| 26/11/26 |
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
|
ಮಧುಬನ |
| “ಮಧುರ ಮಕ್ಕಳೇ - ಮಧುರ ತಂದೆ, ಮಧುರ ರಾಜಧಾನಿಯನ್ನು ನೆನಪು ಮಾಡಿರಿ ಆಗ ಬಹಳ-ಬಹಳ ಮಧುರರಾಗಿ ಬಿಡುತ್ತೀರಿ” | |
| ಪ್ರಶ್ನೆ: | ನೀವು ಮಕ್ಕಳು ಯಾವ ಪುರುಷಾರ್ಥವನ್ನು ಮಾಡಿ ಮನುಷ್ಯರಿಂದ ದೇವತೆಗಳಾಗುತ್ತೀರಿ? |
| ಉತ್ತರ: | ನೀವೀಗ ಜ್ಞಾನ ಮಾನಸ ಸರೋವರದಲ್ಲಿ ಜ್ಞಾನ ಪರಿಗಳಾಗುತ್ತೀರಿ. ಜ್ಞಾನ ಸ್ನಾನದಿಂದ ತಮ್ಮ ಗುಣಗಳು ಬದಲಾಗುತ್ತಾ ಹೋಗುತ್ತವೆ, ಏನೆಲ್ಲಾ ಅವಗುಣಗಳಿವೆಯೋ ಅವು ಕಳೆಯುತ್ತಾ ಹೋಗುತ್ತವೆ. ತಂದೆ ಹಾಗೂ ವಿಷ್ಣು ಪುರಿಯನ್ನು ನೆನಪು ಮಾಡಿದಾಗ ನೀವು ಪಾವನ ದೇವತೆಗಳಾಗಿ ಬಿಡುತ್ತೀರಿ. ದೇವತೆಗಳಲ್ಲಿ ಪವಿತ್ರತೆಯ ಆಕರ್ಷಣೆಯಿದೆ, ಆದ್ದರಿಂದಲೇ ಮನುಷ್ಯರು ದೇವತೆಗಳ ಮಂದಿರಗಳಿಗೆ ದೂರ-ದೂರದಿಂದ ಆಕರ್ಷಿತರಾಗಿ ಹೋಗುತ್ತಾರೆ. |
| ಗೀತೆ: | ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ............. |
|---|---|
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಮಕ್ಕಳಿಗೇ ಅದೃಷ್ಟ ನಕ್ಷತ್ರಗಳೆಂದು ಗಾಯನವಿದೆ. ಜ್ಞಾನ ಸೂರ್ಯ, ಜ್ಞಾನ ಚಂದ್ರಮ, ಅದೃಷ್ಟ ಜ್ಞಾನ ನಕ್ಷತ್ರಗಳಾಗಿದ್ದೀರಿ. ಆ ಸೂರ್ಯ, ಚಂದ್ರಮನಂತೂ ಭೂಮಿಗೆ ಬೆಳಕನ್ನು ನೀಡುತ್ತದೆ. ನಿಮ್ಮ ಮಹಿಮೆಯ ಗಾಯನವಿದೆ - ನೀವು ಜ್ಞಾನ ನಕ್ಷತ್ರಗಳಾಗಿದ್ದೀರಿ, ಆ ನಕ್ಷತ್ರಗಳಿಗೆ ಜ್ಞಾನ ನಕ್ಷತ್ರಗಳೆಂದು ಹೇಳಲಾಗುವುದಿಲ್ಲ. ಜ್ಞಾನ ಸೂರ್ಯ ಎಂಬ ಹೆಸರನ್ನು ಕೇಳಿದೊಡನೆಯೇ ಬಹುಷಃ ಆ ಸೂರ್ಯನೇ ಜ್ಞಾನ ಸ್ವರೂಪನಾಗಿದ್ದಾನೆಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಕಲ್ಲು ಮುಳ್ಳಿನಲ್ಲಿ ಭಗವಂತನಿದ್ದಾರೆಂದು ತಿಳಿದುಕೊಂಡಿರುವ ಕಾರಣ ಸೂರ್ಯನನ್ನೇ ಬಹಳ ಆರಾಧಿಸುತ್ತಾರೆ. ತಮ್ಮನ್ನು ಸೂರ್ಯವಂಶಿಯರೆಂದು ಕರೆಸಿಕೊಳ್ಳುತ್ತಾರೆ, ಸೂರ್ಯನ ಪೂಜೆ ಮಾಡುತ್ತಾರೆ, ಧ್ವಜವೂ ಸೂರ್ಯನದಾಗಿದೆ. ನಿಮ್ಮದು ತ್ರಿಮೂರ್ತಿಯ ಧ್ವಜವಾಗಿದೆ, ಎಷ್ಟು ಅದ್ಭುತವಾಗಿದೆ, ಇದರಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಸತ್ಯವಾಗಿಯೂ ವಿಶ್ವದ ಮೇಲೆ ವಿಜಯವನ್ನು ಅವರೇ ಪ್ರಾಪ್ತಿ ಮಾಡಿಸುತ್ತಾರೆ. ನೀವು ಶಿವಶಕ್ತಿ ಪಾಂಡವ ಸೇನೆಯಾಗಿದ್ದೀರಿ. ಅವರು ತ್ರಿಮೂರ್ತಿ ಮಾರ್ಗ, ತ್ರಿಮೂರ್ತಿ ನಿಲಯ ಎಂದು ಹೆಸರನ್ನು ಇಟ್ಟುಕೊಂಡಿದ್ದಾರೆ. ಇದರ ಅರ್ಥವನ್ನು ತಂದೆಯು ತಿಳಿಸುತ್ತಾರೆ - ಈ ತ್ರಿಮೂರ್ತಿಗಳಿಂದ ನಾನು ಯಾವ ಕರ್ತವ್ಯ ಮಾಡಿಸುತ್ತೇನೆ ಎಂದು. ಬ್ರಹ್ಮಾನ ಮೂಲಕ ಸ್ಥಾಪನೆ..... ಮನುಷ್ಯರು ತ್ರಿಮೂರ್ತಿ ಎಂಬುದರಿಂದ ಶಿವನನ್ನು ತೆಗೆದು ಚಿತ್ರವನ್ನು ಖಂಡನೆ ಮಾಡಿ ಬಿಟ್ಟಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಈ ತ್ರಿಮೂರ್ತಿಯ ಚಿತ್ರದಲ್ಲಿ ಎಷ್ಟೊಂದು ರಹಸ್ಯವಿದೆ, ಸತ್ಯ ಶಿವ ತಂದೆಯು ಬ್ರಹ್ಮಾರವರ ಮೂಲಕ ರಾಜ್ಯಭಾಗ್ಯವನ್ನು ಕೊಡುತ್ತಾರೆ. ನಾವು ಮಕ್ಕಳು ಶಿವ ತಂದೆಯ ಮೂಲಕ ಕಲ್ಪದ ಹಿಂದಿನ ತರಹ ಪುನಃ ಪವಿತ್ರತೆ, ಸುಖ, ಶಾಂತಿ ಮತ್ತು ಸಂಪತ್ತಿನ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಯಾವಾಗಲೂ ವಿದ್ಯಾಭ್ಯಾಸವನ್ನು ಬ್ರಹ್ಮಚರ್ಯದಲ್ಲಿಯೇ ಮಾಡಲಾಗುತ್ತದೆ, ಈಗಂತೂ ಕೆಲಕೆಲವರು ವಿವಾಹವಾದ ಮೇಲೂ ವಿದ್ಯೆಯನ್ನು ಆರಂಭಿಸುತ್ತಾರೆ ಏಕೆಂದರೆ ಹೆಚ್ಚು ಸಂಪಾದನೆಯಾಗುತ್ತದೆ. ಇಲ್ಲಿ ನಿಮ್ಮ ಸಂಪಾದನೆಯು ಅಪಾರವಾಗಿದೆ, ಮಕ್ಕಳು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ಶ್ರೀಮತವು ಶ್ರೇಷ್ಠವೆಂದು ಗಾಯನವಿದೆ, ತಂದೆಯ ಮಕ್ಕಳಾದರು ಎಂದರೆ ಅವಶ್ಯವಾಗಿ ತಂದೆಯ ಮತದಂತೆ ನಡೆಯುವವರು ಸಹೋದರರ ಮತದನುಸಾರವಲ್ಲ. ಸಹೋದರರ ಮತದಂತೆ ಅನೇಕ ಜನ್ಮಗಳಿಂದ ನಡೆದಿರಿ, ಅದರಿಂದ ಏನೂ ಲಾಭವಾಗಲಿಲ್ಲ. ಈಗ ತಂದೆಯ ಮತದಂತೆ ನಡೆಯಬೇಕಾಗಿದೆ, ಸಾಧು-ಸಂತ ಮೊದಲಾದವರೆಲ್ಲರೂ ಸಹೋದರ-ಸಹೋದರರಾಗಿದ್ದಾರೆ, ಈಗ ತಂದೆಯು ಶ್ರೇಷ್ಠ ಮತವನ್ನು ಕೊಡಲು ಬಂದಿದ್ದಾರೆ. ಪ್ರಾಕೃತಿಕ ಚಿಕಿತ್ಸೆಯ ಅನೇಕ ಔಷದೋಪಚಾರ ಮಾಡುತ್ತಾರೆ, ಅದೆಲ್ಲವೂ ಅಲ್ಪಕಾಲಕ್ಕಾಗಿ. ಇದು 21 ಜನ್ಮಗಳಿಗಾಗಿ ಪ್ರಾಕೃತಿಕ ಚಿಕಿತ್ಸೆಯಾಗಿದೆ. ತಣ್ಣೀರಿನಲ್ಲಿ ಸ್ನಾನ ಮಾಡಿ ಆಹಾರ-ಪಾನೀಯಗಳ ಪತ್ಯೆಯನ್ನು ಇಡಿ, ಹೀಗೆ ಮಾಡಿ ಹಾಗೆ ಮಾಡಿ ಎಂದು ಅವರು ಹೇಳುತ್ತಾರೆ. ಇಲ್ಲಿ ಆ ಆಹಾರ-ಪಾನೀಯಗಳ ಮಾತಿಲ್ಲ, ಇಲ್ಲಂತೂ ಮಧುರ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಈಗ ನನ್ನನ್ನು ನೆನಪು ಮಾಡಿದರೆ ನೀವು ಬಹಳ ಮಧುರರಾಗುತ್ತೀರಿ, ದೇವತೆಗಳು ಮಧುರರಲ್ಲವೆ. ಅವರಲ್ಲಿ ಎಷ್ಟೊಂದು ಆಕರ್ಷಣೆಯಿರುತ್ತದೆ! ಹಿಂದಿನ ಕಾಲದಲ್ಲಿ ಶಿವನ ಮಂದಿರದಲ್ಲಿ ಎತ್ತರ-ಎತ್ತರವಾದ ಪರ್ವತಗಳ ಮೇಲೆ ಕಟ್ಟಿಸುತ್ತಿದ್ದರು. ಮನುಷ್ಯರು ನಡೆದುಕೊಂಡೇ ದರ್ಶನ ಮಾಡಲು ಹೋಗುತ್ತಿದ್ದರು ಏಕೆಂದರೆ ಪವಿತ್ರತೆಯು ಆಕರ್ಷಿಸುತ್ತಿತ್ತು. ದೇವತೆಗಳು ಪವಿತ್ರರಾಗಿದ್ದಾಗ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದರು. ಈಗ ಅವರ ಚಿತ್ರಗಳ ಮುಂದೆ ಹೋಗಿ ನಮನ, ವಂದನೆ ಮಾಡುತ್ತಾರೆ. ಈಗ ಮಧುರ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ ಅಂದಮೇಲೆ ಅವರು ಇಲ್ಲಿಯೇ ಬರಬೇಕಾಗಿದೆ. ಅವಶ್ಯವಾಗಿ ಅವರಿಂದ ವೈಕುಂಠದ ಅಪಾರ ಸುಖವು ಸಿಗುತ್ತದೆ ಆದ್ದರಿಂದಲೇ ಅವರನ್ನು ನೆನಪು ಮಾಡುತ್ತಾರೆ. ಯಾವಾಗ ರಾಮ ರಾಜ್ಯದ ಅಂತ್ಯವಾಗುವುದೋ ಆಗ ತಂದೆಯು ಬಂದು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಶಿವ ಜಯಂತಿಯನ್ನೂ ಭಾರತದಲ್ಲಿಯೇ ಆಚರಿಸುತ್ತಾರೆ. ಆದರೆ ಅವರಿಂದ ಏನು ಸಿಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಮಧುರರನ್ನಾಗಿ ಮಾಡಲು ಬಂದಿದ್ದೇನೆ, ನೀವು ಎಷ್ಟೊಂದು ಛೀ ಛೀ ಆಗಿ ಬಿಟ್ಟಿದ್ದಿರಿ. ತಂದೆಯು ಜ್ಞಾನ ಪೂರ್ಣನಾಗಿದ್ದಾರೆ, ಈಗ ನಿಮಗೆ ಸಂಪೂರ್ಣ ಜ್ಞಾನವು ಸಿಗುತ್ತಿದೆ. ಬೀಜಕ್ಕೆ ಸಂಪೂರ್ಣ ಜ್ಞಾನವಿರುತ್ತದೆಯಲ್ಲವೆ. ತಂದೆಯು ಬೀಜವಾಗಿದ್ದಾರೆ, ಸತ್ಯ ಚೈತನ್ಯನಾಗಿದ್ದಾರೆ ಮತ್ತು ಜ್ಞಾನಸಾಗರನಾಗಿದ್ದಾರೆ. ಸತ್ಯವನ್ನೇ ಹೇಳುತ್ತಾರೆ. ಅವರೂ ಆತ್ಮವೇ ಆಗಿದ್ದಾರೆ ಆದರೆ ಪರಮಆತ್ಮನಾಗಿದ್ದಾರೆ. ಅವರು ಸದಾ ಪರಮಧಾಮದಲ್ಲಿ ಇರುತ್ತಾರೆ, ಸರ್ವ ಶ್ರೇಷ್ಠನಾಗಿದ್ದಾರೆ. ಅನೇಕರು ಅವರು ನಾಮ-ರೂಪದಿಂದ ಭಿನ್ನ ಎಂದು ಹೇಳುತ್ತಾರೆ ಆದರೆ ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಅವರ ಹೆಸರಾಗಿದೆ - ಶಿವ. ಎಲ್ಲರೂ ಅವರ ಪೂಜೆ ಮಾಡುತ್ತಾರೆ, ಅವರು ನಿರಾಕಾರನಾಗಿದ್ದಾರೆ. ಈಗ ಬಂದಿದ್ದಾರೆ, ಮೊದಲು ನಾವು ದೇಹಾಭಿಮಾನಿಗಳಾಗಿದ್ದೆವು, ಈಗ ಮಕ್ಕಳೇ, ದೇಹೀ-ಅಭಿಮಾನಿಗಳಾಗಿ ಎಂದು ತಂದೆಯು ತಿಳಿಸುತ್ತಾರೆ. ಗೀತೆಯಲ್ಲಿಯೂ ಮನ್ಮನಾಭವ ಇದೆ. ಕೇವಲ ಅದರಲ್ಲಿ ಶಿವನ ಬದಲು ಕೃಷ್ಣನ ಹೆಸರನ್ನು ಹಾಕಿರುವುದರಿಂದ ಖಂಡನೆಯಾಗಿ ಬಿಟ್ಟಿದೆ ಆದರೂ ಸಹ ಪುಸ್ತಕವನ್ನು ಓದುವುದರಿಂದ ರಾಜ್ಯಭಾಗ್ಯವು ಸಿಗುವುದಿಲ್ಲ. ರಾಜ್ಯವು ಇರುವುದೇ ಸತ್ಯಯುಗದಲ್ಲಿ. ತಂದೆಯು ಅವಶ್ಯವಾಗಿ ಸಂಗಮದಲ್ಲಿಯೇ ಬರುವರು. ಈಗ ಡ್ರಾಮಾನುಸಾರ ಭಕ್ತಿಯು ಮುಕ್ತಾಯವಾಗುತ್ತದೆ. ಭಕ್ತಿಯ ನಂತರ ಜ್ಞಾನ, ಇದು ಹಳೆಯ ಪ್ರಪಂಚ, ಸತ್ಯಯುಗವು ಹೊಸ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಸೂರ್ಯವಂಶಿಯರು ರಾಜ್ಯಭಾರ ಮಾಡುತ್ತಿದ್ದರು. ಇದು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮೀಯಾಗುವ ರಾಜಯೋಗವಾಗಿದೆ. ಸತ್ಯಯುಗದಲ್ಲಿ ಇವರ ರಾಜ್ಯವಿತ್ತು. ಈಗ ಕಲಿಯುಗದಲ್ಲಿ ನೋಡಿ, ಏನಿದೆ! ನೀವೀಗ ಸತ್ಯಯುಗದಲ್ಲಿ ಹೋಗುವುದಕ್ಕಾಗಿ ಪುನಃ ಓದುತ್ತಿದ್ದೀರಿ. ಭಕ್ತಿಮಾರ್ಗದ ಯಾವುದೆಲ್ಲಾ ಇಷ್ಟ್ಟೊಂದು ವೇದ ಶಾಸ್ತ್ರಗಳಿವೆಯೋ ಇವನ್ನು ಬಿಡಬೇಕಾಗುತ್ತದೆ. ಜ್ಞಾನವು ಸಿಕ್ಕಿ ಬಿಟ್ಟರೆ ನಂತರ ಭಕ್ತಿಯ ಅವಶ್ಯಕತೆಯಿಲ್ಲ. ಜ್ಞಾನದಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ.
ತಂದೆಯು ಭಕ್ತಿಯ ಫಲವನ್ನು ಕೊಡಲು ಬಂದಿದ್ದಾರೆ, ಜ್ಞಾನವನ್ನು ತಿಳಿಸುತ್ತಿದ್ದಾರೆ. ನಾವೀಗ ಅವಶ್ಯವಾಗಿ ಪತಿತರಿಂದ ಪಾವನರಾಗಬೇಕಾಗಿದೆ ಏಕೆಂದರೆ ಪತಿತರು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಮುಕ್ತಿಧಾಮದಲ್ಲಿಯೂ ಎಲ್ಲರೂ ಪಾವನ ಆತ್ಮರಿರುತ್ತಾರೆ, ಸುಖಧಾಮದಲ್ಲಿಯೂ ಎಲ್ಲರೂ ಪವಿತ್ರರಿರುತ್ತಾರೆ. ಈಗ ಕಲಿಯುಗದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಈಗ ಅವರನ್ನು ಪಾವನರನ್ನಾಗಿ ಯಾರು ಮಾಡುವರು? ಪತಿತ-ಪಾವನನು ಒಬ್ಬ ತಂದೆಯಾಗಿದ್ದಾರೆ, ಈಗ ತಂದೆಯು ತಿಳಿಸುತ್ತಾರೆ - ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿ ಬರುತ್ತೇನೆ. ಎಲ್ಲರಿಗಿಂತ ನಂಬರ್ವನ್ ಭಕ್ತನು ಈ ದಾದಾವರಾಗಿದ್ದರು. ಇವರಿಗೆ ಬ್ರಹ್ಮಾನೆಂದಾದರೂ ಹೇಳಿ ಅಥವಾ ಲಕ್ಷ್ಮೀ-ನಾರಾಯಣರ ಆತ್ಮವೆಂದಾದರೂ ಹೇಳಿರಿ, ಇದು ತಿಳಿದುಕೊಳ್ಳುವ ಬಹಳ ಗುಹ್ಯ ಮಾತಾಗಿದೆ. ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಮತ್ತು ಬ್ರಹ್ಮಾನ ನಾಭಿಯಿಂದ ವಿಷ್ಣು ಬಂದನು.... ಅಂದರೆ ವಿಷ್ಣು 84 ಜನ್ಮಗಳ ನಂತರ ಬ್ರಹ್ಮಾನಾಗುತ್ತಾರೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ತಂದೆಯೂ ಸಹ ಗೀತಾಪಾಠಿಯಾಗಿದ್ದರು, ಯಾವಾಗ ಜ್ಞಾನವು ಸಿಕ್ಕಿತು, ತಂದೆಯು ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಎಂಬುದನ್ನು ನೋಡಿದರೋ, ವಿಷ್ಣುವಿನ ಸಾಕ್ಷಾತ್ಕಾರವಾಯಿತೋ ಆಗ ಕೂಡಲೇ ಗೀತೆ ಓದುವುದನ್ನು ಬಿಟ್ಟು ಬಿಟ್ಟರು. ತಂದೆಯ ಪ್ರವೇಶತೆಯಾಯಿತಲ್ಲವೆ. ಮತ್ತೆಂದೂ ಕೈ ಹಾಕಲೂ ಇಲ್ಲ, ಒಬ್ಬ ತಂದೆಯನ್ನೇ ನೆನಪು ಮಾಡತೊಡಗಿದರು. ಇವರು ಹೇಳುತ್ತಾರೆ - ನಾನೂ ಸಹ ಶಿವ ತಂದೆಯಿಂದಲೇ ಕೇಳತೊಡಗಿದೆನು, ಶಿವ ತಂದೆಯು ತಿಳಿಸುತ್ತಾರೆ - ನಾನು ಮಕ್ಕಳಿಗೆ ತಿಳಿಸುವಾಗ ಇವರೂ ಸಹ ಕೇಳಿಸಿಕೊಳ್ಳುತ್ತಿದ್ದರು, ಇವರ ತನುವಿನಲ್ಲಿ ನಾನು ಪ್ರವೇಶ ಮಾಡಿ ಬಂದಿದ್ದೇನೆ ಆದ್ದರಿಂದ ಇವರಿಗೆ ಅರ್ಜುನನೆಂದು ಹೆಸರನ್ನು ಇಟ್ಟಿದ್ದೇನೆ. ಶಾಸ್ತ್ರಗಳಲ್ಲಿ ಕುದುರೆಯ ರಥವನ್ನು ತೋರಿಸುತ್ತಾರೆ, ಎಷ್ಟೊಂದು ಅಂತರವಿದೆ, ಕುದುರೆ ಗಾಡಿಯಲ್ಲಿ ಕುಳಿತು ಒಬ್ಬರಿಗೇ ಜ್ಞಾನ ಕೊಟ್ಟಿರುವರೇ? ಇದು