ಕನ್ನಡ ಮುರಳಿ · Brahma Kumaris

ಕನ್ನಡ ಮುರಳಿ · ಅಕ್ಟೋಬರ್ 29, 2024

ಓಂ ಶಾಂತಿ · BapDada ·

ಇಂದಿನ ಮುರಳಿ — today’s murli in Kannada, Kannada murli today.

18
ಮುರಳಿಅಕ್ಟೋಬರ್ 29, 2024 · ಕನ್ನಡ
0:00--:--

ಪಠ್ಯ ಆಯ್ಕೆಮಾಡಿ → ಹೈಲೈಟ್ / ಬಾಕ್ಸ್ / ಅಡಿಗೆರೆ

29/10/24
ಪ್ರಾತಃಮುರುಳಿ
ಓಂಶಾಂತಿ
ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ- ಆತ್ಮದಿಂದ ವಿಕಾರಗಳ ಕೊಳಕನ್ನು ತೆಗೆದು ಶುದ್ಧ ಹೂಗಳಾಗಿ, ತಂದೆಯ ನೆನಪಿನಿಂದಲೇ ಎಲ್ಲಾ ಕೊಳಕು ಬಿಟ್ಟುಹೋಗುತ್ತದೆ”
ಪ್ರಶ್ನೆ: ಪವಿತ್ರರಾಗುವಂತಹ ಮಕ್ಕಳು ಯಾವ ಒಂದು ಮಾತಿನಲ್ಲಿ ತಂದೆಯನ್ನು ಅನುಸರಿಸಬೇಕಾಗಿದೆ?
ಉತ್ತರ: ಹೇಗೆ ತಂದೆಯು ಪರಮ ಪವಿತ್ರನಾಗಿದ್ದಾರೆ, ಅವರೆಂದೂ ಅಪವಿತ್ರ, ಕೊಳಕಿನವರೊಂದಿಗೆ ಸೇರುವುದಿಲ್ಲ. ಬಹಳ-ಬಹಳ ಗುಪ್ತವಾಗಿದ್ದಾರೆ. ಹಾಗೆಯೇ ತಾವು ಪವಿತ್ರರಾಗುವಂತಹ ಮಕ್ಕಳೂ ಸಹ ತಂದೆಯನ್ನು ಅನುಸರಿಸಿ ಕೆಟ್ಟದ್ದನ್ನು ನೋಡಬೇಡಿ.

ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಇಬ್ಬರು ತಂದೆಯರೂ ಇದ್ದಾರೆ, ಒಬ್ಬರಿಗೆ ಆತ್ಮಿಕ ತಂದೆ ಇನ್ನೊಬ್ಬರಿಗೆ ದೈಹಿಕ ತಂದೆಯೆಂದು ಹೇಳಲಾಗುತ್ತದೆ. ಶರೀರವಂತೂ ಇಬ್ಬರಿಗೂ ಒಂದೇ ಆಗಿರುತ್ತದೆ. ಅಂದಾಗ ಇಬ್ಬರೂ ತಂದೆಯರೂ ಸಹ ತಿಳಿಸುತ್ತಾರೆ ಭಲೆ ಇಬ್ಬರು ತಿಳಿಸುತ್ತಾರೆ ಮತ್ತು ಇನ್ನೊಬ್ಬರು ಕೇಳಿಸಿಕೊಳ್ಳುತ್ತಾರೆ ಆದರೆ ಇಬ್ಬರೂ ತಿಳಿಸುತ್ತಾರೆಂದು ಹೇಳುತ್ತಾರೆ. ಇಷ್ಟು ಸೂಕ್ಷ್ಮಆತ್ಮದಲ್ಲಿ ಎಷ್ಟೊಂದು ಮೈಲಿಗೆಯು ತುಂಬಿದೆ! ಪಾಪವು ಏರುವುದರಿಂದ ಎಷ್ಟೊಂದು ನಷ್ಟವುಂಟಾಗುತ್ತದೆ. ಯಾವಾಗ ಶರೀರದ ಜೊತೆಯಿರುತ್ತೀರೋ ಆಗ ಲಾಭ ಮತ್ತು ನಷ್ಟವು ಕಾಣಿಸುತ್ತದೆ. ನೀವು ತಿಳಿದುಕೊಂಡಿದ್ದೀರಿ- ನಾವಾತ್ಮಗಳು ಯಾವಾಗ ಪವಿತ್ರರಾಗುತ್ತೇವೆಯೋ ಆಗ ಈ ಲಕ್ಷ್ಮೀ-ನಾರಾಯಣರ ತರಹ ಪವಿತ್ರ ಶರೀರವು ಸಿಗುತ್ತದೆ. ಈಗ ಆತ್ಮವು ಎಷ್ಟೊಂದು ಮೈಲಿಗೆಯಾಗಿದೆ. ಜೇನುತುಪ್ಪವನ್ನು ತೆಗೆದ ನಂತರ ಅದನ್ನು ಶೋದಿಸುತ್ತಾರೆ ಆಗ ಅದರಿಂದ ಎಷ್ಟೊಂದು ಕಸವು ಹೊರಬರುತ್ತದೆ ಮತ್ತು ಶುದ್ಧ ಜೇನುತುಪ್ಪವು ಬೇರ್ಪಡುತ್ತದೆ. ಆತ್ಮವೂ ಸಹ ಬಹಳ ಮೈಲಿಗೆಯಾಗಿಬಿಟ್ಟಿದೆ. ಆತ್ಮವೇ ಕಂಚನವಾಗಿತ್ತು, ಸಂಪೂರ್ಣ ಪವಿತ್ರವಾಗಿತ್ತು, ಶರೀರವು ಎಂತಹ ಸುಂದರವಾಗಿತ್ತು, ಈ ಲಕ್ಷ್ಮೀ-ನಾರಾಯಣರ ಶರೀರವನ್ನು ನೋಡಿ ಎಷ್ಟು ಸುಂದರವಾಗಿದೆ. ಮನುಷ್ಯರಂತೂ ಶರೀರವನ್ನೇ ಪೂಜಿಸುತ್ತಾರಲ್ಲವೆ. ಆತ್ಮದಕಡೆ ನೋಡುವುದಿಲ್ಲ, ಆತ್ಮದ ಪರಿಚಯವೇ ಇಲ್ಲ. ಮೊದಲು ಆತ್ಮವು ಸುಂದರವಾಗಿತ್ತು ಆಗ ಶರೀರವೂ ಸುಂದರವಾದದ್ದೇ ಸಿಗುತ್ತದೆ. ನೀವೀಗ ಆ ರೀತಿಯಾಗಲು ಬಯಸುತ್ತೀರಿ ಅಂದಾಗ ಆತ್ಮವು ಎಷ್ಟೊಂದು ಶುದ್ಧವಾಗಬೇಕು. ಆತ್ಮವನ್ನೇ ತಮೋಪ್ರಧಾನವೆಂದು ಹೇಳಲಾಗುತ್ತದೆ ಏಕೆಂದರೆ ಅದರಲ್ಲಿ ಪೂರ್ಣ ಕೊಳಕಿದೆ. ಒಂದನೆಯದಾಗಿ ದೇಹಾಭಿಮಾನದ ಕೊಳಕು, ಎರಡನೆಯದು- ಕಾಮ-ಕ್ರೋಧದ ಕೊಳಕು ಅಥವಾ ಕಸವನ್ನು ತೆಗೆಯಲು ಅದನ್ನು ಶೋಧಿಸಲಾಗುತ್ತದೆಯಲ್ಲವೆ. ಶೋಧಿಸುವುದರಿಂದ ಅದರ ಬಣ್ಣವೇ ಬದಲಾಗುತ್ತದೆ. ನೀವು ಕುಳಿತು ಚೆನ್ನಾಗಿ ವಿಚಾರ ಮಾಡಿದಾಗ ಆತ್ಮದಲ್ಲಿ ಬಹಳಷ್ಟು ಕೊಳಕು ತುಂಬಿದೆಯೆಂದು ಭಾಸವಾಗುತ್ತದೆ. ಆತ್ಮದಲ್ಲಿ ರಾವಣನ ಪ್ರವೇಶತೆಯಾಗಿದೆ, ಈಗ ತಂದೆಯ ನೆನಪಿನಲ್ಲಿರುವುದರಿಂದಲೇ ಕೊಳಕು ಬಿಟ್ಟುಹೋಗುತ್ತದೆ. ಇದರಲ್ಲಿಯೂ ಸಮಯ ಹಿಡಿಸುತ್ತದೆ. ತಂದೆಯು ತಿಳಿಸುತ್ತಾರೆ- ದೇಹಾಭಿಮಾನವಿರುವ ಕಾರಣ ವಿಕಾರಗಳ ಎಷ್ಟೊಂದು ಕೊಳಕಿದೆ. ಕ್ರೋಧದದ ಕೊಳಕು ಕಡಿಮೆಯಲ್ಲ. ಕ್ರೋಧಿಯು ಒಳಗೆ ಸುಡುತ್ತಿರುತ್ತಾನೆ. ಯಾವುದಾದರೊಂದು ಮಾತಿನಲ್ಲಿ ಹೃದಯದಲ್ಲಿ ಸುಡುತ್ತಿರುತ್ತದೆ. ಚಹರೆಯೂ ಸಹ ತಾಮ್ರದಂತಿರುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ- ನಾವಾತ್ಮಗಳು ಸುಟ್ಟುಹೋಗಿದ್ದೇವೆ, ಆತ್ಮದಲ್ಲಿ ಎಷ್ಟೊಂದು ಮೈಲಿಗೆಯಿದೆಯೆಂದು ಈಗ ತಿಳಿದಿದೆ. ಈ ಮಾತುಗಳನ್ನು ಅರಿತುಕೊಳ್ಳುವವರು ಬಹಳ ಕಡಿಮೆ. ಇದರಲ್ಲಂತೂ ಸುಂದರವಾದ ಹೂಗಳಾಗಬೇಕಲ್ಲವೆ. ಈ ಲಕ್ಷ್ಮೀ-ನಾರಾಯಣರು ಎಷ್ಟೊಂದು ಪವಿತ್ರರಾಗಿದ್ದಾರೆ. ವಾಸ್ತವದಲ್ಲಿ ಅವರನ್ನು ಮುಟ್ಟುವ ನಿಯಮವೂ ಇಲ್ಲ. ಪತಿತರು ಹೋಗಿ ಇಷ್ಟು ಶ್ರೇಷ್ಠ, ಪವಿತ್ರ ದೇವತೆಗಳಿಗೆ ಕೈಹಾಕಲು ಸಾಧ್ಯವಿಲ್ಲ. ಕೈಯಿಂದ ಮುಟ್ಟುವುದಕ್ಕೂ ಯೋಗ್ಯತೆಯಿಲ್ಲ. ಶಿವನಿಗಂತೂ ಕೈಯಿಂದ ಸ್ಪರ್ಷಿಸುವುದಕ್ಕೂ ಸಾಧ್ಯವಿಲ್ಲ. ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ಅವರಿಗೆ ಕೈಯಿಂದ ಮುಟ್ಟಲು ಸಾಧ್ಯವೇ ಇಲ್ಲ. ಅವರಂತೂ ಸಂಪೂರ್ಣ ಪವಿತ್ರರಾಗಿದ್ದಾರೆ. ಭಲೆ ಅವರ ಪ್ರತಿಮೆಯನ್ನು ಬಹಳ ದೊಡ್ಡದನ್ನಾಗಿ ಮಾಡಿಬಿಟ್ಟಿದ್ದಾರೆ ಏಕೆಂದರೆ ಇಷ್ಟು ಸೂಕ್ಷ್ಮಬಿಂದುವಾದ ಅವರನ್ನು ಯಾರೂ ಕೈಯಿಂದ ಮುಟ್ಟುವುದಕ್ಕೂ ಸಾಧ್ಯವಾಗುವುದಿಲ್ಲ. ಆತ್ಮವು ಶರೀರದಲ್ಲಿ ಪ್ರವೇಶ ಮಾಡುತ್ತದೆಯೆಂದರೆ ಶರೀರವು ಬೆಳವಣಿಗೆಯಾಗಿ ದೊಡ್ಡದಾಗುತ್ತಾ ಹೋಗುತ್ತದೆ. ಆತ್ಮದ ಗಾತ್ರವಂತೂ ಚಿಕ್ಕದು-ದೊಡ್ಡದು ಆಗುವುದಿಲ್ಲ. ಇದಂತೂ ಕೊಳಕು ಪ್ರಪಾಂಚವಾಗಿದೆ. ಆತ್ಮದಲ್ಲಿ ಎಷ್ಟೊಂದು ಕೊಳಕಿದೆ. ಶಿವತಂದೆಯು ಬಹಳ ಗುಪ್ತವಾಗಿದ್ದಾರೆ, ಸಂಪೂರ್ಣ ಪವಿತ್ರವಾಗಿದ್ದಾರೆ. ಇಲ್ಲಿ ಎಲ್ಲರನ್ನೂ ಒಂದೇ ಸಮಾನ ಮಾಡಿಬಿಡುತ್ತಾರೆ. ಇಲ್ಲಂತೂ ಕೆಲವರಿಗೆ ನೀವು ಪ್ರಾಣಿಗಳ ಸಮಾನವೆಂದು ಹೇಳಿಯೂಬಿಡುತ್ತಾರೆ. ಸತ್ಯಯುಗದಲ್ಲಿ ಇಂತಹ ಭಾಷೆಯಿರುವುದಿಲ್ಲ. ಈಗ ನೀವು ಇದನ್ನು ಅನುಭವ ಮಾಡುತ್ತೀರಿ- ನಾವಾತ್ಮಗಳಲ್ಲಿ ಎಷ್ಟೊಂದು ಮೈಲಿಗೆಯು ತುಂಬಿದೆ. ತಂದೆಯನ್ನು ನೆನಪು ಮಾಡುವುದಕ್ಕೆ ಆತ್ಮವು ಯೋಗ್ಯವೇ ಅಲ್ಲ. ಇವರು ಯೋಗ್ಯರಿಲ್ಲವೆಂದು ತಿಳಿದು ಮಾಯೆಯೂ ಸಹ ಒಮ್ಮೆಲೆ ಅವರನ್ನು ನೆನಪಿನಿಂದ ದೂರ ಮಾಡಿಬಿಡುತ್ತದೆ.

