ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 28, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 28, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

28/10/24
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ- ಸದ್ಗುರುವಿನ ಮೊಟ್ಟಮೊದಲ ಶ್ರೀಮತವಾಗಿದೆ- ದೇಹೀ-ಅಭಿಮಾನಿಯಾಗಿ, ದೇಹದ ಅಭಿಮಾನವನ್ನು ಬಿಟ್ಟುಬಿಡಿ”
ಪ್ರಶ್ನೆ: ಈ ಸಮಯದಲ್ಲಿ ನೀವು ಮಕ್ಕಳು ಯಾವುದೇ ಇಚ್ಛೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ- ಏಕೆ?
ಉತ್ತರ: ಏಕೆಂದರೆ ನೀವೆಲ್ಲರೂ ವಾನಪ್ರಸ್ಥಿಗಳಾಗಿದ್ದೀರಿ. ನಿಮಗೆ ತಿಳಿದಿದೆ- ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೇವೆಯೋ ಅದು ವಿನಾಶವಾಗಲಿದೆ. ಈಗ ನಿಮಗೆ ಏನೂ ಬೇಕಿಲ್ಲ, ಪೂರ್ಣ ಭಿಕಾರಿಗಳಾಗಬೇಕಾಗಿದೆ ಅರ್ಥಾತ್ ಎಲ್ಲವನ್ನೂ ಬುದ್ಧಿಯಿಂದ ಮರೆಯಬೇಕಾಗಿದೆ. ಒಂದುವೇಳೆ ಇಂತಹ ಯಾವುದಾದರೂ ಅಮೂಲ್ಯ ವಸ್ತುವನ್ನು ಧರಿಸುತ್ತೀರೆಂದರೆ ಅದು ತಮ್ಮನ್ನು ಸೆಳೆಯುತ್ತದೆ. ಮತ್ತೆ ದೇಹಾಭಿಮಾನದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಇರುತ್ತೀರಿ. ಇದರಲ್ಲಿಯೇ ಪರಿಶ್ರಮವಿದೆ. ಯಾವಾಗ ಪರಿಶ್ರಮಪಟ್ಟು ಪೂರ್ಣ ಆತ್ಮಾಭಿಮಾನಿಗಳಾಗುತ್ತೀರೋ ಆಗ ವಿಶ್ವದ ರಾಜ್ಯಭಾಗ್ಯವು ಸಿಗುವುದು.

ಓಂ ಶಾಂತಿ. 15 ನಿಮಿಷ ಅಥವಾ ಅರ್ಧಗಂಟೆಯ ಸಮಯ ಮಕ್ಕಳು ಕುಳಿತಿದ್ದೀರಿ, ತಂದೆಯೂ ಸಹ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು 15 ನಿಮಿಷಗಳ ಕಾಲ ಕುಳ್ಳರಿಸುತ್ತಾರೆ. ಈ ಶಿಕ್ಷಣವು ಒಂದೇಬಾರಿ ಸಿಗುತ್ತದೆ. ಇಡೀ ಕಲ್ಪದಲ್ಲಿ ಮತ್ತೆಂದೂ ಸಿಗುವುದಿಲ್ಲ. ಸತ್ಯಯುಗದಲ್ಲಿ ಈ ರೀತಿ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ ಎಂದು ಹೇಳುವುದಿಲ್ಲ. ಇದನ್ನು ಒಬ್ಬರೇ ಸದ್ಗುರು ತಂದೆಯು ತಿಳಿಸುತ್ತಾರೆ. ಅವರಿಗಾಗಿಯೇ ಒಬ್ಬ ಸದ್ಗುರುವು ಮೇಲೆತ್ತುತ್ತಾರೆ ಎಂದು ಹೇಳಲಾಗುತ್ತದೆ ಉಳಿದವರೆಲ್ಲರೂ ಮುಳುಗಿಸುತ್ತಾರೆ. ಇಲ್ಲಿ ತಂದೆಯು ನಿಮ್ಮನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ, ತಾವೂ ಸಹ ದೇಹಿಯಾಗಿದ್ದಾರಲ್ಲವೆ. ನಿಮಗೆ ತಿಳಿಸುವುದಕ್ಕಾಗಿ ಹೇಳುತ್ತಾರೆ- ನಾನು ನೀವೆಲ್ಲಾ ಆತ್ಮಗಳ ತಂದೆಯಾಗಿದ್ದೇನೆ ಅಂದಮೇಲೆ ಅವರೇನೂ ಮಕ್ಕಳ ರೀತಿಯಲ್ಲಿ ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿಲ್ಲ. ಯಾರು ಆದಿಸನಾತನ ದೇವಿ-ದೇವತಾ ಧರ್ಮಕ್ಕೆ ಸಂಬಂಧಪಟ್ಟವರಿದ್ದಾರೆಯೋ ಅವರೇ ತಂದೆಯನ್ನು ನೆನಪು ಮಾಡುತ್ತಾರೆ. ಸಂಬಂಧಿಗಳಂತೂ ಅನೇಕರಿರುತ್ತಾರಲ್ಲವೆ, ನಂಬರ್ವಾರ್ ಪುರುಷಾರ್ಥದನುಸಾರ ಇದು ತಿಳಿದುಕೊಳ್ಳುವ ಮತ್ತು ತಿಳಿಸುವಂತದ್ದಾಗಿದೆ. ಪರಮಪಿತ ಪರಮಾತ್ಮನು ನಿಮ್ಮಲ್ಲರ ತಂದೆಯೂ ಆಗಿದ್ದಾರೆ ಮತ್ತು ಜ್ಞಾನಪೂರ್ಣರೂ ಆಗಿದ್ದಾರೆ. ಆತ್ಮದಲ್ಲಿಯೇ ಜ್ಞಾನವಿರುತ್ತದೆಯಲ್ಲವೆ. ನಿಮ್ಮ ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ತಂದೆಯಲ್ಲಂತೂ ಮೊದಲಿನಿಂದಲೇ ಜ್ಞಾನದ ಸಂಸ್ಕಾರವಿದೆ. ಅವರು ತಂದೆಯಾಗಿದ್ದಾರೆ ಎಂಬುದನ್ನಂತೂ ಎಲ್ಲರೂ ಒಪ್ಪುತ್ತಾರೆ. ಎರಡನೆಯದಾಗಿ ಅಲ್ಲಿರುವ ವಿಶೇಷತೆಯೇನೆಂದರೆ ಯಥಾರ್ಥವಾದ ಜ್ಞಾನವಿದೆ, ಬೀಜರೂಪನಾಗಿದ್ದಾರೆ. ಹೇಗೆ ತಂದೆಯು ನಿಮಗೆ ತಿಳಿಸುತ್ತಾರೆಯೋ ಹಾಗೆಯೇ ನೀವೂ ಸಹ ಅನ್ಯರಿಗೆ ತಿಳಿಸಬೇಕಾಗಿದೆ. ತಂದೆಯು ಮನುಷ್ಯಸೃಷ್ಟಿಯ ಬೀಜರೂಪನಾಗಿದ್ದಾರೆ ಮತ್ತು ಸತ್ಯ, ಚೈತನ್ಯನಾಗಿದ್ದಾರೆ, ಜ್ಞಾನಸಾಗರನಾಗಿದ್ದಾರೆ. ಅವರಲ್ಲಿ ಇಡೀ ಮಾನವ ವಂಶವೃಕ್ಷದ ಜ್ಞಾನವಿದೆ. ಮತ್ತ್ಯಾರಿಗೂ ಈ ವೃಕ್ಷದ ಜ್ಞಾನವಿರುವುದಿಲ್ಲ. ಮಾನವ ವಂಶವೃಕ್ಷದ ಬೀಜವು ತಂದೆಯಾಗಿದ್ದಾರೆ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಹೇಗೆ ಮಾವಿನ ಮರವಿದ್ದರೆ ಬೀಜಕ್ಕೆ ಆ ಮಾವಿನ ಮರದ ರಚಯಿತನೆಂದು ಹೇಳುತ್ತಾರೆ. ಬೀಜವು ಅದಕ್ಕೆ ತಂದೆಯಾಯಿತು ಆದರೆ ಅದು ಜಡ ಬೀಜವಾಗಿದೆ. ಒಂದುವೇಳೆ ಅದು ಚೈತನ್ಯವಾಗಿದ್ದರೆ ನನ್ನಿಂದ ಇಡೀ ವೃಕ್ಷವು ಹೇಗೆ ಹೊರಹೊಮ್ಮುತ್ತದೆಯೆಂದು ತಿಳಿದಿರುತ್ತಿತ್ತಲ್ಲವೆ ಆದರೆ ಅದು ಜಡವಾಗಿದೆ. ಅದರ ಬೀಜವನ್ನು ನೆಲದಲ್ಲಿ ಬಿತ್ತಬೇಕಾಗುತ್ತದೆ. ಇಲ್ಲಂತೂ ಇವರು (ಶಿವಬಾಬಾ) ಚೈತನ್ಯ ಬೀಜರೂಪನಾಗಿದ್ದಾರೆ. ತಂದೆಯು ಮೇಲಿರುತ್ತಾರೆ, ನೀವೂ ಸಹ ಮಾ|| ಬೀಜರೂಪರಾಗುತ್ತೀರಿ. ತಂದೆಯಿಂದ ನಿಮಗೆ ಜ್ಞಾನವು ಸಿಗುತ್ತದೆ, ಅವರು ಸರ್ವಶ್ರೇಷ್ಠನಾಗಿದ್ದಾರೆ. ಅವರಿಂದ ನೀವು ಶ್ರೇಷ್ಠಪದವಿಯನ್ನೇ ಪಡೆಯುತ್ತೀರಿ. ಸ್ವರ್ಗದಲ್ಲಿಯೂ ಶ್ರೇಷ್ಠಪದವಿಯು ಬೇಕಲ್ಲವೆ. ಅದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಸ್ವರ್ಗದಲ್ಲಿ ದೇವಿ-ದೇವತೆಗಳ ರಾಜ್ಯವಿರುತ್ತದೆ. ರಾಜಧಾನಿಯಲ್ಲಿ ರಾಜ, ರಾಣಿ, ಪ್ರಜೆ, ಬಡವರು, ಸಾಹುಕಾರರು ಮೊದಲಾದವರೆಲ್ಲರೂ ಹೇಗೆ ಆಗಿರಬಹುದು! ಈಗ ನಿಮಗೆ ತಿಳಿದಿದೆ- ಆದಿಸನಾತನ ದೇವಿ-ದೇವತಾಧರ್ಮವು ಹೇಗೆ ಸ್ಥಾಪನೆಯಾಗುತ್ತಿದೆ, ಯಾರು ಸ್ಥಾಪನೆ ಮಾಡುತ್ತಾರೆ? ಭಗವಂತ. ಮತ್ತೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಏನೆಲ್ಲವೂ ಆಗುತ್ತಿದೆಯೋ ಎಲ್ಲವೂ ನಾಟಕದ ಯೋಜನೆಯನುಸಾರವೇ ಆಗುತ್ತಿದೆ. ಎಲ್ಲರೂ ನಾಟದಲ್ಲಿ ವಶವಾಗಿದ್ದಾರೆ. ತಂದೆಯೂ ಸಹ ಹೇಳುತ್ತಾರೆ- ನಾನೂ ಸಹ ನಾಟಕದಲ್ಲಿ ವಶವಾಗಿದ್ದೇನೆ. ನನಗೂ ಪಾತ್ರವು ಸಿಕ್ಕಿದೆ, ಅದೇ ಪಾತ್ರವನ್ನಭಿನಯಿಸುತ್ತೇನೆ. ತಂದೆಯು ಪರಮ ಆತ್ಮನಾಗಿದ್ದಾರೆ, ಅವರಿಗೆ ಸುಪ್ರೀಂ ಫಾದರ್ ಎಂದು ಹೇಳಲಾಗುತ್ತದೆ. ಮತ್ತೆಲ್ಲರಿಗೂ ಸಹೋದರರೆಂದು ಹೇಳಲಾಗುತ್ತದೆ. ತಂದೆಯ ವಿನಃ ಮತ್ತ್ಯಾರಿಗೂ ತಂದೆ, ಶಿಕ್ಷಕ, ಗುರುವೆಂದು ಹೇಳಲಾಗುವುದಿಲ್ಲ ಅಂದಮೇಲೆ ಇವರು ಪಾರಲೌಕಿಕ ತಂದೆಯೂ ಆಗಿದ್ದಾರೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಈ ಮಾತುಗಳನ್ನು ಮರೆಯಬಾರದು ಆದರೆ ಮಕ್ಕಳು ಮರೆತುಹೋಗುತ್ತೀರಿ ಏಕೆಂದರೆ ನಂಬರ್ವಾರ್ ಪುರುಷಾರ್ಥದನುಸಾರ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಪ್ರತಿಯೊಬ್ಬರೂ ಹೇಗೆ ಪುರುಷಾರ್ಥ ಮಾಡುತ್ತಾರೆ, ಇವರು ತಂದೆಯನ್ನು ನೆನಪು ಮಾಡುತ್ತಾರೆಯೇ ಅಥವಾ ಇಲ್ಲವೆ? ದೇಹೀ-ಅಭಿಮಾನಿಯಾಗಿದ್ದಾರೆಯೇ ಅಥವಾ ಇಲ್ಲವೆ? ಎಂಬುದು ಸ್ಥೂಲದಲ್ಲಿ ಕಂಡುಬರುತ್ತದೆ. ಇವರು ಜ್ಞಾನದಲ್ಲಿ ತೀಕ್ಷ್ಣವಾಗಿದ್ದಾರೆ ಎಂದು ಅವರ ಚಲನೆಯಿಂದ ತಿಳಿದುಕೊಳ್ಳಲಾಗುತ್ತದೆ. ತಂದೆಯು ನೀವು ಈ ರೀತಿಯಿದ್ದೀರೆಂದು ಯಾರಿಗೂ ನೇರವಾಗಿ ಹೇಳುವುದಿಲ್ಲ ಏಕೆಂದರೆ ತಂದೆಯು ಹೀಗೇಕೆ ಹೇಳಿದರು, ಎಲ್ಲರೂ ಏನು ತಿಳಿದುಕೊಳ್ಳುವರೋ ಎಂದು ಆಘಾತವಾಗಬಾರದೆಂದು ತಂದೆಯು ನೇರವಾಗಿ ತಿಳಿಸುವುದಿಲ್ಲ. ಇಂತಿಂತಹವರು ಯಾವ ರೀತಿ ಸರ್ವೀಸ್ ಮಾಡುತ್ತಾರೆಂದು ತಂದೆಯು ತಿಳಿಸಬಲ್ಲರು. ಎಲ್ಲವೂ ಸರ್ವೀಸಿನ ಮೇಲೆ ಆಧಾರಿತವಾಗಿದೆ. ತಂದೆಯೂ ಸಹ ಬಂದು ಸರ್ವೀಸ್ ಮಾಡುತ್ತಾರಲ್ಲವೆ. ಮಕ್ಕಳೇ, ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ನೆನಪಿನ ವಿಷಯವೇ ಕಷ್ಟವಾಗಿದೆ. ತಂದೆಯು ಜ್ಞಾನ ಮತ್ತು ಯೋಗವನ್ನು ಕಲಿಸುತ್ತಾರೆ, ಅದರಲ್ಲಿ ಜ್ಞಾನವು ಬಹಳ ಸರಳವಾಗಿದೆ ಆದರೆ ಯೋಗದ ವಿಷಯವೇ ಕಷ್ಟವಾಗಿದೆ ಆದ್ದರಿಂದ ನೆನಪಿನಲ್ಲಿಯೇ ಅನುತ್ತೀರ್ಣರಾಗುತ್ತಾರೆ. ದೇಹಾಭಿಮಾನವು ಬಂದುಬಿಡುತ್ತದೆ. ಆಗ ಇದು ಬೇಕು, ಆ ಒಳ್ಳೆಯ ವಸ್ತು ಬೇಕು ಎಂಬ ವಿಚಾರಗಳು ಬರುತ್ತವೆ.

ತಂದೆಯು ತಿಳಿಸುತ್ತಾರೆ- ಇಲ್ಲಂತೂ ನೀವು ವನವಾಸದಲ್ಲಿದ್ದೀರಲ್ಲವೆ. ನೀವೀಗ ವಾನಪ್ರಸ್ಥದಲ್ಲಿ ಹೋಗಬೇಕಾಗಿದೆ ಅಂದಮೇಲೆ ಅಂತಹ ಯಾವುದೇ ಮತ್ತೆ-ಮತ್ತೆ ಗಮನ ಸೆಳೆಯುವಂತಹ ವಸ್ತುವನ್ನು ಧರಿಸಬಾರದು ಏಕೆಂದರೆ ನೀವು ವನವಾಸದಲ್ಲಿದ್ದೀರಲ್ಲವೆ. ಒಂದುವೇಳೆ ಇಂತಹ ಯಾವುದಾದರೂ ಪ್ರಾಪಂಚಿಕ ವಸ್ತುಗಳಿದ್ದರೆ ಅದು ಮತ್ತೆ-ಮತ್ತೆ ಸೆಳೆಯುತ್ತದೆ, ಶರೀರವೂ ಸೆಳೆಯುತ್ತದೆ. ಪದೇ-ಪದೇ ದೇಹಾಭಿಮಾನದಲ್ಲಿ ತೆಗೆದುಕೊಂಡು ಬರುತ್ತದೆ ಆದ್ದರಿಂದ ಇದರಲ್ಲಿಯೇ ಪರಿಶ್ರಮವಿದೆ. ಪರಿಶ್ರಮವಿಲ್ಲದೆ ವಿಶ್ವದ ರಾಜ್ಯಭಾಗ್ಯವು ಸಿಗಲು ಸಾಧ್ಯವಿಲ್ಲ. ಪರಿಶ್ರಮವನ್ನೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಕಲ್ಪ-ಕಲ್ಪವೂ ಮಾಡುತ್ತಾ ಬಂದಿದ್ದೀರಿ ಮತ್ತು ಮಾಡುತ್ತಲೇ ಇರುತ್ತೀರಿ, ಫಲಿತಾಂಶವು ಪ್ರತ್ಯಕ್ಷವಾಗುತ್ತಾ ಹೋಗುತ್ತದೆ. ಶಾಲೆಯಲ್ಲಿಯೂ ಸಹ ನಂಬರ್ವಾರ್ ಆಗಿ ವರ್ಗಾಯಿತರಾಗುತ್ತಾರೆ. ಇಂತಹವರು ಬಹಳ ಚೆನ್ನಾಗಿ ಪರಿಶ್ರಮಪಟ್ಟರು. ಇವರಿಗೆ ಓದುವ ಉಮ್ಮಂಗವಿದೆ ಎಂಬುದನ್ನು ಶಿಕ್ಷಕರೂ ಸಹ ತಿಳಿಯುತ್ತಾರೆ. ಅವರನ್ನು ನೋಡಿದಾಗ ಆ ಅನುಭವವಾಗುತ್ತದೆ. ಆ ಸ್ಥೂಲವಿದ್ಯೆಯಲ್ಲಂತೂ ಒಂದನೆ ತರಗತಿಯಿಂದ ವರ್ಗಾವಣೆಯಾಗಿ ಎರಡನೆ ಮತ್ತು ಮೂರನೆಯ ತರಗತಿಯಲ್ಲಿ ಬರುತ್ತಾ ಹೋಗುತ್ತಾರೆ ಆದರೆ ಇಲ್ಲಂತೂ ಒಂದೇಬಾರಿ ಓದಬೇಕಾಗಿದೆ. ಮುಂದೆಹೋದಂತೆ ಎಷ್ಟು ಸಮೀಪವಾಗುತ್ತಾ ಹೋಗುತ್ತೀರೋ ಅಷ್ಟು ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ. ಅಂದಮೇಲೆ ಬಹಳ ಪರಿಶ್ರಮಪಡಬೇಕಾಗಿದೆ. ಆಗ ಅವಶ್ಯವಾಗಿ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಇದಂತೂ ತಿಳಿದಿದೆ, ಕೆಲವರು ರಾಜ-ರಾಣಿಯಾಗುತ್ತಾರೆ, ಕೆಲವರು ಪ್ರಜೆಗಳಾಗುತ್ತಾರೆ..... ಪ್ರಜೆಗಳೂ ಸಹ ಬಹಳಷ್ಟು ಸಂಖ್ಯೆಯಲ್ಲಿ ಆಗುತ್ತಾರೆ. ಅವರವರ ಭವಿಷ್ಯದ ಪದವಿಯು ಅವರ ಚಲನೆಯಿಂದಲೇ ತಿಳಿದುಬರುತ್ತದೆ. ಇವರು ದೇಹಾಭಿಮಾನದಲ್ಲಿ ಎಷ್ಟಿರುತ್ತಾರೆ, ತಂದೆಯೊಂದಿಗೆ ಇವರ ಪ್ರೀತಿಯು ಎಷ್ಟಿದೆ ಎಂಬುದನ್ನೂ ತಿಳಿಯಬಹುದಾಗಿದೆ. ತಂದೆಯ ಜೊತೆಯೇ ಪ್ರೀತಿಯಿರಬೇಕು, ಸಹೋದರರ ಜೊತೆಯಲ್ಲ. ಸಹೋದರರ ಪ್ರೀತಿಯಿಂದ ಏನೂ ಸಿಗುವುದಿಲ್ಲ. ಎಲ್ಲರಿಗೆ ಆಸ್ತಿಯು ಒಬ್ಬ ತಂದೆಯಿಂದಲೇ ಸಿಗಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಅದರಿಂದ ನಿಮ್ಮ ಪಾಪಗಳು ನಾಶವಾಗುತ್ತದೆ. ಮೂಲಮಾತೇ ಇದಾಗಿದೆ. ಈ ನೆನಪಿನಿಂದಲೇ ಶಕ್ತಿಯು ಬರುತ್ತದೆ. ದಿನ-ಪ್ರತಿದಿನ ಬ್ಯಾಟರಿಯು ತುಂಬುತ್ತಾ ಹೋಗುತ್ತದೆ ಏಕೆಂದರೆ ಜ್ಞಾನದ ಧಾರಣೆಯಾಗುತ್ತದೆಯಲ್ಲವೆ. ಬಾಣವು ನಾಟುತ್ತಾ ಹೋಗುತ್ತದೆ. ದಿನ-ಪ್ರತಿದಿನ ನಂಬರ್ವಾರ್ ಪುರುಷಾರ್ಥದನುಸಾರ ನಿಮ್ಮ ಉನ್ನತಿಯಾಗುತ್ತಾ ಹೋಗುತ್ತದೆ ಇವರೊಬ್ಬರೇ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ದೇಹೀ-ಅಭಿಮಾನಿಗಳಾಗುವ ಶಿಕ್ಷಣವನ್ನು ಕೊಡುತ್ತಾರೆ. ಮತ್ತ್ಯಾರೂ ಈ ಶಿಕ್ಷಣವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಉಳಿದವರೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಆತ್ಮಾಭಿಮಾನಿಯಾಗುವ ಜ್ಞಾನವು ಯಾರಿಗೂ ಸಿಗುವುದಿಲ್ಲ. ಮನುಷ್ಯರು ತಂದೆ, ಶಿಕ್ಷಕ, ಗುರುವಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನಭಿನಯಿಸುತ್ತಿದ್ದಾರೆ. ನೀವು ಸಾಕ್ಷಿಯಾಗಿ ನೋಡುತ್ತಿದ್ದೀರಿ, ಇಡೀ ನಾಟಕವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ, ಪಾತ್ರವನ್ನೂ ಮಾಡಬೇಕಾಗಿದೆ. ತಂದೆಯು ರಚಯಿತ, ನಿರ್ದೇಶಕ ಮತ್ತು ಪಾತ್ರಧಾರಿಯಾಗಿದ್ದಾರೆ. ಶಿವತಂದೆಯು ಬಂದು ಪಾತ್ರವನ್ನಭಿನಯಿಸುತ್ತಾರೆ, ಎಲ್ಲರ ತಂದೆಯಾಗಿದ್ದಾರಲ್ಲವೆ. ಗಂಡುಮಕ್ಕಳು ಅಥವಾ ಹೆಣ್ಣುಮಕ್ಕಳು ಎಲ್ಲರಿಗೂ ಆಸ್ತಿಯನ್ನು ಕೊಡುತ್ತಾರೆ. ಒಬ್ಬರೇ ತಂದೆಯಾಗಿದ್ದಾರೆ, ಮತ್ತೆಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದಾರೆ. ಆಸ್ತಿಯು ಒಬ್ಬ ತಂದೆಯಿಂದಲೇ ಸಿಗುತ್ತದೆ. ಈ ಪ್ರಪಂಚದ ಯಾವುದೇ ವಸ್ತುವು ಬುದ್ಧಿಯಲ್ಲಿ ನೆನಪು ಬರುವುದಿಲ್ಲ. ತಂದೆಯು ತಿಳಿಸುತ್ತಾರೆ- ನೀವು ಏನೆಲ್ಲವನ್ನೂ ನೋಡುತ್ತಿದ್ದೀರೋ ಇದೆಲ್ಲವೂ ವಿನಾಶವಾಗಲಿದೆ, ಈಗಂತೂ ನೀವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಸನ್ಯಾಸಿಗಳು ಬ್ರಹ್ಮತತ್ವವನ್ನು ನೆನಪು ಮಾಡುತ್ತಾರೆ ಆದರೆ ಮನೆಯನ್ನು ನೆನಪು ಮಾಡುತ್ತಾರೆ ಎಂದರ್ಥ. ನಾವು ಬ್ರಹ್ಮತತ್ವದಲ್ಲಿ ಲೀನವಾಗಿಬಿಡುತ್ತೇವೆ ಎಂದು ತಿಳಿಯುತ್ತಾರೆ. ಇದಕ್ಕೇ ಅಜ್ಞಾನವೆಂದು ಹೇಳಲಾಗುತ್ತದೆ. ಮನುಷ್ಯರು ಮುಕ್ತಿ-ಜೀವನ್ಮುಕ್ತಿಗೆ ಏನೆಲ್ಲವನ್ನೂ ಹೇಳುತ್ತಾರೆಯೋ ಅದೆಲ್ಲವೂ ತಪ್ಪಾಗಿದೆ. ಯಾವುದೆಲ್ಲಾ ಯುಕ್ತಿಗಳನ್ನು ರಚಿಸುತ್ತಾರೆಯೋ ಎಲ್ಲವೂ ತಪ್ಪಾಗಿದೆ. ಸರಿಯಾದ ಮಾರ್ಗವನ್ನಂತೂ ತಂದೆಯೊಬ್ಬರೇ ತಿಳಿಸುತ್ತಾರೆ. ನಾಟಕದ ಯೋಜನೆಯನುಸಾರ ನಾನು ನಿಮ್ಮನ್ನು ರಾಜರಿಗೂರಾಜರನ್ನಾಗಿ ಮಾಡುತ್ತೇನೆಂದು ತಿಳಿಸುತ್ತಾರೆ. ಬಾಬಾ, ನಮ್ಮ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಾವೇ ನಮ್ಮ ಬಾಯನ್ನು ಬಿಡಿಸಿ, ಕೃಪೆತೋರಿ ಎಂದು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ- ಇದರಲ್ಲಿ ತಂದೆಯು ಏನನ್ನೂ ಮಾಡುವ ಮಾತೇ ಇಲ್ಲ. ಮುಖ್ಯಮಾತೇನೆಂದರೆ ನೀವು ತಂದೆಯ ಆದೇಶದಂತೆ ನಡೆಯಬೇಕಾಗಿದೆ. ತಂದೆಯಿಂದಲೇ ಸರಿಯಾದ ಮಾರ್ಗವು ಸಿಗುತ್ತದೆ. ಉಳಿದೆಲ್ಲಾ ಮನುಷ್ಯರದು ಸರಿಯಾದ ಮಾರ್ಗವು ಸಿಗುವುದಿಲ್ಲ. ಏಕೆಂದರೆ ಎಲ್ಲರಲ್ಲಿಯೂ ಪಂಚವಿಕಾರಗಳಿದೆಯಲ್ಲವೆ. ಕೆಳಗಿಳಿಯುತ್ತಾ-ಇಳಿಯುತ್ತಾ ತಪ್ಪು ಮಾರ್ಗದಂತೆ ನಡೆಯುತ್ತಾ ಹೋಗುತ್ತಾರೆ. ರಿದ್ಧಿ-ಸಿದ್ಧಿ ಮತ್ತು ಇನ್ನೇನನ್ನೋ ಮಾಡುತ್ತಿರುತ್ತಾರೆ. ಅದರಲ್ಲಿ ಸುಖವಿಲ್ಲ, ನಿಮಗೆ ತಿಳಿದಿದೆ- ಇದೆಲ್ಲವೂ ಅಲ್ಪಕಾಲದ ಸುಖವಿದೆ, ಇದಕ್ಕೆ ಕಾಗವಿಷ್ಟ ಸಮಾನ ಸುಖವೆಂದು ಹೇಳಲಾಗುತ್ತದೆ. ಏಣಿಯ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಹುದು ಮತ್ತು ಕಲ್ಪವೃಕ್ಷದ ಚಿತ್ರದಲ್ಲಿಯೂ ತಿಳಿಸಬಹುದಾಗಿದೆ. ನಿಮ್ಮ ಧರ್ಮಸ್ಥಾಪನೆ ಮಾಡುವವರು ಇಂತಿಂತಹ ಸಮಯದಲ್ಲಿ ಬರುತ್ತಾರೆ, ಕ್ರಿಸ್ತನು ಇಂತಹ ಸಮಯದಲ್ಲಿ ಬರುತ್ತಾರೆಂದು ನೀವು ಯಾವುದೇ ಧರ್ಮದವರಿಗಾದರೂ ತೋರಿಸಬಹುದು. ಯಾರು ಅನ್ಯಧರ್ಮಗಳಲ್ಲಿ ಹೋಗಿ ಸೇರಿದ್ದಾರೆಯೋ ಅವರಿಗೆ ಈ ಧರ್ಮವೇ ಸತ್ಯವಾದುದೆಂದು ಎನಿಸುತ್ತದೆ. ಆಗ ಅಲ್ಲಿಂದ ಬಂದುಬಿಡುತ್ತಾರೆ, ಇನ್ನೂ ಕೆಲವರಿಗೆ ಪ್ರಿಯವೆನಿಸುವುದಿಲ್ಲ ಅಂದಮೇಲೆ ಅವರು ಪುರುಷಾರ್ಥವನ್ನು ಹೇಗೆ ಮಾಡುತ್ತಾರೆ! ಮನುಷ್ಯರು ಮನುಷ್ಯರನ್ನು ನೇಣುಗಂಬಕ್ಕೇರಿಸುತ್ತಾರೆ. ನೀವಂತೂ ಒಬ್ಬ ತಂದೆಯ ನೆನಪಿನಲ್ಲಿಯೇ ಇರಬೇಕಾಗಿದೆ. ಒಬ್ಬ ತಂದೆಯೊಂದಿಗೇ ಬುದ್ಧಿಯೋಗವನ್ನು ಜೋಡಿಸುವುದು ಬಹಳ ಮಧುರವಾದ ನೇಣುಗಂಬವಾಗಿದೆ ಏಕೆಂದರೆ ಆತ್ಮದ ಬುದ್ಧಿಯೋಗವು ತಂದೆಯ ಕಡೆಯೇ ಇರುತ್ತದೆ. ತಂದೆಯನ್ನು ನೆನಪು ಮಾಡಿ ಎಂದು ಆತ್ಮಕ್ಕೆ ಹೇಳಲಾಗುತ್ತದೆ. ಇದು ನೆನಪಿನ ನೇಣುಗಂಬವಾಗಿದೆ. ತಂದೆಯಂತೂ ಮೇಲಿರುತ್ತಾರಲ್ಲವೆ. ನಿಮಗೆ ತಿಳಿದಿದೆ, ನಾವು ಆತ್ಮರಾಗಿದ್ದೇನೆ. ನಾವು ತಂದೆಯನ್ನೇ ನೆನಪು ಮಾಡಬೇಕಾಗಿದೆ. ನಾವು ಶರೀರವನ್ನು ಇಲ್ಲಿಯೇ ಬಿಡಬೇಕಾಗಿದೆ. ನಿಮಗೆ ಪೂರ್ಣಜ್ಞಾನವಿದೆ ಅಂದಾಗ ನೀವಿಲ್ಲಿ ಕುಳಿತು ಏನು ಮಾಡುತ್ತೀರಿ? ವಾಣಿಯಿಂದ ದೂರಹೋಗುವ ಪುರುಷಾರ್ಥ ಮಾಡುತ್ತೀರಿ. ಎಲ್ಲರೂ ನನ್ನ ಬಳಿ ಬರಬೇಕಾಗಿದೆ ಎಂದು ತಂದೆಯು ತಿಳಿಸುತ್ತಾರೆ ಅಂದಾಗ ಕಾಲರಕಾಲ ಆದರಲ್ಲವೆ. ಆ ಕಾಲ (ಮೃತ್ಯು) ವಂತೂ ಒಬ್ಬರನ್ನು ತೆಗೆದುಕೊಂಡು ಹೋಗುತ್ತದೆ, ವಾಸ್ತವದಲ್ಲಿ ತೆಗೆದುಕೊಂಡು ಹೋಗಲು ಕಾಲ (ಯಮಧರ್ಮರಾಜ) ವೆನ್ನುವುದು ಯಾವುದೂ ಇಲ್ಲ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ತನ್ನ ಸಮಯವು ಬಂದಾಗ ಆತ್ಮವು ತಾನಾಗಿಯೇ ಶರೀರವನ್ನು ಬಿಟ್ಟು ಹೊರಟುಹೋಗುತ್ತದೆ. ಈ ತಂದೆಯಂತೂ ಎಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಈಗ ನಿಮ್ಮೆಲ್ಲರ ಬುದ್ಧಿಯೋಗವು ತಮ್ಮ ಮನೆಗೆ ಹಿಂತಿರುಗಿ ಹೋಗುವುದರಲ್ಲಿದೆ. ಶರೀರಬಿಡುವುದಕ್ಕೆ ಸಾಯುವುದೆಂದು ಹೇಳಲಾಗುತ್ತದೆ. ಶರೀರವು ಸಮಾಪ್ತಿಯಾಯಿತೆಂದರೆ ಆತ್ಮವು ಹೊರಟುಹೋಯಿತು, ಬಾಬಾ, ನಮ್ಮನ್ನು ಈ ಸೃಷ್ಟಿಯಿಂದ ದೂರ ಕರೆದುಕೊಂಡು ಹೋಗಿ, ನಾವು ಇಲ್ಲಿ ಇರುವುದಕ್ಕಾಗುವುದಿಲ್ಲ ಎಂದೇ ತಂದೆಯನ್ನು ಕರೆಯುತ್ತಾರೆ. ನಾಟಕದ ಯೋಜನೆಯನುಸಾರ ಈಗ ಹಿಂತಿರುಗಿ ಹೋಗಬೇಕಾಗಿದೆ. ಬಾಬಾ, ಇಲ್ಲಿ ಅಪಾರ ದುಃಖವಿದೆ, ನಾವಿಲ್ಲಿ ಇರಲು ಇಷ್ಟವಿಲ್ಲ. ಹೇಳುತ್ತಾರೆ- ಇದು ಬಹಳ ಕೊಳಕು ಪ್ರಪಂಚವಾಗಿದೆ. ಎಲ್ಲರೂ ಅವಶ್ಯವಾಗಿ ಸಾಯಬೇಕಾಗಿದೆ, ಎಲ್ಲರ ವಾನಪ್ರಸ್ಥ ಸ್ಥಿತಿಯಾಗಿದೆ. ಈಗ ವಾಣಿಯಿಂದ ದೂರ ಹೋಗಬೇಕಾಗಿದೆ. ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಇವು ಕಲ್ಪದ ನಂತರವೂ ಇದೇ ರೀತಿ ಆಗುತ್ತದೆ. ಇದು ನಾಟಕದ ವಿಚಿತ್ರವಾದ ಮಾತಾಗಿದೆ. ಈ ಟೇಪ್ರೆಕಾರ್ಡ್, ಗಡಿಯಾರ, ಯಾವುದೆಲ್ಲವನ್ನೂ ಈ ಸಮಯದಲ್ಲಿ ನೋಡುತ್ತೀರೋ ಕಲ್ಪದ ನಂತರವೂ ಇದೇ ರೀತಿಯಿರುತ್ತದೆ. ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ವಿಶ್ವದ ಹಿಸ್ಟ್ರಿ-ಜಾಗ್ರಫಿ ರಿಪೀಟ್ ಎಂಬುದರ ಅರ್ಥವೇ ಇತಿಹಾಸ-ಭೂಗೋಳವು ಪ್ರತೀ ಕಲ್ಪದಲ್ಲಿ ಚಾಚೂತಪ್ಪದೆ ಪುನರಾವರ್ತನೆಯಾಗುವುದು ಎಂದಾಗಿದೆ. ಈಗ ನಿಮಗೆ ತಿಳಿದಿದೆ- ನಾವು ಪುನಃ ದೇವಿ-ದೇವತೆಗಳಾಗುತ್ತಿದ್ದೇವೆ, ಅವರೇ ಮತ್ತೆ ಆಗುತ್ತಾರೆ. ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ.

