ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 30, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 30, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

30/10/24
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ- ಒಬ್ಬ ತಂದೆಯ ನೆನಪಿನಲ್ಲಿರುವುದೇ ಅವ್ಯಭಿಚಾರಿ ನೆನಪಾಗಿದೆ, ಈ ನೆನಪಿನಿಂದ ನಿಮ್ಮ ಪಾಪಗಳು ತುಂಡಾಗುತ್ತವೆ”
ಪ್ರಶ್ನೆ: ತಂದೆಯು ತಿಳಿಸುವ ಜ್ಞಾನವು ಕೆಲವರಿಗೆ ಸಹಜವೆನಿಸುತ್ತದೆ, ಇನ್ನೂ ಕೆಲವರು ಕಷ್ಟವೆಂದು ತಿಳಿಯುತ್ತಾರೆ- ಇದಕ್ಕೆ ಕಾರಣವೇನು?
ಉತ್ತರ: ಯಾವ ಮಕ್ಕಳು ಬಹಳ ಸಮಯದಿಂದಲೂ ಭಕ್ತಿ ಮಾಡಿದ್ದಾರೆಯೋ, ಅರ್ಧಕಲ್ಪದ ಹಳೆಯ ಭಕ್ತರಾಗಿದ್ದಾರೆಯೋ ಅವರು ತಂದೆಯ ಪ್ರತಿಯೊಂದು ಮಾತನ್ನೂ ಸಹಜವೆಂದು ತಿಳಿಯುತ್ತಾರೆ ಏಕೆಂದರೆ ಅವರಿಗೆ ಭಕ್ತಿಯ ಫಲವು ಸಿಗುತ್ತದೆ, ಯಾರು ಹಳೆಯ ಭಕ್ತರಲ್ಲವೋ ಅವರಿಗೆ ಪ್ರತಿಯೊಂದು ಮಾತುಗಳನ್ನು ಅರಿತುಕೊಳ್ಳುವುದರಲ್ಲಿ ಕಷ್ಟವೆನಿಸುತ್ತದೆ. ಅನ್ಯಧರ್ಮದವರಂತೂ ಈ ಜ್ಞಾನವನ್ನು ಅರಿತುಕೊಳ್ಳುವುದಕ್ಕೂ ಸಾಧ್ಯವಿಲ್ಲ.

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ- ನೀವು ಮಕ್ಕಳೆಲ್ಲರೂ ಏನು ಮಾಡುತ್ತಿದ್ದೀರಿ? ನಿಮ್ಮದು ಅವ್ಯಭಿಚಾರಿ ನೆನಪಾಗಿದೆ. ಒಂದು ವ್ಯಭಿಚಾರಿ ನೆನಪು, ಇನ್ನೊಂದು ಅವ್ಯಭಿಚಾರಿ ನೆನಪಾಗಿದೆ. ನಿಮ್ಮೆಲ್ಲರದು ಅವ್ಯಭಿಚಾರಿ ನೆನಪಾಗಿದೆ. ಯಾರ ನೆನಪು? ಒಬ್ಬ ತಂದೆಯದು. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪಾಪಗಳೂ ಭಸ್ಮವಾಗುತ್ತದೆ ಮತ್ತು ನೀವು ಪರಮಧಾಮವನ್ನು ತಲುಪುತ್ತೀರಿ. ಪಾವನರಾಗಿ ನಂತರ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ, ಆತ್ಮಗಳೇ ಹೋಗಬೇಕಾಗಿದೆ. ಆತ್ಮಗಳೇ ಈ ಕರ್ಮೇಂದ್ರಿಯಗಳ ಮೂಲಕ ಎಲ್ಲಾ ಕರ್ಮವನ್ನು ಮಾಡುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಮನುಷ್ಯರಂತೂ ಅನೇಕಾನೇಕರನ್ನು ನೆನಪು ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ನೀವು ಒಬ್ಬರನ್ನೇ ನೆನಪು ಮಾಡಬೇಕಾಗಿದೆ. ಭಕ್ತಿಯೂ ಸಹ ಮೊಟ್ಟಮೊದಲಿಗೆ ನೀವು ಶ್ರೇಷ್ಠಾತಿಶ್ರೇಷ್ಠ ಶಿವತಂದೆಯದೇ ಮಾಡಿದ್ದೀರಿ. ಅದಕ್ಕೆ ಅವ್ಯಭಿಚಾರಿ ನೆನಪೆಂದು ಹೇಳುತ್ತಾರೆ, ಅವರೇ ಸರ್ವರಿಗೆ ಸದ್ಗತಿ ನೀಡುವ ರಚಯಿತ ತಂದೆಯಾಗಿದ್ದಾರೆ. ಅವರಿಂದ ಮಕ್ಕಳಿಗೆ ಬೇಹದ್ದಿನ ಆಸ್ತಿಯು ಸಿಗುತ್ತದೆ. ಸಹೋದರರಿಂದ ಸಹೋದರರಿಗೆ ಆಸ್ತಿಯು ಸಿಗುವುದಿಲ್ಲ. ಆಸ್ತಿಯು ಯಾವಾಗಲೂ ತಂದೆಯಿಂದ ಮಕ್ಕಳಿಗೆ ಸಿಗುತ್ತದೆ. ಅಲ್ಪಸ್ವಲ್ಪ ಕನ್ಯೆಯರಿಗೆ ಸಿಗುತ್ತದೆ. ಕನ್ಯೆಯರಂತೂ ಹೋಗಿ ಅರ್ಧಾಂಗಿ ಆಗುತ್ತಾರೆ, ಇಲ್ಲಂತೂ ನೀವೆಲ್ಲರೂ ಆತ್ಮಗಳಾಗಿದ್ದೀರಿ. ಎಲ್ಲಾ ಆತ್ಮಗಳಿಗೆ ತಂದೆಯು ಒಬ್ಬರೇ ಆಗಿದ್ದಾರೆ. ಎಲ್ಲರಿಗೆ ತಂದೆಯಿಂದ ಆಸ್ತಿಯನ್ನು ಪಡೆಯುವ ಹಕ್ಕಿದೆ. ನೀವು ಸಹೋದರ-ಸಹೋದರರಾಗಿದ್ದೀರಿ. ಭಲೆ ಶರೀರವು ಸ್ತ್ರೀ-ಪುರುಷನದಾಗಿದೆ ಆದರೆ ಆತ್ಮಗಳೆಲ್ಲರೂ ಸಹೋದರರಾಗಿದ್ದೀರಿ. ಹಿಂದೂ-ಮುಸ್ಲೀಂ ಬಾಯಿ-ಬಾಯಿ ಎಂದು ಅವರು ಕೇವಲ ನಾಮ ಮಾತ್ರಕ್ಕೆ ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡೇ ಇಲ್ಲ. ನೀವೀಗ ಅರ್ಥವನ್ನು ತಿಳಿದುಕೊಂಡಿದ್ದೀರಿ. ಸಹೋದರರೆಂದರೆ ಎಲ್ಲಾ ಆತ್ಮಗಳು ಒಬ್ಬ ತಂದೆಯ ಮಕ್ಕಳಾಗಿದ್ದೀರಿ ನಂತರ ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮನ ಮಕ್ಕಳು ಸಹೋದರ-ಸಹೋದರಿಯರಾಗಿದ್ದೀರಿ. ಈಗ ನಿಮಗೆ ತಿಳಿದಿದೆ- ಎಲ್ಲಾ ಆತ್ಮಗಳು ಈ ಪ್ರಪಂಚದಿಂದ ಹಿಂತಿರುಗಿ ಹೋಗಬೇಕಾಗಿದೆ. ಯಾರೆಲ್ಲಾ ಮನುಷ್ಯಾತ್ಮರಿದ್ದಾರೆಯೋ ಎಲ್ಲರ ಪಾತ್ರವು ಈಗ ಪೂರ್ಣವಾಗುತ್ತದೆ ಮತ್ತೆ ತಂದೆಯು ಬಂದು ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ, ದೂರ ಕರೆದುಕೊಂಡು ಹೋಗುತ್ತಾರೆ. ಅಂಬಿಗನು ನಮ್ಮನ್ನು ಪಾರು ಮಾಡಿ ಅರ್ಥಾತ್ ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹಾಡುತ್ತಾರೆ. ಈಗ ಈ ಹಳೆಯ ಪ್ರಪಂಚವು ಬದಲಾಗಿ ಹೊಸ ಪ್ರಪಂಚವು ಅವಶ್ಯವಾಗಿ ಆಗಬೇಕಾಗಿದೆ. ಮೂಲವತನದಿಂದ ಹಿಡಿದು ಇಡೀ ಪ್ರಪಂಚದ ನಕ್ಷೆಯು ನಿಮ್ಮ ಬುದ್ಧಿಯಲ್ಲಿದೆ. ನಾವಾತ್ಮಗಳೆಲ್ಲರೂ ಮಧುರಮನೆ, ಶಾಂತಿಧಾಮದ ನಿವಾಸಿಯಾಗಿದ್ದೇವೆ. ಇದಂತೂ ಬುದ್ಧಿಯಲ್ಲಿ ನೆನಪಿದೆಯಲ್ಲವೆ. ನಾವೆಲ್ಲರೂ ಸತ್ಯಯುಗೀ ಹೊಸ ಪ್ರಪಂಚದಲ್ಲಿದ್ದಾಗ ಉಳಿದವರೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಆತ್ಮವೆಂದೂ ವಿನಾಶವಾಗುವುದಿಲ್ಲ. ಆತ್ಮದಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ, ಅದು ಎಂದೂ ವಿನಾಶ ಹೊಂದಲು ಸಾಧ್ಯವಿಲ್ಲ. ತಿಳಿಯಿರಿ, ಈಗ ಇಂಜಿನಿಯರ್ ಆಗಿದ್ದರೆ ಮತ್ತೆ 5000 ವರ್ಷಗಳ ನಂತರವೂ ಇದೇರೀತಿ ಇಂಜಿನಿಯರ್ ಆಗಿರುತ್ತಾರೆ, ಇದೇ ನಾಮ-ರೂಪ, ದೇಶ-ಕಾಲವಿರುತ್ತದೆ. ಇದೆಲ್ಲಾ ಮಾತುಗಳನ್ನು ತಂದೆಯೇ ಬಂದು ತಿಳಿಸುತ್ತಾರೆ. ಇದು ಅನಾದಿ-ಅವಿನಾಶಿ ನಾಟಕವಾಗಿದೆ. ಈ ನಾಟಕದ ಆಯಸ್ಸು 5000 ವರ್ಷ, ಇದರಲ್ಲಿ ಒಂದು ಕ್ಷಣವೂ ಹೆಚ್ಚು-ಕಡಿಮೆಯಿರಲು ಸಾಧ್ಯವಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಎಲ್ಲರಿಗೆ ಪಾತ್ರವು ಸಿಕ್ಕಿದೆ ಅಂದಾಗ ಆತ್ಮಾಭಿಮಾನಿಯಾಗಿ, ಸಾಕ್ಷಿಯಾಗಿ ಆಟವನ್ನು ನೋಡಬೇಕು. ತಂದೆಗಂತೂ ದೇಹವಿಲ್ಲ, ಅವರು ಜ್ಞಾನಸಾಗರ, ಬೀಜರೂಪನಾಗಿದ್ದಾರೆ ಬಾಕಿ ಆತ್ಮಗಳಂತೂ ಮೇಲೆ ನಿರಾಕಾರಿ ಪ್ರಪಂಚದಿಂದ ನಂಬರ್ವಾರ್ ಪಾತ್ರವನ್ನಭಿನಯಿಸಲು ಬರುತ್ತಾರೆ. ಮೊಟ್ಟಮೊದಲು ದೇವತೆಗಳ ಅಂಕಿಯು ಪ್ರಾರಂಭವಾಗುತ್ತದೆ. ಮೊದಲ ನಂಬರಿನವರ ರಾಜಧಾನಿಯ ಚಿತ್ರಗಳಿವೆ ಮತ್ತು ಚಂದ್ರವಂಶಿ ರಾಜಧಾನಿಯ ಚಿತ್ರಗಳಿವೆ. ಎಲ್ಲದಕ್ಕಿಂತ ಶ್ರೇಷ್ಠ ಸೂರ್ಯವಂಶಿ, ಲಕ್ಷ್ಮೀ-ನಾರಾಯಣರ ರಾಜ್ಯವಾಗಿದೆ. ಅವರ ರಾಜ್ಯವು ಹೇಗೆ ಮತ್ತು ಯಾವಾಗ ಸ್ಥಾಪನೆಯಾಯಿತೆಂದು ಯಾವುದೇ ಮನುಷ್ಯಾತ್ಮರು ತಿಳಿದುಕೊಂಡಿಲ್ಲ. ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದುಬಿಟ್ಟಿದ್ದಾರೆ. ಯಾರ ಜೀವನಕಥೆಯನ್ನೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಈ ಲಕ್ಷ್ಮೀ-ನಾರಾಯಣರ ಜೀವನಕಥೆಯನ್ನು ತಿಳಿದುಕೊಳ್ಳಬೇಕು. ಅವರ ಬಗ್ಗೆ ತಿಳಿದುಕೊಳ್ಳದೆ ತಲೆಬಾಗುವುದು ಅಥವಾ ಮಹಿಮೆ ಮಾಡುವುದಂತೂ ತಪ್ಪಾಗಿದೆ. ತಂದೆಯು ಕುಳಿತು ಅತಿಮುಖ್ಯವಾದವರ ಜೀವನಕಥೆಯನ್ನು ತಿಳಿಸುತ್ತಾರೆ. ಅವರ ರಾಜಧಾನಿಯು ಹೇಗೆ ನಡೆಯುತ್ತದೆಯೆಂದು ನಿಮಗೆ ತಿಳಿದಿದೆ. ಸತ್ಯಯುಗದಲ್ಲಿ ಶ್ರೀಕೃಷ್ಣನಿದ್ದನಲ್ಲವೆ. ಈಗ ಆ ಕೃಷ್ಣಪುರಿಯು ಮತ್ತೆ ಸ್ಥಾಪನೆಯಾಗುತ್ತಿದೆ. ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದನು. ಲಕ್ಷ್ಮೀ-ನಾರಾಯಣರ ರಾಜಧಾನಿಯು ಹೇಗೆ ಸ್ಥಾಪನೆಯಾಯಿತೆಂದು ನೀವು ತಿಳಿದುಕೊಂಡಿದ್ದೀರಿ.

ಮಾಲೆಯನ್ನೂ ನಂಬರ್ವಾರ್ ಆಗಿ ಮಾಡಿದ್ದಾರೆ. ಕೆಲಕೆಲವರು ಮಾಲೆಯ ಮಣಿಯಾಗುತ್ತಾರೆ ಆದರೆ ನಡೆಯುತ್ತಾ-ನಡೆಯುತ್ತಾ ಸೋಲನ್ನನುಭವಿಸುತ್ತಾರೆ, ಮಾಯೆಯು ಸೋಲಿಸಿಬಿಡುತ್ತದೆ. ಸೈನ್ಯದಲ್ಲಿರುವವರಿಗೆ ಇವರು ಕಮ್ಯಾಂಡರ್ ಆಗಿದ್ದಾರೆ, ಇವರು ಇಂತಹವರಾಗಿದ್ದಾರೆಂದು ಹೇಳುತ್ತಾರೆ ನಂತರ ಸತ್ತುಹೋಗುತ್ತಾರೆ. ಇಲ್ಲಿ ಸಾಯುವುದು ಎಂದರೆ ಸ್ಥಿತಿಯು ಕೆಳಗೆ ಇಳಿಯುವುದು, ಮಾಯೆಯಿಂದ ಸೋಲುವುದು. ಸಮಾಪ್ತಿಯಾಗಿಬಿಡುತ್ತಾರೆ, ಮೊದಲು ಆಶ್ಚರ್ಯವಾಗಿ ಕೇಳುತ್ತಾರೆ, ಅದೇರೀತಿ ನಡೆಯುತ್ತಾರೆ, ಅನ್ಯರಿಗೂ ತಿಳಿಸುತ್ತಾರೆ ನಂತರ ಅಹೋ ಮಾಯೆ ನಿನಗೆ ವಶವಾಗಿ ವಿಚ್ಛೇಧನವನ್ನು ಕೊಟ್ಟು ಓಡಿಹೋಗುತ್ತಾರೆ. ಇದರ ಮೇಲೆಯೇ ಕೌರವರ ಮತ್ತು ಪಾಂಡವರ ಯುದ್ಧವನ್ನು ತೋರಿಸಿದ್ದಾರೆ ಮತ್ತೆ ಅಸುರರು ಮತ್ತು ದೇವತೆಗಳ ಯುದ್ಧವನ್ನು ತೋರಿಸಿದ್ದಾರೆ. ಒಂದು ಯುದ್ಧವನ್ನು ತೋರಿಸಬೇಕಲ್ಲವೆ, ಎರಡೇಕೆ? ತಂದೆಯು ತಿಳಿಸುತ್ತಾರೆ- ಇದು ಇಲ್ಲಿಯ ಮಾತಾಗಿದೆ. ಸ್ಥೂಲವಾದ ಯುದ್ಧವಂತೂ ಹಿಂಸೆಯಾಗಿಬಿಡುತ್ತದೆ, ಇಲ್ಲಂತೂ ಇದು ಅಹಿಂಸಾ ಪರಮೋ ದೇವಿ-ದೇವತಾ ಧರ್ಮವಾಗಿದೆ, ನೀವೀಗ ಡಬಲ್ ಅಹಿಂಸಕರಾಗುತ್ತೀರಿ. ನಿಮ್ಮದು ಯೋಗಬಲದ ಮಾತಾಗಿದೆ. ಆಯುಧಗಳಿಂದ ನೀವು ಯಾರಿಗೂ ಏನೂ ಮಾಡುವುದಿಲ್ಲ. ಆ ಶಕ್ತಿಯು ಕ್ರಿಶ್ಚಿಯನ್ನರಲ್ಲಿ ಬಹಳ ಇದೆ. ರಷ್ಯಾ ಮತ್ತು ಅಮೇರಿಕಾದವರು ಇಬ್ಬರೂ ಸಹೋದರರಾಗಿದ್ದಾರೆ. ಇವರಿಬ್ಬರದೂ ಬಾಂಬುಗಳನ್ನು ತಯಾರಿಸುವ ಸ್ಪರ್ಧೆಯಾಗಿದೆ. ಇಬ್ಬರೂ ಒಬ್ಬರಿನ್ನೊಬ್ಬರಿಗಿಂತ ಶಕ್ತಿಶಾಲಿಗಳಾಗಿದ್ದಾರೆ. ಅವರಲ್ಲಿ ಎಷ್ಟು ಶಕ್ತಿಯಿದೆಯೆಂದರೆ, ಒಂದುವೇಳೆ ಇಬ್ಬರೂ ಸೇರಿದರೆ ಇಡೀ ವಿಶ್ವದ ಮೇಲೆ ರಾಜ್ಯ ಮಾಡಬಹುದು ಆದರೆ ಬಾಹುಬಲದಿಂದ ವಿಶ್ವದ ರಾಜ್ಯವನ್ನು ಪಡೆಯುವುದು ನಿಯಮವಿಲ್ಲ. ಎರಡು ಬೆಕ್ಕುಗಳು ಪರಸ್ಪರ ಕಚ್ಚಾಡಿದವು, ನಡುವೆ ಕೋತಿಯು ಬಂದು ಬೆಣ್ಣೆಯನ್ನು ತಿಂದು ಹೋಯಿತೆಂದು ಕಥೆಯನ್ನು ತೋರಿಸುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ತಂದೆಯು ತಿಳಿಸಿಕೊಡುತ್ತಾರೆ. ಇದು ಇವರಿಗೇನೂ (ಬ್ರಹ್ಮಾ) ಗೊತ್ತಿರಲಿಲ್ಲ. ಈ ಚಿತ್ರಗಳನ್ನು ತಂದೆಯೇ ದಿವ್ಯದೃಷ್ಟಿಯಿಂದ ಮಾಡಿಸಿದ್ದಾರೆ ಮತ್ತು ಈಗ ತಿಳಿಸುತ್ತಿದ್ದಾರೆ, ಪರಸ್ಪರ ಅವರು ಕಚ್ಚಾಡುತ್ತಾರೆ, ನಡುವೆ ಇಡೀ ವಿಶ್ವದ ರಾಜ್ಯಭಾಗ್ಯವನ್ನು ನೀವು ಪಡೆಯುತ್ತೀರಿ. ಅವರಿಬ್ಬರೂ (ರಷ್ಯಾ-ಅಮೇರಿಕಾ) ಬಹಳ ಶಕ್ತಿಶಾಲಿಗಳಾಗಿದ್ದಾರೆ. ಎಲ್ಲಿ ನೋಡಿದರಲ್ಲಿ ಪರಸ್ಪರ ಯುದ್ಧವನ್ನು ತಂದಿಡುತ್ತಾರೆ. ನಂತರ ಮಧ್ಯಪ್ರವೇಶ ಮಾಡಿ ಸಹಯೋಗವನ್ನು ಕೊಡುತ್ತಿರುತ್ತಾರೆ ಏಕೆಂದರೆ ಅವರದೂ ಸಹ ಜಬರ್ದಸ್ತ್ ವ್ಯಾಪಾರವಾಗಿದೆ. ಯಾವಾಗ ಎರಡು ಬೆಕ್ಕುಗಳಂತೆ ಪರಸ್ಪರ ಕಚ್ಚಾಡುವರು ಆಗ ಇವರ ಅಣ್ವಸ್ತ್ರಗಳು ಕೆಲಸಕ್ಕೆ ಬರುತ್ತವೆ ಆದ್ದರಿಂದಲೇ ಪರಸ್ಪರ ಇಬ್ಬರಿಗೂ ಜಗಳವಿಟ್ಟು ನೋಡುತ್ತಾರೆ. ಮೊದಲು ಹಿಂದೂಸ್ತಾನ ಮತ್ತು ಪಾಕೀಸ್ತಾನವು ಬೇರೆ-ಬೇರೆಯಾಗಿರಲಿಲ್ಲ, ಒಟ್ಟಿಗೆ ಇದ್ದವು. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಯೋಗಬಲದಿಂದ ವಿಶ್ವದ ಮಾಲೀಕರಾಗಬೇಕೆಂದು ಈಗ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಪರಸ್ಪರ ಅವರು ಹೊಡೆದಾಡುತ್ತಾರೆ, ನಡುವೆ ಬೆಣ್ಣೆಯನ್ನು ನೀವು ತಿನ್ನುತ್ತೀರಿ. ಬೆಣ್ಣೆ ಎಂದರೆ ವಿಶ್ವದ ರಾಜ್ಯಭಾಗ್ಯವು ನಿಮಗೆ ಸಿಗುತ್ತದೆ ಮತ್ತು ಬಹಳ ಸುಲಭರೀತಿಯಲ್ಲಿ ಸಿಗುತ್ತದೆ. ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಖಂಡಿತ ಪವಿತ್ರರಾಗಬೇಕಾಗಿದೆ. ಪವಿತ್ರರಾಗಿ ಪವಿತ್ರ ಪ್ರಪಂಚದಲ್ಲಿ ಹೋಗಬೇಕಾಗಿದೆ. ಅದಕ್ಕೆ ವೈಸ್ಲೆಸ್ ವಲ್ರ್ಡ್, ಸಂಪೂರ್ಣ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಪ್ರತಿಯೊಂದು ವಸ್ತು ಸತೋಪ್ರಧಾನ, ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರುತ್ತದೆ. ತಂದೆಯು ತಿಳಿಸುತ್ತಾರೆ- ನಿಮ್ಮಲ್ಲಿ ಈ ಬುದ್ಧಿಯಿರಲಿಲ್ಲ ಏಕೆಂದರೆ ಶಾಸ್ತ್ರಗಳಲ್ಲಿ ಲಕ್ಷಾಂತರ ವರ್ಷಗಳೆಂದು ಹೇಳಿಬಿಟ್ಟಿದ್ದಾರೆ. ಭಕ್ತಿಯೆಂದರೇ ಅಜ್ಞಾನ ಅಂಧಕಾರ. ಇದೂ ಸಹ ಮೊದಲು ನಿಮಗೆ ತಿಳಿದಿರಲಿಲ್ಲ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳ ಕಾಲ ನಡೆಯುತ್ತದೆಯೆಂದು ಅವರು ಹೇಳುತ್ತಾರೆ ಆದರೆ ಯಥಾರ್ಥವಾಗಿ ಈಗ ನೀವು ತಿಳಿದುಕೊಂಡಿದ್ದೀರಿ. ಒಂದುವೇಳೆ 40 ಸಾವಿರ ವರ್ಷಗಳು ಇದ್ದಿದ್ದೇ ಆದರೆ ಅದು ಪೂರ್ಣವಾದ ನಂತರ ಮತ್ತೇನಾಗುವುದು? ಇದು ಯಾರಿಗೂ ತಿಳಿದಿಲ್ಲ ಆದ್ದರಿಂದಲೇ ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆಂದು ಹೇಳಲಾಗುತ್ತದೆ. ಭಕ್ತಿಯು ಅಜ್ಞಾನವಾಗಿದೆ, ಒಬ್ಬರೇ ತಂದೆಯು ಜ್ಞಾನಸಾಗರನಾಗಿದ್ದಾರೆ. ನೀವು ಜ್ಞಾನನದಿಗಳಾಗಿದ್ದೀರಿ. ತಂದೆಯು ಬಂದು ನೀವು ಮಕ್ಕಳಿಗೆ ಅರ್ಥಾತ್ ಆತ್ಮಗಳಿಗೆ ಓದಿಸುತ್ತಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಇವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆಂದು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಇದಂತೂ ಬೇಹದ್ದಿನ ಮಾತಾಗಿದೆ. ಇವರು ಬೇಹದ್ದಿನ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ- ನಾನು ನಿಮ್ಮ ಪಾರಲೌಕಿಕ ತಂದೆಯಾಗಿದ್ದೇನೆ, ನೀವೆಲ್ಲರೂ ನನ್ನ ಮಕ್ಕಳಾಗಿದ್ದೀರಿ. ಬಾಬಾ, ತಾವು ಅದೇ ಕಲ್ಪದ ಹಿಂದಿನ ತಂದೆಯಾಗಿದ್ದೀರೆಂದು ಮಕ್ಕಳು ಹೇಳುತ್ತೀರಿ, ತಂದೆಯೂ ಹೇಳುತ್ತಾರೆ- ನೀವು ಕಲ್ಪ-ಕಲ್ಪವೂ ನನ್ನೊಂದಿಗೆ ಮಿಲನ ಮಾಡುತ್ತೀರಿ ಅಂದಾಗ ತಂದೆಯು ಪರಮ ಆತ್ಮ, ಸುಪ್ರೀಂ ಆಗಿದ್ದಾರೆ. ಅವರು ಬಂದು ಮಕ್ಕಳಿಗೆ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಕಲಿಯುಗದ ಆಯಸ್ಸು 40 ಸಾವಿರ ವರ್ಷಗಳೆಂದು ಹೇಳಿರುವುದು ಸಂಪೂರ್ಣ ಸುಳ್ಳಾಗಿದೆ. 5000 ವರ್ಷಗಳಲ್ಲಿ ಎಲ್ಲವೂ ಬಂದುಬಿಡುತ್ತದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಒಪ್ಪುತ್ತೀರಿ, ಅರಿತುಕೊಳ್ಳುತ್ತೀರಿ. ನೀವು ಒಪ್ಪುವುದಿಲ್ಲವೆಂದಲ್ಲ. ಒಂದುವೇಳೆ ತಂದೆಯ ಮಾತುಗಳನ್ನು ಒಪ್ಪದಿದ್ದರೆ ನೀವು ಇಲ್ಲಿಗೆ ಬರುತ್ತಿರಲೇ ಇಲ್ಲ. ಈ ಧರ್ಮದವರಲ್ಲವೆಂದರೆ ಅವರು ಒಪ್ಪುವುದೂ ಇಲ್ಲ. ತಂದೆಯು ತಿಳಿಸಿದ್ದಾರೆ- ಎಲ್ಲವೂ ಭಕ್ತಿಯ ಮೇಲೆ ಆಧಾರಿತವಾಗಿದೆ. ಯಾರು ಬಹಳ ಭಕ್ತಿ ಮಾಡಿದ್ದಾರೆಯೋ ಅವರಿಗೆ ಭಕ್ತಿಯ ಫಲವೂ ಸಿಗಬೇಕು, ಅವರಿಗೇ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ನಿಮಗೂ ತಿಳಿದಿದೆ- ನಾವೇ ದೇವತೆಗಳು, ವಿಶ್ವದ ಮಾಲೀಕರಾಗುತ್ತೇವೆ. ಇನ್ನು ಕೆಲವು ದಿನಗಳು ಮಾತ್ರವೇ ಇದೆ. ಈ ಹಳೆಯ ಪ್ರಪಂಚದ ವಿನಾಶವನ್ನು ತೋರಿಸಿದ್ದಾರೆ, ಇನ್ನ್ಯಾವುದೇ ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ಒಂದು ಗೀತೆಯೇ ಭಾರತದ ಧರ್ಮಶಾಸ್ತ್ರವಾಗಿದೆ. ಪ್ರತಿಯೊಬ್ಬರೂ ಧರ್ಮಶಾಸ್ತ್ರವನ್ನು ಓದಬೇಕು ಮತ್ತು ಆ ಧರ್ಮವು ಯಾರಿಂದ ಪ್ರಾರಂಭವಾಯಿತೆಂದೂ ಅರಿತುಕೊಳ್ಳಬೇಕು. ಹೇಗೆ ಕ್ರಿಶ್ಚಿಯನ್ನರು ಕ್ರೈಸ್ಟ್ನ್ನು ತಿಳಿದುಕೊಂಡಿದ್ದಾರೆ, ಅವರನ್ನೇ ನಂಬುತ್ತಾರೆ ಮತ್ತು ಪೂಜಿಸುತ್ತಾರೆ. ನೀವು ಆದಿಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ ಆದ್ದರಿಂದ ದೇವತೆಗಳನ್ನೇ ಪೂಜಿಸುತ್ತೀರಿ ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಹಿಂದೂ ಧರ್ಮದವರೆಂದು ಹೇಳಿಬಿಡುತ್ತಾರೆ.