ತಂದೆಯು ಎಷ್ಟು ಗುಪ್ತವಾಗಿದ್ದಾರೆ! ನಾವಾತ್ಮಗಳು ಹೇಗಿದ್ದವರು ಏನಾಗಿಬಿಡುತ್ತೇವೆ. ಈಗ ತಂದೆಯು ತಿಳಿಸುತ್ತಾರೆ- ನನ್ನನ್ನು ನೀವು ಆತ್ಮವನ್ನು ಶುದ್ಧ ಮಾಡುವುದಕ್ಕಾಗಿಯೇ ಕರೆದಿರಿ ಏಕೆಂದರೆ ಆತ್ಮಗಳಲ್ಲಿ ಬಹಳಷ್ಟು ಕೊಳಕು ಕುಳಿತಿದೆ. ಹೂದೋಟದಲ್ಲಿ ಎಲ್ಲಾ ಹೂಗಳು ಸುಂದರವಾಗಿರುವುದಿಲ್ಲ, ನಂಬರ್ವಾರ್ ಇರುತ್ತವೆ. ಹಾಗೆಯೇ ಇಲ್ಲಿ ತಂದೆಯು ಹೂದೋಟದ ಮಾಲೀಕನಾಗಿದ್ದಾರೆ. ಆತ್ಮವು ಎಷ್ಟೊಂದು ಪವಿತ್ರವಾಗುತ್ತದೆ ನಂತರದಲ್ಲಿ ಎಷ್ಟೊಂದು ಒಮ್ಮೆಲೇ ಮುಳ್ಳಿನ ಸಮಾನವಾಗಿಬಿಡುತ್ತದೆ. ಆತ್ಮದಲ್ಲಿಯೇ ದೇಹಾಭಿಮಾನದ, ಕಾಮ-ಕ್ರೋಧದ ಕೊಳಕು ತುಂಬುತ್ತದೆ. ಕ್ರೋಧವೂ ಸಹ ಮನುಷ್ಯರಲ್ಲಿ ಎಷ್ಟೊಂದಿದೆ! ನೀವು ಪವಿತ್ರರಾಗಿ ಬಿಡುತ್ತೀರೆಂದರೆ ನಂತರ ಯಾರ ಮುಖವನ್ನು ನೋಡುವುದಕ್ಕೂ ನಿಮಗೆ ಮನಸ್ಸಾಗುವುದಿಲ್ಲ. ಕೆಟ್ಟದ್ದನ್ನು ನೋಡಬೇಡಿ, ಅಪವಿತ್ರರನ್ನು ನೋಡಲೇಬಾರದಾಗಿದೆ. ಆತ್ಮವು ಪವಿತ್ರವಾಗಿ ಪವಿತ್ರ, ಹೊಸ ಶರೀರವನ್ನು ತೆಗೆದುಕೊಂಡು ನಂತರ ಕೊಳಕನ್ನು ನೋಡುವುದೇ ಇಲ್ಲ. ಈ ಕೊಳಕು ಪ್ರಪಂಚವೇ ಸಮಾಪ್ತಿಯಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ- ನೀವು ದೇಹಾಭಿಮಾನದಲ್ಲಿ ಬಂದು ಎಷ್ಟೊಂದು ಕೊಳಕಾಗಿಬಿಟ್ಟಿದ್ದೀರಿ, ಪತಿತರಾಗಿಬಿಟ್ಟಿದ್ದೀರಿ. ಬಾಬಾ, ನಮ್ಮಲ್ಲಿ ಕ್ರೋಧದ ಭೂತವಿದೆ. ಬಾಬಾ, ಪವಿತ್ರರಾಗುವುದಕ್ಕಾಗಿಯೇ ನಾವು ತಮ್ಮ ಬಳಿ ಬಂದಿದ್ದೇವೆಂದು ಮಕ್ಕಳು ಕರೆದಿರಿ ಏಕೆಂದರೆ ನಿಮಗೆ ತಿಳಿದಿದೆ, ತಂದೆಯು ಸಂಪೂರ್ಣ ಪಾವನನಾಗಿದ್ದಾರೆ, ಇಂತಹ ಹೈಯೆಸ್ಟ್ ಅಥಾರಿಟಿಯನ್ನು ಸರ್ವವ್ಯಾಪಿಯೆಂದು ಹೇಳಿ ಎಷ್ಟೊಂದು ನಿಂದನೆ ಮಾಡುತ್ತಾರೆ. ನಾವು ಹೇಗಿದ್ದೆವು, ಮತ್ತೆ ಈಗ ಹೇಗಾಗುತ್ತಿದ್ದೇವೆಂದು ತಮ್ಮಮೇಲೆ ತಮಗೆ ತಿರಸ್ಕಾರ ಬರುತ್ತದೆ. ಈ ಮಾತುಗಳನ್ನು ನೀವೇ ತಿಳಿದುಕೊಳ್ಳುತ್ತೀರಿ, ಮತ್ತ್ಯಾವುದೇ ಸತ್ಸಂಗ ಅಥವಾ ವಿಶ್ವವಿದ್ಯಾಲಯಗಳಲ್ಲಿ ಇಂತಹ ಗುರಿ-ಧ್ಯೇಯವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಆತ್ಮಗಳಲ್ಲಿ ಹೇಗೆ ಕೊಳಕು ತುಂಬುತ್ತಾ ಹೋಗಿದೆ ಎಂಬುದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮದಲ್ಲಿ ಎರಡು ಕಲೆಗಳು ಕಡಿಮೆಯಾಯಿತು ನಂತರ ನಾಲ್ಕು ಕಲೆಗಳು ಕಡಿಮೆಯಾಯಿತು, ಕೊಳಕು ತುಂಬುತ್ತಾ ಹೋಯಿತು ಆದ್ದರಿಂದ ತಮೋಪ್ರಧಾನವೆಂದು ಹೇಳಲಾಗುತ್ತದೆ. ಕೆಲವರು ಲೋಭದಲ್ಲಿ, ಕೆಲವರು ಮೋಹದಲ್ಲಿ ಸುಡುತ್ತಾರೆ. ಈ ಸ್ಥಿತಿಯಲ್ಲಿಯೇ ಸುಡುತ್ತಾ-ಸುಡುತ್ತಾ ಶರೀರವನ್ನು ಬಿಡಬೇಕಾಗಿದೆ. ಈಗ ನೀವು ಮಕ್ಕಳಂತೂ ಯಾವ ತಂದೆಯು ಶ್ರೇಷ್ಠರನ್ನಾಗಿ ಮಾಡುತ್ತಾರೆಯೋ ಅಂತಹ ಶಿವತಂದೆಯ ನೆನಪಿನಲ್ಲಿಯೇ ಶರೀರವನ್ನು ಬಿಡಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರನ್ನು ಇಷ್ಟು ಶ್ರೇಷ್ಠರನ್ನಾಗಿ ತಂದೆಯೇ ಮಾಡಿದರಲ್ಲವೆ. ಅಂದಮೇಲೆ ತಾವು ಎಷ್ಟೊಂದು ಎಚ್ಚರವಹಿಸಬೇಕು! ಬಿರುಗಾಳಿಗಳಂತೂ ಬಹಳಷ್ಟು ಬರುತ್ತವೆ. ಮಾಯೆಯ ಬಿರುಗಾಳಿಗಳೇ ಬರುತ್ತವೆ ಮತ್ತ್ಯಾವುದೇ ಬಿರುಗಾಳಿಗಳಲ್ಲ. ಹೇಗೆ ಶಾಸ್ತ್ರಗಳಲ್ಲಿ ಹನುಮಂತ ಮೊದಲಾದವರ ಕಥೆಗಳನ್ನು ಬರೆದಿದ್ದಾರೆ, ಭಗವಂತನೇ ಶಾಸ್ತ್ರಗಳನ್ನು ರಚಿಸಿದ್ದಾರೆಂದು ಹೇಳುತ್ತಾರೆ ಆದರೆ ಇಲ್ಲ. ಭಗವಂತನಂತೂ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಭಗವಂತನು ಸದ್ಗತಿ ಮಾಡಿದನಂತರ ಅವರಿಗೆ ಶಾಸ್ತ್ರಗಳನ್ನು ರಚಿಸುವ ಅವಶ್ಯಕತೆಯೇನಿದೆ? ಈಗ ತಂದೆಯು ತಿಳಿಸುತ್ತಾರೆ- ಕೆಟ್ಟದ್ದನ್ನು ಕೇಳಬೇಡಿ, ಈ ಶಾಸ್ತ್ರಗಳು ಮೊದಲಾದವುಗಳಿಂದ ನೀವು ಶ್ರೇಷ್ಠರಾಗಲು ಸಾಧ್ಯವಿಲ್ಲ. ನಾನಂತೂ ಇವೆಲ್ಲದರಿಂದ ಭಿನ್ನನಾಗಿದ್ದೇನೆ. ಯಾರೂ ನನ್ನನ್ನು ಅರಿತುಕೊಳ್ಳುವುದಿಲ್ಲ. ತಂದೆಯು ಯಾರು? ಎಂಬುದು ಯಾರಿಗೂ ತಿಳಿದಿಲ್ಲ. ತಂದೆಗೆ ತಿಳಿದಿದೆ- ಯಾರ್ಯಾರು ನನ್ನ ಸರ್ವೀಸ್ ಮಾಡುತ್ತಾರೆ ಅರ್ಥಾತ್ ಅನ್ಯರ ಕಲ್ಯಾಣ ಮಾಡುತ್ತಾರೆಯೋ ಅವರೇ ಹೃದಯವನ್ನೇರುತ್ತಾರೆ. ಕೆಲವರಿಗಂತೂ ಸರ್ವೀಸಿನ ಬಗ್ಗೆ ತಿಳಿದೇ ಇಲ್ಲ. ನೀವು ಮಕ್ಕಳಿಗಂತೂ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂಬ ಜ್ಞಾನವು ಸಿಕ್ಕಿದೆ. ಭಲೆ ಆತ್ಮವು ಶುದ್ಧವಾಗುತ್ತದೆ ಆದರೆ ಶರೀರವಂತೂ ಈಗ ಪತಿತವೇ ಆಗಿದೆಯಲ್ಲವೆ. ಯಾರ ಆತ್ಮವು ಶುದ್ಧವಾಗುತ್ತಾ ಹೋಗುತ್ತದೆಯೋ ಅವರ ನಡುವಳಿಕೆ ಮತ್ತು ಪತಿತರ ನಡುವಳಿಕೆಯಲ್ಲಿ ರಾತ್ರಿ-ಹಗಲಿನ ಅಂತರವಿರುತ್ತದೆ. ಚಲನೆಯಿಂದಲೇ ಎಲ್ಲವೂ ತಿಳಿದುಬರುತ್ತದೆ. ಯಾರ ಹೆಸರಿಟ್ಟು ಹೇಳುವುದಿಲ್ಲ. ಒಂದುವೇಳೆ ಹೆಸರು ಹೇಳಿದರೆ ಕೆಲವರು ಇನ್ನೂ ಕೀಳುಮಟ್ಟಕ್ಕೆ ಇಳಿಯುತ್ತಾರೆ.