ನೀವು ತಿಳಿದುಕೊಂಡಿದ್ದೀರಿ- ಅವರು ಬೇಹದ್ದಿನ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಇಂತಹ ಮನುಷ್ಯರು ಯಾರೂ ಇರಲು ಸಾಧ್ಯವಿಲ್ಲ. ಇವರನ್ನು ನೀವು ಬಾಬಾ ಎಂದು ಹೇಳುತ್ತೀರಿ, ಪ್ರಜಾಪಿತ ಬ್ರಹ್ಮನೆಂದು ಹೇಳುತ್ತೀರಿ. ಇವರೂ (ಬ್ರಹ್ಮಾ) ಸಹ ಹೇಳುತ್ತಾರೆ- ಮಕ್ಕಳೇ, ನನ್ನಿಂದ ನಿಮಗೆ ಆಸ್ತಿಯು ಸಿಗುವುದಿಲ್ಲ. ಮಹಾತ್ಮ ಗಾಂಧೀಜಿಯೂ ಸಹ ಪ್ರಜಾಪಿತನಾಗಿರಲಿಲ್ಲ ಅಲ್ಲವೆ. ಈ ಮಾತುಗಳಲ್ಲಿ ನೀವು ತಬ್ಬಿಬ್ಬಾಗಬೇಡಿ ಎಂದು ತಂದೆಯು ತಿಳಿಸುತ್ತಾರೆ. ತಿಳಿಸಿ- ನಾವು ಬ್ರಹ್ಮನನ್ನು ಭಗವಂತ ಅಥವಾ ದೇವತೆಯೆಂದು ಹೇಳುವುದಿಲ್ಲ. ಇವರು ಕೇವಲ ಮಾಧ್ಯಮವಾಗಿದ್ದಾರೆ. ತಂದೆಯು ತಿಳಿಸಿದ್ದಾರೆ- ನಾನು ಇವರ ಅನೇಕ ಜನ್ಮಗಳ ಅಂತಿಮದಲ್ಲಿ, ವಾನಪ್ರಸ್ಥ ಸ್ಥಿತಿಯಲ್ಲಿ ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ ಇಡೀ ವಿಶ್ವವನ್ನು ಪಾವನ ಮಾಡುವುದಕ್ಕಾಗಿ. ಕಲ್ಪವೃಕ್ಷದ ಚಿತ್ರದಲ್ಲಿಯೂ ತೋರಿಸಿ ಹೇಳಿ- ನೋಡಿ, ಒಮ್ಮೆಲೆ ಬ್ರಹ್ಮಾರವರು ವೃಕ್ಷದ ತುದಿಯಲ್ಲಿ ನಿಂತಿದ್ದಾರೆ. ಈಗ ಎಲ್ಲರೂ ತಮೋಪ್ರಧಾನ, ಜಡಜಡೀಭೂತ ಸ್ಥಿತಿಯಲ್ಲಿದ್ದಾರೆ. ಇವರೂ ಸಹ ತಮೋಪ್ರಧಾನ, ಅದೇ ಮುಖಲಕ್ಷಣಗಳಿವೆ. ಇವರಲ್ಲಿ ತಂದೆಯು ಪ್ರವೇಶ ಮಾಡಿ ಇವರ ಹೆಸರನ್ನು ಬ್ರಹ್ಮಾ ಎಂದು ಇಡುತ್ತಾರೆ. ಇಲ್ಲದಿದ್ದರೆ ಬ್ರಹ್ಮನೆಂಬ ಹೆಸರು ಎಲ್ಲಿಂದ ಬರುತ್ತದೆ? ಇವರು(ಬ್ರಹ್ಮಾ) ಪತಿತವಾಗಿದ್ದಾರೆ, ಅವರು (ಕೃಷ್ಣ) ಪಾವನನಾಗಿದ್ದಾರೆ. ಆ ಪಾವನ ಆತ್ಮವೇ 84 ಜನ್ಮಗಳನ್ನು ಪಡೆದು ಪತಿತ ಮನುಷ್ಯನಾಗುತ್ತಾರೆ. ಇವರು ಮನುಷ್ಯನಿಂದ ದೇವತೆಯಾಗುವವರಿದ್ದಾರೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ಇದೆಲ್ಲವೂ ತಿಳಿದುಕೊಳ್ಳುವ ಬಹಳ ವಿಚಿತ್ರವಾದ ಮಾತುಗಳಾಗಿವೆ. ಈ ಬ್ರಹ್ಮಾರವರು ಸೆಕೆಂಡಿನಲ್ಲಿ ಅಂತಹ ದೇವತೆಯಾಗುತ್ತಾರೆ ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ಈ ರೀತಿಯಾಗುತ್ತಾರೆ. ಇವರಲ್ಲಿ ತಂದೆಯು ಪ್ರವೇಶ ಮಾಡಿ ಓದಿಸುತ್ತಾರೆ, ನೀವೂ ಸಹ ಓದುತ್ತೀರಿ. ಇವರದು ಮನೆತನವೂ ಇದೆಯಲ್ಲವೆ. ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣರ ಮಂದಿರವೂ ಇದೆ ಆದರೆ ರಾಜಕುಮಾರ-ರಾಜಕುಮಾರಿಯಾಗಿದ್ದಂತಹ ರಾಧೆ-ಕೃಷ್ಣರ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ಇವರು ಬಿಕಾರಿಯಿಂದ ರಾಜಕುಮಾರನಾಗುತ್ತಾರೆ, ಮತ್ತೆ ರಾಜಕುಮಾರನಿಂದ ಬಿಕಾರಿಯಾಗುತ್ತಾರೆ. ಎಷ್ಟು ಸಹಜ ಮಾತಾಗಿದೆ! 84 ಜನ್ಮಗಳ ಚರಿತ್ರೆಯು ಇವೆರಡೂ ಚಿತ್ರಗಳಲ್ಲಿವೆ. ಇವರೇ (ಬ್ರಹ್ಮಾ-ಸರಸ್ವತಿ) ಆ ರೀತಿಯಾಗುತ್ತಾರೆ. ದಂಪತಿಗಳಾಗಿದ್ದಾರೆ ಆದ್ದರಿಂದ ನಾಲ್ಕುಭುಜಗಳನ್ನು ತೋರಿಸುತ್ತಾರೆ. ಪ್ರವೃತ್ತಿಮಾರ್ಗವಾಗಿದೆಯಲ್ಲವೆ. ಒಬ್ಬ ಸದ್ಗುರುವೇ ನಿಮ್ಮನ್ನು ದೂರ ಕರೆದುಕೊಂಡು ಹೋಗುತ್ತಾರೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ ಮತ್ತೆ ದೈವೀಗುಣಗಳೂ ಬೇಕು. ಸ್ತ್ರೀನ ಕುರಿತು ಪತಿಯನ್ನು, ಪತಿಯು ಕುರಿತು ಸ್ತ್ರೀಯನ್ನು ಕೇಳಿದಾಗ ಇವರಲ್ಲಿ ಇಂತಿಂತಹ ನಿರ್ಬಲತೆಗಳಿವೆಯೆಂದು ತಕ್ಷಣ ತಿಳಿಸಿಬಿಡುತ್ತಾರೆ. ಈ ಮಾತಿನಲ್ಲಿ ಇವರು ತೊಂದರೆ ಕೊಡುತ್ತಾರೆ ಇಲ್ಲವೆ ನಾವಿಬ್ಬರೂ ಸರಿಯಾಗಿ ನಡೆಯುತ್ತಿದ್ದೇವೆ, ಯಾರು