ಸಾಧ್ಯವಿಲ್ಲ ಎಂದು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ಹೇಗೆ ಓದಿಸುತ್ತಾರೆ, ಎಷ್ಟೊಂದು ಸೇವಾಕೇಂದ್ರಗಳಿವೆ ಎಂಬುದನ್ನು ನೀವು ಪ್ರತ್ಯಕ್ಷದಲ್ಲಿ ನೋಡುತ್ತಿದ್ದೀರಿ ಅಂದಮೇಲೆ ಓದಿಸುವುದಕ್ಕಾಗಿ ಅವಶ್ಯವಾಗಿ ಪಾಠಶಾಲೆಯು ಬೇಕು, ಯುದ್ಧದ ಮೈದಾನವಲ್ಲ. ತಂದೆಯು ರಾಜಯೋಗವನ್ನು ಕಲಿಸುತ್ತಾರೆ, ಸತ್ಯಯುಗದಲ್ಲಿ ಯಾವುದೇ ಶಾಸ್ತ್ರವಿರುವುದಿಲ್ಲ. ನಾನೀಗ ಜ್ಞಾನವನ್ನು ತಿಳಿಸಿದೆನು. ಸತ್ಯಯುಗದಲ್ಲಿ ಮತ್ತೆ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ಹಳೆಯ ಪ್ರಪಂಚದ್ದೆಲ್ಲವೂ ಮಣ್ಣುಪಾಲಾಗುವುದು. ಇದು ರಾಜಸ್ವ ಅಶ್ವಮೇಧ ಯಜ್ಞವಾಗಿದೆ. ಈ ರಥಕ್ಕೆ ಅಶ್ವವೆಂದು ಹೇಳಲಾಗುತ್ತದೆ, ಇದನ್ನೂ ಸ್ವಾಹಾ ಮಾಡಬೇಕಾಗಿದೆ. ಆತ್ಮವು ತಂದೆಯ ಮಗುವಾಯಿತೆಂದರೆ ಈ ಹಳೆಯ ಶರೀರವು ಸಮಾಪ್ತಿಯಾಗುವುದು, ಕೃಷ್ಣ ಪುರಿಯಲ್ಲಿ ಈ ಛೀ ಛೀ ಶರೀರವನ್ನು ತೆಗೆದುಕೊಂಡು ಹೋಗುತ್ತೀರಾ! ಆತ್ಮವು ಅಮರವಾಗಿದೆ, ಹೋಲಿಯಲ್ಲಿ ತೋರಿಸುತ್ತಾರೆ. ಕೋಕಿಯು ಸುಟ್ಟು ಹೋಗುತ್ತದೆ ಆದರೆ ದಾರವು ಸುಡುವುದಿಲ್ಲ. ತಂದೆಯು ಬೇಹದ್ದಿನ ಮಾತನ್ನು ತಿಳಿಸುತ್ತಾರೆ - ಇಲ್ಲಿಯವರೆಗೆ ಏನನ್ನು ಕೇಳಿದ್ದೀರೋ ಅದನ್ನು ಮರೆತು ಹೋಗಿ. ಈಗ ಭಾರತವು ಅಸತ್ಯ ಖಂಡವಾಗಿ ಬಿಟ್ಟಿದೆ. ನೆನ್ನೆಯ ದಿನ ಇದು ಸತ್ಯ ಖಂಡವಾಗಿತ್ತು, ಸತ್ಯ ಖಂಡವನ್ನು ತಂದೆಯು ಸ್ಥಾಪನೆ ಮಾಡಿದರು ನಂತರ ರಾವಣನು ಅಸತ್ಯ ಖಂಡವನ್ನಾಗಿ ಮಾಡಿದರು. ಈ ರಾವಣನು ಎಲ್ಲರ ಹಳೆಯ ಶತ್ರುವಾಗಿದ್ದಾನೆ, ಕೇವಲ ಯಾರಾದರೂ ಏನಾದರೂ ಹೇಳಿದರೆ ಸಾಕು ಅದರಂತೆ ನಡೆಯತೊಡಗುತ್ತಾರೆ. ಹೇಗೆ ದಿಲ್ವಾಡಾ ಮಂದಿರದಲ್ಲಿ ಆದಿದೇವನ ಹೆಸರನ್ನು ಮಹಾವೀರನೆಂದು ಇಟ್ಟಿದ್ದಾರೆ. ಮಹಾವೀರನೆಂದು ಹನುಮಂತನಿಗೆ ಹೇಳಲಾಗುತ್ತದೆ. ಈಗ ಆದಿದೇವನೆಲ್ಲಿ! ಮಹಾವೀರನೆಲ್ಲಿ! ಈ ಮಂದಿರದಲ್ಲಿ ನಿಮ್ಮದೇ ಸ್ಪಷ್ಟ ನೆನಪಾರ್ಥವಿದೆ. ಕೆಳಗೆ ತಪಸ್ಸು, ಮೇಲೆ ಸ್ವರ್ಗವಿದೆ, ಚಿನ್ನದಿಂದ ಆದಿನಾಥನ ಮೂರ್ತಿಯನ್ನು ಮಾಡಿದ್ದಾರೆ. ಭಾರತವು ಚಿನ್ನದ ಪಕ್ಷಿಯಾಗಿತ್ತು ಎಂದು ಹೇಳುತ್ತಾರಲ್ಲವೆ. ಭಾರತದಲ್ಲಿನ ಚಿನ್ನವು ಮತ್ತೆಲ್ಲಿಯೂ ಇರಲಿಲ್ಲ. ಚಿನ್ನದಿಂದ ಮಹಲುಗಳಾಗಿತ್ತು. ಮಾಳಿಗೆ ಮತ್ತು ಗೋಡೆಗಳಲ್ಲಿ ವಜ್ರರತ್ನಗಳು ಪೋಣಿಸಲಾಗಿತ್ತು, ಮಂದಿರಗಳಲ್ಲಿ ಎಷ್ಟೊಂದು ವಜ್ರ ರತ್ನಗಳಿತ್ತು, ಅದನ್ನು ಲೂಟಿ ಮಾಡಿಕೊಂಡು ಹೋದರು. ಮಸೀದಿಗಳಲ್ಲಿ ಅದನ್ನು ಹಾಕಿದರು. ಅಂದಮೇಲೆ ಆ ಸಮಯದಲ್ಲಿ ಎಷ್ಟು ಬೆಲೆಯಿರಬಹುದು! ಅಪಾರ ಧನವಿತ್ತು ಆದ್ದರಿಂದಲೇ ಲೂಟಿ ಮಾಡಿಕೊಂಡು ಹೋದರು. ಇದು ಎಲ್ಲರಿಗೂ ಗೊತ್ತಿದೆ, ಪ್ರಾಚೀನ ಭಾರತವು ಬಹಳ ಸಾಹುಕಾರನಾಗಿತ್ತು, ಈಗ ಎಷ್ಟೊಂದು ಬಡದೇಶವಾಗಿ ಬಿಟ್ಟಿದೆ, ಬಡವರ ಮೇಲೆ ದಯೆ ಬರುತ್ತದೆ. ರಾವಣನು ಎಷ್ಟೊಂದು ನಿರ್ಗಧಿಕರನ್ನಾಗಿ ಮಾಡಿ ಬಿಟ್ಟಿದ್ದಾನೆ. ಪುನಃ ತಂದೆಯು ಸಾಹುಕಾರರನ್ನಾಗಿ ಮಾಡುತ್ತಾರೆ. ಇದು ಬೇಹದ್ದಿನ ನಾಟಕವಾಗಿದೆ, ಇದರ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಜ್ಞಾನಪೂರ್ಣನಾಗಿದ್ದಾರೆ ಅಂದರೆ ಎಲ್ಲರ ಹೃದಯದಲ್ಲಿ ಕುಳಿತು ನೋಡುತ್ತಾರೆಂದಲ್ಲ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿತವಾಗಿದೆ. ಯಾವ ಪಾಪ ಮಾಡುವರೋ ಅದಕ್ಕೆ ಶಿಕ್ಷೆಯು ಅವಶ್ಯವಾಗಿ ಸಿಗುತ್ತದೆ. ನನ್ನನ್ನು ಜ್ಞಾನಪೂರ್ಣ ಪತಿತ-ಪಾವನನೆಂದು ಹೇಳುತ್ತಾರೆ, ಹೇ ತಂದೆಯೇ ಬಂದು ನಮಗೆ ಜ್ಞಾನವನ್ನು ತಿಳಿಸಿ, ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರೆ. ಆದ್ದರಿಂದ ನಾನು ಬಂದು ಈ ಕಾರ್ಯವನ್ನು ಮಾಡುತ್ತೇನೆ. ಬಾಕಿ ಶಾಸ್ತ್ರಗಳ ಯಾವುದೆಲ್ಲಾ ಮಾತುಗಳಿವೆಯೋ ಅವನ್ನು ಮರೆಯಿರಿ ಮತ್ತು ನಾನು ಏನನ್ನು ತಿಳಿಸುತ್ತೇನೆಯೋ ಅದನ್ನು ಕೇಳಿರಿ ಎಂದು ತಂದೆಯು ತಿಳಿಸುತ್ತಾರೆ. ಈಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತಿದ್ದೀರಿ ಮತ್ತೆ ಸೂರ್ಯವಂಶಿಯರಾಗುತ್ತೀರಿ ನಂತರ ಚಂದ್ರವಂಶಿ ವೈಶ್ಯವಂಶಿ ಶೂದ್ರವಂಶಿಯರಾಗುತ್ತೀರಿ. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಸತ್ಯಯುಗದಲ್ಲಿ ಎಲ್ಲವೂ ಮರೆತು ಹೋಗುವುದು. ಅಲ್ಲಿ ತಂದೆಯನ್ನು ಯಾರೂ ನೆನಪು ಮಾಡುವುದಿಲ್ಲ, ಆಸ್ತಿಯು ಸಿಕ್ಕಿದ ಮೇಲೆ ಮತ್ತೆ ಏತಕ್ಕಾಗಿ ನೆನಪು ಮಾಡುತ್ತಾರೆ! ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ವೃಕ್ಷಪತಿಯು ತಂದೆಯಾಗಿದ್ದಾರೆ, ನನ್ನನ್ನು ನೆನಪು ಮಾಡಿ ಎಂದು ಅವರು ತಿಳಿಸುತ್ತಾರೆ. ರಚಯಿತನು ಒಬ್ಬರೇ ಇರುತ್ತಾರೆ, ಕಲ್ಲು-ಮುಳ್ಳಿನಲ್ಲಿಯೂ ರಚಯಿತನಿರುತ್ತಾರೆಯೇ?