ಈಗ ನೀವು ಮೊದಲು ನಾವು ಹೇಗಿದ್ದೆವು, ಏನಾಗಬೇಕಾಗಿದೆ ಎಂಬ ಅಂತರವನ್ನು ನೋಡಬಹುದು ಅಂದಾಗ ಶ್ರೀಮತದಂತೆ ನಡೆಯಬೇಕಲ್ಲವೆ. ಒಳಗೆ ತುಂಬಿರುವ ಕೊಳಕನ್ನು ಹೊರತೆಗೆಯಬೇಕಾಗಿದೆ. ಲೌಕಿಕ ಸಂಬಂಧದಲ್ಲಿಯೂ ಕೆಲಕೆಲವರು ಬಹಳ ಕೊಳಕು ಮಕ್ಕಳಾಗಿದ್ದರೆ ಅವರಿಂದ ತಂದೆಯೂ ಸಹ ಬೇಸರಪಡುತ್ತಾರೆ. ಇಂತಹ ಮಗು ಜನನವಾಗದೇ ಇದ್ದಿದ್ದರೂ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಾರೆ. ಹೂಗಳ ಹೂದೋಟದ ಸುಗಂಧವಿರುತ್ತದೆ ಆದರೆ ಡ್ರಾಮಾನುಸಾರ ಕೊಳಕೂ ಸಹ ಇದೆ. ಎಕ್ಕದ ಹೂವನ್ನು ನೋಡುವುದಕ್ಕೆ ಇಷ್ಟವಾಗುವುದೇ ಇಲ್ಲ ಆದರೆ ಹೂದೋಟದಲ್ಲಿ ಹೋದಾಗ ಎಲ್ಲದರ ಕಡೆ ದೃಷ್ಟಿಯಂತೂ ಹೋಗುತ್ತದೆ. ನೀವು ಇಂತಹ ಹೂವಾಗಿದ್ದೀರಿ ಎಂದು ಆತ್ಮವು ಹೇಳುತ್ತದೆ. ಸುವಾಸನೆಯನ್ನೂ ಸಹ ಒಳ್ಳೆಯ ಹೂವಿನಿಂದಲೇ ತೆಗೆದುಕೊಳ್ಳುತ್ತಾರಲ್ಲವೆ. ತಂದೆಯೂ ಸಹ ನೋಡುತ್ತಾರೆ- ಯಾವ ಆತ್ಮಗಳು ಎಷ್ಟು ನೆನಪಿನ ಯಾತ್ರೆಯಲ್ಲಿರುತ್ತಾರೆ, ಎಷ್ಟು ಪವಿತ್ರರಾಗಿದ್ದಾರೆ ಅನ್ಯರನ್ನೂ ತನ್ನ ಸಮಾನ ಮಾಡಿಕೊಳ್ಳುತ್ತಾರೆ, ಜ್ಞಾನವನ್ನು ತಿಳಿಸುತ್ತಾರೆ. ಮೂಲಮಾತು ಮನ್ಮನಾಭವ ಆಗಿದೆ. ನನ್ನನ್ನು ನೆನಪು ಮಾಡಿದರೆ ಪವಿತ್ರ ಹೂಗಳಾಗುವಿರಿ. ಈ ಲಕ್ಷ್ಮೀ-ನಾರಾಯಣರು ಎಷ್ಟೊಂದು ಪವಿತ್ರವಾಗಿದ್ದರು, ಇವರಿಗಿಂತಲೂ ಶಿವತಂದೆಯು ಬಹಳ ಗುಪ್ತವಾಗಿದ್ದಾರೆ. ಈ ಲಕ್ಷ್ಮೀ-ನಾರಾಯಣರನ್ನು ಶಿವತಂದೆಯೇ ಈ ರೀತಿ ಮಾಡಿದ್ದಾರೆಂದು ಯಾರಿಗೂ ತಿಳಿಯುವುದಿಲ್ಲ. ಈ ಪುರುಷಾರ್ಥದಿಂದ ನಾವು ಈ ರೀತಿಯಾಗಿದ್ದೇವೆಂದು ನಿಮಗೂ ತಿಳಿದಿದೆ. ರಾಮನು ಕಡಿಮೆ ಪುರುಷಾರ್ಥ ಮಾಡಿದ್ದರಿಂದ ಚಂದ್ರವಂಶಿಯಾದರು. ತಂದೆಯು ಬಹಳಷ್ಟು ತಿಳಿಸುತ್ತಾರೆ. ಮೊದಲನೆಯದಾಗಿ ನೆನಪಿನ ಯಾತ್ರೆಯಲ್ಲಿರಬೇಕು, ಇದರಿಂದ ಕೊಳಕು ಬಿಟ್ಟುಹೋಗುತ್ತದೆ, ಆತ್ಮವು ಪವಿತ್ರವಾಗುತ್ತದೆ. ಸೇವೆಯನ್ನು ಬಿಟ್ಟು ಎಂದೂ ನಿದ್ರೆ ಮಾಡುವುದಿಲ್ಲ. ಸರ್ವೀಸಿನ ಮೇಲೆ ಬಹಳ ನಿಖರವಾಗಿರಬೇಕು. ಮ್ಯೂಸಿಯಂನಲ್ಲಿಯೂ ನೀವು ವಿಶ್ರಾಂತಿಯ ಸಮಯವನ್ನೂ ಸಹ ಬಿಟ್ಟುಬಿಡುತ್ತೀರಿ, ಗಂಟಲು ಕಟ್ಟುತ್ತದೆ, ಭೋಜನ ಇತ್ಯಾದಿಯನ್ನು ಮಾಡಬೇಕು ಆದರೆ ದಿನ-ರಾತ್ರಿ ಉಮ್ಮಂಗವು ಬರಬೇಕು. ಯಾರೇ ಬರಲಿ ಅವರಿಗೆ ಮಾರ್ಗವನ್ನು ತಿಳಿಸಬೇಕೆನ್ನುವ ಉಮ್ಮಂಗವು ಬರಬೇಕು. ಭೋಜನದ ಸಮಯದಲ್ಲಿಯೂ ಸಹ ಯಾರಾದರೂ ಬರುತ್ತಾರೆಂದರೆ ಮೊದಲು ಅವರಿಗೆ ಜ್ಞಾನ ತಿಳಿಸಿ ನಂತರ ಭೋಜನವನ್ನು ಸ್ವೀಕಾರ ಮಾಡಬೇಕು. ಇಷ್ಟು ಸೇವಾಧಾರಿಯಾಗಿರಬೇಕು! ಕೆಲವರಿಗೆ ಬಹಳ ದೇಹಾಭಿಮಾನವು ಬಂದುಬಿಡುತ್ತದೆ ಅಂದಾಗ ಆಲಸಿಗಳು, ನವಾಬರಾಗಿಬಿಡುತ್ತಾರೆ. ತಂದೆಯು ತಿಳುವಳಿಕೆಯನ್ನಂತೂ ಕೊಡಬೇಕಾಗುತ್ತದೆ. ಈ ಆಲಸ್ಯವನ್ನು ಬಿಡಿ ಏಕೆಂದರೆ ಅಂತಿಮದಲ್ಲಿ ತಮ್ಮ ಪದವಿಯನ್ನು ನೋಡಿಕೊಳ್ಳಿ ಎಂದು ತಂದೆಯು ಸಾಕ್ಷಾತ್ಕಾರವನ್ನು ಮಾಡಿಸುತ್ತಾರೆ. ದೇಹಾಭಿಮಾನದ ಕೊಡಲಿಯನ್ನು ತಾವೇ ತಮ್ಮ ಕಾಲಿಗೆ ಹಾಕಿಕೊಂಡಿರಿ. ಅನೇಕ ಮಕ್ಕಳು ತಂದೆ(ಬ್ರಹ್ಮಾ) ಯೊಂದಿಗೂ ಈಷ್ರ್ಯೆಯನ್ನಿಟ್ಟುಕೊಳ್ಳುತ್ತಾರೆ. ಅರೆ! ಇವರು ಶಿವತಂದೆಯ ರಥವಾಗಿದ್ದಾರೆ, ಈ ರಥದ ಸಂಭಾಲನೆ ಮಾಡಬೇಕಾಗುತ್ತದೆ. ಇಲ್ಲಂತೂ ಇಂತಹವರಿದ್ದಾರೆ, ಬಹಳಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ, ವೈದ್ಯರಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿರುತ್ತಾರೆ. ಭಲೆ ಶರೀರವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕೆಂದು ತಂದೆಯು ತಿಳಿಸುತ್ತಾರೆ ಆದರೆ ತಮ್ಮ ಆತ್ಮಿಕಸ್ಥಿತಿಯನ್ನು ನೋಡಿಕೊಳ್ಳಬೇಕಲ್ಲವೆ! ನೀವು ತಂದೆಯ ನೆನಪಿನಲ್ಲಿದ್ದು ಭೋಜನ ಮಾಡಿದರೆ ಎಂದೂ ಯಾವುದೇ ಪದಾರ್ಥವು ಏರುಪೇರು ಮಾಡುವುದಿಲ್ಲ. ನೆನಪಿನಿಂದ ಶಕ್ತಿಯು ತುಂಬುತ್ತದೆ. ಭೋಜನವು ಬಹಳ ಶುದ್ಧವಾಗಿಬಿಡುತ್ತದೆ ಆದರೆ ಆ ಸ್ಥಿತಿಯು ಇನ್ನೂ ಬಂದಿಲ್ಲ. ತಂದೆಯು ತಿಳಿಸುತ್ತಾರೆ- ಬ್ರಾಹ್ಮಣರು ತಯಾರಿಸಿರುವ ಭೋಜನವು ಬಹಳ ಉತ್ತಮವಾಗಿದೆ ಆದರೆ ನೆನಪಿನಲ್ಲಿದ್ದು ತಯಾರು ಮಾಡಿದಾಗ ಮಾತ್ರ. ನೆನಪಿನಲ್ಲಿದ್ದು ತಯಾರಿಸುವುದರಿಂದ ನಿಮಗೂ ಲಾಭ, ಅದನ್ನು ಸ್ವೀಕಾರ ಮಾಡುವವರಿಗೂ ಲಾಭವಾಗುತ್ತದೆ.

ಎಕ್ಕದ ಹೂವಿನಂತಹವರೂ ಅನೇಕರಿದ್ದಾರಲ್ಲವೆ! ಪಾಪ, ಇಂತಹವರು ಯಾವ ಪದವಿಯನ್ನು ಪಡೆಯುತ್ತಾರೆ! ತಂದೆಗಂತೂ ದಯೆಬರುತ್ತದೆ ಆದರೆ ದಾಸ-ದಾಸಿಯರ ಪದವಿಯೂ ನಿಗಧಿಯಾಗಿದೆ. ಇದರಲ್ಲಿಯೇ ಖುಷಿಯಾಗಿರಬಾರದು. ನಾವು ಇಂತಹ ಕೆಳಪದವಿಯನ್ನು ಪಡೆಯುತ್ತೇವೆಂದು ವಿಚಾರವನ್ನೇ ಮಾಡುವುದಿಲ್ಲ. ದಾಸ-ದಾಸಿಯರಾಗುವುದಕ್ಕಿಂತ ಸಾಹುಕಾರರಾಗುವುದು ಒಳ್ಳೆಯದು ಏಕೆಂದರೆ ದಾಸ-ದಾಸಿಯರನ್ನು ಇಟ್ಟುಕೊಳ್ಳಬಹುದು. ತಂದೆಯಂತೂ ತಿಳಿಸುತ್ತಾರೆ- ನಿರಂತರ ನನೊಬ್ಬನ್ನನ್ನೇ ನೆನಪು ಮಾಡಿ, ಸ್ಮರಣೆ ಮಾಡಿ ಸುಖ ಪಡೆಯಿರಿ. ಇದರಿಂದ ಭಕ್ತರು ಸ್ಮರಣೆಯ ಮಾಲೆಯನ್ನು ಮಾಡಿದ್ದಾರೆ ಅದು ಭಕ್ತರ ಕೆಲಸವಾಗಿದೆ. ತಂದೆಯಂತೂ ಕೇವಲ ಇಷ್ಟನ್ನೇ ತಿಳಿಸುತ್ತಾರೆ- ತಮ್ಮನ್ನು ಆತ್ಮವೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ ಸಾಕು. ಬಾಕಿ ಮತ್ತೇನನ್ನೂ ಜಪಿಸುವ ಅವಶ್ಯಕತೆಯಿಲ್ಲ. ತಂದೆಯನ್ನು ಅರಿತುಕೊಳ್ಳಬೇಕು ಮತ್ತು ಅವರನ್ನು ನೆನಪು ಮಾಡಬೇಕಾಗಿದೆ. ಬಾಯಿಂದ ಬಾಬಾ, ಬಾಬಾ ಎಂದು ಹೇಳಬೇಕಾಗಿದೆ ಏಕೆಂದರೆ ನಿಮಗೆ ತಿಳಿದಿದೆ, ಅವರು ನಾವಾತ್ಮಗಳ ಬೇಹದ್ದಿನ ತಂದೆಯಾಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದ ನಾವು ಸತೋಪ್ರಧಾನರಾಗಿಬಿಡುತ್ತೇವೆ ಅರ್ಥಾತ್ ಕಂಚನವಾಗಿಬಿಡುತ್ತದೆ. ಎಷ್ಟೊಂದು ಸಹಜವಾಗಿದೆ ಆದರೆ ಯುದ್ಧದ ಮೈದಾನವಲ್ಲವೆ. ನಿಮ್ಮ ಯುದ್ಧವು ಮಾಯೆಯ ಜೊತೆಯಿದೆ, ಅದು ಪದೇ-ಪದೇ ನಿಮ್ಮ ಬುದ್ಧಿಯೋಗವನ್ನು ಕೆಡಿಸುತ್ತದೆ. ಎಷ್ಟೆಷ್ಟು ವಿನಾಶಕಾಲೇ ಪ್ರೀತಿಬುದ್ಧಿಯವರಾಗುತ್ತೀರೋ ಅಷ್ಟು ಪದವಿಯು ಸಿಗುತ್ತದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು. ಕಲ್ಪದ ಹಿಂದೆಯೂ ಸಹ ಈ ರೀತಿ ವಿಜಯದ ಮಾಲೆಯ ಮಣಿಗಳಾಗಿದ್ದೀರಿ. ನಿಮ್ಮಲ್ಲಿ ಯಾರು ಬ್ರಾಹ್ಮಣಕುಲದವರಾಗಿದ್ದಾರೆಯೋ ಆ ಬ್ರಾಹ್ಮಣರದೇ ರುದ್ರಮಾಲೆಯಾಗುತ್ತದೆ. ಇವರೇ ಗುಪ್ತ ಪರಿಶ್ರಮಪಟ್ಟಿದ್ದಾರೆ. ಜ್ಞಾನವೂ ಗುಪ್ತವಾಗಿದೆಯಲ್ಲವೆ. ತಂದೆಯು ಪ್ರತಿಯೊಬ್ಬರನ್ನೂ ಚೆನ್ನಾಗಿ ಅರಿತುಕೊಂಡಿದ್ದಾರೆ. ಯಾರನ್ನು ಒಳ್ಳೊಳ್ಳೆಯ ಮಹಾರಥಿಗಳೆಂದು ತಿಳಿದಿದರೋ ಅವರು ಇಂದು ಇಲ್ಲ. ದೇಹಾಭಿಮಾನವು ಬಹಳ ಇದೆ, ಇದರಿಂದ ತಂದೆಯ ನೆನಪು ಇರುವುದೇ ಇಲ್ಲ. ಮಾಯೆಯು ಬಹಳ ಜೋರಾಗಿ ಪೆಟ್ಟನ್ನು ಕೊಡುತ್ತದೆ. ಬಹಳ ಕೆಲವರದು ಮಾಲೆಯಾಗುತ್ತದೆ, ಆದರೂ ಸಹ ತಂದೆಯು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ- ತಮ್ಮನ್ನು ನೋಡಿಕೊಳ್ಳುತ್ತಾ ಇರಿ, ನಾವು ಎಷ್ಟೊಂದು ಪವಿತ್ರ ದೇವತೆಗಳಾಗಿದ್ದೆವು, ಈಗ ನಾವು ಹೇಗಿದ್ದವರು ಎಂತಹ ಕೊಳಕರಾಗಿಬಿಟ್ಟಿದ್ದೇವೆ! ಈಗ ಶಿವತಂದೆಯು ಸಿಕ್ಕಿದ್ದಾರೆಂದರೆ ಅವರ ಮತದಂತೆ ನಡೆಯಬೇಕಲ್ಲವೆ. ಯಾವುದೇ ದೇಹಧಾರಿಗಳನ್ನು ನೆನಪು ಮಾಡಬಾರದು. ಯಾರ ನೆನಪೂ ಬರಬಾರದು, ಯಾರ ಚಿತ್ರವನ್ನೂ ಇಟ್ಟುಕೊಳ್ಳಬಾರದು. ಒಬ್ಬ ಶಿವತಂದೆಯ ನೆನಪೇ ಇರಲಿ. ಶಿವತಂದೆಗೆ ಶರೀರವಂತೂ ಇಲ್ಲ. ತಾತ್ಕಾಲಿಕವಾಗಿ ಈ ಶರೀರವನ್ನು ಆಧಾರವಾಗಿ ಪಡೆಯುತ್ತೇನೆ. ನಿಮ್ಮನ್ನು ಇಂತಹ ದೇವಿ-ದೇವತೆಗಳನ್ನಾಗಿ ಮಾಡಲು ಎಷ್ಟೊಂದು ಪರಿಶ್ರಮಪಡುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ನನ್ನನ್ನು ಪತಿತ ಪ್ರಪಂಚದಲ್ಲಿ ಕರೆಯುತ್ತೀರಿ. ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ ಮತ್ತೆ ನೀವು ಪಾವನಪ್ರಪಂಚದಲ್ಲಿ ನನ್ನನ್ನು ಕರೆಯುವುದೇ ಇಲ್ಲ. ಅಲ್ಲಿ ಬಂದು ಏನು ಮಾಡುವುದು! ಏಕೆಂದರೆ ಅವರ ಸೇವೆಯೇ ಪಾವನರನ್ನಾಗಿ ಮಾಡುವುದಾಗಿದೆ. ತಂದೆಗೆ ಗೊತ್ತಿದೆ, ಒಮ್ಮೆಲೆ ಸುಟ್ಟು ಕಪ್ಪು ಕೋಗಿಲೆಯಾಗಿಬಿಟ್ಟಿದ್ದಾರೆ. ನಿಮ್ಮನ್ನು ಸುಂದರರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸರ್ವೀಸಿನಲ್ಲಿ ಬಹಳ ನಿಖರವಾಗಿರಬೇಕು, ಹಗಲು-ರಾತ್ರಿ ಸರ್ವೀಸಿನ ಉಮ್ಮಂಗವು ಬರುತ್ತಿರಬೇಕು. ಸರ್ವಿಸನ್ನು ಬಿಟ್ಟು ವಿಶ್ರಾಂತಿ ಮಾಡಬಾರದು. ತಂದೆಯ ಸಮಾನ ಕಲ್ಯಾಣಕಾರಿಗಳಾಗಬೇಕು.

