ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 31, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 31, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

31/10/24
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ- ಹೇ ಭೂತಗಳೇ ನೀವು ನಮ್ಮ ಬಳಿ ಬರಲು ಸಾಧ್ಯವಿಲ್ಲ ಎಂದು ಆರ್ಡರ್ ಮಾಡಿ, ನೀವು ಅವನ್ನು ಎದುರಿಸಿದ್ದೇ ಆದರೆ ಓಡಿಹೋಗುತ್ತವೆ”
ಪ್ರಶ್ನೆ: ಈಶ್ವರೀಯ ನಶೆಯಲ್ಲಿರುವ ಮಕ್ಕಳ ಜೀವನದ ಶೋಭೆ ಏನಾಗಿದೆ?
ಉತ್ತರ: ಸೇವೆಯೇ ಅವರ ಜೀವನದ ಶೋಭೆಯಾಗಿದೆ. ಯಾವಾಗ ನಮಗೆ ಈಶ್ವರೀಯ ಲಾಟರಿ ಸಿಕ್ಕಿದೆ ಎಂದು ನಶೆಯಿದೆ ಎಂದರೆ- ಸೇವೆಯನ್ನು ಮಾಡುವ ಉಮ್ಮಂಗವಿರಬೇಕು ಆದರೆ ಒಳಗೆ ಯಾವುದೇ ಭೂತವಿಲ್ಲದಿದ್ದಾಗ ಮಾತ್ರ ಬಾಣವು ನಾಟುತ್ತದೆ.
ಪ್ರಶ್ನೆ: ಶಿವತಂದೆಯ ಮಕ್ಕಳೆಂದು ಕರೆಸಿಕೊಳ್ಳಲು ಯಾರು ಹಕ್ಕುದಾರರಾಗಿದ್ದಾರೆ?
ಉತ್ತರ: ಯಾರಿಗೆ ನಿಶ್ಚಯವಿರುತ್ತದೆ- ಭಗವಂತನು ನಮ್ಮ ತಂದೆಯಾಗಿದ್ದಾರೆ, ನಾವು ಇಂತಹ ಸರ್ವಶ್ರೇಷ್ಠ ತಂದೆಯ ಮಕ್ಕಳಾಗಿದ್ದೇವೆ ಎಂಬ ನಶೆಯಲ್ಲಿರುವಂತಹ ಯೋಗ್ಯ ಮಕ್ಕಳೇ ಶಿವತಂದೆಯ ಮಕ್ಕಳೆಂದು ಕರೆಸಿಕೊಳ್ಳಲು ಹಕ್ಕುದಾರರಾಗಿದ್ದಾರೆ. ಒಂದುವೇಳೆ ನಡುವಳಿಕೆಯು ಸರಿಯಿಲ್ಲ, ಚಲನೆಯು ಘನತೆಯಿಂದ ಕೂಡಿಲ್ಲವೆಂದರೆ ಅವರು ಶಿವತಂದೆಯ ಮಕ್ಕಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ.

ಓಂ ಶಾಂತಿ. ಶಿವತಂದೆಯ ನೆನಪಿದೆಯೇ? ಸ್ವರ್ಗದ ರಾಜ್ಯಭಾಗ್ಯದ ನೆನಪಿದೆಯೇ? ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಮತ್ತೆ ನಿತ್ಯವೂ ತಂದೆಯನ್ನು ನೆನಪು ಮಾಡುತ್ತೇವೆ ಎಂದು ಬುದ್ಧಿಯಲ್ಲಿ ಬರಬೇಕು. ನೆನಪು ಮಾಡದ ವಿನಃ ನಾವು ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಯಾವ ಆಸ್ತಿ? ಪವಿತ್ರತೆಯ ಆಸ್ತಿ. ಅಂದಮೇಲೆ ಇದಕ್ಕಾಗಿ ಅಂತಹ ಪುರುಷಾರ್ಥ ಮಾಡಬೇಕು, ಇದರಿಂದ ಎಂದಿಗೂ ಯಾವುದೇ ವಿಕಾರದ ಮಾತು ನಮ್ಮ ಮುಂದೆ ಬರಲು ಸಾಧ್ಯವಿಲ್ಲ. ಕೇವಲ ಒಂದು ಕಾಮವಿಕಾರದ ಮಾತಲ್ಲ ಅಥವಾ ಒಂದು ಭೂತವಲ್ಲ ಆದರೆ ಯಾವುದೇ ಭೂತವು ಬರಲು ಸಾಧ್ಯವಿಲ್ಲ. ನಿಮಗೆ ಇಂತಹ ಶುದ್ಧ ಅಹಂಕಾರವಿರಬೇಕು. ಸರ್ವಶ್ರೇಷ್ಠ ಭಗವಂತನ ಮಕ್ಕಳಾದ ನಾವೂ ಸಹ ಸರ್ವಶ್ರೇಷ್ಠರಾದೆವು ಅಂದಮೇಲೆ ಮಾತು, ನಡುವಳಿಕೆ ಎಷ್ಟು ಘನತೆಯಿಂದ ಕೂಡಿರಬೇಕು! ತಂದೆಯು ಮಕ್ಕಳ ಚಲನೆಯಿಂದಲೇ ಇವರು ಕಾಸಿಗೂ ಬೆಲೆಯಿಲ್ಲದವರಾಗಿದ್ದಾರೆ, ನನ್ನ ಮಕ್ಕಳೆಂದು ಕರೆಸಿಕೊಳ್ಳುವುದಕ್ಕೂ ಹಕ್ಕುದಾರರಲ್ಲ ಎಂದು ತಿಳಿಯುತ್ತಾರೆ. ಲೌಕಿಕ ತಂದೆಗೂ ಸಹ ತನ್ನ ಯೋಗ್ಯರಲ್ಲದ ಮಕ್ಕಳನ್ನು ನೋಡಿ ಒಳಗೆ ಇದೇ ರೀತಿ ಎನಿಸುತ್ತದೆ. ಇವರೂ ತಂದೆಯಾಗಿದ್ದಾರೆ. ತಂದೆಯು ನಮಗೆ ಶಿಕ್ಷಣವನ್ನು ಕೊಡುತ್ತಿದ್ದಾರೆಂದು ಮಕ್ಕಳಿಗೆ ತಿಳಿದಿದೆ ಆದರೆ ಕೆಲಕೆಲವು ಮಕ್ಕಳು ಏನೂ ಅರಿತುಕೊಳ್ಳುವುದೇ ಇಲ್ಲ. ಬೇಹದ್ದಿನ ತಂದೆಯು ನಮಗೆ ತಿಳಿಸುತ್ತಾರೆಂಬ ನಿಶ್ಚಯವೂ ಇಲ್ಲ, ನಶೆಯೂ ಇಲ್ಲ. ನೀವು ಮಕ್ಕಳ ಬುದ್ಧಿಯು ಎಷ್ಟು ಶುದ್ಧವಾಗಿರಬೇಕು! ನಾವು ಎಷ್ಟು ಶ್ರೇಷ್ಠ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ನಮ್ಮ ಚಲನೆಯು ಎಷ್ಟು ಶ್ರೇಷ್ಠವಾಗಿರಬೇಕು. ದೇವಿ-ದೇವತೆಗಳ ಯಾವ ಮಹಿಮೆಯಿದೆ ಅದು ನಮ್ಮದಾಗಬೇಕು. ಪ್ರಜೆಗಳ ಮಹಿಮೆಯಿರುವುದಿಲ್ಲ. ಒಬ್ಬ ಲಕ್ಷ್ಮೀ-ನಾರಾಯಣರನ್ನೇ ತೋರಿಸಿದ್ದಾರೆ ಅಂದಾಗ ಮಕ್ಕಳು ಎಷ್ಟೊಂದು ಒಳ್ಳೆಯ ಸರ್ವೀಸ್ ಮಾಡಬೇಕು. ಈ ಲಕ್ಷ್ಮಿ-ನಾರಾಯಣರಿಬ್ಬರು ಈ ಸರ್ವೀಸನ್ನು ಮಾಡಿದ್ದಾರಲ್ಲವೆ. ಬುದ್ಧಿಯು ಎಷ್ಟು ಶ್ರೇಷ್ಠವಾಗಿರಬೇಕು! ಕೆಲವು ಮಕ್ಕಳಲ್ಲಂತೂ ಪರಿವರ್ತನೆಯೇ ಕಾಣುವುದಿಲ್ಲ. ಮಾಯೆಯೊಂದಿಗೆ ಸೋಲನ್ನು ಅನುಭವಿಸುತ್ತಾರೆ ಆದ್ದರಿಂದ ಇನ್ನೂ ಹೆಚ್ಚಿನದಾಗಿ ಹಾಳಾಗುತ್ತಾರೆ. ಇಲ್ಲವೆಂದರೆ ಒಳಗೆ ನಾವು ಬೇಹದ್ದಿನ ಮಕ್ಕಳಾಗಿದ್ದೇವೆಂದು ಎಷ್ಟೊಂದು ನಶೆಯಿರಬೇಕು. ತಂದೆಯು ತಿಳಿಸುತ್ತಾರೆ- ಎಲ್ಲರಿಗೆ ನನ್ನ ಪರಿಚಯವನ್ನು ಕೊಡಿ. ಸರ್ವೀಸಿನಿಂದಲೇ ಶೋಭಿತರಾಗುತ್ತೀರಿ. ಆಗಲೇ ತಂದೆಯ ಹೃದಯವನ್ನೇರುತ್ತೀರಿ. ತಂದೆಯ ಹೃದಯವನ್ನು ಏರಿದವರೇ ಮಕ್ಕಳೆಂದು ಕರೆಸಿಕೊಳ್ಳುತ್ತಾರೆ. ಮಕ್ಕಳ ಪ್ರತಿ ತಂದೆಗೆ ಎಷ್ಟೊಂದು ಪ್ರೀತಿಯಿರುತ್ತದೆ. ಮಕ್ಕಳನ್ನು ತಲೆಯ ಮೇಲೆ ಏರಿಸಿಕೊಳ್ಳುತ್ತಾರೆ. ಇಷ್ಟೊಂದು ಮೋಹವಿರುತ್ತದೆ ಆದರೆ ಅದಂತೂ ಕ್ಷಣಿಕದ ಮಾಯಾವೀ ಮೋಹವಾಗಿದೆ. ಇಲ್ಲಿ ಇವರು ಬೇಹದ್ದಿನ ತಂದೆಯಾಗಿದ್ದಾರೆ, ಮಕ್ಕಳನ್ನು ನೋಡಿ ಖುಷಿಪಡದೆ ಇರುವಂತಹ ತಂದೆಯೂ ಯಾರಾದರೂ ಇರುತ್ತಾರೆಯೇ! ತಂದೆ-ತಾಯಿಗಂತೂ ಅಪಾರ ಖುಷಿಯಿರುತ್ತದೆ. ಇಲ್ಲಿ ಕುಳಿತುಕೊಳ್ಳುವ ಸಮಯದಲ್ಲಿ ತಿಳಿದುಕೊಳ್ಳಬೇಕು- ತಂದೆಯೇ ನಮಗೆ ಓದಿಸುತ್ತಾರೆ. ತಂದೆಯು ನಮ್ಮ ವಿಧೇಯ ಶಿಕ್ಷಕನಾಗಿದ್ದಾರೆ. ಬೇಹದ್ದಿನ ತಂದೆಯು ಅವಶ್ಯವಾಗಿ ಯಾವುದೋ ಸೇವೆಯನ್ನು ಮಾಡಿರುವ ಕಾರಣವೇ ಗಾಯನವಿದೆಯಲ್ಲವೆ. ಎಷ್ಟು ವಿಚಿತ್ರವಾದ ಮಾತಾಗಿದೆ. ಅವರಿಗೆ ಎಷ್ಟೊಂದು ಮಹಿಮೆ ಮಾಡಲಾಗುತ್ತದೆ. ಇಲ್ಲಿ ಕುಳಿತಿದ್ದೀರೆಂದರೆ ಬುದ್ಧಿಯಲ್ಲಿ ನಶೆಯಿರಬೇಕು. ಸನ್ಯಾಸಿಗಳಂತೂ ನಿವೃತ್ತಿ ಮಾರ್ಗದವರಾಗಿದ್ದಾರೆ. ಅವರ ಧರ್ಮವೇ ಬೇರೆಯಾಗಿದೆ. ಇದನ್ನೂ ಸಹ ಈಗ ತಂದೆಯು ತಿಳಿಸಿಕೊಡುತ್ತಾರೆ. ಸನ್ಯಾಸ ಮಾರ್ಗವನ್ನು ನೀವು ತಿಳಿದುಕೊಂಡಿರಲಿಲ್ಲ. ನೀವಂತೂ ಗೃಹಸ್ಥ ಆಶ್ರಮದಲ್ಲಿರುತ್ತಾ ಭಕ್ತಿ ಮೊದಲಾದವನ್ನು ಮಾಡುತ್ತಿದ್ದೀರಿ. ನಿಮಗೆ ನಂತರ ಜ್ಞಾನವು ಸಿಗುತ್ತದೆ, ಅವರಿಗೆ ಜ್ಞಾನವು ಸಿಗುವುದೇ ಇಲ್ಲ. ನೀವು ಎಷ್ಟು ಉನ್ನತ ವಿದ್ಯೆಯನ್ನು ಓದುತ್ತೀರಿ ಮತ್ತು ಕೆಳಗೆ ಎಷ್ಟು ಸಾಧಾರಣವಾಗಿ ಕುಳಿತಿದ್ದೀರಿ. ದಿಲ್ವಾಡ ಮಂದಿರದಲ್ಲಿಯೂ ನೀವು ಕೆಳಗೆ ತಪಸ್ಸಿನಲ್ಲಿ ಕುಳಿತಿದ್ದೀರಿ, ಮೇಲೆ ವೈಕುಂಠವಿದೆ. ಮೇಲೆ ತೋರಿಸಿರುವ ವೈಕುಂಠವನ್ನು ನೋಡಿ ಸ್ವರ್ಗವು ಮೇಲೆಯೇ ಇರುತ್ತದೆಯೆಂದು ಮನುಷ್ಯರು ತಿಳಿಯುತ್ತಾರೆ.