ತಂದೆಯು ತಿಳಿಸುತ್ತಾರೆ - ರಾವಣನು ನಿಮ್ಮ ಬುದ್ಧಿಯನ್ನು ಎಷ್ಟು ಕೆಡಿಸಿ ಬಿಟ್ಟಿದ್ದಾನೆ! ದೊಡ್ಡ-ದೊಡ್ಡ ವಿದ್ವಾಂಸರಿಗೂ ಎಷ್ಟೊಂದು ಅಹಂಕಾರವಿದೆ, ತಂದೆಯನ್ನೇ ಅರಿತುಕೊಂಡಿಲ್ಲ. ರಚನೆಯ ಆದಿ-ಮಧ್ಯ-ಅಂತ್ಯವನ್ನೇ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟೆನು ನೀವು ಹಣ-ಅಧಿಕಾರ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಟ್ಟಿರಿ, ಈಗ ಭಿಕ್ಷೆ ಬೇಡುತ್ತಿದ್ದೀರಿ ಆದ್ದರಿಂದ ಆಸುರೀ ಸಂಪ್ರದಾಯವೆಂದು ಹೇಳಲಾಗಿದೆ. ದೇವತೆಗಳಿಗೆ ಎಷ್ಟೊಂದು ಮಹಿಮೆಯನ್ನು ಹಾಡಿದ್ದಾರೆ, ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ಈಗ ನೀವು ಮಕ್ಕಳು ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ, ಅವಗುಣಗಳನ್ನು ತೆಗೆದು ಹಾಕಿರಿ. ರಾವಣನು ನಿಮ್ಮನ್ನು ಕೋತಿಯಂತೆ ಮಾಡಿ ಬಿಟ್ಟಿದ್ದಾನೆ. ಈಗ ತಂದೆಯು ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆ, ಯಾರಲ್ಲಿ ಪಂಚ ವಿಕಾರಗಳಿದೆಯೋ ಅವರಿಗೆ ಕೋತಿಯೆಂದು ಹೇಳಲಾಗುತ್ತದೆ (ನಾರದನ ಉದಾಹರಣೆ). ಈಗ ನಿಮ್ಮ ಗುಣಗಳು ಬದಲಾಗುತ್ತಾ ಹೋಗುತ್ತಿವೆ. ನಂತರ ನೀವು ದೇವತೆಗಳಾಗಿ ಬಿಡುತ್ತೀರಿ. ಈ ಜ್ಞಾನ ಮಾನಸ ಸರೋವರದಲ್ಲಿ ಮಿಂದು ಜ್ಞಾನ ಪರಿಗಳಾಗಿ ಬಿಡುತ್ತೀರಿ, ಇದಕ್ಕೆ ಅವರು ಸ್ಥೂಲವಾದ ನೀರನ್ನು ಮಾನಸ ಸರೋವರವೆಂದು ತಿಳಿದುಕೊಂಡಿದ್ದಾರೆ. ಇದು ಜ್ಞಾನ ಸ್ನಾನದ ಮಾತಾಗಿದೆ. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯೇ 5000 ವರ್ಷಗಳ ಮೊದಲಿನಂತೆ ನಮಗೆ ತಿಳಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬರುವಂತಿಲ್ಲ. ಪತಿತ-ಪಾವನ ತಂದೆಯನ್ನು ಮತ್ತು ವಿಷ್ಣು ಪುರಿಯನ್ನು ನೆನಪು ಮಾಡಿ ಆಗ ನೀವು ಪಾವನರಾಗಿ ಬಿಡುತ್ತೀರಿ. ಮನುಷ್ಯರು ಮುಕ್ತಿಗಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ಮನೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಕೆಲವರು ಆತ್ಮವು ಹೋಗಿ ಲೀನವಾಗುತ್ತದೆ ಎಂದು ತಿಳಿಯುತ್ತಾರೆ. ಇನ್ನೂ ಕೆಲವರು ಆತ್ಮವು ಇನ್ನೊಂದು ಶರೀರವನ್ನು ತೆಗೆದುಕೊಳ್ಳುವುದೇ ಇಲ್ಲವೆಂದು ತಿಳಿಯುತ್ತಾರೆ, ಅನೇಕ ಮತಗಳಿವೆ. ತಂದೆಯನ್ನೇ ಯಾರೂ ಅರಿತುಕೊಂಡಿಲ್ಲ. ಇಡೀ ಪ್ರಪಂಚವು ಕೃಷ್ಣ ಭಗವಾನುವಾಚ ಎಂದು ತಿಳಿದುಕೊಳ್ಳುತ್ತದೆ, ಇಲ್ಲಿ ತಂದೆಯು ತಿಳಿಸುತ್ತಾರೆ – ಶಿವ ಭಗವಾನುವಾಚ. ಎಷ್ಟು ರಾತ್ರಿ-ಹಗಲಿನ ಅಂತರವಿದೆ! ಹೆಸರನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಮಕ್ಕಳೇ ಎಂದು ಬಾಪ್-ದಾದಾ ಇಬ್ಬರೂ ಹೇಳುತ್ತಾರೆ, ಇಬ್ಬರಿಗೂ ಮಕ್ಕಳಲ್ಲವೆ. ಇವರೂ ವಿದ್ಯಾರ್ಥಿ, ನೀವೂ ವಿದ್ಯಾರ್ಥಿಗಳಾಗಿದ್ದೀರಿ. ಇವರೂ ಓದುತ್ತಿದ್ದಾರೆ, ಯಾರು ಭಾರತವನ್ನು ಪಾವನವನ್ನಾಗಿ ಮಾಡುವ ಸೇವೆಯಲ್ಲಿದ್ದಾರೆಯೋ ಅವರೇ ಮಕ್ಕಳಾಗಿದ್ದಾರೆ. ಯಾರು ಪಾವನರಾಗುವುದಿಲ್ಲವೋ ಅವರನ್ನು ತಂದೆಯು ನೋಡಿಯೂ ನೋಡದಂತಿರುತ್ತಾರೆ. ಇವರು ಶಿಕ್ಷೆಗಳನ್ನು ಅನುಭವಿಸಿ ನಂತರ ಬಂದು ಬಹಳ ಕನಿಷ್ಟ ಪದವಿಯನ್ನು ಪಡೆಯುತ್ತಾರೆಂದು ತಂದೆಯು ತಿಳಿದುಕೊಳ್ಳುತ್ತಾರೆ. ಯಾರು ಪಾವನರಾಗುವರೋ ಅವರು ವಿಶ್ವದ ಮಾಲೀಕರಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮಧುರರಾಗಲು ಮಧುರ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಸತ್ಯ ತಂದೆಯೊಂದಿಗೆ ಸತ್ಯವಾಗಿರಬೇಕಾಗಿದೆ. ಒಬ್ಬ ತಂದೆಯ ಶ್ರೇಷ್ಠ ಮತದಂತೆ ನಡೆಯಬೇಕಾಗಿದೆ.
2. ಪುರುಷಾರ್ಥ ಮಾಡಿ ಸಂಪೂರ್ಣರಾಗಬೇಕಾಗಿದೆ. ಭಾರತವನ್ನು ಪಾವನವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯ ತರಬಾರದು.
| ವರದಾನ: |
ಜ್ಞಾನಿತ್ವ ಆತ್ಮನಾಗಿ ಜ್ಞಾನ ಸಾಗರ ಮತ್ತು ಜ್ಞಾನದಲ್ಲಿ ಸಮಾವೇಶವಾಗುವಂತಹ ಸರ್ವ ಪ್ರಾಪ್ತಿ ಸ್ವರೂಪ ಭವ. ಯಾರು ಜ್ಞಾನಿತ್ವ ಆತ್ಮಗಳಿದ್ದಾರೆ ಅವರು ಸದಾ ಜ್ಞಾನ ಸಾಗರ ಮತ್ತು ಜ್ಞಾನದಲ್ಲಿ ಸಮಾವೇಶವಾಗಿರುತ್ತಾರೆ, ಸರ್ವ ಪ್ರಾಪ್ತಿ ಸ್ವರೂಪರಾಗಿರುವ ಕಾರಣ ಇಚ್ಛಾ ಮಾತ್ರಂ ಅವಿಧ್ಯಾ ನ ಸ್ಟೇಜ್ ಸ್ವತಃವಾಗಿರುತ್ತದೆ. ಯಾರು ಅಂಶ ಮಾತ್ರವೂ ಸಹ ಯಾವುದೇ ಸ್ವಭಾವ-ಸಂಸ್ಕಾರದ ಅಧೀನರಾಗಿರುತ್ತಾರೆ, ಹೆಸರು-ಪ್ರತಿಷ್ಟೆ-ಗೌರವವನ್ನು ಬೇಡುವವರಾಗಿರುತ್ತಾರೆ. ಏನು? ಏಕೆ? ಎಂಬ ಪ್ರಶ್ನೆಗಳಲ್ಲಿ ಚೀರಾಡುವಂತಹವರು, ಕೂಗಾಡುವಂತಹವರು, ಒಳಗೊಂದು ಹೊರಗೊಂದು ರೂಪ - ಇರುವುದು ಅವರನ್ನು ಜ್ಞಾನಿತ್ವ ಆತ್ಮ ಎಂದು ಹೇಳಲಾಗುವುದಿಲ್ಲ. |
| ಸ್ಲೋಗನ್: | ಈ ಜೀವನದಲ್ಲಿ ಅತೀಂದ್ರಿಯ ಸುಖ ಹಾಗೂ ಆನಂದದ ಅನುಭೂತಿ ಮಾಡುವಂತಹವರೇ ಸಹಜಯೋಗಿಗಳು. |
ಅವ್ಯಕ್ತ ಸೂಚನೆ:- ಬ್ರಹ್ಮಾ ತಂದೆ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯಲ್ಲಿ ಅನುಭವ ಮಾಡಿರಿ.
ಬ್ರಾಹ್ಮಣ ಜೀವನದ ಲಕ್ಷ್ಯವಾಗಿದೆ ಬ್ರಹ್ಮಾ ತಂದೆಯ ಸಮಾನ ಸಂಪನ್ನ ಅಥವಾ ಕರ್ಮಾತೀತರಾಗುವುದು. ಈ ಲಕ್ಷ್ಯವನ್ನು ಪಡೆದುಕೊಳ್ಳುವುದಕ್ಕೆ ವಿಶೇಷ ಸ್ವಯಂನಲ್ಲಿ ಸಂಕ್ಷಿಪ್ತಗೊಳಿಸುವ ಶಕ್ತಿ, ಸಮಾವೇಶಿಸಿಕೊಳ್ಳುವ ಶಕ್ತಿ ಧಾರಣೆ ಮಾಡಿಕೊಳ್ಳಿರಿ. ಕರ್ಮ ಬಂಧನಿ ಆತ್ಮರು ಎಲ್ಲಿದ್ದಾರೆಯೇ ಅಲ್ಲಿಯೇ ಕಾರ್ಯವನ್ನು ಮಾಡಬಹುದು ಮತ್ತು ಕರ್ಮಾತೀತ ಆತ್ಮರು ಒಂದೇ ಸಮಯದಲ್ಲಿ ನಾಲ್ಕಾರು ಕಡೆ ಸೇವೆಯ ಪಾತ್ರ ಅಭಿನಯಿಸಬಹುದು ಏಕೆಂದರೆ ಕರ್ಮಾತೀತರಾಗಿದ್ದಾರೆ. ಅವರ ಗತಿ ಬಹಳ ತೀವ್ರವಾಗಿರುತ್ತದೆ, ಸೆಕೆಂಡಿನಲ್ಲಿ ಎಲ್ಲಿ ಬೇಕೋ ಅಲ್ಲಿ ತಲುಪಬಹುದು.