2. ಒಬ್ಬ ತಂದೆಯ ನೆನಪಿನಿಂದ ಪ್ರೀತಿಬುದ್ಧಿಯವರಾಗಿ ಒಳಗಿನ ಕೊಳಕನ್ನು ತೆಗೆದುಹಾಕಬೇಕಾಗಿದೆ. ಸುಗಂಧಭರಿತ ಹೂಗಳಾಗಬೇಕಾಗಿದೆ. ಈ ಕೊಳಕು ಪ್ರಪಂಚದೊಂದಿಗೆ ಮನಸ್ಸನ್ನಿಡಬಾರದು.

ವರದಾನ: ಮನಸ್ಸು-ಬುದ್ಧಿಯ ಮೂಲಕ ಶ್ರೇಷ್ಠ ಸ್ಥಿತಿ ರೂಪಿ ಆಸನದ ಮೇಲೆ ಸ್ಥಿತರಾಗಿರುವಂತಹ ತಪಸ್ವೀ ಮೂರ್ತಿ ಭವ.
ತಪಸ್ವಿ ಸದಾ ಯಾವುದಾದರೂ ಒಂದು ಆಸನದ ಮೇಲೆ ಕುಳಿತು ತಪಸ್ಸು ಮಾಡುತ್ತಾರೆ. ನೀವು ತಪಸ್ವಿ ಆತ್ಮರ ಆಸನವಾಗಿದೆ ಏಕರಸ ಸ್ಥಿತಿ, ಫರಿಶ್ಥಾ ಸ್ಥಿತಿ....ಇವೇ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗುವುದು ಅರ್ಥಾತ್ ಆಸನದ ಮೇಲೆ ಕುಳಿತುಕೊಳ್ಳುವುದು. ಸ್ಥೂಲ ಆಸನದ ಮೇಲಂತೂ ಸ್ಥೂಲ ಶರೀರ ಕುಳಿತುಕೊಳ್ಳುವುದು ಆದರೆ ನೀವು ಈ ಶ್ರೇಷ್ಠ ಆಸನದ ಮೇಲೆ ಮನಸ್ಸು ಬುದ್ಧಿಯನ್ನು ಕೂರಿಸುವಿರಿ. ಆ ತಪಸ್ವಿಗಳು ಒಂದು ಕಾಲಿನ ಮೇಲೆ ನಿಂತು ಬಿಡುವರು ಮತ್ತು ನೀವು ಏಕರಸ ಸ್ಥಿತಿಯಲ್ಲಿ ಏಕಾಗ್ರರಾಗಿ ಬಿಡುವಿರಿ. ಅವರದಾಗಿದೆ ಹಠಯೋಗ ಮತ್ತು ನಿಮ್ಮದಾಗಿದೆ ಸಹಜಯೋಗ.
ಸ್ಲೋಗನ್: ಪ್ರೀತಿಯ ಸಾಗರ ತಂದೆಯ ಮಕ್ಕಳು ಪ್ರೇಮದಿಂದ ತುಂಬಿರುವ ಗಂಗಾ ಆಗಿರಿ.

