇಂದು ಬಹಳ ಒಳ್ಳೆಯ ವರದಾನ ಸಿಕ್ಕಿತು ಎಂದು ಖುಶಿಯಾಗಬೇಡಿ. ವರದಾನವನ್ನು ಕಾರ್ಯದಲ್ಲಿ ತೊಡಗಿಸುವುದರಿಂದ ವರದಾನ ಖಾಯಂ ಆಗಿರುವುದು. ವರದಾನವಂತೂ ಅವಿನಾಶಿ ತಂದೆಯದಾಗಿದೆ ಆದರೆ ಅದನ್ನು ಫಲೀಭೂತ ಮಾಡಬೇಕು. ಅದಕ್ಕಾಗಿ ವರದಾನಕ್ಕೆ ಪದೇ-ಪದೇ ಸ್ಮೃತಿಯ ನೀರನ್ನು ಕೊಡಿ, ವರದಾನದ ಸ್ವರೂಪದಲ್ಲಿ ಸ್ಥಿತವಾಗುವ ಬಿಸಿಲನ್ನು ಕೊಡಿ ಆಗ ವರದಾನಗಳ ಫಲಸ್ವರೂಪ ಆಗಿಬಿಡುವಿರಿ.
ಸ್ಲೋಗನ್: ವಿಶೇಷತೆಗಳು ಪ್ರಭು ಪ್ರಸಾದವಾಗಿದೆ, ಇದನ್ನು ಸೇವೆಯಲ್ಲಿ ತೊಡಗಿಸಿ, ಹಂಚಿ ಮತ್ತು ಹೆಚ್ಚಿಸಿ.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.