ಅಂದಾಗ ನೀವು ಮಕ್ಕಳಲ್ಲಿ ಇವೆಲ್ಲಾ ಮಾತುಗಳು ಬರಬೇಕು- ಇದು ಶಾಲೆಯಾಗಿದೆ, ನಾವು ಓದುತ್ತಿದ್ದೇವೆ. ನೀವು ಎಲ್ಲಿಯೇ ಹೋಗುತ್ತೀರೆಂದರೆ ಬುದ್ಧಿಯಲ್ಲಿ ಈ ವಿಚಾರಗಳು ನಡೆಯುತ್ತಾ ಇದ್ದರೆ ಬಹಳ ಮಜಾ ಎನಿಸುತ್ತದೆ. ಬೇಹದ್ದಿನ ತಂದೆಯನ್ನಂತೂ ಪ್ರಪಂಚದಲ್ಲಿ ಯಾರೂ ಸಹ ತಿಳಿದುಕೊಂಡಿಲ್ಲ. ತಂದೆಯ ಮಕ್ಕಳಾಗಿ ತಂದೆಯ ಚರಿತ್ರೆಯನ್ನು ತಿಳಿದುಕೊಂಡಿಲ್ಲ, ಇಂತಹ ಬುದ್ಧಿಹೀನರನ್ನು ಎಂದಾದರೂ ನೋಡಿದ್ದೀರಾ? ತಿಳಿದುಕೊಂಡಿಲ್ಲದೆ ಇರುವ ಕಾರಣ ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಭಗವಂತನಿಗೂ ಸಹ ನೀನೇ ಪೂಜ್ಯ, ನೀನೇ ಪೂಜಾರಿ ಎಂದು ಹೇಳಿಬಿಡುತ್ತಾರೆ. ನಾವು ಎಷ್ಟೊಂದು ಶ್ರೇಷ್ಠರು, ಪೂಜ್ಯರಾಗಿದ್ದೆವೆಂದು ನೀವು ಮಕ್ಕಳ ಆಂತರ್ಯದಲ್ಲಿ ಎಷ್ಟೊಂದು ಖುಷಿಯಿರಬೇಕು. ಪುನಃ ನಾವೇ ಪೂಜಾರಿಗಳಾಗಿದ್ದೇವೆ. ಶಿವತಂದೆಯು ನಮ್ಮನ್ನು ಇಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತಾರೆ ಮತ್ತೆ ಡ್ರಾಮಾನುಸಾರ ನೀವು ಅವರ ಪೂಜೆಯನ್ನು ಪ್ರಾರಂಭಿಸುತ್ತೀರಿ. ಭಕ್ತಿ ಯಾವಾಗ ಪ್ರಾರಂಭವಾಗುತ್ತದೆ ಎಂದು ಈ ಎಲ್ಲಾ ಮಾತುಗಳನ್ನು ಪ್ರಪಂಚದವರೇನಾದರೂ ತಿಳಿದುಕೊಂಡಿದ್ದಾರೇನು? ತಂದೆಯು ನೀವು ಮಕ್ಕಳಿಗೆ ಪ್ರತಿನಿತ್ಯ ತಿಳಿಸುತ್ತಾ ಇರುತ್ತಾರೆ. ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ಆಂತರ್ಯದಲ್ಲಿ ಖುಷಿಯಾಗಬೇಕಲ್ಲವೆ. ನಮಗೆ ಯಾರು ಓದಿಸುತ್ತಿದ್ದಾರೆ? ಭಗವಂತ ತಾನೇ ಬಂದು ಓದಿಸುತ್ತಿದ್ದಾರೆ- ಇದನ್ನು ಎಂದೂ ಸಹ ಕೇಳಿಯೇ ಇಲ್ಲ. ಅವರಾದರೂ ಗೀತೆಯ ಭಗವಂತ ಕೃಷ್ಣನೆಂದು ತಿಳಿದುಕೊಂಡಿದ್ದಾರೆ. ಗೀತೆಯ ಭಗವಂತ ಕೃಷ್ಣನಾದರೆ ಕೃಷ್ಣನೇ ಓದಿಸಬೇಕು. ಒಳ್ಳೆಯದು- ಕೃಷ್ಣನೇ ಎಂದು ತಿಳಿಯುವುದಾದರೆ ಎಷ್ಟೊಂದು ಶ್ರೇಷ್ಠ ಸ್ಥಿತಿಯಿರಬೇಕು. ಮನುಷ್ಯ ಮತ ಮತ್ತು ಈಶ್ವರೀಯ ಮತದ ಒಂದು ಪುಸ್ತಕವಿದೆ. ದೇವತೆಗಳಿಗಾದರೂ ಮತವನ್ನು (ಸಲಹೆ) ತೆಗೆದುಕೊಳ್ಳುವುದರ ಅವಶ್ಯಕತೆಯು ಇರುವುದಿಲ್ಲ. ಮನುಷ್ಯರು ಈಶ್ವರನ ಮತವನ್ನು ಬಯಸುತ್ತಾರೆ. ದೇವತೆಗಳಿಗೆ ಹಿಂದಿನ ಜನ್ಮದಲ್ಲಿ ಮತ ದೊರೆಕಿರುತ್ತದೆ ಅದರಿಂದ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈಗ ನೀವು ಮಕ್ಕಳಿಗೆ ಶ್ರೀಮತವು ಶ್ರೇಷ್ಠರಾಗಲು ಸಿಗುತ್ತಿದೆ. ಈಶ್ವರೀಯ ಮತ ಮತ್ತು ಮನುಷ್ಯ ಮತದಲ್ಲಿ ಎಷ್ಟೊಂದು ವ್ಯತ್ಯಾಸವಿದೆ. ಮನುಷ್ಯ ಮತ ಏನನ್ನು ಹೇಳುತ್ತದೆ, ಈಶ್ವರೀಯ ಮತ ಏನನ್ನು ಹೇಳುತ್ತದೆ ಅಂದಾಗ ಅವಶ್ಯವಾಗಿ ಈಶ್ವರೀಯ ಮತದ ಮೇಲೆ ನಡೆಯಬೇಕು. ಯಾರನ್ನಾದರೂ ಮಿಲನ ಮಾಡಲು ಹೋಗುತ್ತೀರೆಂದರೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಯಾರಿಗೆ ಯಾವ ಉಡುಗೊರೆಯನ್ನು ಕೊಡಬೇಕೆಂದು ನೆನಪು ಇರುವುದಿಲ್ಲ. ಇದು ಮನುಷ್ಯ ಮತ ಮತ್ತು ಈಶ್ವರೀಯ ಮತದ ವ್ಯತ್ಯಾಸದ ಬಹಳ ಅವಶ್ಯಕತೆಯಿದೆ. ನೀವು ಮನುಷ್ಯರಿದ್ದಾಗ ಆಸುರೀ ಮತ ಇತ್ತು, ಈಗ ಈಶ್ವರೀಯ ಮತ ಸಿಗುತ್ತದೆ. ಅದಕ್ಕೂ, ಇದಕ್ಕೂ ಎಷ್ಟೊಂದು ವ್ಯತ್ಯಾಸವಿದೆ. ಈ ಶಾಸ್ತ್ರ ಮುಂತಾದವುಗಳು ಮನುಷ್ಯರಿಂದ ಮಾಡಲ್ಪಟ್ಟಿವೆ. ತಂದೆಯು ಶಾಸ್ತ್ರಗಳನ್ನು ಓದಿ ಬರುತ್ತಾರೇನು? ತಂದೆಯು ಹೇಳುತ್ತಾರೆ- ನಾನು ಯಾವುದೇ ತಂದೆಯ ಮಗುವಾಗಿದ್ದೇನೆಯೇ? ನಾನು ಯಾವುದೇ ಗುರುವಿನ ಶಿಷ್ಯನಾಗಿದ್ದೇನೆಯೇ? ಯಾರಿಂದ ಕಲಿತಿದ್ದೇನೆ? ಇದೆಲ್ಲಾ ಮಾತುಗಳನ್ನು ತಿಳಿಸಿಕೊಡಬೇಕಾಗುತ್ತದೆ. ಮನುಷ್ಯರದು ಕಪಿಯ ಬುದ್ಧಿಯಾಗಿದೆ ಎಂಬುದು ತಿಳಿದಿದೆ ಆದರೆ ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುವವರೂ ಸಹ ಇದ್ದಾರಲ್ಲವೆ. ಈ ರೀತಿ ಬಹಳಷ್ಟು ಜನ ಮನುಷ್ಯ ಮತದಂತೆ ನಡೆಯುತ್ತಾರೆ. ಅವರಿಗೆ ನೀವು ಈಶ್ವರೀಯ ಮತದಂತೆ ನಡೆದಾಗ ಎಂತಹವರಾಗುತ್ತೀರಿ ಅಂದರೆ ಈಶ್ವರ ನಮಗೆ ಓದಿಸುತ್ತಿದ್ದಾರೆ ಎಂಬುದನ್ನು ನೀವು ತಿಳಿಸುತ್ತಿದ್ದೀರಿ. ಭಗವಾನುವಾಚ - ನಾನು ಅವರಿಗೆ ಓದಿಸಲು ಹೋಗುತ್ತೇವೆ. ನಾವು ನಿತ್ಯವೂ ಒಂದುಗಂಟೆ ಅಥವಾ ಮುಕ್ಕಾಲುಗಂಟೆ ಓದಲು ಹೋಗುತ್ತೇವೆ. ತರಗತಿಯಲ್ಲಿ ಹೆಚ್ಚು ಸಮಯವನ್ನೂ ಸಹ ತೆಗೆದುಕೊಳ್ಳಬಾರದು. ನೆನಪಿನ ಯಾತ್ರೆಯನ್ನು ನಡೆದಾಡುತ್ತಾ-ತಿರುಗಾಡುತ್ತಾ ಮಾಡಲು ಸಾಧ್ಯವಿದೆ. ಜ್ಞಾನ ಮತ್ತು ಯೊಗ ಎರಡೂ ಬಹಳ ಸಹಜವಾಗಿದೆ. ತಂದೆಯೆಂಬುದು ಒಂದೇ ಶಬ್ಧವಾಗಿದೆ. ಭಕ್ತಿಮಾರ್ಗದಲ್ಲಿ ಅನೇಕ ಶಾಸ್ತ್ರಗಳಿವೆ. ಎಲ್ಲಾ ಶಾಸ್ತ್ರಗಳನ್ನು ಒಟ್ಟುಗೂಡಿಸಿದ್ದೇ ಆದರೆ ಇಡೀ ಮನೆಯೇ ಶಾಸ್ತ್ರಗಳಿಂದ ತುಂಬಲ್ಪಡುತ್ತದೆ. ಇದರಬಗ್ಗೆ ಎಷ್ಟೊಂದು ಖರ್ಚು ಆಗಿರಬಹುದು. ತಂದೆಯು ಬಹಳ ಸಹಜ ರೀತಿಯಲ್ಲಿ ತಿಳಿಸುತ್ತಾರೆ. ಕೇವಲ ತಂದೆಯನ್ನು ನೆನಪು ಮಾಡಿರಿ, ತಂದೆಯ ಆಸ್ತಿ ಸ್ವರ್ಗದ ರಾಜ್ಯಭಾಗ್ಯವಾಗಿದೆ. ನೀವು ವಿಶ್ವದ ಮಾಲೀಕರಾಗಿದ್ದೀರಲ್ಲವೇ. ಭಾರತ ಸ್ವರ್ಗವಾಗಿತ್ತಲ್ಲವೆ? ಇದನ್ನು ನೀವು ಮರೆತುಬಿಟ್ಟಿದ್ದೀರೇನು? ಇದಕ್ಕೆ ಡ್ರಾಮಾದ ನೊಂದಣಿ ಎಂದು ಕರೆಯಲಾಗುತ್ತದೆ. ಇಲ್ಲಿ ತಂದೆಯು ಬಂದಿದ್ದಾರೆ- ಪ್ರತೀ 5000 ವರ್ಷಗಳ ನಂತರ ಓದಿಸಲು ಬರುತ್ತಾರೆ ಬೇಹದ್ದಿನ ತಂದೆಯ ಆಸ್ತಿಯು ಅವಶ್ಯವಾಗಿ ಸ್ವರ್ಗ ಅಥವಾ ಹೊಸಪ್ರಪಂಚದ್ದಾಗಿದೆ ಅಲ್ಲವೆ. ಲಕ್ಷಾಂತರ ವರ್ಷವೆಂದು ಹೇಳುವುದರಿಂದ ಬುದ್ಧಿಗೆ ಬೀಗ ಹಾಕಲ್ಪಟ್ಟಿದೆ. ಬುದ್ಧಿಯ ಬೀಗ ತೆರೆಯುವುದೇ ಇಲ್ಲ. ಎಷ್ಟು ಸಹಜವಾದ ಮಾತನ್ನೂ ಸಹ ತಿಳಿದುಕೊಳ್ಳುವುದೇ ಇಲ್ಲ. ಈ ರೀತಿಯಾಗಿ ಹಾಕಲ್ಪಟ್ಟಿದೆ ಸಹಜವಾದ ಮಾತೂ ಸಹ ಅರ್ಥವಾಗುವುದಿಲ್ಲ. ನೀವು ಹೆಚ್ಚಾಗಿ ಓದಬೇಕಾಗಿಲ್ಲ, ಕೇವಲ ಒಂದು ಮಾತು ತಿಳಿದುಕೊಂಡರೆ ಸಾಕು ಎಂದು ತಂದೆಯು ತಿಳಿಸುತ್ತಾರೆ. ಇಲ್ಲಿ ನೀವು ಒಂದೇ ಸೆಕೆಂಡಿಗೆ ಯಾರನ್ನು ಬೇಕಾದರೂ ಸ್ವರ್ಗವಾಸಿಗಳನ್ನಾಗಿ ಮಾಡಲು ಸಾಧ್ಯತೆಯಿದೆ ಆದರೆ ಇದು ಶಾಲೆಯಾಗಿದೆ ಆದ್ದರಿಂದ ನಿಮ್ಮ ವಿದ್ಯೆಯು ನಡೆಯುತ್ತಾ ಇರುತ್ತದೆ. ಜ್ಞಾನಸಾಗರ ತಂದೆಯು ತಮಗೆ ಇಷ್ಟೊಂದು ಜ್ಞಾನವನ್ನು ಕೊಡುತ್ತಾರೆ, ಸಾಗರವನ್ನೇ ಶಾಹಿಯನ್ನಾಗಿ ಮಾಡಿಕೊಂಡಿ, ಇಡೀ ಕಾಡನ್ನೇ ಲೇಖನಿಯನ್ನಾಗಿ ಮಾಡಿಕೊಂಡರೂ ಸಹ ಅಂತ್ಯವಾಗಲು ಸಾಧ್ಯವಿಲ್ಲ. ಜ್ಞಾನವನ್ನು ಎಷ್ಟು ಸಮಯದಿಂದ ಧಾರಣೆ ಮಾಡುತ್ತಿದ್ದೀರಿ? ಅರ್ಧಕಲ್ಪದಿಂದ ಭಕ್ತಿಯನ್ನು ಮಾಡುತ್ತಾ ಬಂದಿದ್ದೀರಿ. ಜ್ಞಾನವಂತೂ ನಿಮಗೆ ಕೇವಲ ಒಂದು ಜನ್ಮ ಮಾತ್ರವೇ ಸಿಗುತ್ತದೆ. ತಂದೆಯು ನಿಮಗೆ ಹೊಸ ಪ್ರಪಂಚಕ್ಕಾಗಿ ಓದಿಸುತ್ತಿದ್ದಾರೆ. ಲೌಕಿಕ ಶಾಲೆಯಲ್ಲಂತೂ ನೀವು ಎಷ್ಟು ಸಮಯ ಓದುತ್ತೀರಿ? 5 ವರ್ಷದಿಂದ ಹಿಡಿದು 20-22 ವರ್ಷಗಳ ತನಕ ಓದುತ್ತೀರಿ (ಒಂದೊಂದು ಜನ್ಮದಲ್ಲಿ) ಇದರಿಂದ ಸಂಪಾದನೆ ಕಡಿಮೆ ಬಹಳ ಖರ್ಚು ಮಾಡುವುದರಿಂದ ನಷ್ಟವಾಗಿ ಬಿಡುತ್ತದೆಯಲ್ಲವೆ. ತಂದೆಯು ಎಷ್ಟೊಂದು ಶ್ರೀಮಂತರನ್ನಾಗಿ ಮಾಡುತ್ತಾರೆ ಮತ್ತೆ ಎಂತಹ ಬಡವರಾಗಿಬಿಡುತ್ತೀರಿ. ಈಗ ಭಾರತದ ಸ್ಥಿತಿಯನ್ನು ನೋಡಿ- ಹೇಗಿದೆ! ನಶೆಯಿಂದ ತಿಳಿಸಿಕೊಡಬೇಕು ಮಾತೆಯರು ಎದ್ದು ನಿಲ್ಲಬೇಕು. ವಂದೇ ಮಾತರಂ ಎಂಬ ಗಾಯನ ನಿಮ್ಮದೇ ಆಗಿದೆ. ಭೂಮಿಗೆ ವಂದೇ ಮಾತರಂ ಎಂದು ಹೇಳುವುದಿಲ್ಲ. ವಂದೇ ಮಾತರಂ ಎಂದು ಮನುಷ್ಯರಿಗೆ ಹೇಳಲಾಗುತ್ತದೆ. ಯಾವ ಮಕ್ಕಳು ಬಂಧನ ಮುಕ್ತರಾಗಿರುತ್ತಾರೆಯೋ ಅವರೇ ಈ ಸೇವೆಯನ್ನು ಮಾಡುತ್ತಾರೆ. ಅದೂ ಸಹ ಕಲ್ಪದ ಹಿಂದೆ ಹೇಗೆ ಬಂಧನ ಮುಕ್ತರಾಗಿದ್ದರೋ ಹಾಗೆಯೇ ಆಗುತ್ತಾ ಹೋಗುತ್ತಾರೆ. ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರವಾಗುತ್ತದೆ. ನಮಗೆ ತಂದೆಯು ಸಿಕ್ಕಿದ್ದಾರೆ. ನಾವು ಈಗ ಆ ತಂದೆಯ ಸೇವೆಯನ್ನು ಮಾಡಬೇಕು ಎಂಬುದನ್ನು ತಿಳಿದಿದ್ದೀರಿ. ಬಂಧನವಿದೆ ಎಂದು ತಿಳಿಯುವವರು ಕುರಿಯ ಸಮಾನರಾಗಿದ್ದಾರೆ. ನೀವು ಈಶ್ವರೀಯ ಸೇವೆಯನ್ನು ಮಾಡಬೇಡಿ ಎಂದು ಸರ್ಕಾರವೂ ಸಹ ಹೇಳಲು