ನೀವು ಮಕ್ಕಳೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ, ನೀವು ರಾಜಋಷಿಗಳಾಗಿದ್ದೀರಿ, ಅವರು ಹಠಯೋಗದ ಋಷಿಗಳಾಗಿದ್ದಾರೆ. ರಾತ್ರಿ-ಹಗಲಿನ ಅಂತರವಿದೆ. ಅವರ ಸನ್ಯಾಸವು ಕಚ್ಚಾ, ಕ್ಷಣಿಕದ್ದಾಗಿದೆ. ಕೇವಲ ಮನೆ-ಮಠವನ್ನು ಬಿಟ್ಟು ಹೋಗುವುದಾಗಿದೆ ಆದರೆ ನಿಮ್ಮ ಸನ್ಯಾಸ ಅಥವಾ ವೈರಾಗ್ಯವು ಇಡೀ ಹಳೆಯ ಪ್ರಪಂಚವನ್ನೇ ಬಿಡುವುದಾಗಿದೆ. ಮೊಟ್ಟಮೊದಲು ತಮ್ಮ ಮನೆಗೆ ಹೋಗಿ ನಂತರ ಹೊಸಪ್ರಪಂಚ, ಸತ್ಯಯುಗದಲ್ಲಿ ಬರುತ್ತೀರಿ. ಬ್ರಹ್ಮಾರವರ ಮೂಲಕ ಆದಿಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಈಗಂತೂ ಇದು ಪತಿತ, ಹಳೆಯ ಪ್ರಪಂಚವಾಗಿದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯ ಮುಖಾಂತರ ಓದುತ್ತೀರಿ ಅಂದಮೇಲೆ ಇದು ಅವಶ್ಯವಾಗಿ ಸತ್ಯವಲ್ಲವೆ. ಇದರಲ್ಲಿ ನಿಶ್ಚಯವಾಗದಿರುವ ಮಾತೇ ಇಲ್ಲ. ಈ ಜ್ಞಾನವನ್ನು ತಂದೆಯೇ ಓದಿಸುತ್ತಾರೆ, ಆ ತಂದೆಯು ಶಿಕ್ಷಕನೂ ಆಗಿದ್ದಾರೆ, ಜೊತೆಯಲ್ಲಿ ಕರೆದುಕೊಂಡು ಹೋಗುವ ಸತ್ಯಸದ್ಗುರುವೂ ಆಗಿದ್ದಾರೆ. ಆ ಗುರುಗಳಂತೂ ಅರ್ಧದಲ್ಲಿಯೇ ಕೈಬಿಟ್ಟು ಹೊರಟುಹೋಗುತ್ತಾರೆ. ಒಬ್ಬ ಗುರು ಹೋದರೆಂದರೆ ಇನ್ನೊಬ್ಬರನ್ನು ಗುರುವನ್ನಾಗಿ ಮಾಡುತ್ತಾರೆ. ಅವರ ಶಿಷ್ಯರನ್ನು ಆ ಸ್ಥಾನದಲ್ಲಿ ಕುಳ್ಳರಿಸುತ್ತಾರೆ. ಇಲ್ಲಂತೂ ತಂದೆ ಮತ್ತು ಮಕ್ಕಳ ಮಾತಾಗಿದೆ. ಅವರದು ಗುರು ಮತ್ತು ಶಿಷ್ಯರ ಆಸ್ತಿಯ ಹಕ್ಕಿದೆ. ವಾಸ್ತವದಲ್ಲಿ ಆಸ್ತಿಯಂತೂ ತಂದೆಯದೇ ಬೇಕಲ್ಲವೆ. ಶಿವತಂದೆಯು ಭಾರತದಲ್ಲಿಯೇ ಬರುತ್ತಾರೆ. ಶಿವರಾತ್ರಿ ಮತ್ತು ಕೃಷ್ಣನ ರಾತ್ರಿಯನ್ನು ಆಚರಿಸುತ್ತಾರೆ. ಶಿವನ ಜನ್ಮಪತ್ರಿಯಂತೂ ಇಲ್ಲ. ತಿಳಿಸುವುದಾದರೂ ಹೇಗೆ? ಅವರು ತಿಥಿ, ತಾರೀಖಂತೂ ಇಲ್ಲ. ಕೃಷ್ಣನು ಮೊದಲ ನಂಬರಿನ ರಾಜಕುಮಾರನಾಗಿದ್ದಾರೆ, ಕೃಷ್ಣನ ತಿಥಿ-ತಾರೀಖನ್ನು ತೋರಿಸುತ್ತಾರೆ. ದೀಪಾವಳಿಯನ್ನು ಆಚರಿಸುವುದು ಪ್ರಪಂಚದ ಮನುಷ್ಯರ ಕೆಲಸವಾಗಿದೆ. ನೀವು ಮಕ್ಕಳಿಗೆ ದೀಪಾವಳಿಯಿದೆಯೇ? ನಮ್ಮದು ಹೊಸವರ್ಷ ಹೊಸ ಪ್ರಪಂಚವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಈಗ ನೀವು ಆ ಹೊಸ ಪ್ರಪಂಚಕ್ಕಾಗಿಯೇ ಓದುತ್ತಿದ್ದೀರಿ. ನೀವೀಗ ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ, ಆ ಕುಂಭಮೇಳದಲ್ಲಿ ಎಷ್ಟೊಂದು ಮಂದಿ ಮನುಷ್ಯರು ಹೋಗುತ್ತಾರೆ, ಅದು ನೀರಿನ ನದಿಗಳ ಬಳಿ ಸೇರುವ ಮೇಳವಾಗಿದೆ. ಎಷ್ಟೊಂದು ಮೇಳಗಳಾಗುತ್ತವೆ, ಅವರದೂ ಸಹ ಒಳಗೆ ಬಹಳ ಪಂಚಾಯಿತಿ ಇರುತ್ತದೆ. ಕೆಲಕೆಲವೊಮ್ಮೆ ಅವರದು ಪರಸ್ಪರವೇ ಬಹಳ ಜಗಳವಾಗಿಬಿಡುತ್ತದೆ ಏಕೆಂದರೆ ದೇಹಾಭಿಮಾನಿಗಳಲ್ಲವೆ. ಇಲ್ಲಂತೂ ಜಗಳ ಮೊದಲಾದ ಮಾತೇ ಇಲ್ಲ. ತಂದೆಯು ಕೇವಲ ಇಷ್ಟನ್ನೇ ತಿಳಿಸುತ್ತಾರೆ- ಮಧುರಾತಿ ಮಧುರ ಮುದ್ದುಮಕ್ಕಳೇ, ನನ್ನನ್ನು ನೆನಪು ಮಾಡಿ. ನಿಮ್ಮ ಆತ್ಮವು ಸತೋಪ್ರಧಾನವಿದ್ದದ್ದು ತಮೋಪ್ರಧಾನವಾಗಿದೆ, ತುಕ್ಕು ಹಿಡಿದಿದೆಯಲ್ಲವೆ. ಅದು ಯೋಗಾಗ್ನಿಯಿಂದಲೇ ಬಿಟ್ಟುಹೋಗುತ್ತದೆ. ಅಕ್ಕಸಾಲಿಗರಿಗೆ ಇದು ಗೊತ್ತಿರುತ್ತದೆ. ತಂದೆಯನ್ನೇ ಪತಿತ-ಪಾವನ ಎಂದು ಹೇಳುತ್ತಾರೆ ಅಂದಾಗ ತಂದೆಯು ಸುಪ್ರೀಂ ಅಕ್ಕಸಾಲಿಗನಾದರು. ಎಲ್ಲರ ಆತ್ಮಗಳಲ್ಲಿರುವ ತುಕ್ಕನ್ನು ತೆಗೆದು ಸತ್ಯಚಿನ್ನದ ಸಮಾನ ಮಾಡುತ್ತಾರೆ. ಹೇಗೆ ಚಿನ್ನವನ್ನು ಅಗ್ನಿಯಲ್ಲಿ ಹಾಕಲಾಗುತ್ತದೆ, ಇದು ಯೋಗ ಅರ್ಥಾತ್ ನೆನಪಿನ ಅಗ್ನಿಯಾಗಿದೆ ಏಕೆಂದರೆ ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ. ನೆನಪಿನ ಯಾತ್ರೆಯಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಎಲ್ಲರೂ ಸತೋಪ್ರಧಾನರಾಗುವುದಿಲ್ಲ, ಕಲ್ಪದ ಹಿಂದಿನ ಪ್ರಕಾರವೇ ಅದು ನಡೆಯುತ್ತಾ ಇರುತ್ತದೆ, ಬದಲಾಗಲು ಸಾಧ್ಯವಿಲ್ಲ. ಅದೇ ಸುತ್ತುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ- ಮುಂದೆ ಹೋದಂತೆ ನಿಮಗೆ ಗುಹ್ಯ-ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಮೊಟ್ಟಮೊದಲು ಈ ಮಾತನ್ನು ನಿಶ್ಚಯ ಮಾಡಿಕೊಳ್ಳಬೇಕು- ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ಅವರನ್ನು ನೆನಪು ಮಾಡಬೇಕಾಗಿದೆ. ಮನ್ಮನಾಭವದ ಅರ್ಥವೂ ಇದೇ ಆಗಿದೆ ಬಾಕಿ ಕೃಷ್ಣ ಭಗವಾನುವಾಚವಂತೂ ಇಲ್ಲ. ಒಂದುವೇಳೆ ಕೃಷ್ಣನು ಭಗವಂತನಾಗಿದ್ದರೆ ಎಲ್ಲರೂ ಕೃಷ್ಣನ ಬಳಿ ಬಂದುಬಿಡುತ್ತಿದ್ದರು, ಎಲ್ಲರೂ ಅರಿತುಕೊಳ್ಳುತ್ತಿದ್ದರು. ಹಾಗಿದ್ದಾಗ ನನ್ನನ್ನು ಕೋಟಿಯಲ್ಲಿ ಕೆಲವರೇ ಅರಿತುಕೊಳ್ಳುತ್ತಾರೆ ಏಕೆ ಹೇಳುತ್ತಾರೆ. ಇದನ್ನು ತಂದೆಯೇ ತಿಳಿಸುತ್ತಾರೆ ಆದ್ದರಿಂದ ಮನುಷ್ಯರಿಗೆ ಇದನ್ನು ಅರಿತುಕೊಳ್ಳುವುದರಲ್ಲಿ ಕಷ್ಟವಾಗುತ್ತದೆ. ಮೊದಲೂ ಸಹ ಇದೇ ರೀತಿಯಾಗಿತ್ತು, ನಾನೇ ಬಂದು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿದ್ದೇನೆ. ನಂತರ ಈ ಶಾಸ್ತ್ರ ಇತ್ಯಾದಿಗಳೆಲ್ಲವೂ ಮರೆಯಾಗುತ್ತದೆ. ಮತ್ತೆ ತನ್ನ ಸಮಯದಲ್ಲಿ ಎಲ್ಲಾ ಶಾಸ್ತ್ರಗಳು ಅದೇ ಪ್ರಕಾರವಾಗಿ ರಚನೆಯಾಗುತ್ತದೆ. ಸತ್ಯಯುಗದಲ್ಲಿ ಒಂದು ಶಾಸ್ತ್ರವೂ ಇರುವುದಿಲ್ಲ. ಭಕ್ತಿಯ ಹೆಸರು, ಗುರುತೂ ಇರುವುದಿಲ್ಲ. ಈಗಂತೂ ಭಕ್ತಿಯ ರಾಜ್ಯವಾಗಿದೆ, ಎಲ್ಲರಿಗಿಂತ ದೊಡ್ಡವರು ಶ್ರೀ ಶ್ರೀ 108 ಜಗದ್ಗುರು ಎಂದು ಕರೆಸಿಕೊಳ್ಳುವವರಿದ್ದಾರೆ. ಇಂದಿನ ಕಾಲದಲ್ಲಂತೂ 1008 ಎಂದೂ ಹೇಳಿಬಿಡುತ್ತಾರೆ. ವಾಸ್ತವದಲ್ಲಿ ಈ ಮಾಲೆಯು ಇಲ್ಲಿಯದಾಗಿದೆ. ಮಾಲೆಯನ್ನು ಜಪಿಸುತ್ತಾರೆ ಅಂದಾಗ ನಿಮಗೆ ಗೊತ್ತಿದೆ, ಅದರಲ್ಲಿರುವ ಹೂ ನಿರಾಕಾರನಾಗಿದ್ದಾರೆ ನಂತರ ಬ್ರಹ್ಮಾ-ಸರಸ್ವತಿಯು ಜೋಡಿಮಣಿಗಳಾಗಿದ್ದಾರೆ ಏಕೆಂದರೆ ಪ್ರವೃತ್ತಿ ಮಾರ್ಗದವರಲ್ಲವೆ. ಪ್ರವೃತ್ತಿ ಮಾರ್ಗದವರು ನಿವೃತ್ತಿ ಮಾರ್ಗದವರನ್ನು ಗುರುಗಳನ್ನಾಗಿ ಮಾಡಿಕೊಂಡರೆ ಅವರು ಏನು ಕೊಡುತ್ತಾರೆ? ಹಠಯೋಗವನ್ನೇ ಕಲಿಯಬೇಕಾಗುತ್ತದೆ. ಅಲ್ಲಿ ಅನೇಕ ಪ್ರಕಾರದ ಹಠಯೋಗಗಳಿವೆ. ಈ ರಾಜಯೋಗವು ಒಂದೇ ಪ್ರಕಾರದ್ದಾಗಿದೆ. ನೆನಪಿನ ಯಾತ್ರೆಯು ಒಂದೇ ಆಗಿದೆ, ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ಉಳಿದೆಲ್ಲವೂ ಹಠಯೋಗಗಳಾಗಿದೆ, ಶರೀರದ ಆರೋಗ್ಯಕ್ಕಾಗಿ. ಈ ರಾಜಯೋಗವನ್ನು ತಂದೆಯೇ ಕಲಿಸುತ್ತಾರೆ. ಮೊದಲು ಆತ್ಮ ನಂತರ ಶರೀರ. ನೀವು ಮತ್ತೆ ತಮ್ಮನ್ನು ಆತ್ಮದ ಬದಲು ಶರೀರವೆಂದು ತಿಳಿದು ಉಲ್ಟಾ ಆಗಿಬಿಟ್ಟಿದ್ದೀರಿ. ಈಗ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಅಂತ್ಯಮತಿ ಸೋ ಗತಿಯಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಈ ಅನಾದಿ ಅವಿನಾಶಿ ಮಾಡಿ-ಮಾಡಲ್ಪಟ್ಟ ನಾಟಕದಲ್ಲಿ ಪ್ರತಿಯೊಬ್ಬರ ಪಾತ್ರವನ್ನು ದೇಹೀ-ಅಭಿಮಾನಿಯಾಗಿ ಸಾಕ್ಷಿಯಾಗಿ ನೋಡಬೇಕಾಗಿದೆ. ತಮ್ಮ ಮಧುರ ಮನೆ ಮತ್ತು ಮಧುರ ರಾಜಧಾನಿಯನ್ನು ನೆನಪು ಮಾಡಬೇಕಾಗಿದೆ. ಈ ಹಳೆಯ ಪ್ರಪಂಚವನ್ನು ಬುದ್ಧಿಯಿಂದ ಮರೆಯಬೇಕಾಗಿದೆ.

2. ಮಾಯೆಗೆ ಸೋಲಬಾರದು. ನೆನಪಿನ ಅಗ್ನಿಯಿಂದ ಪಾಪಗಳ ನಾಶ ಮಾಡಿ ಆತ್ಮವನ್ನು ಪಾವನ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ: ದೀಪಾವಳಿಯಲ್ಲಿ ಯಥಾರ್ಥ ವಿಧಿಯಿಂದ ತಮ್ಮ ದೈವೀ ಪದವಿಯ ಆಹ್ವಾನ ಮಾಡುವಂತಹ ಪೂಜ್ಯ ಆತ್ಮಾ ಭವ
ದೀಪಾವಳಿಯಲ್ಲಿ ಮೊದಲು ಜನರು ವಿಧಿಪೂರ್ವಕವಾಗಿ ದೀಪವನ್ನು ಬೆಳಗಿಸುತ್ತಿದ್ದರು, ದೀಪವು ನಂದಿಹೋಗಬಾರದೆಂದು ಗಮನವನ್ನಿಡುತ್ತಿದ್ದರು, ಎಣ್ಣೆಯನ್ನು ಹಾಕುತ್ತಿದ್ದರು, ವಿಧಿಪೂರ್ವಕವಾಗಿ ಆಹ್ವಾನ ಮಾಡುವ ಅಭ್ಯಾಸದಲ್ಲಿರುತ್ತಿದ್ದರು. ಈಗಂತು ದೀಪಕ್ಕೆ ಬದಲು ಬಲ್ಭ್ನ್ನು ಬೆಳಗಿಸಿಬಿಡುತ್ತಾರೆ. ದೀಪಾವಳಿಯನ್ನು ಆಚರಿಸುವುದಿಲ್ಲ, ಈಗಂತು ಮನೋರಂಜನೆಯಾಗಿಬಿಟ್ಟಿದೆ. ಆಹ್ವಾನದ ವಿಧಿ ಅಥವ ಸಾಧನವು ಸಮಾಪ್ತಿಯಾಗಿಬಿಟ್ಟಿದೆ. ಸ್ನೇಹವು ಸಮಾಪ್ತಿಯಾಗಿ, ಕೇವಲ ಸ್ವಾರ್ಥವಷ್ಟೇ ಉಳಿದುಕೊಂಡಿದೆ ಆದ್ದರಿಂದ ಯಥಾರ್ಥವಾಗಿ ದಾತಾ ರೂಪವಿರುವ ಲಕ್ಷ್ಮಿಯು ಯಾರ ಬಳಿಯೂ ಬರುವುದಿಲ್ಲ. ಆದರೆ ತಾವೆಲ್ಲರೂ ಯಥಾರ್ಥ ವಿಧಿಯಿಂದ ತಮ್ಮ ದೈವೀಪದವಿಯ ಆಹ್ವಾನ ಮಾಡುತ್ತೀರಿ. ಆದ್ದರಿಂದ ಸ್ವಯಂ ಪೂಜ್ಯ ದೇವಿ-ದೇವತೆ ಆಗಿಬಿಡುತ್ತೀರಿ.
ಸ್ಲೋಗನ್: ಸದಾ ಬೇಹದ್ದಿನ ವೃತ್ತಿ, ದೃಷ್ಟಿ ಮತ್ತು ಸ್ಥಿತಿಯಿದ್ದಾಗ ವಿಶ್ವಕಲ್ಯಾಣದ ಕಾರ್ಯವು ಸಂಪನ್ನವಾಗುತ್ತದೆ.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.