 

ಮುರಳಿ ಎಂದರೇನು?

ಮುರಳಿ ಬ್ರಹ್ಮಾಕುಮಾರೀಸ್‌ನ ದೈನಂದಿನ ಆಧ್ಯಾತ್ಮಿಕ ಬೋಧನೆ, ಇದು ಪ್ರತಿದಿನ ಬೆಳಿಗ್ಗೆ ಮಧುಬನದಿಂದ ಪ್ರಕಟವಾಗುತ್ತದೆ. ಇಲ್ಲಿ ನೀವು ಇಂದಿನ ಮುರಳಿಯನ್ನು ಕನ್ನಡದಲ್ಲಿ ಓದಬಹುದು, ಆಡಿಯೋ ಕೇಳಬಹುದು ಮತ್ತು PDF ಡೌನ್‌ಲೋಡ್ ಮಾಡಬಹುದು. ಅಧ್ಯಯನಕ್ಕೆ ಸಹಾಯವಾಗಲು ಪಠ್ಯವನ್ನು ಹೈಲೈಟ್ ಮಾಡಬಹುದು — ನಿಮ್ಮ ಗುರುತುಗಳು ಈ ಬ್ರೌಸರ್‌ನಲ್ಲೇ ಸುರಕ್ಷಿತವಾಗಿರುತ್ತವೆ.

28 ಭಾಷೆಗಳಲ್ಲಿ ಮುರಳಿ

Daily Murli · Madhuban ಮೂಲ: ಮಧುಬನ ಮುರಳಿ ವಿಭಾಗ ಇದು ಸ್ವತಂತ್ರ ಓದುಗ ಆ್ಯಪ್, ಅಧಿಕೃತ ವೆಬ್‌ಸೈಟ್ ಅಲ್ಲ.