ಸಾಧ್ಯವಿಲ್ಲ. ನಿಮಗೆ ಮಾತನಾಡಲು ಧೈರ್ಯಬೇಕಲ್ಲವೆ. ಯಾರಲ್ಲಿ ಜ್ಞಾನವಿದೆ ಅವರು ಸ್ವಲ್ಪದರಲ್ಲಿಯೇ ಸಹಜವಾಗಿ ಬಂಧನ ಮುಕ್ತರಾಗಿಬಿಡುತ್ತಾರೆ. ನಾವು ಆತ್ಮೀಯ ಸೇವೆಯನ್ನು ಮಾಡಲು ಬಯಸುತ್ತೇವೆ ಎಂದು ನ್ಯಾಯಾಧೀಶರಿಗೂ ಸಹ ತಿಳಿಸಿಕೊಡಬಹುದಾಗಿದೆ. ಆತ್ಮೀಯ ತಂದೆಯು ನಮಗೆ ಓದಿಸುತ್ತಿದ್ದಾರೆ. ಕ್ರಿಶ್ಚಿಯನ್ನರು ನಮ್ಮನ್ನು ಮುಕ್ತರನ್ನಾಗಿ ಮಾಡು, ಮಾರ್ಗದರ್ಶನ ಕೊಡು ಎಂದು ಕೇಳಿಕೊಳ್ಳುತ್ತಾರೆ. ಭಾರತವಾಸಿಗಳಿಗಿಂತಲೂ ಸಹ ಅವರಲ್ಲಿ ಒಳ್ಳೆಯ ತಿಳುವಳಿಕೆ ಇದೆ. ನೀವು ಮಕ್ಕಳಲ್ಲಿ ಯಾರು ಒಳ್ಳೆಯ ತಿಳುವಳಿಕೆಯುಳ್ಳವರಾಗಿದ್ದೀರಿ ಅವರಿಗೆ ಸೇವೆ ಮಾಡುವ ಬಹಳ ಉತ್ಸಾಹವಿರುತ್ತದೆ. ಈಶ್ವರೀಯ ಸೇವೆಯಿಂದ ದೊಡ್ಡಲಾಟರಿ ಸಿಗುತ್ತದೆ ಎಂಬುದನ್ನು ತಿಳಿದಿದ್ದಾರೆ. ಕೆಲವರು ಲಾಟರಿಯನ್ನು ತಿಳಿದುಕೊಳ್ಳುವುದೇ ಇಲ್ಲ. ಅಲ್ಲಿ ಹೋಗಿಯೂ ಸಹ ದಾಸ-ದಾಸಿಯರಾಗುತ್ತಾರೆ. ಒಳ್ಳೆಯದು ದಾಸಿಯಾದರೂ ಸರಿಯೇ, ಚಂಡಾಲನಾದರೂ ಸರಿಯೇ ಎಂದು ಮನಸ್ಸಿನಲ್ಲಿ ತಿಳಿದುಕೊಳ್ಳುತ್ತಾರೆ. ಸ್ವರ್ಗದಲ್ಲಂತೂ ಹೋಗುತ್ತೇವಲ್ಲವೆ. ಅವರ ನಡತೆಯೂ ಹಾಗೆಯೇ ಕಂಡುಬರುತ್ತದೆ. ನಮಗೆ ಬೇಹದ್ದಿನ ತಂದೆಯು ತಿಳಿಸಿಕೊಡುತ್ತಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಇವರ ಮೂಲಕ ಮಕ್ಕಳಿಗೆ ಓದಿಸುತ್ತಿದ್ದಾರೆ. ಈ ದಾದಾರವರೂ ಸಹ ತಿಳಿಸಿಕೊಡುತ್ತಾರೆ. ಕೆಲವರು ಇಷ್ಟನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಇಲ್ಲಿಂದ ಹೊರಗೆ ಹೋಗುತ್ತಾರೆಂದರೆ ಸಮಾಪ್ತಿ ಆಗಿಬಿಡುತ್ತದೆ. ಇಲ್ಲಿ ಕುಳಿತಿದ್ದರೂ ಸಹ ಏನನ್ನೂ ತಿಳಿದುಕೊಳ್ಳುವುದಿಲ್ಲ. ಬುದ್ಧಿಯು ಹೊರಗಡೆ ಅಲೆದಾಡುತ್ತಾ ಪೆಟ್ಟನ್ನು ತಿನ್ನುತ್ತಾ ಇರುತ್ತದೆ. ಯಾವುದೇ ಒಂದು ಭೂತವೂ ಸಹ ಬಿಟ್ಟು ಹೋಗುವುದಿಲ್ಲ. ಓದಿಸುವವರು ಯಾರಾಗಿದ್ದಾರೆ? ಮತ್ತು ಆಗುವುದೇನು? ಸಾಹುಕಾರರಿಗೂ ಸಹ ದಾಸ-ದಾಸಿಗಳು ಆಗುತ್ತಾರಲ್ಲವೆ. ಈಗಲೂ ಸಹ ಸಾಹುಕಾರರ ಬಳಿ ಎಷ್ಟೊಂದು ನೌಕರರು ಇರುತ್ತಾರೆ. ನೀವು ಮಕ್ಕಳು ಸೇವೆ ಎಂದರೆ ಒಮ್ಮೆಲೆ ಹಾರಿಹೋಗಬೇಕು. ನೀವು ಮಕ್ಕಳು ಶಾಂತಿಯ ಸ್ಥಾಪನಾರ್ಥವಾಗಿ ನಿಮಿತ್ತರಾಗಿದ್ದೀರಿ. ವಿಶ್ವದಲ್ಲಿ ಸುಖ-ಶಾಂತಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಪ್ರತ್ಯಕ್ಷದಲ್ಲಿ ನಾವು ಶ್ರೀಮತದಂತೆ ಸ್ಥಾಪನೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಅಶಾಂತಿ ಯಾವುದೂ ಆಗಬಾರದು ಎಂಬುದು ನಿಮಗೆ ತಿಳಿದಿದೆ. ತಂದೆಯು ಇಲ್ಲಿಯೂ ಸಹ ಬಹಳ ಒಳ್ಳೊಳ್ಳೆಯ ಮನೆಯನ್ನು ನೋಡಿದ್ದಾರೆ. ಒಂದೇ ಮನೆಯಲ್ಲಿ 6-7 ಜನ ಸೊಸೆಯರು ಒಟ್ಟಾಗಿ ಬಹಳ ಪ್ರೀತಿಯಿಂದ ಇರುತ್ತಾರೆ. ಸಂಪೂರ್ಣ ಶಾಂತಿಯಿಂದ ಕೂಡಿರುತ್ತದೆ. ನಮ್ಮ ಪಾಲಿಗೆ ಇದೇ ಸ್ವರ್ಗವಾಗಿದೆ ಎಂದು ಹೇಳುತ್ತಾರೆ. ಯಾವುದೇ ಕಿರಿಕಿರಿಯ ಮಾತಿಲ್ಲ, ಆಜ್ಞಾಕಾರಿಗಳು. ಆ ಸಮಯದಲ್ಲಿ ಬ್ರಹ್ಮಾತಂದೆಗೂ ಸಹ ಸನ್ಯಾಸಿ ಆಗಬೇಕೆಂದು ವಿಚಾರವಿರುತ್ತಿತ್ತು. ಈಗ ಇದು ಬೇಹದ್ದಿನ ಸನ್ಯಾಸವಾಗಿದೆ. ಯಾವುದೂ ಸಹ ನೆನಪು ಇರಬಾರದು. ಹೆಸರುಗಳನ್ನೂ ಸಹ ಮರೆತುಬಿಡುತ್ತಾರೆ. ಮಕ್ಕಳು ಕೇಳುತ್ತಾರೆ, ಬಾಬಾ ನೀವು ನಮ್ಮನ್ನು ನೆನಪು ಮಾಡುತ್ತೀರಾ? ನಾವು ಎಲ್ಲರನ್ನೂ ಮರೆಯಬೇಕಾಗಿದೆ ಎಂದು ತಂದೆಯು ಹೇಳುತ್ತಾರೆ. ನೆನಪು ಮಾಡಲೂಬೇಡಿ, ಮರೆಯಲೂಬಾರದು ಸಹಜ ಏಕರಸ ಸ್ಥಿತಿಯಿರಲಿ. ಬೇಹದ್ದಿನ ವೈರಾಗಿಗಳಲ್ಲವೆ. ಆದ್ದರಿಂದ ಎಲ್ಲವನ್ನೂ ಮರೆಯಬೇಕಾಗಿದೆ. ನಾವು ಇಲ್ಲಿಯೇ ಇರುವಂತಹವರೇನು! ನಮಗೆ ಸ್ವರ್ಗದ ಆಸ್ತಿಯನ್ನು ಕೊಡಲು ತಂದೆಯು ಬಂದಿದ್ದಾರೆ. ಬೇಹದ್ದಿನ ತಂದೆಯು ನನ್ನನ್ನು ನೆನಪು ಮಾಡಿದ್ದೇ ಆದರೆ ನೀವು ವಿಶ್ವದ ಮಾಲೀಕರಾಗಿಬಿಡುತ್ತೀರಿ ಎಂದು ಹೇಳುತ್ತಾರೆ. ಈ ಬ್ಯಾಡ್ಜ್ ತಿಳಿಸಿಕೊಡಲು ಬಹಳ ಚೆನ್ನಾಗಿದೆ. ಯಾರಾದರೂ ಬ್ಯಾಡ್ಜನ್ನು ಕೇಳಿದರೆ ಇದರ ಬಗ್ಗೆ ತಿಳಿದುಕೊಂಡು ತೆಗೆದುಕೊಳ್ಳಿ ಎಂದು ಹೇಳಿ. ಈ ಬ್ಯಾಡ್ಜಿನ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮಗೆ ವಿಶ್ವದ ರಾಜ್ಯಭಾಗ್ಯ ಸಿಗಲು ಸಾಧ್ಯವಿದೆ. ಶಿವತಂದೆಯು ಈ ಬ್ರಹ್ಮಾರವರ ಮೂಲಕ ಸಲಹೆಯನ್ನು ಕೊಡುತ್ತಾರೆ. ನೀವು ನನ್ನನ್ನು ನೆನಪು ಮಾಡಿದ್ದೆ ಆದರೆ ಇಂತಹವರಾಗುತ್ತೀರಿ. ಗೀತೆಯನ್ನು ಓದುವವರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಯಾರು ದೇವತಾ ಧರ್ಮದವರಾಗಿರುತ್ತಾರೆಯೋ ಅವರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಕೆಲವರು ದೇವತೆಗಳು ಕೆಳಗೆ ಏಕೆ ಬೀಳುತ್ತಾರೆ ಎನ್ನುವ ಪ್ರಶ್ನೆಯನ್ನು ಮಾಡುತ್ತಾರೆ. ಅರೆ! ಈ ಚಕ್ರವು ಸುತ್ತುತ್ತಾ ಇರುತ್ತದೆ, ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೆ ಇಳಿಯುತ್ತಾರಲ್ಲವೆ. ಚಕ್ರ ಸುತ್ತಲೇಬೇಕಾಗಿದೆಯಲ್ಲವೆ. ಪ್ರತಿಯೊಬ್ಬರಿಗೆ ತಮ್ಮ ಮನಸ್ಸಿನಲ್ಲಿ ನಾವು ಸೇವೆಯನ್ನು ಏಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರಗಳು ಅವಶ್ಯವಾಗಿ ಬರುತ್ತದೆ. ಅವಶ್ಯವಾಗಿ ನನ್ನಲ್ಲಿ ಯಾವುದೋ ಕೊರತೆಯಿದೆ. ಮಾಯೆಯ ಭೂತ ಮೂಗನ್ನು ಹಿಡಿದುಕೊಂಡುಬಿಟ್ಟಿದೆ.

ನಾವು ಈಗ ಮನೆಗೆ ಹೋಗಬೇಕಾಗಿದೆ ಮತ್ತೆ ಹೊಸ ಪ್ರಪಂಚದಲ್ಲಿ ಬಂದು ರಾಜ್ಯವನ್ನು ಮಾಡುತ್ತೇವೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವು ಯಾತ್ರಿಕರಾಗಿದ್ದೀರಲ್ಲವೆ. ದೂರದೇಶದಿಂದ ಬಂದು ಇಲ್ಲಿ ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ನಾವು ಈಗ ಅಮರಲೋಕದಲ್ಲಿ ಹೋಗಬೇಕಾಗಿದೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಈ ಮೃತ್ಯುಲೋಕ ಸಮಾಪ್ತಿಯಾಗಲಿದೆ. ತಂದೆಯು ಬಹಳಷ್ಟು ತಿಳಿಸಿಕೊಡುತ್ತಾರೆ. ಇದು ಚೆನ್ನಾಗಿ ಧಾರಣೆ ಮಾಡಬೇಕು. ಇದನ್ನು ಮತ್ತೆ ಮೆಲುಕು ಹಾಕುತ್ತಾ ಇರಬೇಕು. ಕರ್ಮಭೋಗದ ಖಾಯಿಲೆ ಘೋರವಾಗಿ ಹೆಚ್ಚುತ್ತಾಹೋಗುತ್ತದೆ, ಇದನ್ನೂ ಸಹ ತಂದೆಯು ತಿಳಿಸಿದ್ದಾರೆ- ಮಾಯೆಯು ಸತಾಯಿಸುತ್ತದೆ ಆದರೆ ತಬ್ಬಿಬ್ಬಾಗಬಾರದು. ಸ್ವಲ್ಪ ಏನಾದರೂ ಆದರೆ ಗಾಬರಿಯಾಗಿಬಿಡುತ್ತಾರೆ. ಖಾಯಿಲೆಯಲ್ಲಿ ಮನುಷ್ಯರು ಭಗವಂತನನ್ನು ಇನ್ನೂ ಚೆನ್ನಾಗಿ ನೆನಪು ಮಾಡುತ್ತಾರೆ. ಬಂಗಾಳದಲ್ಲಿ ಯಾರಿಗಾದರೂ ಬಹಳ ಕಾಯಿಲೆಯಾಯಿತೆಂದರೆ ಅವರಿಗೆ ರಾಮಸ್ಮರಣೆ ಮಾಡಿ.... ಎಂದು ಹೇಳುತ್ತಾರೆ. ಯಾರಾದರೂ ಶರೀರ ಬಿಡುವ ಸ್ಥಿತಿಯಲ್ಲಿದ್ದರೆ ಗಂಗಾ ನದಿಯ ಬಳಿ ತೆಗೆದುಕೊಂಡು ಹೋಗಿ ಹರಿಯ ಸ್ಮರಣೆ ಮಾಡಿ, ಹರಿಯ ಸ್ಮರಣೆ ಮಾಡಿ ಎಂದು ಹೇಳುತ್ತಿರುತ್ತಾರೆ. ಮತ್ತೆ ಅವರನ್ನು ತೆಗೆದುಕೊಂಡು ಬಂದು ಸುಡುವ ಅವಶ್ಯಕತೆಯೇನಿದೆ? ಗಂಗೆಯಲ್ಲಿಯೇ ಹಾಕಿಬಿಡಿ. ಮೀನು ಮೊಸಳೆಗಳಿಗೆ ಆಹಾರವಾಗಿಬಿಡುತ್ತದೆ. ಕೆಲಸಕ್ಕೆ ಬರುತ್ತಾರೆ. ಪಾರಸಿ ಜನರು ಶರೀರವನ್ನು ಹಾಗೆಯೇ ಇಟ್ಟುಬಿಡುತ್ತಾರೆ. ಆ ಮೂಳೆಗಳೂ ಸಹ ಕೆಲಸಕ್ಕೆ ಬರುತ್ತದೆ. ತಂದೆಯು ಹೇಳುತ್ತಾರೆ- ನೀವು ಎಲ್ಲಾ ಮಾತುಗಳನ್ನು ಮರೆತು ನನ್ನನ್ನು ನೆನಪು ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಬಂಧನಮುಕ್ತರಾಗಿ ಭಾರತದ ಸತ್ಯಸೇವೆಯನ್ನು ಮಾಡಬೇಕು. ನಮಗೆ ಆತ್ಮೀಯ ತಂದೆಯು ಓದಿಸುತ್ತಿದ್ದಾರೆ, ನಾವು ಆತ್ಮೀಯ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ನಶೆಯಿಂದ ತಿಳಿಸಬೇಕು. ಈಶ್ವರೀಯ ಸೇವೆ ಮಾಡಲು ಬಹಳ ಉತ್ಸಾಹ ಇರಬೇಕು.

2. ಕರ್ಮಭೋಗದ ಖಾಯಿಲೆ ಅಥವಾ ಮಾಯೆಯ ಬಿರುಗಾಳಿಯಲ್ಲಿ ತಬ್ಬಿಬ್ಬಾಗಬಾರದು ಅಥವಾ ಗಾಬರಿಯಾಗಬಾರದು. ತಂದೆಯು ಯಾವ ಜ್ಞಾನವನ್ನು ಕೊಟ್ಟಿದ್ದಾರೆ ಅದನ್ನು ಮೆಲುಕು ಹಾಕುತ್ತಾ ತಂದೆಯ ನೆನಪಿನಲ್ಲಿ ಹರ್ಷಿತರಾಗಿರಬೇಕು.

ವರದಾನ: ನಿರಾಕಾರ ಮತ್ತು ಸಾಕಾರ ಎರಡೂ ರೂಪದ ನೆನಪಾರ್ಥವನ್ನು ವಿಧಿಪೂರ್ವಕವಾಗಿ ಆಚರಿಸುವಂತಹ ಶ್ರೇಷ್ಠ ಆತ್ಮ ಭವ
ದೀಪಾವಳಿ ಅನೇಕ ಬೇಳಗುತ್ತಿರುವ ದೀಪಗಳ ನೆನಪಾರ್ಥವಾಗಿದೆ. ನೀವು ಹೊಳೆಯುತ್ತಿರುವ ಆತ್ಮಗಳು ದೀಪಗಳ ಸಮಾನವಾಗಿ ಕಂಡು ಬರುವಿರಿ ಆದ್ದರಿಂದ ಹೊಳೆಯುತ್ತಿರುವ ಆತ್ಮಗಳು ದಿವ್ಯ ಜ್ಯೋತಿಯ ನೆನಪಾರ್ಥ ಸ್ಥೂಲ ದೀಪಗಳ ಜ್ಯೋತಿಯಲ್ಲಿ ತೋರಿಸಿದ್ದಾರೆ ಆದ್ದರಿಂದ ಒಂದುಕಡೆ ನಿರಾಕಾರಿ ಆತ್ಮದ ರೂಪದ ನೆನಪಾರ್ಥ, ಇನ್ನೊಂದು ಕಡೆ ನಿಮ್ಮದೇ ಭವಿಷ್ಯ ಸಾಕಾರ ದಿವ್ಯ ಸ್ವರೂಪ ಲಕ್ಷ್ಮಿಯ ರೂಪದಲ್ಲಿ ನೆನಪಾರ್ಥ. ಇದೇ ದೀಪಾವಳಿ ದೇವ ಪದವಿಯನ್ನು ಪ್ರಾಪ್ತಿ ಮಾಡಿಸುವುದು. ಆದ್ದರಿಂದ ನೀವು ಶ್ರೇಷ್ಠ ಆತ್ಮರು ತಮ್ಮ ನೆನಪಾರ್ಥವನ್ನು ಸ್ವಯಂ ಆಗಿ ಆಚರಿಸುತ್ತಿರುವಿರಿ.
ಸ್ಲೋಗನ್: ನಕಾರಾತ್ಮಕತೆಯನ್ನು ಸಕಾರಾತ್ಮಕವಾಗಿ ಬದಲಾಯಿಸ ಬೇಕಾದರೆ ತಮ್ಮ ಭಾವನೆಗಳನ್ನು ಶುಭ ಮತ್ತು ಬೇಹದ್ಧಿನದಾಗಿ ಮಾಡಿಕೊಳ್ಳಿ.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.