ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 27, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 27, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

27/10/24
ಪ್ರಾತಃಮುರುಳಿ
ಓಂಶಾಂತಿ
"ಅವ್ಯಕ್ತ-ಬಾಪ್ದಾದಾ"
ರಿವೈಜ್: 08/01/20

ಆತ್ಮಿಕ ಪ್ರೀತಿಯ ಮೂರ್ತಿಗಳಾಗಿ ಶಿಕ್ಷಣ ಮತ್ತು ಸಹಯೋಗವನ್ನು ಜೊತೆ-ಜೊತೆಯಾಗಿ ಕೊಡಿ

[ವಿಶೇಷ ಮಧುಬನ ನಿವಾಸಿ ಸಹೋದರ-ಸಹೋದರಿಯರೊಂದಿಗೆ ಸಂಭಾಷಣೆ)

ಇಂದು ಪ್ರೀತಿಯ ಸಾಗರ ಬಾಪ್ದಾದಾ ತಮ್ಮ ಮಾಸ್ಟರ್ ಜ್ಞಾನಸಾಗರ ಮಕ್ಕಳೊಂದಿಗೆ ಮಿಲನ ಮಾಡುತ್ತಿದ್ದಾರೆ. ಈ ಪರಮಾತ್ಮನ ಪ್ರೀತಿಯು ಮಕ್ಕಳ ಪಾಲನೆಗೆ ಆಧಾರವಾಗಿದೆ. ಹೇಗೆ ಪರಮಾತ್ಮನ ಪ್ರೀತಿಯು ಬ್ರಾಹ್ಮಣ ಜೀವನದ ಆಧಾರವಾಗಿದೆಯೋ ಹಾಗೆಯೇ ಬ್ರಾಹ್ಮಣರ ಸಂಘಟನೆಯ ಆಧಾರವು ಆತ್ಮಿಕ ಪ್ರೀತಿಯಾಗಿದೆ. ಈ ಆತ್ಮಿಕ ಪ್ರೀತಿಯನ್ನು ತಾವು ಮಕ್ಕಳೇ ಆನುಭವ ಮಾಡುತ್ತೀರಿ. ಇಂದಿನ ವಿಶ್ವದ ಆತ್ಮಗಳು ಈ ಸತ್ಯ, ನಿಸ್ವಾರ್ಥ ಆತ್ಮಿಕ ಪರಮಾತ್ಮನ ಪ್ರೀತಿಗೆ ಬಾಯಾರಿದ್ದಾರೆ. ಇಂತಹ ಸತ್ಯ ಪ್ರೀತಿಯು ತಾವು ಬ್ರಾಹ್ಮಣ ಆತ್ಮಗಳ ವಿನಃ ಮತ್ಯಾರಿಗೂ ಪ್ರಾಪ್ತವಾಗುವುದಿಲ್ಲ. ಬಾಯಾರಿರುವ ಆತ್ಮಗಳ ಬಾಯಾರಿಕೆಯನ್ನು ಪೂರ್ಣ ಮಾಡುವಂತಹವರು ತಮ್ಮನ್ನು ಪ್ರತೀ ಸಮಯ ಪರಮಾತ್ಮನ ಪ್ರೀತಿ ಹಾಗೂ ಆತ್ಮಿಕ ಪ್ರೀತಿಯಲ್ಲಿ ಸಮಾವೇಶವಾಗಿರುವಂತಹ ಅನುಭವ ಮಾಡುತ್ತೀರಾ? ಸದಾ ಪ್ರೀತಿಯ ದಾತಾ ಅಥವಾ ದೇವತೆಗಳಾಗಿದ್ದೀರಾ? ನಡೆಯುತ್ತಾ-ತಿರುಗಾಡುತ್ತಾ ಆತ್ಮಿಕ ಪ್ರೀತಿಯ ವೃತ್ತಿ, ದೃಷ್ಟಿ, ಮಾತು. ಸಂಬಂಧ-ಸಂಪರ್ಕ ಅರ್ಥಾತ್ ಕರ್ಮದ ಅನುಭವ ಮಾಡುತ್ತೀರಾ? ಎಂತಹ ಆತ್ಮನೇ ಇರಲಿ ಆದರೆ ತಾವು ಬ್ರಾಹ್ಮಣರ ಸ್ವಾಭಾವಿಕ ವೃತ್ತಿ, ಬ್ರಾಹ್ಮಣರ ಸ್ವಭಾವ ಆಗಿಬಿಟ್ಟಿದೆಯೇ? ಆಗಬೇಕಾಗುತ್ತದೆಯೋ ಅಥವಾ ಆಗಿಬಿಟ್ಟಿದೆಯೋ? ಫಾಲೋ ಫಾದರ್, ಫಾಲೋ ಮದರ್. ತಮ್ಮ ಬ್ರಾಹ್ಮಣ ಜನ್ಮದ ಆದಿಯ ಸಮಯವನ್ನು ನೆನಪಿಸಿಕೊಳ್ಳಿ. ಭಿನ್ನ-ಭಿನ್ನ ಸ್ವಭಾವದವರು ತಂದೆಯ ಮಕ್ಕಳಾದರು. ಪ್ರೀತಿಯ ಸಾಗರ ತಂದೆಯು ಒಂದೇ ಪ್ರೀತಿಯ ಸಾಗರದ ಸ್ವರೂಪದ ಅನಾದಿ ಸ್ವಭಾವದಿಂದ ತಮ್ಮವರನ್ನಾಗಿ ಮಾಡಿಕೊಂಡರಲ್ಲವೇ! ಒಂದುವೇಳೆ ತಾವು ಎಲ್ಲರ ಭಿನ್ನ-ಭಿನ್ನ ಸ್ವಭಾವವನ್ನು ನೋಡುತ್ತಾ ತಮ್ಮವರನ್ನಾಗಿ ಮಾಡಿಕೊಳ್ಳಲು ಸಾಧ್ಯವೇ? ಅಂದಾಗ ತಮ್ಮೊಂದಿಗೆ ಕೇಳಿಕೊಳ್ಳಿ- ನನ್ನ ನ್ಯಾಚುರಲ್ ಸ್ವಭಾವವು ಏನಾಗಿದೆ? ಯಾರದೇ ಬಲಹೀನ ಸ್ವಭಾವ ವಾಸ್ತವದಲ್ಲಿ ಬ್ರಾಹ್ಮಣ ಜೀವನದ ನ್ಯಾಚರಲ್ ಸ್ವಭಾವವು [ಸ್ವಾಭಾವಿಕ ಗುಣ] ಮಾಸ್ಟರ್ ಪ್ರೇಮ ಸಾಗರ ಆಗಿದೆ. ಯಾವಾಗ ಪ್ರಪಂಚದವರೂ ಸಹ ಪ್ರೀತಿಯ ಈ ಕಲ್ಲನ್ನು ನೀರನ್ನಾಗಿ ಮಾಡುತ್ತದೆ ಎಂದು ಹೇಳುತ್ತಾರೆಂದರೆ ಆತ್ಮಿಕ ಪ್ರೀತಿ. ಪರಮಾತ್ಮ ಪ್ರೀತಿಯನ್ನು ಪಡೆದು ಕೊಡುವಂತಹವರು, ಭಿನ್ನ-ಭಿನ್ನ ಸ್ವಭಾವವನ್ನ ಪರಿವರ್ತನೆ ಮಾಡಲು ಸಾಧ್ಯವಿಲ್ಲವೇ? ಆಗುತ್ತದೆಯೋ ಅಥವಾ ಇಲ್ಲವೋ? ಹಿಂದೆ ಇರುವವರು ಹೇಳಿ? ಮಾಡಲು ಸಾಧ್ಯವೆಂದು ಯಾರು ತಿಳಿಯುತ್ತಿರೋ ಅವರು ಒಂದು ಕೈಯನ್ನು ಎತ್ತಿ. ಕೈಯನ್ನು ಪೂರ್ತಿ ಎತ್ತಿ ಅರ್ಧ ಅಲ್ಲ. [ಎಲ್ಲರೂ ಕೈ ಎತ್ತಿದರು) ಒಳ್ಳೆಯದು. ಶುಭಾಶಯಗಳು! ಇನ್ನೂ ಪರಿಸ್ಥಿತಿಗಳು ಬರುತ್ತವೆ. ಪರಿಸ್ಥಿತಿಗಳಂತೂ ಬರಲೇ ಬೇಕಾಗಿದೆ. ಇವು ಬ್ರಾಹ್ಮಣ ಜೀವನದ ಮಾರ್ಗದ ಸೈಡ್ಸೀನ್ಸ್ ಆಗಿದೆ ಮತ್ತು ಸೈಡ್ಸೀನ್ಸ್ ಎಂದೂ ಸಹ ಒಂದೇ ರೀತಿ ಇರುವುದಿಲ್ಲ. ಕೆಲವು ದೃಶ್ಯಗಳು ಸುಂದರವಾಗಿಯೂ ಇರುತ್ತವೆ. ಕೆಲವು ದೃಶ್ಯಗಳು ಕೆಟ್ಟದಾಗಿಯೂ ಇರುತ್ತದೆ. ಆದರೆ ಪಾರು ಮಾಡುವುದು ಯಾತ್ರಿಕನ ಕೆಲಸವಾಗಿದೆ. ಇದರಲ್ಲಿ ಸೈಡ್ ಸೀನ್ ಬದಲಾಗುವ ಮಾತಿಲ್ಲ ಅಂದಾಗ ಬಾಪ್ದಾದಾ ಏನನ್ನು ಇಚ್ಛಿಸುತ್ತಾರೆ! ಇದನ್ನು ತಿಳಿದುಕೊಳ್ಳುವುದರಲ್ಲಂತೂ ಎಲ್ಲರೂ ಬುದ್ಧಿವಂತರಾಗಿಬಿಟ್ಟಿದ್ದೀರಲ್ಲವೇ.

ಇಂದು ಮಧುಬನ ನಿವಾಸಿಗಳಿಗೆ ವಿಶೇಷ ಅವಕಾಶವು ಸಿಕ್ಕಿದೆ. ಗೋಲ್ಡನ್ ಚಾನ್ಸ್ ಸಿಕ್ಕಿದೆಯಲ್ಲವೇ. ಒಳ್ಳೆಯದು. ಈ ಗೋಲ್ಡನ್ ಚಾನ್ಸಿಗೆ ರಿಟರ್ನ್ ಏನು? ತುಂಬಾ ಉಮ್ಮಂಗ ಉತ್ಸಾಹದಿಂದ ಈ ಅವಕಾಶವನ್ನು ತೆಗೆದುಕೊಂಡಿದ್ದೀರಿ. ಹೇಳಬೇಕೆಂದರೆ ಕೆಳಗಡೆ ಕುಳಿತಿರುವವರೂ ಸಹ ಮಧುಬನ ನಿವಾಸಿಗಳಾಗಿದ್ದಾರೆ [ಮಧುಬನ ನಿವಾಸಿ ಸಹೋದರ-ಸಹೋದರಿಯರನ್ನು ಬಿಟ್ಟು ಅನ್ಯ ಎಲ್ಲರೂ ಪಾಂಡವ ಭವನದಲ್ಲಿ ಮುರಳಿಯನ್ನು ಕೇಳುತ್ತಿದ್ದಾರೆ] ಆದರೆ ಇಂದು ಕೇವಲ ಪ್ರತ್ಯೇಕವಾಗಿ ಗ್ರೂಪ್-ಗ್ರೂಪನ್ನು ಮಿಲನ ಮಾಡುವ ಅವಕಾಶವಿದೆ. ಇಷ್ಟೂ ಜೊತೆ ಕೂಡಿದರೆ, ದೂರ-ದೂರ ಆಗಿಬಿಡುತ್ತಾರೆ, ಆದ್ದರಿಂದ ಚಿಕ್ಕ-ಚಿಕ್ಕ ಭಾಗಗಳನ್ನಾಗಿ ಮಾಡಿದ್ದಾರೆ. ಆದರೆ ಎಲ್ಲರೂ ಮಧುಬನ ನಿವಾಸಿಗಳಾಗಿದ್ದಾರೆ. ಯಾವಾಗ ಸೇವಾಕೇಂದ್ರದಲ್ಲಿ ಇರುವವರಿಗೂ ಸಹ ಶಾಶ್ವತವಾದ ವಿಳಾಸವು ಮಧುಬನವೇ ಆಗಿದೆಯಲ್ಲವೇ. ಅಂದಾಗ ಬ್ರಾಹ್ಮಣ ಅರ್ಥಾತ್ ಶಾಶ್ವತ ವಿಳಾಸವು ಮಧುಬನವಾಗಿದೆ. ಮನೆಯು ಮಧುಬನವಾಗಿದೆ. ಆದರೆ ಉಳಿದೆಲ್ಲವೂ ಸೇವಾಸ್ಥಾನಗಳಾಗಿವೆ. ಆದ್ದರಿಂದ ಕೆಳಗಡೆ ಇರುವವರು ಇಂದು ನಮ್ಮನ್ನು ಮಧುಬನ ನಿವಾಸಿಗಳಿಂದ ತೆಗೆದುಬಿಟ್ಟಿದ್ದಾರೆ ಎಂದು ತಿಳಿಯಬಾರದು. ತಾವೆಲ್ಲರೂ ಮಧುಬನ ನಿವಾಸಿಗಳಾಗಿದ್ದೀರಿ. ಕೇವಲ ತಮ್ಮನ್ನು ಬಾಪ್ದಾದಾರವರು ಸಮ್ಮುಖದಲ್ಲಿ ನೋಡಲು ಇಚ್ಛಿಸುತ್ತಾರೆ. ಚಿಕ್ಕ ಗ್ರೂಪಿನಲ್ಲಿ ನೋಡುತ್ತಾರೆ. ಈಗ ನೋಡಿ ಹಿಂದೆ ನೋಡುತ್ತಿರುವವರೂ ಸಹ ಇಷ್ಟೊಂದು ಸ್ಪಷ್ಟವಾಗಿ ಕಂಡುಬರುವುದಿಲ್ಲ. ಈ ಸಮೀಪದಲ್ಲಿ ಇರುವವರು ಸ್ಪಷ್ಟವಾಗಿ ಕಂಡುಬರುತ್ತಾರೆ. ಆದರೆ ಹಿಂದೆ ಇರುವವರು ಹೃದಯದಿಂದ ದೂರವಿಲ್ಲ. ಈ ಕೆಳಗಿರುವವರೂ ಸಹ ಹೃದಯದಿಂದ ದೂರವಿಲ್ಲ ಸಮೀಪವಿದ್ದಾರೆ. ಆದ್ದರಿಂದ ಬಾಪ್ದಾದಾರವರು ಇದನ್ನೇ ಇಚ್ಛಿಸುತ್ತಾರೆ - ವರ್ತಮಾನ ಸಮಯದ ಪ್ರಮಾಣ ಪ್ರೀತಿ ಮತ್ತು ಕಾನೂನಿನ ಸಮತೋಲನೆ ಇಟ್ಟುಕೊಳ್ಳಬೇಕಾಗುತ್ತದೆ, ಆದರೆ ಕಾನೂನು ಮತ್ತು ಪ್ರೀತಿಯ ಸಮತೋಲನವು ಸೇರಿ ಕಾನೂನಿನ ರೂಪವೆನಿಸಬಾರದು. ಕಾನೂನಿನಲ್ಲಿಯೂ ಸಹ ಪ್ರೀತಿಯ ಅನುಭವವಾಗಲಿ, ಹೇಗೆ ಸಾಕಾರ ಸ್ವರೂಪದಲ್ಲಿ ತಂದೆಯನ್ನು ನೋಡಿದಿರಿ. ಕಾನೂನಿನ ಜೊತೆಗೆ ಪ್ರೀತಿಯನ್ನು ಇಷ್ಟೊಂದು ಕೊಡುತ್ತಿದ್ದರು, ಪ್ರತಿಯೊಬ್ಬರ ಬಾಯಿಂದಲೂ ಇದೇ ಬರುತ್ತಿತ್ತು- ಬಾಬಾರವರಿಗೆ ನನ್ನೊಂದಿಗೆ ಪ್ರೀತಿ ಇದೆ. ನನ್ನ ಬಾಬಾ ಆಗಿದ್ದಾರೆ. ಅವಶ್ಯವಾಗಿ ಕಾನೂನನ್ನು ತೆಗೆದುಕೊಳ್ಳಿ, ಆದರೆ ಆ ಕಾನೂನಿನ ಜೊತೆಗೆ ಪ್ರೀತಿಯನ್ನು ಕೊಡಿ, ಕೇವಲ ಆಜ್ಞೆ ಮಾಡುವುದಲ್ಲ. ಕೇವಲ ಕಾನೂನಿನಿಂದ ಆತ್ಮಗಳು ಬಲಹೀನರಾಗಿರುವ ಕಾರಣ ಹೃದಯ ವಿಧೀರ್ಣರಾಗಿಬಿಡುತ್ತಾರೆ. ಯಾವಾಗ ಸ್ವಯಂ ಆತ್ಮಿಕ ಪ್ರೀತಿಯ ಮೂರ್ತಿಗಳಾಗುತ್ತೀರಿ. ಆಗ ಅನ್ಯರ ಪ್ರೀತಿಯ, [ಆತ್ಮಿಕ ಪ್ರೀತಿ, ಬೇರೆ ಪ್ರೀತಿ ಅಲ್ಲ) ಆತ್ಮಿಕ ಪ್ರೀತಿ ಅರ್ಥಾತ್ ಪ್ರತೀ ಸಮಸ್ಯೆಯನ್ನು ಪರಿಹಾರ ಮಾಡುವುದರಲ್ಲಿ ಸಹಯೋಗಿ ಆಗುವುದು. ಕೇವಲ ಶಿಕ್ಷಣ ಕೊಡುವುದಲ್ಲ, ಶಿಕ್ಷಣ ಮತ್ತು ಸಹಯೋಗ ಜೊತೆ-ಜೊತೆಯಲ್ಲಿ ಕೊಡುವುದು - ಇದು ಆತ್ಮಿಕ ಪ್ರೀತಿಯ ಮೂರ್ತಿ ಆಗುವುದಾಗಿದೆ. ಅಂದಾಗ ಇಂದು ವಿಶೇಷವಾಗಿ ಬಾಪ್ದಾದಾರವರು ಪ್ರತೀ ಬ್ರಾಹ್ಮಣ ಆತ್ಮನಿಗೆ, ದೇಶದಲ್ಲಿ ಇರಬಹುದು, ವಿದೇಶದಲ್ಲಿ ಇರಬಹುದು, ನಾಲ್ಕೂ ಕಡೆಯ ಎಲ್ಲಾ ಮಕ್ಕಳಿಗೆ ವಿಶೇಷವಾಗಿ ಇದೇ ಅಂಡರ್ಲೈನ್ ಮಾಡಿಸುತ್ತಾರೆ - ಆತ್ಮಿಕ ಪ್ರೀತಿಯ ಮೂರ್ತಿಗಳಾಗಿ ಮತ್ತು ಆತ್ಮಗಳ ಆತ್ಮಿಕ ಪ್ರೀತಿಯ ಬಾಯಾರಿಕೆಯನ್ನು ನೀಗಿಸುವಂತಹ ದಾತಾ-ದೇವತಾ ಆಗಿ. ಸರಿಯಲ್ಲವೇ! ಒಳ್ಳೆಯದು.

[ಮತ್ತೆ ಬಾಪ್ದಾದಾರವರು ಮಧುಬನದವರೊಂದಿಗೆ ವಾರ್ತಾಲಾಪ ಮಾಡಿದರು ಹಾಗೂ ಎಲ್ಲರನ್ನು ದೃಷ್ಟಿಯಿಂದ ಸಂತುಷ್ಟರನ್ನಾಗಿ ಮಾಡುತ್ತಾ ದೃಷ್ಟಿ ಕೊಟ್ಟರು]

ಆಸ್ಪತ್ರೆ, ಆಬು ನಿವಾಸಿಗಳು ಹಾಗೂ ಪಾರ್ಟಿಗಳೊಂದಿಗೆ ಅವ್ಯಕ್ತ ಬಾಪ್ ದಾದಾರವರ ವಾರ್ತಾಲಾಪ:

ಎಲ್ಲರೂ ತಮ್ಮನ್ನು ಶ್ರೇಷ್ಠ ಅದೃಷ್ಟವಂತರೆಂದು ತಿಳಿಯುತ್ತೀರಾ? ಇಡೀ ವಿಶ್ವದಲ್ಲಿ ಎಲ್ಲರಿಗಿಂತ ಅತೀ ದೊಡ್ಡ ಅದೃಷ್ಟವು ಯಾರದಾಗಿದೆ? ಪ್ರತಿಯೊಬ್ಬರೂ ಏನು ತಿಳಿದುಕೊಳ್ಳುತ್ತೀರಿ, ಎಲ್ಲರಿಗಿಂತ ಅತೀ ದೊಡ್ಡ ಅದೃಷ್ಟವು ನನ್ನದಾಗಿದೆ ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುತ್ತೀರಾ? ಯಾವಾಗ ಖುಷಿಯ ಆದೃಷ್ಟವಂತರಾಗಿದ್ದೀರೆಂದರೆ ಖುಷಿಯಾಗಿರುತ್ತೀರಾ? ಸದಾ ಖುಷಿಯಾಗಿರುತ್ತೀರಾ? ಕೆಲವೊಮ್ಮೆ ಇರುತ್ತೇವೆ, ಈ ರೀತಿಯಂತೂ ಇಲ್ಲ ತಾನೇ? ಯಾವಾಗ ಬಾಪ್ದಾದಾರವರು ಭಾಗ್ಯದ ನಕ್ಷತ್ರವನ್ನು ಬೆಳಗಿಸಿದ್ದಾರೆ ಎಂದ ಮೇಲೆ ಬೆಳಗುತ್ತಿರುವಂತಹ ನಕ್ಷತ್ರವನ್ನು ನೋಡಿ ಖುಷಿಯಾಗಿ ಇರುತ್ತೀರಾ? ಹೃದಯದಲ್ಲಿ ಸದಾ ಖುಷಿಯ ಸಂಗೀತವು ಮೊಳಗುತ್ತದೆಯೇ? ಯಾವ ಗೀತೆಯನ್ನು ಹೃದಯವು ಹಾಡುತ್ತದೆ? ವಾಹ್! ನನ್ನ ಶ್ರೇಷ್ಠ ಭಾಗ್ಯವೇ! ಈ ಗೀತೆಯನ್ನು ಹಾಡುತ್ತೀರಾ? ಇಡೀ ಕಲ್ಪ ತಮ್ಮ ಭಾಗ್ಯದ ಗಾಯನವಾಗುತ್ತಾ ಇರುತ್ತದೆ. ಅರ್ಧಕಲ್ಪ ಭಾಗ್ಯದ ಪ್ರಾಲಬ್ದವನ್ನು ಭೋಗಿಸುತ್ತೀರಿ ಹಾಗೂ ಅರ್ಧಕಲ್ಪ ತಮ್ಮ ಭಾಗ್ಯದ ಗಾಯನವನ್ನು ಅನೇಕ ಆತ್ಮಗಳು ಹಾಡುತ್ತಾ ಇರುತ್ತಾರೆ. ಎಲ್ಲದಕ್ಕಿಂತ ವಿಶೇಷ ಮಾತು ಏನೆಂದರೆ - ತಂದೆಗೆ ಇಡೀ ವಿಶ್ವದಲ್ಲಿ ಯಾರು ಇಷ್ಟವಾದರು? ತಾವೇ ಇಷ್ಟವಾದಿರಲ್ಲವೇ! ಎಷ್ಟೊಂದು ಆತ್ಮಗಳಿದ್ದಾರೆ, ಆದರೆ ಎಲ್ಲರಲ್ಲಿಯೂ ತಾವೇ ಇಷ್ಟವಾದಿರಿ. ಯಾರನ್ನು ಭಗವಂತನೇ ಇಷ್ಟಪಟ್ಟರು, ಅದಕ್ಕಿಂತ ಹೆಚ್ಚಿನದು ಇನ್ನೇನು ಇರುತ್ತದೆ? ಅಂದಾಗ ಸದಾ ತಂದೆಯ ಜೊತೆ ತಮ್ಮ ಭಾಗ್ಯವನ್ನೂ ನೆನಪು ಇಟ್ಟುಕೊಳ್ಳಿ. ಭಗವಂತ ಮತ್ತು ಭಾಗ್ಯ ಇಡೀ ಕಲ್ಪದಲ್ಲಿ ಯಾರಿಗೆ ಪ್ರತಿ ದಿನವು ನೆನಪು, ಪ್ರೀತಿ ಸಿಗುವಂತಹ ಪ್ರಭು ಪ್ರೀತಿಯು ಸಿಗುವಂತಹ ಇಂತಹ ಯಾವುದೇ ಆತ್ಮನಿರುತ್ತಾರೆಯೇ! ಪ್ರತಿದಿನ ನೆನಪು, ಪ್ರೀತಿ ಸಿಗುತ್ತದೆಯಲ್ಲವೇ. ಎಲ್ಲರಿಗಿಂತ ಹೆಚ್ಚಿನ ಮುದ್ದು ಮಕ್ಕಳು ಯಾರಾಗಿದ್ದಾರೆ? ತಾವೇ ಮುದ್ದು ಮಕ್ಕಳಾಗಿದ್ದೀರಿ. ಅಂದ ಮೇಲೆ ಸದಾ ತಮ್ಮ ಭಾಗ್ಯವನ್ನು ನೆನಪು ಮಾಡುವುದರಿಂದ ವ್ಯರ್ಥ ಮಾತುಗಳು ಓಡಿ ಹೋಗುತ್ತವೆ. ಓಡಿಸುವ ಅವಶ್ಯಕತೆ ಇಲ್ಲ, ಸಹಜವಾಗಿಯೇ ಓಡಿ ಹೋಗುತ್ತವೆ.

ಈಗ ವರ್ತಮಾನ ಸಮಯದ ಪ್ರಮಾಣ ಸಂಗಮಯುಗದ ಸಮಯದ ಮಹತ್ವವನ್ನು ಅರಿತುಕೊಂಡು ಪ್ರತಿ ಸೆಕೆಂಡ್ ತಮ್ಮ ಪ್ರಾಲಬ್ದವನ್ನು ಶ್ರೇಷ್ಠ ಮಾಡಿಕೊಳ್ಳುತ್ತಾ ಇರಿ. ಒಂದು ಸೆಕೆಂಡೂ ಸಹ ವ್ಯರ್ಥವಾಗಿ ಹೋಗದೇ ಇರಲಿ ಏಕೆಂದರೆ ಒಂದೊಂದು ಸೆಕೆಂಡಿಗೂ ಸಹ ತುಂಬಾ ಮಹತ್ವವಿದೆ. ಸೆಕೆಂಡು ಕಳೆಯಿತೆಂದರೆ ಅದು ಸೆಕೆಂಡ್ ಅಲ್ಲ. ತುಂಬಾ ಸಮಯವು ಕಳೆಯಿತು ಎಂದರ್ಥ. ಮತ್ತು ಈ ಸಮಯವು ಪುನಃ ಸಿಗುವುದಿಲ್ಲ. ಒಳ್ಳೆಯ ರೀತಿಯಲ್ಲಿ ಸಮಯದ ಪರಿಚಯ - ಇದೆಯಲ್ಲವೇ? ನೋಡಿ ಇಂದು ತಮ್ಮೆಲ್ಲರಿಗೆ ವಿಶೇಷವಾಗಿ ಸಮಯವು ಸಿಕ್ಕಿದೆ. ಒಂದುವೇಳೆ ಒಟ್ಟಿಗೆ ಬಂದಿದ್ದರೆ ಕಾಣಿಸುತ್ತಿರಲಿಲ್ಲ. ಈಗ ಯಾರು-ಯಾರು ಇದ್ದೀರೆಂದು ಕಾಣಿಸುತ್ತಿದ್ದೀರಿ. ಎಲ್ಲರೂ ವಿಶೇಷ ಆತ್ಮಗಳು ಆಗಿದ್ದೀರಿ, ಕೇವಲ ತಮ್ಮ ವಿಶೇಷತೆಯನ್ನು ಅರಿತು ವಿಶೇಷತೆಗಳನ್ನು ಕಾರ್ಯದಲ್ಲಿ ತೊಡಗಿಸಿ. ನಾಟಕದ ಅನುಸಾರ ಪ್ರತಿ ಬ್ರಾಹ್ಮಣ ಆತ್ಮನಿಗೆ ಒಂದಲ್ಲಾ ಒಂದು ವಿಶೇಷತೆಯು ಪ್ರಾಪ್ತಿಯಾಗಿದೆ. ಯಾವುದೇ ವಿಶೇಷತೆಯು ಇಲ್ಲದೆ ಇರುವ ಆತ್ಮಗಳು ಯಾರೂ ಇಲ್ಲ. ಅಂದಾಗ ತಮ್ಮ ವಿಶೇಷತೆಯನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿ ಮತ್ತು ಅದನ್ನು ಸೇವೆಯಲ್ಲಿ ತೊಡಗಿಸಿ. ಪ್ರತಿಯೊಬ್ಬರ ವಿಶೇಷತೆಯು ಹಾರುವ ಕಲೆಯ ಬಹಳ ತೀವ್ರ ವಿಧಿಯಾಗಿಬಿಡುತ್ತದೆ. ಸೇವೆಯಲ್ಲಿ ತೊಡಗಿಸಬೇಕು. ಅಭಿಮಾನದಲ್ಲಿ ಬರಬಾರದು ಏಕೆಂದರೆ ಸಂಗಮಯುಗದಲ್ಲಿ ಪ್ರತಿ ವಿಶೇಷತೆಯು ನಾಟಕದನುಸಾರ ಪರಮಾತ್ಮನ ಕೊಡುಗೆಯಾಗಿದೆ. ಪರಮಾತ್ಮನ ಕೊಡುಗೆಯಲ್ಲಿ ಅಭಿಮಾನವು ಬರುವುದಿಲ್ಲ. ಹೇಗೆ ಪ್ರಸಾದವನ್ನು ಇದು ನನ್ನ ಪ್ರಸಾದವೆಂದು ಯಾರೂ ಹೇಳುವುದಿಲ್ಲ, ಪ್ರಭು ಪ್ರಸಾದವೆಂದು ಹೇಳುತ್ತಾರೆ. ಈ ವಿಶೇಷತೆಗಳೂ ಸಹ ಪ್ರಭು ಪ್ರಸಾದವಾಗಿದೆ. ಪ್ರಸಾದವನ್ನು ಕೇವಲ ತಮ್ಮ ಪ್ರತಿ ಉಪಯೋಗಿಸಲಾಗುವುದಿಲ್ಲ. ಹಂಚಲಾಗುತ್ತದೆ. ಹಂಚುತ್ತೀರಿ, ಮಹಾದಾನಿ ಆಗಿದ್ದೀರಿ, ವರದಾನಿಯ ಆಗಿದ್ದೀರಿ. ಪಾಂಡವರೂ ವರದಾನಿ, ಮಹದಾನಿಗಳಾಗಿದ್ದಾರೆ, ಶಕ್ತಿಯರೂ ಮಹಾದಾನಿಗಳಾಗಿದ್ದೀರಾ? 1-2 ಗಂಟೆಯ ಮಹದಾನಿಯಲ್ಲ, ತೆರೆದ ಭಂಡಾರವಾಗಬೇಕು. ಆದ್ದರಿಂದಲೇ ತಂದೆಗೆ ಭೋಲಾಭಂಡಾರಿ ಎಂದು ಹೇಳುತ್ತಾರೆ. ತೆರೆದ ಭಂಡಾರವಾಗಿದೆಯಲ್ಲವೇ. ಆತ್ಮಗಳಿಗೆ ಬೊಗಸೆಯಷ್ಟು ನೀಡುತ್ತಾ ಹೋಗಿ, ಭಿಕಾರಿಗಳ ಎಷ್ಟು ದೊಡ್ಡ ಸಾಲಿದೆ. ಮತ್ತು ತಮ್ಮ ಬಳಿ ಅಷ್ಟೊಂದು ಸಂಪನ್ನ ಭಂಡಾರವಿದೆಯೇ? ಮುಗಿಯದಂತಹ ಭಂಡಾರವಾಗಿದೆ. ಮುಗಿಯುತ್ತದೆಯೇನು? ಹಂಚುವುದರಲ್ಲಿ ಉಳಿತಾಯವಂತೂ ಮಾಡುವುದಿಲ್ಲ ತಾನೇ? ಇದರಲ್ಲಿ ವಿಶಾಲ ಹೃದಯದಿಂದ ಹಂಚಿ. ವ್ಯರ್ಥವಾಗಿ ಕಳೆಯುವುದರಲ್ಲಿ ಉಳಿತಾಯ ಮಾಡಿ, ಆದರೆ ಹಂಚುವುದರಲ್ಲಿ ತೆರೆದ ಹೃದಯದಿಂದ ಹಂಚಿ.

ಎಲ್ಲರೂ ಖುಷಿ ಆಗಿದ್ದೀರಾ? ಕೆಲವೊಮ್ಮೆ ಸ್ವಲ್ಪ-ಸ್ವಲ್ಪ ಇರುತ್ತದೆ. ಕೆಲವೊಮ್ಮೆ ಮೂಡಾಫ್, ಇನ್ನೂ ಕೆಲವೊಮ್ಮೆ ಮನಸ್ಸು ತುಂಬಾ ಖುಷಿಯಾಗಿರುತ್ತದೆ. ಈ ರೀತಿಯಂತೂ ಇಲ್ಲ ತಾನೇ? ಫಾಲೋ ಫಾದರ್, ಬಾಪ್ದಾದಾ ಮೂಡಾಫ್ ಮಾಡುತ್ತಾರೇನು, ಅಂದಾಗ ಫಾಲೋ ಫಾದರ್ ಆಗಿದ್ದೀರಲ್ಲವೇ - ಬಾಪ್ದಾದಾರವರ ಬಳಿ ವಿಶೇಷವಾಗಿ ಬ್ರಾಹ್ಮಣ ಮಕ್ಕಳಿಗೋಸ್ಕರ ಟಿ.ವಿ ಇದೆ. ಅದರಲ್ಲಿ ಎಲ್ಲರ ಭಿನ್ನ-ಭಿನ್ನ ಮನಸ್ಸುಗಳು ಬರುತ್ತವೆ. ನೋಡುವುದರಲ್ಲಿ – ಎಷ್ಟು ಮಜಾ ಇರಬಹುದು! ಸದಾ ಮಹಾದಾನಿ ಆಗುವವರ ಮನಸ್ಸು ಬದಲಾಗುವುದಿಲ್ಲ. ದಾತಾ ಆಗಿದ್ದೀರಲ್ಲವೇ. ನೀಡುತ್ತಾ ಹೋಗಿ. ದೇವತೆ ಆಗುವವರು ಎಂದರೆ ಕೊಡುವವರು ಎಂದರ್ಥ. ಪಡೆಯುವವರಲ್ಲ, ಕೊಡುವವರು. ಎಷ್ಟು ಬಾರಿ ದೇವತೆಗಳಾಗಿದ್ದೀರಿ. ಅನೇಕಬಾರಿ ಆಗಿದ್ದೀರಲ್ಲವೇ. ಅಂದಮೇಲೆ ದೇವತಾ ಅರ್ಥಾತ್ ಕೊಡುವ ಸಂಸ್ಕಾರವುಳ್ಳವರು. ಯಾರೇ ಏನೇ ಕೊಡಲಿ ಆದರೆ ತಾವು ಸುಖದ ಅಂಚಲಿ, ಶಾಂತಿಯ ಅಂಚಲಿ, ಪ್ರೇಮದ ಅಂಚಲಿಯನ್ನು ನೀಡಿ. ಈ ಸಮಯದ ಮನುಷ್ಯರ ಬಳಿ ಇರುವುದೇ ದುಃಖ- ಅಶಾಂತಿ ಅಂದಾಗ ಇನ್ನೇನು ಕೊಡುತ್ತಾರೆ, ಅದನ್ನೇ ಕೊಡುತ್ತಾರಲ್ಲವೇ. ಮತ್ತು ತಮ್ಮ ಬಳಿ ಏನಿದೆ- ಸುಖ, ಶಾಂತಿ ಇದೆ. ಎಲ್ಲರೂ ಚೆನ್ನಾಗಿದ್ದೀರಲ್ಲವೇ! ಒಳ್ಳೆಯದು! ಮಿಲನ ಮಾಡಿದಿರಿ, ಆದರೆ ನಾವಂತೂ ಅಂತ್ಯದಲ್ಲಿ ಬಂದೆವು ಎಂದು ತಿಳಿಯಬೇಡಿ. ವಿಶೇಷವಾಗಿ ಬಂದಿದ್ದೀರಿ. ಮಧುಬನಕ್ಕೆ ಹತ್ತಿರವಿದ್ದೀರಿ. ಮಧುಬನದ ಕೋಟೆಯಂತೂ ಚೆನ್ನಾಗಿ ಮಾಡಿದ್ದೀರಿ.