ಯಾರಿಗೂ ತೊಂದರೆ ಕೊಡುವುದಿಲ್ಲ, ಇಬ್ಬರೂ ಪರಸ್ಪರ ಸಹಯೋಗಿಗಳಾಗಿ ನಡೆಯುತ್ತೇವೆಂದು ಹೇಳುತ್ತಾರೆ. ಕೆಲವರಂತೂ ಒಬ್ಬರು ಇನ್ನೊಬ್ಬರನ್ನು ಬೀಳಿಸುವ ಪ್ರಯತ್ನಪಡುತ್ತಾರೆ. ತಂದೆಯು ತಿಳಿಸುತ್ತಾರೆ- ಇದರಲ್ಲಿ ಸ್ವಭಾವವನ್ನು ಚೆನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಅದೆಲ್ಲವೂ ಆಸುರೀ ಸ್ವಭಾವವಾಗಿರುತ್ತದೆ. ಇದೆಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ, ಅಸುರರು ಮತ್ತು ದೇವತೆಗಳ ಯುದ್ಧವು ನಡೆಯಲಿಲ್ಲ. ಹಳೆಯ ಪ್ರಪಂಚ ಮತ್ತು ಹೊಸಪ್ರಪಂಚದವರು ಪರಸ್ಪರ ಒಂದುಕಡೆ ಸೇರಲು ಹೇಗೆ ಸಾಧ್ಯ! ತಂದೆಯು ತಿಳಿಸುತ್ತಾರೆ- ಕಳೆದುಹೋದ ಮಾತುಗಳನ್ನು ಅವರು ಕಥೆಗಳ ರೂಪದಲ್ಲಿ ಬರೆದಿದ್ದಾರೆ. ಕಥೆಯೆಂದು ಹೆಸರಿಡುತ್ತಾರೆ. ಹಬ್ಬ-ಹರಿದಿನಗಳೆಲ್ಲವೂ ಇಲ್ಲಿಯ ನೆನಪಾರ್ಥವಾಗಿದೆ. ದ್ವಾಪರದಿಂದ ಹಿಡಿದು ಇದೆಲ್ಲವನ್ನೂ ಆಚರಣೆ ಮಾಡುತ್ತಾರೆ, ಸತ್ಯಯುಗದಲ್ಲಿ ಆಚರಿಸುವುದಿಲ್ಲ. ಇವೆಲ್ಲವೂ ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ದೇಹಾಭಿಮಾನದ ಕಾರಣ ಬಹಳಷ್ಟು ವಿಚಾರಗಳನ್ನು ಮರೆತುಹೋಗುತ್ತಾರೆ. ಜ್ಞಾನವು ಬಹಳ ಸಹಜವಾಗಿದೆ. 7 ದಿನಗಳಲ್ಲಿ ಪೂರ್ಣ ಜ್ಞಾನವು ಧಾರಣೆಯಾಗಿಬಿಡುತ್ತದೆಯಲ್ಲವೆ. ನೀವು ನೆನಪಿನ ಯಾತ್ರೆಯಲ್ಲಿ ಗಮನವಿಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಈ ಬೇಹದ್ದಿನ ನಾಟಕದಲ್ಲಿ ಪಾತ್ರವನ್ನಭಿನಯಿಸುತ್ತಾ ಪೂರ್ಣ ನಾಟಕವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ, ಇದರಲ್ಲಿ ತಬ್ಬಿಬ್ಬಾಗಬಾರದು. ಈ ಪ್ರಪಂಚದಲ್ಲಿನ ಯಾವುದೇ ವಸ್ತುವನ್ನು ನೋಡುತ್ತಿದ್ದರೂ ಅದು ಬುದ್ಧಿಯಲ್ಲಿ ನೆನಪಿಗೆ ಬರಬಾರದು.

2. ತಮ್ಮ ಆಸುರೀ ಸ್ವಭಾವವನ್ನು ಪರಿವರ್ತನೆ ಮಾಡಿಕೊಂಡು ದೈವೀ ಸ್ವಭಾವವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಪರಸ್ಪರ ಸಹಯೋಗಿಗಳಾಗಿ ನಡೆಯಬೇಕಾಗಿದೆ. ಯಾರಿಗೂ ತೊಂದರೆ ಕೊಡಬಾರದು.

ವರದಾನ: ಸ್ವಯಂನಲ್ಲಿ ಸರ್ವ ಶಕ್ತಿಗಳನ್ನು ಇಮರ್ಜ್ ರೂಪದಲ್ಲಿ ಅನುಭವ ಮಾಡುವಂತಹ ಸರ್ವ ಸಿದ್ಧಿ ಸ್ವರೂಪ ಭವ.
ಲೌಕಿಕದಲ್ಲಿ ಕೆಲವರಲ್ಲಿ ಕೆಲವು ಶಕ್ತಿಗಳಿರುತ್ತವೆ, ಇಲ್ಲಾ ಹಣದ್ದಿರಬಹುದು, ಇಲ್ಲಾ ಬುದ್ಧಿಯದಿರಬಹುದು, ಇಲ್ಲಾ ಸಂಬಂಧ-ಸಂಪರ್ಕದ್ದಿರಬಹುದು..... ಅಂದರೆ ಅವರಿಗೆ ನಿಶ್ಚಯವಿರುವುದು ಇದೇನು ದೊಡ್ಡ ವಿಷಯ ಎಂದು. ಅವರು ಶಕ್ತಿಯ ಆಧಾರದಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ನಿಮ್ಮ ಬಳಿಯಾದರೂ ಎಲ್ಲಾ ಶಕ್ತಿಗಳೂ ಇವೆ, ಅವಿನಾಶಿ ಧನದ ಶಕ್ತಿ ಸದಾ ಜೊತೆಯಲ್ಲಿರುವುದು, ಬುದ್ಧಿಯ ಶಕ್ತಿಯೂ ಸಹ ಇದೆ ಪೊಜಿಷನ್ ನ ಶಕ್ತಿಯೂ ಸಹ ಇದೆ, ಸರ್ವ ಶಕ್ತಿಗಳೂ ನಿಮ್ಮಲ್ಲಿ ಇವೆ, ಸರ್ವ ಶಕ್ತಿಗಳೂ ನಿಮ್ಮಲ್ಲಿವೆ, ಅವುಗಳನ್ನು ಕೇವಲ ಇಮರ್ಜ್ ರೂಪದಲ್ಲಿ ಅನುಭವ ಮಾಡಿದಲ್ಲಿ ಸಮಯದಲ್ಲಿ ವಿಧಿಯ ಮೂಲಕ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡು ಸಿದ್ಧಿ ಸ್ವರೂಪರಾಗಿ ಬಿಡುವಿರಿ.
ಸ್ಲೋಗನ್: ಮನಸ್ಸನ್ನು ಫ್ರಭುವಿನ ಸಂಪತ್ತು ಎಂದು ತಿಳಿದು ಅದನ್ನು ಸದಾ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸಿ.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.