ಆಸ್ಪತ್ರೆಯವರೂ ಸಹ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದೀರಿ. ಶಾಂತಿವನದವರು ಅನೇಕರಿದ್ದೀರಿ. ಪಾರ್ಟಿಯವರು ಸಿಕಿಲದೆ ಮಕ್ಕಳಾಗಿದ್ದೀರಿ. ಕೆಲವರಷ್ಟೇ ಇದ್ದೀರಿ, ಆದ್ದರಿಂದ ಸಿಕ್ಕಿಲದೆ ಮಕ್ಕಳಾಗಿದ್ದೀರಿ. ವಿದೇಶಿಯರಿಲ್ಲದೆ ಶೋಭೆ ಇರುವುದಿಲ್ಲ, ಆದ್ದರಿಂದ ಪ್ರತಿ ಗ್ರೂಪಿನಲ್ಲಿ ಶೋಭೆಯನ್ನು ಹೆಚ್ಚಿಸಲು ಬಂದುಬಿಡುತ್ತೀರಿ. ಒಳ್ಳೆಯದು

ಸೇವಾಧಾರಿಗಳೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:

ಎಲ್ಲರೂ ಸೇವೆಯ ನಿಮಿತ್ತ ತಮ್ಮ ಭಾಗ್ಯವನ್ನು ರೂಪಿಸಿಕೊಳ್ಳುವವರಾಗಿದ್ದೀರಿ ಏಕೆಂದರೆ ಈ ಯಜ್ಞದ ಸೇವೆಯ ಪುಣ್ಯವು ತುಂಬಾ ದೊಡ್ಡದಿದೆ. ಶರೀರದಿಂದ ಸೇವೆಯನ್ನಂತೂ ಮಾಡುತ್ತೀರಿ, ಆದರೆ ಮನಸ್ಸಿನಿಂದಲೂ ಸೇವೆ ಮಾಡುತ್ತಾ ಇರಿ. ಅಂದಮೇಲೆ ಡಬಲ್ ಪುಣ್ಯವಾಗಿಬಿಡುತ್ತದೆ. ಮನಸ್ಸಾ ಸೇವೆ ಮತ್ತು ಶರೀರದ ಸೇವೆ. ಯಾರೆಲ್ಲಾ ಬರುತ್ತಾರೆ ಸೇವಾಧಾರಿಗಳ ಸೇವೆಯಿಂದ ವಾಯುಮಂಡಲವನ್ನು ನೋಡಿ, ತಮ್ಮ ಲಾಭವನ್ನು ಪಡೆದುಕೊಂಡು ಈ ಹೋಗುತ್ತಾರೆ. ಅಂದಾಗ ಎಷ್ಟೇ ಜನ ಬರಲಿ, ಸೇವೆಯ ಸಮಯದಲ್ಲಿ ಅಷ್ಟು ಆತ್ಮಗಳ ಪುಣ್ಯ ಅಥವಾ ಆಶೀರ್ವಾದಗಳು ಜಮಾ ಆಗಿಬಿಡುತ್ತವೆ. ಇಂತಹ ಸೇವೆ ಮಾಡುತ್ತೀರಿ, ಶರೀರದಿಂದಲೂ ಮತ್ತು ಮನಸ್ಸಿನಿಂದಲೂ ಡಬಲ್ ಸೇವಾಧಾರಿಗಳಾಗಿದ್ದೀರಾ ಅಥವಾ ಸಿಂಗಿಲ್ ಸೇವಾಧಾರಿಗಳಾಗಿದ್ದೀರಾ. ಯಾರಾಗಿದ್ದೀರಿ? ಡಬಲ್. ಡಬಲ್ ಮಾಡುತ್ತೀರಾ? ಸೇವೆಯ ಪ್ರತ್ಯಕ್ಷ ಫಲವೂ ಸಿಗುತ್ತಾ ಇರುತ್ತದೆ. ಎಷ್ಟು ಸಮಯ ಇರುತ್ತೀರೋ, ಅಷ್ಟೂ ಸಮಯ ಹೆಚ್ಚಿನ ಖುಷಿಯು ಸಿಗುತ್ತದೆಯಲ್ಲವೇ! ಅಂದಮೇಲೆ ಪ್ರತ್ಯಕ್ಷ ಫಲವನ್ನು ಸೇವಿಸುತ್ತೀರಿ. ಆಶೀರ್ವಾದಗಳೂ ಜಮಾ ಆಗುತ್ತವೆ, ಭವಿಷ್ಯಕ್ಕೂ ಆಯಿತು ಮತ್ತೆ ವರ್ತಮಾನಕ್ಕು ಆಯಿತು. ಬಾಪ್ದಾದಾರವರಿಗೂ ಖುಷಿ ಆಗುತ್ತದೆ ಏಕೆಂದರೆ ಮಕ್ಕಳು ತಮ್ಮ ಪ್ರಾಲಬ್ಧವನ್ನು ತುಂಬಾ ಸಹಜ ಹಾಗೂ ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ಸೇವೆ, ಸೇವೆ ಮತ್ತು ಸೇವೆ ಮತ್ತ್ಯಾವುದೇ ಮಾತುಗಳಲ್ಲಿ ಹೋಗಬಾರದು. ಸೇವೆ ಅರ್ಥಾತ್ ಜಮಾ ಮಾಡಿಕೊಳ್ಳುವುದು. ಎಷ್ಟೇ ಸಮಯ ಸಿಕ್ಕಿದರೂ ಡಬಲ್ ಸಂಪಾದನೆ ಮಾಡಿಕೊಳ್ಳಿ. ಪ್ರತ್ಯಕ್ಷಫಲ, ಭವಿಷ್ಯದ ಫಲ, ಸೇವೆಯ ಅವಕಾಶವೂ ಸಹ ತಾವು ಆತ್ಮಗಳಿಗೆ ಪ್ರಾಪ್ತಿಯಾಗಿದೆ. ಸೇವಾಧಾರಿಗಳೊಂದಿಗೆ ಬಾಪ್ದಾದಾರವರ ವಿಶೇಷ ಪ್ರೀತಿ ಇರುತ್ತದೆ ಏಕೆಂದರೆ ಬಾಪ್ದಾದಾರವರೂ ಸಹ ವಿಶ್ವದ ಸೇವಕ ಆಗಿದ್ದಾರೆ. ಅಂದಾಗ ಸಮಾನ ಆಯಿತಲ್ಲವೇ! ಮನಸ್ಸನ್ನು ಬಿಜಿಯಾಗಿ ಇಟ್ಟುಕೊಳ್ಳುತ್ತೀರಾ ಅಥವಾ ಖಾಲಿಯಾಗಿ ಇಟ್ಟುಕೊಳ್ಳುತ್ತೀರಾ? ಮಧುಬನ ಎಂದರೆ ನೆನಪು ಮತ್ತು ಸೇವೆ. ನಡೆದಾಡುತ್ತಾ-ತಿರುಗಾಡುತ್ತಾ ಮನಸ್ಸನ್ನು ನೆನಪಿನಲ್ಲಿ ಅಥವಾ ಸೇವೆಯಲ್ಲಿ ಬಿಜಿಯಾಗಿ ಇಟ್ಟುಕೊಳ್ಳಿ. ಎಲ್ಲರೂ ಖುಷಿಯಾಗಿ ಇರುತ್ತೀರಾ? ಆಗಾಗ ಖುಷಿಯಾಗಿ ಇರುವವರಂತೂ ಅಲ್ಲ ತಾನೇ? ಸದಾ ಖುಷಿಯಾಗಿ ಇರುವಂತಹವರು ತಮ್ಮ ಖುಷಿಯನ್ನು ನೋಡಿ ಅನ್ಯರೂ ಖುಷಿಯಾಗಿ ಬಿಡುತ್ತಾರೆ. ಸೇವಾಧಾರಿಗಳಿಗೂ ಟರ್ನ್ ಸಿಕ್ಕಿತು. ಖುಷಿಯಾಗಿದ್ದೀರಲ್ಲವೇ. ವಿಶೇಷವಾಗಿ ಅವಕಾಶವು ಸಿಕ್ಕಿತಲ್ಲವೇ? ಮಧುಬನದವರ ನಿಮಿತ್ತ ತಮಗೂ ಸಹ ಗೋಲ್ಡನ್ ಚಾನ್ಸ್ ಆಗಿಬಿಟ್ಟಿತು. ಸ್ವಯಂ ಸದಾ ಸ್ವಮಾನದಲ್ಲಿ ಇದ್ದು ಹಾರುತ್ತಾ ಇರಿ. ಸ್ವಮಾನವನ್ನು ಎಂದೂ ಬಿಡಬೇಡಿ. ಭಲೆ ಕಸವನ್ನೇ ಗುಡಿಸುತ್ತಾ ಇರಿ, ಆದರೆ ಸ್ವಮಾನ ಏನಾಗಿದೆ? ವಿಶ್ವದ ಸರ್ವ ಆತ್ಮಗಳಲ್ಲಿ ಶ್ರೇಷ್ಠ ಆತ್ಮನಾಗಿದ್ದೇನೆ. ಎಂದಾಗ ತಮ್ಮ ಆತ್ಮಿಕ ಸ್ವಮಾನವು ಯಾವುದೇ ಕೆಲಸ ಮಾಡುತ್ತಿದ್ದರೂ ಮರೆತು ಹೋಗುವುದಿಲ್ಲ. ನಶೆ ಇರುತ್ತದೆಯಲ್ಲವೇ, ಆತ್ಮಿಕ ನಶೆ. ನಾವು ಯಾರ ಮಕ್ಕಳಾದವು! ಭಾಗ್ಯವು ನೆನಪು ಇರುತ್ತದೆಯಲ್ಲವೇ? ಮರೆಯುವುದಿಲ್ಲ ತಾನೇ? ಸೇವೆಗೋಸ್ಕರ ಎಷ್ಟೇ ಸಮಯ ಸಿಗಲಿ ಅಷ್ಟೂ ಸಮಯ ಒಂದೊಂದು ಸೆಕೆಂಡನ್ನು ಸಫಲ ಮಾಡಿಕೊಳ್ಳಿ. ವ್ಯರ್ಥವಾಗಿ ಹೋಗದಿರಲಿ. ಸಾಧಾರಣವೂ ಸಹ ಇರಬಾರದು. ಆತ್ಮಿಕ ನಶೆಯಲ್ಲಿ. ಆತ್ಮಿಕ ಪ್ರಾಪ್ತಿಗಳಲ್ಲಿ ಸಮಯವು ಕಳೆಯಲಿ. ಇಂತಹ ಲಕ್ಷ್ಯವನ್ನು ಇಟ್ಟುಕೊಳ್ಳುತ್ತೀರಲ್ಲವೇ. ಒಳ್ಳೆಯದು. ಓಂ ಶಾಂತಿ.

ವರದಾನ: ವರದಾನ: ಸ್ನೇಹದ ವಿಮಾನದ ಮೂಲಕ ಸಮೀಪತೆಯ ಅನುಭವ ಮಾಡುವಂತಹ ಸ್ನೇಹಿ ಮೂರ್ತಿ ಭವ
ಎಲ್ಲಾ ಮಕ್ಕಳಲ್ಲಿಯೂ ಬಾಪ್ದಾದಾರವರ ಸ್ನೇಹ ಸಮಾವೇಶ ವಾಗಿದೆ, ಸ್ನೇಹದ ಶಕ್ತಿಯಿಂದ ಎಲ್ಲರೂ ಮುಂದೆ ಹಾರುತ್ತಾ ಹೋಗುತ್ತಿದ್ದಾರೆ. ಸ್ನೇಹದ ವಿಮಾನ ತನು ಹಾಗೂ ಮನಸ್ಸಿನಿಂದ, ಹೃದಯದಿಂದ ತಂದೆಯ ಸಮೀಪಕ್ಕೆ ತರುವುದು. ಭಲೇ ಜ್ಞಾನ, ಯೋಗ, ಧಾರಣೆಯಲ್ಲಿ ಎಲ್ಲರೂ ಯಥಾಶಕ್ತಿ ನಂಬರ್ವಾರ್ ಇದ್ದಾರೆ ಆದರೆ ಸ್ನೇಹದಲ್ಲಿ ಪ್ರತಿಯೊಬ್ಬರೂ ನಂಬರ್ಒನ್ ಇದ್ದಾರೆ. ಈ ಸ್ನೇಹವೇ ಬ್ರಾಹ್ಮಣ ಜೀವನವನ್ನು ಪ್ರಧಾನ ಮಾಡುವ ಮೂಲ ಆಧಾರವಾಗಿದೆ. ಸ್ನೇಹದ ಅರ್ಥವಾಗಿದೆ ಪಾಸ್ ರೆಹನಾ(ಹತ್ತಿರ ಇರುವುದು), ಪಾಸ್ ಹೋನಾ(ಹತ್ತಿರ ಆಗುವುದು) ಮತ್ತು ಎಲ್ಲಾ ಪರಿಸ್ಥಿತಿಗಳನ್ನೂ ಬಹಳ ಸಹಜವಾಗಿ ಪಾಸ್ ಮಾಡುವುದು.
ಸ್ಲೋಗನ್: ಸ್ಲೋಗನ್: ತಮ್ಮ ನಯನಗಳಲ್ಲಿ ತಂದೆಯನ್ನು ಸಮಾವೇಶ ಮಾಡಿಕೊಂಡಾಗ ಮಾಯೆಯ ದೃಷ್ಟಿಯಿಂದ ಸುರಕ್ಷಿತರಾಗಿರುವಿರಿ.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.